ಗೃಹಲಕ್ಷ್ಮಿ ಹೊಸ ಅಪ್ಡೇಟ್ : ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಸರ್ಕಾರದ ಮಹತ್ವದ ಸ್ಪಷ್ಟನೆ. ಈ ಕೆ ವೈ ಸಿ ಮಾಡಿಸದಿದ್ದರೆ ಹಣ ನಿಲ್ಲುತ್ತದೆಯೇ? ವದಂತಿಗಳ ಬಗ್ಗೆ ಸರ್ಕಾರ ಹೇಳಿದ್ದೇನು? ಹಣ ಜಮಾ ಬಗ್ಗೆ ಮಾಹಿತಿ ಇಲ್ಲಿದೆ.
ಗೃಹಲಕ್ಷ್ಮಿ ಹೊಸ ಅಪ್ಡೇಟ್.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಒಂದಾದ ಗೃಹಲಕ್ಷ್ಮಿ (Gruha Lakshmi) ಯೋಜನೆಗೆ ಸಂಬಂಧಿಸಿ ದಂತೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡುತ್ತಿವೆ.
ಇ ಕೆ ವೈ ಸಿ ಕಡ್ಡಾಯವಾಗಿ ಮಾಡಿಸದಿದ್ದರೆ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಆಗುವುದಿಲ್ಲ ಎಂಬ ಸಂದೇಶಗಳು ಅನೇಕ ಫಲಾನುಭವಿಗಳಲ್ಲಿ ಆತಂಕ ಉಂಟು ಮಾಡಿದ್ದವು. ಈಗ ಈ ಗೊಂದಲಕ್ಕೆ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವೇ ಸ್ಪಷ್ಟನೆ ನೀಡಿದ್ದು ಸಾರ್ವಜನಿಕರು ಯಾವುದೇ ಸುಳ್ಳು ಮಾಹಿತಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದೆ.
ಗೃಹಲಕ್ಷ್ಮಿ ಹೊಸ ಅಪ್ಡೇಟ್: ಇ ಕೆ ವೈ ಸಿ ಮಾಡಿಸದಿದ್ದರೆ ಹಣ ನಿಲ್ಲುತ್ತದೆಯೇ?
ಸದ್ಯಕ್ಕೆ ಇಲ್ಲ. ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಇ ಕೆವೈಸಿ ಮಾಡಿಸಬೇಕು ಎಂದು ಸರ್ಕಾರದಿಂದ ಯಾವುದೇ ಅಧಿಕೃತ ಆದೇಶ ಅಥವಾ ಮಾರ್ಗಸೂಚಿ ಹೊರ ಬಂದಿಲ್ಲ.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ ಎಸ್ ಚಂದ್ರ ಭೂಪಾಲ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಈ ರೀತಿಯ ಸಂದೇಶಗಳು ಸಂಪೂರ್ಣ ವದಂತಿಗಳಾಗಿದ್ದು, ಜನರು ಅವುಗಳನ್ನು ನಂಬಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ಸೈಬರ್ ಸೆಂಟರ್ಗಳಿಗೆ ಅನಗತ್ಯವಾಗಿ ಅಲೆದಾಡಬೇಡಿ.
ಇ ಕೆ ವೈ ಸಿ ಮಾಡಿಸಬೇಕೆಂಬ ಸುದ್ದಿಯನ್ನು ನಂಬಿ ಅನೇಕ ಮಹಿಳೆಯರು ಖಾಸಗಿ ಸೈಬರ್ ಸೆಂಟರ್ (Cyber centre), ಗ್ರಾಮ ಓನ್ (Grama one) ಹಾಗೂ ಕರ್ನಾಟಕ ಒನ್ (Karnataka one) ಕೇಂದ್ರಗಳಿಗೆ ತೆರಳಿ ಸಮಯ ಮತ್ತು ಹಣ ವ್ಯಯ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ.
ಆದ್ದರಿಂದ ಯಾವುದೇ ಅಧಿಕೃತ ಪ್ರಕಟಣೆ ಬರುವವರೆಗೆ ಇಂತಹ ಕೇಂದ್ರಗಳಿಗೆ ಅನಗತ್ಯವಾಗಿ ತೆರಳಿ ಗೊಂದಲಕ್ಕೆ ಒಳಗಾಗಬೇಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.
ಇದನ್ನು ಓದಿ
ಗೃಹಲಕ್ಷ್ಮಿ ಹೊಸ ಅಪ್ಡೇಟ್ : ಸರ್ಕಾರದ ಪರಿಷ್ಕರಣೆ ಪ್ರಕ್ರಿಯೆ ಬಗ್ಗೆ ಏನು ಹೇಳಿದೆ?
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಮಾಹಿತಿಯನ್ನು ಪರಿಷ್ಕರಿಸುವ ಉದ್ದೇಶ ಸರ್ಕಾರಕ್ಕಿದೆ. ಆದರೆ ಈ ಪರಿಷ್ಕರಣೆ ಯಾವಾಗ ನಡೆಯಲಿದೆ, ಯಾವ ರೀತಿ ನಡೆಯಲಿದೆ ಹಾಗೂ ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬ ಬಗ್ಗೆ ಸರ್ಕಾರ ಇನ್ನು ಯಾವುದೇ ಅಧಿಕೃತ ಮಾರ್ಗಸೂಚಿ ಪ್ರಕಟಿಸಿಲ್ಲ. ಹೀಗಾಗಿ ಸದ್ಯಕ್ಕೆ ಫಲಾನುಭವಿಗಳು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ.
30 ಕಂತುಗಳ ಹಣ ಯಶಸ್ವಿಯಾಗಿ ಜಮೆ
ಗೃಹಲಕ್ಷ್ಮಿ ಯೋಜನೆ ಆರಂಭವಾದ ದಿನದಿಂದಲೇ ರಾಜ್ಯದ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಪ್ರತಿ ತಿಂಗಳು ₹2000 ನೇರವಾಗಿ ಡಿಬಿಟಿ ಮೂಲಕ ಜಮೆಯಾಗುತ್ತಿದೆ.
ಈವರೆಗೆ ಒಟ್ಟು 30 ಕಂತುಗಳ ಹಣ ಯಶಸ್ವಿಯಾಗಿ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಿದ್ದು, ಪ್ರಸ್ತುತವು ಯಾವುದೇ ಅಡಚಣೆ ಇಲ್ಲದೆ ಪಾವತಿ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೃಹಲಕ್ಷ್ಮಿ ಹೊಸ ಅಪ್ಡೇಟ್ : ಗೃಹಲಕ್ಷ್ಮಿ ಯೋಜನೆಯ ಉದ್ದೇಶವೇನು?
ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಪ್ರತಿ ತಿಂಗಳು 2000 ನೆರವು ಸಿಗುವುದರಿಂದ ಅನೇಕ ಕುಟುಂಬಗಳು ದೈನಂದಿನ ಖರ್ಚು, ಮಕ್ಕಳ ಶಿಕ್ಷಣ, ಆರೋಗ್ಯ ವೆಚ್ಚ ಹಾಗೂ ಇತರ ಅಗತ್ಯಗಳನ್ನು ಸುಲಭವಾಗಿ ನಿರ್ವಹಿಸುತ್ತಿದೆ.
ಗೃಹಲಕ್ಷ್ಮಿ ಯೋಜನೆಗೆ ಯಾರು ಅರ್ಹರು?
ಯೋಜನೆಯ ಪ್ರಯೋಜನ ಪಡೆಯಲು ಈ ಕೆಳಗಿನ ಅರ್ಹತೆಗಳು ಇರಬೇಕು.
- ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು.
- ರೇಷನ್ ಕಾರ್ಡ್ ನಲ್ಲಿ ಮಹಿಳೆ ಕುಟುಂಬದ ಮುಖ್ಯಸ್ಥೆ ಯಾಗಿರಬೇಕು.
- ಆಧಾರ್ (Adhar ) ಸಂಖ್ಯೆಯು ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು.
- ಸರ್ಕಾರಿ ನೌಕರರು ಹಾಗೂ ಆದಾಯ ತೆರಿಗೆ (Income tax) ಪಾವತಿಸುವವರು ಈ ಯೋಜನೆಗೆ ಅರ್ಹರಲ್ಲ.
ಗೃಹಲಕ್ಷ್ಮಿ ಹಣ ಜಮೆಯಾಗಿದೆ ಎಂದು ಹೇಗೆ ಪರಿಶೀಲಿಸಬಹುದು?
ಫಲಾನುಭವಿಗಳು ಈ ಕೆಳಗಿನ ವಿಧಾನಗಳ ಮೂಲಕ ಹಣ ಜಮಯಾದ ಮಾಹಿತಿಯನ್ನು ಪರಿಶೀಲಿಸಬಹುದು.
- ಆಹಾರ ಕರ್ನಾಟಕ (Ahara Karnataka) ಆಪ್
- ಸೇವಾ ಸಿಂಧು (Seva Sindhu) ಪೋರ್ಟಲ್
- ಬ್ಯಾಂಕ್ ಪಾಸ್ ಬುಕ್ ಅಥವಾ ಬ್ಯಾಂಕ್ ಸ್ಟೇಟ್ಮೆಂಟ್
- ಬ್ಯಾಂಕ್ ನಿಂದ ಬರುವ ಎಸ್ಎಂಎಸ್ ಸಂದೇಶ.
ಗೃಹಲಕ್ಷ್ಮಿ ಯೋಜನೆ ಅಫೀಶಿಯಲ್ ವೆಬ್ಸೈಟ್
https://wcd.karnataka.gov.in/26/gruhalakshmi-scheme/en
ಇದನ್ನು ಓದಿ
ಗೃಹಲಕ್ಷ್ಮಿ ಹೊಸ ಅಪ್ಡೇಟ್ : ಹಣ ಜಮೆಯಾಗದಿದ್ದರೆ ಏನು ಮಾಡಬೇಕು?
ಒಂದು ವೇಳೆ ಗೃಹಲಕ್ಷ್ಮಿ ಹಣ ಖಾತೆಗೆ ಜಮಯಾಗದಿದ್ದರೆ ಮೊದಲು ಈ ಅಂಶಗಳನ್ನು ಪರಿಶೀಲಿಸಿ.
- ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿದೆ ಎಂದು ಖಚಿತಪಡಿಸಿಕೊಳ್ಳಿ.
- ಬ್ಯಾಂಕ್ ನಲ್ಲಿ ಅಗತ್ಯ ಇ ಕೆ ವೈ ಸಿ ಅಥವಾ ಖಾತೆ ವಿವರಗಳು ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿ.
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಅಥವಾ ಹತ್ತಿರದ ಗ್ರಾಮ ಓನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ.
- ಕೇಂದ್ರದಲ್ಲಿ ಪಾವತಿ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಬಹುದು.
ಗೃಹಲಕ್ಷ್ಮಿ ಹೊಸ ಅಪ್ಡೇಟ್ : ಫಲಾನುಭವಿಗಳು ನೆನಪಿಟ್ಟುಕೊಳ್ಳಬೇಕಾದ ಪ್ರಮುಖ ವಿಷಯ.
ಸದ್ಯದ ಪರಿಸ್ಥಿತಿಯಲ್ಲಿ ಇ ಕೆ ವೈ ಸಿ ಮಾಡಿಸದಿದ್ದರೆ ಗೃಹಲಕ್ಷ್ಮಿ ಹಣ ನಿಲ್ಲುತ್ತದೆ ಎಂಬ ಮಾಹಿತಿ ಅಧಿಕೃತವಲ್ಲ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಯಾವುದೇ ವದಂತಿಗಳನ್ನು ನಂಬದೇ, ಸರ್ಕಾರದ ಅಧಿಕೃತ ಪ್ರಕಟಣೆಗಳನ್ನು ಮಾತ್ರ ಅನುಸರಿಸುವುದು ಉತ್ತಮ.
ಯಾವುದೇ ಹೊಸ ನಿಯಮ ಜಾರಿಗೆ ಬಂದರೆ ಸರ್ಕಾರವೇ ಅಧಿಕೃತವಾಗಿ ಮಾಹಿತಿ ನೀಡಲಿದೆ.
ಅಲ್ಲಿಯವರೆಗೆ ಅನಗತ್ಯ ಗೊಂದಲಕ್ಕೆ ಒಳಗಾಗದೆ ಸುಳ್ಳು ಸುದ್ದಿಗಳಿಂದ ಎಚ್ಚರಿಕೆಯಿಂದ ಇರುವುದು ಸೂಕ್ತ.
ಇದನ್ನು ಓದಿ
KSRP Recruitment 2026: Important 2,314 ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ಜರಿ ನೇಮಕಾತಿ
ಗೃಹಲಕ್ಷ್ಮಿ ಹಣದಿಂದ ಬಡವರಿಗೆ ಆಗುವ ಪ್ರಯೋಜನಗಳು.
- ಮನೆಯ ದೈನಂದಿನ ಖರ್ಚುಗಳನ್ನು ನಿರ್ವಹಿಸಲು ಸಹಾಯವಾಗುತ್ತದೆ.
- ಮಕ್ಕಳ ಶಿಕ್ಷಣದ ವೆಚ್ಚಗಳನ್ನು ಬರಿಸಲು ಅನುಕೂಲವಾಗುತ್ತದೆ.
- ಆಹಾರ, ಔಷಧಿ ಮತ್ತು ಇತರ ಅಗತ್ಯ ವಸ್ತುಗಳನ್ನು ಖರೀದಿಸಲು ನೆರವಾಗುತ್ತದೆ.
- ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹೆಚ್ಚುತ್ತದೆ.
- ಸಾಲದ ಅವಲಂಬನೆ ಸ್ವಲ್ಪಮಟ್ಟಿಗೆ ಕಡಿಮೆಯಾಗಲು ಸಹಾಯಮಾಡುತ್ತದೆ.
- ಸಣ್ಣ ಉಳಿತಾಯ ಮಾಡುವ ಅವಕಾಶ ದೊರೆಯುತ್ತದೆ.
- ಕುಟುಂಬದ ಆರ್ಥಿಕ ಸ್ಥಿರತೆ ಮತ್ತು ಜೀವನಮಟ್ಟ ಸುಧಾರಿಸಲು ನೆರವಾಗುತ್ತದೆ.
- ಮಕ್ಕಳ ಮತ್ತು ಹಿರಿಯರ ಅಗತ್ಯಗಳನ್ನು ಸಮಯಕ್ಕೆ ಪೂರೈಸಲು ಅನುಕೂಲವಾಗುತ್ತದೆ.
- ಬಡ ಕುಟುಂಬಗಳ ಜೀವನ ಮಟ್ಟ ಸುಧಾರಿಸಿ ಆರ್ಥಿಕ ಭದ್ರತೆ ಹೆಚ್ಚಲು ಸಹಾಯಮಾಡುತ್ತದೆ.
- ಸಾಲ ಮಾಡುವ ಅವಶ್ಯಕತೆ ಕೆಲವು ಮಟ್ಟಿಗೆ ಕಡಿಮೆಯಾಗುತ್ತದೆ.
- ಗೃಹಲಕ್ಷ್ಮಿ ಹಣದಲ್ಲಿ ಸ್ವಲ್ಪಮಟ್ಟಿಗೆ ಅಕ್ಕಿ, ಬೇಳೆ, ಎಣ್ಣೆ ಹಾಗೂ ಇತರೆ ಅಗತ್ಯ ಆಹಾರ ಸಾಮಗ್ರಿಗಳ ಖರ್ಚನ್ನು ನಿಭಾಯಿಸಬಹುದು.
- ಸಣ್ಣ ಉದ್ಯಮ ಅಥವಾ ಸ್ವಯಂ ಉದ್ಯೋಗ ಆರಂಭಿಸಲು ಹಣವನ್ನು ಬಳಸಬಹುದು.
ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆಯು ಬಡ ಕುಟುಂಬಗಳ ಆರ್ಥಿಕ ಸ್ಥಿರತೆಯನ್ನು ಬಲಪಡಿಸಿ ಮಹಿಳೆಯರ ಸಬಲೀಕರಣ ಹಾಗೂ ಕುಟುಂಬದ ಕಲ್ಯಾಣಕ್ಕೆ ಮಹತ್ವದ ಕೊಡುಗೆ ನೀಡುತ್ತದೆ.