Reliance Foundation Scholarship 2026-27 : ರಿಲಯನ್ಸ್ ಫೌಂಡೇಶನ್ ವತಿಯಿಂದ 2026 27 ನೇ ಸಾಲಿನ ಪದವಿ (UG) ಮತ್ತು ಸ್ನಾತಕೋತ್ತರ (PG) ವಿದ್ಯಾರ್ಥಿಗಳಿಗೆ ₹2 ಲಕ್ಷದಿಂದ ₹6 ಲಕ್ಷದವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಅರ್ಹತೆ, ಅಗತ್ಯ ದಾಖಲೆಗಳು ಹಾಗೂ ಆನ್ಲೈನ್ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
- ವಿದ್ಯಾರ್ಥಿ ವೇತನದ ಮೊತ್ತ : ಪದವಿ ವಿದ್ಯಾರ್ಥಿಗಳಿಗೆ 2 ಲಕ್ಷದವರೆಗೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 6 ಲಕ್ಷದವರೆಗೆ.
- ಅರ್ಹತೆ : ಪ್ರಥಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು.
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 05 ಅಕ್ಟೋಬರ್ 2026.
ಭಾರತದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ, ರಿಲಯನ್ಸ್ ಫೌಂಡೇಶನ್ ನ ಸಂಸ್ಥಾಪಕಿ ಮತ್ತು ಅಧ್ಯಕ್ಷರಾದ ಶ್ರೀಮತಿ ನೀತಾ ಅಂಬಾನಿ ಅವರು 2022 ರಲ್ಲಿ ರಿಲಯನ್ಸ್ ಸಂಸ್ಥಾಪಕ ಧೀರು ಬಾಯಿ ಅಂಬಾನಿ ಅವರ 90ನೇ ಜನ್ಮದಿನದಂದು ಮಹತ್ವದ ವಿದ್ಯಾರ್ಥಿ ವೇತನ ಯೋಜನೆಯನ್ನು ಘೋಷಿಸಿದ್ದರು.
ಮುಂದಿನ ಹತ್ತು ವರ್ಷಗಳಲ್ಲಿ 50,000 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಈ ಮಹತ್ವಕಾಂಕ್ಷೆಯ ಯೋಜನೆಯ ಭಾಗವಾಗಿ ಇದೀಗ “ರಿಲಯನ್ಸ್ ಫೌಂಡೇಶನ್ ಸ್ಕಾಲರ್ಶಿಪ್ 2026- 27” ಗಾಗಿ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಯೋಜನೆ ಅಡಿ ಆರ್ಥಿಕವಾಗಿ ಹಿಂದುಳಿದ 5,000 ಪ್ರತಿಭಾವಂತ ಪದವಿ (UG) ವಿದ್ಯಾರ್ಥಿಗಳಿಗೆ ಹಾಗೂ ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಿಗೆ ಸಂಬಂಧಿಸಿದ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ 100 ಅತ್ಯುತ್ತಮ ಸ್ನಾತಕೋತ್ತರ (PG) ವಿದ್ಯಾರ್ಥಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ. ಆಸಕ್ತ ಮತ್ತು ಅರ್ಹ ವಿದ್ಯಾರ್ಥಿಗಳು 2026ರ ಅಕ್ಟೋಬರ್ 5 ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಈ ವಿದ್ಯಾರ್ಥಿ ವೇತನದ ಪ್ರಯೋಜನಗಳು, ಅರ್ಹತಾ ಮಾನದಂಡಗಳು, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಇದನ್ನು ಓದಿ
Reliance Foundation Scholarship 2026-27 : ಪದವಿ ಹಾಗೂ ಸ್ನಾತಕೋತ್ತರ ಸ್ಕಾಲರ್ಶಿಪ್ ಮುಖ್ಯಾಂಶಗಳು
Reliance Foundation Scholarship 2026-27: ಪದವಿ ಸ್ಕಾಲರ್ಶಿಪ್ (Under Graduation Scholarship)
ಯಾವುದೇ ಸ್ಟ್ರೀಮ್ನಲ್ಲಿ (B,A , B,Com , B,sc ಇತ್ಯಾದಿ) ಪೂರ್ಣಾವಧಿ ಪದವಿಯ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ.
ಅರ್ಹತಾ ಮಾನದಂಡಗಳು (eligibility)
- ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು.
- 12ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
- ಪ್ರಸ್ತುತ 2026 27ನೇ ಸಾಲಿನಲ್ಲಿ ಪ್ರಥಮ ವರ್ಷದ ಪದವಿಗೆ (regular-full time) ಸೇರ್ಪಡೆಯಾಗಿರಬೇಕು.
- ಕುಟುಂಬದ ಒಟ್ಟು ವಾರ್ಷಿಕ ಆದಾಯ 15 ಲಕ್ಷಕ್ಕಿಂತ ಕಡಿಮೆ ಇರಬೇಕು.
- ಆನ್ಲೈನ್ ಆಪ್ಟಿಟ್ಯೂಡ್ ಟೆಸ್ಟ್ ಬರೆಯುವುದು ಕಡ್ಡಾಯ . (ಸೂಚನೆ : ಎರಡನೇ ವರ್ಷದ ವಿದ್ಯಾರ್ಥಿಗಳು ಡಿಪ್ಲೋಮಾ, ಡಿಸ್ಟೆನ್ಸ್ ಎಜುಕೇಶನ್ ಅಥವಾ ಆನ್ಲೈನ್ ಡಿಗ್ರಿ ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ.)
Reliance Foundation Scholarship 2026-27: ಪ್ರಯೋಜನಗಳು (benefits)
- ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ ಪದವಿ ಮುಗಿಯುವವರೆಗೆ ಒಟ್ಟು ₹2 ಲಕ್ಷದವರೆಗೆ ಸ್ಕಾಲರ್ಶಿಪ್ ನೀಡಲಾಗುವುದು. ಜೊತೆಗೆ ಬಲಿಷ್ಠ ಅಲುಮ್ನಿ ನೆಟ್ವರ್ಕ್ (alumni network ) ಬೆಂಬಲ ಸಿಗಲಿದೆ.
Reliance Foundation Scholarship 2026-27: ಸ್ನಾತಕೋತ್ತರ ಸ್ಕಾಲರ್ಶಿಪ್ (post graduate scholarship)
ಭವಿಷ್ಯದ ತಂತ್ರಜ್ಞಾನ ಕ್ಷೇತ್ರಗಳಾದ , computer science, AI , mathematics and computing, electrical/electronics, chemical, mechanical, renewable, energy, material science & life sciences ವಿಭಾಗಗಳಲ್ಲಿ ಪ್ರಥಮ ವರ್ಷದ PG ಮಾಡುತ್ತಿರುವವರಿಗೆ.
ಅರ್ಹತಾ ಮಾನದಂಡಗಳು (eligibility)
- ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು.
- ಪ್ರಥಮ ವರ್ಷದ ಸ್ನಾತಕೋತ್ತರ (PG) ವಿದ್ಯಾರ್ಥಿಯಾಗಿರಬೇಕು.
- GATE score 550 – 1000 ನಡುವೆ ಇರಬೇಕು ಅಥವಾ ಪದವಿಯಲ್ಲಿ 7.5 CGPA ಪಡೆದಿರಬೇಕು.
ಪ್ರಯೋಜನಗಳು (benefits)
- ಆಯ್ಕೆಯಾದ 100 ವಿದ್ಯಾರ್ಥಿಗಳಿಗೆ ಅವರ ಕೋರ್ಸ್ ಮುಗಿಯುವವರೆಗೆ ಒಟ್ಟು ₹6 ಲಕ್ಷದವರೆಗೆ ಸ್ಕಾಲರ್ಶಿಪ್ ಸಿಗಲಿದೆ.
- ಜೊತೆಗೆ ಜಾಗತಿಕ ತಜ್ಞರೊಂದಿಗೆ ಸಂವಹನ, ಇಂಟರ್ನ್ಶಿಪ್ (internship) ಹಾಗೂ ಮೆಂಟರ್ಶಿಪ್ ಅವಕಾಶಗಳು ಲಭ್ಯ.
ಇದನ್ನು ಓದಿ
Reliance Foundation Scholarship 2026-27 : ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
- ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
- ಖಾಯಂ ವಿಳಾಸದ ಪುರಾವೆ.(Address proof)
- ಆಧಾರ್ ಕಾರ್ಡ್ (Aadhar card)
- ಹತ್ತನೇ ಮತ್ತು 12ನೇ ತರಗತಿಯ ಅಂಕಪಟ್ಟಿಗಳು.
- ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕಾಲೇಜಿನಿಂದ ಬೋನಾ ಫೈಡ್ (Bonafide student certificate) ಸರ್ಟಿಫಿಕೇಟ್.
- ಕುಟುಂಬದ ಆದಾಯ ಪ್ರಮಾಣ ಪತ್ರ (ಗ್ರಾಮ ಪಂಚಾಯಿತಿ, ತಹಶೀಲ್ದಾರ್ ಅಥವಾ ಸಕ್ಸಮ ಪ್ರಾಧಿಕಾರದಿಂದ ನೀಡಲ್ಪಟ್ಟಿದ್ದು.)
- ಅಂಗವಿಕಲ ವಿದ್ಯಾರ್ಥಿಗಳಾಗಿದ್ದರೆ ಅಂಗವಿಕಲ ಪ್ರಮಾಣ ಪತ್ರ.
- PG ವಿದ್ಯಾರ್ಥಿಗಳಿಗೆ ಮಾತ್ರ : ಪದವಿಯ ಅಂಕಪಟ್ಟಿ, GATE ಕೋರ್ ಕಾರ್ಡ್, ಎರಡು ಪ್ರಬಂಧಗಳು (personal statement & sop) ಮತ್ತು ಎರಡು ರೆಫರೆನ್ಸ್ ಲೆಟರ್ ಗಳು. (ಸೂಚನೆ: ಆಯ್ಕೆಯಾದ ನಂತರ ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ವಿವರಗಳನ್ನು ನೀಡಬೇಕಾಗುತ್ತದೆ.)
Reliance Foundation Scholarship 2026-27 : ಅರ್ಜಿ ಸಲ್ಲಿಸುವುದು ಹೇಗೆ ?
Step 1. ಆನ್ಲೈನ್ ಸ್ಕಾಲರ್ಶಿಪ್ ಪೋರ್ಟಲ್ ಗೆ ಭೇಟಿ ನೀಡಿ. https://www.buddy4study.com/page/reliance-foundation-scholarships
Step 2. Reliance Foundation Scholarships 2026-27 ವಿಭಾಗವನ್ನು ಆಯ್ಕೆ ಮಾಡಿ Apply Now ಬಟನ್ ಮೇಲೆ ಕ್ಲಿಕ್ ಮಾಡಿ.
Step 3. ನಿಮ್ಮ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಅಥವಾ ಗೂಗಲ್ ಖಾತೆ ಬಳಸಿ ಲಾಗಿನ್/ರಿಜಿಸ್ಟರ್ ಆಗಿ.
Step 4. ಬಳಿಕ ನೀವು ರಿಲಯನ್ಸ್ ಫೌಂಡೇಶನ್ ಅಧಿಕೃತ ಅರ್ಜಿ ಪುಟಕ್ಕೆ ಮರು ನಿರ್ದೇಶಿಸಲ್ಪಡುತ್ತೀರಿ. (Redirected)
Step 5. ಅರ್ಜಿಯಲ್ಲಿ ಕೇಳಲಾಗಿರುವ ನಿಮ್ಮ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ತುಂಬಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
Step 6. ಆಟಿಟ್ಯೂಡ್ ಟೆಸ್ಟ್ (aptitude test), ಅರ್ಜಿಯ ಭಾಗವಾಗಿ ಆಟಿಟ್ಯೂಡ್ ಟೆಸ್ಟ್ ಬರೆಯುವ ದಿನಾಂಕವನ್ನು ಆಯ್ಕೆ ಮಾಡಿ ಅರ್ಜಿಯನ್ನು ಸಬ್ಮಿಟ್ (submit) ಮಾಡಿ.
Step 7. ನೀವು ಅರ್ಜಿ ಸಲ್ಲಿಸಿದ ನಂತರ ನಿಮ್ಮ ಈಮೇಲ್ ಗೆ ಪರೀಕ್ಷೆಯ ದಿನಾಂಕ, ಸಮಯ ಮತ್ತು ಲಿಂಕ ಬರುತ್ತದೆ. (ಅಂತಿಮ ಪರೀಕ್ಷೆಯ ಒಂದು ವಾರ ಮುಂಚೆ practice test ಬರೆಯಲು ಅವಕಾಶವಿರುತ್ತದೆ.)
ಗಮನಿಸಿ: ಆನ್ಲೈನ್ ಆಪ್ಟಿಟ್ಯೂಡ್ ಟೆಸ್ಟ್ ಪೂರ್ಣಗೊಳಿಸಿದರೆ ಮಾತ್ರ ನಿಮ್ಮ ಅರ್ಜಿಯನ್ನು ಪರಿಗಣಿಸಲಾಗುತ್ತದೆ. ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ.
ಇದನ್ನು ಓದಿ
Reliance Foundation Scholarship 2026-27 : ಈ ಸ್ಕಾಲರ್ಶಿಪ್ ನಿಂದ ಬಡ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನಗಳು.
- ಆರ್ಥಿಕ ನೆರವು – ವಿದ್ಯಾಭ್ಯಾಸದ ಖರ್ಚು ಬರಿಸಲು ವಿದ್ಯಾರ್ಥಿಗಳಿಗೆ ಹಣಕಾಸಿನ ಸಹಾಯ ದೊರೆಯುತ್ತದೆ.
- ಶಿಕ್ಷಣ ಮುಂದುವರಿಸಲು ಸಹಾಯ- ಹಣದ ಕೊರತೆಯಿಂದ ವಿದ್ಯಾಭ್ಯಾಸ ನಿಲ್ಲಿಸುವ ಪರಿಸ್ಥಿತಿ ಕಡಿಮೆಯಾಗುತ್ತದೆ.
- ಕಾಲೇಜು ಶುಲ್ಕ ಪಾವತಿಗೆ ನೆರವು – ಟ್ಯೂಷನ್ ಮತ್ತು ಇತರ ಶೈಕ್ಷಣಿಕ ವೆಚ್ಚಗಳನ್ನು ನಿರ್ವಹಿಸಲು ಸಹಕಾರಿಯಾಗುತ್ತದೆ.
- ಪುಸ್ತಕ ಮತ್ತು ಅಧ್ಯಯನ ಸಾಮಗ್ರಿಗಳಿಗೆ ಸಹಾಯ – ಓದಿಗೆ ಅಗತ್ಯವಾದ ವಸ್ತುಗಳನ್ನು ಪಡೆಯಲು ನೆರವಾಗುತ್ತದೆ.
- ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುತ್ತದೆ – ಪ್ರತಿಭೆಗೆ ದೊರೆಯುವ ಮಾನ್ಯತೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
- ಉನ್ನತ ಶಿಕ್ಷಣಕ್ಕೆ ಅವಕಾಶ – ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೂ ಉತ್ತಮ ಉನ್ನತ ಶಿಕ್ಷಣ ಪಡೆಯಲು ಅವಕಾಶ ಸಿಗುತ್ತದೆ.
- ಕುಟುಂಬದ ಮೇಲಿನ ಆರ್ಥಿಕ ಒತ್ತಡ ಕಡಿಮೆ ಮಾಡುತ್ತದೆ – ಶಿಕ್ಷಣದ ಖರ್ಚಿನ ಒಂದು ಭಾಗವನ್ನು ವಿದ್ಯಾರ್ಥಿವೇತನ ಭರಿಸುವುದರಿಂದ ಕುಟುಂಬಕ್ಕೆ ನೆರವಾಗುತ್ತದೆ.
- ವೃತ್ತಿಜೀವನದ ಬೆಳವಣಿಗೆಗೆ ಸಹಾಯ – ಉತ್ತಮ ಶಿಕ್ಷಣದ ಮೂಲಕ ಭವಿಷ್ಯದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಸಹಕಾರಿಯಾಗುತ್ತದೆ.
- ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ – ಉತ್ತಮ ಅಂಕಗಳು ಮತ್ತು ಪ್ರತಿಭೆಯನ್ನು ಮುಂದುವರಿಸಲು ಪ್ರೇರಣೆ ನೀಡುತ್ತದೆ.
- ಸಮಾಜದ ಅಭಿವೃದ್ಧಿಗೆ ಕೊಡುಗೆ – ಶಿಕ್ಷಣ ಪಡೆದ ವಿದ್ಯಾರ್ಥಿಗಳು ಮುಂದೆ ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ.
ಈ ಸ್ಕಾಲರ್ಶಿಪ್ಗೆ ವಿದ್ಯಾರ್ಥಿಗಳು ಅಂತಿಮ ದಿನದವರೆಗೆ ಕಾಯದೆ ಆದಷ್ಟು ಬೇಗನೆ ಅರ್ಜಿಯನ್ನು ಸಲ್ಲಿಸಿ ಆಪ್ಟಿಟ್ಯೂಡ್ ಟೆಸ್ಟ್ ಬರೆಯುವ ಮೂಲಕ ನಿಮ್ಮ ಸ್ಕಾಲರ್ಶಿಪ್ ಅನ್ನು ಪಡೆದುಕೊಳ್ಳಿ ಟೆಸ್ಟ್ ಬರೆಯುವ ವಿದ್ಯಾರ್ಥಿಗಳಿಗೆ ಆಲ್ ದಿ ಬೆಸ್ಟ್.
ಇದನ್ನು ಓದಿ
3 thoughts on “Reliance Foundation Scholarship 2026-27 : ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿ ವೇತನ. Important update.”