ISRO Recruitment 2026 : 92 ವಿಜ್ಞಾನಿ ಹಾಗೂ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.

WhatsAppಫಾಲೋ ಮಾಡಿ

ISRO Recruitment 2026 ISRO Recruitment 2026: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO )92 ವಿಜ್ಞಾನಿ/ಇಂಜಿನಿಯರಿಂಗ್ (scientist/engineer) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ವಿದ್ಯಾರ್ಹತೆ, GATE ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಓಟ್ಟು 92 ವಿಜ್ಞಾನಿ/ಇಂಜಿನಿಯರ್ (scientist/engineer) ಹುದ್ದೆಗಳ ನೇಮಕಾತಿ.
  • BE/B. Tech ಹಾಗೂ GATE 2025/2026 ಅಂಕ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ.
  • ಆನ್ಲೈನ್ ಅರ್ಜಿ ಸಲ್ಲಿಸಲು ಆಗಸ್ಟ್ 17,2026 ಕೊನೆಯ ದಿನಾಂಕ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 206 ನೇ ಸಾಲಿನ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ದೇಶದ ವಿವಿಧ ಇಸ್ರೋ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 92 ವಿಜ್ಞಾನಿ/ಇಂಜಿನಿಯರ್ SC ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಎಲೆಕ್ಟ್ರಾನಿಕ್ಸ್, ಮೆಕಾನಿಕಲ್, ಕಂಪ್ಯೂಟರ್ ಸೈನ್ಸ್, ಸಿವಿಲ್, ಎಲೆಕ್ಟ್ರಿಕಲ್, ರೆಫ್ರಿಜರೇಷನ್, ಏರ್ ಕಂಡೀಷನಿಂಗ್ ಹಾಗೂ ಆರ್ಕಿಟೆಕ್ಚರ್ ವಿಭಾಗದಲ್ಲಿ BE/B.Tec ಪೂರ್ಣಗೊಳಿಸಿ GATE 2025 ಅಥವಾ GATE 2026 ಅಂಕಗಳನ್ನು ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಬೆಂಗಳೂರು, ಹಾಸನ, ಹೈದರಾಬಾದ್, ಅಹಮದಾಬಾದ್, ಶ್ರೀಹರಿಕೋಟ, ತಿರುವನಂತಪುರಂ, ಮಹೇಂದ್ರ ಗಿರಿ ಹಾಗೂ ವಲಿಯಮಲಾದ ಇಸ್ರೋ ಕೇಂದ್ರಗಳಲ್ಲಿ ನಿಯೋಜಿಸಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ 2026ರ ಆಗಸ್ಟ್ 17ರೊಳಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು.

ISRO Recruitment 2026 : ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ 

  • ನೇಮಕಾತಿ ಸಂಸ್ಥೆ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)
  • ಹುದ್ದೆಯ ಹೆಸರು : ವಿಜ್ಞಾನಿ/ಇಂಜಿನಿಯರ್ ಎಸ್ ಸಿ (scientist/engineer SC)
  • ಒಟ್ಟು ಹುದ್ದೆಗಳು: 92
  • ಮೂಲ ವೇತನ: ₹56,100 ಪ್ರತಿ ತಿಂಗಳಿಗೆ ಜೊತೆಗೆ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ ಮತ್ತು ಸಾರಿಗೆ ಭತ್ಯೆ ಅನ್ವಯಿಸುತ್ತದೆ.

ಇದನ್ನು ಓದಿ

Kotak Kanya Scholarship 2026 : ಪದವೀಧರ ವಿದ್ಯಾರ್ಥಿಗಳಿಗೆ 1.5 ಲಕ್ಷ ವಿದ್ಯಾರ್ಥಿ ವೇತನ. ಇಲ್ಲಿದೆ ಸಂಪೂರ್ಣ ಮಾಹಿತಿ, Important update.

ISRO Recruitment 2026: ವಿಭಾಗವಾರು ಖಾಲಿ ಹುದ್ದೆಗಳ ವಿವರ 

  1. ಎಲೆಕ್ಟ್ರಾನಿಕ್ಸ್: 34 ಹುದ್ದೆಗಳು
  2. ಮೆಕಾನಿಕಲ್: 26 ಹುದ್ದೆಗಳು
  3. ಕಂಪ್ಯೂಟರ್ ಸೈನ್ಸ್ :13 ಹುದ್ದೆಗಳು
  4. ಸಿವಿಲ್ : 10 ಹುದ್ದೆಗಳು
  5. ಎಲೆಕ್ಟ್ರಿಕಲ್ : 4 ಹುದ್ದೆಗಳು
  6. ರೆಫ್ರಿಜರೇಷನ್ ಅಂಡ್ ಏರ್ ಕಂಡೀಷನಿಂಗ್ : 2 ಹುದ್ದೆಗಳು
  7. ಆರ್ಕಿಟೆಕ್ಚರ್ (architecture):2 ಹುದ್ದೆಗಳು
  8. ಸಿವಿಲ್- ಸ್ವಾಯತ್ತ ಸಂಸ್ಥೆ(civil autonomous body): 1 ಹುದ್ದೆಗಳು

ISRO Recruitment 2026: ಶೈಕ್ಷಣಿಕ ಅರ್ಹತೆ 

ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವಂತೆ ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

  • ಸಂಬಂಧಪಟ್ಟ ಇಂಜಿನಿಯರಿಂಗ್ ವಿಭಾಗಗಳಲ್ಲಿ ಕನಿಷ್ಠ ಶೇಕಡ 65% ಬಿ ಇ ಬಿ ಟೆಕ್ (BE/B-tech ) ಅಥವಾ ತತ್ಸಮಾನ ಪದವಿಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು.
  • ಆರ್ಕಿಟೆಕ್ಚರ್ ಹುದ್ದೆಗೆ ಶೇಕಡ 65 % ಅಂಕಗಳೊಂದಿಗೆ ಆರ್ಕಿಟೆಕ್ಚರ್ ನಲ್ಲಿ ಸ್ನಾತಕೋತ್ತರ ಪದವಿ (B.Arch) ಹಾಗೂ ಕೌನ್ಸಿಲ್ ಆಫ್ ಆರ್ಕಿಟೆಕ್ಚರ್ ನಲ್ಲಿ ನೋಂದಣಿ ಆಗಿರಬೇಕು.
  • ಎಲ್ಲಾ ಹುದ್ದೆಗಳಿಗೂ ಸಂಬಂಧಿಸಿದ ವಿಭಾಗದಲ್ಲಿ ಮಾನ್ಯವಾದ GATE ಅಂಕಗಳನ್ನು (Valid GATE Score) ಹೊಂದಿರುವುದು ಕಡ್ಡಾಯವಾಗಿದೆ.

ಇದನ್ನು ಓದಿ

Honey Bee Farm Subsidy 2026 : ಜೇನು ಸಾಕಾಣಿಕೆಗೆ ಸರ್ಕಾರದಿಂದ ಭರ್ಜರಿ ಸಹಾಯಧನ. ಮೊಬೈಲ್ ಮೂಲಕ ಅಪ್ಲೈ ಮಾಡಿ. Important.

ISRO Recruitment 2026: ವಯೋಮಿತಿ ವಿವರ (age limit and relaxation) 

  • ಗರಿಷ್ಠ ವಯೋಮಿತಿ: 17.08.2026ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗಳ ವಯಸ್ಸು ಗರಿಷ್ಠ 28 ವರ್ಷ ಮೀರಿರಬಾರದು.
  • ವಯೋಮಿತಿ ಸಡಿಲಿಕೆ: ಭಾರತದ ಸರ್ಕಾರ ನಿಯಮಗಳ ಪ್ರಕಾರ ಮೀಸಲಾತಿ ಕೋರುವ SC, ST/OBC ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.

ಅರ್ಜಿ ಶುಲ್ಕ (application fees) 

  • ಸಾಮಾನ್ಯ ಮತ್ತು ಇತರೆ ಅಭ್ಯರ್ಥಿಗಳಿಗೆ: ₹250
  • ಮಹಿಳಾ SC, ST, OBC,pwbd/ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ ನೀಡಲಾಗಿದೆ (ಉಚಿತ)
  • ಪಾವತಿ ವಿಧಾನ: ಅರ್ಜಿ ಶುಲ್ಕವನ್ನು ಕೇವಲ ಆನ್ಲೈನ್ ಮೂಲಕ ಭಾರತ್ ಕೋಷ್ ಪೋರ್ಟಲ್ ಮುಖಾಂತರವೇ ಪಾವತಿಸಬೇಕು.

ISRO Recruitment 2026: ಆಯ್ಕೆ ಪ್ರಕ್ರಿಯೆ 

ನೇಮಕಾತಿ ಆಯ್ಕೆ ಪ್ರಕ್ರಿಯೆಯು ಪ್ರಮುಖವಾಗಿ ಎರಡು ಹಂತಗಳನ್ನು ಒಳಗೊಂಡಿರುತ್ತದೆ.

  1. ಶಾರ್ಟ್ ಲಿಸ್ಟಿಂಗ್ (shortlisting): ಅಭ್ಯರ್ಥಿಗಳು ಪಡೆದಿರುವ GATE ಅಂಕಗಳ ಆಧಾರದ ಮೇಲೆ 1:7 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಯ್ಕೆ ಮಾಡಲಾಗುವುದು.
  2. ಸಂದರ್ಶನ (interview): ತಾಂತ್ರಿಕ ಜ್ಞಾನ, ಸಾಮಾನ್ಯ ಅರಿವು, ಮತ್ತು ಸಂವಹನ ಕೌಶಲ್ಯಗಳನ್ನು ಪರೀಕ್ಷಿಸಲು ಸಂದರ್ಶನ ನಡೆಸಲಾಗುವುದು.
  3. ಅಂತಿಮ ಆಯ್ಕೆ: ಅಂತಿಮ ಆಯ್ಕೆ ಪಟ್ಟಿಯನ್ನು ತಯಾರಿಸುವಾಗ GATE ಅಂಕಗಳಿಗೆ ಶೇಕಡ 50% ರಷ್ಟು ಮತ್ತು ಸಂದರ್ಶನದ ಅಂಕಗಳಿಗೆ ಶೇಕಡ 50% ರಷ್ಟು ಪ್ರಾಮುಖ್ಯತೆ ನೀಡಲಾಗುವುದು.

ಇದನ್ನು ಓದಿ

KFD Recruitment 2026 : 750 ಅರಣ್ಯ ವೀಕ್ಷಕ ಹುದ್ದೆಗಳು; ಎಸ್ ಎಸ್ ಎಲ್ ಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ, Important update.

ISRO Recruitment 2026 : ಅರ್ಜಿ ಸಲ್ಲಿಸುವುದು ಹೇಗೆ? 

Step 1. ಇಸ್ರೋದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ

https://www.isro.gov.in/

Step 2. Careers ವಿಭಾಗಕ್ಕೆ ತೆರಳಿ scientist/engineer ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ವಿವರವಾಗಿ ಓದಿಕೊಳ್ಳಿ.

Step 3. Apply online ಲಿಂಕ್ ಮೇಲೆ ಕ್ಲಿಕ್ ಮಾಡಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ.

Step 4. ಆನ್ಲೈನ್ ಅರ್ಜಿಯಲ್ಲಿ ಕೇಳಲಾದ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.

Step 5. ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಸಹಿ ಮತ್ತುGATE Score Card ಅನ್ನು ಅಪ್ಲೋಡ್ ಮಾಡಿ.

Step 6. ನಿಮ್ಮ ವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಆನ್ಲೈನ್ ನಲ್ಲಿ ಪಾವತಿಸಿ.

Step 7. ಕೊನೆಯದಾಗಿ ಅರ್ಜಿ ನಮೂನೆಯನ್ನು submit ಮಾಡಿ ಹಾಗೂ ಭವಿಷ್ಯದ ಉಲ್ಲೇಖಕ್ಕಾಗಿ ರಿಜಿಸ್ಟ್ರೇಷನ್ ನಂಬರ್ ಇರುವ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಪ್ರಮುಖ ದಿನಾಂಕಗಳು (important dates) 

  • ಅಧಿಸೂಚನೆ ದಿನಾಂಕ/ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 28 ಜುಲೈ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17 ಆಗಸ್ಟ್ 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 19 ಆಗಸ್ಟ್ 2026
ISRO Recruitment 2026: ಇಸ್ರೋ ಉದ್ಯೋಗಗಳ ಮಹತ್ವ 

ಇಸ್ರೋ ನಲ್ಲಿ ಉದ್ಯೋಗ ಪಡೆಯುವುದು ಭಾರತದ ಅತ್ಯಂತ ಪ್ರತಿಷ್ಠಿತ ಸರ್ಕಾರಿ ಉದ್ಯೋಗಗಳಲ್ಲಿ ಒಂದಾಗಿದೆ.

  • ಪ್ರತಿಷ್ಠಿತ ಸಂಸ್ಥೆ: ದೇಶದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ.
  • ಉತ್ತಮ ವೇತನ ಮತ್ತು ಸೌಲಭ್ಯಗಳು: ಸರ್ಕಾರಿ ವೇತನ, ಭತ್ಯೆ ಗಳು, ವೈದ್ಯಕೀಯ ಸೌಲಭ್ಯ, ನಿವೃತ್ತಿ ಸೌಲಭ್ಯಗಳು.
  • ವೃತ್ತಿ ಬೆಳವಣಿಗೆ: ಉತ್ತಮ ಕಾರ್ಯಕ್ಷಮತೆಯ ಆಧಾರದ ಮೇಲೆ ಬಡ್ತಿ ಮತ್ತು ವೃತ್ತಿ ಅಭಿವೃದ್ಧಿಗೆ ಅವಕಾಶಗಳಿವೆ.
  • ಹೊಸ ತಂತ್ರಜ್ಞಾನದಲ್ಲಿ ಕೆಲಸ: ಉಪಗ್ರಹ, ರಾಕೆಟ್, ಬಾಹ್ಯಾಕಾಶ ಸಂಶೋಧನೆ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶ
  • ದೇಶ ಸೇವೆ: ಭಾರತದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಗೆ ನೇರವಾಗಿ ಕೊಡುಗೆ ನೀಡಬಹುದು.
  • ಅಂತರಾಷ್ಟ್ರೀಯ ಮಾನ್ಯತೆ: ಇಸ್ರೋ ಯೋಜನೆಗಳಲ್ಲಿ ಕೆಲಸ ಮಾಡಿದ ಅನುಭವಕ್ಕೆ ಜಾಗತಿಕ ಮಟ್ಟದಲ್ಲಿ ಗೌರವವಿದೆ.

ಇದನ್ನು ಓದಿ

Udyam Loan Scheme 2026: ಸ್ವಂತ ಉದ್ಯಮ ಆರಂಭಿಸಲು 2 ಲಕ್ಷ ನೆರವು.40,000 ಸಬ್ಸಿಡಿ ಸಿಗುತ್ತೆ- ಅರ್ಜಿ ಸಲ್ಲಿಸಿ, Important update.

Leave a Comment