IBPS ಕ್ಲರ್ಕ್ ನೇಮಕಾತಿ 2026 : 11,403 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ. Important update.

WhatsAppಫಾಲೋ ಮಾಡಿ

IBPS ಕ್ಲರ್ಕ್ ನೇಮಕಾತಿ 2026IBPS ಕ್ಲರ್ಕ್ ನೇಮಕಾತಿ 2026 : ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) 11,403 ಗ್ರಾಹಕ ಸೇವಾ ಸಹಾಯಕ (CSA/Clerk) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ  ಪ್ರಕಟಿಸಿದೆ. ವಿದ್ಯಾರ್ಹತೆ, ವಯೋಮಿತಿ, ಪರೀಕ್ಷಾ ಮಾದರಿ, ಆಯ್ಕೆ ಪ್ರಕ್ರಿಯೆ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ. 

  • ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆಯಿಂದ (IBPS) ಒಟ್ಟು 11,403 ಕ್ಲರ್ಕ್/ಗ್ರಾಹಕ ಸೇವಾ ಸಹಾಯಕ ಹುದ್ದೆಗಳ ನೇಮಕಾತಿ.
  • ಯಾವುದೇ ಪದವಿ ಮುಗಿಸಿರುವ ಹಾಗೂ 20 -28 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28 ಆಗಸ್ಟ್ 2026

ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ (public sector bank) ಖಾಲಿ ಇರುವ ಗ್ರಾಹಕ ಸೇವ ಸಹಾಯಕ (customer service associate -CSA) ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಸಾಮಾನ್ಯ ನೇಮಕಾತಿ ಪ್ರಕ್ರಿಯೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. 2027 28 ನೇ ಸಾಲಿನ ನೇಮಕಾತಿ ಅಡಿ ದೇಶದಾದ್ಯಂತ ಒಟ್ಟು 11,403 ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು 2026ರ ಆಗಸ್ಟ್ ಒಂದರಿಂದ ಆಗಸ್ಟ್ 28 ರ ವರೆಗೆ ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ವಿದ್ಯಾರ್ಹತೆ, ವಯೋಮಿತಿ, ಪರೀಕ್ಷಾ ಮಾದರಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಇದನ್ನು ಓದಿ

Reliance Foundation Scholarship 2026-27 : ವಿದ್ಯಾರ್ಥಿಗಳಿಗೆ ₹6 ಲಕ್ಷದವರೆಗೆ ವಿದ್ಯಾರ್ಥಿ ವೇತನ. Important update.

IBPS ಕ್ಲರ್ಕ್ ನೇಮಕಾತಿ 2026 : ಮುಖ್ಯ ವಿವರಗಳು 

  • ಸಂಸ್ಥೆಯ ಹೆಸರು : ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS)
  • ಹುದ್ದೆಯ ಹೆಸರು : ಗ್ರಾಹಕ ಸೇವಾ ಸಹಾಯಕ /ಕ್ಲರ್ಕ್
  • ಓಟ್ಟು ಹುದ್ದೆಗಳು : 11,403 (ರಾಜ್ಯ/ಕೇಂದ್ರಾಡಳಿತ ಪ್ರದೇಶವಾರು)
  • ಉದ್ಯೋಗ ಸ್ಥಳ : ಅಖಿಲ ಭಾರತ
  • ವೇತನ ಶ್ರೇಣಿ : ಮಾಸಿಕ ರೂ 24,050 ರಿಂದ ರೂ 64,480
  • ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್ ಮೂಲಕ
  • ಅಧಿಕೃತ ವೆಬ್ಸೈಟ್  : https://www.ibps.in/

IBPS ಕ್ಲರ್ಕ್ ನೇಮಕಾತಿ 2026 : ಪ್ರಮುಖ ದಿನಾಂಕಗಳು 

  1. ಆನ್ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ : 01/08/2026 ರಿಂದ 28/08/2026
  2. ಅರ್ಜಿ ತಿದ್ದುಪಡಿ ವಿಂಡೋ : ನೋಂದಣಿ ಮುಕ್ತಾಯವಾದ ಎರಡು ದಿನಗಳವರೆಗೆ
  3. ಆನ್ಲೈನ್ ಪೂರ್ವಭಾವಿ ಪರೀಕ್ಷೆ (prelims) : ಅಕ್ಟೋಬರ್ 2026
  4. ಪೂರ್ವಭಾವಿ ಪರೀಕ್ಷೆ ಫಲಿತಾಂಶ : ನವೆಂಬರ್ 2026
  5. ಆನ್ಲೈನ್ ಮುಖ್ಯ ಪರೀಕ್ಷೆ (mains) : ಡಿಸೆಂಬರ್ 2026
  6. ತಾತ್ಕಾಲಿಕ ಹಂಚಿಕೆ : ಮಾರ್ಚ್ 2027

IBPS ಕ್ಲರ್ಕ್ ನೇಮಕಾತಿ 2026 : ಅರ್ಹತಾ ಮಾನದಂಡಗಳು 

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.

1. ಶೈಕ್ಷಣಿಕ ವಿದ್ಯಾರ್ಹತೆ 

  • ಪದವಿ : ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಹೊಂದಿರಬೇಕು.
  • ಕಂಪ್ಯೂಟರ್ ಜ್ಞಾನ : ಕಂಪ್ಯೂಟರ್ ಸಿಸ್ಟಮ್ ಗಳಲ್ಲಿ ಕಾರ್ಯನಿರ್ವಹಿಸುವ ಜ್ಞಾನ ಕಡ್ಡಾಯ. ಕಂಪ್ಯೂಟರ್ ಕಾರ್ಯಾಚರಣೆ/ ಭಾಷೆಯಲ್ಲಿ ಪ್ರಮಾಣ ಪತ್ರ/ಡಿಪ್ಲೋಮಾ/ಪದವಿ ಹೊಂದಿರಬೇಕು, ಅಥವಾ ಹೈಸ್ಕೂಲ್/ಕಾಲೇಜಿನಲ್ಲಿ ಕಂಪ್ಯೂಟರ್ ಅಥವಾ ಐಟಿ ಯನ್ನು ಒಂದು ವಿಷಯವಾಗಿ ಓದಿರಬೇಕು.
  • ಸ್ಥಳೀಯ ಭಾಷಾ ಪ್ರಾವೀಣ್ಯತೆ: ಅಭ್ಯರ್ಥಿಗಳು ಯಾವ ರಾಜ್ಯಕ್ಕೆ/ಕೇಂದ್ರಾಡಳಿತ ಪ್ರದೇಶಕ್ಕೆ ಅರ್ಜಿ ಸಲ್ಲಿಸುತ್ತಾರೆಯೋ ಆ ರಾಜ್ಯದ ಅಧಿಕೃತ ಸ್ಥಳೀಯ ಭಾಷೆಯಲ್ಲಿ ಓದಲು ಬರೆಯಲು ಮತ್ತು ಮಾತನಾಡಲು ತಿಳಿದಿರಬೇಕು.

2. ವಯೋಮಿತಿ 

  • ಕನಿಷ್ಠ ವಯಸ್ಸು : 20 ವರ್ಷಗಳು
  • ಗರಿಷ್ಠ ವಯಸ್ಸು : 28 ವರ್ಷಗಳು

ವಯೋಮಿತಿ ಸಡಿಲಿಕೆ 

  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ : 5 ವರ್ಷಗಳು
  • ಇತರೆ ಹಿಂದುಳಿದ ವರ್ಗ ( OBC) :3 ವರ್ಷಗಳು
  • ಅಂಗವಿಕಲ ಅಭ್ಯರ್ಥಿಗಳು : 10 ವರ್ಷಗಳು
  • ಮಾಜಿ ಸೈನಿಕರು, ವಿಧವೆಯರು, ವಿಚ್ಛೇದಿತ ಮಹಿಳೆಯರಿಗೆ ಸರ್ಕಾರಿ ನಿಯಮಾವಳಿಗಳ ಪ್ರಕಾರ ಸಡಿಲಿಕೆ ಇರುತ್ತದೆ.

ಇದನ್ನು ಓದಿ

Bank of Baroda Recruitment (LBO) 2026 : ಬ್ಯಾಂಕ್ ಆಫ್ ಬರೋಡದಲ್ಲಿ 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ಬಂಪರ್ ನೇಮಕಾತಿ, Important update.

IBPS ಕ್ಲರ್ಕ್ ನೇಮಕಾತಿ 2026 : ಅರ್ಜಿ ಶುಲ್ಕ 

ಅರ್ಜಿದಾರರು 1/8/2026 ರಿಂದ 28/8/2026 ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಸಬೇಕು.

  • SC, ST, pwbd, ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ₹175
  • , ಇತರೆ ಎಲ್ಲಾ (general, OBC, EWS) ಅಭ್ಯರ್ಥಿಗಳಿಗೆ : ₹850
IBPS ಕ್ಲರ್ಕ್ ನೇಮಕಾತಿ 2026 : ಆಯ್ಕೆ ಪ್ರಕ್ರಿಯೆ 

IBPS clerk/CSA ನೇಮಕಾತಿಯು ಎರಡು ಹಂತದ ಆನ್ಲೈನ್ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ.

1. ಪೂರ್ವಭಾವಿ ಪರೀಕ್ಷೆ (preliminary exam) 

ಇದು 60 ನಿಮಿಷಗಳ ಅವಧಿಯ 100 ಅಂಕಗಳ ವಸ್ತುನಿಷ್ಠ ಪರೀಕ್ಷೆಯಾಗಿದೆ

  • ಇಂಗ್ಲಿಷ್ ಭಾಷೆ : 30 ಪ್ರಶ್ನೆಗಳು
  • ಸಂಖ್ಯಾತ್ಮಕ ಸಾಮರ್ಥ್ಯ : 35 ಪ್ರಶ್ನೆಗಳು
  • ತಾರ್ಕಿಕ ಸಾಮರ್ಥ್ಯ : 35 ಪ್ರಶ್ನೆಗಳು

2. ಮುಖ್ಯ ಪರೀಕ್ಷೆ (main exam) 

ಮುಖ್ಯ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳನ್ನು ಮಾತ್ರ ಅಂತಿಮ ಮೆರಿಟ್ ಪಟ್ಟಿ ತಯಾರಿಸಲು ಪರಿಗಣಿಸಲಾಗುತ್ತದೆ.

  • ಒಟ್ಟು 160 ಪ್ರಶ್ನೆಗಳು , 200 ಅಂಕಗಳು ಮತ್ತು 125 ನಿಮಿಷಗಳ ಕಾಲಾವಕಾಶವಿರುತ್ತದೆ.
  • ವಿಷಯಗಳು : ಸಾಮಾನ್ಯ/ಹಣಕಾಸು ಅರಿವು/ಸಾಮಾನ್ಯ ಇಂಗ್ಲಿಷ್/ತಾರ್ಕಿಕ ಸಾಮರ್ಥ್ಯ ಮತ್ತು ಕ್ವಾಂಟಿಟೇಟಿವ್ ಆಪ್ಟಿಟ್ಯೂಡ್.
  • ನೆಗೆಟಿವ್ ಮಾರ್ಕಿಂಗ್ : ಎರಡು ಹಂತದ ಪರೀಕ್ಷೆಗಳಲ್ಲಿ ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುತ್ತದೆ.

3. ಸ್ಥಳೀಯ ಭಾಷಾ ಪ್ರಾವೀಣ್ಯತೆ ಪರೀಕ್ಷೆ (LLPT)

ಮುಖ್ಯ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸಿದ ರಾಜ್ಯದ ಸ್ಥಳೀಯ ಭಾಷೆಯನ್ನು 10ನೇ ತರಗತಿಯಲ್ಲಿ ಓದಿಲ್ಲದಿದ್ದರೆ, ಈ ಭಾಷಾ ಪರೀಕ್ಷೆಯನ್ನು ಎದುರಿಸುವುದು ಕಡ್ಡಾಯವಾಗಿದೆ.

ಇದನ್ನು ಓದಿ

IDFC FIRST Bank Scholarship 2026 : ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹1 ಲಕ್ಷ ಸ್ಕಾಲರ್ಶಿಪ್, ಅರ್ಜಿ ಆಹ್ವಾನ. Important update.

IBPS ಕ್ಲರ್ಕ್ ನೇಮಕಾತಿ 2026 : ಅರ್ಜಿ ಸಲ್ಲಿಸುವ ವಿಧಾನ. 

Step 1. ಪೂರ್ವಸಿದ್ಧತೆ, ನಿಮ್ಮ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಮತ್ತು ಸ್ಕ್ಯಾನ್ ಮಾಡಿದ ಫೋಟೋ, ಸಹಿ, ಎಡ ಹೆಬ್ಬೆರಳಿನ ಗುರುತು ಹಾಗೂ ಕೈಬರಹದ ಘೋಷಣ ಪತ್ರವನ್ನು ಸಿದ್ಧವಾಗಿಟ್ಟುಕೊಳ್ಳಿ.

Step 2. ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.www.ibps.in ಗೆ ಭೇಟಿ ನೀಡಿ. CRP CSA ಲಿಂಕ್ ಮೇಲೆ ಕ್ಲಿಕ್ ಮಾಡಿ.

Step 3. ನೋಂದಣಿ “CLICK HERE FOR NEW REGISTRATION ” ಮೇಲೆ ಕ್ಲಿಕ್ ಮಾಡಿ ನೊಂದಾಯಿಸಿಕೊಳ್ಳಿ ಮತ್ತು ಪ್ರೋವಿಜಿನಲ್ ರಿಜಿಸ್ಟ್ರೇಷನ್ ನಂಬರ್ ಹಾಗೂ ಪಾಸ್ವರ್ಡ್ ಪಡೆದುಕೊಳ್ಳಿ.

Step 4 . ನಿಮ್ಮ ವೈಯಕ್ತಿಕ ಶೈಕ್ಷಣಿಕ ಮಾಹಿತಿಗಳನ್ನು ಹಾಗೂ ಅರ್ಜಿ ಸಲ್ಲಿಸುತ್ತಿರುವ ರಾಜ್ಯವನ್ನು ಎಚ್ಚರಿಕೆಯಿಂದ ಭರ್ತಿ ಮಾಡಿ. (ಒಮ್ಮೆ ಆಯ್ಕೆ ಮಾಡಿದ ರಾಜ್ಯವನ್ನು ಬದಲಾಯಿಸಲು ಸಾಧ್ಯವಿಲ್ಲ)

Step 5 . ದಾಖಲೆಗಳ ಅಪ್ಲೋಡ್, ಸ್ಕ್ಯಾನ್ ಮಾಡಿದ ದಾಖಲೆಗಳನ್ನು ನಿಗದಿತ ಅಳತೆಯಲ್ಲಿ ಅಪ್ಲೋಡ್ ಮಾಡಿ.

Step 6 . ಶುಲ್ಕಪಾವತಿ & ಸಲ್ಲಿಕೆ : ಆನ್ಲೈನ್ ಮೂಲಕ ಶುಲ್ಕ ಪಾವತಿಸಿ ಅರ್ಜಿಯನ್ನು ಅಂತಿಮವಾಗಿ ಸಬ್ಮಿಟ್ ಮಾಡಿ. ಇ-ರಸೀದಿ ಮತ್ತು ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಅರ್ಜಿ ಸಲ್ಲಿಸಲು ಗೊಂದಲವಿದ್ದಲ್ಲಿ ನಿಮ್ಮ ಹತ್ತಿರದ ಸೈಬರ್ ಕೇಂದ್ರಗಳಿಗೆ ಅಥವಾ ಗ್ರಾಮ ಓನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.

ಇದನ್ನು ಓದಿ

SBI ಕ್ಲರ್ಕ್ ನೇಮಕಾತಿ 2026 : SBI Important update, ಯಾವುದೇ ಡಿಗ್ರಿ ಪಾಸಾದವರಿಗೆ ಸ್ಟೇಟ್ ಬ್ಯಾಂಕ್ ನಲ್ಲಿ 9,100 + ಹುದ್ದೆ ,46,000 ವೇತನ. ಇಂದೇ ಅರ್ಜಿ ಸಲ್ಲಿಸಿ.

Leave a Comment