LPG Cylinder Price : ಎಲ್ ಪಿ ಜಿ ಸಿಲಿಂಡರ್ ಬೆಲೆ ಇಳಿಕೆ, Important update.

WhatsAppಫಾಲೋ ಮಾಡಿ

LPG Cylinder PriceLPG Cylinder Price : ಆಗಸ್ಟ್ ತಿಂಗಳಲ್ಲಿ ಎಲ್ ಪಿ ಜಿ ಸಿಲಿಂಡರ್ ಬೆಲೆಯಲ್ಲಿ ಭಾರಿ ಇಳಿಕೆ. ಹೊಸ ದರಗಳು, ಇ-ಕೆ ವೈ ಸಿ, ಗ್ಯಾಸ್ ಬುಕಿಂಗ್ ಹಾಗೂ ಹೊಸ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ. 

ಆಗಸ್ಟ್ ತಿಂಗಳ ಮೊದಲ ದಿನವೇ (LPG price) ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡುವ ಸುದ್ದಿ ಹೊರ ಬಿದ್ದಿದೆ. ಎಲ್ ಪಿ ಜಿ ಸಿಲಿಂಡರ್ ಬೆಲೆಯಲ್ಲಿ ಗಣನೆಯ ಇಳಿಕೆ ಮಾಡಲಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳು (oil marketing companies) ಪ್ರತಿ ತಿಂಗಳ ಮೊದಲ ದಿನದಂತೆ ಈ ಬಾರಿಯೂ ಎಲ್ ಪಿ ಜಿ ದರಗಳನ್ನು ಪರಿಷ್ಕರಿಸಿದ್ದು, ಮುಖ್ಯವಾಗಿ 19ಕೆಜಿ ವಾಣಿಜ್ಯ ಸಿಲಿಂಡರ್ ಬಳಸುವ ಹೋಟೆಲ್ ಗಳು, ಉಪಹಾರ ಗೃಹಗಳು, ಟೀ ಸ್ಟಾಲ್ ಗಳು, ಬೇಕರಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಇದು ದೊಡ್ಡ ಮಟ್ಟದ ಆರ್ಥಿಕ ನೆರವಾಗಲಿದೆ.

LPG Cylinder Price : 19 ಕೆಜಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ದರ ಎಷ್ಟು? ಇಳಿಕೆಯಾಗಿದೆ? 

ತೈಲ ಕಂಪನಿಗಳ ಪ್ರಕಟಣೆಯ ಪ್ರಕಾರ, ದೇಶದ ಪ್ರಮುಖ ನಗರಗಳಲ್ಲಿ 19 ಕೆಜಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ (commercial LPG Cylinder) ಬೆಲೆಯಲ್ಲಿ ಭಾರಿ ಇಳಿಕೆ ಮಾಡಲಾಗಿದೆ.

ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಸುಮಾರು ₹192 ರಿಂದ ₹209 ರವರೆಗೆ ದರ ಕಡಿಮೆಯಾಗಿದ್ದು, ದೆಹಲಿಯಲ್ಲಿ 19 ಕೆಜಿ ಸಿಲಿಂಡರ್ ಬೆಲೆ ₹2,930 ಇಂದ ₹2,738 ಕ್ಕೆ ಇಳಿದಿದೆ.

ಕಳೆದ ಜುಲೈ ತಿಂಗಳಲ್ಲಿ ವಾಣಿಜ್ಯ ಸಿಲಿಂಡರ್ ದರವನ್ನು ₹183.50 ರಷ್ಟು ಇಳಿಸಲಾಗಿತ್ತು. ಹೀಗಾಗಿ ಎರಡು ಹಂತಗಳಲ್ಲಿ ಒಟ್ಟಾರೆ ₹375 ಕ್ಕೂ ಅಧಿಕ ದರ ಇಳಿಕೆಯಾಗಿರುವುದರಿಂದ ವಾಣಿಜ್ಯ ಬಳಕೆದಾರರಿಗೆ ಗಮನಾರ್ಹ ಲಾಭವಾಗಿದೆ.

ಇದೇ ವೇಳೆ ಮಾರುಕಟ್ಟೆ ದರದಲ್ಲಿ ಮಾರಾಟವಾಗುವ 5 ಕೆಜಿ ಎಲ್ ಪಿ ಜಿ ಸಿಲಿಂಡರ್ ಬೆಲೆಯನ್ನು ₹808.50 ರಿಂದ ₹762 ಕೆ ಇಳಿಸಲಾಗಿದೆ.

LPG Cylinder Price : ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ದರ 

ವಾಣಿಜ್ಯ ಸಿಲಿಂಡರ್ ಬೆಲೆ ಕಡಿಮೆಯಾಗಿದ್ದರು, ಸಾಮಾನ್ಯ ಮನೆಗಳಲ್ಲಿ ಬಳಸುವ 14.2 ಕೆಜಿ ದರವನ್ನು ಯಥಾ ಸ್ಥಿತಿಯಲ್ಲೇ ಮುಂದುವರಿಸಲಾಗಿದೆ. ಪ್ರಮುಖ ನಗರಗಳಲ್ಲಿನ ಗೃಹಬಳಕೆಯ ಎಲ್ ಪಿ ಜಿ ದರಗಳು ಹೀಗಿವೆ.

  • ದೆಹಲಿ – ₹942
  • ಕೊಲ್ಕತ್ತಾ – ₹968
  • ಮುಂಬೈ – ₹941.50
  • ಚೆನ್ನೈ – ₹957.50
  • ಬೆಂಗಳೂರು -₹944.50

ಹೀಗಾಗಿ ಗೃಹಬಳಕೆದಾರರು  ಹಿಂದಿನ ದರದಲ್ಲೇ ಸಿಲಿಂಡರ್ ಖರೀದಿಸಬೇಕಾಗುತ್ತದೆ.

ಇದನ್ನು ಓದಿ

PM Kissan Yojana Update 2026: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಫಲಾನುಭವಿಗಳಿಗೆ ಗುಡ್ ನ್ಯೂಸ್, ಯೋಜನೆ ವಿಸ್ತರಣೆಗೆ ಅನುಮೋದನೆ, Important update.

LPG Cylinder Price : ಜೂನ್ ನಲ್ಲಿ ಏರಿಕೆ, ಈಗ ವಾಣಿಜ್ಯ ಬಳಕೆದಾರರಿಗೆ ಮಾತ್ರಾ ರಿಯಾಯಿತಿ 

ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ಕೊನೆಯದಾಗಿ ಜೂನ್ 7 ರಂದು ₹29 ರಸ್ಟು ಹೆಚ್ಚಿಸಲಾಗಿತ್ತು. ಅದರ ಬಳಿಕ ಈ ಯಾವುದೇ ಬದಲಾವಣೆ ಆಗಿಲ್ಲ. ಆದರೆ ವಾಣಿಜ್ಯ ಸಿಲಿಂಡರ್ ದರವನ್ನು ಸತತ ಎರಡನೇ ತಿಂಗಳು ಇಳಿಸಿರುವುದು ವ್ಯಾಪಾರಿಗಳಿಗೆ ನಿರಾಳತೆ ತಂದಿದೆ.

LPG Cylinder Price : ಎಲ್ ಪಿ ಜಿ ಗ್ರಾಹಕರಿಗೆ ಇ-ಕೆ ವೈ ಸಿ (e-kyc) ಕಡ್ಡಾಯ 

ಈ ಬಾರಿ ಬೆಲೆ ಪರಿಷ್ಕರಣೆಯ ಜೊತೆಗೆ ಮತ್ತೊಂದು ಮಹತ್ವದ ನಿಯಮವು ಜಾರಿಯಲ್ಲಿದೆ. ಕೇಂದ್ರದ ತೈಲ ಕಂಪನಿಗಳು ಎಲ್ಲಾ ಎಲ್‌ಪಿಜಿ ಗ್ರಾಹಕರಿಗೆ ಇ- ಕೆವೈಸಿ (e-kyc) ಪೂರ್ಣಗೊಳಿಸುವುದನ್ನು ಕಡ್ಡಾಯಗೊಳಿಸಿದೆ.

ಗ್ಯಾಸ್ ಏಜೆನ್ಸಿಗಳು ನೀಡಿರುವ ಮಾರ್ಗ ಸೂಚಿಗಳ ಪ್ರಕಾರ, ನಿಗದಿತ ಅವಧಿಯೊಳಗೆ ಇ-ಕೆ ವೈ ಸಿ ಪೂರ್ಣಗೊಳಿಸದ ಗ್ರಾಹಕರ ಸಿಲಿಂಡರ್ ಬುಕ್ಕಿಂಗ್ (Booking )ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತಿದೆ. ಹಲವು ಪ್ರದೇಶಗಳಲ್ಲಿ ಇ-ಕೆವೈಸಿ ಪೂರ್ಣಗೊಳಿಸದ ಗ್ರಾಹಕರು ಈಗಾಗಲೇ ಬುಕಿಂಗ್ ಸೌಲಭ್ಯ ಕಳೆದುಕೊಂಡಿರುವ ವರದಿಗಳಿವೆ.

ಆದ್ದರಿಂದ ಇಂಡೇನ್ (Indane), ಭಾರತ್ ಗ್ಯಾಸ್ (Bharat Gas) ಹಾಗೂ ಹೆಚ್ ಪಿ ಗ್ಯಾಸ್(HP gas) ಗ್ರಾಹಕರು ತಮ್ಮ ಸಮೀಪದ ಗ್ಯಾಸ್ ಏಜೆನ್ಸಿಯನ್ನು ಸಂಪರ್ಕಿಸಿ ಇ-ಕೆ ವೈ ಸಿ ಪೂರ್ಣಗೊಳಿಸುವುದು ಸೂಕ್ತ.

ಇದನ್ನು ಓದಿ

Karmikara Makkalige Scholarship 2026 : ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ವಿದ್ಯಾರ್ಥಿ ವೇತನ. ಆನ್ಲೈನ್ ಅರ್ಜಿ ಆಹ್ವಾನ, Important update.

ಹೊಸ ಗ್ಯಾಸ್ ಸಂಪರ್ಕ ಪಡೆಯುವುದು ಇನ್ನಷ್ಟು ಸುಲಭ. 

ಹೊಸ ಎಲ್ ಪಿ ಜಿ ಸಂಪರ್ಕಕ್ಕಾಗಿ ತಿಂಗಳುಗಟ್ಟಲೆ ಕಾಯುವ ಸಮಸ್ಯೆ ನಿವಾರಿಸಲು “ಭಾರತ್ ಪೆಟ್ರೋಲಿಯಂ” (BPCL)  “ಭಾರತ್ ಲೈಟ್ ಜಿಪ್” (Bharat Light Zip)ಎಂಬ ಹೊಸ ಸೇವೆಯನ್ನು ಆರಂಭಿಸಿದೆ.

ಈ ಸೇವೆಯ ಮೂಲಕ ಗ್ರಾಹಕರು ಹೊಸ ಗ್ಯಾಸ್ ಸಂಪರ್ಕವನ್ನು ವೇಗವಾಗಿ ಪಡೆಯಬಹುದು. ಆನ್ಲೈನ್ ಮೂಲಕ ಸುಲಭವಾಗಿ ಬುಕ್ಕಿಂಗ್ ಮಾಡಬಹುದು. ದಾಖಲೆ ಪರಿಶೀಲನೆ ಪ್ರಕ್ರಿಯೆ ವೇಗವಾಗಿ ಪೂರ್ಣಗೊಳ್ಳುತ್ತದೆ.

ಪ್ರಸ್ತುತ ಈ ಸೇವೆ ಮುಂಬೈನಲ್ಲಿ ಮಾತ್ರ ಲಭ್ಯವಿದ್ದು, ಆಗಸ್ಟ್ 15 2026 ರೊಳಗೆ ದೇಶದ 24 ರಾಜ್ಯಗಳ 100 ಕ್ಕೂ ಹೆಚ್ಚು ನಗರಗಳಿಗೆ ವಿಸ್ತರಿಸುವ ಯೋಜನೆ ಇದೆ.

ಸ್ವಿಗ್ಗಿ ಮೂಲಕವೂ ಗ್ಯಾಸ್ ಸಿಲಿಂಡರ್ ಮನೆ ಬಾಗಿಲಿಗೆ 

ಗ್ಯಾಸ್ ವಿತರಣೆಯಲ್ಲೂ ಹೊಸ ಬದಲಾವಣೆಗಳು ಆರಂಭವಾಗಿವೆ. ಸ್ವಿಗ್ಗಿ (Swiggy) ತನ್ನ ಇನ್ಸ್ಟಮಾರ್ಟ್ (Instamart) ಸೇವೆಯ ಮೂಲಕ ಗ್ಯಾಸ್ ಸಿಲಿಂಡರ್ ವಿತರಣೆ ಆರಂಭಿಸಿದೆ.

ಎಚ್ ಪಿ ಸಿ ಎಲ್ ಜೊತೆಗೆ ಮಾಡಿಕೊಂಡಿರುವ ಒಪ್ಪಂದ ದಡಿ 1೦ ಕೆಜಿ ಎಚ್ ಪಿ ನವ್ಯ (HP Navya) ಕಾಂಪಾಕ್ಟ್ ಸಿಲಿಂಡರ್ ಹಾಗೂ 5 ಕೆ.ಜಿ ಮಿನಿ ಸಿಲಿಂಡರ್ ಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.

ಸಣ್ಣ ಕುಟುಂಬಗಳು, ವಿದ್ಯಾರ್ಥಿಗಳು, ಬಾಡಿಗೆ ಮನೆಗಳಲ್ಲಿ ವಾಸಿಸುವವರು ಹಾಗೂ ಅಪಾರ್ಟ್ಮೆಂಟ್ ನಿವಾಸಿಗಳಿಗೆ ಈ ಸೇವೆ ಹೆಚ್ಚು ಅನುಕೂಲಕರವಾಗಿದೆ.

ಇದನ್ನು ಓದಿ

Anganvadi Recruitment 2026 : 10 ನೇ ತರಗತಿ ಪಾಸಾದ ಮಹಿಳೆಯರಿಗೆ ಉದ್ಯೋಗಾವಕಾಶ. 232 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ, important update.

LPG Cylinder Price : ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಬದಲಾವಣೆ ಇಲ್ಲ 

ಈ ಬಾರಿ ಎಲ್ಪಿಜಿ ದರ ಪರಿಷ್ಕರಣೆ ನಡೆದಿದ್ದರೂ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ ವಿಮಾನ ಇಂಧನ (ATF) ದರವನ್ನು ಲೀಟರ್ಗೆ ಸುಮಾರು ₹5 ರಷ್ಟು ಹೆಚ್ಚಿಸಲಾಗಿದೆ.

ಆಗಸ್ಟ್ ತಿಂಗಳ ಆರಂಭದಲ್ಲೇ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಭಾರಿ ಇಳಿಕೆ ಮಾಡಿರುವುದು ವ್ಯಾಪಾರ ವಲಯಕ್ಕೆ ಉತ್ತಮ ಬೆಳವಣಿಗೆಯಾಗಿದೆ. ವಿಶೇಷವಾಗಿ ಹೋಟೆಲ್, ಉಪಹಾರ ಗೃಹ, ಟೀ ಸ್ಟಾಲ್ ಹಾಗೂ ಆಹಾರ ಉದ್ಯಮ ನಡೆಸುವವರಿಗೆ ಇಂಧನ ವೆಚ್ಚದಲ್ಲಿ ಉಳಿತಾಯವಾಗಲಿದೆ.

ಆದರೆ ಗೃಹಬಳಕೆಯ 14.2 ಕೆಜಿ ಎಲ್ ಪಿ ಜಿ ಸಿಲಿಂಡರ್ ಲೆಂಡರ್ ಬಳಸುವ ಸಾಮಾನ್ಯ ಗ್ರಾಹಕರಿಗೆ ಈ ಬಾರಿ ಯಾವುದೇ ಬೆಲೆ ರಿಯಾಯಿತಿ ಸಿಕ್ಕಿಲ್ಲ. ಇದರ ಜೊತೆಗೆ ಇ-ಕೆ ವೈ ಸಿ ಕಡ್ಡಾಯ, ಹೊಸ ಸಂಪರ್ಕ ಸೇವೆಗಳ ವಿಸ್ತರಣೆ ಹಾಗೂ ಡಿಜಿಟಲ್ ಬುಕಿಂಗ್ ವ್ಯವಸ್ಥೆ ಸೇರಿದಂತೆ ಹಲವು ಹೊಸ ಕ್ರಮಗಳನ್ನು ಗ್ರಾಹಕರು ಗಮನ ಇಟ್ಟುಕೊಳ್ಳುವುದು ಅಗತ್ಯ.

 LPG Cylinder Price : ಎಲ್ ಪಿ ಜಿ ಗ್ಯಾಸ್ ರೇಟ್ ಚೆಕ್ ಮಾಡುವ ಅಫಿಶಿಯಲ್ ವೆಬ್ಸೈಟ್

https://iocl.com/prices-of-petroleum-products

LPG Cylinder Price : ಎಲ್ ಪಿ ಜಿ ಗೃಹಬಳಕೆ ಸಿಲಿಂಡರ್ ಬೆಲೆ ಕಡಿಮೆಯಾದರೆ ಬಡ ಕುಟುಂಬಗಳಿಗೆ ಆಗುವ ಪ್ರಯೋಜನ? 

1. ಮನೆಯ ಖರ್ಚು ಕಡಿಮೆಯಾಗುತ್ತದೆ. : ಅಡುಗೆ ಅನಿಲಕ್ಕೆ ಕಡಿಮೆ ಹಣ ಖರ್ಚಾಗುವುದರಿಂದ ಉಳಿದ ಹಣವನ್ನು ಆಹಾರ, ಶಿಕ್ಷಣ ಮತ್ತು ಆರೋಗ್ಯಕ್ಕೆ ಬಳಸಬಹುದು.

2. ಸ್ವಚ್ಛ ಇಂಧನದ ಬಳಕೆ ಹೆಚ್ಚುತ್ತದೆ : ಕಟ್ಟಿಗೆ, ಕಲ್ಲಿದ್ದಲು ಅಥವಾ ಸೌದೆ ಬದಲು ಎಲ್‌ಪಿಜಿ ಬಳಸಲು ಹೆಚ್ಚು ಕುಟುಂಬಗಳು ಮುಂದಾಗುತ್ತವೆ

3. ಮಹಿಳೆಯರ ಆರೋಗ್ಯ ಸುಧಾರಿಸುತ್ತದೆ : ಹೊಗೆಯಿಂದ ಉಂಟಾಗುವ ಕಣ್ಣು ಮತ್ತು ಉಸಿರಾಟದ ಸಮಸ್ಯೆಗಳು ಕಡಿಮೆಯಾಗುತ್ತವೆ.

4. ಸಮಯ ಉಳಿತಾಯವಾಗುತ್ತದೆ : ಕಟ್ಟಿಗೆ ಸಂಗ್ರಹಿಸುವ ಅಗತ್ಯ ಕಡಿಮೆಯಾಗುವುದರಿಂದ ಮಹಿಳೆಯರು ಮತ್ತು ಮಕ್ಕಳ ಸಮಯ ಉಳಿಯುತ್ತದೆ.

5. ಪರಿಸರ ಸಂರಕ್ಷಣೆಗೆ ನೆರವಾಗುತ್ತದೆ : ಕಟ್ಟಿಗೆಯ ಬಳಕೆ ಕಡಿಮೆಯಾಗುವುದರಿಂದ ಮರಗಳ ಕಡಿತವು ಕಡಿಮೆಯಾಗುವ ಸಾಧ್ಯತೆ ಇದೆ.

6. ಜೀವನಮಟ್ಟ ಸುಧಾರಿಸುತ್ತದೆ : ಅಡುಗೆ ಸುಲಭ ಮತ್ತು ಸುರಕ್ಷಿತವಾಗಿರುವುದರಿಂದ ಕುಟುಂಬದ ದೈನಂದಿನ ಜೀವನದ ಗುಣಮಟ್ಟ ಹೆಚ್ಚುತ್ತದೆ.

ಇದನ್ನು ಓದಿ

PM Awas Yojana 2026: Important ಪಿಎಂ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ| ಯಾರಿಗೆ ಸಿಗಲಿದೆ ಈ ಸೌಲಭ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ.

 

Leave a Comment