KSRLPS Recruitment 2026 : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರವರ್ತನ ಸಂಘದಲ್ಲಿ (KSRLPS )14 ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ. ಯಾವುದೇ ಶುಲ್ಕವಿಲ್ಲ, ನೇರ ಸಂದರ್ಶನ. ಈಗಲೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿರುವ ಕನ್ನಡಿಗರಿಗೆ ಇಲ್ಲೊಂದು ಅದ್ಭುತ ಅವಕಾಶ ಒದಗಿ ಬಂದಿದೆ. ಕರ್ನಾಟಕ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಬರುವ ‘ಸಂಜೀವಿನಿ’ ಯೋಜನೆಯಡಿ ಹೊಸ ಉದ್ಯೋಗ ಪ್ರಕಟಣೆ ಹೊರ ಬಿದ್ದಿದೆ.
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರವರ್ತನ ಸಂಘವು (KSRLPS ನೇಮಕಾತಿ 2026) ಬ್ಲಾಕ್ ಮ್ಯಾನೇಜರ್ ಸೇರಿದಂತೆ ಒಟ್ಟು 14 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಯಾವುದೇ ಲಿಖಿತ ಪರೀಕ್ಷೆ ಇಲ್ಲ, ಕೇವಲ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎನ್ನುವುದು ವಿಶೇಷ.
ದಕ್ಷಿಣ ಕನ್ನಡ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಕೆಲಸ ಮಾಡಲು ಇಚ್ಚಿಸುವವರಿಗೆ ಇದೊಂದು ಸುವರ್ಣ ಅವಕಾಶ. ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೆಯ ದಿನಾಂಕವಾಗಿದ್ದು, ಅರ್ಜಿ ಶುಲ್ಕ ಸಂಪೂರ್ಣ ಉಚಿತವಾಗಿದೆ. ಈ ನೇಮಕಾತಿಯ ಕುರಿತಾದ ಪ್ರಮುಖ ಮಾಹಿತಿಗಳನ್ನು ಇಲ್ಲಿ ಸರಳವಾಗಿ ವಿವರಿಸಲಾಗಿದೆ.
KSRLPS Recruitment 2026 : KSRLPS ನೇಮಕಾತಿಯ ಮುಖ್ಯಾಂಶಗಳು.
- ಸಂಸ್ಥೆ ಹೆಸರು : ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರವರ್ತನ ಸಂಘ (KSRLPS)
- ಒಟ್ಟು ಹುದ್ದೆಗಳು: 14 ಹುದ್ದೆಗಳು
- ಉದ್ಯೋಗದ ಸ್ಥಳ: ದಕ್ಷಿಣ ಕನ್ನಡ, ಕಲಬುರಗಿ (ಕರ್ನಾಟಕ).
- ಆರಂಭಿಕ ವೇತನ : 18,000 ದಿಂದ 28,000 ವರೆಗೆ (ತಿಂಗಳಿಗೆ)
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ : ಆಗಸ್ಟ್ 1 .2026
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 15 ಆಗಸ್ಟ್ 2026
- ಅಧಿಕೃತ ವೆಬ್ಸೈಟ್ : https://ksrlps.karnataka.gov.in/
KSRLPS Recruitment 2026 : ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆ.
ಒಟ್ಟು 14 ಹುದ್ದೆಗಳನ್ನು ವಿವಿಧ ವಿಭಾಗಗಳಲ್ಲಿ ಭರ್ತಿ ಮಾಡಲಾಗುತ್ತಿದೆ. ಹುದ್ದೆವಾರು ವಿದ್ಯಾರ್ಹತೆ ಈ ಕೆಳಗಿನಂತಿದೆ.
1. ಬ್ಲಾಕ್ ಮ್ಯಾನೇಜರ್
- ಖಾಲಿ ಇರುವ ಹುದ್ದೆಗಳು : 08
- ವಿದ್ಯಾರ್ಹತೆ : ಬಿ ಎಸ್ಸಿ (B.sc), ಎಂ ಎಸ್ ಸಿ (M.sc) ಅಥವಾ ಯಾವುದೇ ಸ್ನಾತಕೋತ್ತರ ಪದವಿ ಪೂರೈಸಿರಬೇಕು.
2. ಕ್ಲಸ್ಟರ್ ಮೇಲ್ವಿಚಾರಕರು
- ಖಾಲಿ ಇರುವ ಹುದ್ದೆಗಳು : 03
- ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಮುಗಿಸಿರಬೇಕು.
3. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು
- ಖಾಲಿ ಇರುವ ಹುದ್ದೆಗಳು : 01
- ವಿದ್ಯಾರ್ಹತೆ : ಯಾವುದೇ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೋಮಾ ಹೊಂದಿರಬೇಕು.
4. ಬ್ಲಾಕ್ ಕಾರ್ಯಕ್ರಮ ಅಧಿಕಾರಿ
- ಖಾಲಿ ಇರುವ ಹುದ್ದೆಗಳು : 02
- ವಿದ್ಯಾರ್ಹತೆ : ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರಬೇಕು.
ಇದನ್ನು ಓದಿ
KSRLPS Recruitment 2026 : ವೇತನ ಶ್ರೇಣಿ
1. ಬ್ಲಾಕ್ ಮ್ಯಾನೇಜರ್ : ₹25,000
2. ಕ್ಲಸ್ಟರ್ ಮೇಲ್ವಿಚಾರಕರು : ₹18,000
3. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು : ಸರ್ಕಾರದ ನಿಯಮಗಳ ಅನ್ವಯ ನಿಗದಿಪಡಿಸಲಾಗುತ್ತದೆ .
4. ಬ್ಲಾಕ್ ಕಾರ್ಯಕ್ರಮ ಅಧಿಕಾರಿ: ₹28,000
KSRLPS Recruitment 2026 : ವಯೋಮಿತಿ, ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆ
ವಯೋಮಿತಿ :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಹಾಗೆಯೇ ಕನಿಷ್ಠ 45 ವರ್ಷ ಮೀರಿರಬಾರದು. ಸರ್ಕಾರದ ನಿಯಮ ಅನುಸಾರ ಮೀಸಲಾತಿ ಕೂರುವ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ವಿಧಿಸಿಲ್ಲ. 100% ಉಚಿತವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆಯ್ಕೆ ಪ್ರಕ್ರಿಯೆ
ಇಲ್ಲಿ ಯಾವುದೇ ರೀತಿಯ ಲಿಖಿತ ಪರೀಕ್ಷೆ ನಡೆಯುವುದಿಲ್ಲ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲಿಸಿ, ನೇರ ಸಂದರ್ಶನಕ್ಕೆ ಕರೆಯಲಾಗುತ್ತದೆ. ಕೇವಲ ಸಂದರ್ಶನದ ಆಧಾರದ ಮೇಲೆ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಇದನ್ನು ಓದಿ
KSRLPS Recruitment 2026 : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ?
ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್ಲೈನ್ ಮೂಲಕ ಮಾತ್ರ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಸರಳ ಹಂತಗಳು ಇಲ್ಲಿವೆ.
- ಮೊದಲಿಗೆ KSRLPS ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಮುಖಪುಟದಲ್ಲಿರುವ ನೇಮಕಾತಿ ಅಧಿಸೂಚನೆ ಲಿಂಕ್ ಡೌನ್ಲೋಡ್ ಮಾಡಿಕೊಂಡು ಸ್ಪಷ್ಟವಾಗಿ ಓದಿ.
- ಆನ್ಲೈನ್ ಅರ್ಜಿ ತುಂಬುವ ಮುನ್ನ ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಹಾಗೂ ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
- ಆಧಾರ್ ಕಾರ್ಡ್, ಶೈಕ್ಷಣಿಕ ಅಂಕಪಟ್ಟಿಗಳು, ಜನ್ಮ ದಿನಾಂಕದ ಪ್ರಮಾಣ ಪತ್ರ ಹಾಗೂ ಅನುಭವವಿದ್ದರೆ ಆ ಪ್ರಮಾಣಪತ್ರ ದ ಸ್ಕ್ಯಾನ್ ಕಾಪಿ ನಿಮ್ಮ ಬಳಿ ಇರಲಿ.
- ವೆಬ್ಸಟ್ ನಲ್ಲಿರುವ ಅಪ್ಲೈ ಆನ್ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಕೇಳಲಾದ ಎಲ್ಲಾ ನಿಖರ ಮಾಹಿತಿಗಳನ್ನು ಭರ್ತಿ ಮಾಡಿ, ನಿಮ್ಮ ಇತ್ತೀಚಿನ ಫೋಟೋ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ.
- ಕೊನೆಯದಾಗಿ ಒಮ್ಮೆ ಪರಿಶೀಲಿಸಿ ಅರ್ಜಿಯನ್ನು ಸಬ್ಮಿಟ್ ಮಾಡಿ. ಮುಂದಿನ ರೆಫರೆನ್ಸ್ ಗಾಗಿ ಅರ್ಜಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಿ ಅಥವಾ ಪ್ರಿಂಟ್ ಔಟ್ ತೆಗೆದುಕೊಳ್ಳಿ.
- ಗಮನಿಸಿ : ಬ್ಲಾಕ್ ಮ್ಯಾನೇಜರ್ ಹುದ್ದೆಗಳಿಗೆ ಕೆಲವು ಕಡೆ ಆಗಸ್ಟ್ 12 ಕೊನೆಯ ದಿನಾಂಕವಾಗಿದೆ. ಉಳಿದ ಹುದ್ದೆಗಳಿಗೆ ಆಗಸ್ಟ್ 15 ಕಡೆಯ ದಿನ. ಹೀಗಾಗಿ ಅಧಿಸೂಚನೆಯನ್ನು ಒಮ್ಮೆ ತಪ್ಪದೆ ಪರಿಶೀಲಿಸಿ.
KSRLPS Recruitment 2026 : ಗಮನಿಸಿ
ಯಾವುದೇ ಪರೀಕ್ಷೆ ಇಲ್ಲದೆ, ಉಚಿತವಾಗಿ ಅರ್ಜಿ ಸಲ್ಲಿಸಿ ಸರ್ಕಾರಿ ಕೆಲಸ ಪಡೆಯುವ ಇಂತಹ ಅವಕಾಶಗಳು ಬರುವುದು ಬಹಳ ಅಪರೂಪ. ಗ್ರಾಮೀಣ ಅಭಿವೃದ್ಧಿ ಇಲಾಖೆಯಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಬಯಸುವ ಯುವಕ ಯುವತಿಯರಿಗೆ ಇದು ನಿಜಕ್ಕೂ ಒಂದು ಒಳ್ಳೆಯ ವೇದಿಕೆಯಾಗಿದೆ.
ನಿಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕಂತಹ ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಕೊನೆಯ ದಿನಾಂಕದವರೆಗೆ ಕಾಯದೆ ತಕ್ಷಣ ಅರ್ಜಿ ಸಲ್ಲಿಸಿ. ಹಾಗೆಯೇ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಗುಂಪುಗಳಲ್ಲಿ ಈ ಉಪಯುಕ್ತ ಮಾಹಿತಿಯನ್ನು ಶೇರ್ ಮಾಡಿ ಇದು ಕೆಲಸದ ನಿರೀಕ್ಷೆಯಲ್ಲಿರುವ ಹಲವರಿಗೆ ಖಂಡಿತ ಸಹಾಯವಾಗುತ್ತದೆ.
ಇದನ್ನು ಓದಿ
KAS ನೇಮಕಾತಿ 2026 : 319 ಗ್ರೂಪ್ A ಮತ್ತು B ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.
KSRLPS Recruitment 2026 : ಹುದ್ದೆ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಸಲಹೆಗಳು
1. ಹುದ್ದೆಯ ಜವಾಬ್ದಾರಿ ಮೊದಲು ಅರ್ಥ ಮಾಡಿಕೊಳ್ಳಿ.
- ಕೇವಲ ಸಂಬಳ ಅಥವಾ ಹುದ್ದೆಯ ಹೆಸರನ್ನು ನೋಡಿ ಆಯ್ಕೆ ಮಾಡಬೇಡಿ.
- ನಿಮ್ಮ ಹುದ್ದೆಯಲ್ಲಿ ಯಾವ ಕೆಲಸ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ
2. ಫೀಲ್ಡ್ ವರ್ಕ್ ಗೆ ಸಿದ್ದರಾಗಿರಿ
- KSRLPS ಕೆಲಸದಲ್ಲಿ ಗ್ರಾಮಗಳು, SHG ಗಳು ಮತ್ತು ಗ್ರಾಮೀಣ ಕುಟುಂಬಗಳೊಂದಿಗೆ ನೇರವಾಗಿ ಕೆಲಸ ಮಾಡುವ ಸಂದರ್ಭ ಬರುತ್ತದೆ.
- ಜನರೊಂದಿಗೆ ಉತ್ತಮವಾಗಿ ಮಾತನಾಡುವ ಮತ್ತು ಸಮಸ್ಯೆಗಳನ್ನು ಆಲಿಸುವ ಗುಣ ಬೆಳೆಸಿಕೊಳ್ಳಿ.
3. Communication skill ಬೆಳೆಸಿಕೊಳ್ಳಿ
- ಕನ್ನಡದಲ್ಲಿ ಸ್ಪಷ್ಟವಾಗಿ ಮಾತನಾಡುವುದು ಮುಖ್ಯ.
- ಅಗತ್ಯವಿದ್ದರೆ ಇಂಗ್ಲಿಷ್ ಕಮ್ಯುನಿಕೇಶನ್ ಕೂಡ ಸುಧಾರಿಸಿಕೊಳ್ಳಿ.
4. Computer knowledge ಬಳಸಿಕೊಳ್ಳಿ.
- Ms word , excel, power point, email, online reporting ಬಗ್ಗೆ ತಿಳುವಳಿಕೆ ಇರಲಿ.
- ವಿಶೇಷವಾಗಿ Deo /MIS ಹುದ್ದೆಗಳಿಗೆ ಇದು ಬಹಳ ಮುಖ್ಯ.
5. Documentation and reporting ಕಲಿಯಿರಿ
- Meeting report, field visit report, data and progress report ಸರಿಯಾಗಿ ತಯಾರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ.
ಈ ಹುದ್ದೆಗಳ ಬಗ್ಗೆ ಅಂತರ್ಜಾಲಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯುವ ಮೂಲಕ ಈ ಹುದ್ದೆಗಳ ಕಾರ್ಯವೈಖರಿಯನ್ನು ತಿಳಿದುಕೊಳ್ಳಿ.
ಇದನ್ನು ಓದಿ