Mahindra EmpowerHer Scholarship : ಮಹಿಂದ್ರ ಎಂಪವರ್ಹರ್ ಸ್ಕಾಲರ್ಶಿಪ್ ಪ್ರೋಗ್ರಾಮ್ 2026 27 ನೇ ಸಾಲಿನಲ್ಲಿ 9 ರಿಂದ 12ನೇ ತರಗತಿ ಹಾಗೂ ಪದವಿ ಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್ ಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಹೀಂದ್ರಾ ಲಿಮಿಟೆಡ್ ನ ವತಿಯಿಂದ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯಡಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳು ಅವರ ಮುಂದಿನ ಶಿಕ್ಷಣವನ್ನು ಯಾವುದೇ ಅಡಚಣೆಗಳಿಲ್ಲದೆ ಮುಂದುವರಿಸಲು ಸಹಾಯ ಮಾಡಲು ಈ ವಿದ್ಯಾರ್ಥಿ ವೇತನವನ್ನು ಜಾರಿಗೆ ತಂದಿದ್ದು ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿಯನ್ನು ಸಲ್ಲಿಸುವುದು ಉತ್ತಮ.
ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹತ ಮಾನದಂಡಗಳಾವುವು? ಅರ್ಜಿ ಸಲ್ಲಿಸಲು ದಾಖಲಾತಿಗಳಾವುವು? ಅರ್ಜಿಯನ್ನು ಹೇಗೆ ಸಲ್ಲಿಸಬೇಕು? ಕೊನೆಯ ದಿನಾಂಕ ಯಾವುದು? ಇನ್ನಿತರ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಇದನ್ನು ಓದಿ
Mahindra EmpowerHer Scholarship : ಪ್ರಯೋಜನಗಳು ಯಾವುವು ?
- ಮಹಿಂದ್ರ ಎಂಪವರ್ಹರ್ ಸ್ಕಾಲರ್ಶಿಪ್ ಪ್ರೋಗ್ರಾಮ್ ಯೋಜನೆ ಅಡಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳಿಗೆ 5,500 ವಿದ್ಯಾರ್ಥಿ ವೇತನವನ್ನು ಪಡೆಯಲು ಅವಕಾಶವಿರುತ್ತದೆ.
- ಹೆಣ್ಣು ಮಕ್ಕಳು ತಮ್ಮ ಶಿಕ್ಷಣವನ್ನು ಹಣಕಾಸಿನ ಸಮಸ್ಯೆಯಿಂದ ನಿಲ್ಲಿಸದೆ ಮುಂದುವರಿಸಲು ಸಹಾಯ ಮಾಡುವ ವಿದ್ಯಾರ್ಥಿ ವೇತನವಾಗಿದೆ.
- ಶಾಲೆಯಿಂದ ಪದವಿ ಮತ್ತು ಸ್ನಾತಕೋತ್ತರ ಹಂತದವರೆಗೆ ಸಾಮಾನ್ಯ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ನೆರವು ನೀಡುತ್ತದೆ.
- ಆರ್ಥಿಕ ಅಡಚಣೆಗಳಿಂದ ಶಿಕ್ಷಣ ಕೈಬಿಡುವ ಸಾಧ್ಯತೆಯನ್ನು ಕಡಿಮೆ ಮಾಡಿ ಅವರ ಭವಿಷ್ಯದ ಶಿಕ್ಷಣ ಮತ್ತು ವೃತ್ತಿ ಜೀವನಕ್ಕೆ ಬೆಂಬಲ ನೀಡುವುದು ಇದರ ಉದ್ದೇಶ.
- ದೇಶದಾದ್ಯಂತ ಅರ್ಹ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
Mahindra EmpowerHer Scholarship : ಅಗತ್ಯವಿರುವ ಅರ್ಹತೆಗಳು ಯಾವುವು?
- ಅರ್ಜಿದಾರ ವಿದ್ಯಾರ್ಥಿಯ ಭಾರತದ ಖಾಯಂ ನಿವಾಸಿ ಆಗಿರಬೇಕು.
- ವಿದ್ಯಾರ್ಥಿಯು 9 ರಿಂದ 12ನೇ ತರಗತಿ ಹಾಗೂ ಸಾಮಾನ್ಯ ಪದವಿ ಪೂರ್ವ ಕೋರ್ಸ್ ಗಳನ್ನು ಮತ್ತು ಸಾಮಾನ್ಯ ಸ್ನಾತಕೋತ್ತರ ಕೋರ್ಸ್ ಗಳನ್ನು ಓದುತ್ತಿರಬೇಕು.
- ಎಸ್ ಸಿ ಎಸ್ ಟಿ ಅಥವಾ ಓಬಿಸಿ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು.
- ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ ಮಿತಿಯು 4 ಲಕ್ಷ ಮೀರಬಾರದು.
- ವಿದ್ಯಾರ್ಥಿಯ ಹಿಂದಿನ ವರ್ಷದ ಸೆಮಿಸ್ಟರ್ನಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.
- ಮಹಿಂದ್ರ & ಮಹಿಂದ್ರ ಲಿಮಿಟೆಡ್ ಮತ್ತು ಬಡ್ಡಿ4ಸ್ಟಡಿ ಉದ್ಯೋಗಿಗಳ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ.
Mahindra EmpowerHer Scholarship : ಅಗತ್ಯವಿರುವ ದಾಖಲಾತಿಗಳಾವುವು?
- ವಿದ್ಯಾರ್ಥಿನಿಯ ಆಧಾರ್ ಕಾರ್ಡ್
- ಪ್ರಸ್ತುತ ಪ್ರವೇಶ ಪತ್ರ
- ಹಿಂದಿನ ವರ್ಷದ ಅಂಕಪಟ್ಟಿ
- ಹತ್ತನೇ ತರಗತಿ ಹಾಗೂ 12ನೇ ತರಗತಿಯ ಅಂಕಪಟ್ಟಿ
- ಸ್ನಾತಕೋತ್ತರ ವಿದ್ಯಾರ್ಥಿಗೆ ಪದವಿ ಅಂಕಪಟ್ಟಿ
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಪುಸ್ತಕ
- ಮೊಬೈಲ್ ನಂಬರ್.
ಇದನ್ನು ಓದಿ
Mahindra EmpowerHer Scholarship : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ?
ಮಹಿಂದ್ರಾ & ಮಹಿಂದ್ರಾ ಲಿಮಿಟೆಡ್ ನ ಅಡಿಯಲ್ಲಿ ಆಯ್ಕೆಯಾದ ಅರ್ಹ ವಿದ್ಯಾರ್ಥಿಗಳು ಈ ಕೆಳಗೆ ತಿಳಿಸಿರುವ ಹಂತಗಳನ್ನು ಅನುಸರಿಸಿ ಕೊನೆಯ ದಿನಾಂಕ ಮುಕ್ತಾಯವಾಗುವುದರ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
- ಆಸಕ್ತ ಅರ್ಹ ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ.https://www.buddy4study.com/page/mahindra-empowerher-scholarship-program
- ನಂತರ Apply Now ಬಟನ್ ಮೇಲೆ ಕ್ಲಿಕ್ ಮಾಡಿ. ವಿದ್ಯಾರ್ಥಿಗಳು ಈ ವೆಬ್ ಸೈಟನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದರೆ, Create an Account ಆಯ್ಕೆ ಮೇಲೆ ಕ್ಲಿಕ್ ಮಾಡಿ ಹೊಸ ಖಾತೆಯನ್ನು ರಚನೆ ಮಾಡಿಕೊಳ್ಳಿ.
- ತದನಂತರ login ಬಟನ್ ಮೇಲೆ ಕ್ಲಿಕ್ ಮಾಡಿ ಅಗತ್ಯವಿರುವ ವಿವರಗಳನ್ನು ನಮೂದಿಸಿ log in ಆಗಬೇಕು. ಲಾಗಿನ್ ಆದ ನಂತರ ಅರ್ಜಿ ನಮೂನೆ ತೆರೆದುಕೊಳ್ಳುತ್ತದೆ.
- ನಂತರ ಅಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ಸರಿಯಾಗಿ ನಮೂದಿಸಿ, ಅಗತ್ಯವಿರುವ ದಾಖಲೆಗಳನ್ನು ಅಪ್ಲೋಡ್ ಮಾಡಿ ಕೊನೆಯಲ್ಲಿ submit ಬಟನ್ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು. ಭವಿಷ್ಯಕ್ಕಾಗಿ ಪ್ರಿಂಟೌಟ್ ಕಾಪಿ ಉಳಿಸಿಕೊಳ್ಳಿ.
Mahindra EmpowerHer Scholarship: ಪ್ರಮುಖ ದಿನಾಂಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21 ಸೆಪ್ಟೆಂಬರ್ 2026.
ತಡ ಮಾಡದೆ ಈ ದಿನವೇ ಅರ್ಜಿಯನ್ನು ಸಲ್ಲಿಸುವುದರ ಮೂಲಕ ಕೊನೆಯ ದಿನದಲ್ಲಿ ಉಂಟಾಗುವ ಸರ್ವರ್ ಸಮಸ್ಯೆಗಳಿಂದ ದೂರವಿರಬಹುದು.
ಇದನ್ನು ಓದಿ
Mahindra EmpowerHer Scholarship : ಈ ಸ್ಕಾಲರ್ಶಿಪ್ ನಿಂದ ಆಗುವ ಉಪಯೋಗಗಳು.
ಮಹಿಂದ್ರ ಎಂಪವರ್ಹರ್ ಸ್ಕಾಲರ್ಶಿಪ್ ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವ ಮಹತ್ವದ ಯೋಜನೆಯಾಗಿದೆ. ಆರ್ಥಿಕವಾಗಿ ದುರ್ಬಲ ಕುಟುಂಬಗಳ ವಿದ್ಯಾರ್ಥಿನಿಯರು ಹಣದ ಕೊರತೆಯಿಂದ ತಮ್ಮ ವಿದ್ಯಾಭ್ಯಾಸವನ್ನು ನಿಲ್ಲಿಸದೆ ಮುಂದುವರಿಸಲು ಈ ವಿದ್ಯಾರ್ಥಿ ವೇತನ ಸಹಾಯಮಾಡುತ್ತದೆ. ವಿದ್ಯಾರ್ಥಿನಿಯರ ಶಿಕ್ಷಣದ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ, ಅವರ ಭವಿಷ್ಯದ ಕನಸುಗಳನ್ನು ನನಸಾಗಿಸಲು ಇದು ಪ್ರೇರಣೆ ನೀಡುತ್ತದೆ.
ಈ ವಿದ್ಯಾರ್ಥಿ ವೇತನದ ಮೂಲಕ ದೊರೆಯುವ ಹಣವನ್ನು ಶಾಲಾ ಅಥವಾ ಕಾಲೇಜು ಶುಲ್ಕ, ಪುಸ್ತಕಗಳು, ನೋಟ್ಸ್ ಬುಕ್ ಗಳು, ಅಧ್ಯಯನ ಸಾಮಗ್ರಿಗಳು, ಪರೀಕ್ಷಾ ಶುಲ್ಕ ಹಾಗೂ ಇತರ ಶೈಕ್ಷಣಿಕ ಅಗತ್ಯಗಳಿಗೆ ಬಳಸಿಕೊಳ್ಳಬಹುದು. ಇದರಿಂದ ಪೋಷಕರ ಮೇಲಿನ ಆರ್ಥಿಕ ಒತ್ತಡ ಕಡಿಮೆಯಾಗುತ್ತದೆ. ವಿಶೇಷವಾಗಿ ಬಡ ಮತ್ತು ಹಿಂದುಳಿದ ಕುಟುಂಬಗಳ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಪಡೆಯಲು ಇದು ಉತ್ತಮ ಅವಕಾಶವನ್ನು ಒದಗಿಸುತ್ತದೆ.
ಈ ವಿದ್ಯಾರ್ಥಿ ವೇತನವು ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಉತ್ತಮ ಶಿಕ್ಷಣ ಪಡೆದು ಉದ್ಯೋಗ ಪಡೆಯಲು ಸ್ವಾವಲಂಬಿಗಳಾಗಲು ಮತ್ತು ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಗಳಿಸಲು ಇದು ಪ್ರೋತ್ಸಾಹಿಸುತ್ತದೆ. ಶಿಕ್ಷಣದ ಮೂಲಕ ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಂಡು ಕುಟುಂಬಕ್ಕೂ ಸಮಾಜಕ್ಕೂ ಕೊಡುಗೆ ನೀಡಲು ವಿದ್ಯಾರ್ಥಿನಿಯರನ್ನು ಸಿದ್ಧಗೊಳಿಸುತ್ತದೆ.
ಒಟ್ಟಿನಲ್ಲಿ ಈ ವಿದ್ಯಾರ್ಥಿ ವೇತನವು ಕೇವಲ ಹಣಕಾಸಿನ ನೆರವು ಮಾತ್ರವಲ್ಲದೆ, ಹೆಣ್ಣು ಮಕ್ಕಳ ಶೈಕ್ಷಣಿಕ ಪ್ರಗತಿ, ಆತ್ಮವಿಶ್ವಾಸ, ಸ್ವಾವಲಂಬನೆ ಮತ್ತು ಉತ್ತಮ ಭವಿಷ್ಯಕ್ಕೆ ದಾರಿ ಮಾಡಿಕೊಡುವ ಮಹತ್ವದ ಅವಕಾಶವಾಗಿದೆ. ಇದು ಹೆಣ್ಣು ಮಕ್ಕಳಿಗೆ ತಮ್ಮ ಸಾಮರ್ಥ್ಯವನ್ನು ಗುರುತಿಸಿ ಗುರಿಗಳನ್ನು ಸಾಧಿಸಲು ಮತ್ತು ಜೀವನದಲ್ಲಿ ಯಶಸ್ಸು ಪಡೆಯಲು ಅಗತ್ಯವಾದ ಪ್ರೋತ್ಸಾಹ ನೀಡುತ್ತದೆ. ಇದರಿಂದ ಸಮಾಜದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವವು ಕೂಡ ಹೆಚ್ಚುತ್ತದೆ.
ಇದನ್ನು ಓದಿ
ಇದನ್ನು ಓದಿರಿ
Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಈ ರೀತಿ ಹೂಡಿಕೆ ಮಾಡಿದ್ರೆ ಸಿಗಲಿದೆ 30 ಲಕ್ಷ ರು ಆದಾಯ
ಇದೇ ರೀತಿಯ ಯೋಜನೆಗಳ ತಕ್ಷಣ ಮಾಹಿತಿಗಾಗಿ whatsapp ಗ್ರೂಪ್ ಫಾಲೋ ಮಾಡಿ