WCD Chamarajanagar Recruitment 2026: ಚಾಮರಾಜನಗರ ಅಂಗನವಾಡಿ ನೇಮಕಾತಿ 2026ರ ಅಧಿಕೃತ ಅಧಿಸೂಚನೆ ಪ್ರಕಟ! 390 ಕಾರ್ಯಕರ್ತ ಮತ್ತು ಸಹಾಯಕಿ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಅರ್ಹತೆ ಮತ್ತು ಸಂಪೂರ್ಣ ವಿವರ ಇಲ್ಲಿದೆ.
ಚಾಮರಾಜನಗರ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು (WCD) ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 390 ಹುದ್ದೆಗಳಿಗೆ ಅರ್ಹ ಮಹಿಳಾ ಮತ್ತು ತೃತೀಯ ಲಿಂಗಿ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ.
ನೀವು ಚಾಮರಾಜನಗರ ಜಿಲ್ಲೆಯ ನಿವಾಸಿಯಾಗಿದ್ದು, ಸರ್ಕಾರಿ ವಲಯದಲ್ಲಿ ಗೌರವ ಸೇವಾ ಆಧಾರಿತ ಉದ್ಯೋಗವನ್ನು ಹುಡುಕುತ್ತಿದ್ದರೆ, ಇದು ನಿಮಗೆ ಅತ್ಯುತ್ತಮ ಅವಕಾಶವಾಗಿದೆ. ಈ ಲೇಖನದಲ್ಲಿ ವಯೋಮಿತಿ, ವಿದ್ಯಾರ್ಹತೆ, ಪ್ರಮುಖ ದಿನಾಂಕಗಳು ಮತ್ತು ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನವನ್ನು ವಿವರವಾಗಿ ನೀಡಲಾಗಿದೆ.
WCD Chamarajanagar Recruitment 2026 : ಮುಖ್ಯಾಂಶಗಳು
- ಇಲಾಖೆಯ ಹೆಸರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (WCD), ಚಾಮರಾಜನಗರ
- ಹುದ್ದೆಗಳ ಹೆಸರು : ಅಂಗನವಾಡಿ ಕಾರ್ಯಕರ್ತೆ (Workers) , ಮತ್ತು ಸಹಾಯಕಿ (Helper)
- ಒಟ್ಟು ಹುದ್ದೆಗಳ ಸಂಖ್ಯೆ : 390
- ಉದ್ಯೋಗದ ವಿಧ : ಗೌರವ ಸೇವಾ ಆಧಾರಿತ ಹುದ್ದೆಗಳು (Honorary Service)
- ಅರ್ಜಿ ಸಲ್ಲಿಸುವ ವಿಧಾನ : online (ಆನ್ಲೈನ್)
- ಅಧಿಕೃತ ವೆಬ್ಸೈಟ್ : chamarajanagar.nic.in
ಪ್ರಮುಖ ದಿನಾಂಕಗಳು (Important Dates)
WCD Chamarajanagar Recruitment 2026 ಕ್ಕೆ ಅರ್ಜಿ ಸಲ್ಲಿಸಲು ಇಚ್ಚಿಸುವ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ತಮ್ಮ ದಾಖಲೆಗಳೊಂದಿಗೆ ಆನ್ಲೈನ್ ಫಾರಮ್ ಭರ್ತಿ ಮಾಡಬೇಕಾಗುತ್ತದೆ.
- ಅಧಿ ಸೂಚನೆ ಹೊರಡಿಸಿದ ದಿನಾಂಕ : 30 ಅಕ್ಟೋಬರ್ 2026
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 5 ನವೆಂಬರ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 4 ಡಿಸೆಂಬರ್ 2026
ಹುದ್ದೆಗಳ ವಿವರ ಮತ್ತು ಹಂಚಿಕೆ (Vacancy Details)
WCD Chamarajanagar Recruitment 2026 ಚಾಮರಾಜನಗರ ಜಿಲ್ಲೆಯ ವಿವಿಧ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನೆಗಳ (CDPO) ವ್ಯಾಪ್ತಿಯಲ್ಲಿ ಹುದ್ದೆಗಳನ್ನು ಈ ಕೆಳಗಿನಂತೆ ವಿಂಗಡಿಸಲಾಗಿದೆ.
- ಅಂಗನವಾಡಿ ಕಾರ್ಯಕರ್ತೆ (Anganwadi workers) : 119 ಹುದ್ದೆಗಳು
- ಅಂಗನವಾಡಿ ಸಹಾಯಕಿ (Anganwadi Helpers) : 271 ಹುದ್ದೆಗಳು
- ಒಟ್ಟು ಖಾಲಿ ಇರುವ ಹುದ್ದೆಗಳು : 390 ಹುದ್ದೆಗಳು
WCD Chamarajanagar Recruitment 2026 : ಅರ್ಹತಾ ಮಾನದಂಡಗಳು
1. ಲಿಂಗ ಮತ್ತು ಸ್ಥಳೀಯತೆ ( Gender & Residency)
- ಈ ನೇಮಕಾತಿಗೆ ಕೇವಲ ಮಹಿಳೆಯರು ಮತ್ತು ತೃತೀಯ ಲಿಂಗಿ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಅಭ್ಯರ್ಥಿಗಳು ಕಡ್ಡಾಯವಾಗಿ ಆಯಾ ಅಂಗನವಾಡಿ ಕೇಂದ್ರವಿರುವ ವ್ಯಾಪ್ತಿಯ ಸ್ಥಳೀಯ ನಿವಾಸಿಯಾಗಿರಬೇಕು. (ಗ್ರಾಮೀಣ ಭಾಗವಾಗಿದ್ದರೆ ಅದೇ ಕಂದಾಯ ಗ್ರಾಮ, ನಗರ ಪ್ರದೇಶವಾಗಿದ್ದರೆ ಅದೇ ವಾರ್ಡ್.)
2. ವಯೋಮಿತಿ (Age Limit)
- ಕನಿಷ್ಠ ವಯಸ್ಸು : 19 ವರ್ಷ ತುಂಬಿರಬೇಕು.
- ಗರಿಷ್ಠ ವಯಸ್ಸು : 35 ವರ್ಷ ಮೀರಿರಬಾರದು.
- ವಯೋಮಿತಿ ಸಡಿಲಿಕೆ : ವಿಕಲಚೇತನ (PWD) ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಹತ್ತು ವರ್ಷಗಳ ಸಡಿಲಿಕೆ ಇರುತ್ತದೆ. (ಅಂದರೆ 45 ವರ್ಷದವರೆಗೆ ಅವಕಾಶ ನೀಡಲಾಗುತ್ತದೆ.)
3. ವಿದ್ಯಾರ್ಹತೆ ( Educational Qualification)
- ಅಂಗನವಾಡಿ ಕಾರ್ಯಕರ್ತೆ : ಕನಿಷ್ಠ ಪಿಯುಸಿ (PUC /12th)ತೇರ್ಗಡೆಯಾಗಿರಬೇಕು. ಎಸ್ ಎಸ್ ಎಲ್ ಸಿ ಯಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರಬೇಕು. (ಐಸಿಸಿಇ ಡಿಪ್ಲೋಮ, ಜೆಓಸಿ ಕೋರ್ಸ್ ಅಥವಾ ಏನ್ ಟಿಟಿ ಕೋರ್ಸ್ ಮಾಡಿದವರಿಗೆ ಬೋನಸ್ ಅಂಕಗಳ ಆದ್ಯತೆ ಇರುತ್ತದೆ.)
- ಅಂಗನವಾಡಿ ಸಹಾಯಕಿ : ಕನಿಷ್ಠ 5ನೇ ತರಗತಿ ಅಥವಾ ಎಸ್ ಎಸ್ ಎಲ್ ಸಿ (SSLC) ಉತ್ತೀರ್ಣರಾಗಿರಬೇಕು.
ಅಗತ್ಯವಿರುವ ಪ್ರಮುಖ ದಾಖಲೆಗಳು (Required Documents)
WCD Chamarajanagar Recruitment 2026 ಕ್ಕೆ ಆನ್ಲೈನ್ ಅರ್ಜಿಯನ್ನು ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಸಿದ್ಧವಾಗಿಟ್ಟುಕೊಳ್ಳಬೇಕು.
- ವಾಸ ಸ್ಥಳ ದೃಢೀಕರಣ ಪ್ರಮಾಣ ಪತ್ರ: ತಹಶೀಲ್ದಾರ್ ಅಥವಾ ಉಪತಹಸಿಲ್ದಾರ್ ಅವರಿಂದ ಪಡೆದ ಕನಿಷ್ಠ ಮೂರು ವರ್ಷಗಳ ವಾಸ ಸ್ಥಳ ಪ್ರಮಾಣ ಪತ್ರ.
- ಅಂಕಪಟ್ಟಿಗಳು : ಹುದ್ದೆಗೆ ಅನುಗುಣವಾಗಿ 5ನೇ ತರಗತಿ, ಎಸ್ ಎಸ್ ಎಲ್ ಸಿ ಅಥವಾ ಪಿಯುಸಿ ಮಾರ್ಕ್ಸ್ ಕಾರ್ಡ್.
- ವಯಸ್ಸಿನ ಪುರಾವೆ : ಜನ್ಮ ದಿನಾಂಕ ಹೊಂದಿರುವ ಎಸ್ ಎಸ್ ಎಲ್ ಸಿ ಅಂಕಪಟ್ಟಿ ಅಥವಾ ವರ್ಗಾವಣೆ ಪ್ರಮಾಣ ಪತ್ರ (TC)
- ಗುರುತಿನ ಚೀಟಿ : ಆಧಾರ್ ಕಾರ್ಡ್, ರೇಷನ್ ಕಾರ್ಡ್ ಅಥವಾ ವೋಟರ್ ಐಡಿ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ : ತಹಶೀಲ್ದಾರರಿಂದ ಪಡೆದ ಚಾಲ್ತಿಯಲ್ಲಿರುವ ಪ್ರಮಾಣ ಪತ್ರ.
- ವಿಶೇಷ ಪ್ರಮಾಣ ಪತ್ರಗಳು (ಅನ್ವಯಿಸಿದರೆ ಮಾತ್ರ) : ವಿಕಲಚೇತನ ಪ್ರಮಾಣ ಪತ್ರ, ವಿಧವೆ/ದೇವದಾಸಿ ಮಕ್ಕಳಾಗಿದ್ದರೆ/ಅನಾಥರಾಗಿದ್ದರೆ ಅದಕ್ಕೆ ಸಂಬಂಧಿಸಿದ ಇಲಾಖೆಯ ಅಧಿಕೃತ ಪತ್ರ.
ಇದನ್ನು ಓದಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How To Apply)
ಅರ್ಹ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಇಲ್ಲದೆ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ.
- ಮೊದಲು ಚಾಮರಾಜನಗರ ಜಿಲ್ಲೆಯ ಅಧಿಕೃತ ವೆಬ್ಸೈಟ್ Chamarajanagar.nic.in ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಾಲತಾಣಕ್ಕೆ ಭೇಟಿ ನೀಡಿ.
- ಮುಖಪುಟದಲ್ಲಿ ಕಂಡುಬರುವ “Anganwadi Recruitment 2026” ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ವೈಯಕ್ತಿಕ ವಿವರಗಳು, ವಿದ್ಯಾರ್ಹತೆ ಮತ್ತು ಅಂಗನವಾಡಿ ಕೇಂದ್ರದ ವಿವರಗಳನ್ನು ಸರಿಯಾಗಿ ಬರ್ತಿ ಮಾಡಿ.
- ಕೇಳಲಾದ ಎಲ್ಲಾ ಅಗತ್ಯ ದಾಖಲೆಗಳನ್ನು ನಿಗದಿತ ಸೈಜ್ ನಲ್ಲಿ ಅಪ್ಲೋಡ್ ಮಾಡಿ.
- ಎಲ್ಲ ವಿವರಗಳನ್ನು ಒಮ್ಮೆ ಮರುಪರಿಶೀಲಿಸಿ, “Submit ” ಬಟನ್ ಒತ್ತಿ.
- ಭವಿಷ್ಯದ ಉಲ್ಲೇಖಕ್ಕಾಗಿ ಸಲ್ಲಿಕೆಯಾದ ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಿ.
ಸಹಾಯವಾಣಿ ಸಂಖ್ಯೆಗಳು (Helpline Numbers)
ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ತೊಂದರೆ ಎದುರಾದಲ್ಲಿ ಅಥವಾ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಜಿಲ್ಲಾ ಸಹಾಯವಾಣಿ ಕೇಂದ್ರದ ಸಂಖ್ಯೆ 08226-222445 ಅಥವಾ 08226-224720 ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.
WCD Chamarajanagar Recruitment 2026 : FAQs
1. ಚಾಮರಾಜನಗರ ಅಂಗನವಾಡಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 4 ಡಿಸೆಂಬರ್ 2026 ಕೊನೆಯ ದಿನಾಂಕ ವಾಗಿದೆ.
2. ಈ ಹುದ್ದೆಗಳಿಗೆ ಪುರುಷರು ಅರ್ಜಿ ಸಲ್ಲಿಸಬಹುದೇ?
ಇಲ್ಲ, ಸರ್ಕಾರದ ನಿಯಮಾವಳಿಗಳ ಪ್ರಕಾರ ಕೇವಲ ಮಹಿಳೆಯರು ಮತ್ತು ತೃತೀಯ ಲಿಂಗಿ ಮಹಿಳೆಯರಿಗೆ ಮಾತ್ರ ಈ ಹುದ್ದೆಗಳಲ್ಲಿ ಅವಕಾಶವಿದೆ.
3. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಏನು?
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ ಪಿಯುಸಿ (PUC) ಪಾಸ್ ಆಗಿರಬೇಕು.
ಕೊನೆಯ ಮಾತು : ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕ ಮುಕ್ತಾಯ ಆಗುವುದರ ಒಳಗೆ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ ಅಂಗನವಾಡಿ ಹುದ್ದೆಯನ್ನು ನಿಮ್ಮದಾಗಿಸಿಕೊಳ್ಳಿ. ಇದೇ ರೀತಿಯ ಹೆಚ್ಚಿನ ಉದ್ಯೋಗಗಳ ತಕ್ಷಣ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ
ಇದನ್ನು ಓದಿ