Labour Card Scholarship 2026 : ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ. 2026 27ನೇ ಸಾಲಿನ ಅರ್ಜಿ ಆಹ್ವಾನ, ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ಮಾಹಿತಿ ಈ ಕೆಳಗಿನಂತಿವೆ.
ಬೆಂಗಳೂರು , ಆಗಸ್ಟ್ 24, 2026 : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ನೆರವಾಗುವ ಶೈಕ್ಷಣಿಕ ಧನಸಹಾಯ ಯೋಜನೆಗೆ 2026 27ನೇ ಸಾಲಿನ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ.
ಅರ್ಹ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ,31 ಡಿಸೆಂಬರ್ 2026 ಕೊನೆಯ ದಿನಾಂಕ ಎಂದು ಲಭ್ಯವಿರುವ ಮಾಹಿತಿಯಲ್ಲಿ ತಿಳಿಸಲಾಗಿದೆ.
ಈ ಯೋಜನೆಯ ಪ್ರಮುಖ ಉದ್ದೇಶ ಕಟ್ಟಡ ಮತ್ತು ಇತರೆ ನಿರ್ಮಾಣದ ಕ್ಷೇತ್ರದಲ್ಲಿ ದುಡಿಯುತ್ತಿರುವ ನೋಂದಾಯಿತ ಕಾರ್ಮಿಕರ ಮಕ್ಕಳ ಶಿಕ್ಷಣದ ವೆಚ್ಚಕ್ಕೆ ಆರ್ಥಿಕ ಬೆಂಬಲ ನೀಡುವುದು. ನಿಯಮಗಳ ಪ್ರಕಾರ ಅರ್ಹ ನೊಂದಾಯಿತ ಕಾರ್ಮಿಕರ ಗರಿಷ್ಠ ಎರಡು ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ ಪಡೆಯುವ ಅವಕಾಶವಿದೆ.
ಇದನ್ನು ಓದಿ
ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ?
Labour Card Scholarship 2026 : ಕಾರ್ಮಿಕರ ಮಕ್ಕಳಿಗೆ ಎಷ್ಟು ಜನ ಸಹಾಯ ಸಿಗಲಿದೆ?
ಧನಸಹಾಯದ ಮೊತ್ತ ವಿದ್ಯಾರ್ಥಿ ಓದುತ್ತಿರುವ ತರಗತಿ ಅಥವಾ ಕೋರ್ಸ್ ಅನ್ನು ಅವಲಂಬಿಸಿ ಬದಲಾಗುತ್ತದೆ. ಲಭ್ಯವಿರುವ 2026 27ರ ವಿವರಗಳ ಪ್ರಕಾರ 1 ನೇ ತರಗತಿಯಿಂದ 5 ನೇ ತರಗತಿಯವರೆಗೆ ₹1,800 ಆರನೇ ತರಗತಿಯಿಂದ ಎಂಟನೇ ತರಗತಿವರೆಗೆ ₹2,400 ಮತ್ತು 9ನೇ ತರಗತಿಯಿಂದ 10ನೇ ತರಗತಿವರೆಗೆ ₹3,000 ಸಹಾಯಧನ ನೀಡಲಾಗುತ್ತದೆ.
PUC ಅಥವಾ 11-12 ತರಗತಿಯ ವಿದ್ಯಾರ್ಥಿಗಳಿಗೆ ₹6,000, ITI ಅಥವಾ ಸಮಾನ ತಾಂತ್ರಿಕ ಕೋರ್ಸ್ ಗಳಿಗೆ ₹10,000 ಮತ್ತು ಪಿಯುಸಿ ನಂತರದ ಡಿಪ್ಲೋಮಾ ಕೋರ್ಸ್ ಗಳಿಗೆ ₹12,000 ವರೆಗೆ ನೆರವು ದೊರೆಯಬಹುದು.
ಸಾಮಾನ್ಯ ಪದವಿ ಕೋರ್ಸ್ ಗಳಿಗೆ ₹15,000 ಹಾಗೂ ಸ್ನಾತಕೋತ್ತರ ಹಂತದಲ್ಲಿ ₹20,000 ಹೊರಗೆ ಧನ ಸಹಾಯವಿದೆ.
Labour Card Scholarship 2026 : ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೆ ಧನಸಹಾಯ ಸಿಗುತ್ತದೆಯೇ?
ಹೌದು ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳಿಗೂ ಕೂಡ ಈ ಧನ ಸಹಾಯ ಲಭ್ಯವಿದೆ.
ಮೂರು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ವೃತ್ತಿಪರ ಹಾಗೂ ತಾಂತ್ರಿಕ ಕೋರ್ಸ್ ಗಳಿಗೆ ಕೋರ್ಸ್ ಗೆ ಅನುಗುಣವಾಗಿ ₹20,000 ರಿಂದ ₹35,000 ರ ವರೆಗೆ ನೆರವು ಸಿಗಬಹುದು.
ರಾಷ್ಟ್ರೀಯ ಕಾನೂನು ಸಂಸ್ಥೆಗಳಿಗೆ ಸಮಾನವಾದ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವವರಿಗೆ ₹40,000 ರಿಂದ ₹50,000 ಹಾಗೂ IIT,IIIT,AIIMS,IISC,IISER ಮುಂತಾದ ಪ್ರತಿಷ್ಠಿತ ರಾಷ್ಟ್ರೀಯ ಸಂಸ್ಥೆಗಳಿಗೆ ಸಂಬಂಧಿಸಿದ ಕೋರ್ಸ್ ಗಳಲ್ಲಿ ₹50,000 ರಿಂದ ₹60,000 ವರೆಗೆ ಧನಸಹಾಯ ಲಭ್ಯವಿದೆ.
ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವಂತೆ ಎಲ್ಲ ವಿದ್ಯಾರ್ಥಿಗಳಿಗೂ ಒಂದೇ ರೀತಿಯ ₹75,000 ಧನಸಹಾಯ ಸಿಗುತ್ತದೆ ಎನ್ನುವುದು ಸಾಮಾನ್ಯ ನಿಯಮವಾಗಿ ಪರಿಗಣಿಸಬಾರದು.
ನಿಖರವಾದ ಮೊತ್ತವ ವಿದ್ಯಾರ್ಥಿಯ ಕೋರ್ಸ್ ಮತ್ತು ಅನ್ವಯಿಸುವ ಮಂಡಳಿ ನಿಯಮಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಮಾಹಿತಿಯನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ.
ಇದನ್ನು ಓದಿ
Labour Card Scholarship 2026 : ಯಾರು ಅರ್ಜಿ ಸಲ್ಲಿಸಬಹುದು?
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಂಡಿರುವ ಅರ್ಹ ಕಾರ್ಮಿಕರ ಮಕ್ಕಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಯು ಮಾನ್ಯ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವುದು ಕಡ್ಡಾಯ.
2026 27 ನೇ ಸಾಲಿನ ಅರ್ಜಿಗೆ E-Card ಹೊಂದಿರುವುದು ಮುಖ್ಯ ಎಂದು ಪ್ರಕಟಿತ ಮಾಹಿತಿಯಲ್ಲಿ ತಿಳಿಸಲಾಗಿದೆ. E-CARD ಪಡೆಯಲು ಕಾರ್ಮಿಕರ ನೋಂದಣಿ ಸಂಖ್ಯೆ ಮತ್ತು ಸೇವಾ ಸಿಂಧು ದಾಖಲೆಗಳಿಗೆ ಸಂಬಂಧಿಸಿದ ಉಲ್ಲೇಖ ವಿವರಗಳನ್ನು ಬಳಸಬೇಕಾಗುತ್ತದೆ.
ಇದರ ಜೊತೆಗೆ ಕಾರ್ಮಿಕರ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಿಸಿರುವುದು ಮತ್ತು ಅಗತ್ಯವಿದ್ದಲ್ಲಿ NPCI Mapping ಪೂರ್ಣಗೊಂಡಿರುವುದನ್ನು ಖಚಿತಪಡಿಸಿಕೊಳ್ಳಬೇಕು.
ಬ್ಯಾಂಕ್ ಖಾತೆಯ ವಿವರಗಳಲ್ಲಿ ಸಮಸ್ಯೆ ಇದ್ದರೆ ಹಣ ವರ್ಗಾವಣೆ ವಿಳಂಬವಾಗುವ ಸಾಧ್ಯತೆ ಇರುವುದರಿಂದ ಅರ್ಜಿ ಸಲ್ಲಿಸುವ ಮುನ್ನವೇ ಈ ಮಾಹಿತಿಯನ್ನು ಪರಿಶೀಲಿಸುವುದು ಸೂಕ್ತ.
Labour Card Scholarship 2026 : ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು.
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ಕಾರ್ಮಿಕರ ನೋಂದಣಿ ಅಥವಾ E-Card
- ವಿದ್ಯಾರ್ಥಿಯ ಪ್ರಸ್ತುತ ಶಿಕ್ಷಣದ ಮಾಹಿತಿ
- ಇಂದಿನ ಶೈಕ್ಷಣಿಕ ದಾಖಲೆಗಳು
- ಶಿಕ್ಷಣ ಸಂಸ್ಥೆಯ ವಿವರ
- ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿ
ದಾಖಲೆಗಳಲ್ಲಿರುವ ಹೆಸರು, ಜನ್ಮ ದಿನಾಂಕ, ಆಧಾರ್ ವಿವರ, ಕಾರ್ಮಿಕರ ನೋಂದಣಿ ಸಂಖ್ಯೆ ಮತ್ತು ಬ್ಯಾಂಕ್ ಮಾಹಿತಿಯಲ್ಲಿ ವ್ಯತ್ಯಾಸವಿದ್ದರೆ ಅರ್ಜಿ ಪರಿಶೀಲನೆ ವೇಳೆ ಸಮಸ್ಯೆ ಯಾಗಬಹುದು. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಸರಿಯಾಗಿ ಪರಿಶೀಲಿಸುವುದು ಉತ್ತಮ.
ಇದನ್ನು ಓದಿ
PM Surya Ghar Yojana : ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡಿ, ₹78,000 ವರೆಗೆ ಸಬ್ಸಿಡಿ Important update.
Labour Card Scholarship 2026 : SSP ಮೂಲಕ ಅರ್ಜಿ ಸಲ್ಲಿಸುವುದು ಹೇಗೆ?
- ರಾಜ್ಯದ ಅಧಿಕೃತ ಎಸ್ ಎಸ್ ಪಿ ಪೋರ್ಟಲ್ ಗೆ ಭೇಟಿ ನೀಡಿ.
- ಸಂಬಂಧಿತ ಶೈಕ್ಷಣಿಕ ಧನ ಸಹಾಯ ಸೇವೆಯನ್ನು ಆಯ್ಕೆ ಮಾಡಿ.
- ವಿದ್ಯಾರ್ಥಿ ಮತ್ತು ಕಾರ್ಮಿಕರ ವಿವರಗಳನ್ನು ನಮೂದಿಸಿ.
- ಕೋರ್ಸ್, ತರಗತಿ, ಶಿಕ್ಷಣ ಸಂಸ್ಥೆ ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿ.
ಅರ್ಜಿ ಸಲ್ಲಿಸಲು ನಿಮಗೆ ಗೊಂದಲಗಳಿದ್ದರೆ ನಿಮ್ಮ ಹತ್ತಿರದ ಸೈಬರ್ ಕೇಂದ್ರಗಳಿಗೆ ಅಥವಾ ಗ್ರಾಮ ಓನ್ ಕೇಂದ್ರಗಳಿಗೆ ಭೇಟಿ ನೀಡಿ ಇದರ ಮಾಹಿತಿಯನ್ನು ಸಂಪೂರ್ಣವಾಗಿ ಪಡೆದು ತದನಂತರದಲ್ಲಿ ಅರ್ಜಿ ಸಲ್ಲಿಸಿ.
ಅರ್ಜಿ ಸಲ್ಲಿಸಿದ ನಂತರ ದೊರೆಯುವ ಅರ್ಜಿ ಸಂಖ್ಯೆ ಅಥವಾ ಸ್ವೀಕೃತಿ ವಿವರವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ. ಮುಂದಿನ ಹಂತದಲ್ಲಿ ಅರ್ಜಿಯ ಪರಿಶೀಲನೆ ಮತ್ತು ಸ್ಥಿತಿಯನ್ನು ಪೋರ್ಟಲ್ ಮೂಲಕ ಗಮನಿಸಬಹುದು.
ಅರ್ಜಿ ಸಲ್ಲಿಸಲು SSP ಅಧಿಕೃತ ಪೋರ್ಟಲ್
ಕಾರ್ಮಿಕ ಮಂಡಳಿಯ ಅಧಿಕೃತ ಪೋರ್ಟಲ್
https://kbocwwb.karnataka.gov.in/
Labour Card Scholarship 2026 : ಈ ಸ್ಕಾಲರ್ಶಿಪ್ ನಿಂದ ಆಗುವ ಪ್ರಯೋಜನಗಳು
- ಶಾಲೆ, ಕಾಲೇಜು ಮತ್ತು ಉನ್ನತ ಶಿಕ್ಷಣದ ಶೈಕ್ಷಣಿಕ ವೆಚ್ಚವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.
- ಪುಸ್ತಕ, ನೋಟ್ ಬುಕ್, ಸಮವಸ್ತ್ರ, ಫುಲ್ಕ ಮುಂತಾದ ಅಗತ್ಯ ಖರ್ಚುಗಳನ್ನು ಬರಿಸಲು ನೆರವಾಗುತ್ತದೆ.
- ಮಕ್ಕಳಿಗೆ ಉನ್ನತ ಶಿಕ್ಷಣ ಪಡೆಯಲು ಪ್ರೋತ್ಸಾಹ ದೊರೆಯುತ್ತದೆ.
- ಬಡತನದ ಕಾರಣದಿಂದ ಶಿಕ್ಷಣವನ್ನು ಮಧ್ಯದಲ್ಲಿ ನಿಲ್ಲಿಸುವ ಸಾಧ್ಯತೆ ಕಡಿಮೆಯಾಗುತ್ತದೆ.
- ಕಾರ್ಮಿಕ ಕುಟುಂಬಗಳ ಮೇಲಿನ ಆರ್ಥಿಕ ಹೊರೆ ಕಡಿಮೆಯಾಗುತ್ತದೆ.
- ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ.
- ಉತ್ತಮ ಶಿಕ್ಷಣದ ಮೂಲಕ ಮುಂದೆ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ಸಹಾಯವಾಗುತ್ತದೆ.
- ಇದರಿಂದ ಕಾರ್ಮಿಕ ಕುಟುಂಬಗಳ ಮಕ್ಕಳ ಭವಿಷ್ಯ ಉತ್ತಮವಾಗಲು ಮತ್ತು ಜೀವನ ಮಟ್ಟ ಸುಧಾರಿಸಲು ನೆರವಾಗುತ್ತದೆ.
ಇದನ್ನು ಓದಿ
1 thought on “Labour Card Scholarship 2026 : ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನ ಸಹಾಯ , ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನ. Important update.”