ISRO URSC Recruitment 2026 : 10ನೇ ತರಗತಿ, ಐಟಿಐ ಮುಗಿಸಿದವರಿಗೆ ಸುವರ್ಣ ಅವಕಾಶ, 61 ಟೆಕ್ನಿಷಿಯನ್ ಹಾಗೂ ಡ್ರೈವರ್ ಹುದ್ದೆಗಳ important update.

ISRO URSC Recruitment 2026ISRO URSC Recruitment 2026 : ಇಸ್ರೋ ಯು ಆರ್ ಎಸ್ ಸಿ ಬೆಂಗಳೂರಿನಲ್ಲಿ 61 ಟೆಕ್ನಿಷಿಯನ್ ಮತ್ತು ಡ್ರೈವರ್ ಹುದ್ದೆಗಳ ನೇಮಕಾತಿ. ಅರ್ಹತೆ, ಶುಲ್ಕ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ಬೆಂಗಳೂರಿನಲ್ಲಿರುವ ಪ್ರಮುಖ ಕೇಂದ್ರವಾದ ಯು.ಆರ್ ರಾವ್ ಉಪಗ್ರಹ ಕೇಂದ್ರವು (URSC) 2026ನೇ ಸಾಲಿನ ಹೊಸ ನೇಮಕಾತಿ ಅಧಿಸೂಚನೆಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಬಾಹ್ಯಾಕಾಶ ಸಂಸ್ಥೆಯಲ್ಲಿ ಕೆಲಸ ಮಾಡಬೇಕೆಂಬ ಕನಸು ಹೊತ್ತಿರುವ ಐಟಿಐ (ITI) ಮತ್ತು ಚಾಲನ ಪರವಾಗಿ (Driving Licence) ಹೊಂದಿರುವ ಅಭ್ಯರ್ಥಿಗಳಿಗೆ ಇದು ಒಂದು ಸುವರ್ಣ ಅವಕಾಶವಾಗಿದೆ.

ಇಸ್ರೋ ಯು ಆರ್ ಎಸ್ ಸಿ ಒಟ್ಟು 61 ಟೆಕ್ನಿಷಿಯನ್ – B ಮತ್ತು ವಿವಿಧ ಚಾಲಕ (Driver) ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು 24 ಅಕ್ಟೋಬರ್ 2026 ರಿಂದ ನವಂಬರ್ 13 , 2026 ರ ವರೆಗೆ ಕಾಲಾವಕಾಶ ನೀಡಲಾಗಿದೆ.

ಈ ಲೇಖನದಲ್ಲಿ ಇಸ್ರೋ URSC  ನೇಮಕಾತಿಯ ಅರ್ಹತೆಗಳು, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ವಿವರಗಳನ್ನು ವಿವರವಾಗಿ ತಿಳಿಯೋಣ .

ISRO URSC Recruitment 2026 : ಪ್ರಮುಖ ವಿವರಗಳು

  • ನೇಮಕಾತಿ ಸಂಸ್ಥೆ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)
  • ಕೇಂದ್ರದ ಹೆಸರು : ಯು.ಆರ್ ರಾವ್ ಉಪಗ್ರಹ ಕೇಂದ್ರ (URSC) , ಬೆಂಗಳೂರು.
  • ಹುದ್ದೆಗಳ ಹೆಸರು : ಟೆಕ್ನಿಷಿಯನ್ – ಬಿ, ಭಾರಿ ವಾಹನ ಚಾಲಕ -ಎ, ಲಘು ವಾಹನ ಚಾಲಕ -ಎ, ಸಾಫ್ಟ್ ಕಾರ್ ಡ್ರೈವರ್ -ಎ
  • ಒಟ್ಟು ಹುದ್ದೆಗಳು: 61 ಹುದ್ದೆಗಳು
  • ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮಾತ್ರ
  • ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 24, ಅಕ್ಟೋಬರ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13 ನವೆಂಬರ್ 2026.
  • ಉದ್ಯೋಗದ ಸ್ಥಳ : ಬೆಂಗಳೂರು, ಕರ್ನಾಟಕ
  • ಅಧಿಕೃತ ವೆಬ್ಸೈಟ್ : https://www.isro.gov.in/URSCRecruitment13.html

ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ (Vacancy And Salary Details)

ISRO URSC Recruitment 2026 ಹುದ್ದೆಗಳಿಗೆ ಅನುಗುಣವಾಗಿ ವೇತನ ಶ್ರೇಣಿ ಮತ್ತು ಖಾಲಿ ಇರುವ ಹುದ್ದೆಗಳ ವಿವರ ಈ ಕೆಳಗಿನಂತಿದೆ.

  • ಟೆಕ್ನಿಷಿಯನ್ -ಬಿ (Technician -B) : 46 ಹುದ್ದೆಗಳು (ವೇತನ ಶ್ರೇಣಿ ಲೆವೆಲ್ 3 : ₹21,700 – ₹69,100 )
  • ಭಾರಿ ವಾಹನ ಚಾಲಕ -ಎ ( Heavy Vehicle Driver -A) : 10 ಹುದ್ದೆಗಳು (ವೇತನ ಶ್ರೇಣಿ ಲೆವೆಲ್ 2 : ₹19,900 – ₹63,200 )
  • ಲಘು ವಾಹನ ಚಾಲಕ -ಎ ( Light Vehicle Driver -A) : 3 ಹುದ್ದೆಗಳು (ವೇತನ ಶ್ರೇಣಿ ಲೆವೆಲ್ 2 : ₹19,900 – ₹63,200 )
  • ಸ್ಟಾಫ್ ಕಾರ್ ಡ್ರೈವರ್ -ಎ (Staff Car Driver -A) : 2 ಹುದ್ದೆಗಳು ( ವೇತನ ಶ್ರೇಣಿ ಲೆವೆಲ್ 2 : ₹19,900 – ₹63,200 )

(ಗಮನಿಸಿ : ಆಯ್ಕೆಯಾದ ಅಭ್ಯರ್ಥಿಗಳಿಗೆ ಮೂಲವೇತನದ ಜೊತೆಗೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) , ಸಾರಿಗೆ ಭತ್ಯೆ (TA) , ವೈದ್ಯಕೀಯ ಸೌಲಭ್ಯಗಳು ಮತ್ತು NPS ಸೌಲಭ್ಯಗಳು ಸಿಗಲಿದೆ.)

ISRO URSC Recruitment 2026 : ಅರ್ಹತಾ ಮಾನದಂಡಗಳು 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕಕ್ಕೆ (13 ನವೆಂಬರ್ 2026 ) ಅನ್ವಯವಾಗುವಂತೆ ಕೆಳಗಿನ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಹೊಂದಿರಬೇಕು.

1. ಶೈಕ್ಷಣಿಕ ಅರ್ಹತೆ ಮತ್ತು ಅನುಭವ 

  • ಟೆಕ್ನಿಷಿಯನ್ -ಬಿ: 10ನೇ ತರಗತಿ (SSLC/SSC) ಪಾಸ್ ಜೊತೆಗೆ NCVT ಅಂಗೀಕೃತ ಸಂಸ್ಥೆಯಿಂದ ಸಂಬಂಧ ಪಟ್ಟ ಟ್ರೇಡ್ ನಲ್ಲಿ ಐಟಿಐ (ITI/NTC/NAC) ಮುಗಿಸಿರಬೇಕು.
  • ಭಾರಿ ವಾಹನ ಚಾಲಕ -ಎ : 10ನೇ ತರಗತಿ ಪಾಸ್+ ಭಾರಿ ವಾಹನ ಚಾಲನೆಯಲ್ಲಿ ಕನಿಷ್ಠ 5 ವರ್ಷಗಳ ಅನುಭವವಿರಬೇಕು. ಜೊತೆಗೆ ಸಿಂಧುತ್ವ ಹೊಂದಿರುವ HVD ಲೈಸೆನ್ಸ್ ಮತ್ತು ಪಬ್ಲಿಕ್ ಸರ್ವಿಸ್ ಬ್ಯಾಡ್ಜ್ ಹೊಂದಿರಬೇಕು.
  • ಲಘು ವಾಹನ ಚಾಲಕ -ಎ ಹಾಗೂ ಸ್ಟಾಫ್ ಕಾರ್ ಡ್ರೈವರ್ -ಎ: 10ನೇ ತರಗತಿ ಪಾಸ್+ ಲಘು ವಾಹನ ಚಾಲನೆಯಲ್ಲಿ ಕನಿಷ್ಠ 3 ವರ್ಷಗಳ ಅನುಭವ ಹಾಗೂ ಮಾನ್ಯತೆ ಇರುವ LVD ಲೈಸೆನ್ಸ್ ಹೊಂದಿರಬೇಕು.

2. ವಯೋಮಿತಿ ( 13 ನವೆಂಬರ್ 2026 ಕ್ಕೆ ಅನ್ವಯಿಸುವಂತೆ) 

  • ಕನಿಷ್ಠ ವಯಸ್ಸು : 18 ವರ್ಷ
  • ಗರಿಷ್ಠ ವಯಸ್ಸು : 35 ವರ್ಷ
  • ವಯೋಮಿತಿ ಸಡಿಲಿಕೆ: ಸರ್ಕಾರದ ನಿಯಮಗಳ ಪ್ರಕಾರ SC, ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ಹಾಗೂ ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ ಮತ್ತು ರಿಫಂಡ್ (Refund) ನಿಯಮಗಳು 

ISRO URSC Recruitment 2026 ನೇಮಕಾತಿಯಲ್ಲಿ ಪಾರದರ್ಶಕ ಶುಲ್ಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆರಂಭದಲ್ಲಿ ಎಲ್ಲಾ ಅಭ್ಯರ್ಥಿಗಳು ಅರ್ಜಿ ಶುಲ್ಕ ಮತ್ತು ಪ್ರೊಸೆಸಿಂಗ್ ಶುಲ್ಕ ಎರಡನ್ನು ಸೇರಿಸಿ ಪಾವತಿಸಬೇಕು. ಪರೀಕ್ಷೆಗೆ ಹಾಜರಾದ ನಂತರ ಶುಲ್ಕ ಮರುಪಾವತಿಯಾಗುತ್ತದೆ.

  • ಅರ್ಜಿ ಶುಲ್ಕ : ಎಲ್ಲಾ ಅಭ್ಯರ್ಥಿಗಳಿಗೆ ₹100/ (ಇದು ಮರುಪಾವತಿ ಆಗುವುದಿಲ್ಲ)
  • ಪ್ರೊಸೆಸಿಂಗ್ ಶುಲ್ಕ : ಎಲ್ಲಾ ಅಭ್ಯರ್ಥಿಗಳಿಗೆ ₹400 ( ಆರಂಭದಲ್ಲಿ ಪಾವತಿಸಬೇಕು)

ಶುಲ್ಕ ಮರುಪಾವತಿ ವಿವರಗಳು 

  • ಮಹಿಳೆಯರು, SC, ST, ಅಂಗವಿಕಲರು (PWBD) ಮತ್ತು ಮಾಜಿ ಸೈನಿಕರು : ಇವರು ಲಿಖಿತ ಪರೀಕ್ಷೆಗೆ (written exam) ಹಾಜರಾದರೆ, ಇವರು ಪಾವತಿಸಿದ ಪೂರ್ಣ ₹400 ಪ್ರೋಸೆಸಿಂಗ್ ಶುಲ್ಕವನ್ನು ಬ್ಯಾಂಕ್ ಖಾತೆಗೆ ಮರುಪಾವತಿ ಮಾಡಲಾಗುತ್ತದೆ.
  • ಇತರ ಅಭ್ಯರ್ಥಿಗಳು (General/ OBC/EWS: ಪರೀಕ್ಷೆಗೆ ಹಾಜರಾದ ನಂತರ ಇವರಿಗೆ ₹100 ಅರ್ಜಿ ಶುಲ್ಕವನ್ನು ಕಟಾಯಿಸಿ, ಬಾಕಿ ₹300 ಹಣವನ್ನು ರೀಫಂಡ್ ಮಾಡಲಾಗುತ್ತದೆ.
  • ನೆನಪಿಡಿ : ಅಭ್ಯರ್ಥಿಯು ಲಿಖಿತ ಪರೀಕ್ಷೆಗೆ ಗೈರು ಹಾಜರಾದರೆ ಯಾವುದೇ ಹಣವನ್ನು ಮರುಪಾವತಿ ಮಾಡಲಾಗುವುದಿಲ್ಲ.

ಇದನ್ನು ಓದಿ

ಹಾಸನ ಆಯುಷ್ ಇಲಾಖೆ ನೇಮಕಾತಿ 2026 : ಪ್ರತಿಯೊಂದು ಹುದ್ದೆಯ ಸಂಪೂರ್ಣ ಅರ್ಹತೆ ಮತ್ತು ಅರ್ಜಿ ಸಲ್ಲಿಕೆಯ ಬಗ್ಗೆ Important update.

ಆಯ್ಕೆ ಪ್ರಕ್ರಿಯೆ (Selection Process) 

ISRO URSC Recruitment 2026 ನೇಮಕಾತಿ ಎರಡು ಪ್ರಮುಖ ಹಂತಗಳನ್ನು ಒಳಗೊಂಡಿರುತ್ತದೆ.

1. ಲಿಖಿತ ಪರೀಕ್ಷೆ (Written Test) 

ಮೊದಲಿಗೆ ಕಂಪ್ಯೂಟರ್ ಆಧಾರಿತ (CBT) ಅಥವಾ ಆಫ್ ಲೈನ್ ವಸ್ತು ನಿಷ್ಠ (Objective Type) ಲಿಖಿತ ಪರೀಕ್ಷೆ ಇರುತ್ತದೆ. ಇದರಲ್ಲಿ ಅಭ್ಯರ್ಥಿಯ ಆಯಾ ಟ್ರೇಡ್ ಅಥವಾ ಡ್ರೈವಿಂಗ್ ನಿಯಮಗಳ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ.

2. ಕೌಶಲ್ಯ ಪರೀಕ್ಷೆ (Skill Test/ Trade Test) 

ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಮೆರಿಟ್ ಲಿಸ್ಟ್ ಸಿದ್ಧಪಡಿಸಿ, ಹುದ್ದೆಗಳ ಅನುಪಾತಕ್ಕೆ ತಕ್ಕಂತೆ (ಸಾಮಾನ್ಯವಾಗಿ 1:5) ಅಭ್ಯರ್ಥಿಗಳನ್ನು ಪ್ರಾಯೋಗಿಕ ಕೌಶಲ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ಇದು ಕೇವಲ ಅರ್ಹತಾ ಪರೀಕ್ಷೆಯಾಗಿರುತ್ತದೆ. (Qualifying Nature)

3. ದಾಖಲೆಗಳ ಪರಿಶೀಲನೆ ಮತ್ತು ವೈದ್ಯಕೀಯ ತಪಾಸಣೆ 

ಕೌಶಲ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಲ್ಲಿ ಲಿಖಿತ ಪರೀಕ್ಷೆಯ ಅಂಕಗಳನ್ನು ಮಾತ್ರ ಪರಿಗಣಿಸಿ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ.

ISRO URSC Recruitment 2026 ಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? 

ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.

  1. ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ : ಇಸ್ರೋ ಅಧಿಕೃತ ಕೆರಿಯರ್ ಪೇಜ್ https://www.isro.gov.in/URSCRecruitment13.html ಅಥವಾ ಯು ಆರ್ ಎಸ್ ಸಿ ಪೋರ್ಟಲ್ ಗೆ ಭೇಟಿ ನೀಡಿ.
  2. ಲಿಂಕ್ ಆಯ್ಕೆ ಮಾಡಿ : ಹೋಂ ಪೇಜಿನಲ್ಲಿ ಕಾಣಿಸುವ URSC Recruitment 2026 (Technician & Driver Post’s) ಲಿಂಕ್ ಆಯ್ಕೆ ಮಾಡಿ.
  3. ನೋಂದಣಿ (Registration) : “Apply Online” ಮೇಲೆ ಕ್ಲಿಕ್ ಮಾಡಿ, ನಿಮ್ಮ ಹೆಸರು ಇ-ಮೇಲ್ ಮತ್ತು ಮೊಬೈಲ್ ಸಂಖ್ಯೆ ನೀಡಿ ರಿಜಿಸ್ಟರ್ ಮಾಡಿಕೊಳ್ಳಿ.
  4. ಮಾಹಿತಿ ಭರ್ತಿ ಮಾಡಿ : ಲಾಗಿನ್ ಆದ ನಂತರ ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಅರ್ಹತೆ ಮತ್ತು ವಿಳಾಸವನ್ನು ನಿಖರವಾಗಿ ಭರ್ತಿ ಮಾಡಿ.
  5. ದಾಖಲೆಗಳನ್ನು ಅಪ್ಲೋಡ್ ಮಾಡಿ : ನಿಮ್ಮ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ, ಸಹಿ, 10ನೇ ತರಗತಿ ಅಂಕಪಟ್ಟಿ ಮತ್ತು ಐಟಿಐ/ಡ್ರೈವಿಂಗ್ ಲೈಸನ್ಸ್ ಪ್ರಮಾಣ ಪತ್ರಗಳನ್ನು ನಿಗದಿತ ಸೈಜಿನಲ್ಲಿ ಅಪ್ಲೋಡ್ ಮಾಡಿ.
  6. ಶುಲ್ಕ ಪಾವತಿಸಿ: ಆನ್ಲೈನ್ ಗೇಟ್ ವೇ ಮೂಲಕ (UPI ,net banking, credit card, debit card)ಒಟ್ಟು ₹500 ಶುಲ್ಕವನ್ನು ಪಾವತಿಸಿ.
  7. ಅರ್ಜಿ ಸಬ್ಮಿಟ್ ಮಾಡಿ : ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿದ ನಂತರ “Submit” ಬಟನ್ ಒತ್ತಿ, ಮುಂದಿನ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ಫಾರ್ಮ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು (Important Dates)

  • ಅಧಿಸೂಚನೆ ಪ್ರಕಟಣೆ ಮತ್ತು ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 24 ಅಕ್ಟೋಬರ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 13 ನವೆಂಬರ್ 2026
  • ಅಧಿಕೃತ ನೋಟಿಫಿಕೇಶನ್ PDF: ಇಸ್ರೋ ವೆಬ್ಸೈಟಿನಲ್ಲಿ ಲಭ್ಯವಿದೆ.

ಇದನ್ನು ಓದಿ

LIC HFL Recruitment 2026 : 232 ಹುದ್ದೆಗಳ ನೇಮಕಾತಿ, ಸಂಪೂರ್ಣ ವಿವರಗಳು. ಪದವಿ ವಿದ್ಯಾರ್ಥಿಗಳಿಗೆ Important update.

ISRO URSC Recruitment 2026 : FAQs 

1. ಇಸ್ರೋ URSC ನೇಮಕಾತಿ 2026ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? 

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 13 ನವೆಂಬರ್ 2026 ಕೊನೆಯ ದಿನಾಂಕವಾಗಿದೆ.

2. ISRO URSC ಹುದ್ದೆಗಳಿಗೆ ಬೇಕಾಗುವ ಕನಿಷ್ಠ ವಿದ್ಯಾರ್ಹತೆ ಏನು? 

  • ಟೆಕ್ನಿಷಿಯನ್ -ಬಿ: 10ನೇ ತರಗತಿ ಪಾಸ್ ಜೊತೆಗೆ ಆಯಾ ಟ್ರೇಡಿನಲ್ಲಿ NCVT ಅಂಗೀಕೃತ ಐಟಿಐ (ITI) ಮುಗಿಸಿರಬೇಕು.
  • ಚಾಲಕ ಹುದ್ದೆಗಳು : ಹತ್ತನೇ ತರಗತಿ ಪಾಸ್ ಜೊತೆಗೆ ಮಾನ್ಯತೆ ಇರುವ ಡ್ರೈವಿಂಗ್ ಲೈಸೆನ್ಸ್ ಮತ್ತು 3 ರಿಂದ 5 ವರ್ಷಗಳ ಚಾಲನ ಅನುಭವ ಇರಬೇಕು.

3.  ISRO URSC Recruitment 2026 ನೇಮಕಾತಿಯ ಒಟ್ಟು ಅರ್ಜಿ ಶುಲ್ಕ ಎಷ್ಟು? 

ಎಲ್ಲಾ ಅಭ್ಯರ್ಥಿಗಳು ಆರಂಭದಲ್ಲಿ ಹುಟ್ಟು ₹500 ಪಾವತಿಸಬೇಕು. (₹100 ಅರ್ಜಿ ಶುಲ್ಕ+ ₹400 ಪ್ರೋಸೆಸಿಂಗ್ ಶುಲ್ಕ.)

4. ಇಸ್ರೋ ಅರ್ಜಿ ಶುಲ್ಕ ರೀಫಂಡ್ (ಮರುಪಾವತಿ) ನಿಯಮವೇನು? 

ನೀವು ಲಿಖಿತ ಪರೀಕ್ಷೆಗೆ ಹಾಜರಾದರೆ ಮಾತ್ರ ಶುಲ್ಕ ಮರುಪಾವತಿ ಯಾಗುತ್ತದೆ. ಮಹಿಳೆಯರು, SC, ST ಮಾಜಿ ಸೈನಿಕರು ಮತ್ತು ಅಂಗವಿಕಲರಿಗೆ ಪೂರ್ಣ ₹400 ರೀಫಂಡ್ ಆಗುತ್ತದೆ. ಜನರಲ್, OBC ಮತ್ತು EWS  ಅಭ್ಯರ್ಥಿಗಳಿಗೆ ₹300 ರೀಫಂಡ್ ಆಗುತ್ತದೆ.

5. ಇಸ್ರೋ ಯು ಆರ್ ಎಸ್ ಸಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ? 

ಅಭ್ಯರ್ಥಿಗಳನ್ನು ಮೊದಲು ಲಿಖಿತ ಪರೀಕ್ಷೆ (written test) ಮತ್ತು ನಂತರ ಪ್ರಾಯೋಗಿಕ ಕೌಶಲ್ಯ ಪರೀಕ್ಷೆ (Skill Test) ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಅಂತಿಮ ಮೆರಿಟ್ ಪಟ್ಟಿಯನ್ನು ಲಿಖಿತ ಪರೀಕ್ಷೆಯ ಅಂಕಗಳ ಮೇಲೆಯೇ ಸಿದ್ಧಪಡಿಸಲಾಗುತ್ತದೆ.

6. ಈ ಹುದ್ದೆ ಗಳಿಗೆ ಗರಿಷ್ಠ ವಯೋಮಿತಿ ಎಷ್ಟು? 

ISRO URSC Recruitment 2026 ಹುದ್ದೆಗಳಿಗೆ ಗರಿಷ್ಠ ವಯೋಮಿತಿ 35 ವರ್ಷಗಳು. ಸರ್ಕಾರದ ನಿಯಮಗಳ ಪ್ರಕಾರ ಓಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.

ಕೊನೆಯ ಮಾತು :  ISRO URSC Recruitment 2026 ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಗಳಲ್ಲಿ ವೆಬ್ಸೈಟ್ ಸರ್ವರ್ ಬ್ಯುಸಿ ಆಗುವುದನ್ನು ತಪ್ಪಿಸಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕಕ್ಕಿಂತ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ. ಎಲ್ಲರಿಗೂ ಶುಭವಾಗಲಿ.

ಇದೇ ರೀತಿಯ ಹೆಚ್ಚಿನ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ. ಈ ಲೇಖನವನ್ನು ನಿಮ್ಮ ಕುಟುಂಬದ ಅಥವಾ ಸ್ನೇಹಿತರ ಗುಂಪಿನಲ್ಲಿರುವ 10ನೇ ತರಗತಿ ಹಾಗೂ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಹಂಚಿಕೊಳ್ಳಿ.

ಇದನ್ನು ಓದಿ

Bagalkot Sahakari Okkuta Recruitment 2026 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ ₹47,650 ವರೆಗೆ 10th , PUC ವಿದ್ಯಾರ್ಥಿಗಳಿಗೆ Important update.

ಇದನ್ನು ಓದಿ

RRB Station Master Jobs 2026 : ಈ ಬಾರಿ ಆಯ್ಕೆ ವಿಧಾನದಲ್ಲಿ ಭಾರಿ ಬದಲಾವಣೆ. ಅರ್ಹತೆ, ವೇತನ ಮತ್ತು ಪಠ್ಯಕ್ರಮದ Important update.

Leave a Comment