Kodagu District Court Recruitment 2026 : 39 ಬೆರಳಚ್ಚುಗಾರ, ಚಾಲಕ, ಆದೇಶ ಜಾರಿಕಾರ ಮತ್ತು ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ, important update.

WhatsAppಫಾಲೋ ಮಾಡಿ

Kodagu District Court Recruitment 2026Kodagu District Court Recruitment 2026 : ಕೊಡಗು-ಮಡಿಕೇರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 39 ಬೆರಳಚ್ಚುಗಾರ, ಚಾಲಕ, ಆದೇಶ ಜಾರಿಕಾರ ಹಾಗೂ ಜವನ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಹತ್ತನೇ ತರಗತಿ, ಪಿಯುಸಿ ಅರ್ಹತೆ ಹೊಂದಿರುವವರು ಅಕ್ಟೋಬರ್ 03, 2026 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 

  • ಒಟ್ಟು ಹುದ್ದೆಗಳು : 39 (ಬೆರಳಚ್ಚುಗಾರ-08, ಚಾಲಕ-02, ಆದೇಶ ಜಾರಿಕಾರ-06, ಜವಾನ/ಸೇವಕ-23)
  • ಶೈಕ್ಷಣಿಕ ಅರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಹತ್ತನೇ ತರಗತಿ/ದ್ವಿತೀಯ ಪಿಯುಸಿ/ಡಿಪ್ಲೋಮಾ ತೆರ್ಗಡೆ.
  • ವೇತನ ಶ್ರೇಣಿ : ಮಾಸಿಕ ₹27,000 ರಿಂದ ₹67,600 ವರೆಗೆ. (ಜೊತೆಗೆ ಇತರೆ ಭತ್ಯೆ ಗಳು)
  • ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 03 ಅಕ್ಟೋಬರ್ 2026

ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ ಲಭ್ಯವಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು-ಮಡಿಕೇರಿ ಘಟಕದಲ್ಲಿ ಖಾಲಿ ಇರುವ ವಿವಿಧ ವೃಂದಗಳ ಒಟ್ಟು 39 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಕೃತ ಅಧಿಸೂಚನೆಗಳನ್ನು ಹೊರಡಿಸಲಾಗಿದೆ.

ಈ ನೇಮಕಾತಿಯಲ್ಲಿ ಬೆರಳಚ್ಚುಗಾರ (Typist), ವಾಹನ ಚಾಲಕ (Driver), ಆದೇಶ ಜಾರಿಕಾರ (Process Server)ಹಾಗೂ ಜವನ/ಸೇವಕ ( Peon) ಹುದ್ದೆಗಳು ಸೇರಿವೆ. ಎಸ್ ಎಸ್ ಎಲ್ ಸಿ (SSLC) ಉತ್ತೀರ್ಣರಾದವರಿಂದ ಪಿಯುಸಿ ಅಥವಾ ಡಿಪ್ಲೋಮಾ ಅರ್ಹತೆ ಹೊಂದಿರುವ ಅಭ್ಯರ್ಥಿಗಳವರೆಗೆ, ನಿಗದಿಪಡಿಸಿರುವ ವಿದ್ಯಾರ್ಹತೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ಮೂಲಕ ಸೆಪ್ಟೆಂಬರ್ 3, 2026 ರಿಂದ ಅಕ್ಟೋಬರ್ 3, 2026 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿವರ, ಶೈಕ್ಷಣಿಕ ಅರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಇದನ್ನು ಓದಿ

Reliance Foundation Scholarship 2026-27 : ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿ ವೇತನ. Important update.

Kodagu District Court Recruitment 2026 : ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ

  • ನೇಮಕಾತಿ ಪ್ರಾಧಿಕಾರ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಕೊಡಗು-ಮಡಿಕೇರಿ
  • ಒಟ್ಟು ಹುದ್ದೆಗಳು : 39
  • ಉದ್ಯೋಗ ಸ್ಥಳ : ಕೊಡಗು ಜಿಲ್ಲೆ (ಕರ್ನಾಟಕ)
  • ಅರ್ಜಿ ಸಲ್ಲಿಕೆ ವಿಧಾನ : ಆನ್ಲೈನ್ ಮಾತ್ರ

ವೇತನ ಶ್ರೇಣಿ 

  • ಬೆರಳಚ್ಚುಗಾರ (Typist) : ₹34,100 – ₹67,600
  • ವಾಹನ ಚಾಲಕ (Driver ): ₹34,100 – ₹67,600
  • ಆದೇಶ ಜಾರಿಕಾರ (Process Server): ₹31,775 – ₹61,300
  • ಜವಾನ/ಸೇವಕ (Peon ): ₹27,000 – ₹46,675

(ಸೂಚನೆ : ನಿಗದಿತ ವೇತನ ಶ್ರೇಣಿಯ ಜೊತೆಗೆ ಸರ್ಕಾರಿ ನಿಯಮನುಸಾರ ಲಭ್ಯವಿರುವ ತುಟ್ಟಿ ಭತ್ಯೆ ಮತ್ತು ಇತರೆ ಭತ್ಯೆ ಗಳು ದೊರೆಯಲಿದೆ.)

 Kodagu District Court Recruitment 2026 : ಶೈಕ್ಷಣಿಕ ಅರ್ಹತೆ 

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಯನ್ನು ಹೊಂದಿರಬೇಕು.

  1. ಬೆರಳಚ್ಚುಗಾರ (Typist) :1. ದ್ವಿತೀಯ ಪಿಯುಸಿ ಅಥವಾ ಕಮರ್ಷಿಯಲ್ ಪ್ರಾಕ್ಟೀಸ್ ನಲ್ಲಿ ಮೂರು ವರ್ಷಗಳ ಡಿಪ್ಲೋಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. 2.ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಭಾಷೆಗಳ ಎರಡರಲ್ಲೂ ಹಿರಿಯ ಶ್ರೇಣಿ ಬೆರಳಚ್ಚು ಅಥವಾ ಸೆಕ್ರೆಟರಿಯಲ್ ಪ್ರಾಕ್ಟೀಸ್ ಡಿಪ್ಲೋಮಾ ಉತ್ತೀರ್ಣರಾಗಿರಬೇಕು. 3.ಕಂಪ್ಯೂಟರ್ ಬಳಕೆ ಜ್ಞಾನ ಕಡ್ಡಾಯ.
  2. ವಾಹನ ಚಾಲಕ (Driver) : 1. ಹತ್ತನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. 2. ಭಾರಿ ಅಥವಾ ಹಗುರ ವಾಹನ ಚಾಲನೆ ಪರವಾನಗಿ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
  3. ಆದೇಶ ಜಾರಿಕಾರ (Process Server) : 1. 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. 2. ಭಾರಿ ಅದವ ಹಗುರ ವಾಹನ ಚಾಲನಾ ಪರವಾನಗಿ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.
  4. ಜವಾನ/ಸೇವಕ (Peon) : 1.10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು .2. ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು.

Kodagu District Court Recruitment 2026 : ವಯೋಮಿತಿ ವಿವರ 

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು. ಸರ್ಕಾರದ ಆದೇಶದಂತೆ ಐದು ವರ್ಷಗಳ ಒಂದು ಬಾರಿಯ ಸಡಿಲಿಕೆ ಅಳವಡಿಸಿಕೊಂಡ ನಂತರ ಗರಿಷ್ಠ ವಯೋಮಿತಿ ಕೆಳಗಿನಂತಿದೆ.

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ‌ : ಬರಿಷ್ಟ 40 ವರ್ಷಗಳು
  • ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ : ಗರಿಷ್ಠ 43 ವರ್ಷಗಳು
  • ಎಸ್ ಸಿ, ಎಸ್ ಟಿ, ಪ್ರವರ್ಗ -1 ರ ಅಭ್ಯರ್ಥಿಗಳಿಗೆ : ಗರಿಷ್ಠ 45 ವರ್ಷಗಳು.
  • ಅಂಗವಿಕಲ ಹಾಗೂ ವಿಧವಾ ಅಭ್ಯರ್ಥಿಗಳಿಗೆ : ಹತ್ತು ವರ್ಷಗಳ ಹೆಚ್ಚುವರಿಸಲಿಕ್ಕೆ ಇರುತ್ತದೆ.
  • ಮಾಜಿ ಸೈನಿಕರಿಗೆ : ಶಶಸ್ತ್ರ ಪಡೆಯಲ್ಲಿ ಸೇವೆ ಸಲ್ಲಿಸಿದ ಅವಧಿ +ಮೂರು ವರ್ಷಗಳ ರಿಯಾಯಿತಿ ದೊರೆಯಲಿದೆ.

ಇದನ್ನು ಓದಿ

Hassan Court Recruitment 2026 : SSLC ಪಾಸಾಗಿದ್ದರೆ ಸಾಕು, ಹಾಸನ ಕೋರ್ಟ್ ನಲ್ಲಿ 48 ಹುದ್ದೆಗಳ ನೇರ ನೇಮಕಾತಿ, 46,675 ವರೆಗೆ ವೇತನ, important update.

Kodagu District Court Recruitment 2026 : ಅರ್ಜಿ ಶುಲ್ಕ 

ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ e pay ಪೋರ್ಟಲ್ ಮೂಲಕ net banking, credit card, debit card, upi ಅಥವಾ QR code ಬಳಸಿ ಆನ್ಲೈನ್ ಶುಲ್ಕ ಪಾವತಿಸಬೇಕು.

  • ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ₹300
  • ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ : ₹150
  • ಎಸ್ ಸಿ, ಎಸ್ ಟಿ, ಪ್ರವರ್ಗ-1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ : ಶುಲ್ಕ ಪಾವತಿಯಿಂದ ಸಂಪೂರ್ಣ ವಿನಾಯಿತಿ ಇದೆ.
Kodagu District Court Recruitment 2026 : ಆಯ್ಕೆ ಪ್ರಕ್ರಿಯೆ 

ಕರ್ನಾಟಕ ಅಧೀನ ನ್ಯಾಯಾಲಯಗಳ ನೇಮಕಾತಿ ನಿಯಮಗಳ ಅನ್ವಯ ನೇರ ನೇಮಕಾತಿ ನಡೆಯಲಿದೆ.

  • ಬೆರಳಚ್ಚುಗಾರ ಹುದ್ದೆಗೆ : ಶೈಕ್ಷಣಿಕ ಅಂಕಗಳು+15 ನಿಮಿಷಗಳ ಕಂಪ್ಯೂಟರ್ ಬೆರಳಚ್ಚು ಕೌಶಲ್ಯ ಪರೀಕ್ಷೆ+05 ಅಂಕಗಳ ಸಂದರ್ಶನ
  • ವಾಹನ ಚಾಲಕ ಹುದ್ದೆಗೆ : ಪ್ರಾವೀಣ್ಯತೆ/ಚಾಲನ ಪರೀಕ್ಷೆ ಮತ್ತು ಸಂದರ್ಶನ
  • ಆದೇಶ ಜಾರಿಕಾರ ಹುದ್ದೆಗೆ : ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ 1:25 ಅನುಪಾತದಲ್ಲಿ ಶಾರ್ಟ್ ಲಿಸ್ಟ್ ಮಾಡಿ 10 ಅಂಕಗಳ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
  • ಜವಾನ ಹುದ್ದೆಗೆ : ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ 1:10 ಅನುಪಾತದಲ್ಲಿ ಅಭ್ಯರ್ಥಿಗಳನ್ನು 10 ಅಂಕಗಳ ಸಂದರ್ಶನಕ್ಕೆ ಕರೆಯಲಾಗುತ್ತದೆ.

ಇದನ್ನು ಓದಿ

IBPS ನೇಮಕಾತಿ 2026 : 13,706 ಆಫೀಸ್ ಅಸಿಸ್ಟೆಂಟ್ ಮತ್ತು ಆಫೀಸರ್ ಹುದ್ದೆಗಳಿಗೆ ಬೃಹತ್ ನೇಮಕಾತಿ. Important update.

Kodagu District Court Recruitment 2026 : ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ 
  1. ಈ ಕೆಳಗೆ ನೀಡಿರುವ ಕೊಡಗು ಜಿಲ್ಲಾ ನ್ಯಾಯಾಲಯದ ಅಧಿಕೃತ ನೇಮಕಾತಿ ಪೋರ್ಟಲ್ ಗೆ ಭೇಟಿ ನೀಡಿ. https://kodagu.dcourts.gov.in/notice-category/recruitments/
  2. ನೀವು ಅರ್ಜಿ ಸಲ್ಲಿಸಲು ಇಚ್ಛಿಸುವ ಹುದ್ದೆಗೆ ಆನ್ಲೈನ್ ಲಿಂಕ್ ಅನ್ನು ಆಯ್ಕೆ ಮಾಡಿ.
  3. ನಿಮ್ಮ ವೈಯಕ್ತಿಕ, ಶೈಕ್ಷಣಿಕ ಹಾಗೂ ಮೀಸಲಾತಿ ವಿವರಗಳನ್ನು ಸರಿಯಾಗಿ ನಮೂದಿಸಿ.
  4. ಇತ್ತೀಚಿನ ಬಿಳಿ ಹಿನ್ನೆಲೆಯ ಬಣ್ಣದ ಭಾವಚಿತ್ರ ಮತ್ತು ಕಪ್ಪು ಬಾಲ್ ಪಾಯಿಂಟ್ ಪೆನ್ನಿನಲ್ಲಿ ಸಹಿ ಮಾಡಿದ ಪ್ರತಿ ಅಪ್ಲೋಡ್ ಮಾಡಿ.
  5. ಎಸ್ ಎಸ್ ಎಲ್ ಸಿ ಅಂಕಪಟ್ಟಿ ಹಾಗೂ ಅನ್ವಯವಾಗುವ ಪ್ರಮಾಣ ಪತ್ರಗಳನ್ನು ಪಿಡಿಎಫ್ ರೂಪದಲ್ಲಿ ಅಪ್ಲೋಡ್ ಮಾಡಿ.
  6. ನಿಮ್ಮ ವರ್ಗಕ್ಕೆ ನಿಗದಿಪಡಿಸಿದ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.
  7. ಅರ್ಜಿಯನ್ನು ಅಂತಿಮವಾಗಿ ಸಲ್ಲಿಸಿ, ಭರ್ತಿ ಮಾಡಿದ ಅರ್ಜಿ ಪ್ರತಿ ಮತ್ತು ಶುಲ್ಕದ ರಶೀದಿಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ಇಟ್ಟುಕೊಳ್ಳಿ.

Kodagu District Court Recruitment 2026:   ಪ್ರಮುಖ ದಿನಾಂಕಗಳು 

  • ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ : 03 ಸೆಪ್ಟೆಂಬರ್ 2026
  • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03 ಅಕ್ಟೋಬರ್ 2026
  • ಅರ್ಜಿ ಶುಲ್ಕ ಪಾವತಿಸಲು ಕಡೆಯ ದಿನಾಂಕ : 03 ಅಕ್ಟೋಬರ್ 2026

ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ನಿಮಗೆ ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಗ್ರಾಮ ಓನ್ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ಸೈಬರ್ ಕೇಂದ್ರಗಳಿಗೆ ಭೇಟಿ ನೀಡಿ ಸುಲಭವಾಗಿ ಅರ್ಜಿ ಸಲ್ಲಿಸಿ.

ಇದೇ ರೀತಿಯ ಸರ್ಕಾರಿ ಯೋಜನೆಗಳು, ಉದ್ಯೋಗಗಳು ಹಾಗೂ ವಿದ್ಯಾರ್ಥಿ ವೇತನದ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಫಾಲೋ ಮಾಡಿ ತಕ್ಷಣ ಅಪ್ಡೇಟ್ ಪಡೆದುಕೊಳ್ಳಿ.

ಇದನ್ನು ಓದಿ

SSC ನೇಮಕಾತಿ 2026 : 1,748 ಜೂನಿಯರ್ ಇಂಜಿನಿಯರ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ. SSC JE Recruitment, Important update.

Leave a Comment