221 Crore Crop Insurance : 221 ಕೋಟಿ ರೂ ಅಂತಿಮ ಕಂತು ಬೆಳೆ ವಿಮೆ ಬಿಡುಗಡೆ| ರೈತರ ಖಾತೆಗೆ ಹಣ ಜಮಾ. ಮೊಬೈಲ್ನಲ್ಲೇ ಸ್ಟೇಟಸ್ ಚೆಕ್ ಮಾಡಿ, Important update.

WhatsAppಫಾಲೋ ಮಾಡಿ

221 Crore Crop Insurance221 Crore Crop Insurance : ರಾಜ್ಯದ ರೈತರಿಗೆ 221 ಕೋಟಿ ರೂ ಅಂತಿಮ ಕಂತಿನ ಬೆಳೆ ವಿಮೆ ಹಣ ಬಿಡುಗಡೆ. ಮೊಬೈಲ್ನಲ್ಲೇ ಹಣ ಜಮಾ ಚೆಕ್ ಮಾಡುವ ವಿಧಾನದ ಸಂಪೂರ್ಣ ವಿವರ ಇಲ್ಲಿದೆ. 

ರಾಜ್ಯದ ರೈತರಿಗೆ ಮತ್ತೊಂದು ಮಹತ್ವದ ಸುದ್ದಿ ಸಿಕ್ಕಿದೆ. ಕೆಲ ದಿನಗಳ ಹಿಂದಷ್ಟೇ, ರೈತರ ಬಾಕಿ ಉಳಿದಿದ್ದ ಬೆಳೆ ವಿಮೆ (crop insurance) ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬರವಸೆ ನೀಡಿದ್ದರು. 

ಆ ಭರವಸೆಯಂತೆ ರಾಜ್ಯ ಸರ್ಕಾರ ಕೇವಲ 10 ದಿನಗಳಲ್ಲೇ 221 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರವನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮ ಮಾಡಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ಈ ಬಿಡುಗಡೆ ಮುಖ್ಯವಾಗಿ ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಸಂಬಂಧಿಸಿದ್ದು, ಈ ಮೂಲಕ ಅಂತಿಮ ಕಂತಿನ ಬೆಳೆ ವಿಮೆ ಹಣವು ಬಿಡುಗಡೆಯಾದಂತಾಗಿದೆ. ಸರ್ಕಾರದ ಮಾಹಿತಿಯ ಪ್ರಕಾರ, ಇದುವರೆಗೆ ಒಟ್ಟು 464.53 ಕೋಟಿ ರೂಪಾಯಿ ಬೆಳೆ ವಿಮೆ ಪರಿಹಾರವನ್ನು ರೈತರಿಗೆ ವಿತರಿಸಲಾಗಿದೆ.

ಇದನ್ನು ಓದಿ

Honey Bee Farm Subsidy 2026 : ಜೇನು ಸಾಕಾಣಿಕೆಗೆ ಸರ್ಕಾರದಿಂದ ಭರ್ಜರಿ ಸಹಾಯಧನ. ಮೊಬೈಲ್ ಮೂಲಕ ಅಪ್ಲೈ ಮಾಡಿ. Important.

221 Crore Crop Insurance : ರೈತರಿಗೆ ಆರ್ಥಿಕ ನೆರವಾದ ಬೆಳೆ ವಿಮೆ 

ರಾಜ್ಯದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಬರ ಹಾಗೂ ಹವಮಾನ ವೈಪರೀತ್ಯದಿಂದ ಅನೇಕ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಳೆ ವಿಮೆ ಪರಿಹಾರ ಬಿಡುಗಡೆಯಾಗಿರುವುದು ರೈತರಿಗೆ ಸ್ವಲ್ಪಮಟ್ಟಿನ ಆರ್ಥಿಕ ನೆಮ್ಮದಿ ನೀಡಿದೆ.

ಬೆಳೆ ಹಾನಿಯಿಂದ ಉಂಟಾದ ನಷ್ಟವನ್ನು ತಗ್ಗಿಸಲು ಸರ್ಕಾರ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡುತ್ತಿರುವುದರಿಂದ ಮಧ್ಯವರ್ತಿಗಳ ಸಮಸ್ಯೆಯೂ ಇಲ್ಲ.

ಇದನ್ನು ಓದಿ

Karnataka Old Pension Scheme: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಹಳೆ ಪಿಂಚಣಿ ಜಾರಿಗೆ ಸರ್ಕಾರದ ಹೆಜ್ಜೆ.ಸಿಎಂ ಡಿಕೆಶಿ ಸೂಚನೆ.Important update.

221 Crore Crop Insurance : ಮೊಬೈಲ್ನಲ್ಲೇ ಬೆಳೆ ವಿಮೆ ಹಣದ ಸ್ಟೇಟಸ್ ಚೆಕ್ ಮಾಡುವುದು ಹೇಗೆ? 

ರೈತರು ಮನೆಯಲ್ಲೇ ಕುಳಿತು ತಮ್ಮ ಬೆಳೆ ವಿಮೆ ಅರ್ಜಿ ಹಾಗೂ ಪರಿಹಾರದ ಹಣದ ಸ್ಥಿತಿ ಪರಿಶೀಲಿಸಬಹುದು. ಅದಕ್ಕಾಗಿ ಈ ಕೆಳಗಿನ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

  • Samrakshane Portal https://samrakshane.karnataka.gov.in/ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.
  • Season ವಿಭಾಗದಲ್ಲಿ kharif ಅಥವಾ ಸಂಬಂಧಿಸಿದ ಹಂಗಾಮವನ್ನು ಆಯ್ಕೆ ಮಾಡಿ.
  • ನಂತರ Check Stetus ಆಯ್ಕೆಯ ಮೇಲೆ ಕ್ಲಿಕ್ ಮಾಡಿ
  • Mobile Number ಆಯ್ಕೆ ಮಾಡಿಕೊಂಡು, ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ಪರದೆಯಲ್ಲಿ ಕಾಣುವ CAPTCHA code ನಮೂದಿಸಿ search ಬಟನ್ ಹೊತ್ತಿ ಅಗತ್ಯವಿದ್ದರೆ ಸಂಬಂಧಿಸಿದ select ಆಯ್ಕೆಯನ್ನು ಆರಿಸಿ.
  • ಕೊನೆಯಲ್ಲಿ View Details ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಬೆಳೆ ವಿಮೆ ಅರ್ಜಿಯ ಸ್ಥಿತಿ, ಅನುಮೋದನೆ ಹಾಗೂ ಬ್ಯಾಂಕ್ ಖಾತೆಗೆ ಹಣ ಜಮಯಾದ ವಿವರಗಳನ್ನು ನೋಡಬಹುದು.

221 Crore Crop Insurance: ರೈತರು ಗಮನಿಸಬೇಕಾದ ಪ್ರಮುಖ ವಿಷಯಗಳು 

ಬೆಳೆ ವಿಮೆ ಪರಿಹಾರವನ್ನು ಸರ್ಕಾರ ನೇರವಾಗಿ ಬ್ಯಾಂಕ್ ಖಾತೆಗೆ (DBT – direct benefit transfer) ಜಮಾ ಮಾಡುತ್ತಿದೆ. ಆದ್ದರಿಂದ ರೈತರು ತಮ್ಮ ಬ್ಯಾಂಕ್ ಖಾತೆ ಸಂಖ್ಯೆ ಆಧಾರ್ ಜೋಡಣೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಸರಿಯಾಗಿದೆಯೇ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ.

ಪರಿಹಾರ ಹಣ ಇನ್ನೂ ಜಮಾ ಆಗದಿದ್ದರೆ ಅಥವಾ ಯಾವುದೇ ಮಾಹಿತಿ ಕಾಣಿಸದಿದ್ದರೆ, ಸಂಬಂಧಿಸಿದ ಕೃಷಿ ಇಲಾಖೆ ಕಚೇರಿ ಅಥವಾ ಅಧಿಕೃತ ಬೆಳೆ ವಿಮೆ ಪೋರ್ಟಲ್ ಗೆ ಭೇಟಿ ನೀಡಿ ಅದರ ಮೂಲಕ ಮಾಹಿತಿ ಪಡೆಯಬಹುದು.

221 Crore Crop Insurance : ರೈತರಿಗೆ ಇನ್ನಷ್ಟು ನೆರವಿನ ನೀರಿಕ್ಷೆ 

ರಾಜ್ಯದಲ್ಲಿ ಬರ ಪರಿಸ್ಥಿತಿ ಮುಂದುವರೆದಿರುವ ಹಿನ್ನೆಲೆಯಲ್ಲಿ ಸರ್ಕಾರ ಬೆಳೆ ವಿಮೆ ಪರಿಹಾರ ಬಿಡುಗಡೆಗೆ ವೇಗ ನೀಡಿದೆ. ಈಗಾಗಲೇ ನೂರಾರು ಕೋಟಿ ರೂಪಾಯಿ ರೈತರ ಖಾತೆಗೆ ಹಣ ಜಮೆಯಾಗಿದ್ದು ಮುಂದಿನ ದಿನಗಳಲ್ಲಿ ಬರಪೀಡಿತ ಪ್ರದೇಶಗಳಿಗೆ ಸಂಬಂಧಿಸಿದ ಇತರೆ ಪರಿಹಾರ ಹಾಗೂ ನೆರವುಗಳು ಬಿಡುಗಡೆಯಾಗುವ ನಿರೀಕ್ಷೆ ಇದೆ.

ಹೀಗಾಗಿ ರೈತರು ತಮ್ಮ ಬೆಳೆ ವಿಮೆ ಸ್ಟೇಟಸ್ ಅನ್ನು ಮೊಬೈಲ್ ನಲ್ಲಿ ಪರಿಶೀಲಿಸಿಕೊಂಡು ಪರಿಹಾರ ಹಣ ಜಮಯಾದ ವಿವರವನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.

ಇದನ್ನು ಓದಿ

Udyam Loan Scheme 2026: ಸ್ವಂತ ಉದ್ಯಮ ಆರಂಭಿಸಲು 2 ಲಕ್ಷ ನೆರವು.40,000 ಸಬ್ಸಿಡಿ ಸಿಗುತ್ತೆ- ಅರ್ಜಿ ಸಲ್ಲಿಸಿ, Important update.

221 Crore Crop Insurance : ಬೆಳೆ ವಿಮೆ ಪರಿಹಾರದಿಂದ ರೈತರಿಗೆ ಆಗುವ ಪ್ರಯೋಜನಗಳು ಯಾವುವು? 

ಬೆಳೆ ವಿಮೆ ಪರಿಹಾರವೂ ರೈತರ ಕೃಷಿ ಜೀವನದಲ್ಲಿ ಅತ್ಯಂತ ಮಹತ್ವದ ಭದ್ರತಾ ವ್ಯವಸ್ಥೆಯಾಗಿದೆ. ಪ್ರಕೃತಿ ವಿಕೋಪಗಳು, ಅತಿವೃಷ್ಟಿ, ಅನಾವೃಷ್ಟಿ, ಪ್ರವಾಹ, ಗಾಳಿ ಮಳೆ, ಕೀಟ ಮತ್ತು ರೋಗಗಳ ದಾಳಿಯಿಂದ ಬೆಳೆ ಹಾನಿಯಾದಾಗ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಬೆಳೆ ವಿಮೆ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಬೆಳೆ ನಷ್ಟವಾದ ಸಂದರ್ಭದಲ್ಲಿ ದೊರೆಯುವ ಪರಿಹಾರದಿಂದ ರೈತರು ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯವಾಗುತ್ತದೆ.

ಬೆಳೆ ವಿಮೆ ಪರಿಹಾರದಿಂದ ರೈತರು ಸಾಲದ ಹೊರೆ ಕಡಿಮೆ ಮಾಡಿಕೊಳ್ಳಬಹುದು.. ಬೆಳೆ ಹಾನಿಯಾದರೂ ಪರಿಹಾರದ ಹಣದಿಂದ ಕೃಷಿಗೆ ತೆಗೆದುಕೊಂಡ ಸಾಲದ ಒಂದು ಭಾಗವನ್ನು ತೀರಿಸಲು ಸಾಧ್ಯವಾಗುತ್ತದೆ. ಇದರಿಂದ ರೈತರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ ಹಾಗೂ ಮುಂದಿನ ಹಂಗಾಮಿನಲ್ಲಿ ಮತ್ತೆ ಕೃಷಿ ಮಾಡಲು ಧೈರ್ಯ ದೊರೆಯುತ್ತದೆ.

 

221 Crore Crop Insurance :

ಬೆಳೆ ವಿಮೆಯು ರೈತರ ಆದಾಯಕ್ಕೆ ಒಂದು ರೀತಿಯ ಭದ್ರತೆಯನ್ನು ಒದಗಿಸುತ್ತದೆ. ಅನಿರೀಕ್ಷಿತ ಹವಮಾನ ಬದಲಾವಣೆಗಳಿಂದ ಉಂಟಾಗುವ ನಷ್ಟವನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲದಿದ್ದರೂ, ವಿಮೆ ಪರಿಹಾರದಿಂದ ಅದರ ಪರಿಣಾಮವನ್ನು ಕಡಿಮೆ ಮಾಡಬಹುದು. ಇದರಿಂದ ರೈತರು ಉತ್ತಮ ಗುಣಮಟ್ಟದ ಬೀಜ, ರಸಗೊಬ್ಬರ ಮತ್ತು ಕೃಷಿ ತಂತ್ರಜ್ಞಾನಗಳನ್ನು ಬಳಸಲು ಉತ್ತೇಜನ ಪಡೆಯುತ್ತಾರೆ.

ಇದಲ್ಲದೆ ಬೆಳೆ ವಿಮೆಯಿಂದ ಕೃಷಿಯ ಮೇಲಿನ ನಂಬಿಕೆ ಹೆಚ್ಚುತ್ತದೆ. ಕೃಷಿಯನ್ನು ಲಾಭದಾಯಕವಾಗಿ ಮುಂದುವರಿಸಲು ರೈತರಿಗೆ ಆರ್ಥಿಕ ಸ್ಥಿರತೆ ದೊರೆಯುತ್ತದೆ. ಕುಟುಂಬದ ಅಗತ್ಯಗಳನ್ನು ಪೂರೈಸಲು, ಮಕ್ಕಳ ಶಿಕ್ಷಣ ಹಾಗೂ ಆರೋಗ್ಯ ವೆಚ್ಚಗಳನ್ನು ನಿರ್ವಹಿಸಲು ಸಹ ಈ ಪರಿಹಾರ ಸಹಾಯಕವಾಗುತ್ತದೆ. ರೈತರ ಮಾನಸಿಕ ಒತ್ತಡ ಕಡಿಮೆಯಾಗುವುದರ ಜೊತೆಗೆ ಆತ್ಮಹತ್ಯೆಗಳಂತಹ ದುರ್ಘಟನೆಗಳನ್ನು ತಡೆಯುವಲ್ಲಿ ಸಹ ಬೆಳೆ ವಿಮೆ ಪ್ರಮುಖ ಪಾತ್ರ ವಹಿಸುತ್ತದೆ.

ಒಟ್ಟಾರೆ ಬೆಳೆ ವಿಮೆ ಪರಿಹಾರವೂ ರೈತರ ಆರ್ಥಿಕ ಭದ್ರತೆಯನ್ನು ಹೆಚ್ಚಿಸುವ, ಕೃಷಿ ಚಟುವಟಿಕೆಗಳನ್ನು ನಿರಂತರವಾಗಿ ಮುಂದುವರಿಸಲು ನೆರವಾಗುವ ಹಾಗೂ ದೇಶದ ಕೃಷಿ ಅಭಿವೃದ್ಧಿಗೆ ಪೂರಕವಾಗಿರುವ ಮಹತ್ವದ ಯೋಜನೆಯಾಗಿದೆ. ಆದ್ದರಿಂದ ಪ್ರತಿಯೊಬ್ಬ ರೈತರು ಬೆಳೆ ವಿಮೆ ಯೋಜನೆಯಲ್ಲಿ ಭಾಗವಹಿಸಲು ಅದರ ಪ್ರಯೋಜನವನ್ನು ಪಡೆದುಕೊಳ್ಳುವುದು ಅಗತ್ಯವಾಗಿದೆ.

ಇದನ್ನು ಓದಿ

Kotak Kanya Scholarship 2026 : ಪದವೀಧರ ವಿದ್ಯಾರ್ಥಿಗಳಿಗೆ 1.5 ಲಕ್ಷ ವಿದ್ಯಾರ್ಥಿ ವೇತನ. ಇಲ್ಲಿದೆ ಸಂಪೂರ್ಣ ಮಾಹಿತಿ, Important update.

 

Leave a Comment