HDFC ಬ್ಯಾಂಕ್ ಸ್ಕಾಲರ್ಶಿಪ್ 2026-27 : ನೀವು ಪ್ರಸ್ತುತ ಶಾಲೆ, ಕಾಲೇಜು ಅಥವಾ ಯಾವುದೇ ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದೀರಾ? ನಿಮ್ಮ ವಿದ್ಯಾಭ್ಯಾಸದ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಆದ HDFC ಭರ್ಜರಿ ಅವಕಾಶವನ್ನು ತಂದಿದೆ.
HDFC Bank Parivartan ECSS Scholarship 2026-27 ರ ಅಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ.
ಈ ಸ್ಕಾಲರ್ಶಿಪ್ ಯೋಜನೆ ಎಂದರೇನು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಇದಕ್ಕೆ ಬೇಕಾಗುವ ಅಗತ್ಯ ದಾಖಲೆಗಳು ಯಾವುವು? ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು? ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರವಾಗಿ ತಿಳಿದುಕೊಳ್ಳೋಣ.
HDFC ಬ್ಯಾಂಕ್ ಪರಿವರ್ತನ್ ಸ್ಕಾಲರ್ಶಿಪ್ ಎಂದರೇನು? (What is HDFC Bank Parivartan ECSS Scholarship?)
HDFC ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಅಡಿಯಲ್ಲಿ Parivartan ECSS (Educational Crisis Support Scholarship) ಪ್ರೋಗ್ರಾಮ್ ಅನ್ನು ನಡೆಸುತ್ತಿದೆ. ಸಮಾಜದ ಆರ್ಥಿಕವಾಗಿ ಹಿಂದುಳಿದ ಮತ್ತು ವೈಯಕ್ತಿಕ ಅಥವಾ ಕೌಟುಂಬಿಕ ಬಿಕ್ಕಟ್ಟಿನಿಂದ ಶಿಕ್ಷಣವನ್ನು ಮುಂದುವರಿಸಲು ಕಷ್ಟಪಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆ ಅಡಿ ಅರ್ಹ ವಿದ್ಯಾರ್ಥಿಗಳಿಗೆ ಅವರ ಕೋರ್ಸ್ ಗಳ ಆಧಾರದ ಮೇಲೆ ವಾರ್ಷಿಕವಾಗಿ ₹15,000 ರಿಂದ ₹75,000 ವರೆಗೆ ನೇರ ಆರ್ಥಿಕ ಸಹಾಯವನ್ನು ಒದಗಿಸಲಾಗುತ್ತದೆ.
ಇದನ್ನು ಓದಿ
HDFC ಬ್ಯಾಂಕ್ ಸ್ಕಾಲರ್ಶಿಪ್ 2026-27 : ಪ್ರಮುಖ ವಿವರಗಳು
- ಯೋಜನೆಯ ಹೆಸರು : HDFC Bank Parivartan ECSS Scholarship 2026-27
- ಆಯೋಜಕರು : HDFC Bank Ltd
- ಲಾಭ ಪಡೆಯುವವರು : 1ನೇ ತರಗತಿಯಿಂದ PG, ITI ಡಿಪ್ಲೋಮಾ ವಿದ್ಯಾರ್ಥಿಗಳು.
- ಸ್ಕಾಲರ್ಶಿಪ್ ಮೊತ್ತ: ₹15,000 ರಿಂದ ₹75,000
- ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ (Online)
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31 ಅಕ್ಟೋಬರ್ 2026
ಹಂತವಾರು ಅರ್ಹತೆಯ ವಿವರಗಳು (Eligibility Criteria)
HDFC ಬ್ಯಾಂಕ್ ಸ್ಕಾಲರ್ಶಿಪ್ 2026-27 :ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
- ಶಾಲಾ ವಿದ್ಯಾರ್ಥಿಗಳಿಗೆ : 1ನೇ ತರಗತಿಯಿಂದ 12ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳು. (ಸರ್ಕಾರಿ, ಅನುದಾನಿತ ಅಥವಾ ಖಾಸಗಿ ಶಾಲೆಗಳಾಗಿರಬಹುದು)
- ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ : ಡಿಪ್ಲೋಮಾ, ITI , ಪಾಲಿಟೆಕ್ನಿಕ್, ಸಾಮಾನ್ಯ ಪದವಿ (BA, BSC, bcom, ಇತ್ಯಾದಿ) ಅಥವಾ ವೃತ್ತಿಪರ ಕೋರ್ಸ್ ಗಳಾದ (BTech, MBBS, LLB, nursing, CA) ಓದುತ್ತಿರುವ ವಿದ್ಯಾರ್ಥಿಗಳು.
- ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ : ಮಾಸ್ಟರ್ಸ್ ಕೋರ್ಸ್ (M.Tec, MBA, MA,M.com, ಇತ್ಯಾದಿ) ಮಾಡುತ್ತಿರುವ ವಿದ್ಯಾರ್ಥಿಗಳು.
- ಅಂಕಗಳ ಮಿತಿ : ವಿದ್ಯಾರ್ಥಿಗಳು ತಮ್ಮ ಹಿಂದಿನ ತರಗತಿ ಅಥವಾ ಸೆಮಿಸ್ಟರ್ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
- ಆದಾಯದ ಮಿತಿ : ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ₹2.5 ಲಕ್ಷಕ್ಕಿಂತ ಕಡಿಮೆ ಇರಬೇಕು.
- ವಿಶೇಷ ಆದ್ಯತೆ : ಕೌಟುಂಬಿಕ ಬಿಕ್ಕಟ್ಟು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ (ಉದಾಹರಣೆಗೆ : ಗಳಿಸುವ ಪೋಷಕರನ್ನು ಕಳೆದುಕೊಂಡವರು ಅಥವಾ ಪೋಷಕರು ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವವರು) ಮೊದಲ ಆದ್ಯತೆ ನೀಡಲಾಗುತ್ತದೆ.
ಇದನ್ನು ಓದಿ
HDFC ಬ್ಯಾಂಕ್ ಸ್ಕಾಲರ್ಶಿಪ್ 2026-27 : ಸ್ಕಾಲರ್ಶಿಪ್ ಮೊತ್ತ ಎಷ್ಟು?
- 1ನೇ ತರಗತಿಯಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ : ವಾರ್ಷಿಕ ₹15,000 ರಿಂದ ₹18,000 ವರೆಗೆ
- ಜನರಲ್ ಅಂಡರ್ ಗ್ರಾಜುಯೇಷನ್ (UG) ವಿದ್ಯಾರ್ಥಿಗಳಿಗೆ : ವಾರ್ಷಿಕ ₹30,000 ವರೆಗೆ.
- ಪ್ರೊಫೆಷನಲ್ ಗ್ರಾಜುಯೇಷನ್ (Engineering/Medical) ವಿದ್ಯಾರ್ಥಿಗಳಿಗೆ : ವಾರ್ಷಿಕ ₹50,000 ರಿಂದ ₹75,000 ವರೆಗೆ.
- ಪೋಸ್ಟ್ ಗ್ರಾಜುಯೇಷನ್ (PG) ವಿದ್ಯಾರ್ಥಿಗಳಿಗೆ: ವಾರ್ಷಿಕ ₹35,000 ರಿಂದ ₹75,000 ವರೆಗೆ.
ಅಗತ್ಯವಿರುವ ದಾಖಲೆಗಳು (Documents Required)
HDFC ಬ್ಯಾಂಕ್ ಸ್ಕಾಲರ್ಶಿಪ್ 2026-27 ಕ್ಕೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು (PDF/JPEG) ಸಿದ್ಧವಾಗಿಟ್ಟುಕೊಳ್ಳಿ.
- ಹಿಂದಿನ ವರ್ಷದ ಅಂಕಪಟ್ಟಿ (Marksheet)
- ಪ್ರಸ್ತುತ ವರ್ಷದ ಪ್ರವೇಶ ದಾಖಲಾತಿ (Admission Proof – Fees Receipt, ID card, Bonafide certificate).
- ಅರ್ಜಿದಾರರ ಗುರುತಿನ ಚೀಟಿ ( ಆಧಾರ್ ಕಾರ್ಡ್/ಡ್ರೈವಿಂಗ್ ಲೈಸನ್ಸ್/ವೋಟರ್ ಐಡಿ)
- ಕುಟುಂಬದ ವಾರ್ಷಿಕ ಆದಾಯ ಪ್ರಮಾಣ ಪತ್ರ (Income Certificate).
- ವಿದ್ಯಾರ್ಥಿಯ ಬ್ಯಾಂಕ್ ಪಾಸ್ ಬುಕ್ ಪ್ರತಿ ಅಥವಾ ಕ್ಯಾನ್ಸಲ್ ಮಾಡಿದ ಚೆಕ್.
- ಅರ್ಜಿದಾರರ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ.
- ಬಿಕ್ಕಟ್ಟಿನ ಪುರಾವೆ (Crisis Proof -ಅನ್ವಯಿಸಿದರೆ ಮಾತ್ರ) .
HDFC ಬ್ಯಾಂಕ್ ಸ್ಕಾಲರ್ಶಿಪ್ 2026-27 ಗೆ ಅರ್ಜಿ ಸಲ್ಲಿಸುವುದು ಹೇಗೆ? (How to Apply)
ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್ಲೈನ್ ಆಗಿರುತ್ತದೆ. ಈ ಕೆಳಗಿನ ಸರಳ ಹಂತಗಳ ಮೂಲಕ ಅರ್ಜಿ ಸಲ್ಲಿಸಬಹುದು.
- ಹಂತ 1: ಮೊದಲಿಗೆ Buddy4study ನ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ.https://www.buddy4study.com/page/hdfc-bank-parivartans-ecss-programme
- ಹಂತ 2: ನಿಮ್ಮ ಇಮೇಲ್ ಅಥವಾ ಮೊಬೈಲ್ ನಂಬರ್ ಬಳಸಿ ರಿಜಿಸ್ಟರ್ ಮಾಡಿಕೊಳ್ಳಿ.
- ಹಂತ 3: HDFC Bank Parivartan ECSS Scholarship 2026-27 ಲಿಂಕ್ ಅನ್ನು ಹುಡುಕಿ Apply Now ಬಟನ್ ಮೇಲೆ ಕ್ಲಿಕ್ ಮಾಡಿ.
- ಹಂತ 4: ಆನ್ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾದ ಎಲ್ಲಾ ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
- ಹಂತ 5: ಕೇಳಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ಸರಿಯಾದ ಫಾರ್ಮ್ಯಾಟ್ ನಲ್ಲಿ ಅಪ್ಲೋಡ್ ಮಾಡಿ.
- ಹಂತ 6: ಕೊನೆಯದಾಗಿ ನೀವು ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ Submit ಬಟನ್ ಮೇಲೆ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ( Application Last Date)
HDFC ಬ್ಯಾಂಕ್ ಸ್ಕಾಲರ್ಶಿಪ್ 2026-27 ಕ್ಕೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31, 2026 ಆಗಿದೆ.
ವೆಬ್ಸೈಟ್ ಕೊನೆಯ ದಿನಗಳಲ್ಲಿ ಸರ್ವರ್ ದೋಷ ಎದುರಿಸುವ ಸಾಧ್ಯತೆ ಇರುವುದರಿಂದ, ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದವರೆಗೂ ಕಾಯದೆ ಇಂದೇ ಅರ್ಜಿ ಸಲ್ಲಿಸಿ.
ವಿದ್ಯಾರ್ಥಿಗಳು ಹೆಚ್ಚಾಗಿ ಕೇಳುವ ಪ್ರಶ್ನೆಗಳು (FAQs)
1.HDFC ಬ್ಯಾಂಕ್ ಸ್ಕಾಲರ್ಶಿಪ್ 2026-27 ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಈ ಸ್ಕಾಲರ್ಶಿಪ್ಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಅಕ್ಟೋಬರ್ 31, 2026 ರವರೆಗೆ ವಿಸ್ತರಿಸಲಾಗಿದೆ.
2. ಈ ಸ್ಕಾಲರ್ಶಿಪ್ಗೆ ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು?
ಪ್ರಸ್ತುತ ಭಾರತದಲ್ಲಿ 1ನೇ ತರಗತಿಯಿಂದ 12ನೇ ತರಗತಿಯ ವರೆಗೆ ಓದುತ್ತಿರುವ ಶಾಲಾ ವಿದ್ಯಾರ್ಥಿಗಳು, ಡಿಪ್ಲೋಮ, ITI, ಸಾಮಾನ್ಯ ಪದವಿ (BA, BSC, bcom) ಮತ್ತು ವೃತ್ತಿಪರ ಕೋರ್ಸ್ ಗಳಾದ (BTech, MBBS, LLB, nursing, CA) ಹಾಗೂ ಸ್ನಾತಕೋತ್ತರ (PG )ಕೋರ್ಸ್ ಗಳನ್ನು ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
3. ಅರ್ಜಿ ಸಲ್ಲಿಸಲು ಕನಿಷ್ಠ ಎಷ್ಟು ಅಂಕಗಳನ್ನು ಪಡೆದಿರಬೇಕು?
ಅರ್ಜಿದಾರರು ತಮ್ಮ ಹಿಂದಿನ ತರಗತಿ ಅಥವಾ ಕೊನೆಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು.
4. ಕೌಟುಂಬಿಕ ಬಿಕ್ಕಟ್ಟು (Crisis Support)ಎಂದರೆ ಏನು? ಯಾರಿಗೆ ಆದ್ಯತೆ ಸಿಗುತ್ತದೆ?
ಕಳೆದ 3 ವರ್ಷಗಳಲ್ಲಿ ಕುಟುಂಬದಲ್ಲಿ ಗಳಿಸುವ ಪ್ರಮುಖ ಸದಸ್ಯರನ್ನು ಕಳೆದುಕೊಂಡವರು, ಪೋಷಕರು ಉದ್ಯೋಗ ಕಳೆದುಕೊಂಡವರು, ಅಥವಾ ಪೋಷಕರು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು ಆರ್ಥಿಕ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಈ ಯೋಜನೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
5. ಕುಟುಂಬದ ವಾರ್ಷಿಕ ಆದಾಯದ ಮಿತಿ ಎಷ್ಟಿರಬೇಕು?
ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯವು ₹2.5 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
6. ಈ ಯೋಜನೆಯಡಿ ಗರಿಷ್ಠ ಎಷ್ಟು ವಿದ್ಯಾರ್ಥಿ ವೇತನ ಸಿಗುತ್ತದೆ?
ವಿದ್ಯಾರ್ಥಿಗಳು ಓದುತ್ತಿರುವ ಕೋರ್ಸ್ ಆಧಾರದ ಮೇಲೆ ವಾರ್ಷಿಕವಾಗಿ ಕನಿಷ್ಠ ₹15,000 ರಿಂದ ಗರಿಷ್ಠ ₹75,000 ವರೆಗೆ ಸ್ಕಾಲರ್ಶಿಪ್ ಮತ್ತು ಸಿಗುತ್ತದೆ.
7. ಈ ಸ್ಕಾಲರ್ಶಿಪ್ಗೆ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದೇ?
ಇಲ್ಲ. ಈ ಸ್ಕಾಲರ್ಶಿಪ್ಗೆ ಆಫ್ಲೈನ್ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಅರ್ಹ ವಿದ್ಯಾರ್ಥಿಗಳು Buddy4study ಪೋರ್ಟಲ್ ಅಥವಾ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.
8. ಈ ಸ್ಕಾಲರ್ಶಿಪ್ ಹಣವನ್ನು ಹೇಗೆ ವಿತರಿಸಲಾಗುತ್ತದೆ?
ಆಯ್ಕೆಯಾದ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಮೊತ್ತವನ್ನು ನೇರವಾಗಿ ಅವರ ಅಥವಾ ಅವರ ಪೋಷಕರ ಬ್ಯಾಂಕ್ ಖಾತೆಗೆ (Direct Benifit Transfer -DBT) ಜಮಾ ಮಾಡಲಾಗುತ್ತದೆ.
9. ಒಬ್ಬರೇ ಪೋಷಕರನ್ನು ಹೊಂದಿರುವ ಅಥವಾ ಅನಾಥ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದೇ?
ಖಂಡಿತವಾಗಿ ಸಲ್ಲಿಸಬಹುದು. ಸಿಂಗಲ್ ಪೇರೆಂಟ್ ಇರುವ ಮಕ್ಕಳಿಗೆ, ಅನಾಥ ಮಕ್ಕಳಿಗೆ ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೆ ಈ ಯೋಜನೆಯಲ್ಲಿ ವಿಶೇಷ ಆದ್ಯತೆ ಮತ್ತು ರಿಯಾಯಿತಿ ನೀಡಲಾಗುತ್ತದೆ.
10. ಡಿಸ್ಟೆನ್ಸ್ ಎಜುಕೇಶನ್ (ಮುಕ್ತ ವಿಶ್ವ ವಿದ್ಯಾಲಯ/Correspondence) ಓದುತ್ತಿರುವವರು ಅರ್ಹರೇ?
ಇಲ್ಲ, ಕೇವಲ ಮಾನ್ಯತೆ ಪಡೆದ ಶಾಲೆ ಅಥವಾ ಕಾಲೇಜುಗಳಲ್ಲಿ ರೆಗ್ಯುಲರ್ ಕೋರ್ಸ್ ಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಈ ಸ್ಕಾಲರ್ಶಿಪ್ ಅನ್ವಯಿಸುತ್ತದೆ.
11. ನಾನು ಈಗಾಗಲೇ ಬೇರೆ ಸರ್ಕಾರಿ ಸ್ಕಾಲರ್ಶಿಪ್ ಪಡೆಯುತ್ತಿದ್ದರೆ, ಇದಕ್ಕೆ ಅರ್ಜಿ ಸಲ್ಲಿಸಬಹುದೇ?
ಹೌದು. ಅರ್ಜಿ ಸಲ್ಲಿಸಬಹುದು. ಆದರೆ ಎಚ್ ಡಿ ಎಫ್ ಸಿ ಬ್ಯಾಂಕ್ ನಿಯಮಾವಳಿಗಳ ಪ್ರಕಾರ, ಬಿಕ್ಕಟ್ಟಿನ ಆಧಾರದ ಮೇಲೆ ಆಯ್ಕೆ ಮಾಡುವಾಗ ಬೇರೆ ಯಾವುದೇ ಆರ್ಥಿಕ ಸಹಾಯ ಪಡೆಯದ ಬಡ ವಿದ್ಯಾರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ.
12. ಅರ್ಜಿ ಸಲ್ಲಿಸಿದ ನಂತರ ಸೆಲೆಕ್ಷನ್ ಪ್ರಕ್ರಿಯೆ ಹೇಗೆ ನಡೆಯುತ್ತದೆ?
HDFC ಬ್ಯಾಂಕ್ ಸ್ಕಾಲರ್ಶಿಪ್ 2026-27 ಕ್ಕೆ ಅರ್ಜಿ ಸಲ್ಲಿಸಿದ ನಂತರ ಮೊದಲ ಹಂತದಲ್ಲಿ ನಿಮ್ಮ ಆದಾಯ ಮತ್ತು ಅಂಕಗಳ ಆಧಾರದ ಮೇಲೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ. ಎರಡನೇ ಹಂತದಲ್ಲಿ ಟೆಲಿಫೋನಿಕ್ ಇಂಟರ್ವ್ಯೂ (Telephonic interview) ಇರುತ್ತದೆ ಮತ್ತು ದಾಖಲೆಗಳ ಪರಿಶೀಲನೆ (Documents Verification) ನಡೆಸಿ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.
13. ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇದೆಯೇ?
ಇಲ್ಲ,HDFC ಬ್ಯಾಂಕ್ ಸ್ಕಾಲರ್ಶಿಪ್ 2026-27 ಕ್ಕೆ ಅರ್ಜಿ ಸಲ್ಲಿಸುವುದು ಸಂಪೂರ್ಣವಾಗಿ ಉಚಿತವಾಗಿದೆ. ಯಾವುದೇ ವ್ಯಕ್ತಿ ಅಥವಾ ಏಜೆನ್ಸಿಗೆ ಹಣ ನೀಡುವ ಅಗತ್ಯವಿಲ್ಲ.
ಇದನ್ನು ಓದಿ
