India Post Direct Selection 2026 : ಇಂಡಿಯಾ ಪೋಸ್ಟ್ ಬೃಹತ್ ನೇಮಕಾತಿ, ಪರೀಕ್ಷೆ ಇಲ್ಲದೆ 25,000+ ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇರ Important update.

WhatsAppಫಾಲೋ ಮಾಡಿ

India Post Direct Selection 2026 India Post Direct Selection 2026  : ಭಾರತೀಯ ಅಂಚೆ ಇಲಾಖೆಯಲ್ಲಿ ಬೃಹತ್ ನೇಮಕಾತಿ, ಪರೀಕ್ಷೆ ಇಲ್ಲದೆ 25,000 GDS ಹುದ್ದೆಗಳಿಗೆ ಅರ್ಜಿ ಆಹ್ವಾನ. ಹತ್ತನೇ ತರಗತಿ ಪಾಸಾದವರಿಗೆ ಆಫರ್. 

ಕೇಂದ್ರ ಸರ್ಕಾರದ ಹುದ್ದೆಗಳ ನಿರೀಕ್ಷೆಯಲ್ಲಿರುವ ಯುವ ಜನತೆಗೆ, ಅದರಲ್ಲೂ 10ನೇ ತರಗತಿ ಪಾಸ್ ಆಗಿರುವವರಿಗೆ ಅಂಚೆ ಇಲಾಖೆ ಬಹುದೊಡ್ಡ ಉಡುಗೊರೆ ನೀಡಿದೆ. ದೇಶದಾದ್ಯಂತ 25,000 ಕು ಹೆಚ್ಚು ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ಬರ್ತಿಗೆ ಭಾರತೀಯ ಅಂಚೆ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ಆಗಸ್ಟ್ 31 2026 ರಿಂದಲೇ ನೋಂದಣಿ ಪ್ರಕ್ರಿಯೆ ಶುರುವಾಗಿದ್ದು, ಸೆಪ್ಟೆಂಬರ್ 21 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.

ಈ ಬೃಹತ್ ನೇಮಕಾತಿಯ ಅತಿ ದೊಡ್ಡ ವಿಶೇಷತೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಮುಖಾಮುಖಿ ಸಂದರ್ಶನ ಇರುವುದಿಲ್ಲ. ಕೇವಲ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೀವು ಪಡೆದಿರುವ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಮಾಡಿ ನೇರವಾಗಿ ಆಯ್ಕೆ ಮಾಡಲಾಗುತ್ತದೆ. ಹಳ್ಳಿಯಲ್ಲಿ ಇದ್ದುಕೊಂಡು ಕೇಂದ್ರ ಸರ್ಕಾರಿ ನೌಕರಿ ಪಡೆಯಲು ಇದೊಂದು ಅದ್ಭುತಾವಕಾಶ.

ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM), ಹಾಗೂ ಡಾಕ್ ಸೇವಕ್ ಹುದ್ದೆಗಳಿಗೆ ಈ ನೇಮಕಾತಿ ನಡೆಯುತ್ತಿದೆ. ಅರ್ಜಿ ಸಲ್ಲಿಕೆ ಹೇಗೆ? ಬೇಕಾಗುವ ವಿದ್ಯಾರ್ಹತೆ ಯೇನು? ವಯಸ್ಸಿನ ಮಿತಿ ಎಷ್ಟು? ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ.

ಇದನ್ನು ಓದಿ

Reliance Foundation Scholarship 2026-27 : ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿ ವೇತನ. Important update.

India Post Direct Selection 2026  : ಪ್ರಮುಖ ಮುಖ್ಯಾಂಶಗಳು 

  • ನೇಮಕಾತಿ ಸಂಸ್ಥೆ : ಭಾರತೀಯ ಅಂಚೆ ಇಲಾಖೆ (department of posts)
  • ಹುದ್ದೆಯ ಹೆಸರು : ಗ್ರಾಮೀಣ ಡಾಕ್ ಸೇವಕ್ (BPM, ABPM, Dak Sevak)
  • ಒಟ್ಟು ಹುದ್ದೆಗಳು: 25,000 + ಹುದ್ದೆಗಳು
  • ಆಯ್ಕೆ ವಿಧಾನ : ಹತ್ತನೇ ತರಗತಿ ಅಂಕಗಳ ಮೆರಿಟ್ ಆಧಾರ (ಯಾವುದೇ ಪರೀಕ್ಷೆ ಇಲ್ಲ)

India Post Direct Selection 2026  : ಪ್ರಮುಖ ದಿನಾಂಕಗಳು. 

  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ :02/09/2026
  • ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21 ಸೆಪ್ಟೆಂಬರ್ 2026
  • ಆನ್ಲೈನ್ ಒಂದು ಬಾರಿ ನೋಂದಣಿ : 31/09/2026 ರಿಂದ 19/09/2026 ರ ವರೆಗೆ
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 02/09/2026 ರಿಂದ 21/09/2026 ರ ವರೆಗೆ
  • ಆನ್ಲೈನ್ ಅರ್ಜಿಗಳ ಸಲ್ಲಿಕೆ : 02/09/2026 ರಿಂದ 21/09/2026 ರ ವರೆಗೆ
  • ಅರ್ಜಿದಾರರಿಗೆ ಸಂಪಾದನೆ/ತಿದ್ದುಪಡಿ ವಿಂಡೋ ದಿನಾಂಕ : 23/09/2026 ರಿಂದ 24/09/2026

ಇದನ್ನು ಓದಿ

Labour Card Scholarship 2026 : ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ , ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ. Important update.

India Post Direct Selection 2026  : ಶೈಕ್ಷಣಿಕ ಅರ್ಹತೆ ಮತ್ತು ಇತರ ಕೌಶಲ್ಯಗಳು 

ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

  • ಶೈಕ್ಷಣಿಕ ವಿದ್ಯಾರ್ಹತೆ : ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಪಾಸ್ ಆಗಿರಬೇಕು.
  • ಕಡ್ಡಾಯ ವಿಷಯಗಳು : ಹತ್ತನೇ ತರಗತಿಯಲ್ಲಿ ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ಉತ್ತೀರ್ಣರಾಗಿರುವುದು ಕಡ್ಡಾಯ.
  • ಸ್ಥಳೀಯ ಭಾಷಾಜ್ಞಾನ : ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು ಕನಿಷ್ಠ 10ನೇ ತರಗತಿಯವರೆಗೆ ಒಂದು ವಿಷಯವಾಗಿ ಅಧ್ಯಯನ ಮಾಡಿರಬೇಕು.
  • ಇತರ ಕೌಶಲ್ಯಗಳು : 1. ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.2. ಸೈಕಲ್ ತುಳಿಯುವ ಜ್ಞಾನ ಇರಬೇಕು (ಟು ವೀಲರ್ ಓಡಿಸಲು ತಿಳಿದಿದ್ದರೂ ಮಾನ್ಯ ಮಾಡಲಾಗುತ್ತದೆ.) 3. ಜೀವನೋಪಾಯಕ್ಕೆ ಸಾಕಷ್ಟು ಆದಾಯದ ಮೂಲ ಹೊಂದಿರಬೇಕು.

ಮಾಸಿಕ ವೇತನ ಎಷ್ಟು ಸಿಗುತ್ತದೆ? 

ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಆಯ್ಕೆಯಾದವರಿಗೆ ಟಿ ಆರ್ ಸಿ ಎ (time related continuity allowance)  ನಿಯಮದಡಿ ಆಕರ್ಷಕ ವೇತನ ಸಿಗಲಿದೆ.

  • ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) : ತಿಂಗಳಿಗೆ 12,000 ರಿಂದ 29,380 ರೂಪಾಯಿವರೆಗೆ.
  • ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್. (ABPM) ಹಾಗೂ ಡಾಕ್ ಸೇವಕ್ : ತಿಂಗಳಿಗೆ 10,000 ರಿಂದ 24,470 ರೂಪಾಯಿವರೆಗೆ.

India Post Direct Selection 2026  : ವಯೋಮಿತಿ ವಿವರ ಮತ್ತು ಸಡಿಲಿಕೆ 

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯೋಮಿತಿ ಈ ಕೆಳಗಿನಂತಿರಬೇಕು.

  • ಕನಿಷ್ಠ ವಯಸ್ಸು : 18 ವರ್ಷಗಳು
  • ಗರಿಷ್ಠ ವಯಸ್ಸು : 40 ವರ್ಷಗಳು
  • ವಯೋಮಿತಿ ಸಡಿಲಿಕೆ ಈ ಕೆಳಗಿನಂತಿದೆ.
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ : 5 ವರ್ಷಗಳ ಸಡಿಲಿಕೆ
  • ಇತರೆ ಹಿಂದುಳಿದ ವರ್ಗದ (OBC) ಅಭ್ಯರ್ಥಿಗಳಿಗೆ : 3 ವರ್ಷಗಳ ಸಡಿಲಿಕೆ.
  • ಆರ್ಥಿಕವಾಗಿ ದುರ್ಬಲ ವರ್ಗದವರಿಗೆ (EWS): ಯಾವುದೇ ಸಡಿಲಿಕೆ ಇರುವುದಿಲ್ಲ.
  • ವಿಕಲಚೇತನ ಅಭ್ಯರ್ಥಿಗಳಿಗೆ : 10 ವರ್ಷಗಳ ಸಡಿಲಿಕೆ.

ಇದನ್ನು ಓದಿ

IBPS ಕ್ಲರ್ಕ್ ನೇಮಕಾತಿ 2026 : 11,403 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ. Important update.

India Post Direct Selection 2026  : ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? 
  • ಪರೀಕ್ಷೆ ಇರುವುದಿಲ್ಲ : ಈ ನೇಮಕಾತಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ (written exam) ಅಥವಾ ಸಂದರ್ಶನ ಇರುವುದಿಲ್ಲ.
  • ಮೆರಿಟ್ ಆಧಾರಿತ ಆಯ್ಕೆ : ಅಭ್ಯರ್ಥಿಗಳು ಹತ್ತನೇ ತರಗತಿಯಲ್ಲಿ ಪಡೆದ ಅಂಕಗಳನ್ನು 4 ಡೆಸಿಬಲ್ ವರೆಗೆ ಲೆಕ್ಕ ಹಾಕಿ ಸಿಸ್ಟಮ್ ಜನರೇಟೆಡ್ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
  • ದಾಖಲಾತಿ ಪರಿಶೀಲನೆ : ಮೆರಿಟ್ ಪಟ್ಟಿಯಲ್ಲಿ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಇ-ಮೇಲ್ ಮತ್ತು ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುತ್ತದೆ. ಬಳಿಕ ಅಭ್ಯರ್ಥಿಗಳು ನಿಗದಿತ 15 ದಿನಗಳೊಳಗೆ ಮೂಲ ದಾಖಲಾತಿಗಳೊಂದಿಗೆ (original documents) ಭೌತಿಕ ಪರಿಶೀಲನೆಗೆ (physical verification) ಹಾಜರಾಗಬೇಕು.

ಅರ್ಜಿ ಶುಲ್ಕದ ಮಾಹಿತಿ 

ಸಾಮಾನ್ಯ ಹಾಗೂ obc ವರ್ಗದ ಪುರುಷ ಅಭ್ಯರ್ಥಿಗಳಿಗೆ ಮಾತ್ರ 100 ರೂಪಾಯಿ ಅರ್ಜಿ ಶುಲ್ಕ ನಿಗದಿ ಮಾಡಲಾಗಿದೆ.

ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳು, ಎಸ್ ಸಿ ಎಸ್ ಟಿ ತೃತೀಯ ಲಿಂಗಿಗಳು ಹಾಗೂ ಅಂಗವಿಕಲರಿಗೆ ಯಾವುದೇ ಶುಲ್ಕವಿರುವುದಿಲ್ಲ. ಇವರು ಸಂಪೂರ್ಣ ಉಚಿತವಾಗಿ ಅರ್ಜಿ ಸಲ್ಲಿಸಬಹುದು.

India Post Direct Selection 2026  : ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಸರಳ ವಿಧಾನ. 
  1. ಮೊದಲಿಗೆ ಕೆಳಗೆ ನೀಡಿರುವ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.https://www.indiapost.gov.in/gdsonlineengagement
  2. ಕ್ಯಾಂಡಿಡೇಟ್ ರಿಜಿಸ್ಟರ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಹಾಕಿ ಓಟಿಪಿ ಮೂಲಕ ಒನ್ ಟೈಮ್ ರಿಜಿಸ್ಟ್ರೇಷನ್ ಮಾಡಿಕೊಳ್ಳಿ.
  3. ರಿಜಿಸ್ಟ್ರೇಷನ್ ನಂಬರ್ ಪಡೆದ ನಂತರ ಲಾಗಿನ್ ಆಗಿ ನಿಮ್ಮ ಹತ್ತನೇ ತರಗತಿಯ ಬೋರ್ಡ್, ಪಾಸಾದ ವರ್ಷ ಹಾಗೂ
  4. ಅಂಕಗಳನ್ನು ಸರಿಯಾಗಿ ತುಂಬಿ. ನೀವು ಕೆಲಸ ಮಾಡಲು ಇಷ್ಟಪಡುವ ವಿಭಾಗವನ್ನು ಆಯ್ಕೆ ಮಾಡಿ.
  5. ನಿಮ್ಮ ಇತ್ತೀಚಿನ ಫೋಟೋ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  6. ಶುಲ್ಕ ಕಟ್ಟುವವರಿದ್ದರೆ ಆನ್ಲೈನ್ ಮೂಲಕ ಪಾವತಿಸಿ, ಒಮ್ಮೆ ಅರ್ಜಿಯನ್ನು ಪರಿಶೀಲಿಸಿ ಸಬ್ಮಿಟ್ ಮಾಡಿ.

ಸರ್ವರ್ ಡೌನ್ ಆಗುವ ಮುಂಚೆ ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಿ ನಿಮ್ಮ ರಿಜಿಸ್ಟ್ರೇಷನ್ ಮಾಡಿಕೊಳ್ಳಿ. ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕವನ್ನು ಗಮನದಲ್ಲಿಟ್ಟುಕೊಂಡು ದಿನಾಂಕ ಆರಂಭವಾದ ನಂತರ ಅರ್ಜಿಯನ್ನು ಸಲ್ಲಿಸಿ.

ಇದನ್ನು ಓದಿ

KSRLPS ಉಡುಪಿ ಜಿಲ್ಲಾ ನೇಮಕಾತಿ 2026 : ಉಡುಪಿ ಜಿಲ್ಲೆ ಹಾಗೂ ಕಾರ್ಕಳ ತಾಲೂಕುಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ. IMPORTANT Update.

Leave a Comment