Ramanagara Court Recruitment 2026: ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 55 ಬೆರಳಚ್ಚು ಗಾರ, ಆದೇಶ ಜಾರಿಕಾರ ಹಾಗೂ ಸೇವಕ ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.
- ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ಒಟ್ಟು 55 ಹುದ್ದೆಗಳ ನೇಮಕಾತಿ.
- ಎಸ್ ಎಸ್ ಎಲ್ ಸಿ (SSLC )ಮತ್ತು ಪಿಯುಸಿ (PUC )ಪಾಸಾದ ಅಭ್ಯರ್ಥಿಗಳಿಗೆ ಅವಕಾಶ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಆಗಸ್ಟ್ 2026.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ರಾಮನಗರ 2026 ನೇ ಸಾಲಿನ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಖಾಲಿ ಇರುವ ಒಟ್ಟು 55 ಬೆರಳಚ್ಚುಗಾರ (typist), ಬೆರಳಚ್ಚು ನಕಲುಗಾರ (typist -copyist), ಆದೇಶ ಜಾರಿಕಾರ (order enforcer) ಹಾಗೂ ಸೇವಕ (servant) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ವಿದ್ಯಾರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
Ramanagara Court Recruitment 2026: ಹುದ್ದೆಗಳ ವಿವರ
- ಸಂಸ್ಥೆ ಹೆಸರು: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ರಾಮನಗರ
- ಓಟ್ಟು ಹುದ್ದೆಗಳು : 55 ಹುದ್ದೆಗಳು
- ಉದ್ಯೋಗದ ಸ್ಥಳ : ರಾಮನಗರ-ಕರ್ನಾಟಕ
- ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್
- ಅಧಿಕೃತ ವೆಬ್ಸೈಟ್ : https://ramanagara.dcourts.gov.in/online-recruitment/
- ಆನ್ಲೈನ್ ಅರ್ಜಿ ಸಲ್ಲಿಕೆ: 30/7/2026-31/8/2026 ರ ವರೆಗೆ
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ
- ಬೆರಳಚ್ಚುಗಾರ (typist): 10 ಹುದ್ದೆಗಳು
- ಬೆರಳಚ್ಚು ನಕಲುಗಾರ (typist-copyist) : 01 ಹುದ್ದೆಗಳು
- ಆದೇಶ ಜಾರಿಕಾರ (order enforcer ): 10 ಹುದ್ದೆಗಳು
- ಸೇವಕರು (servant) : 34 ಹುದ್ದೆಗಳು
- ಒಟ್ಟು : 55 ಹುದ್ದೆಗಳು
ಇದನ್ನು ಓದಿ
Ramanagara Court Recruitment 2026 : ಮಾಸಿಕ ವೇತನ ಶ್ರೇಣಿ
- ಬೆರಳಚ್ಚುಗಾರ : ₹34,100- ₹67,600
- ಬೆರಳಚ್ಚು ನಕಲುಗಾರ : ₹34,100- ₹67,600
- ಆದೇಶ ಜಾರಿಕಾರ : ₹31,775- ₹61,300
- ಸೇವಕರು : ₹27,000- ₹46,675
ಶೈಕ್ಷಣಿಕ ವಿದ್ಯಾರ್ಹತೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅನುಗುಣವಾಗಿ ಈ ಕೆಳಗಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.
- ಬೆರಳಚ್ಚುಗಾರ (typist) – ದ್ವಿತೀಯ ಪಿಯುಸಿ (PUC )ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪ್ರೌಢ ದರ್ಜೆ (senior grade) ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕಂಪ್ಯೂಟರ್ ಬಳಕೆ ಜ್ಞಾನ ಇರಬೇಕು.
- ಬೆರಳಚ್ಚು- ನಕಲುಗಾರ : ದ್ವಿತೀಯ ಪಿಯುಸಿ (PUC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣತೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಕಿರಿಯ ದರ್ಜೆ (junior grade) ಪರೀಕ್ಷೆಗಳಲ್ಲಿ ತೇರ್ಗಡೆ ಹಾಗೂ ಕಂಪ್ಯೂಟರ್ ಜ್ಞಾನ ಅವಶ್ಯಕ.
- ಆದೇಶ ಜಾರಿಕಾರರು : ಎಸ್ ಎಸ್ ಎಲ್ ಸಿ (SSLC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. (ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು).
- ಸೇವಕರು : ಎಸ್ ಎಸ್ ಎಲ್ ಸಿ (SSLC) ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣತೆ. ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು.
ಇದನ್ನು ಓದಿ
Ramanagara Court Recruitment 2026 : ವಯೋಮಿತಿ ಮತ್ತು ಅರ್ಜಿ ಶುಲ್ಕ
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳ ವಯೋಮಿತಿ ಈ ಕೆಳಗಿನಂತಿರಬೇಕು.
- ಕನಿಷ್ಠ ವಯಸ್ಸು: 18 ವರ್ಷಗಳು
- ಗರಿಷ್ಠ ವಯಸ್ಸು: (ಸರ್ಕಾರದ ಆದೇಶದನ್ವಯ ಎಲ್ಲಾ ಪ್ರವರ್ಗಗಳಿಗೆ ವಯೋಮಿತಿಯಲ್ಲಿ ಒಂದು ಬಾರಿಗೆ ಐದು ವರ್ಷಗಳ ಸೆಡಿಲಿಕೆ ನೀಡಲಾಗಿದೆ.
- ಸಾಮಾನ್ಯ ವರ್ಗ: 40 ವರ್ಷಗಳು
- ಪ್ರವರ್ಗ -2A,2B,3A,3B : 43 ವರ್ಷಗಳು
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 : 45 ವರ್ಷಗಳು. (ವಿಧವೆಯರಿಗೆ, ಮಾಜಿ ಸೈನಿಕರಿಗೆ ಮತ್ತು ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ.
Ramanagara Court Recruitment 2026: ಅರ್ಜಿ ಶುಲ್ಕ
ಅರ್ಜಿದಾರರು ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI e-pay, net banking, credit card, debit card, upi) ಮೂಲಕ ಆನ್ಲೈನಲ್ಲಿ ಮಾತ್ರ ಪಾವತಿಸಬೇಕು.
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ರೂ ₹200
- ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ: ರೂ ₹100
- SC ST ಪ್ರವರ್ಗ-1 , ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ಇದೆ (ಉಚಿತ)
Ramanagara Court Recruitment 2026 : ಆಯ್ಕೆ ವಿಧಾನ?
- ಬೆರಳಚ್ಚುಗಾರ/ಬೆರಳಚ್ಚು- ನಕಲುಗಾರ : 15 ನಿಮಿಷಗಳ ಉಕ್ತಲೇಖನವನ್ನು ಗಣಕಯಂತ್ರದಲ್ಲಿ ಬೆರಳಚ್ಚು ಮಾಡುವ ಕೌಶಲ ಪರೀಕ್ಷೆ ನಡೆಸಲಾಗುತ್ತದೆ. (ಗರಿಷ್ಠ ನೂರು ಅಂಕಗಳಲ್ಲಿ ಕನಿಷ್ಠ 50 ಅಂಕ ಗಳಿಸಬೇಕು.) ಇದರಲ್ಲಿ ತೇರ್ಗಡೆಯಾದವರನ್ನು 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುತ್ತದೆ.
- ಆದೇಶ ಜಾರಿಕಾರರು/ ಸೇವಕರು : ಎಸ್ ಎಸ್ ಎಲ್ ಸಿ ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ತಯಾರಿಸಿ, ಆದೇಶ ಜಾರಿಕಾರ ಹುದ್ದೆಗೆ 1:25 ಮತ್ತು ಸೇವಕ ಹುದ್ದೆಗೆ 1:10 ಅನುಪಾತದಲ್ಲಿ ಅಭ್ಯರ್ಥಿಗಳನ್ನು 10 ಅಂಕಗಳ ಸಂದರ್ಶನಕ್ಕೆ ಕರೆಯಲಾಗುವುದು.
ಇದನ್ನು ಓದಿ
ISRO Recruitment 2026 : 92 ವಿಜ್ಞಾನಿ ಹಾಗೂ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.
Ramanagara Court Recruitment 2026 : ಅರ್ಜಿ ಸಲ್ಲಿಸುವ ವಿಧಾನ?
Step 1. ಅಭ್ಯರ್ಥಿಗಳು ಮೇಲೆ ನೀಡಿರುವ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
Step 2. ಆನ್ಲೈನ್ ಅರ್ಜಿ ಭರ್ತಿ ಮಾಡುವ ಮುನ್ನ ಅಧಿ ಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
Step 3. ಅರ್ಜಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತುಂಬಿ ಹಾಗೂ ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ಐಡಿಯನ್ನು ಕಡ್ಡಾಯವಾಗಿ ನಮೂದಿಸಿ.
Step 4. ಪಾಸ್ ಪೋರ್ಟ್ ಗಾತ್ರದ ಭಾವಚಿತ್ರ ಮತ್ತು ಸಹಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
Step 5. ಆದೇಶ ಜಾರಿಕಾರ ಮತ್ತು ಸೇವಕ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಎಸ್ ಎಸ್ ಎಲ್ ಸಿ ಅಂಕಪಟ್ಟಿಯನ್ನು ಪಿಡಿಎಫ್ ರೂಪದಲ್ಲಿ ಅಪ್ಲೋಡ್ ಮಾಡಿ.
Step 6. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ, ಅಂತಿಮವಾಗಿ submit ಮಾಡಿದ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.
Ramanagara Court Recruitment 2026 : ಕೆಲಸಕ್ಕೆ ಸೇರುವ ಅಭ್ಯರ್ಥಿಗಳಿಗೆ ನೀಡುವ ಸಲಹೆ.
- ಸಮಯ ಪಾಲನೆ ಮಾಡಿ – ನ್ಯಾಯಾಲಯದ ಕೆಲಸದಲ್ಲಿ ಸಮಯಕ್ಕೆ ಹೆಚ್ಚಿನ ಮಹತ್ವವಿದೆ. ಯಾವಾಗಲೂ ಸಮಯಕ್ಕೆ ಹಾಜರಾಗಿ.
- ನ್ಯಾಯಾಲಯದ ಶಿಸ್ತು ಪಾಲಿಸಿ- ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಹಾಗೂ ಸಾರ್ವಜನಿಕರೊಂದಿಗೆ ಗೌರವದಿಂದ ವರ್ತಿಸಿ.
- ಕಾನೂನುಗಳ ಬಗ್ಗೆ ಮೂಲಭೂತ ಜ್ಞಾನ ಬೆಳೆಸಿಕೊಳ್ಳಿ- ಸಂಬಂಧಿತ ಕಾನೂನುಗಳು, ನ್ಯಾಯಾಲಯದ ಪ್ರಕ್ರಿಯೆಗಳು ಮತ್ತು ದಾಖಲೆಗಳ ಬಗ್ಗೆ ನಿರಂತರವಾಗಿ ಕಲಿಯಿರಿ.
- ಗೌಪ್ಯತೆಯನ್ನು ಕಾಪಾಡಿ -ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅನಗತ್ಯವಾಗಿ ಯಾರೊಂದಿಗೂ ಹಂಚಿಕೊಳ್ಳಬೇಡಿ.
- ದಾಖಲೆಗಳನ್ನು ಜಾಗರೂಕತೆಯಿಂದ ನಿರ್ವಹಿಸಿ- ಫೈಲ್ ಗಳು, ದಾಖಲೆಗಳು ಮತ್ತು ಸಾಕ್ಷಿಗಳನ್ನು ಅತ್ಯಂತ ಎಚ್ಚರಿಕೆಯಿಂದ ಸಂಭಾಳಿಸಿ.
- ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತತೆ ಕಾಪಾಡಿ – ಯಾವುದೇ ರೀತಿಯ ಪಕ್ಷಪಾತ ಅಥವಾ ಅನೈತಿಕ ವರ್ತನೆಯನ್ನು ತಪ್ಪಿಸಿ.
- ಉತ್ತಮ ಸಂವಹನ ಕೌಶಲ್ಯ ಬೆಳೆಸಿಕೊಳ್ಳಿ -ಸ್ಪಷ್ಟವಾಗಿ ಮಾತನಾಡುವುದು, ಗಮನವಿಟ್ಟು ಕೇಳುವುದು ಮತ್ತು ವೃತ್ತಿ ಪರವಾಗಿ ವರ್ತಿಸುವುದು ತುಂಬಾ ಮುಖ್ಯ.
- ತಂತ್ರಜ್ಞಾನವನ್ನು ಕಲಿಯಿರಿ- ಇ ಕೋರ್ಟ್ ವ್ಯವಸ್ಥೆ, ಕಂಪ್ಯೂಟರ್ ಹಾಗೂ ಡಿಜಿಟಲ್ ದಾಖಲೆ ನಿರ್ವಹಣೆಯ ಬಗ್ಗೆ ತಿಳಿದುಕೊಳ್ಳಿ.
- ಹಿರಿಯರಿಂದ ಕಲಿಯಿರಿ -ಅನುಭವಿಗಳ ಮಾರ್ಗದರ್ಶನವನ್ನು ಸ್ವೀಕರಿಸಿ ಮತ್ತು ಪ್ರಶ್ನೆಗಳನ್ನು ಕೇಳಲು ಹಿಂಜರಿಯಬೇಡಿ.
- ನಿರಂತರ ಅಧ್ಯಯನ ಮಾಡಿ -ಕಾನೂನುಗಳು ಮತ್ತು ನ್ಯಾಯಾಂಗದ ಹೊಸ ಬೆಳವಣಿಗೆಗಳ ಬಗ್ಗೆ ಸದಾ ಮಾಹಿತಿ ಹೊಂದಿರಿ.
ಇದನ್ನು ಓದಿ