Bangalore Court Recruitment 2026 : ಬೆಂಗಳೂರು ಗ್ರಾಮಾಂತರ ನ್ಯಾಯಾಲಯದಲ್ಲಿ 21 ಸ್ಟೆನೋಗ್ರಾಫರ್ (ಶೀಘ್ರ ಲಿಪಿಗಾರ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ, ವಯೋಮಿತಿ, ವೇತನ ಹಾಗೂ ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ.
ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಯುವ ಜನತೆಗೆ ಇದು ಒಂದು ಅತ್ಯುತ್ತಮ ಅವಕಾಶ. ಬೆಂಗಳೂರು ಗ್ರಾಮಾಂತರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಖಾಲಿ ಇರುವ ಶೀಘ್ರ ಲಿಪಿಗಾರ (ಸ್ಟೆನೋಗ್ರಾಫರ್ ಗ್ರೇಡ್-3) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಬಿದ್ದಿದೆ. ಒಟ್ಟು 21 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪಿಯುಸಿ ಅಥವಾ ಡಿಪ್ಲೋಮೋ ಮುಗಿಸಿ, ಬೆರಳಚ್ಚು ಹಾಗೂ ಶೀಘ್ರ ಲಿಪಿ ಜ್ಞಾನ ಹೊಂದಿರುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ 44 ಸಾವಿರದಿಂದ ಆರಂಭವಾಗಿ 83,000 ವರೆಗೆ ಆಕರ್ಷಕ ವೇತನ ಸಿಗಲಿದೆ. ಆಗಸ್ಟ್ 17 2026 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ಸೆಪ್ಟೆಂಬರ್ 15ರವರೆಗೆ ಕಾಲಾವಕಾಶ ನೀಡಲಾಗಿದೆ.
ಬೆಂಗಳೂರು ಗ್ರಾಮಾಂತರ ನ್ಯಾಯಾಲಯ ನೇಮಕಾತಿ ಅಡಿಯಲ್ಲಿ ಹೊರಡಿಸಲಾಗಿರುವ ಈ ಪ್ರಕಟಣೆಯಲ್ಲಿ 4 ಹಿಂಬಾಕಿ (ಬ್ಯಾಕ್ಲಾಗ್) ಹಾಗೂ 17 ಹೊಸ ಹುದ್ದೆಗಳೆರಡನ್ನು ಸೇರಿಸಲಾಗಿದೆ. ಉದ್ಯೋಗದ ಸ್ಥಳ, ವಯಸ್ಸಿನ ಮಿತಿ, ಆಯ್ಕೆ ಪ್ರಕ್ರಿಯೆ ಸೇರಿದಂತೆ ಅರ್ಜಿ ಸಲ್ಲಿಸಲು ಬೇಕಾದ ಪ್ರತಿಯೊಂದು ನಿಖರ ಮಾಹಿತಿಯನ್ನು ಕೆಳಗೆ ಸರಳವಾಗಿ ವಿವರಿಸಲಾಗಿದೆ.
ಇದನ್ನು ಓದಿ
Bangalore Court Recruitment 2026 : ನೇಮಕಾತಿಯ ಪ್ರಮುಖ ಮುಖ್ಯಾಂಶಗಳು .
- ನೇಮಕಾತಿ ಇಲಾಖೆ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಂಗಳೂರು ಗ್ರಾಮಾಂತರ ಜಿಲ್ಲೆ
- ಹುದ್ದೆಯ ಹೆಸರು : ಶೀಘ್ರ ಲಿಪಿಗಾರ ಗ್ರೇಡ್ 3 (stenographer grade-|||)
- ಒಟ್ಟು ಖಾಲಿ ಹುದ್ದೆಗಳು : 21 (04 ಬ್ಯಾಕ್ಲಾಗ್ ಮತ್ತು 17 ಹೊಸ ಹುದ್ದೆಗಳು)
- ಕೆಲಸದ ಸ್ಥಳ : ಬೆಂಗಳೂರು ಗ್ರಾಮಾಂತರ
- ಅರ್ಜಿ ಸಲ್ಲಿಕೆ ಆರಂಭ ,: 17 ಆಗಸ್ಟ್ 2026
- ಅರ್ಜಿ ಸಲ್ಲಿಕೆಗೆ ಕೊನೆಯ ದಿನ : 15 ಸೆಪ್ಟೆಂಬರ್ 2026
- ಅಧಿಕೃತ ವೆಬ್ಸೈಟ್ : https://bengalururural.dcourts.gov.in/.
Bangalore Court Recruitment 2026 : ಹುದ್ದೆಗಳ ವರ್ಗೀಕರಣದ ವಿವರ
ಒಟ್ಟು 21 ಹುದ್ದೆಗಳನ್ನು ಮೀಸಲಾತಿ ಅನ್ವಯ ವಿಂಗಡಿಸಲಾಗಿದೆ.
ಹಿಂಬಾಕಿ ,(ಬ್ಯಾಕ್ ಲಾಗ್) 4 ಹುದ್ದೆಗಳು : ಇದರಲ್ಲಿ ಪರಿಶಿಷ್ಟ ಜಾತಿಗೆ 2 ಹುದ್ದೆ ಹಾಗೂ ಪ್ರವರ್ಗ -1 ಮತ್ತು ಪ್ರವರ್ಗ-2A ಗೆ ತಲಾ 1 ಹುದ್ದೆ ಮೀಸಲಿಡಲಾಗಿದೆ.
ಹೊಸ 17 ಹುದ್ದೆಗಳು : ಸಾಮಾನ್ಯ ಅರ್ಹತೆಗೆ ಅತಿ ಹೆಚ್ಚು ಅಂದರೆ 08 ಹುದ್ದೆಗಳಿವೆ. ಪರಿಶಿಷ್ಟ ಜಾತಿಗೆ 3 , ಪರಿಶಿಷ್ಟ ಪಂಗಡ 1 , ಪ್ರವರ್ಗ-1 ಕೆ 1, ಪ್ರವರ್ಗ-2A 2 , ಪ್ರವರ್ಗ-2B 1 ಹಾಗೂ ಪ್ರವರ್ಗ-3B ಗೆ 1 ಹುದ್ದೆಗಳನ್ನು ನಿಗದಿಪಡಿಸಲಾಗಿದೆ.
ಮಹಿಳೆ, ಗ್ರಾಮೀಣ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೂ ನಿಯಮಾನುಸಾರ ಒಳ ಮೀಸಲಾತಿ ಇರಲಿದೆ.
Bangalore Court Recruitment 2026 : ಅಗತ್ಯವಿರುವ ಶೈಕ್ಷಣಿಕ ಅರ್ಹತೆಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ದ್ವಿತೀಯ ಪಿಯುಸಿ ಅಥವಾ 3 ವರ್ಷಗಳ ಕಮರ್ಷಿಯಲ್ ಪ್ರಾಕ್ಟೀಸ್ ಡಿಪ್ಲೋಮೋ ಪೂರೈಸಿರಬೇಕು.
ಇದರೊಂದಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಹಿರಿಯ ಶ್ರೇಣಿ ಬೆರಳಚ್ಚು (ಟೈಪಿಂಗ್) ಹಾಗೂ ಶೀಘ್ರ ಲಿಪಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು.
ಕಚೇರಿಯ ದೈನಂದಿನ ಕೆಲಸಗಳಿಗೆ ಬೇಕಾಗುವಷ್ಟು ಕಂಪ್ಯೂಟರ್ ಜ್ಞಾನವನ್ನು ಅಭ್ಯರ್ಥಿಗಳು ಹೊಂದಿರಬೇಕಾಗುತ್ತದೆ.
ಇದನ್ನು ಓದಿ
Bangalore Court Recruitment 2026 : ವಯೋಮಿತಿ ಸಡಿಲಿಕೆ ಮತ್ತು ನಿಯಮಗಳು
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಸರ್ಕಾರದ ವಿಶೇಷ ಆದೇಶದ ಅನ್ವಯ ಈ ಬಾರಿ ಐದು ವರ್ಷಗಳ ಹೆಚ್ಚುವರಿ ಸಡಿಲಿಕೆ ನೀಡಲಾಗಿದೆ.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳವರೆಗೆ ಅವಕಾಶವಿದೆ.
- ಪ್ರವರ್ಗ -2A,2B,3A,3B ಅಭ್ಯರ್ಥಿಗಳಿಗೆ 43 ವರ್ಷ.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ -1 ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷ ನಿಗದಿಪಡಿಸಲಾಗಿದೆ.
- ವಿಧವೆಯರು, ಮಾಜಿ ಸೈನಿಕರು ಹಾಗೂ ಅಂಗವಿಕಲರಿಗೆ ಸರ್ಕಾರಿ ನಿಯಮದಂತೆ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.
Bangalore Court Recruitment 2026 :ವೇತನ ಶ್ರೇಣಿ
ಬೆಂಗಳೂರು ಗ್ರಾಮಾಂತರ ನ್ಯಾಯಾಲಯ ನೇಮಕಾತಿ ಮೂಲಕ ಆಯ್ಕೆಯಾಗುವ ಸ್ಟೆನೋಗ್ರಾಫರ್ ಗಳಿಗೆ ಪ್ರತಿ ತಿಂಗಳು 44,425 ರೂ ರಿಂದ 83,700 ವರೆಗೆ ವೇತನ ಶ್ರೇಣಿ ಇರಲಿದೆ. ಇದರ ಜೊತೆಗೆ ಸರ್ಕಾರಿ ನೌಕರರಿಗೆ ಸಿಗುವ ತುಟ್ಟಿ ಭತ್ಯೆ ಸೇರಿದಂತೆ ಇತರೆ ಸೌಲಭ್ಯಗಳು ಸಹ ಲಭ್ಯವಾಗಲಿದೆ.
Bangalore Court Recruitment 2026: ಅರ್ಜಿ ಶುಲ್ಕ ಎಷ್ಟು ?
ಸಾಮಾನ್ಯ ವರ್ಗದ ಅಭ್ಯರ್ಥಿಗಳು 200 ರೂಪಾಯಿ ಅರ್ಜಿ ಶುಲ್ಕ ಪಾವತಿಸಬೇಕು. ಹಿಂದುಳಿದ ವರ್ಗಗಳಾದ 2A,2B,3A,3B ವರ್ಗದವರಿಗೆ 100 ರೂಪಾಯಿ ಶುಲ್ಕವಿದೆ.
ಆದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.
ಈ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಕಲೆಕ್ಟ್ ಲಿಂಕ್ ಮೂಲಕ ಆನ್ಲೈನ್ನಲ್ಲಿ ಮಾತ್ರ ಕಟ್ಟಬೇಕು.
ಇದನ್ನು ಓದಿ
Bangalore Court Recruitment 2026 : ಆಯ್ಕೆ ಪ್ರಕ್ರಿಯೆ ಹೇಗೆ ನಡೆಯಲಿದೆ?
- ಅಭ್ಯರ್ಥಿಗಳನ್ನು ಕೇವಲ ಕೌಶಲ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
- ಮೊದಲಿಗೆ ಕೌಶಲ ಪರೀಕ್ಷೆ ನಡೆಯಲಿದ್ದು, ನಿಮಿಷಕ್ಕೆ 120 ಪದಗಳ ವೇಗದಲ್ಲಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ತಲಾ ಐದು ನಿಮಿಷಗಳ ಉಕ್ತಲೇಖನ (ಡಿಕ್ಟೇಶನ್) ನೀಡಲಾಗುತ್ತದೆ. ಇದನ್ನು 45 ನಿಮಿಷಗಳಲ್ಲಿ ಕಂಪ್ಯೂಟರ್ನಲ್ಲಿ ಬೆರಳಚ್ಚು ಮಾಡಬೇಕು.
- ಕನ್ನಡ ಹಾಗೂ ಇಂಗ್ಲಿಷ್ ಎರಡು ಪರೀಕ್ಷೆಗಳಿಗೂ ತಲಾ 100 ಅಂಕಗಳಿರುತ್ತವೆ. ಇದರಲ್ಲಿ ಕನಿಷ್ಠ 50 ಅಂಕ ಪಡೆದರೆ ಅಷ್ಟೇ ಅಭ್ಯರ್ಥಿಗಳು ಅರ್ಹತೆ ಪಡೆಯುತ್ತಾರೆ.
- ಅಂತಿಮವಾಗಿ ಕೌಶಲ ಪರೀಕ್ಷೆಯಲ್ಲಿ ಗಳಿಸಿದ ಅಂಕ ಹಾಗೂ ಮೀಸಲಾತಿ ಆಧಾರದ ಮೇಲೆ ಒಂದು ಹುದ್ದೆಗೆ ಐದು ಜನರಂತೆ (1:5) ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ.
Bangalore Court Recruitment 2026 : ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಸರಳ ವಿಧಾನ.
- ಮೊದಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯದ ಮೇಲೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಅಲ್ಲಿರುವ ಸ್ಟೆನೋಗ್ರಾಫರ್ ನೇಮಕಾತಿ 2026ರ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಪರದೆಯ ಮೇಲೆ ಕಾಣುವ ಅರ್ಜಿ ನಮೂನೆಯಲ್ಲಿ ನಿಮ್ಮ ಹೆಸರು, ವಿಳಾಸ, ಶೈಕ್ಷಣಿಕ ಅಂಕಗಳು ಹಾಗೂ ಮೀಸಲಾತಿ ವಿವರಗಳನ್ನು ತಪ್ಪಿಲ್ಲದೆ ಭರ್ತಿ ಮಾಡಿ.
- ಸೂಚಿಸಿದ ಅಳತೆಯಲ್ಲಿ ನಿಮ್ಮ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ವಿವರಗಳನ್ನು ಒಮ್ಮೆ ಖಚಿತಪಡಿಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಿ.
- ಅಂತಿಮವಾಗಿ ಭರ್ತಿ ಮಾಡಿದ ಅರ್ಜಿಯನ್ನು ಮುಂದಿನ ರೆಫರೆನ್ಸ್ ಗಾಗಿ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.
ಬೆಂಗಳೂರು ಗ್ರಾಮಾಂತರ ನ್ಯಾಯಾಲಯ ನೇಮಕಾತಿ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿ ನಡೆಯಲಿದ್ದು, ಅರ್ಹತೆ ಮತ್ತು ಕೌಶಲದ ಆಧಾರದ ಮೇಲೆ ಮಾತ್ರ ಅಭ್ಯರ್ಥಿಗಳಿಗೆ ಕೆಲಸ ಒಲಿಯಲಿದೆ. ಟೈಪಿಂಗ್ ಹಾಗೂ ಶಾರ್ಟ್ ಹ್ಯಾಂಡ್ ಕಲಿತಿರುವ ಗ್ರಾಮೀಣ ಹಾಗೂ ನಗರ ಪ್ರದೇಶದ ಯುವಜನತೆಗೆ ಇದೊಂದು ಭರವಸೆಯ ಅವಕಾಶವಾಗಿದೆ.
ಉತ್ತಮ ವೇತನದ ಜೊತೆಗೆ ಕೆಲಸದ ಭದ್ರತೆ ಒದಗಿಸುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ. ಕೌಶಲ ಪರೀಕ್ಷೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದರೆ ಯಶಸ್ಸು ಕಂಡಿತ.
Bangalore Court Recruitment 2026 : ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನೀಡುವ ಸಲಹೆ
- ನೇಮಕಾತಿ ಆದೇಶವನ್ನು ಸಂಪೂರ್ಣವಾಗಿ ಓದಿ – ವರದಿ ಮಾಡುವ ದಿನಾಂಕ, ಸ್ಥಳ, ಅಗತ್ಯ ದಾಖಲೆಗಳು ಹಾಗೂ ಇತರೆ ಷರತ್ತುಗಳನ್ನು ಸರಿಯಾಗಿ ಪರಿಶೀಲಿಸಿ.
- ಮೂಲ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ – ವಿದ್ಯಾರ್ಹತೆ, ವಯಸ್ಸು, ಜಾತಿ ಮತ್ತು ಆದಾಯ ಗುರುತಿನ ಚೀಟಿ, ನೇಮಕಾತಿಗೆ ಸಂಬಂಧಿಸಿದ ದಾಖಲೆಗಳನ್ನು ಮೂಲ ಮತ್ತು ಅಗತ್ಯ ಪ್ರತಿಗಳೊಂದಿಗೆ ತೆಗೆದುಕೊಂಡು ಹೋಗಿ.
- ಸ್ಟೆನೋಗ್ರಾಫಿ ಕೌಶಲ್ಯವನ್ನು ನಿರಂತರವಾಗಿ ಅಭ್ಯಾಸ ಮಾಡಿ – ಕನ್ನಡ ಮತ್ತು ಇಂಗ್ಲಿಷ್ ಶಾರ್ಟ್ ಹ್ಯಾಂಡ್, ಡಿಕ್ಟೇಶನ್ ಮತ್ತು ಟೈಪಿಂಗ್ ನಲ್ಲಿ ವೇಗಕ್ಕಿಂತ ನಿಖರತೆಗೆ ಹೆಚ್ಚಿನ ಆದ್ಯತೆ ನೀಡಿ.
- ಕೋರ್ಟ್ ಕಾರ್ಯವಿಧಾನವನ್ನು ತಿಳಿದುಕೊಳ್ಳಿ – ನ್ಯಾಯಾಲಯದ ದಾಖಲೆಗಳ ಗೌಪ್ಯತೆ, ಕಡತ, ನಿರ್ವಹಣೆ, ಆದೇಶ ಹಾಗೂ ತೀರ್ಪುಗಳ ಟೈಪಿಂಗ್ ಮತ್ತು ಕಚೇರಿ ಶಿಸ್ತು ಕುರಿತು ಹಿರಿಯರಿಂದ ಕಲಿಯಿರಿ.
- ಸಮಯ ಪಾಲನೆ ಕಾಪಾಡಿಕೊಳ್ಳಿ – ನ್ಯಾಯಾಲಯದ ಕೆಲಸದಲ್ಲಿ ಸಮಯಕ್ಕೆ ಹಾಜರಾಗುವುದು ಮತ್ತು ನೀಡಿದ ಕೆಲಸವನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವುದು ಅತ್ಯಂತ ಮುಖ್ಯ.
- ಗೌಪ್ಯತೆಯನ್ನು ಕಾಪಾಡಿ – ಪ್ರಕರಣಗಳಿಗೆ ಸಂಬಂಧಿಸಿದ ದಾಖಲೆಗಳು, ಆದೇಶಗಳು ಮತ್ತು ವೈಯಕ್ತಿಕ ಮಾಹಿತಿಯನ್ನು ಹೊರಗಿನವರಿಗೆ ಹಂಚಿಕೊಳ್ಳಬಾರದು.
- ಹಿರಿಯ ಸಿಬ್ಬಂದಿಯ ಮಾರ್ಗದರ್ಶನ ಪಡೆಯಿರಿ – ಆರಂಭದ ದಿನಗಳಲ್ಲಿ ಸಂದೇಹಗಳನ್ನು ಕೇಳಿ, ಕಚೇರಿಯ ಪ್ರಕ್ರಿಯೆಗಳನ್ನು ಗಮನಿಸಿ ಕಲಿಯುವುದು ಉತ್ತಮ.
- ಕನ್ನಡ ಮತ್ತು ಇಂಗ್ಲಿಷ್ ಭಾಷಾಜ್ಞಾನವನ್ನು ಸುಧಾರಿಸಿಕೊಳ್ಳಿ – ಕೋರ್ಟ್ ನಲ್ಲಿ ಬಳಸುವ ಕಾನೂನು ಪದಗಳು ಹಾಗೂ ಅಧಿಕೃತ ಬರವಣಿಗೆಯ ಪರಿಚಯ ಕೆಲಸಕ್ಕೆ ಬಹಳ ಸಹಾಯಕ.
- ಕಂಪ್ಯೂಟರ್ ಕೌಶಲ್ಯ ಬೆಳೆಸಿಕೊಳ್ಳಿ – MS word , ಕನ್ನಡ ಟೈಪಿಂಗ್, ಫೈಲ್ ನಿರ್ವಹಣೆ ಮತ್ತು ಅಧಿಕೃತ ಇ-ಆಫೀಸ್ ವ್ಯವಸ್ಥೆಗಳ ಬಗ್ಗೆ ತಿಳಿದುಕೊಳ್ಳಿ.
- ವೃತ್ತಿಪರ ನಡವಳಿಕೆ ಕಾಪಾಡಿಕೊಳ್ಳಿ- ನ್ಯಾಯಾಲಯದ ಗೌರವ, ಅಧಿಕಾರಿಗಳೊಂದಿಗೆ ಗೌರವಯುತ ವರ್ತನೆ ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯ ಮುಖ್ಯ.
ಆಯ್ಕೆಯಾದ ನಂತರ ಮೊದಲ ಕೆಲವು ತಿಂಗಳುಗಳನ್ನು ಕಲಿಕೆಯ ಅವಧಿ ಎಂದು ಪರಿಗಣಿಸಿ. ವೇಗವಾಗಿ ಕೆಲಸ ಮಾಡುವುದಕ್ಕಿಂತ ತಪ್ಪಿಲ್ಲದೆ, ಗೌಪ್ಯತೆಯಿಂದ ಮತ್ತು ಸಮಯಕ್ಕೆ ಸರಿಯಾಗಿ ಕೆಲಸ ಮಾಡುವ ಅಭ್ಯಾಸ ಬೆಳೆಸಿಕೊಂಡರೆ ಉತ್ತಮ ಸ್ಟೆನೋಗ್ರಾಫರ್ ಆಗಬಹುದು.
ಇದನ್ನು ಓದಿ
KAS ನೇಮಕಾತಿ 2026 : 319 ಗ್ರೂಪ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.