Sujnananidhi Scholarship 2026-27 : ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಧರ್ಮಸ್ಥಳ ಯೋಜನೆಯ ಆರ್ಥಿಕ ನೆರವು! Important ಮಾಹಿತಿ ಇಲ್ಲಿದೆ.

Sujnananidhi Scholarship 2026-27Sujnananidhi Scholarship 2026-27 : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ (SKDRDP) ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ 2026-27 ಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ ₹ 1,000 ವರೆಗೆ ಶಿಷ್ಯವೇತನ ಪಡೆಯಲು ಅರ್ಹತೆ, ಬೇಕಾಗುವ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ಇಲ್ಲಿ ತಿಳಿಯೋಣ. 

ಶಿಕ್ಷಣವು ಪ್ರತಿಯೊಬ್ಬ ವಿದ್ಯಾರ್ಥಿಯ ಭವಿಷ್ಯವನ್ನು ರೂಪಿಸುವ ಪ್ರಮುಖ ಅಸ್ತ್ರವಾಗಿದೆ. ಆದರೆ ಇಂದಿನ ದಿನಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ನರ್ಸಿಂಗ್ ಹಾಗೂ ಇತರ ವೃತ್ತಿಪರ ಕೋರ್ಸ್ ಗಳ ಶುಲ್ಕವನ್ನು ಭರಿಸುವುದು ಅನೇಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ದೊಡ್ಡ ಸವಾಲಾಗಿದೆ. ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳ ಕನಸಿಗೆ ರೆಕ್ಕೆ ನೀಡಲು ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ವತಿಯಿಂದ ” ಸುಜ್ಞಾನ ನಿಧಿ ಶಿಷ್ಯವೇತನ” (Sujnananidhi Scholarship) ಎಂಬ ಮಹತ್ವಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ನೀವು ಅಥವಾ ನಿಮ್ಮ ಪರಿಚಯದ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಈ ವಿದ್ಯಾರ್ಥಿ ವೇತನಕ್ಕೆ ಹೇಗೆ ಅರ್ಜಿ ಸಲ್ಲಿಸಬೇಕು?, ಯಾರೆಲ್ಲ ಅರ್ಹರು? ಎಷ್ಟು ಹಣ ಸಿಗುತ್ತದೆ ಎಂಬ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ತಿಳಿಯೋಣ.

ಸುಜ್ಞಾನ ನಿಧಿ ವಿದ್ಯಾರ್ಥಿ ವೇತನ ಎಂದರೇನು? 

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘಗಳ (SHG) ಸದಸ್ಯರ ಮಕ್ಕಳ ಉನ್ನತ ಹಾಗೂ ತಾಂತ್ರಿಕ ಶಿಕ್ಷಣವನ್ನು ಪ್ರೋತ್ಸಾಹಿಸಲು ಆರಂಭಿಸಲಾದ ಯೋಜನೆಯೇ ಸುಜ್ಞಾನ ನಿಧಿ. ಈ ಯೋಜನೆಯಡಿ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ಕೋರ್ಸ್ ಮುಗಿಯುವವರೆಗೂ ಪ್ರತಿ ತಿಂಗಳು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವಿದ್ಯಾರ್ಥಿ ವೇತನವನ್ನು ಜಮೆ ಮಾಡಲಾಗುತ್ತದೆ.

Sujnananidhi Scholarship 2026-27 : ವಿದ್ಯಾರ್ಥಿವೇತನದ ಮೊತ್ತ ಎಷ್ಟು?

ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಂಡಿರುವ ಕೋರ್ಸ್ ಗೆ ಅನುಗುಣವಾಗಿ ಮಾಸಿಕ ಶಿಷ್ಯವೇತನವನ್ನು ನಿಗದಿಪಡಿಸಲಾಗಿದೆ.

  • ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್ಗಳು : MBBS, BDS, BAMS, BHMS, BE,B.Tech ಮುಂತಾದ ಕೋರ್ಸ್ ಗಳನ್ನು ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹1000 (ವರ್ಷಕ್ಕೆ ₹12,000) ನೀಡಲಾಗುತ್ತದೆ.
  • ಇತರೆ ವೃತ್ತಿಪರ ಮತ್ತು ತಾಂತ್ರಿಕ ಕೋರ್ಸ್ ಗಳು : ITI, diploma, nursing,b.ed , D.ed , Paramedical  ಮುಂತಾದ ಕೋರ್ಸ್ ಗಳ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹400 (₹4,800) ನೀಡಲಾಗುತ್ತದೆ.

(ಗಮನಿಸಿ: Sujnananidhi Scholarship 2026-27 ಈ ಮೊತ್ತವನ್ನು ಪಡೆಯಲು ವಿದ್ಯಾರ್ಥಿಗಳು ಪ್ರತಿ ವರ್ಷ ತಮ್ಮ ಶಿಷ್ಯವೇತನವನ್ನು ಕಡ್ಡಾಯವಾಗಿ ನವೀಕರಣ (Renewal) ಮಾಡಿಸಿಕೊಳ್ಳಬೇಕು.)

ಅರ್ಜಿ ಸಲ್ಲಿಸಲು ಪ್ರಮುಖ ದಿನಾಂಕಗಳು? 

Sujnananidhi Scholarship 2026-27 ಕ್ಕೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ದಿನಾಂಕಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

  • ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ : ಅಕ್ಟೋಬರ್ 15, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಮಾರ್ಚ್ 31, 2027

Sujnananidhi Scholarship 2026-27 : ಯಾರೆಲ್ಲ ಅರ್ಜಿ ಸಲ್ಲಿಸಬಹುದು? 

Sujnananidhi Scholarship 2026-27 ಈ ವಿದ್ಯಾರ್ಥಿ ವೇತನ ಪಡೆಯಲು ವಿದ್ಯಾರ್ಥಿಗಳು ಈ ಕೆಳಗಿನ ನಿಯಮಗಳನ್ನು ಪೂರೈಸಿರಬೇಕು.

  1. ಸಂಘದ ಸದಸ್ಯತ್ವ: ಅರ್ಜಿದಾರರ ಪೋಷಕರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಗಾತವ ಪ್ರಗತಿ ಬಂಧು ಸಂಘದ ಸಕ್ರಿಯ ಸದಸ್ಯರಾಗಿರಬೇಕು. ಸಂಘವು ಉತ್ತಮ ಶ್ರೇಣಿಯಲ್ಲಿ (S,A+,A or B ಗ್ರೇಡ್) ಕಾರ್ಯನಿರ್ವಹಿಸುತ್ತಿರಬೇಕು.
  2. ಕುಟುಂಬದ ಮಿತಿ : ಬಿಪಿಎಲ್ (BPL) ಪಡಿತರ ಚೀಟಿ ಹೊಂದಿರುವ ಕುಟುಂಬದ ಒಂದು ಮಗುವಿಗೆ ಮಾತ್ರ ಈ ಸೌಲಭ್ಯ ದೊರೆಯುತ್ತದೆ. ಹೊಸ ಅರ್ಜಿಗಳಲ್ಲಿ ವಿದ್ಯಾರ್ಥಿನಿಯರಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
  3. ಶೈಕ್ಷಣಿಕ ಅರ್ಹತೆ : ವಿದ್ಯಾರ್ಥಿಯು ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು ಹಾಗೂ ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
  4. ಉತ್ತೀರ್ಣ ಕಡ್ಡಾಯ : ಮುಂದಿನ ವರ್ಷಗಳಿಗೆ ವಿದ್ಯಾರ್ಥಿ ವೇತನ ಮುಂದುವರೆಯಲು (Renewal) ವಿದ್ಯಾರ್ಥಿಯು ಹಿಂದಿನ ಶೈಕ್ಷಣಿಕ ವರ್ಷದ ಎಲ್ಲಾ ವಿಷಯಗಳಲ್ಲಿ ಉತ್ತೀರ್ಣರಾಗಿರಬೇಕು.

ಯಾವ ಕೋರ್ಸ್ ಗಳಿಗೆ ಈ ಸ್ಕಾಲರ್ಶಿಪ್ ಸಿಗುತ್ತದೆ? 

ಸಾಮಾನ್ಯ ಪದವಿ (BA, B.com, BSC) ಹೊರತುಪಡಿಸಿ ಉದ್ಯೋಗ ಆಧಾರಿತ ಮತ್ತು ತಾಂತ್ರಿಕ ಕೋರ್ಸ್ ಗಳಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.

  • ವೈದ್ಯಕೀಯ ವಿಭಾಗ : MBBS, BDS, BAMS, BHMS,B.Pharm, D.Pharm, Pharm.D, B.sc Nursing, GNM, Physiotherapy , Paramedical, Lab Tecnician.
  • ತಾಂತ್ರಿಕ ಮತ್ತು ಕೃಷಿ ವಿಭಾಗ : B.E , B.Tech, Diploma, ITI, B.sc Agriculture, Horticulture, Forestry, Fisheries, B.V.sc (ಪಶು ವೈದ್ಯಕೀಯ)
  • ಇತರೆ ವೃತ್ತಿಪರ ಕೋರ್ಸ್ ಗಳು : MBA, LLB,B.ed, D.ed , M.ed, B.voc, B.sc forensic science, CA articleship.

ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು (Required Documents)

Sujnananidhi Scholarship 2026-27 ಕ್ಕೆ ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ.

  • ಸುಜ್ಞಾನ ನಿಧಿ ವಿದ್ಯಾರ್ಥಿ ವೇತನದ ಮನವಿ ಪತ್ರ (ನಮೂನೆ-1) ಮತ್ತು ಕಾಲೇಜು ದೃಢೀಕರಣ ಪತ್ರ (ನಮೂನೆ -2).
  • ಎಸ್ ಎಸ್ ಎಲ್ ಸಿ ಅಂಕಪಟ್ಟಿ ಹಾಗೂ ಹಿಂದಿನ ವರ್ಷದ ತೇರ್ಗಡೆಯಾದ ಅಂಕಪಟ್ಟಿ.
  • ಪ್ರಸ್ತುತ ವರ್ಷ ಕಾಲೇಜಿಗೆ ದಾಖಲಾದ ಶುಲ್ಕಪಾವತಿ ರಶೀದಿ (Fee Receipt)
  • ವಿದ್ಯಾರ್ಥಿಯ ಆಧಾರ್ ಕಾರ್ಡ್ ಪ್ರತಿ.
  • ಕುಟುಂಬದ ಬಿಪಿಎಲ್ ಪಡಿತರ ಚೀಟಿ ಪ್ರತಿ. (Ration Card)
  • ವಿದ್ಯಾರ್ಥಿಯ ಹೆಸರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಖಾತೆಯ ಪಾಸ್ ಬುಕ್ ಜೆರಾಕ್ಸ್ (ಆಧಾರ್ ಲಿಂಕ್ ಆಗಿರಬೇಕು.)
  • ಪೋಷಕರು ಸದಸ್ಯರಾಗಿರುವ ಸಂಘದ ನಿರ್ಣಯ (Resolution Book)ಪುಸ್ತಕದ ಪ್ರತಿ.

ಅರ್ಜಿ ಸಲ್ಲಿಸುವ ವಿಧಾನ ಹೇಗೆ ? (How To Apply)

  1. ಮೊದಲಿಗೆ ನಿಮ್ಮ ವ್ಯಾಪ್ತಿಯ SKDRDP ತಾಲೂಕು ಯೋಜನಾ ಕಚೇರಿಗೆ ಭೇಟಿ ನೀಡಿ ಅಥವಾ ಅಧಿಕೃತ ವೆಬ್ಸೈಟ್ skdrdpindia.org ಮೂಲಕ ನಿಗದಿತ ಅರ್ಜಿ ನಮೂನೆಗಳನ್ನು (ನಮೂನೆ -1 ಮತ್ತು ನಮೂನೆ-2) ಪಡೆಯಿರಿ.
  2. ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ, ಕಾಲೇಜಿನ ಪ್ರಾಂಶುಪಾಲರಿಂದ ದೃಡೀಕರಣ ಸಹಿ ಪಡೆಯಿರಿ.
  3. ಪೋಷಕರು ಸದಸ್ಯರಾಗಿರುವ ಸ್ವಸಹಾಯ ಸಂಘದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಸಹಿ ಪಡೆಯಿರಿ.
  4. ಭರ್ತಿ ಮಾಡಿದ ಅರ್ಜಿಯೊಂದಿಗೆ ಎಲ್ಲಾ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ಕೊನೆಯ ದಿನಾಂಕದ ಒಳಗಾಗಿ ನಿಮ್ಮ ತಾಲೂಕಿನ SKDRDP  ಯೋಜನಾ ಕಚೇರಿಗೆ ನೇರವಾಗಿ ಸಲ್ಲಿಸಿ.

ಸಹಾಯವಾಣಿ : ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ಗೊಂದಲಗಳಿದ್ದರೆ ಹತ್ತಿರದ ಸೇವಾ ಪ್ರತಿನಿಧಿಗಳನ್ನು ಸಂಪರ್ಕಿಸಿ ಅಥವಾ ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆ 08256-277215 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.

ಇದನ್ನು ಓದಿ

Bank Of Baroda Jobs 2026 : ಒಟ್ಟು 837 ವೆಲ್ತ್ ಮ್ಯಾನೇಜ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಪದವಿ ವಿದ್ಯಾರ್ಥಿಗಳಿಗೆ Important update.

Sujnananidhi Scholarship 2026-27 : FAQs 

1. Sujnananidhi Scholarship 2026-27 ಕ್ಕೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದೇ? 

ಇಲ್ಲ, ಈ ವಿದ್ಯಾರ್ಥಿ ವೇತನಕ್ಕೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು SKDRDP ಅಧಿಕೃತ ವೆಬ್ಸೈಟ್ ಅಥವಾ ತಾಲೂಕು ಕಚೇರಿಯಿಂದ ಅರ್ಜಿ ನಮೂನೆಗಳನ್ನು (ನಮೂನೆ-1 ಮತ್ತು ನಮೂನೆ-2) ಪಡೆದು, ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ತಾಲೂಕು ಯೋಜನಾ ಕಚೇರಿಗೆ ನೇರವಾಗಿ ಸಲ್ಲಿಸಬೇಕು.

2. ಸಾಮಾನ್ಯ ಪದವಿ (BA, B.com, B.sc) ಓದುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಹರೆ? 

ಇಲ್ಲ, ಸುಜ್ಞಾನ ನಿಧಿ ವಿದ್ಯಾರ್ಥಿ ವೇತನವು ಕೇವಲ ತಾಂತ್ರಿಕ ಮತ್ತು ವೃತ್ತಿಪರ ಕೋರ್ಸ್ ಗಳಿಗೆ ಮಾತ್ರ ಸೀಮಿತವಾಗಿದೆ. ಸಾಮಾನ್ಯ ಪದವಿ ಕೋರ್ಸ್ ಗಳಿಗೆ ಇದು ಅನ್ವಯಿಸುವುದಿಲ್ಲ.

3. ಒಂದು ಕುಟುಂಬದ ಇಬ್ಬರು ಮಕ್ಕಳು ಈ ವಿದ್ಯಾರ್ಥಿ ವೇತನ ಪಡೆಯಬಹುದೇ? 

ಇಲ್ಲ, ನಿಯಮಗಳ ಪ್ರಕಾರ ಬಿಪಿಎಲ್ (BPL) ಪಡಿತರ ಚೀಟಿ ಹೊಂದಿರುವ ಒಂದು ಅರ್ಹ ಕುಟುಂಬದ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ.

4. ಸರ್ಕಾರದ ಇತರೆ ವಿದ್ಯಾರ್ಥಿ ವೇತನ ( SSP, NSP) ಪಡೆಯುತ್ತಿದ್ದರೆ, ಸುಜ್ಞಾನ ನಿಧಿ ಸ್ಕಾಲರ್ಶಿಪ್ ಸಿಗುತ್ತದೆಯೇ?

ಹೌದು, ನೀವು ಸರ್ಕಾರದ ಇತರೆ ವಿದ್ಯಾರ್ಥಿ ವೇತನಗಳನ್ನು ಪಡೆಯುತ್ತಿದ್ದರೂ ಸಹ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಎಲ್ಲಾ ಅರ್ಹತಮಾನದಂಡಗಳನ್ನು ಪೂರೈಸಿದ್ದರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

5. ವಿದ್ಯಾರ್ಥಿ ವೇತನದ ಹಣ ಎಷ್ಟು ದಿನಕ್ಕೊಮ್ಮೆ ಬ್ಯಾಂಕ ಖಾತೆಗೆ ಜಮೆಯಾಗುತ್ತದೆ? 

ವಿದ್ಯಾರ್ಥಿ ವೇತನವನ್ನು ಆಧಾರದ ಮೇಲೆ ಮಾಸಿಕ ₹400 ಅಥವಾ ₹1,000 ರಂತೆ ನಿಗದಿಪಡಿಸಲಾಗಿದ್ದು, ಪ್ರತಿ ವರ್ಷ ವಿದ್ಯಾರ್ಥಿಗಳು ತಮ್ಮ ಅಂಕಪಟ್ಟಿ ಸಲ್ಲಿಸಿ ನವೀಕರಣ (Renewal) ಮಾಡಿಸಿದ ನಂತರ ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

6. ಪರೀಕ್ಷೆಯಲ್ಲಿ ಒಂದು ವಿಷಯ ಅನುತ್ತೀರ್ಣವಾದರೆ (Backlog )ಮುಂದಿನ ವರ್ಷ ಸ್ಕಾಲರ್ಶಿಪ್ ಸಿಗುತ್ತದೆಯೇ?

ಇಲ್ಲ, ಪ್ರತಿ ವರ್ಷ ವಿದ್ಯಾರ್ಥಿ ವೇತನ ನವೀಕರಣವಾಗಲು ವಿದ್ಯಾರ್ಥಿಯು ಹಿಂದಿನ ಶೈಕ್ಷಣಿಕ ವರ್ಷದ ಎಲ್ಲಾ ವಿಷಯಗಳಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು.

7. ಅರ್ಜಿ ಸಲ್ಲಿಸುವಾಗ ಯಾವ ಬ್ಯಾಂಕ್ ಖಾತೆ ನೀಡಬೇಕು? 

ವಿದ್ಯಾರ್ಥಿಯ ಸ್ವಂತ ಹೆಸರಿನಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಖಾತೆಯ (ಆಧಾರ್ ಲಿಂಕ್ ಆಗಿರುವ) ವಿವರಗಳನ್ನು ಮಾತ್ರ ನೀಡಬೇಕು. ಪೋಷಕರ ಬ್ಯಾಂಕ್ ಖಾತೆಯನ್ನು ನೀಡಲು ಅವಕಾಶವಿರುವುದಿಲ್ಲ.

ಕೊನೆಯ ಮಾತು : ಆರ್ಥಿಕ ಸಂಕಷ್ಟದಿಂದ ಯಾವೊಬ್ಬ ಪ್ರತಿಭಾವಂತ ವಿದ್ಯಾರ್ಥಿಯು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬುದು ಸುಜ್ಞಾನ ನಿಧಿ ಯೋಜನೆಯ ಆಶಯವಾಗಿದೆ. ಅರ್ಹ ವಿದ್ಯಾರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಿ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಹಂಚಿಕೊಳ್ಳಿ.

ಇದೆ ರೀತಿಯ ಹೆಚ್ಚಿನ ವಿದ್ಯಾರ್ಥಿ ವೇತನದ ತಕ್ಷಣ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ ಇದರಿಂದ ನಿಮಗೆ ಸರ್ಕಾರಿ ಯೋಜನೆಗಳು ಹಾಗೂ ಉದ್ಯೋಗಗಳ ಮಾಹಿತಿ ತಕ್ಷಣವೇ ಸಿಗುತ್ತದೆ.

ಇದನ್ನು ಓದಿ

KSRTC Recruitment 2026 : ಹೊರಗುತ್ತಿಗೆ ಚಾಲಕರು ಮತ್ತು ತಾಂತ್ರಿಕ ಸಹಾಯಕರ ಹುದ್ದೆಗಳ ನೇಮಕಾತಿಯ ಬಗ್ಗೆ Important update.

Leave a Comment