Indian Army TES 57 Recruitment : ಪರೀಕ್ಷೆ ಇಲ್ಲದೆ ಭಾರತೀಯ ಸೇನೆಯಲ್ಲಿ ಆಫೀಸರ್ ಆಗಬೇಕೆ? Indian Army 10+2 TES 57 ನೋಟಿಫಿಕೇಶನ್ ಬಿಡುಗಡೆಯಾಗಿದೆ. ಅರ್ಹತೆ, ಸಂಬಳ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ.
ನೀವು ದ್ವಿತೀಯ ಪಿಯುಸಿ ಮುಗಿಸಿದ್ದೀರಾ? ಭಾರತೀಯ ಭೂಸೇನೆಯಲ್ಲಿ (Indian Army) ಒಬ್ಬ ಪ್ರತಿಷ್ಠಿತ ಅಧಿಕಾರಿ (Class -1 Officer) ಹಾಗೂ ಇಂಜಿನಿಯರ್ ಆಗಿ ದೇಶ ಸೇವೆ ಮಾಡುವ ಕನಸು ನಿಮಗಿದೆಯೇ? ಹಾಗಿದ್ದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲದೆ ನೇರವಾಗಿ ಭಾರತೀಯ ಸೇನೆಗೆ ಸೇರಲು ಇರುವ ಅತ್ಯುತ್ತಮ ಅವಕಾಶವೇ 10+2 ಟೆಕ್ನಿಕಲ್ ಎಂಟ್ರಿ ಸ್ಕೀಮ್ (TES).
ಪ್ರಸ್ತುತ Indian Army TES -57 ಕೋರ್ಸಿನ ಅಧಿಕೃತ ನೋಟಿಫಿಕೇಶನ್ ಬಿಡುಗಡೆಯಾಗಿದೆ. ಈ ಲೇಖನದಲ್ಲಿ TES ಅಪ್ಲಿಕೇಶನ್ ದಿನಾಂಕ, ಶೈಕ್ಷಣಿಕ ಅರ್ಹತೆ, ವಯೋಮಿತಿ, ದೈಹಿಕ ಮಾನದಂಡಗಳು, ಮತ್ತು 5 ದಿನಗಳ SSB ಸಂದರ್ಶನ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಸುಲಭ ಕನ್ನಡದಲ್ಲಿ ನೀಡಲಾಗಿದೆ.
Indian Army 10+2 TES ಎಂದರೇನು?
Technical Entry Scheme (TES) ಎನ್ನುವುದು ಭಾರತೀಯ ಭೂಸೇನೆಯು ಪ್ರತಿ ವರ್ಷ ಎರಡು ಬಾರಿ ನಡೆಸುವ ವಿಶೇಷ ನೇಮಕಾತಿ ಪ್ರಕ್ರಿಯೆಯಾಗಿದೆ. ಪಿಯುಸಿ ವಿಜ್ಞಾನ (PCM) ವಿಭಾಗದಲ್ಲಿ ತೇರ್ಗಡೆಯಾದ ಅವಿವಾಹಿತ ಪುರುಷ ಅಭ್ಯರ್ಥಿಗಳಿಗೆ ಯಾವುದೇ ಲಿಖಿತ ಪರೀಕ್ಷೆ (Written Exam) ಇಲ್ಲದೆ ನೇರವಾಗಿ ಲೆಫ್ಟಿನೆಂಟ್ (Lieutenant) ಹುದ್ದೆ ಪಡೆಯಲು ಇದು ಅವಕಾಶ ಕಲ್ಪಿಸುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಸರ್ಕಾರವೇ ಉಚಿತವಾಗಿ ಬಿ. ಟೆಕ್ (B.Tech) ಇಂಜಿನಿಯರಿಂಗ್ ಪದವಿ ಮತ್ತು ಮಿಲಿಟರಿ ತರಬೇತಿಯನ್ನು ನೀಡುತ್ತದೆ.
Indian Army TES 57 Recruitment : ಪ್ರಮುಖ ದಿನಾಂಕಗಳು
- ಅಧಿಕೃತ ನೋಟಿಫಿಕೇಶನ್ ಬಿಡುಗಡೆಯಾದ ದಿನಾಂಕ : ಅಕ್ಟೋಬರ್ 2026
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14 ಅಕ್ಟೋಬರ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 12 ನವಂಬರ್ 2026
- ಕೋರ್ಸ್ ಆರಂಭವಾಗುವ ತಿಂಗಳು : ಜುಲೈ 2027
ಅರ್ಹತಾ ಮಾನದಂಡಗಳು (Eligibility Criteria)
Indian Army TES 57 Recruitment ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಕಟ್ಟುನಿಟ್ಟಾದ ಅರ್ಹತೆಗಳನ್ನು ಹೊಂದಿರಬೇಕು.
1. ಶೈಕ್ಷಣಿಕ ಅರ್ಹತೆ (Educational Qualification)
- ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 12ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಪಾಸ್ ಆಗಿರಬೇಕು.
- ಪಿಯುಸಿಯಲ್ಲಿ ಭೌತಶಾಸ್ತ್ರ (Physics), ರಸಾಯನಶಾಸ್ತ್ರ (Chemistry) , ಮತ್ತು ಗಣಿತ (Mathematics) ವಿಷಯಗಳಲ್ಲಿ ಒಟ್ಟಾರೆಯಾಗಿ ಕನಿಷ್ಠ 60% ಅಂಕಗಳನ್ನು (Aggregate) ಪಡೆದಿರಬೇಕು.
- ಕಡ್ಡಾಯ ನಿಯಮ : ಅಭ್ಯರ್ಥಿಯು ಕಡ್ಡಾಯವಾಗಿ ಆಯಾ ವರ್ಷದ JEE (Main) ಪರೀಕ್ಷೆಗೆ ಹಾಜರಾಗಿರಬೇಕು.
2. ವಯೋಮಿತಿ (Age Limit)
- ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಯ ವಯಸ್ಸು ಕನಿಷ್ಠ 16.5 ವರ್ಷ ತುಂಬಿರಬೇಕು ಮತ್ತು 19.5 ವರ್ಷ ಮೀರಿರಬಾರದು.
- (ಗಮನಿಸಿ: ಕೋರ್ಸ್ ಆರಂಭವಾಗುವ ಜುಲೈ 1,2027ರ ಅನ್ವಯ ವಯಸ್ಸನ್ನು ಲೆಕ್ಕ ಹಾಕಲಾಗುತ್ತದೆ)
3. ಲಿಂಗ ಮತ್ತು ವೈವಾಹಿಕ ಸ್ಥಿತಿ
- ಕೇವಲ ಅವಿವಾಹಿತ ಪುರುಷ (Unmarried Male) ಅಭ್ಯರ್ಥಿಗಳಿಗೆ ಮಾತ್ರ ಈ ಕೋರ್ಸ್ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ತರಬೇತಿ ಮುಗಿಯುವವರೆಗೂ ಮದುವೆಯಾಗುವಂತಿಲ್ಲ.
Indian Army TES 57 Recruitment : ದೈಹಿಕ ಮತ್ತು ವೈದ್ಯಕೀಯ ಅರ್ಹತೆಗಳು
ಭಾರತೀಯ ರಕ್ಷಣಾ ಪಡೆಗೆ ಸೇರಲು ದೈಹಿಕ ಫಿಟ್ನೆಸ್ ಅತ್ಯಂತ ಕಡ್ಡಾಯವಾಗಿದೆ.
- ಕನಿಷ್ಠ ಎತ್ತರ (Height) : ಅಭ್ಯರ್ಥಿಯ ಎತ್ತರ ಕನಿಷ್ಠ 157.5 ಸೆಂಟಿಮೀಟರ್ ಇರಬೇಕು.(ಈಶಾನ್ಯ ಭಾರತ ಮತ್ತು ಗುಡ್ಡಗಾಡು ಪ್ರದೇಶದ ಅಭ್ಯರ್ಥಿಗಳಿಗೆ ನಿಯಮಾನುಸಾರ ವಿನಾಯಿತಿ ಇದೆ)
- ತೂಕ (Weight) : ಎತ್ತರ ಮತ್ತು ವಯಸ್ಸಿಗೆ ಅನುಗುಣವಾಗಿ ದೇಹದ ತೂಕ (BMI) ಸರಿಯಾಗಿರಬೇಕು.
- ದೃಷ್ಟಿ ಸಾಮರ್ಥ್ಯ (Vision) : ಉತ್ತಮ ಕಣ್ಣಿನ ದೃಷ್ಟಿ 6/6 ಮತ್ತು ದೋಷಪೂರಿತ ಕಣ್ಣಿನ ದೃಷ್ಟಿ 6/9 ಇರಬೇಕು. ಮಯೋಪಿಯ ಮತ್ತು ಹೈಪರ್ ಮೆಟ್ರೋಪಿಯ ನಿಯಮಿತ ಮಿತಿಯೊಳಗೆ ಇರಬೇಕು.
- ಇತರ ಆರೋಗ್ಯ ನಿಯಮಗಳು: ಅಭ್ಯರ್ಥಿಗೆ ಯಾವುದೇ ರೀತಿಯ ಮೂಳೆ ದೋಷ, ಚರ್ಮರೋಗ, ಹರ್ನಿಯಾ, ಅಥವಾ ಶ್ರವಣ ದೋಷಗಳು ಇರಬಾರದು. ಕನಿಷ್ಠ 14 ಡೆಂಟಲ್ ಪಾಯಿಂಟ್ ಇರಬೇಕು.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ? (Selection Process)
Indian Army TES 57 Recruitment ನಲ್ಲಿ ಯಾವುದೇ ಕಠಿಣ ಲಿಖಿತ ಪರೀಕ್ಷೆ ಇರುವುದಿಲ್ಲ. ಬದಲಿಗೆ ಆಯ್ಕೆಯು ಮೂರು ಪ್ರಮುಖ ಹಂತಗಳಲ್ಲಿ ನಡೆಯುತ್ತದೆ.
ಹಂತ-1 : ಶಾರ್ಟ್ ಲಿಸ್ಟಿಂಗ್ (Shortlisting)
ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳಲ್ಲಿನ 12th PCM ಅಂಕಗಳು ಮತ್ತು JEE Main ರ್ಯಾಂಕ್ ಆದರದ ಮೇಲೆ ಕಟ್ ಆಫ್ ಸಿದ್ಧಪಡಿಸಿ, ಅರ್ಹ ಅಭ್ಯರ್ಥಿಗಳನ್ನು ಮುಂದಿನ ಹಂತಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
ಹಂತ -2 : 5 ದಿನಗಳ SSB ಸಂದರ್ಶನ (5-Day SSB Interview)
ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು ಸೇನಾ ಆಯ್ಕೆ ಕೇಂದ್ರಗಳಾದ ಬೆಂಗಳೂರು, ಭೋಪಾಲ್, ಪ್ರಯಾಗ್ ರಾಜ್ ಅಥವಾ ಕಪೂರ್ಥಲಾ ಗೆ ಕರೆಯಲಾಗುತ್ತದೆ.
- ದಿನ -1 (Screening) : OIR Test & PPDT (ಚಿತ್ರ ನೋಡಿ ಕಥೆ ಬರೆಯುವುದು ಹಾಗೂ ಗ್ರೂಪ್ ಡಿಸ್ಕಶನ್.) ಇದರಲ್ಲಿ ಪಾಸಾದವರು ಮಾತ್ರ ಮುಂದಿನ 4 ದಿನ ಉಳಿಯುತ್ತಾರೆ.
- ದಿನ -2 ( psychology Tests) : TAT,WAT,SRT ಮತ್ತು ಸ್ವಯಂ ವಿವರಣೆಯಂತಹ ಮಾನಸಿಕ ಪರೀಕ್ಷೆಗಳು.
- ದಿನ -3&4 : (GTO Tasks & Interview) : ಗುಂಪು ಚಟುವಟಿಕೆಗಳು, ದೈಹಿಕ ಅಡೆತಡೆಗಳ ದಾಟುವಿಕೆ (Obstacles )ಮತ್ತು ವೈಯಕ್ತಿಕ ಸಂದರ್ಶನ.
- ದಿನ -5 : (Conference) : ಅಂತಿಮ ಕಾನ್ಫರೆನ್ಸ್ ನಡೆಸಿ ಫಲಿತಾಂಶ ಪ್ರಕಟಿಸಲಾಗುತ್ತದೆ.
ಹಂತ -3 : ವೈದ್ಯಕೀಯ ತಪಾಸಣೆ ಮತ್ತು ಮೆರಿಟ್ ಲಿಸ್ಟ್
SSB ಯಲ್ಲಿ ಶಿಫಾರಸುಗೊಂಡ ಅಭ್ಯರ್ಥಿಗಳಿಗೆ ಮಿಲಿಟರಿ ಆಸ್ಪತ್ರೆಯಲ್ಲಿ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಯುತ್ತದೆ. ತದನಂತರ ಅಂತಿಮ ಆಲ್ ಇಂಡಿಯಾ ಮೆರಿಟ್ ಲಿಸ್ಟ್ ಬಿಡುಗಡೆ ಮಾಡಿ ತರಬೇತಿಗೆ ಕರೆಯಲಾಗುತ್ತದೆ.
ಇದನ್ನು ಓದಿ
ತರಬೇತಿ, ಪದವಿ ಮತ್ತು ಸ್ಟೈಫಂಡ್ ವಿವರಗಳು
ಆಯ್ಕೆಯಾದ ಕೆಡೆಟ್ ಗಳಿಗೆ ಒಟ್ಟು 5 ವರ್ಷಗಳ ಕಾಲ ಉಚಿತ ತರಬೇತಿ ನೀಡಲಾಗುತ್ತದೆ.
- ಬೇಸಿಕ್ ಮಿಲಿಟರಿ ತರಬೇತಿ : ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ (OTA) ಗಯಾದಲ್ಲಿ 1 ವರ್ಷದ ಮಿಲಿಟರಿ ತರಬೇತಿ.
- ತಾಂತ್ರಿಕ ತರಬೇತಿ : ಪುಣೆ, ಮಹೋವ್ ಅಥವಾ ಸಿಕಂದರಾಬಾದ್ ನಲ್ಲಿರುವ ಆರ್ಮಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ 4 ವರ್ಷಗಳ ಬಿ ಟೆಕ್ (B.Tech) ತರಬೇತಿ.
- ಪದವಿ : ಕೋರ್ಸ್ ಯಶಸ್ವಿಯಾಗಿ ಮುಗಿಸಿದ ನಂತರ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ (JNU) ವತಿಯಿಂದ Engineering Degree ನೀಡಲಾಗುತ್ತದೆ.
- ಸ್ಟೈಫಂಡ್ : ತರಬೇತಿಯ 4 ನೇ ವರ್ಷದಲ್ಲಿ ಕೆಡೆಟ್ ಗಳಿಗೆ ತಿಂಗಳಿಗೆ ₹56,100 ಸ್ಟೈಫಂಡ್ ಸಿಗುತ್ತದೆ.
ಸಂಬಳ ಮತ್ತು ಭತ್ಯೆ ಗಳು ( Salary & Perks)
ತರಬೇತಿ ಪೂರ್ಣಗೊಂಡ ತಕ್ಷಣ ಅಭ್ಯರ್ಥಿಗಳನ್ನು ಲೆಫ್ಟಿನೆಂಟ್ (Lieutenant) ಹುದ್ದೆಗೆ ನೇಮಿಸಲಾಗುತ್ತದೆ.
- ಆರಂಭಿಕ ವೇತನ : ಪೇ ಮ್ಯಾಟ್ರಿಕ್ಸ್ ಲೆವೆಲ್ 10 ರ ಅಡಿಯಲ್ಲಿ ಬೇಸಿಕ್ ಪೇ ₹56,100 ರಿಂದ ₹1,77,500 ಇರುತ್ತದೆ.
- ಭತ್ಯೆ ಗಳು : ಮಿಲಿಟರಿ ಸೇವಾ ವೇತನ (MSP) ತಿಂಗಳಿಗೆ ₹15,500, ಪ್ರೀತಿಯ ಭತ್ಯೆ (DA) , ಮನೆ ಬಾಡಿಗೆ ಭತ್ಯೆ (HRA) , ಮತ್ತು ಉಚಿತ ವೈದ್ಯಕೀಯ ಸೌಲಭ್ಯಗಳು ಸೇರಿ ಆರಂಭದಲ್ಲಿ ತಿಂಗಳಿಗೆ ಸುಮಾರು ₹1,00,000 ಕ್ಕೂ ಹೆಚ್ಚು ಸಂಬಳ ಸಿಗುತ್ತದೆ.
ಇದನ್ನು ಓದಿ
Indian Army TES 57 Recruitment: ಆನ್ ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- ಭಾರತೀಯ ಭೂಸೇನೆಯ ಅಧಿಕೃತ ವೆಬ್ಸೈಟಿಗೆ ಭೇಟಿ ನೀಡಿ. https://joinindianarmy.nic.in/Authentication.aspx
- ವೆಬ್ಸೈಟಿನ ಹೋಂ ಪೇಜ್ ನಲ್ಲಿರುವ “Officers Entry Apply/Login” ಲಿಂಕ್ ಕ್ಲಿಕ್ ಮಾಡಿ.
- ನೀವು ಹೊಸ ಬಳಕೆದಾರರಾಗಿದ್ದರೆ (Registration) ಪ್ರಕ್ರಿಯೆ ಪೂರ್ಣಗೊಳಿಸಿ.
- ಲಾಗಿನ್ ಆದ ನಂತರ “Apply Online” ಕ್ಲಿಕ್ ಮಾಡಿ. 10+2 Technical Entry Scheme (TES) ಅನ್ನು ಆಯ್ಕೆ ಮಾಡಿ.
- ನಿಮ್ಮ ವೈಯಕ್ತಿಕ ವಿವರ, ಪಿಯುಸಿ ಅಂಕಗಳು ಹಾಗೂ JEE Main ರೋಲ್ ನಂಬರ್ ಅನ್ನು ಸರಿಯಾಗಿ ನಮೂದಿಸಿ ಅರ್ಜಿ ಸಲ್ಲಿಸಿ.
- ಭವಿಷ್ಯದ ಉಲ್ಲೇಖಕ್ಕಾಗಿ ಸಬ್ಮಿಟ್ ಮಾಡಿದ ಅಪ್ಲಿಕೇಶನ್ ಫಾರ್ಮ್ ಅನ್ನು ಪ್ರಿಂಟ್ ತೆಗೆದುಕೊಳ್ಳಿ.
ಅರ್ಜಿ ಸಲ್ಲಿಸಲು ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ.
Indian Army TES 57 Recruitment : FAQs
1. ಈ ಹುದ್ದೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು?
ಕೇವಲ ಅವಿವಾಹಿತ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.
2. JEE main ಪರೀಕ್ಷೆ ಬರೆಯುವುದು ಕಡ್ಡಾಯವೇ?
ಹೌದು JEE Main 2026 ಪರೀಕ್ಷೆಗೆ ಹಾಜರಾಗಿರುವುದು ಕಡ್ಡಾಯ. ಕೇವಲ ಹನ್ನೆರಡನೇ ತರಗತಿಯ ಅಂಕಗಳಿದ್ದರೆ ಸಾಲದು .
3. 12ನೇ ತರಗತಿಯಲ್ಲಿ ಎಷ್ಟು ಅಂಕಗಳು ಇರಬೇಕು?
12ನೇ ತರಗತಿಯಲ್ಲಿ ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾಥಮೆಟಿಕ್ಸ್ (PCM) ವಿಜಯಗಳಲ್ಲಿ ಒಟ್ಟಾರೆಯಾಗಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
4. ಈ ನೇಮಕಾತಿಗೆ ಲಿಖಿತ ಪರೀಕ್ಷೆ ಇರುತ್ತದೆಯೇ?
ಇಲ್ಲ. Indian Army TES 57 Recruitment ಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಅರ್ಜಿ ಸಲ್ಲಿಸಿದವರನ್ನು JEE Main Rank ಆಧಾರದ ಮೇಲೆ ನೇರವಾಗಿ SSB ಸಂದರ್ಶನಕ್ಕೆ (SSB Interview) ಕರೆಯಲಾಗುತ್ತದೆ.
5. SSB ಸಂದರ್ಶನ ಎಷ್ಟು ದಿನಗಳ ಕಾಲ ನಡೆಯುತ್ತದೆ?
SSB ಸಂದರ್ಶನವು ಒಟ್ಟು 5 ದಿನಗಳ ಕಾಲ ನಡೆಯುತ್ತದೆ. ಇದರಲ್ಲಿ ಸೈಕಾಲಜಿ ಟೆಸ್ಟ್, ಗ್ರೂಪ್ ಟಾಸ್ಕ್ ಮತ್ತು ಪರ್ಸನಲ್ ಇಂಟರ್ವ್ಯೂ ಇರುತ್ತದೆ.
6. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿದೆಯೇ?
ಇಲ್ಲ. Indian Army TES 57 Recruitment ಗೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
ಕೊನೆಯ ಮಾತು: Indian Army TES 57 Recruitment ಗೆ ಲಿಖಿತ ಪರೀಕ್ಷೆಯ ಭಯವಿಲ್ಲದೆ ದೇಶದ ಅತ್ಯುನ್ನತ ರಕ್ಷಣಾ ಪಡೆಯಲ್ಲಿ ಇಂಜಿನಿಯರ್ ಹಾಗೂ ಅಧಿಕಾರಿಯಾಗಲು 10+2 TES ಒಂದು ಅದ್ಭುತ ವೇದಿಕೆಯಾಗಿದೆ. ಅರ್ಹತೆ ಇರುವ ಎಲ್ಲಾ ಯುವಕರು ನವೆಂಬರ್ 12, 2026ರ ಒಳಗಾಗಿ ಅರ್ಜಿ ಸಲ್ಲಿಸಿ ನಿಮ್ಮ ದೇಶ ಸೇವೆಯ ಕನಸನ್ನು ನನಸು ಮಾಡಿಕೊಳ್ಳಿ.
ಇದೇ ರೀತಿಯ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಇದನ್ನು ಓದಿ