Karmikara Makkalige Scholarship 2026 : ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ಕೇಂದ್ರ ಸರ್ಕಾರದಿಂದ ವಿದ್ಯಾರ್ಥಿ ವೇತನ. 2026 27 ನೇ ಸಾಲಿನ ಸ್ಕಾಲರ್ಶಿಪ್ ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ.
ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಕಾರ್ಮಿಕ ಕಲ್ಯಾಣ ಯೋಜನೆ ಅಡಿ (labour welfare scheme) 2026 27ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿ ವೇತನವನ್ನು ಘೋಷಿಸಲಾಗಿದ್ದು, ಇದೀಗ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಬಾರಿಯ ವಿಶೇಷತೆ ಏನೆಂದರೆ, ಒಂದನೇ ತರಗತಿಯ ಪ್ರಾಥಮಿಕ ಶಿಕ್ಷಣದಿಂದ ಹಿಡಿದು ವೃತ್ತಿಪರ (professional) ಪದವಿ ಕೋರ್ಸ್ ಹಾಗೂ ಉನ್ನತ ಸಂಶೋಧನಾ ಹಂತದವರೆಗಿನ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಬಹುದು.
ಕೇಂದ್ರ ಸಚಿವಾಲಯವು ರಾಷ್ಟ್ರೀಯ ವಿದ್ಯಾರ್ಥಿ ವೇತನ ಪೋರ್ಟಲ್ ಮೂಲಕ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಪಾರದರ್ಶಕಗೊಳಿಸಿದ್ದು, ಯಾವುದೇ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ ನೇರವಾಗಿ ನೈಜ ಫಲಾನುಭವಿಗಳಿಗೆ ಹಣ ತಲುಪಲಿದೆ.
ಇದನ್ನು ಓದಿ
Karmikara Makkalige Scholarship 2026 : ಅರ್ಜಿ ಸಲ್ಲಿಸುವುದು ಹೇಗೆ?
ಈ ವಿದ್ಯಾರ್ಥಿ ವೇತನವನ್ನು ಬೀಡಿ, ಸಿನೆಮಾ, ಸುಣ್ಣದಕಲ್ಲು (limestone) ಮತ್ತು ಡೋಲಾಮೈಟ್ ಗಣಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಬೆಳಗಲು ಈ ಆರ್ಥಿಕ ನೆರವು (financial assistance) ನೀಡಲಾಗುತ್ತದೆ.
ಅರ್ಹ ಆಸಕ್ತ ವಿದ್ಯಾರ್ಥಿಗಳು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗೆ ಅಧಿಕೃತ ಪೋರ್ಟಲ್ ಮೂಲಕವೇ ಆನ್ಲೈನ್ ಅರ್ಜಿ ಸಲ್ಲಿಸಬೇಕು.
ಇದನ್ನು ಓದಿ
ಅಫಿಶಿಯಲ್ ವೆಬ್ಸೈಟ್
ಒನ್ ಟೈಮ್ ರಿಜಿಸ್ಟ್ರೇಷನ್ (one time registration-OTR) ಅರ್ಜಿ ಸಲ್ಲಿಕೆಗೆ ಈ ಬಾರಿ ಓಟಿಆರ್ ಕಡ್ಡಾಯಗೊಳಿಸಲಾಗಿದ್ದು, ಇದಕ್ಕೆ ವಿದ್ಯಾರ್ಥಿಯ ಸಕ್ರಿಯ ಆಧಾರ್ ಸಂಖ್ಯೆ ಅಗತ್ಯ.
ಒಮ್ಮೆ ನೀವು ನೋಂದಾಯಿಸಿದ ನಂತರ, ಹೋಟೆಲ್ ನಲ್ಲಿ ಅಭ್ಯರ್ಥಿಯ ವಿವರಗಳು ಹಾಗೂ ಶುಲ್ಕದ ಮಾಹಿತಿಯು ಸ್ವಯಂ ಚಾಲಿತವಾಗಿ ಭರ್ತಿಯಾಗುವುದರಿಂದ (auto fill) ಅರ್ಜಿ ಪ್ರಕ್ರಿಯೆ ಸುಲಭವಾಗುತ್ತದೆ.
ಸ್ವತಹ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕಷ್ಟವಾದರೆ, ನಿಮ್ಮ ಹತ್ತಿರದ ಗ್ರಾಮವನ್ ಕೇಂದ್ರಗಳಿಗೆ ಭೇಟಿ ನೀಡಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.
Karmikara Makkalige Scholarship 2026 : ವಿದ್ಯಾರ್ಥಿ ವೇತನ ಪಾವತಿ ವಿಧಾನ
ವಿದ್ಯಾರ್ಥಿ ವೇತನದ ಮೊತ್ತವನ್ನು ನೇರವಾಗಿ ಅರ್ಹ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ತಲುಪಿಸಲು ಆಧಾರ್ ಪೇಮೆಂಟ್ ಬ್ರಿಡ್ಜ್ (Aadhar payment bridge) ವ್ಯವಸ್ಥೆಯನ್ನು ಬಳಸಲಾಗುತ್ತದೆ.
- ಅರ್ಜಿದಾರರು ಯಾವುದೇ ರಾಷ್ಟ್ರೀಕೃತ, ನಿಗದಿತ, ಸಹಕಾರಿ, ಗ್ರಾಮೀಣ ಅಥವಾ ಖಾಸಗಿ ಬ್ಯಾಂಕ್ ನಲ್ಲಿ ತಮ್ಮ ಸ್ವಂತ ಹೆಸರಿನಲ್ಲೇ ಉಳಿತಾಯ ಖಾತೆ (savings account) ಹೊಂದಿರಬೇಕು.
- ಈ ಬ್ಯಾಂಕ್ ಖಾತೆಯು ಕಡ್ಡಾಯವಾಗಿ ಆಧಾರ್ ಲಿಂಕ್ (Aadhar link) ಆಗಿರಬೇಕು.
- ಬ್ಯಾಂಕ್ ಖಾತೆಗೆ NEFT ಮತ್ತುCBS ಸೌಲಭ್ಯ ಇರುವುದನ್ನು ಖಚಿತಪಡಿಸಿಕೊಳ್ಳಿ.
Karmikara Makkalige Scholarship 2026: ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ಈ ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕಾಗುತ್ತದೆ.
- ಕುಟುಂಬದ ಅಧಿಕೃತ ಆದಾಯ ಪ್ರಮಾಣ ಪತ್ರ (income certificate)
- ಪೋಷಕರು ಉದ್ಯೋಗದಲ್ಲಿರುವುದನ್ನು ದೃಢೀಕರಿಸಲು, ಸಂಬಂಧಪಟ್ಟ ಆಡಳಿತ ಮಂಡಳಿಯು ನೀಡಿದ ಬೀಡಿ/ಗಣಿ ಕಾರ್ಮಿಕರ ಗುರುತಿನ ಚೀಟಿ (labour ID card)
- ವಿದ್ಯಾರ್ಥಿಯ ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ (passport size photo)
- ವಿದ್ಯಾರ್ಥಿಯ ಆಧಾರ್ ಕಾರ್ಡ್ (Aadhar card)
- ಬ್ಯಾಂಕ್ ಪಾಸ್ ಬುಕ್ (bank passbook)
Karmikara Makkalige Scholarship 2026 : ತರಗತಿವಾರು ವಿದ್ಯಾರ್ಥಿ ವೇತನದ ಮೊತ್ತ.
ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕೋರ್ಸ್ ಹಾಗೂ ತರಗತಿಗಳ ಆಧಾರದ ಮೇಲೆ ವಾರ್ಷಿಕ ಪ್ರೋತ್ಸಾಹ ಧನವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.
- ಒಂದರಿಂದ ನಾಲ್ಕನೇ ತರಗತಿ ರೂ ,₹1,000
- ಐದರಿಂದ ಎಂಟನೇ ತರಗತಿ ರೂ ,₹1,500
- 9 ಮತ್ತು 10ನೇ ತರಗತಿ ರೂ,₹2,000
- ಪ್ರಥಮ ಹಾಗೂ ದ್ವಿತೀಯ ಪಿಯುಸಿ ರೂ ₹3,000
- ಐಟಿಐ (ITI), ಪಾಲಿಟೆಕ್ನಿಕ್ ಮತ್ತು ಪದವಿ (ಬಿ ಎಸ್ ಸಿ ಕೃಷಿ ಸೇರಿದಂತೆ) ರೂ,₹6,000
- ವೃತ್ತಿಪರ ಕೋರ್ಸ್ಗಳು (professional courses) ರೂ,25,000
Karmikara Makkalige Scholarship 2026 : ನೆನಪಿಡಬೇಕಾದ ಪ್ರಮುಖ ದಿನಾಂಕಗಳು
ಕೊನೆಯ ದಿನಗಳಲ್ಲಿ ಸರ್ವರ್ ದಟ್ಟಣೆ ಎದುರಾಗುವ ಸಾಧ್ಯತೆಗಳಿರುವುದರಿಂದ, ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.
- ಮೆಟ್ರಿಕ್ ಪೂರ್ವ ಯೋಜನೆ (pre matric scheme – 1 ರಿಂದ 10 ನೇ ತರಗತಿ) : ಆಗಸ್ಟ್ 31, 2026
- ಮೆಟ್ರಿಕ್ ನಂತರದ ಯೋಜನೆ (post matrix scheme- 11 ನೇ ತರಗತಿ ಮತ್ತು ಮೇಲ್ಪಟ್ಟು) : ಅಕ್ಟೋಬರ್ 31, 2026
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.
ವಿದ್ಯಾರ್ಥಿ ವೇತನದ ಕುರಿತು ಯಾವುದೇ ಗೊಂದಲಗಳಿದ್ದಲ್ಲಿ, ಇಲಾಖೆಯ ಅಧಿಕೃತ ಸಹಾಯವಾಣಿಯನ್ನು ಸಂಪರ್ಕಿಸಿ.
ಮೊಬೈಲ್ ಸಂಖ್ಯೆ: 9148240554
ದೂರವಾಣಿ ಸಂಖ್ಯೆ: 080-23471406
ಇದನ್ನು ಓದಿ
Karmikara Makkalige Scholarship 2026 : ಈ ವಿದ್ಯಾರ್ಥಿ ವೇತನದಿಂದ ಆಗುವ ಪ್ರಯೋಜನಗಳು.
ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನವು ಕಾರ್ಮಿಕರ ಮಕ್ಕಳಿಗೆ ಉತ್ತಮ ಶಿಕ್ಷಣ ಪಡೆಯಲು ಸರ್ಕಾರ ನೀಡುವ ಮಹತ್ವದ ಆರ್ಥಿಕ ಸಹಾಯವಾಗಿದೆ. ಈ ವಿದ್ಯಾರ್ಥಿ ವೇತನದಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಮಕ್ಕಳ ಶಿಕ್ಷಣದ ವೆಚ್ಚ ಕಡಿಮೆಯಾಗುತ್ತದೆ. ಶಾಲೆ, ಕಾಲೇಜು ಮತ್ತು ವೃತ್ತಿಪರ ಶಿಕ್ಷಣಕ್ಕೆ ಅಗತ್ಯವಿರುವ ಶುಲ್ಕ, ಪುಸ್ತಕಗಳು ಸಮವಸ್ತ್ರ ಹಾಗೂ ಇತರ ಶೈಕ್ಷಣಿಕ ಸಾಮಗ್ರಿಗಳನ್ನು ಖರೀದಿಸಲು ಈ ನೆರವು ಉಪಯೋಗವಾಗುತ್ತದೆ.
ವಿದ್ಯಾರ್ಥಿ ವೇತನದಿಂದ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹೆಚ್ಚುತ್ತದೆ ಮತ್ತು ಆರ್ಥಿಕ ಸಮಸ್ಯೆಯಿಂದ ಓದನ್ನು ಮಧ್ಯದಲ್ಲಿ ನಿಲ್ಲಿಸುವ ಪರಿಸ್ಥಿತಿ ಕಡಿಮೆಯಾಗುತ್ತದೆ. ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನು ಆತ್ಮವಿಶ್ವಾಸದಿಂದ ಮುಂದುವರಿಸಲು ಇದು ಪ್ರೇರಣೆ ನೀಡುತ್ತದೆ. ಉನ್ನತ ಶಿಕ್ಷಣ ಪಡೆಯುವ ಅವಕಾಶಗಳು ಹೆಚ್ಚಾಗಿ, ಉತ್ತಮ ಉದ್ಯೋಗಗಳನ್ನು ಪಡೆಯಲು ಸಹಾಯವಾಗುತ್ತದೆ.
ಈ ಯೋಜನೆಯಿಂದ ಕಾರ್ಮಿಕ ಕುಟುಂಬಗಳ ಆರ್ಥಿಕ ಹೊರೆ ಕಡಿಮೆಯಾಗುವುದರ ಜೊತೆಗೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನ ಅವಕಾಶಗಳನ್ನು ಸೃಷ್ಟಿಸಲು ಮತ್ತು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಇದು ಮಹತ್ವದ ಕೊಡುಗೆ ನೀಡುತ್ತದೆ. ಕಾರ್ಮಿಕರ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಸ್ವಾವಲಂಬಿಗಳನ್ನಾಗಿಸುವಲ್ಲಿ ಈ ವಿದ್ಯಾರ್ಥಿ ವೇತನದ ಪಾತ್ರ ಅತ್ಯಂತ ಮಹತ್ವದಾಗಿದೆ. ಹೀಗಾಗಿ, ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನವು ವಿದ್ಯಾರ್ಥಿಗಳ ಶಿಕ್ಷಣ, ವ್ಯಕ್ತಿತ್ವ ವಿಕಾಸ ಮತ್ತು ಉತ್ತಮ ಭವಿಷ್ಯ ನಿರ್ಮಾಣಕ್ಕೆ ಸಹಕಾರಿಯಾಗುವ ಅತ್ಯುತ್ತಮ ಕಲ್ಯಾಣ ಯೋಜನೆಯಾಗಿದೆ.
ಇದನ್ನು ಓದಿ
1 thought on “Karmikara Makkalige Scholarship 2026 : ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ವಿದ್ಯಾರ್ಥಿ ವೇತನ. ಆನ್ಲೈನ್ ಅರ್ಜಿ ಆಹ್ವಾನ, Important update.”