NFR Recruitment 2026: ಈಶಾನ್ಯ ಗಡಿ ರೈಲ್ವೆ ಯಲ್ಲಿ 6,777 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, Important Update.

WhatsAppಫಾಲೋ ಮಾಡಿ

NFR Recruitment 2026  NFR Recruitment 2026 : ಈಶಾನ್ಯ ಗಡಿ ರೈಲ್ವೆ ವತಿಯಿಂದ 2025- 26 ಹಾಗೂ 2026-27ನೇ ಸಾಲಿನ ಒಟ್ಟು 6,777 ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಹತ್ತನೇ ತರಗತಿ ಹಾಗೂ ಐಟಿಐ ಪಾಸಾದ ಅರ್ಹ ಅಭ್ಯರ್ಥಿಗಳು ಆಗಸ್ಟ್ 19 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಹತೆ , ವಯೋಮಿತಿ, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

NFR Recruitment 2026: ಸಂಕ್ಷಿಪ್ತ ವಿವರಣೆ.

  • ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ. ಸಂಪೂರ್ಣ ಮೆರಿಟ್ ಆಧಾರಿತ ಆಯ್ಕೆ ಪ್ರಕ್ರಿಯೆ.
  • ಮಾಸಿಕ ₹9,600 ರಿಂದ ₹11,040 ವರೆಗೆ ಆಕರ್ಷಕ ಸ್ಟೈ ಫಂಡ್ ಸೌಲಭ್ಯ.
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಆಗಸ್ಟ್ 2026.

ರೈಲ್ವೆ ಇಲಾಖೆಯಲ್ಲಿ ವೃತ್ತಿ ಜೀವನ ಆರಂಭಿಸಲು ಬಯಸುತ್ತಿರುವ 10ನೇ ತರಗತಿ ಹಾಗೂ ಐಟಿಐ (ITI) ಪಾಸಾದ ಅಭ್ಯರ್ಥಿಗಳಿಗೆ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ. ಭಾರತೀಯ ರೈಲ್ವೆಯ ಈಶಾನ್ಯ ಗಡಿ ರೈಲ್ವೆ (Northeast Frontier Railway) 2025 26 ಹಾಗೂ 2026 27 ನೇ ಸಾಲಿನ ತರಬೇತಿ ಚಕ್ರಗಳಿಗಾಗಿ ಒಟ್ಟು 6,777 ಆಕ್ಟ್ ಅಪ್ರೆಂಟಿಸ್ (Act Apprentice) ಹುದ್ದೆಗಳ ಬರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.

ಈ ನೇಮಕಾತಿ ಅಡಿ ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳ ವ್ಯಾಪ್ತಿಯ ವಿವಿಧ ರೈಲ್ವೆ ವಿಭಾಗಗಳು ಮತ್ತು ಕಾರ್ಯಾಗಾರ ಗಳಲ್ಲಿ ತರಬೇತಿ ಪಡೆಯುವ ಅವಕಾಶ ಲಭ್ಯವಿದೆ. ವಿಶೇಷವೆಂದರೆ, ಯಾವುದೇ ಲಿಖಿತ ಪರೀಕ್ಷೆ ಇಲ್ಲದೇ ಕೇವಲ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

NFR Recruitment 2026:

  • ಸಂಸ್ಥೆಯ ಹೆಸರು: ಈಶಾನ್ಯ ಗಡಿ ರೈಲ್ವೆ (NFR), ಸಿಬ್ಬಂದಿ ಇಲಾಖೆ
  • ಅಧಿ ಸೂಚನೆ ಸಂಖ್ಯೆ : NFR/NAPS/ACT APP/2026
  • ಹುದ್ದೆಯ ಹೆಸರು : ಆಕ್ಟ್ ಅಪ್ರೆಂಟಿಸ್,(ವಿವಿಧ ಟ್ರೇಡ್ ಗಳು)
  • ಒಟ್ಟು ಹುದ್ದೆಗಳು: 6,777 ತರಬೇತಿ ಸ್ಲಾಟ್ ಗಳು
  • ಉದ್ಯೋಗದ ಸ್ಥಳ: ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರ (NFR ವ್ಯಾಪ್ತಿ)
  • ಅರ್ಜಿ ಸಲ್ಲಿಸುವ ವಿಧಾನ:  ಆನ್ಲೈನ್ ಮಾತ್ರ (Online)
  • ಅಧಿಕೃತ ಜಾಲತಾಣ : https://www.nfr.indianrailways.gov.in/

NFR Recruitment 2026: ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಶುಲ್ಕ. 

ಪ್ರಮುಖ ದಿನಾಂಕಗಳು (Important Dates)

  • ಅಧಿಸೂಚನೆ ಪ್ರಕಟವಾದ ದಿನಾಂಕ:  14 ಜುಲೈ 2026
  • ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 20 ಜುಲೈ 2026 (ಬೆಳಗ್ಗೆ 9:00 ಯಿಂದ)
  • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19 ಆಗಸ್ಟ್ 2026 ( ಸಂಜೆ 5:30 ಗಂಟೆ)

ಅರ್ಜಿ ಶುಲ್ಕದ ವಿವರ (Application Fee)

  • ಸಾಮಾನ್ಯ( General ) , OBC ಮತ್ತು EWS (ಪುರುಷ) ಅಭ್ಯರ್ಥಿಗಳಿಗೆ: ₹100/ (ಹಿಂತಿರುಗಿಸಲಾಗುವುದಿಲ್ಲ)
  • SC, ST, PWBD ಮತ್ತು ಮಹಿಳಾ ಅಭ್ಯರ್ತಿಗಳಿಗೆ (ಎಲ್ಲಾ ವರ್ಗದ) : ಸಂಪೂರ್ಣ ವಿನಾಯಿತಿ ನೀಡಲಾಗಿದೆ .(ಯಾವುದೇ ಶುಲ್ಕವಿರುವುದಿಲ್ಲ)
  • ಆರ್ಥಿಕವಾಗಿ ಹಿಂದುಳಿದ ವರ್ಗದ (EBC) ಅಭ್ಯರ್ಥಿಗಳಿಗೆ : ವಾರ್ಷಿಕ ಕೌಟುಂಬಿಕ ಆದಾಯ 50,000 ಕ್ಕಿಂತ ಕಡಿಮೆ ಇದ್ದು, ಸೂಕ್ತ ಪ್ರಮಾಣ ಪತ್ರ ಅಪ್ಲೋಡ್ ಮಾಡಿದರೆ ಶುಲ್ಕ ವಿನಾಯಿತಿ ಸಿಗಲಿದೆ.

ಇದನ್ನು ಓದಿ

ಗೃಹಲಕ್ಷ್ಮಿ ಹೊಸ ಅಪ್ಡೇಟ್ : Important Update, ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಹಣ ಜಮಾ ಬಗ್ಗೆ ಸರ್ಕಾರದ ಸ್ಪಷ್ಟನೆ.

NFR Recruitment 2026 : ವಿಭಾಗವಾರು ಖಾಲಿ ಹುದ್ದೆಗಳ ವಿವರ. 

ಈಶಾನ್ಯ ಗಡಿ ರೈಲ್ವೆ ಯ ವಿವಿಧ ಎಂಟು ಯೂನಿಟ್ ಗಳಲ್ಲಿ ಹುದ್ದೆಗಳನ್ನು ಈ ಕೆಳಗೆನಂತೆ ಹಂಚಿಕೆ ಮಾಡಲಾಗಿದೆ.

  1. ಕತಿಹಾರ್ (KIR) ಮತ್ತು ತಿಂದಾರಿಯ (TDH) ವರ್ಕ್ ಶಾಪ್: 1103 ಹುದ್ದೆಗಳು
  2. ಅಲಿಪುರದ್ವಾರ್ (APDJ) : 651 ಹುದ್ದೆಗಳು
  3. ರಂಗಿಯಾ (RNY) : 750 ಹುದ್ದೆಗಳು
  4. ಲುಮಡಿಂಗ್ (LMG): 1274 ಹುದ್ದೆಗಳು
  5. ತಿನ್ಸುಕಿಯಾ (TSK) : 860 ಹುದ್ದೆಗಳು
  6. ನ್ಯೂ ಬೊಂಗೈ ಗಾಂವ್ ವರ್ಕ್ ಶಾಪ್ (NBQS) ಮತ್ತು ಇಂಜಿನಿಯರಿಂಗ್ ವರ್ಕ್ ಶಾಪ್ : 881 ಹುದ್ದೆಗಳು
  7. ದಿಬ್ರುಗಡ್ ವರ್ಕ್ ಶಾಪ್ (DBWS) : 763 ಹುದ್ದೆಗಳು
  8. ಪ್ರಧಾನ ಕಛೇರಿ (HQ) ಮಾಲಿಂಗಾವ್  : 495 ಹುದ್ದೆಗಳು

ಒಟ್ಟು ಖಾಲಿ ಇರುವ ಹುದ್ದೆಗಳು: 6,777

NFR Recruitment 2026 : ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ 

ಶೈಕ್ಷಣಿಕ ಅರ್ಹತೆ (Educational Qualification)

  • ಸಾಮಾನ್ಯ ಟ್ರೇಡ್ ಗಳು: ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಕನಿಷ್ಠ ಶೇಕಡ 50ರಷ್ಟು ಒಟ್ಟು ಅಂಕಗಳೊಂದಿಗೆ 10ನೇ ತರಗತಿ (Matriculation )ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಇದರೊಂದಿಗೆ NCVT / SCVT ಇವರಿಂದ ಮಾನ್ಯತೆ ಪಡೆದ ರಾಷ್ಟ್ರೀಯ ವ್ಯಾಪಾರ ಪ್ರಮಾಣ ಪತ್ರ (ITI Certificate )ಹೊಂದಿರಬೇಕು.(ಗಮನಿಸಿ: SC, ST ಮತ್ತು PWBD ಅಭ್ಯರ್ಥಿಗಳಿಗೆ 10ನೇ ತರಗತಿಯಲ್ಲಿ ಶೇಕಡ 50 ಅಂಕಗಳ ಕಡ್ಡಾಯ ನಿಯಮ ಅನ್ವಯಿಸುವುದಿಲ್ಲ).
  • ಮೆಡಿಕಲ್ ಲ್ಯಾಬೋರೇಟರಿ ಟೆಕ್ನೀಷಿಯನ್ ( Pathology/ Radiology ) : ಅಭ್ಯರ್ಥಿಗಳು 10+2 ಪದ್ಧತಿಯಡಿ ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಮತ್ತು ಜೀವಶಾಸ್ತ್ರ (PCB) ವಿಷಯಗಳೊಂದಿಗೆ 12ನೇ ತರಗತಿ ಉತ್ತೀರ್ಣರಾಗಿರಬೇಕು. ಮತ್ತು 10 ಹಾಗೂ 12ನೇ ತರಗತಿಗಳೆರಡರಲ್ಲೂ ಕನಿಷ್ಠ ಶೇಕಡ 50ರಷ್ಟು ಅಂಕಗಳನ್ನು ಗಳಿಸಿರಬೇಕು.

ವಯೋಮಿತಿ (AGE Limit)

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ ತುಂಬಿರಬೇಕು ಮತ್ತು 24 ವರ್ಷ ವಯಸ್ಸು ಮೀರಿರಬಾರದು.

ಗರಿಷ್ಠ ವಯೋಮಿತಿ ಸಡಿಲಿಕೆ:

  • SC , ST ಅಭ್ಯರ್ಥಿಗಳಿಗೆ :5 ವರ್ಷಗಳು
  • OBC ಅಭ್ಯರ್ಥಿಗಳಿಗೆ : 3 ವರ್ಷಗಳು
  • ವಿಕಲಚೇತನ (PWBD )ಮತ್ತು ಮಾಜಿ ಸೈನಿಕ (EX Servicemen) ಅಭ್ಯರ್ಥಿಗಳಿಗೆ: 10 ವರ್ಷಗಳು.

ಇದನ್ನು ಓದಿ

ಅಬಕಾರಿ ಇಲಾಖೆ ನೇಮಕಾತಿ 2026: Important Karnataka Excise Department Recruitment, 1,207 ಹುದ್ದೆಗಳ ನೇಮಕಾತಿ , ಪಿಯುಸಿ ಪದವೀಧರರಿಗೆ ಭರ್ಜರಿ ಅವಕಾಶ.

NFR Recruitment 2026 : ಮಾಸಿಕ ಸ್ಟೈಫಂಡ್ ವಿವರ 

ಕೇಂದ್ರ ಸರ್ಕಾರದ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಇತ್ತೀಚಿನ ನಿಯಮಗಳ ಪ್ರಕಾರ ಆಯ್ಕೆಯಾಗುವ ಐಟಿಐ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮಾಸಿಕ ಸ್ಟೈ ಫಂಡ್ ನೀಡಲಾಗುತ್ತದೆ.

  • ಮೊದಲ ವರ್ಷದ ತರಬೇತಿಯ ಅವಧಿಗೆ:  ಮಾಸಿಕ ₹9,600
  • ಎರಡನೇ ವರ್ಷದ ಅವಧಿಗೆ (ವಿನಾಯಿತಿ ಇದ್ದಲ್ಲಿ):  ಶೇಕಡ ಹತ್ತರಷ್ಟು ಹೆಚ್ಚಳದೊಂದಿಗೆ ₹10,560
  • ಮೂರನೇ ವರ್ಷದ ಅವಧಿಗೆ ವಿನಾಯಿತಿ ಇದ್ದಲ್ಲಿ:  ಶೇಕಡ 15ರಷ್ಟು ಹೆಚ್ಚಳದೊಂದಿಗೆ ₹11,040
  • (ಗಮನಿಸಿ: ತರಬೇತಿ ಅವಧಿಯಲ್ಲಿ ರೈಲ್ವೆ ಇಲಾಖೆಯಿಂದ ಯಾವುದೇ ಉಚಿತ ವಸತಿ ಅಥವಾ ಹಾಸ್ಟೆಲ್ ಸೌಲಭ್ಯ ಒದಗಿಸುವುದಿಲ್ಲ. ಅಭ್ಯರ್ಥಿಗಳೇ ಸ್ವಂತ ವ್ಯವಸ್ಥೆ ಮಾಡಿಕೊಳ್ಳಬೇಕು..

ಆಯ್ಕೆ ಪ್ರಕ್ರಿಯೆ ಮತ್ತು ಬೇಕಾಗುವ ದಾಖಲೆಗಳು (Selection Process)

ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. 10ನೇ ತರಗತಿಯಲ್ಲಿ ಪಡೆದ ಅಂಕಗಳು ಮತ್ತು ಐಟಿಐ (ITI )ನಲ್ಲಿ ಪಡೆದ ಅಂಕಗಳ ಸರಾಸರಿ (Average Marks) ಶೇಕಡವಾರು ಆಧಾರದ ಮೇಲೆ ಸಂಪೂರ್ಣವಾಗಿ ಮೆರಿಟ್ ಪಟ್ಟಿ (Merit list) ಸಿದ್ಧಪಡಿಸಿ ಅಭ್ಯರ್ಥಿಗಳನ್ನು ನೇರ ಆಯ್ಕೆ ಮಾಡಲಾಗುತ್ತದೆ. ಮೆರಿಟ್ ಆಧಾರದಲ್ಲಿ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳನ್ನು 1.5 ಪಟ್ಟು ಅನುಪಾತದಲ್ಲಿ ದಾಖಲಾತಿ ಪರಿಶೀಲನೆಗೆ (Document Verification) ಕರೆಯಲಾಗುತ್ತದೆ.

ಪ್ರಮುಖ ದಾಖಲೆಗಳು (Documents to upload)

  • ಹತ್ತನೇ ತರಗತಿಯ ಅಂಕಪಟ್ಟಿ ಮತ್ತು ತೇರ್ಗಡೆ ಪ್ರಮಾಣ ಪತ್ರ.
  • 12ನೇ ತರಗತಿ (PCB) ಅಂಕಪಟ್ಟಿ (ಕೇವಲ ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಿಗೆ ಮಾತ್ರ)
  • ಐಟಿಐ ಎಲ್ಲಾ ಸೆಮಿಸ್ಟರ್ಗಳ ಕ್ರೋಡಿಕೃತ ಅಂಕಪಟ್ಟಿ (consolidated marks card) ಅಥವಾ ಪ್ರಾವಿಷನಲ್ ಪ್ರಮಾಣ ಪತ್ರ.
  • NCVT / SCVT ನಿಂದ ನೀಡಲಾದ ರಾಷ್ಟ್ರೀಯ ವ್ಯಾಪಾರ ಪ್ರಮಾಣ ಪತ್ರ. (NTC)
  • ಜಾತಿ ಪ್ರಮಾಣ ಪತ್ರ( SC , ST ಮತ್ತು OBC ಅಭ್ಯರ್ಥಿಗಳಿಗೆ) ಮತ್ತು EWS/PWBD ಪ್ರಮಾಣ ಪತ್ರ ( ಅನ್ವಯಿಸುವವರಿಗೆ)
  • ಸರ್ಕಾರಿ ಅಧಿಕೃತ ವೈದ್ಯರಿಂದ ಪಡೆದ ದೈಹಿಕ ಫಿಟ್ನೆಸ್ ಪ್ರಮಾಣ ಪತ್ರ ( medical fitness certificate)  ದಾಖಲಾತಿ ಪರಿಶೀಲನೆ ಸಮಯದಲ್ಲಿ ಕಡ್ಡಾಯವಾಗಿ ಸಲ್ಲಿಸಬೇಕು.

ಇದನ್ನು ಓದಿ

KSRP Recruitment 2026: Important 2,314 ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ಜರಿ ನೇಮಕಾತಿ

NFR Recruitment 2026: ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ (How to Apply)

ಅರ್ಹ ಅಭ್ಯರ್ಥಿಗಳು ಜುಲೈ 20 2026 ರಿಂದ ಆಗಸ್ಟ್ 19 2026ರ ಒಳಗೆ ಈ ಕೆಳಗಿನ ಹಂತಗಳ ಮೂಲಕ ಅರ್ಜಿ ಸಲ್ಲಿಸಬಹುದು.

Step 1. ಈಶಾನ್ಯ ಗಡಿ ರೈಲ್ವೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

Step 2. ವೆಬ್ಸೈಟ್ ಮುಖಪುಟದಲ್ಲಿ General Info – Departments- Personal – Act – Apprentice Notification ಅನುಸರಿಸಿ ಲಿಂಕ್ ಕ್ಲಿಕ್ ಮಾಡಿ.

Step 3. ನಿಮ್ಮ ಪ್ರಾಥಮಿಕ ವಿವರಗಳನ್ನು ನಮೂದಿಸಿ ಪ್ರಥಮವಾಗಿ ನೋಂದಣಿ  (Registration )ಮಾಡಿಕೊಳ್ಳಿ.

Step 4. ನಂತರ ಜನರೇಟ್ ಆದ ಯೂಸರ್ ಐಡಿ ಮತ್ತು ಪಾಸ್ವರ್ಡ್ ಬಳಸಿ ಲಾಗಿನ್ ಆಗಿ.

Step 5. ಆನ್ಲೈನ್ ಅರ್ಜಿಯಲ್ಲಿ ಕೇಳಲಾದ ವಿವರಗಳನ್ನು ಭರ್ತಿ ಮಾಡಿ ನಿಮ್ಮ ವಿಭಾಗ (Unit) ಹಾಗೂ ಟ್ರೇಡ್ ಗಳ ಆದ್ಯತೆಯನ್ನು (Preference) ಸ್ಪಷ್ಟವಾಗಿ ನಮೂದಿಸಿ.

Step 6. ನಿಮ್ಮ ಭಾವಚಿತ್ರ, ಸಹಿ ಮತ್ತು ಎಲ್ಲಾ ಅಗತ್ಯ ಶೈಕ್ಷಣಿಕ ಹಾಗೂ ತಾಂತ್ರಿಕ ದಾಖಲೆಗಳನ್ನು ನಿಗದಿತ ಗಾತ್ರದಲ್ಲಿ ಸ್ಪಷ್ಟವಾಗಿ ಅಪ್ಲೋಡ್ ಮಾಡಿ.

Step 7. ಸಾಮಾನ್ಯ OBC/EWS ಪುರುಷ ಅಭ್ಯರ್ಥಿಗಳು ಆನ್ಲೈನ್ ಪೇಮೆಂಟ್ ಮೂಲಕ 100/ ರೂಪಾಯಿ ಅರ್ಜಿ ಶುಲ್ಕ ಪಾವತಿಸಿ.(ವಿನಾಯಿತಿ ಇರುವ ವರ್ಗದವರು ನೇರವಾಗಿ ಮುಂದುವರಿಯಬಹುದು).

Step 8. ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ ಮತ್ತು ಮುಂದಿನ ರೆಫರೆನ್ಸ್ ಗಾಗಿ ಅಂತಿಮ ಅರ್ಜಿಯ ಪ್ರಿಂಟ್ ಔಟ್ ಅನ್ನು ಡೌನ್ಲೋಡ್ ಮಾಡಿ ಕಾಯ್ದಿಟ್ಟುಕೊಳ್ಳಿ.

NFR Recruitment 2026 :ವಿಶೇಷ ಸೂಚನೆ. 

ಈ ಅಪ್ರೆಂಟಿಸ್ ತರಬೇತಿಯು ಕೇವಲ ಒಂದು ಕೌಶಲಾಭಿವೃದ್ಧಿ ಕಾರ್ಯಕ್ರಮವಾಗಿದ್ದು, ಇದು ರೈಲ್ವೆ ಇಲಾಖೆಯಲ್ಲಿ ನೇರ ಉದ್ಯೋಗದ ಹಕ್ಕನ್ನು ನೀಡುವುದಿಲ್ಲ ಆದರೆ ಮುಂದಿನ ದಿನಗಳಲ್ಲಿ ರೈಲ್ವೆ ಇಲಾಖೆಯು ಬಿಡುಗಡೆ ಮಾಡುವ ಗ್ರೂಪ್ ಡಿ (Group D , Level -1) ಹುದ್ದೆಗಳ ನೇಮಕಾತಿಯಲ್ಲಿ ಕೋರ್ಸ್ ಪೂರ್ಣಗೊಳಿಸಿದ ರೈಲ್ವೆ ಆಕ್ಟ್ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ 20% ರಷ್ಟು ಹುದ್ದೆಗಳ ಬೃಹತ್ ಮೀಸಲಾತಿ (Preference )ಸೌಲಭ್ಯ ದೊರೆಯಲಿದೆ.

ಇದನ್ನು ಓದಿ

Crop Insurance Release 2026: Important,ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ: ₹585.72 ಕೋಟಿ ಮಂಜೂರು ಮೊಬೈಲ್ನಲ್ಲಿ ಸ್ಟೇಟಸ್ ಪರಿಶೀಲಿಸುವುದು ಹೇಗೆ?

NFR Recruitment 2026 : ಈ ಉದ್ಯೋಗ ಎಷ್ಟು ಮುಖ್ಯ? 
  • ರೈಲ್ವೆಯಲ್ಲಿ ಪ್ರಾಯೋಗಿಕ ಅನುಭವ ಸಿಗುತ್ತದೆ.
  • ಐಟಿಐ ಅಭ್ಯರ್ಥಿಗಳಿಗೆ ಉತ್ತಮ ವೃತ್ತಿ ಜೀವನ ಆರಂಭವಾಗುವುದು.
  • ನಂತರ ಆರ್ ಆರ್ ಬಿ ಆರ್ ಆರ್ ಸಿ ಮತ್ತು ಇತರ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಹಾಕುವಾಗ ಅನುಭವ ಉಪಯುಕ್ತವಾಗುತ್ತದೆ.
  • ಆದರೆ ಅಪ್ರೆಂಟಿಸ್ ಮುಗಿದ ತಕ್ಷಣ ಶಾಶ್ವತ ರೈಲ್ವೆ ಉದ್ಯೋಗ ಸಿಗುತ್ತದೆ ಎಂಬ ಕಾತರಿ ಇಲ್ಲ.

NFR Recruitment 2026 ರಲ್ಲಿ ಆಯ್ಕೆಯಾಗುವ ಎಲ್ಲಾ ಅಭ್ಯರ್ಥಿಗಳಿಗೆ ಹೇಳುವುದೇನೆಂದರೆ, ನಿಮ್ಮ ಪರಿಶ್ರಮ, ಶಿಸ್ತು ಮತ್ತು ನಿರಂತರ ಪ್ರಯತ್ನಕ್ಕೆ ಯಶಸ್ಸು ದೊರೆಯಲಿದೆ. ನಿಮ್ಮ ಮುಂದಿನ ಸೇವ ಜೀವನವು ಯಶಸ್ವಿಯಾಗಲಿ. ಪ್ರಾಮಾಣಿಕತೆ ಕರ್ತವ್ಯ ನಿಷ್ಠೆ ಮತ್ತು ಜನಸೇವೆಯ ಮನೋಭಾವದೊಂದಿಗೆ ಉತ್ತಮ ಸಾಧನೆ ಮಾಡಲಿ ಎಂಬ ಶುಭ ಹಾರೈಕೆಗಳು.

Leave a Comment