Bank Of Baroda Jobs 2026 : ಬ್ಯಾಂಕ್ ಆಫ್ ಬರೋಡ (Bank Of Baroda) ಇತ್ತೀಚೆಗೆ 837 ವೆಲ್ತ್ ಮ್ಯಾನೇಜ್ಮೆಂಟ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ. ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ವಿವರ ಇಲ್ಲಿದೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಪ್ರತಿಯೊಬ್ಬರಿಗೂ ಇಲ್ಲಿದೆ ಒಂದು ಸುವರ್ಣ ಅವಕಾಶ. ಭಾರತದ ಮುಂಚೂಣಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದಾದ ಬ್ಯಾಂಕ್ ಆಫ್ ಬರೋಡ (Bank Of Baroda) ತನ್ನ ವೆಲ್ತ್ ಮ್ಯಾನೇಜ್ಮೆಂಟ್ ಸರ್ವಿಸಸ್ (WMS) ವಿಭಾಗದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಪ್ರಕಟಣೆಯನ್ನು ಬಿಡುಗಡೆ ಮಾಡಿದೆ.
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಲೇಖನದಲ್ಲಿ ಹುದ್ದೆಗಳ ವಿವರ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.
Bank Of Baroda Jobs 2026 : ಪ್ರಮುಖ ಮುಖ್ಯಾಂಶಗಳು
- ಸಂಸ್ಥೆಯ ಹೆಸರು : ಬ್ಯಾಂಕ್ ಆಫ್ ಬರೋಡ (Bank Of Baroda)
- ಹುದ್ದೆಗಳ ವರ್ಗ : ವೆಲ್ತ್ ಮ್ಯಾನೇಜ್ಮೆಂಟ್ ಸರ್ವಿಸಸ್ (WMS)
- ಒಟ್ಟು ಹುದ್ದೆಗಳು : 837 ಹುದ್ದೆಗಳು
- ಅರ್ಜಿ ಸಲ್ಲಿಸುವ ವಿಧಾನ : online ಆನ್ಲೈನ್
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 4 ನವೆಂಬರ್ 2026.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24 ನವೆಂಬರ್ 2026
ಹುದ್ದೆಗಳ ವಿವರಗಳು (Vacancy Details)
Bank Of Baroda Jobs 2026 ಈ ಬಾರಿ ಒಟ್ಟು 837 ಹುದ್ದೆಗಳನ್ನು ಪ್ರಕಟಿಸಿದ್ದು, ವಿವಿಧ ಹುದ್ದೆಗಳ ಹಂಚಿಕೆ, ಈ ಕೆಳಗಿನಂತಿದೆ.
- Senior Relationship Manager ( Deputy Manager) : 791 ಹುದ್ದೆಗಳು
- Territory Head (Assistant Vice President -|) : 35 ಹುದ್ದೆಗಳು
- Group Head (Assistant Vice President -||) : 8 ಹುದ್ದೆಗಳು
- Investment Product Manager : 2
- Head Investment (Assistant Vice President -||) : 1 ಹುದ್ದೆ
(ಗಮನಿಸಿ : ಒಟ್ಟು ಹುದ್ದೆಗಳಲ್ಲಿ SC ಗೆ 124, ST ಗೆ 61, OBC ಗೆ 224 , EWS ಗೆ 82, ಮತ್ತು ಸಾಮಾನ್ಯ ವರ್ಗಕ್ಕೆ (UR) 346 ಹುದ್ದೆಗಳನ್ನು ಮೀಸಲಿಡಲಾಗಿದೆ.)
ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ (Age Limit & Relaxation)
Bank Of Baroda Jobs 2026 ಗೆ 1/11/2026 ರ ಅನ್ವಯ ಹುದ್ದೆಗಳಿಗೆ ನಿಗದಿಪಡಿಸಲಾದ ಗರಿಷ್ಠ ವಯೋಮಿತಿಯ ಹೊರತಾಗಿ, ಸರ್ಕಾರದ ನಿಯಮಾವಳಿಗಳ ಪ್ರಕಾರ ಈ ಕೆಳಗಿನಂತೆ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
- SC, ST ಅಭ್ಯರ್ಥಿಗಳಿಗೆ : 5 ವರ್ಷಗಳು
- OBC (Non Creamy Layer) ಅಭ್ಯರ್ಥಿಗಳಿಗೆ 3 ವರ್ಷಗಳು
- ವಿಕಲಚೇತನ ಅಭ್ಯರ್ಥಿಗಳಿಗೆ (PWD ) : 10 ರಿಂದ 15 ವರ್ಷಗಳು (ವರ್ಗದ ಆಧಾರದ ಮೇಲೆ)
- ಮಾಜಿ ಸೈನಿಕರು (Ex Servicemen) : 5 ರಿಂದ 10 ವರ್ಷಗಳು.
Bank Of Baroda Jobs 2026 : ಅರ್ಜಿ ಶುಲ್ಕದ ವಿವರಗಳು
Bank Of Baroda Jobs 2026 ಕ್ಕೆ ಅಭ್ಯರ್ಥಿಗಳು ಆನ್ಲೈನ್ ಬ್ಯಾಂಕಿಂಗ್, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್, UPI ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬಹುದು.
- ಸಾಮಾನ್ಯ (General) /OBC/EWS ಅಭ್ಯರ್ಥಿಗಳಿಗೆ : ₹850 (ಅರ್ಜಿ ಶುಲ್ಕ+ಇಂಟಿಮೇಶನ್ ಚಾರ್ಜಸ್)
- SC, ST, pwbd, ಮಹಿಳಾ ಅಭ್ಯರ್ಥಿಗಳಿಗೆ : ₹175 (ಕೇವಲ ಇಂಟಿಮೇಷನ್ ಚಾರ್ಜಸ್)
ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? (Selection Process)
Bank Of Baroda Jobs 2026 ಈ ಈ ನೇಮಕಾತಿಯನ್ನು ಈ ಕೆಳಗಿನ ಹಂತಗಳನ್ನು ಅನುಸರಿಸಿಕೊಂಡು ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.
- ಅರ್ಜಿ ಪರಿಶೀಲನೆ (Application Scrutiny): ಅಭ್ಯರ್ಥಿಗಳು ಸಲ್ಲಿಸಿದ ಅರ್ಜಿಗಳನ್ನು ಮೊದಲ ಹಂತದಲ್ಲಿ ಪರಿಶೀಲಿಸಲಾಗುತ್ತದೆ.
- ವಿವಿಧ ಪರೀಕ್ಷೆಗಳು (Online Written Test) : ಹುದ್ದೆಯ ಅಗತ್ಯಕ್ಕೆ ಅನುಗುಣವಾಗಿ ಆನ್ಲೈನ್ ಪರೀಕ್ಷೆ (Online Test), ಸೈಕೊ ಮೆಟ್ರಿಕ್ ಪರೀಕ್ಷೆ (Psychometric Test) ಅಥವಾ ಬ್ಯಾಂಕ್ ಸೂಕ್ತವೆಂದು ಭಾವಿಸುವ ಯಾವುದೇ ಪರೀಕ್ಷೆಯನ್ನು ನಡೆಸಬಹುದು.
- ಸೈಕೊ ಮೆಟ್ರಿಕ್ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನ (Psychometric Test & Personal Interview) ಅಭ್ಯರ್ಥಿಯ ವ್ಯಕ್ತಿತ್ವ, ಸಂವಹನ ಕೌಶಲ್ಯ (Communication) , ಸಮಸ್ಯೆ ಬಗೆಹರಿಸುವ ಸಾಮರ್ಥ್ಯ (Problem Solving) ದಕ್ಷತೆ, ದೇಶದ ಯಾವುದೇ ಭಾಗದಲ್ಲಿ ಕೆಲಸ ಮಾಡಲು ಇರುವ ಸಿದ್ಧತೆ ಮತ್ತು ಹುದ್ದೆಗೆ ಅವರ ಸೂಕ್ತತೆಯನ್ನು ಮೌಲ್ಯಮಾಪನ ಮಾಡಲು ಈ ಪರೀಕ್ಷೆ ಅಥವಾ ವೈಯಕ್ತಿಕ ಸಂದರ್ಶನವನ್ನು ನಡೆಸಲಾಗುತ್ತದೆ.
- ಶಾರ್ಟ್ ಲಿಸ್ಟ್ ಮಾಡುವುದು : ಕೇವಲ ಕನಿಷ್ಠ ಅರ್ಹತೆಗಳನ್ನು ಹೊಂದಿರುವುದರಿಂದಲೇ ಸಂದರ್ಶನಕ್ಕೆ ಕರೆಯಲಾಗುವುದಿಲ್ಲ. ಅಭ್ಯರ್ಥಿಗಳ ವಿದ್ಯಾರ್ಹತೆ, ಸಂಬಂಧಿತ ಕೆಲಸದ ಅನುಭವ ಮತ್ತು ಕೌಶಲ್ಯಗಳ ಆಧಾರದ ಮೇಲೆ ಸಂದರ್ಶನಕ್ಕೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.
ಗಮನಿಸಿ : ಆಯ್ಕೆ ಪ್ರಕ್ರಿಯೆಯ ಮಾನದಂಡಗಳನ್ನು ಯಾವುದೇ ಸಮಯದಲ್ಲಿ ಬದಲಾಯಿಸುವ ಅಥವಾ ಮಾರ್ಪಡಿಸುವ ಸಂಪೂರ್ಣ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿಕೊಂಡಿದೆ.
ಶೈಕ್ಷಣಿಕ ಅರ್ಹತೆ (Educational Qualification)
- ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Graduation Degree) ಪೂರ್ಣಗೊಳಿಸಿರಬೇಕು.
Bank Of Baroda Jobs 2026 ಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಅರ್ಹ ಅಭ್ಯರ್ಥಿಗಳು ಈ ಕೆಳಗಿನ ಹಂತಗಳನ್ನು ಅನುಸರಿಸಿ ಆನ್ಲೈನ್ ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
- ಮೊದಲು ಬ್ಯಾಂಕಿನ ಅಧಿಕೃತ ವೆಬ್ಸೈಟ್ನ ಕೆರಿಯರ್ ಪುಟಕ್ಕೆ ಲಾಗಿನ್ ಆಗಿ.
- “Current Opportunities”ವಿಭಾಗದಲ್ಲಿ WMS Personal ನೇಮಕಾತಿ ಲಿಂಕ್ ಕ್ಲಿಕ್ ಮಾಡಿ. “Apply Online” ಆಯ್ಕೆ ಮಾಡಿ.
- “Click here For New Registration” ಮೂಲಕ ನಿಮ್ಮ ಹೆಸರು, ಇ-ಮೇಲ್ ಮತ್ತು ಮೊಬೈಲ್ ಸಂಖ್ಯೆ ನೀಡಿ ನೊಂದಾಯಿಸಿಕೊಳ್ಳಿ.
- ನಿಮ್ಮ ರಿಜಿಸ್ಟ್ರೇಷನ್ ಐಡಿ ಬಳಸಿ ಲಾಗಿನ್ ಆಗಿ, ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ನಿಖರವಾಗಿ ತುಂಬಿ.
- ನಿಮ್ಮ ಫೋಟೋ, ಸಹಿ, Resume ಮತ್ತು ಅನುಭವದ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ನಿಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ ಅರ್ಜಿ ಸಲ್ಲಿಕೆಯನ್ನು ಪೂರ್ಣಗೊಳಿಸಿ. (Final Submit)
- ಭರ್ತಿ ಮಾಡಿದ ಅರ್ಜಿಯ ಪ್ರಿಂಟ್ ಪ್ರತಿಯನ್ನು ಮುಂದಿನ ಉಲ್ಲೇಖಕ್ಕಾಗಿ ಸುರಕ್ಷಿತವಾಗಿಟ್ಟುಕೊಳ್ಳಿ.
ಇದನ್ನು ಓದಿ
ಮುಖ್ಯ ದಿನಾಂಕಗಳನ್ನು ನೆನಪಿಟ್ಟುಕೊಳ್ಳಿ (Important Dates)
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ :4/11/2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 24/11/2026
Bank Of Baroda Jobs 2026 : FAQs
1.Bank Of Baroda Jobs 2026 ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24 ನವೆಂಬರ್ 2026 ಆಗಿದೆ.
2. ಇದು ಕಾಯಂ ಸರ್ಕಾರಿ ಕೆಲಸವೇ ಅಥವಾ ಒಪ್ಪಂದದ ಆಧಾರ ಮೇಲಿನ ಕೆಲಸವೇ?
ಇದು ವೆಲ್ತ್ ಮ್ಯಾನೇಜ್ಮೆಂಟ್ ಸರ್ವಿಸಸ್ (WMS) ವಿಭಾಗದಲ್ಲಿ ಒಪ್ಪಂದದ ಆಧಾರದ ಮೇಲೆ (Contractual Basis) ನೇಮಕಾತಿಯಾಗಿದೆ.
3. ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಎಷ್ಟಿರುತ್ತದೆ?
SC, ST ಮತ್ತು ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹175 ಮಾತ್ರ ಇರುತ್ತದೆ.
ಕೊನೆಯ ಮಾತು : ಬ್ಯಾಂಕಿಂಗ್ ವಲಯದಲ್ಲಿ ಅತ್ಯುತ್ತಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಬಯಸುವವರಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಕೊನೆಯ ದಿನದ ವೆಬ್ಸೈಟ್ ಸರ್ವರ್ ಸಮಸ್ಯೆಯನ್ನು ತಪ್ಪಿಸಲು ಹಿಂದೆ ಅರ್ಜಿ ಸಲ್ಲಿಸಿ.
ಇದೇ ರೀತಿಯ ಹೆಚ್ಚಿನ ಸರ್ಕಾರಿ ಉದ್ಯೋಗಗಳು ಹಾಗೂ ಯೋಜನೆಗಳ ಮಾಹಿತಿ ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಫಾಲೋ ಮಾಡಿ.
ಇದನ್ನು ಓದಿ