UCO Bank Apprentice Job’s : UCO Bank ವತಿಯಿಂದ ಒಟ್ಟು 530 ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ, ವಯೋಮಿತಿ, ₹16,650 ಸ್ಟೈ ಫಂಡ್ ಮತ್ತು ಆನ್ ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ (Bank Sector) ವೃತ್ತಿ ಜೀವನವನ್ನು ಆರಂಭಿಸಲು ಬಯಸುತ್ತಿರುವ ಪದವೀಧರರಿಗೆ ಇಲ್ಲಿದೆ ಒಂದು ಸುವರ್ಣ ಅವಕಾಶ. ಭಾರತ ಸರ್ಕಾರದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಯೂನಿಯನ್ ಕಮರ್ಷಿಯಲ್ ಬ್ಯಾಂಕ್ (UCO Bank) ದೇಶದಾದ್ಯಂತ ಖಾಲಿ ಇರುವ 530 ಅಪ್ರೆಂಟಿಸ್ (Apprentice) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.
ನೀವು ಯಾವುದೇ ಪದವಿ (Graduation) ಮುಗಿಸಿದ್ದು, ಬ್ಯಾಂಕಿಂಗ್ ಕೆಲಸದ ಪ್ರಾಯೋಗಿಕ ಅನುಭವವನ್ನು ಪಡೆಯಲು ಬಯಸುತ್ತಿದ್ದರೆ , ಈ ಹುದ್ದೆಗಳಿಗೆ ತಕ್ಷಣವೇ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಅರ್ಜಿ ಸಲ್ಲಿಕೆಯ ದಿನಾಂಕ , ಅರ್ಹತೆಗಳು, ವಯೋಮಿತಿ, ಸ್ಟೈಫಂಡ್ ಮತ್ತು ಆಯ್ಕೆ ಪ್ರಕ್ರಿಯೆ ಸಂಪೂರ್ಣ ವಿವರಗಳನ್ನು ಕೆಳಗೆ ನೀಡಲಾಗಿದೆ.
UCO Bank Apprentice Job’s : ಮುಖ್ಯಾಂಶಗಳು
- ಸಂಸ್ಥೆಯ ಹೆಸರು : ಯೂನಿಯನ್ ಕಮರ್ಷಿಯಲ್ ಬ್ಯಾಂಕ್ (UCO Bank)
- ಹುದ್ದೆಯ ಹೆಸರು : ಅಪ್ರೆಂಟಿಸ್ (Apprentice)
- ಒಟ್ಟು ಹುದ್ದೆಗಳು : 530
- ಕರ್ನಾಟಕದ ಹುದ್ದೆಗಳು : 11
- ಉದ್ಯೋಗದ ಪ್ರಕಾರ : ಕೇಂದ್ರ ಸರ್ಕಾರಿ ತರಬೇತಿ ಉದ್ಯೋಗ (1 ವರ್ಷದ ಕಾಂಟ್ರಾಕ್ಟ್)
- ಅರ್ಜಿ ಸಲ್ಲಿಸುವ ವಿಧಾನ : (ಆನ್ಲೈನ್) online
- ಮಾಸಿಕ ಸ್ಟೈ ಫಂಡ್: ₹16,650
- ಅಧಿಕೃತ ವೆಬ್ಸೈಟ್ : ucobank.com
ಪ್ರಮುಖ ದಿನಾಂಕಗಳು (Important Dates)
UCO ಬ್ಯಾಂಕ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಮಯ ಅವಕಾಶ ಅತ್ಯಂತ ಕಡಿಮೆ ಇದೆ. ಆಸಕ್ತ ಅಭ್ಯರ್ಥಿಗಳು ನಿಗಧಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕಾಗಿದೆ ವಿನಂತಿ.
- ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ : 14 ಅಕ್ಟೋಬರ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29 ಅಕ್ಟೋಬರ್ 2026
- ಆನ್ಲೈನ್ ಪರೀಕ್ಷೆ ನಡೆಯುವ ದಿನಾಂಕ : 7 ನವಂಬರ್ 2026 (ಬೆಳಿಗ್ಗೆ 11:00 ಗಂಟೆಗೆ)
UCO Bank Apprentice Job’s : ಶೈಕ್ಷಣಿಕ ಅರ್ಹತೆ (Educational Qualification)
UCO Bank Apprentice Job’s ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಅರ್ಹತೆಯನ್ನು ಹೊಂದಿರಬೇಕು.
- ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ (Graduation Degree)ಪಾಸ್ ಆಗಿರಬೇಕು.
- ವಿಶೇಷ ಸೂಚನೆ : ಅಭ್ಯರ್ಥಿಗಳ ಪದವಿ ಶಿಕ್ಷಣವು 1 ಏಪ್ರಿಲ್ 2022 ಅಥವಾ ಅದರ ನಂತರ ಪೂರ್ಣಗೊಂಡಿರಬೇಕು. ಅದಕ್ಕಿಂತ ಮುಂಚೆ ಪದವಿ ಮುಗಿಸಿದವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
- ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯದ ಸ್ಥಳೀಯ ಭಾಷೆಯನ್ನು (ಉದಾಹರಣೆಗೆ ಕರ್ನಾಟಕದಲ್ಲಿ ಕನ್ನಡ) ಓದಲು ಹಾಗೂ ಬರೆಯಲು, ಮಾತನಾಡಲು ಕಡ್ಡಾಯವಾಗಿ ತಿಳಿದಿರಬೇಕು.
ವಯೋಮಿತಿ (Age Limit)
UCO Bank Apprentice Job’s ಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ವಯಸ್ಸು ಈ ಕೆಳಗಿನಂತಿರಬೇಕು.
- ಕನಿಷ್ಠ ವಯಸ್ಸು : 20 ವರ್ಷಗಳು.
- ಗರಿಷ್ಠ ವಯಸ್ಸು : 28 ವರ್ಷಗಳು
ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ (Age Relaxation)
- SC, ST ಅಭ್ಯರ್ಥಿಗಳಿಗೆ : 5 ವರ್ಷಗಳ ಸಡಿಲಿಕೆ (ಗರಿಷ್ಠ 33 ವರ್ಷ)
- OBC (NCL) ಅಭ್ಯರ್ಥಿಗಳಿಗೆ : 3 ವರ್ಷಗಳ ಸಡಿಲಿಕೆ (ಗರಿಷ್ಠ 31 ವರ್ಷ)
- Pwbd (ಅಂಗವಿಕಲ) ಅಭ್ಯರ್ಥಿಗಳಿಗೆ : 10 ವರ್ಷಗಳ ಸಡಿಲಿಕೆ.
ತರಬೇತಿ ಅವಧಿ ಮತ್ತು ಮಾಸಿಕ ಭತ್ಯೆ (Stipend)
- ಅವಧಿ : ಇದು ಖಾಯಂ ಹುದ್ದೆಯಲ್ಲ. ನ್ಯಾಷನಲ್ ಅಪ್ರೆಂಟಿಸ್ ಶಿಪ್ ಟ್ರೈನಿಂಗ್ ಸ್ಕೀಮ್ (NATS) ಅಡಿಯಲ್ಲಿ 1 ವರ್ಷದ ಅವಧಿಗೆ ಮಾತ್ರ ಈ ತರಬೇತಿ ಇರುತ್ತದೆ.
- ಸ್ಟೈ ಫಂಡ್ : ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿಯ ಅವಧಿಯಲ್ಲಿ ಪ್ರತಿ ತಿಂಗಳು ₹16,650 ಶಿಷ್ಯವೇತನ (Stipend) ನೀಡಲಾಗುತ್ತದೆ. ಬ್ಯಾಂಕಿಂಗ್ ಕಲಿಯುವುದರ ಜೊತೆಗೆ ಕೈ ತುಂಬಾ ಪಾಕೆಟ್ ಮನಿ ಗಳಿಸಲು ಇದು ಉತ್ತಮ ಅವಕಾಶ.
ಇದನ್ನು ಓದಿ
ಆಯ್ಕೆ ವಿಧಾನ ಹೇಗೆ ಇರುತ್ತದೆ ? (Selection Process)
UCO Bank Apprentice Job’s ಗೆ ಅಭ್ಯರ್ಥಿಗಳನ್ನು 3 ಪ್ರಮುಖ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
1.ಆನ್ ಲಿಖಿತ ಪರೀಕ್ಷೆ (Online Written Test)
- ಇದು 100 ಅಂಕಗಳ ವಸ್ತುನಿಷ್ಠ (Multiple choice) ಪರೀಕ್ಷೆಯಾಗಿರುತ್ತದೆ.
- ಪರೀಕ್ಷೆಯ ಅವಧಿ 60 ನಿಮಿಷಗಳು.
- ಪರೀಕ್ಷೆಯು ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಮಾತ್ರ ಲಭ್ಯವಿರುತ್ತದೆ.
2. ಸ್ಥಳೀಯ ಭಾಷಾ ಪರೀಕ್ಷೆ (Local Language Test)
ಅಭ್ಯರ್ಥಿಗಳಿಗೆ ಸ್ಥಳೀಯ ಭಾಷೆಯ ಜ್ಞಾನವಿದೆಯೇ ಎಂದು ಪರೀಕ್ಷಿಸಲಾಗುತ್ತದೆ. (10 ಅಥವಾ 12 ನೇ ತರಗತಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಓದಿದ್ದರೆ ಈ ಪರೀಕ್ಷೆಯಿಂದ ವಿನಾಯಿತಿ ಸಿಗಬಹುದು.)
3. ದಾಖಲಾತಿ ಪರಿಶೀಲನೆ (Documents Verification) & ವೈದ್ಯಕೀಯ ತಪಾಸಣೆ (Medical Examination)
ಅರ್ಜಿ ಶುಲ್ಕ (Application Fee)
ಅಭ್ಯರ್ಥಿಗಳು ಆನ್ಲೈನ್ ಮೂಲಕವೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
- ಸಾಮಾನ್ಯ / OBC/EWS (ಪುರುಷ ಅಭ್ಯರ್ಥಿಗಳು :₹800+GST
- ಸಾಮಾನ್ಯ /OBC/EWS (ಮಹಿಳಾ ಅಭ್ಯರ್ಥಿಗಳು) : ₹600+GST
- SC/ST/PWBD ಅಭ್ಯರ್ಥಿಗಳಿಗೆ : ₹200+GST
UCO Bank Apprentice Job’s ಗೆ ಅರ್ಜಿ ಸಲ್ಲಿಸುವುದು ಹೇಗೆ? (How To Apply)
ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಬೇಕು.
- ಹಂತ -1(NATS ನೋಂದಣಿ) : ಮೊದಲು ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಆದ NATS portal https://nats.education.gov.in/ ಗೆ ಭೇಟಿ ನೀಡಿ ವಿದ್ಯಾರ್ಥಿಯಾಗಿ ನೋಂದಣಿ (Student Registration) ಮಾಡಿಕೊಳ್ಳಿ. ಅಲ್ಲಿ ಸಿಗುವ ನೋಂದಣಿ ಸಂಖ್ಯೆಯನ್ನು (Enrollment ID) ಜೋಪಾನವಾಗಿ ಇಟ್ಟುಕೊಳ್ಳಿ.
- ಹಂತ -2 (BFSI SSC ಪೋರ್ಟಲ್) : ತದನಂತರ ಬ್ಯಾಂಕ್ ನೇಮಕಾತಿಯ ಅಧಿಕೃತ ಪೋರ್ಟಲ್ ಆದ Bee BFSI https://beep.bfsissc.com/#/ ವೆಬ್ ಸೈಟಿಗೆ ಭೇಟಿ ನೀಡಿ.
- ಹಂತ -3 (ವಿವರ ಭರ್ತಿ) : ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿ ಮತ್ತು NATS ID ಯನ್ನು ನಮೂದಿಸಿ.
- ಹಂತ -4 (ದಾಖಲೆ ಅಪ್ಲೋಡ್) : ನಿಮ್ಮ ಫೋಟೋ, ಸಹಿ ಮತ್ತು ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಹಂತ -5 ( ಶುಲ್ಕ ಪಾವತಿ) : ನಿಮ್ಮ ವರ್ಗಕ್ಕೆ ಅನುಗುಣವಾಗಿ ಆನ್ಲೈನ್ ಬ್ಯಾಂಕಿಂಗ್/ಡೆಬಿಟ್ ಕಾರ್ಡ್ ಮೂಲಕ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು submit ಮಾಡಿ. ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಹೆಚ್ಚಿನ ಅಧಿಕೃತ ಮಾಹಿತಿ ಹಾಗೂ ಅಧಿಸೂಚನೆಯನ್ನು ಓದಲು UCO ಬ್ಯಾಂಕಿನ ಅಧಿಕೃತ ಕೆರಿಯರ್ ಪೇಜ್ ಆದ UCO Bank Careers ಗೆ ಭೇಟಿ ನೀಡಬಹುದು.
ಇದನ್ನು ಓದಿ
UCO Bank Apprentice Job’s : FAQs
1. UCO Bank ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 29, 2026 ಆಗಿದೆ.
2. ಈ ಹುದ್ದೆಗೆ ಮಾಸಿಕ ಸ್ಟೈಫಂಡ್ (ಶಿಷ್ಯವೇತನ) ಎಷ್ಟು ಸಿಗುತ್ತದೆ?
ಆಯ್ಕೆಯಾದ ಅಭ್ಯರ್ಥಿಗಳಿಗೆ 1 ವರ್ಷದ ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು ₹16,650 ಸ್ಟೈ ಫಂಡ್ ನೀಡಲಾಗುತ್ತದೆ.
3. 2022 ಕ್ಕಿಂತ ಮುಂಚೆ ಪದವಿ (Graduation) ಮುಗಿಸಿದವರು ಅರ್ಜಿ ಸಲ್ಲಿಸಬಹುದೇ?
ಇಲ್ಲ. ಅಭ್ಯರ್ಥಿಗಳ ಪದವಿ ಶಿಕ್ಷಣವು 1 ಏಪ್ರಿಲ್ 2022 ಅಥವಾ ಅದರ ನಂತರ ಪೂರ್ಣಗೊಂಡಿರಬೇಕು. ಅದಕ್ಕಿಂತ ಹಳೆಯ ಬ್ಯಾಚ್ ನವರು ಅರ್ಜಿ ಸಲ್ಲಿಸಲು ಅರ್ಹರಲ್ಲ.
4. UCO Bank ಅಪ್ರೆಂಟಿಸ್ ಪರೀಕ್ಷೆ ಯಾವಾಗ ನಡೆಯುತ್ತದೆ?
ಇದರ ಆನ್ಲೈನ್ ಲಿಖಿತ ಪರೀಕ್ಷೆಯು 07 ನವಂಬರ್ 2026 ರಂದು ಬೆಳಿಗ್ಗೆ 11:00 ಗಂಟೆಗೆ ನಡೆಯಲಿದೆ ಎಂದು ತಾತ್ಕಾಲಿಕವಾಗಿ ಪ್ರಕಟಿಸಲಾಗಿದೆ.
5. ಇದು ಖಾಯಂ (Permanent) ಬ್ಯಾಂಕ್ ಉದ್ಯೋಗವೇ?
ಇಲ್ಲ, ಇದು ನ್ಯಾಷನಲ್ ಅಪ್ರೆಂಟಿಸ್ ಶಿಪ್ ಟ್ರೈನಿಂಗ್ ಸ್ಕೀಮ್ (NATS) ಅಡಿಯಲ್ಲಿ ಕೇವಲ 1 ವರ್ಷದ ಅವಧಿಯ ತರಬೇತಿ ಕಾರ್ಯಕ್ರಮವಾಗಿದೆ.
6. ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ಗಳು ಯಾವುವು?
ಅಭ್ಯರ್ಥಿಗಳು ಮೊದಲು “NATS portal” ನಲ್ಲಿ ನೋಂದಣಿ ಮಾಡಿಕೊಂಡು, ನಂತರ “Beep BFSI” ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
UCO Bank Apprentice Job’s: ಕೊನೆಯ ಮಾತು
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂದೆ ದೊಡ್ಡ ಹುದ್ದೆಗಳನ್ನು ಅಲಂಕರಿಸಲು ಬಯಸುವವರಿಗೆ ಪ್ರಾಯೋಗಿಕ ಜ್ಞಾನ (Practical Experience) ಪಡೆಯಲು ಈ 1 ವರ್ಷದ ಅಪ್ರೆಂಟಿಸ್ ಶಿಪ್ ತುಂಬಾ ನೆರವಾಗುತ್ತದೆ. ತಡ ಮಾಡದೆ ಕೊನೆಯ ದಿನಾಂಕವಾದ ಅಕ್ಟೋಬರ್ 29, 2026 ರ ಒಳಗಾಗಿ ಅರ್ಜಿ ಸಲ್ಲಿಸಿ. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಇದೇ ರೀತಿಯ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ತಕ್ಷಣ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಸೇರಿಕೊಳ್ಳಿ.
ಇದನ್ನು ಓದಿ