7925 ಪೊಲೀಸ್ ಹುದ್ದೆಗಳು : ಕರ್ನಾಟಕ ಸರ್ಕಾರವು ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಹುಡುಕುತ್ತಿರುವ ಯುವಕ ಯುವತಿಯರಿಗೆ ಭರ್ಜರಿ ಸಿಹಿ ಸುದ್ದಿ ಒಂದನ್ನು ನೀಡಿದೆ. ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 7,925 ವಿವಿಧ ಹುದ್ದೆಗಳ ಭರ್ತಿಗೆ ಸರ್ಕಾರ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಿದೆ. ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸಿಬ್ಬಂದಿ ಕೊರತೆಯನ್ನು ನೀಗಿಸಲು ಈ ಬೃಹತ್ ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಇತ್ತೀಚೆಗೆ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ.
ನೀವು ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಆಕಾಂಕ್ಷಿಯಾಗಿದ್ದರೆ, ಈ ಹುದ್ದೆಗಳ ವಿವರ, ನಿರೀಕ್ಷಿತ ವಿದ್ಯಾರ್ಹತೆ, ವಯೋಮಿತಿ ಮತ್ತು ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನು ಓದಿ
7925 ಪೊಲೀಸ್ ಹುದ್ದೆಗಳು : ಮುಖ್ಯಾಂಶಗಳು
- ಒಟ್ಟು ಹುದ್ದೆಗಳ ಸಂಖ್ಯೆ : 7,925 ಹುದ್ದೆಗಳು
- ಯಾವ ಇಲಾಖೆ : ಕರ್ನಾಟಕ ರಾಜ್ಯ ಪೊಲೀಸ್ (KSP)
- ಉದ್ಯೋಗದ ಸ್ಥಳ : ಕರ್ನಾಟಕದಾದ್ಯಂತ
- ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ (online)
- ಅಧಿಕೃತ ವೆಬ್ಸೈಟ್ : https://ksp.karnataka.gov.in/
ಖಾಲಿ ಇರುವ ಹುದ್ದೆಗಳ ವರ್ಗೀಕರಣ (Expected Post – Wise Vacancies)
7925 ಪೊಲೀಸ್ ಹುದ್ದೆಗಳು ವಿವಿಧ ವಿಭಾಗಗಳ ಮೂಲಕ ಭರ್ತಿ ಮಾಡಲು ಸಿದ್ಧತೆ ನಡೆಸಲಾಗುತ್ತಿದೆ. ನಿರೀಕ್ಷಿತ ಹುದ್ದೆಗಳ ವಿವರ ಇಲ್ಲಿದೆ.
- ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (Civil Pc)
- ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (CAR/DAR)
- ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP/KSISF)
- ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI)
ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಆದ್ಯತೆ : ಈ ಒಟ್ಟು ಹುದ್ದೆಗಳಲ್ಲಿ ಸುಮಾರು 1,639 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ (Kalyana Karnataka – Article 371J) ಪ್ರದೇಶದ ಅಭ್ಯರ್ಥಿಗಳಿಗೆ ಮೀಸಲಿಡಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
7925 ಪೊಲೀಸ್ ಹುದ್ದೆಗಳು : ವಿದ್ಯಾರ್ಹತೆ
ಪೊಲೀಸ್ ಇಲಾಖೆಯ ನಿಯಮಾವಳಿಗಳ ಪ್ರಕಾರ ಬೇರೆಬೇರೆ ಹುದ್ದೆಗಳಿಗೆ ವಿಭಿನ್ನ ವಿದ್ಯಾರ್ಹತೆ ಇರಲಿದೆ.
1. ಪೊಲೀಸ್ ಕಾನ್ಸ್ಟೇಬಲ್ (PC)
ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
2. ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI)
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Degree) ಅಥವಾ ತತ್ಸಮಾನ ಶಿಕ್ಷಣ ಮುಗಿಸಿರಬೇಕು.
ವಯೋಮಿತಿ (Age Limit)
ಸಾಮಾನ್ಯವಾಗಿ ಕರ್ನಾಟಕ ಪೊಲೀಸ್ ನೇಮಕಾತಿಗೆ ಈ ಕೆಳಗಿನ ವಯೋಮಿತಿ ಅನ್ವಯವಾಗುತ್ತದೆ (ಅಧಿಕೃತ ನೋಟಿಫಿಕೇಶನ್ ನಲ್ಲಿ ಇದು ಬದಲಾಗಬಹುದು.)
- ಕನಿಷ್ಠ ವಯಸ್ಸು : 19 ವರ್ಷ ತುಂಬಿರಬೇಕು.
- ಗರಿಷ್ಠ ವಯಸ್ಸು (ಸಾಮಾನ್ಯ ವರ್ಗ- GM) : 25 ರಿಂದ 27 ವರ್ಷಗಳು
- ಗರಿಷ್ಠ ವಯಸ್ಸು (OBC/SC, ST/cat-1) : 3 ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)
7925 ಪೊಲೀಸ್ ಹುದ್ದೆಗಳು ಅಭ್ಯರ್ಥಿಗಳನ್ನು ಪ್ರಮುಖವಾಗಿ ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ.
- ಲಿಖಿತ ಪರೀಕ್ಷೆ (Written Exam ) : ಅಭ್ಯರ್ಥಿಗಳ ಸಾಮಾನ್ಯ ಜ್ಞಾನ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಪರೀಕ್ಷಿಸಲು ಆಬ್ಜೆಕ್ಟಿವ್ ಮಾದರಿಯ ಪರೀಕ್ಷೆ ಇರುತ್ತದೆ.
- ದೈಹಿಕ ಧಾರ್ದ್ಯತೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆ ( PST & PET) : ಓಟ, ಎತ್ತರ ಜಂಪ್, ಉದ್ದ ಜಂಪ್ ಮತ್ತು ಎದೆಯ ಅಳತೆ (ಪುರುಷರಿಗೆ) ತಪಾಸಣೆ ಇರುತ್ತದೆ.
- ವೈದ್ಯಕೀಯ ತಪಾಸಣೆ ಹಾಗೂ ದಾಖಲಾತಿ ಪರಿಶೀಲನೆ (Medical Exam & DV) : ಅಂತಿಮ ಹಂತದಲ್ಲಿ ವೈದ್ಯಕೀಯ ಪರೀಕ್ಷೆ ಮತ್ತು ಮೂಲ ದಾಖಲೆಗಳ ಪರಿಶೀಲನೆ ನಡೆಯುತ್ತದೆ.
ಇದನ್ನು ಓದಿ
ಗಮನಾರ್ಹ ಬದಲಾವಣೆ : ನೇಮಕಾತಿ ಪ್ರಕ್ರಿಯೆಯನ್ನು ಇನ್ನಷ್ಟು ಪಾರದರ್ಶಕ ಮತ್ತು ಸುಲಭಗೊಳಿಸಲು ಸರ್ಕಾರವು ಶೀಘ್ರದಲ್ಲೇ “ಶಾಶ್ವತ ನೇಮಕಾತಿ ಮಂಡಳಿ”(Permanent Recruitment Board) ಅನ್ನು ಸ್ಥಾಪಿಸುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಯಾವಾಗ ಪ್ರಾರಂಭವಾಗುತ್ತದೆ?
ಸರ್ಕಾರವು ಹುದ್ದೆಗಳ ಭರ್ತಿಗೆ ಅನುಮೋದನೆ ನೀಡಿದ್ದು, ಸದ್ಯದಲ್ಲೇ ಇಲಾಖೆಯು ವರ್ಗವಾರು ಮತ್ತು ಜಿಲ್ಲಾವಾರು ಹುದ್ದೆಗಳ ವಿವರವಾದ ಅಧಿಕೃತ ಅಧಿಸೂಚನೆಯನ್ನು ( Official Notification) ಬಿಡುಗಡೆ ಮಾಡಲಿದೆ. ನೋಟಿಫಿಕೇಶನ್ ಹೊರಬಿದ್ದ ತಕ್ಷಣ ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಸಕ್ರಿಯಗೊಳ್ಳುತ್ತದೆ.
ಕೊನೆಯ ಮಾತು : ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇರಲು ಬಯಸುವ ಆಕಾಂಕ್ಷಿಗಳಿಗೆ ಇದು ಸುವರ್ಣ ಅವಕಾಶವಾಗಿದೆ. ಒಟ್ಟು 7,925 ಹುದ್ದೆಗಳ ದೊಡ್ಡ ಮಟ್ಟದ ನೇಮಕಾತಿ ಇದಾಗಿರುವುದರಿಂದ, ಸ್ಪರ್ಧೆಯು ಹೆಚ್ಚಿರುತ್ತದೆ. ಆದ್ದರಿಂದ ಅಧಿಕೃತ ನೋಟಿಫಿಕೇಶನ್ ಬರುವವರೆಗೂ ಕಾಯದೆ, ಈಗಿನಿಂದಲೇ ನಿಮ್ಮ ದೈಹಿಕ ಕಸರತ್ತು ಮತ್ತು ಲಿಖಿತ ಪರೀಕ್ಷೆಯ ತಯಾರಿ (Preperation )ಆರಂಭಿಸಿ.
ನೇಮಕಾತಿ ಯ ಇತ್ತೀಚಿನ ಅಪ್ಡೇಟ್ ಗಳಿಗಾಗಿ ನಮ್ಮ ವಾಟ್ಸಪ್ ಚಾನೆಲ್ ಅನ್ನು ಫಾಲೋ ಮಾಡಿ ಇದೇ ರೀತಿಯ ಹೆಚ್ಚಿನ ಉದ್ಯೋಗಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ತಕ್ಷಣ ಮಾಹಿತಿ ಪಡೆಯಿರಿ.
7925 ಪೊಲೀಸ್ ಹುದ್ದೆಗಳು : ಪದೇ ಪದೇ ಕೇಳಲಾಗುವ ಪ್ರಶ್ನೆಗಳು? (FAQ)
1. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಒಟ್ಟು ಎಷ್ಟು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ?
ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 7,925 ವಿವಿಧ ಹುದ್ದೆಗಳ (ಕಾನ್ಸ್ಟೇಬಲ್, ಸಬ್ ಇನ್ಸ್ಪೆಕ್ಟರ್ ಇತ್ಯಾದಿ) ಭರ್ತಿಗೆ ಸರ್ಕಾರ ಘೋಷಣೆ ಮಾಡಿದೆ.
2.ಈ 7,925 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ವಿದ್ಯಾರ್ಹತೆ ಏನು?
ಪೊಲೀಸ್ ಕಾನ್ಸ್ಟೇಬಲ್ (PC) ಹುದ್ದೆಗಳಿಗೆ ಪಿಯುಸಿ (10+2) ಅಥವಾ ತತ್ಸಮಾನ ಶಿಕ್ಷಣ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ (PSI) ಹುದ್ದೆಗಳಿಗೆ ಯಾವುದೇ ಮಾನ್ಯತೆ ಪಡೆದ ಪದವಿ (degree) ಮುಗಿಸಿರಬೇಕು.
3. ಕಲ್ಯಾಣ ಕರ್ನಾಟಕ (Kalyana Karnataka) ಪ್ರದೇಶದ ಅಭ್ಯರ್ಥಿಗಳಿಗೆ ಎಷ್ಟು ಹುದ್ದೆಗಳು ಮೀಸಲಿವೆ?
ಈ ಒಟ್ಟು ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ (article 371J) ಭಾಗದ ಅಭ್ಯರ್ಥಿಗಳಿಗೆ ಸುಮಾರು 1,639 ಹುದ್ದೆಗಳನ್ನು ಮೀಸಲಿಡಲಾಗುತ್ತಿದೆ.
4. ಈ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಸಲ್ಲಿಕೆ ಯಾವಾಗ ಪ್ರಾರಂಭವಾಗುತ್ತದೆ?
ಸರ್ಕಾರವು ನೇಮಕಾತಿಗೆ ಅನುಮೋದನೆ ನೀಡಿದ್ದು, ಶೀಘ್ರದಲ್ಲಿ ಪೊಲೀಸ್ ಇಲಾಖೆಯಿಂದ ಅಧಿಕೃತ ಅಧಿಸೂಚನೆ (Official Notification) ಬಿಡುಗಡೆಯಾಗಲಿದೆ. ನೋಟಿಫಿಕೇಶನ್ ಪ್ರಕಟವಾದ ತಕ್ಷಣ ಅರ್ಜಿ ಸಲ್ಲಿಕೆ ದಿನಾಂಕಗಳು ಲಭ್ಯವಾಗಲಿದೆ.
5. ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಯಾವುದು?
ಅಭ್ಯರ್ಥಿಗಳು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ https://ksp.karnataka.gov.in/ ಮೂಲಕ ಮಾತ್ರ ಆನ್ಲೈನ್ ಅರ್ಜಿ ಸಲ್ಲಿಸಬೇಕಾಗುತ್ತದೆ.
6. 7925 ಪೊಲೀಸ್ ಹುದ್ದೆಗಳು ನೇಮಕಾತಿಯ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಅಭ್ಯರ್ಥಿಗಳನ್ನು ಪ್ರಮುಖವಾಗಿ ಮೂರು ಹಂತಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆ (written exam) . ದೈಹಿಕ ಸಾಮರ್ಥ್ಯ ಪರೀಕ್ಷೆ (PET/PST) ಮತ್ತು ವೈದ್ಯಕೀಯ ತಪಾಸಣೆ (Medical test) .
ಇದನ್ನು ಓದಿ
ಇದನ್ನು ಓದಿ