Hassan Court Recruitment 2026 : ಪರೀಕ್ಷೆ ಇಲ್ಲದೆ 48 ಜವಾನ/ಸೇವಕ ಹುದ್ದೆಗಳಿಗೆ ಅರ್ಜಿ ಆಹ್ವಾನ, 46,675 ವರೆಗೆ ವೇತನ. ಹಾಸನ ಜಿಲ್ಲಾ ನ್ಯಾಯಾಲಯದಲ್ಲಿ ನೇರ ನೇಮಕಾತಿ.
ಕರ್ನಾಟಕದ ನ್ಯಾಯಾಂಗ ಇಲಾಖೆಯಲ್ಲಿ ಸರ್ಕಾರಿ ನೌಕರಿ ಪಡೆದು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಬಯಸುವ ಉದ್ಯೋಗ ಕಾಂಕ್ಷಿಗಳಿಗೆ ಹಾಸನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮತ್ತೊಂದು ಉತ್ತಮ ಅವಕಾಶ ಕಲ್ಪಿಸಿದೆ. ಹಾಸನ ಜಿಲ್ಲಾ ನ್ಯಾಯಾಲಯ ಘಟಕದಲ್ಲಿ ಖಾಲಿ ಇರುವ ಒಟ್ಟು 48 ಸೇವಕ ಅಥವಾ ಜವಾನ (peon /group D) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದೆ.
ಈ ಹುದ್ದೆಗಳಿಗೆ ಯಾವುದೇ ರೀತಿಯ ಕಠಿಣ ಸ್ಪರ್ಧಾತ್ಮಕ ಪರೀಕ್ಷೆ ಇರುವುದಿಲ್ಲ. ಕೇವಲ ಹತ್ತನೇ ತರಗತಿಯ ಅಂಕಗಳ ಮೆರಿಟ್ ಹಾಗೂ ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದ್ದು, ಸೆಪ್ಟೆಂಬರ್ 17, 2026 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಆಕರ್ಷಕ ವೇತನ ಶ್ರೇಣಿ ಹೊಂದಿರುವ ಈ ಹುದ್ದೆಗಳಿಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ವಯೋಮಿತಿ ಯಲ್ಲಿ ಸಿಕ್ಕಿರುವಂತಹ ವಿಶೇಷ ಸಡಿಲಿಕೆ ಏನು ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ವಿವರಗಳನ್ನು ಇಲ್ಲಿ ವಿವರಿಸಲಾಗಿದೆ.
ಇದನ್ನು ಓದಿ
Hassan Court Recruitment 2026 : ಪ್ರಮುಖ ಮುಖ್ಯಾಂಶಗಳು
- ನೇಮಕಾತಿ ಪ್ರಾಧಿಕಾರ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಸನ.
- ಹುದ್ದೆಯ ಹೆಸರು : ಜವಾನ/ಸೇವಕರು (peon)
- ಒಟ್ಟು ಹುದ್ದೆಗಳು : 48 ಹುದ್ದೆಗಳು
- ವೇತನ ಶ್ರೇಣಿ : ₹27,000 – ₹46,675 (ಮತ್ತು ಇತರ allowance)
- ಆಯ್ಕೆ ವಿಧಾನ : SSLC ಅಂಕಗಳ ಮೆರಿಟ್ (1:10) ಮತ್ತು ಸಂದರ್ಶನ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 19 ಆಗಸ್ಟ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17 ಸೆಪ್ಟೆಂಬರ್ 2026
- ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನ : 19 ಸೆಪ್ಟೆಂಬರ್ 2026
Hassan Court Recruitment 2026 : ಹುದ್ದೆಗಳ ವರ್ಗೀಕರಣ ಮತ್ತು ಮೀಸಲಾತಿ
ಒಟ್ಟು 48 ಹುದ್ದೆಗಳನ್ನು ವಿವಿಧ ವರ್ಗಗಳಿಗೆ ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ.
- ಸಾಮಾನ್ಯ ವರ್ಗ : 24 ಹುದ್ದೆಗಳು
- ಪರಿಶಿಷ್ಟ ಜಾತಿ : 07 ಹುದ್ದೆಗಳು
- ಪರಿಶಿಷ್ಟ ಪಂಗಡ : 02 ಹುದ್ದೆಗಳು
- ಪ್ರವರ್ಗ-1 : 02 ಹುದ್ದೆಗಳು
- ಪ್ರವರ್ಗ-2A : 07 ಹುದ್ದೆಗಳು
- ಪ್ರವರ್ಗ-2B : 01 ಹುದ್ದೆ
- ಪ್ರವರ್ಗ 3A : 02 ಹುದ್ದೆಗಳು
- ಪ್ರವರ್ಗ-3B : 03 ಹುದ್ದೆಗಳು
- (ಮಹಿಳಾ, ಗ್ರಾಮೀಣ, ಮಾಜಿ ಸೈನಿಕ, ಅಂಗವಿಕಲ ಹಾಗೂ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ಮೀಸಲಾತಿಯನ್ವಯವಾಗುತ್ತದೆ.)
Hassan Court Recruitment 2026 : ಶೈಕ್ಷಣಿಕ ಅರ್ಹತೆ
ಅಭ್ಯರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳಿಗೆ ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ಚೆನ್ನಾಗಿ ತಿಳಿದಿರಬೇಕು
ಇದನ್ನು ಓದಿ
ವಯೋಮಿತಿ ಮತ್ತು ಸಡಿಲಿಕೆ (Age Limit and Relaxation)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅನ್ವಯವಾಗುವಂತೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು. ಸರ್ಕಾರದ ಹೊಸ ಆದೇಶದ ಅನ್ವಯ ಒಂದು ಬಾರಿಗೆ ಅನ್ವಯಿಸುವಂತೆ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ಸಡಿಲಿಕೆ ನೀಡಲಾಗಿದೆ. ಅದರಂತೆ ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ.
- ಸಾಮಾನ್ಯವಾಗಿ ವರ್ಗದ ಅಭ್ಯರ್ಥಿಗಳಿಗೆ : ಗರಿಷ್ಠ 40 ವರ್ಷಗಳು
- ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ : ಗರಿಷ್ಠ 43 ವರ್ಷಗಳು
- SC, ST ಪ್ರವರ್ಗ-1 ಅಭ್ಯರ್ಥಿಗಳಿಗೆ : ಗರಿಷ್ಠ 45 ವರ್ಷಗಳು
- (ವಿಧವೆಯರು, ಮಾಜಿ ಸೈನಿಕರು, ಅಂಗವಿಕಲರು ಮತ್ತು ಜೀತ ಕಾರ್ಮಿಕರಿಗೆ ಗರಿಷ್ಠ 10 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.)
Hassan Court Recruitment 2026 : ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ ನೇರ ಆಯ್ಕೆ ಪ್ರಕ್ರಿಯೆಯು ಈ ಕೆಳಗಿನಂತೆ ನಡೆಯಲಿದೆ.
- ಶಾರ್ಟ್ ಲಿಸ್ಟಿಂಗ್: ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಆಧಾರದ ಮೇಲೆ ಖಾಲಿ ಇರುವ 1 ಹುದ್ದೆಗೆ 10 ಅಭ್ಯರ್ಥಿಗಳಂತೆ (1:10) ಮೆರಿಟ್ ಆಧಾರಿತ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.
- ಸಂದರ್ಶನ (interview ): 1:10 ಅನುಪಾತದಲ್ಲಿ ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ 10 ಅಂಕದ ಮೌಖಿಕ ಸಂದರ್ಶನ ನಡೆಸಲಾಗುವುದು.ಇದರಲ್ಲಿ ಅಭ್ಯರ್ಥಿಯ ಸಾಮಾನ್ಯ ಜ್ಞಾನ ಮತ್ತು ಪ್ರಾವೀಣ್ಯತೆ ಯನ್ನು ಪರೀಕ್ಷಿಸಿ, ಅಂತಿಮ ಆಯ್ಕೆ ಮಾಡಲಾಗುತ್ತದೆ.
- (ಆಯ್ಕೆಯಾದ ಅಭ್ಯರ್ಥಿಗಳು 2 ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿ ಇರುತ್ತಾರೆ ಹಾಗೂ NPS ಪಿಂಚಣಿ ಯೋಜನೆಗೆ ಒಳಪಡುತ್ತಾರೆ)
Hassan Court Recruitment 2026 : ಅರ್ಜಿ ಶುಲ್ಕದ ವಿವರ
- ಸಾಮಾನ್ಯ 2A,2B,3A,3B ವರ್ಗದ ಅಭ್ಯರ್ಥಿಗಳಿಗೆ : ₹200
- SC/ST ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ : ಸಂಪೂರ್ಣ ಉಚಿತ
- ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (SBI pay) ನೆಟ್ ಬ್ಯಾಂಕಿಂಗ್, ಡೆಬಿಟ್ / ಕ್ರೆಡಿಟ್ ಕಾರ್ಡ್ ಅಥವಾ ಯುಪಿಐ ಮೂಲಕ ಆನ್ಲೈನ್ನಲ್ಲಿ ಪಾವತಿಸಬೇಕು.
ಇದನ್ನು ಓದಿ
Hassan Court Recruitment 2026 : ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಸರಳ ವಿಧಾನ.
- ಹಾಸನ ಜಿಲ್ಲಾ ನ್ಯಾಯಾಲಯದ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ನೇಮಕಾತಿ ವಿಭಾಗವನ್ನು ತೆರೆಯಿರಿ. https://hassan.dcourts.gov.in/
- ಜವಾನ ಹುದ್ದೆಗಳ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಎಸ್ ಎಸ್ ಎಲ್ ಸಿ ಅಂಕಗಳು, ಹುಟ್ಟಿದ ದಿನಾಂಕ, ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಯನ್ನು ನೀಡಿ ನೋಂದಣಿ ಮಾಡಿ.
- ನಿಮ್ಮ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ ಮತ್ತು ಸಹಿಯನ್ನು ಜೆಪಿಜಿ ಫಾರ್ಮ್ಯಾಟ್ ನಲ್ಲಿ ಅಪ್ಲೋಡ್ ಮಾಡಿ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ವಿವರಗಳನ್ನು ನಮೂದಿಸಿ, ಆನ್ಲೈನ್ ಮೂಲಕ ನಿಗದಿತ ಶುಲ್ಕ ಪಾವತಿಸಿ.
- ಅರ್ಜಿಯನ್ನು ಅಂತಿಮವಾಗಿ ಸಬ್ಮಿಟ್ ಮಾಡಿ ಭವಿಷ್ಯದ ರೆಫರೆನ್ಸ್ ಹಾಗೂ ಸಂದರ್ಶನಕ್ಕಾಗಿ ಪ್ರಿಂಟ್ ಔಟ್ ಮತ್ತು ಶುಲ್ಕದ ರಶೀದಿಯನ್ನು ಜೋಪಾನವಾಗಿಟ್ಟುಕೊಳ್ಳಿ.
ನ್ಯಾಯಾಂಗ ಇಲಾಖೆಯಲ್ಲಿ ಜವಾನರಾಗಿ ಸೇವೆ ಸಲ್ಲಿಸುವುದು ಗೌರವಯುತ ಹಾಗೂ ಸ್ಥಿರವಾದ ಉದ್ಯೋಗವಾಗಿದೆ. ಹಾಸನ ಜಿಲ್ಲಾ ನ್ಯಾಯಾಲಯ ನೇಮಕಾತಿ 2026ರ ಅಡಿಯಲ್ಲಿ ಬಂದಿರುವ ಈ 48 ಹುದ್ದೆಗಳು 10ನೇ ತರಗತಿ ಪಾಸಾದ ಸ್ಥಳೀಯ ಯುವಕ ಯುವತಿಯರಿಗೆ ಉತ್ತಮ ಅವಕಾಶವನ್ನು ತಂದು ಕೊಟ್ಟಿದೆ.
ಯಾವುದೇ ಪರೀಕ್ಷೆಯ ಗೊಂದಲವಿಲ್ಲದೆ ಕೇವಲ 10ನೇ ತರಗತಿ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆಯುತ್ತಿರುವುದರಿಂದ ಹೆಚ್ಚು ಅಂಕ ಪಡೆದವರಿಗೆ ಇದು ಸುವರ್ಣ ಅವಕಾಶ. ಕೊನೆಯ ದಿನದವರೆಗೆ ಕಾಯದೆ ಆದಷ್ಟು ಬೇಗ ಆನ್ಲೈನ್ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ. ಸಂದರ್ಶನಕ್ಕೆ ಹೇಗೆ ನಿಂದಲೇ ಸಿದ್ಧತೆ ನಡೆಸಿ. ನಿಮ್ಮ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಕಂಡಿತ ಸಿಗುತ್ತದೆ.
ಇದನ್ನು ಓದಿ