Tata Capital Pankh Scholarship 2026 : 11, 12ನೇ ತರಗತಿ, ಪದವಿ ಡಿಪ್ಲೋಮಾ ಮತ್ತು ITI ವಿದ್ಯಾರ್ಥಿಗಳಿಗೆ ₹18,000 ವರೆಗೆ ವಿದ್ಯಾರ್ಥಿ ವೇತನ. ಅರ್ಹತೆ, ದಾಖಲೆಗಳು ಮತ್ತು ಆನ್ ಲೈನ್ ಅರ್ಜಿ ಸಲ್ಲಿಸುವ ವಿಧಾನವನ್ನು ವಿವರವಾಗಿ ತಿಳಿಸಲಾಗಿದೆ.
ನೀವು 11ನೇ ತರಗತಿ, 12ನೇ ತರಗತಿ, ಸಾಮಾನ್ಯ ಪದವಿ (Undergraduate), ಡಿಪ್ಲೋಮಾ ಅಥವಾ ಐಟಿಐ (ITI) ಓದುತ್ತಿದ್ದೀರಾ? ಆರ್ಥಿಕ ಸಂಕಷ್ಟದಿಂದಾಗಿ ನಿಮ್ಮ ಮುಂದಿನ ಶಿಕ್ಷಣಕ್ಕೆ ತೊಂದರೆಯಾಗುತ್ತಿದೆಯೇ? ಹಾಗಿದ್ದರೆ ನಿಮಗೊಂದು ಸುವಾರ್ತೆ! ಪ್ರತಿಷ್ಠಿತ ಹಣಕಾಸು ಸಂಸ್ಥೆಯಾದ ಟಾಟಾ ಕ್ಯಾಪಿಟಲ್ ಲಿಮಿಟೆಡ್, ದೇಶದ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗಲು ಟಾಟಾ ಕ್ಯಾಪಿಟಲ್ ಪಂಕ್ ಸ್ಕಾಲರ್ಶಿಪ್ 2026-27 (Tata Capital Pankh Scholarship Program) ಅನ್ನು ಪ್ರಕಟಿಸಿದೆ.
ಈ ವಿದ್ಯಾರ್ಥಿ ವೇತನ ಯೋಜನೆ ಅಡಿ ಅರ್ಹ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣದ ವೆಚ್ಚವನ್ನು ಭರಿಸಲು ₹10,000 ರಿಂದ ಗರಿಷ್ಠ ₹18,000 ಹೊರಗೆ ಧನಸಹಾಯವನ್ನು ನೀಡಲಾಗುತ್ತದೆ. ಈ ಲೇಖನದಲ್ಲಿ ನಾವು ಈ ಸ್ಕಾಲರ್ಶಿಪ್ ನ ಅರ್ಹತೆಗಳು, ಬೇಕಾಗುವ ದಾಖಲೆಗಳು, ಸಿಗುವ ಹಣದ ವಿವರ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ವಿವರವಾಗಿ ತಿಳಿದುಕೊಳ್ಳೋಣ.
ಟಾಟಾ ಕ್ಯಾಪಿಟಲ್ ಪಂಖ್ ಸ್ಕಾಲರ್ಶಿಪ್ ಎಂದರೇನು? (What is Tata Capital Pankh Scholarship?)
ಟಾಟಾ ಕ್ಯಾಪಿಟಲ್ ಸಂಸ್ಥೆಯು ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಅಡಿಯಲ್ಲಿ ಈ ಪಂಖ್ ಸ್ಕಾಲರ್ಶಿಪ್ ಅನ್ನು ಜಾರಿಗೆ ತಂದಿದೆ. ಸಮಾಜದ ಆರ್ಥಿಕವಾಗಿ ನೊಂದ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಣದ ಕೊರತೆಯಿಂದಾಗಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಬಾರದು. ಅವರಿಗೆ ರೆಕ್ಕೆಗಳಾಗಿ (ಪಂಖ್) ನೆರವಾಗಬೇಕು ಎನ್ನುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
Tata Capital Pankh Scholarship 2026 : ಅರ್ಹತಾ ಮಾನದಂಡಗಳು
ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
- ಶೈಕ್ಷಣಿಕ ಅರ್ಹತೆ : ವಿದ್ಯಾರ್ಥಿಗಳು ಭಾರತದಲ್ಲಿ ಮಾನ್ಯತೆ ಪಡೆದ ಶಾಲಾ-ಕಾಲೇಜುಗಳಲ್ಲಿ ಪ್ರಸ್ತುತ 11 ಅಥವಾ 12ನೇ ತರಗತಿ, ಸಾಮಾನ್ಯ ಪದವಿ ಕೋರ್ಸ್ ಗಳಾದ BA, BSC, bcom ಅಥವಾ Diploma, ITI ಕಲಿಯುತ್ತಿರಬೇಕು.
- ಕನಿಷ್ಠ ಅಂಕಗಳು : ಅಭ್ಯರ್ಥಿಗಳು ತಮ್ಮ ಹಿಂದಿನ ತರಗತಿ ಅಥವಾ ಸೆಮಿಸ್ಟರ್ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು.
- ಕುಟುಂಬದ ಆದಾಯ : ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹4 ಲಕ್ಷಕ್ಕಿಂತ ಕಡಿಮೆ ಇರಬೇಕು.
- ವಿಶೇಷ ಆದ್ಯತೆ : ಹೆಣ್ಣು ಮಕ್ಕಳು, ವಿಕಲಚೇತನ ವಿದ್ಯಾರ್ಥಿಗಳು (PWBD) , ಅನಾಥರು ಮತ್ತು ಏಕ ಪೋಷಕರು ಇರುವ (Single Parent) ಮಕ್ಕಳಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
(ಗಮನಿಸಿ: ಟಾಟಾ ಕ್ಯಾಪಿಟಲ್ ಮತ್ತು Buddy4study ಸಂಸ್ಥೆಯ ಉದ್ಯೋಗಿಗಳ ಮಕ್ಕಳು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ)
ವಿದ್ಯಾರ್ಥಿ ವೇತನದ ಮೊತ್ತ ಎಷ್ಟು ಸಿಗುತ್ತದೆ? (Scholarship Benefits)
Tata Capital Pankh Scholarship 2026 ಈ ಯೋಜನೆ ಅಡಿ ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಬೋಧನ ಶುಲ್ಕದ (Tution fees) ಶೇಕಡವಾರು ಹಣ ಅಥವಾ ಗರಿಷ್ಠ ಮಿತಿಯ ಮೊತ್ತವನ್ನು ನೀಡಲಾಗುತ್ತದೆ.
1. 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ
- 60% ರಿಂದ 80% ಅಂಕಗಳು: ಶುಲ್ಕದ 80% ಅಥವಾ ಗರಿಷ್ಠ ₹10,000
- 80% ರಿಂದ 90% ಅಂಕಗಳು : ಶುಲ್ಕದ 90% ಅಥವಾ ಗರಿಷ್ಠ ₹12,000
- 90% ಕ್ಕಿಂತ ಹೆಚ್ಚು ಅಂಕಗಳು : ಶುಲ್ಕದ 100% ಅಥವಾ ಗರಿಷ್ಠ ₹15,000
2. ಸಾಮಾನ್ಯ ಪದವಿ (Undergraduate)/Diploma/ITI ವಿದ್ಯಾರ್ಥಿಗಳಿಗೆ
- 60% ರಿಂದ 80% ಅಂಕಗಳು: ಶುಲ್ಕದ 80% ಅಥವಾ ಗರಿಷ್ಠ ₹12,000
- 80% ರಿಂದ 90% ಅಂಕಗಳು : ಶುಲ್ಕದ 90% ಅಥವಾ ಗರಿಷ್ಠ ₹15,000
- 90% ಕ್ಕಿಂತ ಹೆಚ್ಚು ಅಂಕಗಳು : ಶುಲ್ಕದ 100% ಅಥವಾ ಗರಿಷ್ಠ ₹18,000
ಇದನ್ನು ಓದಿ
Tata Capital Pankh Scholarship 2026 : ಅಗತ್ಯ ದಾಖಲೆಗಳು
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.
- ಗುರುತಿನ ಚೀಟಿ : ಆಧಾರ್ ಕಾರ್ಡ್ (Adhar card)
- ಶೈಕ್ಷಣಿಕ ದಾಖಲೆ : ಹಿಂದಿನ ವರ್ಷದ ಅಧಿಕೃತ ಅಂಕಪಟ್ಟಿ (Marksheet)
- ಪ್ರಸ್ತುತ ದಾಖಲಾತಿ ಪುರಾವೆ: ಪ್ರಸ್ತುತ ಸಾಲಿನ ಕಾಲೇಜು ಶುಲ್ಕದ ರಸೀದಿ, ಐಡಿ ಕಾರ್ಡ್ ಅಥವಾ ಬೋನಫೈಡ್ ಸರ್ಟಿಫಿಕೇಟ್.
- ಆದಾಯ ಪ್ರಮಾಣ ಪತ್ರ : ತಹಶೀಲ್ದಾರರು ಅಥವಾ ಸಕ್ಶಮಾಧಿಕಾರಿಯಿಂದ ಪಡೆದ ಕುಟುಂಬದ ವಾರ್ಷಿಕ ಆದಾಯ ಪತ್ರ.
- ಬ್ಯಾಂಕ್ ವಿವರಗಳು : ವಿದ್ಯಾರ್ಥಿಯ ಹೆಸರಿನಲ್ಲಿರುವ ಬ್ಯಾಂಕ್ ಪಾಸ್ ಬುಕ್ ನ ಮೊದಲ ಪುಟದ ಪ್ರತಿ ಅಥವಾ ಕ್ಯಾನ್ಸಲ್ ಮಾಡಿದ ಚೆಕ್.
- ಭಾವಚಿತ್ರ : ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ.
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ? (Selection Process)
Tata Capital Pankh Scholarship 2026 ಗೆ ಅರ್ಹ ವಿದ್ಯಾರ್ಥಿಗಳನ್ನು ಈ ಕೆಳಗಿನ ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
- ಮೊದಲಿಗೆ, ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳು ಮತ್ತು ಅವರ ಅಂಕಗಳು ಹಾಗೂ ಆದಾಯದ ಆಧಾರದ ಮೇಲೆ ಶಾರ್ಟ್ ಲಿಸ್ಟ್ (Short List) ಮಾಡಲಾಗುತ್ತದೆ.
- ಶಾರ್ಟ್ ಲಿಸ್ಟ್ ಆದ ವಿದ್ಯಾರ್ಥಿಗಳಿಗೆ ದಾಖಲೆಗಳ ಪರಿಶೀಲನೆ ಮತ್ತು ಟೆಲಿಫೋನಿಕ್ ಸಂದರ್ಶನ (Telephonic Interview) ಇರುತ್ತದೆ.
- ಅಂತಿಮವಾಗಿ ಆಯ್ಕೆಯಾದ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸಲಾಗುತ್ತದೆ. (DBT)
ಅರ್ಜಿ ಸಲ್ಲಿಸುವುದು ಹೇಗೆ? (How To Apply)
Tata Capital Pankh Scholarship 2026 ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ ಲೈನ್ ಆಗಿದ್ದು, ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಅರ್ಜಿ ಸಲ್ಲಿಸಲು ಈ ಹಂತಗಳನ್ನು ಅನುಸರಿಸಿ.
- ಮೊದಲು ಅಧಿಕೃತ ವೆಬ್ಸೈಟ್ ಆದ Buddy4study https://www.buddy4study.com/page/the-tata-capital-pankh-scholarship-programme ಪೋರ್ಟಲ್ ಗೆ ಭೇಟಿ ನೀಡಿ.
- ಅಲ್ಲಿ “Tata Capital Pankh Scholarship Program” ಎಂದು ಹುಡುಕಿ.
- ನಿಮ್ಮ ಇ-ಮೇಲ್ ಅಥವಾ ಮೊಬೈಲ್ ಸಂಖ್ಯೆ ಬಳಸಿ ನೋಂದಣಿ (Registration) ಮಾಡಿಕೊಳ್ಳಿ.
- ಲಾಗಿನ್ ಆದ ನಂತರ “Apply Now” ಬಟನ್ ಮೇಲೆ ಕ್ಲಿಕ್ ಮಾಡಿ.
- ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ನಿಮ್ಮ ವೈಯಕ್ತಿಕ, ಶೈಕ್ಷಣಿಕ ಹಾಗೂ ಬ್ಯಾಂಕ್ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
- ಮೇಲೆ ತಿಳಿಸಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಸ್ಪಷ್ಟವಾಗಿ ಅಪ್ಲೋಡ್ ಮಾಡಿ.
- ಎಲ್ಲ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ (Preview) , ಕೊನೆಯದಾಗಿ “Submit” ಬಟನ್ ಒತ್ತಿ. ಅರ್ಜಿಯನ್ನು ಪೂರ್ಣಗೊಳಿಸಿ.
ಕೊನೆಯ ದಿನಾಂಕ (Important Date)
Tata Capital Pankh Scholarship 2026 ಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 26 ಅಕ್ಟೋಬರ್ 2026 ಕೊನೆಯ ದಿನಾಂಕವಾಗಿದೆ. ಕೊನೆಯ ದಿನದ ರಶ್ ತಪ್ಪಿಸಲು ಅರ್ಹ ವಿದ್ಯಾರ್ಥಿಗಳು ಇಂದೇ ಅರ್ಜಿ ಸಲ್ಲಿಸುವುದು ಉತ್ತಮ.
ಇದನ್ನು ಓದಿ
Tata Capital Pankh Scholarship 2026 : FAQs
1. ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಲು ಯಾವುದೇ ಅರ್ಜಿ ಶುಲ್ಕ (Application Fee) ಇದೆಯೇ?
ಇಲ್ಲ, ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. Buddy4study ಪೋರ್ಟಲ್ ಮೂಲಕ ಸಂಪೂರ್ಣವಾಗಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು.
2. ಇಂಜಿನಿಯರಿಂಗ್ (BE/B.Tech) ಅಥವಾ ವೈದ್ಯಕೀಯ (MBBS) ಕಲಿಯುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಹರೇ?
ಇಲ್ಲ, ಈ ನಿರ್ದಿಷ್ಟ ಪಂಖ್ ಸ್ಕಾಲರ್ಶಿಪ್ ಕಾರ್ಯಕ್ರಮವು ಕೇವಲ 11ನೇ ತರಗತಿ, 12ನೇ ತರಗತಿ, ಸಾಮಾನ್ಯ ಪದವಿ (BA, BSC, bcom, BBA), ಡಿಪ್ಲೋಮಾ ಮತ್ತು ಐಟಿಐ ವಿದ್ಯಾರ್ಥಿಗಳಿಗೆ ಮಾತ್ರ ಲಭ್ಯವಿದೆ. ವೃತ್ತಿಪರ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ (Professional Courses)ಇದು ಅನ್ವಯಿಸುವುದಿಲ್ಲ.
3. ಕುಟುಂಬದ ವಾರ್ಷಿಕ ಆದಾಯ ಎಷ್ಟು ಇರಬೇಕು?
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹4 ಲಕ್ಷಕ್ಕಿಂತ ಕಡಿಮೆ ಇರಬೇಕು. ಅರ್ಜಿ ಸಲ್ಲಿಸುವಾಗ ಅಧಿಕೃತ ಆದಾಯ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡುವುದು ಕಡ್ಡಾಯ.
4. ಈ ಸ್ಕಾಲರ್ಶಿಪ್ ಪಡೆಯಲು ಕನಿಷ್ಠ ಎಷ್ಟು ಅಂಕಗಳನ್ನು ಪಡೆದಿರಬೇಕು?
ವಿದ್ಯಾರ್ಥಿಗಳು ತಮ್ಮ ಹಿಂದಿನ ಶೈಕ್ಷಣಿಕ ವರ್ಷ ಅಥವಾ ಸೆಮಿಸ್ಟರ್ ಪರೀಕ್ಷೆಯಲ್ಲಿ ಕನಿಷ್ಠ 60% ಅಂಕಗಳನ್ನು ಪಡೆದಿರಬೇಕು.
5. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
Tata Capital Pankh Scholarship 2026 ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26 ಅಕ್ಟೋಬರ್ 2026.
6. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಣ ಹೇಗೆ ತಲುಪುತ್ತದೆ?
ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ (Direct Benifit Transfer – DBT) ಮಾಡಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಯ ಹೆಸರಲ್ಲೇ ಬ್ಯಾಂಕ್ ಖಾತೆ ಇರುವುದು ಅವಶ್ಯಕ.
7. ನಾನು ಮೊದಲ ವರ್ಷದ ಪದವಿ ಓದುತ್ತಿದ್ದೇನೆ, ನಾನು ಅರ್ಜಿ ಸಲ್ಲಿಸಬಹುದೇ ?
ಹೌದು, ಪ್ರಸ್ತುತ ಪದವಿ (Undergraduate), ಡಿಪ್ಲೋಮಾ ಅಥವಾ ಐಟಿಐ ಕೋರ್ಸ್ ಗಳ ಯಾವುದೇ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ ಹಿಂದಿನ ವರ್ಷದ ಅಂಕಪಟ್ಟಿಯಲ್ಲಿ 60% ಅಂತ ಇರಬೇಕು.
ಕೊನೆಯ ಮಾತು : ಶಿಕ್ಷಣವೇ ಪ್ರಗತಿಯ ಮೂಲ ಧಾವಂತ. ಈ ಮಾಹಿತಿ ನಿಮ್ಮ ಸ್ನೇಹಿತರಿಗೆ ಅಥವಾ ಪರಿಚಿತ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಬಹುದು, ಆದ್ದರಿಂದ ಈ ಲೇಖನವನ್ನು ತಪ್ಪದೇ ಶೇರ್ ಮಾಡಿ.
ಇದೇ ರೀತಿಯ ಸರ್ಕಾರಿ ಯೋಜನೆಗಳು ಹಾಗೂ ಉದ್ಯೋಗಗಳ ತಕ್ಷಣ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಇದನ್ನು ಓದಿ