PM Kissan Yojana Update 2026: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್, ಯೋಜನೆ ವಿಸ್ತರಣೆಗೆ ಅನುಮೋದನೆ, Important update.

WhatsAppಫಾಲೋ ಮಾಡಿ

PM Kissan Yojana Update 2026 PM Kissan Yojana Update 2026 : ಪಿಎಂ ಕಿಸಾನ್ ಯೋಜನೆ 5 ವರ್ಷ ವಿಸ್ತರಣೆ, ರೈತರಿಗೆ ಸಿಹಿ ಸುದ್ದಿ. ಬರದ ಪರಿಸ್ಥಿತಿಯ ನಡುವೆ ಕೇಂದ್ರ ಸರ್ಕಾರ ರೈತರಿಗೆ ದೊಡ್ಡ ಭರವಸೆ ನೀಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು 2030 -31 ರವರೆಗೆ ಇನ್ನು ಐದು ವರ್ಷಗಳ ಕಾಲ ಮುಂದುವರಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. 

ಇದರಿಂದ ಅರ್ಹ ರೈತ ಕುಟುಂಬಗಳಿಗೆ ವಾರ್ಷಿಕ 6,000 ನೆರವು ಮುಂದುವರೆಯಲಿದೆ. ಜುಲೈ 31, 2026ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ವಿಸ್ತರಿತ ಅವಧಿಗೆ ಒಟ್ಟು 3,15,614 ಕೋಟಿ ರೂಪಾಯಿ ಅನುದಾನ ಅನುಮೋದಿಸಲಾಗಿದೆ.

2019 ರಲ್ಲಿ ಆರಂಭವಾದ ಈ ಯೋಜನೆ ಇದುವರೆಗೂ 23 ಕಂತುಗಳಲ್ಲಿ 4.47 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ನೆರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದೆ.

PM Kissan Yojana Update 2026 : ಈ ಯೋಜನೆಯ ಮುಖ್ಯಾಂಶಗಳು 

ಅರ್ಹ ಭೂಮಾಲಿಕ ರೈತ ಕುಟುಂಬಗಳಿಗೆ ವರ್ಷಕ್ಕೆ 6,000 ರೂಪಾಯಿ ನೀಡಲಾಗುತ್ತದೆ. ಇದನ್ನು ಮೂರು ಸಮಾನ ಕಂತುಗಳಲ್ಲಿ 2,000 ರೂಪಾಯಿಗಳಂತೆ ನೇರ ಲಾಭ ವರ್ಗಾವಣೆ (DBT) ಮೂಲಕ ಆಧಾರ್ ಸೀಡ್ ಆದ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

ಇತ್ತೀಚಿನ 23ನೇ ಕಂತಿನಲ್ಲಿ 9.49 ಕೋಟಿಗಿಂತ ಹೆಚ್ಚು ರೈತರಿಗೆ ಸುಮಾರು 18,984 ಕೋಟಿ ರೂಪಾಯಿ ವಿತರಿಸಲಾಗಿದೆ.

ಮಹಿಳಾ ರೈತರು ಸಹ ಈ ಯೋಜನೆಯಿಂದ ದೊಡ್ಡ ಪ್ರಮಾಣದಲ್ಲಿ ಲಾಭ ಪಡೆದಿದ್ದಾರೆ. ಅವರಿಗೆ ಇದುವರೆಗೆ 1.06 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಹಣ ತಲುಪಿದೆ.

ಸುಮಾರು ನಾಲ್ಕರಲ್ಲಿ ಒಬ್ಬರು ಫಲಾನುಭವಿ ಮಹಿಳೆಯರಾಗಿದ್ದಾರೆ. ಮೌಲ್ಯಮಾಪನಗಳ ಪ್ರಕಾರ ಬಹುತೇಕ ರೈತರು ಈ ಹಣವನ್ನು ಬೀಜ, ಗೊಬ್ಬರ, ನೀರಾವರಿ ಮತ್ತು ಕೃಷಿ ಉಪಕರಣಗಳಿಗೆ ಬಳಸುತ್ತಿದ್ದಾರೆ. ಇದರಿಂದ ಉತ್ಪಾದಕತೆ ಹೆಚ್ಚಿದೆ ಮತ್ತು ಅನೌಪಚಾರಿಕ ಸಾಲದ ಮೇಲಿನ ಅವಲಂಬನೆ ಕಡಿಮೆಯಾಗಿದೆ.

PM Kissan Yojana Update 2026 : ರೈತರಿಗೆ ಏನು ಪ್ರಯೋಜನ? 

ಯೋಜನೆಯ ವಿಸ್ತರಣೆಯು ಕೃಷಿಯಲ್ಲಿ ಹೂಡಿಕೆ ಹೆಚ್ಚಿಸಲು, ಉತ್ಪಾದನಾ ಸಾಮರ್ಥ್ಯ ಸುಧಾರಿಸಲು ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸಲು ನೆರವಾಗಲಿದೆ.

ಬರ ಅಥವಾ ಇತರ ಸವಾಲುಗಳ ನಡುವೆ ರೈತರಿಗೆ ನಿರಂತರ ಆರ್ಥಿಕ ಬೆಂಬಲ ಸಿಗುವುದರಿಂದ ಸ್ಥಿರತೆ ಉಂಟಾಗುತ್ತದೆ. ಸರ್ಕಾರ ಇದನ್ನು ರೈತರ ಸಮೃದ್ಧಿ ದೇಶದ ಸಮೃದ್ಧಿಯ ಅಡಿಪಾಯ ಎಂದು ಪರಿಗಣಿಸುತ್ತಿದೆ.

ಇದನ್ನು ಓದಿ

Gruha Lakshmi 31st Installment: ಗೃಹಲಕ್ಷ್ಮಿ 31ನೇ ಕಂತಿನ ಹಣ ಬಿಡುಗಡೆ ಮಹಿಳೆಯರ ಖಾತೆಗೆ ಹಣ ಜಮಾ ಆರಂಭ, Important Update.

PM Kissan Yojana Update 2026 : ಈ ಯೋಜನೆಯ ಫಲಾನುಭವಿಗಳಾಗಲು ಅರ್ಹತೆ ಏನು? 

  • ಭಾರತದ ನಾಗರಿಕರಾಗಿರಬೇಕು
  • ಕೃಷಿ ಭೂಮಿಯ ಮಾಲೀಕರಾಗಿರಬೇಕು
  • ಭೂ ದಾಖಲೆಗಳಲ್ಲಿ ರೈತನ ಹೆಸರಿರಬೇಕು
  • ಆಧಾರ್ ಸಂಖ್ಯೆ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು
  • ಬ್ಯಾಂಕ್ ಖಾತೆ ಸಕ್ರಿಯವಾಗಿರಬೇಕು
  • ರಾಜ್ಯ ಸರ್ಕಾರದ ಭೂ ದಾಖಲೆ ಪರಿಶೀಲನೆಯಲ್ಲಿ ಅರ್ಹತೆ ದೃಢವಾಗಿರಬೇಕು.

ಯಾರು ಅರ್ಹರರಲ್ಲ? 

  • ಸಂಸ್ಥೆಗಳು ಅಥವಾ ಕಂಪನಿಗಳ ಹೆಸರಿನಲ್ಲಿರುವ ಕೃಷಿ ಭೂಮಿ
  • ಪ್ರಸ್ತುತ ಅಥವಾ ಮಾಜಿ ಸಂಸದರು, ಶಾಸಕರು, ಸಚಿವರು
  • ಮೇಯರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಮುಂತಾದ ಕೆಲವು ಚುನಾಯಿತ ಹುದ್ದೆಯವರು.
  • ಕೇಂದ್ರ ಅಥವಾ ರಾಜ್ಯ ಸರ್ಕಾರದ ಸೇವೆಯಲ್ಲಿರುವ ಅಥವಾ ನಿವೃತ್ತರಾದ ಅಧಿಕಾರಿಗಳು. (ನಿಯಮಗಳಲ್ಲಿ ನೀಡಿರುವ ಕೆಲವು ವಿನಾಯಿತಿಗಳನ್ನು ಹೊರತುಪಡಿಸಿ)
  • ಆದಾಯ ತೆರಿಗೆ ಪಾವತಿಸುವವರು
  • ವೈದ್ಯರು, ಇಂಜಿನಿಯರ್, ವಕೀಲರು, ಚಾರ್ಟೆಡ್ ಅಕೌಂಟೆಂಟ್ ಗಳು, ವಾಸ್ತುಶಿಲ್ಪಿಗಳು ಮೊದಲಾದ ವೃತ್ತಿಪರರು, ತಮ್ಮ ವೃತ್ತಿಯನ್ನು ನಡೆಸುತ್ತಿದ್ದಾರೆ.

PM Kissan Yojana Update 2026 : ಬೇಕಾಗುವ ದಾಖಲೆಗಳು 

  • ಆಧಾರ್ ಕಾರ್ಡ್
  • ಭೂ ದಾಖಲೆ (ಪಹಣಿ ಅಥವಾ ರಾಜ್ಯದ ಸಮಾನ ದಾಖಲೆ)
  • ಬ್ಯಾಂಕ್ ಖಾತೆ ವಿವರ
  • ಮೊಬೈಲ್ ಸಂಖ್ಯೆ

ಹಣ ಯಾವಾಗ ಬರುತ್ತದೆ? 

ವರ್ಷಕ್ಕೆ 3 ಕಂತುಗಳಲ್ಲ 2000 ಗಳಂತೆ ಒಟ್ಟು 6,000 ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಕಂತುಗಳ ಬಿಡುಗಡೆ ದಿನಾಂಕವನ್ನು ಕೇಂದ್ರ ಸರ್ಕಾರ ಪ್ರಕಟಿಸುತ್ತದೆ.

ಇದನ್ನು ಓದಿ

221 Crore Crop Insurance : 221 ಕೋಟಿ ರೂ ಅಂತಿಮ ಕಂತು ಬೆಳೆ ವಿಮೆ ಬಿಡುಗಡೆ| ರೈತರ ಖಾತೆಗೆ ಹಣ ಜಮಾ. ಮೊಬೈಲ್ನಲ್ಲೇ ಸ್ಟೇಟಸ್ ಚೆಕ್ ಮಾಡಿ, Important update.

PM Kissan Yojana Update 2026 : ಈ ಯೋಜನೆಯ ಸ್ಟೇಟಸ್ ಪರಿಶೀಲಿಸುವ ಸಂಪೂರ್ಣ ವಿಧಾನ 
  1. ಮೊದಲು ಅಧಿಕೃತ ಪಿಎಂ ಕಿಸಾನ್ ವೆಬ್ಸೈಟ್ಗೆ ಭೇಟಿ ನೀಡಿ. https://pmkisan.gov.in/
  2. Know your Status (Farmer Corner -Know Your Status) ಆಯ್ಕೆಯನ್ನು ಕ್ಲಿಕ್ ಮಾಡಿ.
  3. ನಿಮ್ಮ Registration Number ನಮೂದಿಸಿ. “Registration Number “ಗೊತ್ತಿಲ್ಲದಿದ್ದರೆ “Know your Registration Number” ಆಯ್ಕೆಯನ್ನು ಕ್ಲಿಕ್ ಮಾಡಿ. ಆಧಾರ್ ಸಂಖ್ಯೆ ಅಥವಾ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನೀಡಿ ಓ ಟಿ ಪಿ ಮೂಲಕ Registration Number ಪಡೆಯಬಹುದು.
  4. CAPTCHA ನಮೂದಿಸಿ ಮತ್ತು get OTP ಕ್ಲಿಕ್ ಮಾಡಿ
  5. ನಿಮ್ಮ ಮೊಬೈಲ್ ಗೆ ಬಂದ ಓಟಿಪಿ ಅನ್ನು ನಮೂದಿಸಿ.
  6. Submit ಕ್ಲಿಕ್ ಮಾಡಿದ ನಂತರ ನಿಮ್ಮ PM Kissan ವಿವರಗಳು ಕಾಣಿಸುತ್ತವೆ ಅವುಗಳಲ್ಲಿ,
  • ಅರ್ಜಿ ಸ್ಥಿತಿ  (application)
  • ಇ ಕೆ ವೈ ಸಿ (e kyc)
  • ಭೂ ದಾಖಲೆ ಸ್ಥಿತಿ (land seeding)
  • ಆಧಾರ್ ಲಿಂಕ್ ಸ್ಥಿತಿ
  • ಬ್ಯಾಂಕ್ ಖಾತೆ ವಿವರ
  • ಪಾವತಿ ಸ್ಥಿತಿ (payment )
  • ಯಾವ ಕಂತು (installment) ಜಮೆಯಾಗಿದೆ ಮತ್ತು ಯಾವ ದಿನಾಂಕದಲ್ಲಿ ಜಮೆಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.

ಸ್ಟೇಟಸ್ ನಲ್ಲಿ pending ಅಥವಾ Rejected ಎಂದು ಬಂದರೆ

  • E kyc ಪೂರ್ಣಗೊಂಡಿದೆಯೇ ಎಂದು ಪರಿಶೀಲಿಸಿ
  • ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ ನೋಡಿ
  • ಭೂ ದಾಖಲೆಗಳಲ್ಲಿ ಯಾವುದೇ ತಪ್ಪಿದೆಯೇ ಎಂದು ಪರಿಶೀಲಿಸಿ
  • ಅಗತ್ಯವಿದ್ದರೆ ಹತ್ತಿರದ ಸಿ ಎಸ್ ಸಿ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ.

ಇದನ್ನು ಓದಿ

Anganvadi Recruitment 2026 : 10 ನೇ ತರಗತಿ ಪಾಸಾದ ಮಹಿಳೆಯರಿಗೆ ಉದ್ಯೋಗಾವಕಾಶ. 232 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ, important update.

PM Kissan Yojana Update 2026 : ಈ ಯೋಜನೆಯಿಂದ ರೈತರು ಪಡೆದಿರುವ ಲಾಭ ಗಳೇನು? 
  • ವಾರ್ಷಿಕ 6,000 ಆರ್ಥಿಕ ನೆರವು : ವರ್ಷಕ್ಕೆ ಮೂರು ಕಂತುಗಳಲ್ಲಿ ನೇರವಾಗಿ ಖಾತೆಗೆ ಜಮಯಾಗುತ್ತದೆ
  • ಬೀಜ, ಗೊಬ್ಬರ ಮತ್ತು ಕೀಟನಾಶಕ ಖರೀದಿಗೆ ಸಹಾಯ : ಬೆಳೆ ಆರಂಭದ ವೆಚ್ಚವನ್ನು ಭರಿಸಲು ನೆರವಾಗುತ್ತದೆ
  • ಸಾಲದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ : ಸಣ್ಣ ಮತ್ತು ಅಲ್ಪ ರೈತರು ತುರ್ತು ಕರ್ಚಿಗೆ ಹೆಚ್ಚಿನ ಬಡ್ಡಿ ಸಾಲ ತೆಗೆದುಕೊಳ್ಳುವ ಅಗತ್ಯವನ್ನು ಕೆಲವು ಮಟ್ಟಿಗೆ ಕಡಿಮೆ ಮಾಡಬಹುದು.
  • ನೇರ ಹಣ ವರ್ಗಾವಣೆ (DBT) : ಮಧ್ಯವರ್ತಿಗಳಿಲ್ಲದೆ ಹಣ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಬರುತ್ತದೆ.
  • ಸಣ್ಣ ಮತ್ತು ಅಲ್ಪ ರೈತರಿಗೆ ಬೆಂಬಲ : ಕೃಷಿ ಚಟುವಟಿಕೆಗಳಿಗೆ ಮೂಲಭೂತ ಆರ್ಥಿಕ ನೆರವು ದೊರೆಯುತ್ತದೆ.
  • ಕುಟುಂಬದ ಅಗತ್ಯಗಳಿಗೆ ನೆರವು: ಕೃಷಿ ಸಂಬಂಧಿತ ಸಣ್ಣಪುಟ್ಟ ವೆಚ್ಚಗಳು ಹಾಗೂ ಕೆಲವು ಅಗತ್ಯ ಖರ್ಚುಗಳನ್ನು ನಿರ್ವಹಿಸಲು ಸಹಾಯಕವಾಗಬಹುದು.
  • ಪಾರದರ್ಶಕ ವ್ಯವಸ್ಥೆ : ಆಧಾರ್, ಬ್ಯಾಂಕ್ ಖಾತೆ, ಮತ್ತು ಭೂ ದಾಖಲೆಗಳ ಆಧಾರದ ಮೇಲೆ ಫಲಾನುಭವಿಗಳಿಗೆ ಹಣ ತಲುಪುತ್ತದೆ.

ಯೋಜನೆಯ ಮಹತ್ವ 

  1. ರೈತರಿಗೆ ಖಚಿತವಾರ್ಷಿಕ ಆದಾಯದ ರೂಪದಲ್ಲಿ ಸಣ್ಣ ಪ್ರಮಾಣದ ಬೆಂಬಲ ನೀಡುವುದು.
  2. ಕೃಷಿ ಉತ್ಪಾದನೆಗೆ ಅಗತ್ಯವಾದ ಆರಂಭಿಕ ವೆಚ್ಚಗಳನ್ನು ನಿಭಾಯಿಸಲು ನೆರವಾಗುವುದು.
  3. ರೈತರ ಆರ್ಥಿಕ ಸ್ಥಿರತೆಯನ್ನು ಹೆಚ್ಚಿಸಲು ಸರ್ಕಾರ ಬೆಂಬಲ ಒದಗಿಸುವುದು.

ಇದನ್ನು ಓದಿ

Kotak Kanya Scholarship 2026 : ಪದವೀಧರ ವಿದ್ಯಾರ್ಥಿಗಳಿಗೆ 1.5 ಲಕ್ಷ ವಿದ್ಯಾರ್ಥಿ ವೇತನ. ಇಲ್ಲಿದೆ ಸಂಪೂರ್ಣ ಮಾಹಿತಿ, Important update.

Leave a Comment