KFD Recruitment 2026 : 750 ಅರಣ್ಯ ವೀಕ್ಷಕ ಹುದ್ದೆಗಳು; ಎಸ್ ಎಸ್ ಎಲ್ ಸಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ, Important update.

WhatsAppಫಾಲೋ ಮಾಡಿ

KFD Recruitment 2026KFD Recruitment 2026: ಕರ್ನಾಟಕ ಅರಣ್ಯ ಇಲಾಖೆ (KFD) 750 ಅರಣ್ಯ ವೀಕ್ಷಕರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಎಸ್ ಎಸ್ ಎಲ್ ಸಿ ಪಾಸಾದ ಅಭ್ಯರ್ಥಿಗಳು ಆಗಸ್ಟ್ 31, 2026 ರ ಒಳಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಹತೆ, ವಯೋಮಿತಿ, ವೇತನ ಹಾಗೂ ಆಯ್ಕೆ ಪ್ರಕ್ರಿಯೆ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಎಸ್ ಎಸ್ ಎಲ್ ಸಿ ಪಾಸಾದವರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ.
  • ಒಟ್ಟು 750 ಅರಣ್ಯ ವೀಕ್ಷಕ ಹುದ್ದೆಗಳ ಬರ್ತಿಗೆ ಭರ್ಜರಿ ನೇಮಕಾತಿ.
  • ಆಗಸ್ಟ್ 31, 2026ರ ಒಳಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು.

KFD Recruitment 2026: ಸಂಕ್ಷಿಪ್ತ ವಿವರಣೆ 

ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಎಸ್ ಎಸ್ ಎಲ್ ಸಿ (SSLC) ಪಾಸಾದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಲಭ್ಯವಾಗಿದೆ. ಕರ್ನಾಟಕ ಅರಣ್ಯ ಇಲಾಖೆ (KFD) ರಾಜ್ಯದ ವಿವಿಧ ವೃತ್ತಗಳಲ್ಲಿ ಖಾಲಿ ಇರುವ 750 ಅರಣ್ಯ ವೀಕ್ಷಕ (Forest observer)ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಈ ನೇಮಕಾತಿಯಲ್ಲಿ 700 ಹುದ್ದೆಗಳು Non-HK ಹಾಗೂ 50 ಹುದ್ದೆಗಳು HK ವೃಂದಕ್ಕೆ ಮೀಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ಆಗಸ್ಟ್ 31, 2026 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

  • ಸಂಸ್ಥೆಯ ಹೆಸರು:  ಕರ್ನಾಟಕ ಅರಣ್ಯ ಇಲಾಖೆ (KFD)
  • ಹುದ್ದೆಯ ಹೆಸರು: ಅರಣ್ಯ ವೀಕ್ಷಕ (Forest observer)
  • ಓಟ್ಟು ಹುದ್ದೆಗಳು: 750 (700 Non -HK, 50-Hk)
  • ಉದ್ಯೋಗ ಸ್ಥಳ :ಕರ್ನಾಟಕ
  • ವೇತನ ಶ್ರೇಣಿ: ₹27,500 ರಿಂದ ₹52,650 ರವರೆಗೆ
  • ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮಾತ್ರ (Online)
  • ಅಧಿಕೃತ ವೆಬ್ಸೈಟ್: https://aranya.gov.in/aranyacms/(S(hzqrlocgvxt30stxuk5uspbx))/English/Home.aspx

KFD Recruitment 2026: ಪ್ರಮುಖ ದಿನಾಂಕಗಳು 

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಈ ಕೆಳಗಿನ ಪ್ರಮುಖ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅತ್ಯಗತ್ಯ.

  • ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: 01 ಆಗಸ್ಟ್ 2026
  • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31 ಆಗಸ್ಟ್ 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 02 ಸಪ್ಟೆಂಬರ್ 2026

ಇದನ್ನು ಓದಿ

Lokayukta Recruitment 2026 : Big Update ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

KFD Recruitment 2026: ಶೈಕ್ಷಣಿಕ ವಿದ್ಯಾರ್ಹತೆ 

ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು.

  • ಅಭ್ಯರ್ಥಿಯು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್ಎಸ್ಎಲ್ಸಿ (SSLC ) ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
  • ಅಥವಾ ಸಿಬಿಎಸ್ಇ (CBSE) ಮತ್ತು ಐಸಿಎಸ್ಇ (ICSE) ಮಂಡಳಿಯು ನಡೆಸುವ ಕ್ಲಾಸ್ 10 ಪರೀಕ್ಷೆ, ಇತರೆ ರಾಜ್ಯ ಸರ್ಕಾರ ಪರೀಕ್ಷಾ ಮಂಡಳಿಗಳಿಂದ ನಡೆಸುವ ಹತ್ತನೇ ತರಗತಿ ಪರೀಕ್ಷೆ ಅಥವಾ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (NIOS) ವತಿಯಿಂದ ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಕೋರ್ಸ್ ಅನ್ನು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಪೂರ್ಣಗೊಳಿಸಿರಬೇಕು.

KFD Recruitment 2026: ವಯೋಮಿತಿ ಮತ್ತು ಸಡಿಲಿಕೆ 

ಅಭ್ಯರ್ಥಿಗಳು ಅಧಿಸೂಚನೆ ಹೊರಡಿಸಿದ ಪ್ರಾರಂಭದ ದಿನಾಂಕಕ್ಕೆ ಕನಿಷ್ಠ 18 ವರ್ಷ ವಯಸ್ಸನ್ನು ಕಡ್ಡಾಯವಾಗಿ ಪೂರೈಸಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ

  • ಸಾಮಾನ್ಯ ಅಭ್ಯರ್ಥಿಗಳಿಗೆ (GM): 30 ವರ್ಷಗಳು
  • ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ: 32 ವರ್ಷಗಳು
  • ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ: 33 ವರ್ಷಗಳು

ವಿಶೇಷ ಸೂಚನೆ: ಸರ್ಕಾರದ ಆದೇಶದನ್ವಯ ದಿನಾಂಕ 31.12.2027ರ ವರೆಗೆ ನಿರ್ ನೇಮಕಾತಿಗಳಿಗೆ ಅನ್ವಯಿಸುವಂತೆ ಎಲ್ಲಾ ಪ್ರವರ್ಗಗಳ ಗರಿಷ್ಠ ವಯೋಮಿತಿಯಲ್ಲಿ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ.

ಇದನ್ನು ಓದಿ

NFR Recruitment 2026: ಈಶಾನ್ಯ ಗಡಿ ರೈಲ್ವೆ ಯಲ್ಲಿ 6,777 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, Important Update.

ಅರ್ಜಿ ಶುಲ್ಕದ ವಿವರ (Application Fee)

ಅರ್ಜಿ ಶುಲ್ಕ ಆನ್ಲೈನ್ ಮೂಲಕ (UPI, NEFT, Credit card, Debit card, Internet banking)ಅಥವಾ ನಿಗದಿತ ಬ್ಯಾಂಕಲ್ಲಿ ಚಲನ್ ಮೂಲಕ ನಗದಾಗಿ ಪಾವತಿಸಬಹುದು.

  • ಸಾಮಾನ್ಯ 2A,2B,3A,3B ಪ್ರವರ್ಗದ ಪುರುಷ ಅಭ್ಯರ್ಥಿಗಳಿಗೆ: ₹200
  • ಸಾಮಾನ್ಯ 2A,2B,3A,3B ಪ್ರವರ್ಗದ ಮಹಿಳಾ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ: ₹100
  • SC, ST ಮತ್ತು ಪ್ರವರ್ಗ-1 ರ ಪುರುಷ ಅಭ್ಯರ್ಥಿಗಳಿಗೆ: ₹100
  • SC, ST ಮತ್ತು ಪ್ರವರ್ಗ-1 ರ ಮಹಿಳಾ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ: ₹50
  • ಅಂಗವಿಕಲ ಅಭ್ಯರ್ಥಿಗಳಿಗೆ:  ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
KFD Recruitment 2026: ಆಯ್ಕೆ ಪ್ರಕ್ರಿಯೆ 

ಕರ್ನಾಟಕ ಅರಣ್ಯ ಇಲಾಖೆಯು ಅತ್ಯಂತ ಪಾರದರ್ಶಕವಾಗಿ ಈ ಕೆಳಗಿನ ಹಂತಗಳಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಿದೆ.

  1. ಮೆರಿಟ್ ಪಟ್ಟಿ (merit list): ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:20(ಒಂದು ಹುದ್ದೆಗೆ 20 ಅಭ್ಯರ್ಥಿಗಳು) ಅನುಪಾತದಲ್ಲಿ ದೈಹಿಕ ಪರೀಕ್ಷೆಗಳಿಗೆ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
  2. ಶಾರೀರಿಕ ಮಾನದಂಡಗಳ ಪರೀಕ್ಷೆ (physical standard test): ಪುರುಷ ಅಭ್ಯರ್ಥಿಗಳು ಕನಿಷ್ಠ 163 ಸೆಂಟಿಮೀಟರ್ (ಬುಡಕಟ್ಟು ಅಭ್ಯರ್ಥಿಗಳಿಗೆ 152 ಸೆಂಟಿಮೀಟರ್) ಎತ್ತರ ಹೊಂದಿರಬೇಕು. ಮಹಿಳಾ ಅಭ್ಯರ್ಥಿಗಳು ಕನಿಷ್ಠ 150cm (ಬುಡಕಟ್ಟು ಅಭ್ಯರ್ಥಿಗಳಿಗೆ 145cm)  ಎತ್ತರ ಮತ್ತು 40 ಕೆಜಿ ತೂಕ ಹೊಂದಿರಬೇಕು.
  3. ದೈಹಿಕ ತಾಳ್ವಿಕೆ ಪರೀಕ್ಷೆ (physical endurance test): ಪುರುಷ ಅಭ್ಯರ್ಥಿಗಳು 1600 ಮೀಟರ್ ಓಟವನ್ನು ಏಳು ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಮಹಿಳಾ ಹಾಗೂ ಮಾಜಿ ಸೈನಿಕರ ಅಭ್ಯರ್ಥಿಗಳು 1000 ಮೀಟರ್ ಓಟವನ್ನು 6 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು .
  4. ದೈಹಿಕ ಸಮರ್ಥತೆ ಪರೀಕ್ಷೆ (physical efficiency test): ಇದರಲ್ಲಿ 100 ಮೀಟರ್ ಓಟ, ಹೈ ಜಂಪ್, ಲಾಂಗ್ ಜಂಪ್, ಶಾಟ್ ಪುಟ್ ಮತ್ತು 800 ಮೀಟರ್/200 ಮೀಟರ್ ಓಟ ಇರುತ್ತದೆ. ಅಭ್ಯರ್ಥಿಗಳು 5 ಪರೀಕ್ಷೆಗಳ ಪೈಕಿ ಕನಿಷ್ಠ ಮೂರರಲ್ಲಿ ಕಡ್ಡಾಯವಾಗಿ ತೇರ್ಗಡೆ ಹೊಂದಬೇಕು.
  5. ವೈದ್ಯಕೀಯ ಪರೀಕ್ಷೆ (medical test): ದೃಷ್ಟಿ ಸಾಮರ್ಥ್ಯ ಮತ್ತು ಶ್ರವಣ ಪರೀಕ್ಷೆಗಳನ್ನು ನಡೆಸಲಾಗುವುದು.

ಇದನ್ನು ಓದಿ

Honey Bee Farm Subsidy 2026 : ಜೇನು ಸಾಕಾಣಿಕೆಗೆ ಸರ್ಕಾರದಿಂದ ಭರ್ಜರಿ ಸಹಾಯಧನ. ಮೊಬೈಲ್ ಮೂಲಕ ಅಪ್ಲೈ ಮಾಡಿ. Important.

  KFD Recruitment 2026: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to apply online?)

 

ಲಭ್ಯವಿರುವ ಮಾಹಿತಿಯ ಪ್ರಕಾರ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆಗಸ್ಟ್ ಒಂದರಿಂದ ಪ್ರಾರಂಭವಾಗುತ್ತದೆ.

ಪಾಸಕ್ತ ಅಭ್ಯರ್ಥಿಗಳು ಈ ಕೆಳಗಿನ ಸರಳ ಹಂತಗಳನ್ನು ಅನುಸರಿಸಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

Step 1. ಪ್ರಥಮವಾಗಿ ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ಗ ಭೇಟಿ ನೀಡಿ.

Step 2. ಮುಖಪುಟದ ಕೆಳಭಾಗದಲ್ಲಿರುವ ನೇಮಕಾತಿ ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿ.

Step 3. ಅರಣ್ಯ ವೀಕ್ಷಕ ಹುದ್ದೆಯ ಅತಿ ಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮ್ಮ ಅರಹತೆಯನ್ನು ಖಚಿತಪಡಿಸಿಕೊಳ್ಳಿ

Step 4. ಆನ್ಲೈನ್ ಅರ್ಜಿ ನಮೂನೆಯಲ್ಲಿ ಕೇಳಲಾದ ನಿಮ್ಮ ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿ ಮತ್ತು ಸಂಪರ್ಕ ವಿವರಗಳನ್ನು ಭರ್ತಿ ಮಾಡಿ.

Step 5. ನಿಮ್ಮ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಸಹಿ ಮತ್ತು ಅಗತ್ಯವಿರುವ ಎಲ್ಲಾ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

Step 6. ನಿಮ್ಮ ಪ್ರವರ್ಗಕ್ಕೆ ಅನ್ವಯವಾಗುವ ಅರ್ಜಿ ಶುಲ್ಕವನ್ನು ಆನ್ಲೈನ್ ಅಥವಾ ಬ್ಯಾಂಕ್ ಚಲನ ಮೂಲಕ ಪಾವತಿಸಿ.

Step 7. ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಅಂತಿಮವಾಗಿ submit ಬಟನ್ ಕ್ಲಿಕ್ ಮಾಡಿ ಮತ್ತು ಮುಂದಿನ ಮಾಹಿತಿಗಾಗಿ ಅರ್ಜಿಯ ಮುದ್ರಿತ ಪ್ರತಿಯನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.

ಸೂಚನೆ: ಯಾವುದೇ ಕಾರಣಕ್ಕೂ ಆನ್ಲೈನ್ ಅರ್ಜಿಯನ್ನು ಅಂಚೆ ಮುಖಾಂತರ ಅಥವಾ ಖುದ್ದಾಗಿ ಇಲಾಖೆಗೆ ಸಲ್ಲಿಸುವ ಅಗತ್ಯವಿರುವುದಿಲ್ಲ.

KFD Recruitment 2026: ಅರಣ್ಯ ವೀಕ್ಷಕ ಹುದ್ದೆಯ ಪ್ರಾಮುಖ್ಯತೆ. 

ಅರಣ್ಯ ವೀಕ್ಷಕನು ಕರ್ನಾಟಕ ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಯಾಗಿದ್ದು, ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾನೆ. ಈ ಹುದ್ದೆಯ ಪ್ರಮುಖ ಜವಾಬ್ದಾರಿಗಳು:

  • ಅರಣ್ಯ ಪ್ರದೇಶದಲ್ಲಿ ನಿಯಮಿತ ಗಸ್ತು ನಡೆಸುವುದು.
  • ವನ್ಯಜೀವಿಗಳನ್ನು ರಕ್ಷಿಸುವುದು ಹಾಗೂ ಬೇಟೆ, ಮರಗಳ ಅಕ್ರಮ ಕಡಿತ, ಅತಿಕ್ರಮಣ ಮುಂತಾದ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯುವುದು.
  • ಅರಣ್ಯ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಮಾಹಿತಿ ನೀಡಿ ಬೆಂಕಿ ನಿಯಂತ್ರಣ ಕಾರ್ಯದಲ್ಲಿ ಭಾಗವಹಿಸುವುದು.
  • ಅರಣ್ಯದ ಸ್ಥಿತಿ, ಪ್ರಾಣಿಗಳ ಚಲನವಲನ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುವುದು.
  • ಅರಣ್ಯ ಸಂರಕ್ಷಣೆ ಮತ್ತು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಸರ್ಕಾರಿ ಕಾರ್ಯಕ್ರಮಗಳಲ್ಲಿ ಸಹಕರಿಸುವುದು.

ಸರ್ಕಾರಿ ಉದ್ಯೋಗ ಸಾಮಾನ್ಯ ಜನರ ಕನಸಾಗಿರುತ್ತದೆ. ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಜೀವನವನ್ನು ಉಜ್ವಲಗೊಳಿಸಿಕೊಳ್ಳಿ. ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ.

KFD Recruitment 2026: ಈ ಹುದ್ದೆಯ ಮಹತ್ವ 

  • ರಾಜ್ಯದ ಅರಣ್ಯ ಸಂಪತ್ತು ಮತ್ತು ಜೀವವೈವಿಧ್ಯವನ್ನು ಕಾಪಾಡಲು ಅತ್ಯಂತ ಅಗತ್ಯವಾದ ಹುದ್ದೆ.
  • ಪ್ರಕೃತಿ ಮತ್ತು ಪರಿಸರ ಸಂರಕ್ಷಣೆಗೆ ನೇರವಾಗಿ ಸೇವೆ ಸಲ್ಲಿಸುವ ಅವಕಾಶ.
  • ಸರ್ಕಾರಿ ಉದ್ಯೋಗ ವಾಗಿರುವುದರಿಂದ ಸ್ಥಿರ ವೇತನ, ಬತ್ತ್ಯೆ ಹಾಗೂ ಇತರ ಸರ್ಕಾರಿ ಸೌಲಭ್ಯಗಳು ಲಭ್ಯ.

ಇದನ್ನು ಓದಿ

Karnataka Old Pension Scheme: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್, ಹಳೆ ಪಿಂಚಣಿ ಜಾರಿಗೆ ಸರ್ಕಾರದ ಹೆಜ್ಜೆ.ಸಿಎಂ ಡಿಕೆಶಿ ಸೂಚನೆ.Important update.

ಇದನ್ನು ಓದಿ

VAO ನೇಮಕಾತಿ 2026 : Big Update ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅಧಿ ಸೂಚನೆ ಪ್ರಕಟ

 

 

Leave a Comment