Swavalambi Saarathi Yojana 2026 : ಸ್ವಾವಲಂಬಿ ಸಾರಥಿ ಯೋಜನೆ ಅಡಿ, ಟ್ಯಾಕ್ಸಿ, ಆಟೋ, ಸರಕು ವಾಹನ ಖರೀದಿಗೆ 3 ಲಕ್ಷ ರೂ ಸಬ್ಸಿಡಿ. ಆನ್ಲೈನ್ ಅರ್ಜಿ ಸಲ್ಲಿಕೆ, ಅರ್ಹತೆ ಮತ್ತು ದಾಖಲೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ನಮಸ್ಕಾರ ಸ್ನೇಹಿತರೆ, ನೀವೇನಾದರೂ ಸ್ವಂತ ವಾಹನ ಖರೀದಿಸಿ ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದರೆ, ರಾಜ್ಯ ಸರ್ಕಾರವು ನಿಮಗೊಂದು ಭರ್ಜರಿ ಸಿಹಿ ಸುದ್ದಿ ನೀಡಿದೆ. ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಸ್ವಾವಲಂಬಿ ಸಾರಥಿ ಯೋಜನೆ (Swavalambi Saarathi Yojana 2026) ಅಡಿಯಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಈ ಯೋಜನೆ ಅಡಿ ಆಟೋರಿಕ್ಷಾ, ಟ್ಯಾಕ್ಸಿ ಹಾಗೂ ಸರಕು ವಾಹನಗಳ ಖರೀದಿಗೆ ಬರೋಬ್ಬರಿ 3 ಲಕ್ಷ ರೂಪಾಯಿ ವರೆಗೆ ಸಹಾಯಧನ ನೀಡಲು ಮುಂದಾಗಿದೆ. ಬ್ಯಾಂಕುಗಳಿಂದ ಸಾಲ ಮಂಜೂರಾತಿ ಪಡೆದ ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ (online application) ಸಲ್ಲಿಸಲು ಇದೀಗ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ಇದನ್ನು ಓದಿ
Swavalambi Saarathi Yojana 2026 : ಯಾರಿಗೆಲ್ಲ ಸಿಗಲಿದೆ ಈ ಲಾಭ?
ಈ ಯೋಜನೆಯ ಲಾಭ ಪಡೆಯಲು ಯಾರೆಲ್ಲಾ ಅರ್ಹರು ಎಂಬುದನ್ನು ನೋಡುವುದಾದರೆ
- ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಅಥವಾ ಪಾರ್ಸಿ ವರ್ಗಕ್ಕೆ (minority community) ಸೇರಿದವರು ಮಾತ್ರ ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
- ಅಭ್ಯರ್ಥಿಯ ವಯಸ್ಸು 18 ರಿಂದ 55 ವರ್ಷದೊಳಗಿರಬೇಕು.
- ಅಭ್ಯರ್ಥಿಯ ಕುಟುಂಬದ ಒಟ್ಟು ವಾರ್ಷಿಕ ಆದಾಯ (annual income) 6 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರುವುದು ಕಡ್ಡಾಯವಾಗಿದೆ.
- ನಿಮ್ಮ ಕುಟುಂಬದಲ್ಲಿ ಯಾರೂ ಕೂಡ ಸರ್ಕಾರಿ ಉದ್ಯೋಗದಲ್ಲಿ ಇರಬಾರದು.
- ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಪಡೆದ ಅಧಿಕೃತ ಚಾಲನಾ ಪರವನಾಗಿ (driving licence) ನಿಮ್ಮ ಬಳಿ ಇರಬೇಕು.
- ಕಳೆದ ಐದು ವರ್ಷಗಳಲ್ಲಿ ನಿಗಮದ ಬೇರೆ ಯಾವುದೇ ಯೋಜನೆ ಅಡಿ ಸಾಲ ಪಡೆದಿದ್ದರೆ ಈ ಸೌಲಭ್ಯ ನಿಮಗೆ ಸಿಗುವುದಿಲ್ಲ.
Swavalambi Saarathi Yojana 2026 : ವಾಹನ ಖರೀದಿಗೆ ಸಿಗುವ ಸಹಾಯಧನದ ವಿವರ
ಈ ಯೋಜನೆ ಅಡಿ ಸಿಗುವ ಸಹಾಯಧನದ ಮೊತ್ತವು ನೀವು ಖರೀದಿಸುವ ವಾಹನದ ಮೇಲೆ ಅವಲಂಬಿತವಾಗಿರುತ್ತದೆ. ನೀವು ಟ್ಯಾಕ್ಸಿ ಅಥವಾ ಸರಕು ವಾಹನ ಖರೀದಿಸುತ್ತಿದ್ದರೆ, ವಾಹನದ ಒಟ್ಟು ಮೌಲ್ಯದ ಶೇಕಡ 50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂಪಾಯಿಗಳವರೆಗೆ ಸಬ್ಸಿಡಿ ದೊರೆಯಲಿದೆ.
ಅದೇ ರೀತಿ ನೀವು ಪ್ರಯಾಣಿಕ ಆಟೋರಿಕ್ಷಾ ಖರೀದಿಸಲು ಮುಂದಾಗಿದ್ದರೆ, ಗರಿಷ್ಠ 25,000 ಗಳವರೆಗೆ ಸಹಾಯಧನ ದೊರೆಯಲಿದೆ.
ಗಮನಿಸಬೇಕಾದ ಪ್ರಮುಖ ಅಂಶವೆಂದರೆ ವಾಹನದ ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲ ಪಡೆದುಕೊಂಡ ಬಗ್ಗೆ ಬ್ಯಾಂಕ್ ದೃಢೀಕರಣ ಪತ್ರವನ್ನು ನಿಗಮದ ಕಚೇರಿಗೆ ಕಡ್ಡಾಯವಾಗಿ ಸಲ್ಲಿಸಬೇಕಾಗುತ್ತದೆ.
ಇದನ್ನು ಓದಿ
Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?
Swavalambi Saarathi Yojana 2026 : ಅರ್ಜಿ ಸಲ್ಲಿಕೆಗೆ ಬೇಕಾಗುವ ಅಗತ್ಯ ದಾಖಲೆಗಳು.
ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಕೆಲವು ಪ್ರಮುಖ ದಾಖಲೆಗಳನ್ನು ಒದಗಿಸುವುದು ಕಡ್ಡಾಯವಾಗಿರುತ್ತದೆ.
- ನಿಮ್ಮ ಅಧಿಕೃತ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಕಂದಾಯ ಇಲಾಖೆಯಿಂದ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.
- ನಿಮ್ಮ ಅಧಿಕೃತ ಚಾಲನೆ ಪರವನಾಗಿ (driving licence)
- ವಾಹನದ ಅಂದಾಜು ದರ ಪಟ್ಟಿಯನ್ನು ಹೊಂದಿರಬೇಕು.
- ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿರಬೇಕು.
- ಇಲಾಖೆಯ ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿದ ಸ್ವಯಂ ಘೋಷಣ ಪತ್ರವನ್ನು (self declaration) ಕಡ್ಡಾಯವಾಗಿ ಲಗತಿಸಬೇಕು.
Swavalambi Saarathi Yojana 2026 : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಸರಳ ವಿಧಾನ.
ಅರ್ಜಿ ಸಲ್ಲಿಸಲು 2026 ಸೆಪ್ಟೆಂಬರ್ 25 ಕೊನೆಯ ದಿನಾಂಕವಾಗಿದೆ.
ನೀವು ನಿಮ್ಮ ಮೊಬೈಲ್ ಮೂಲಕವೇ ಅಥವಾ ಹತ್ತಿರದ ಗ್ರಾಮ ಓನ್ ಕೇಂದ್ರಗಳಿಗೆ ಭೇಟಿ ನೀಡಿ ಸುಲಭವಾಗಿ ಅರ್ಜಿ ಸಲ್ಲಿಸಬಹುದಾಗಿದೆ.
- ಮೊದಲು ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
- ಅಲ್ಲಿ ಮುಖ ಪಟ್ಟದಲ್ಲಿ ಕಾಣಿಸುವ ಸ್ವಾವಲಂಬಿ ಸಾರಥಿ ಯೋಜನೆ ಆಯ್ಕೆಯನ್ನು ಕ್ಲಿಕ್ ಮಾಡಿ.
- ನಂತರ ಅಪ್ಲೈ ಆನ್ಲೈನ್ ಬಟನ್ ಮೇಲೆ ಕ್ಲಿಕ್ ಮಾಡಿ.
- ಬಳಿಕ ನಿಮ್ಮ 10 ಅಂಕಿಯ ಮೊಬೈಲ್ ಸಂಖ್ಯೆ ನಮೂದಿಸಿ.
- ಓಟಿಪಿ ಪಡೆದು ಲಾಗಿನ್ ಆಗಿ.
- ಅಲ್ಲಿ ಕೇಳಲಾದ ಎಲ್ಲಾ ನಿಖರ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಸಬ್ಮಿಟ್ ಬಟನ್ ಒತ್ತಿದರೆ ನಿಮ್ಮ ಅರ್ಜಿ ಸಲ್ಲಿಕೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ.
ಇದನ್ನು ಓದಿ
Swavalambi Saarathi Yojana 2026 : ಈ ಯೋಜನೆಯಿಂದ ಬಡವರಿಗೆ ಆಗುವ ಪ್ರಯೋಜನಗಳು.
- Swavalambi Saarathi Yojana 2026 ಸ್ವಂತ ಉದ್ಯೋಗ ಆರಂಭಿಸಲು ಅವಕಾಶ : ಟ್ಯಾಕ್ಸಿ, ಆಟೋ, ಸರಕು ಸಾಗಾಣೆ ವಾಹನ ಮುಂತಾದವುಗಳನ್ನು ಪಡೆದು ಸ್ವಂತ ಉದ್ಯೋಗ ಮಾಡಬಹುದು.
- ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತದೆ : ಕೆಲಸಕ್ಕಾಗಿ ಬೇರೆಯವರ ಮೇಲೆ ಅವಲಂಬಿತರಾಗದೆ ಸ್ವಂತ ವಾಹನದ ಮೂಲಕ ಆದಾಯ ಗಳಿಸಬಹುದು.
- ಬ್ಯಾಂಕ್ ಸಾಲದ ಹೊರೆ ಕಡಿಮೆಯಾಗುತ್ತದೆ : ಸರ್ಕಾರದ ಸಬ್ಸಿಡಿ ಇಂದ ವಾಹನದ ಒಟ್ಟು ವೆಚ್ಚದಲ್ಲಿ ಫಲಾನುಭವಿಯು ಭರಿಸಬೇಕಾದ ಮೊತ್ತ ಕಡಿಮೆಯಾಗುತ್ತದೆ. ಉಳಿದ ಮೊತ್ತಕ್ಕೆ ಬ್ಯಾಂಕ್ ಸಾಲದ ವ್ಯವಸ್ಥೆ ಇರಬಹುದು.
- ಕುಟುಂಬಕ್ಕೆ ನಿಯಮಿತ ಆದಾಯದ ಮೂಲ : ವಾಹನವನ್ನು ಸರಿಯಾಗಿ ಬಳಸಿಕೊಂಡು ಪ್ರತಿದಿನ ಕೆಲಸ ಮಾಡಿದರೆ ಕುಟುಂಬ ನಿರ್ವಹಣೆಗೆ ಆದಾಯದ ಮೂಲ ಸೃಷ್ಟಿಯಾಗುತ್ತದೆ.
- ಸ್ವಂತ ವಾಹನದ ಮಾಲೀಕರಾಗಬಹುದು : ಬಾಡಿಗೆ ವಾಹನ ಓಡಿಸುವ ಬದಲು ಸ್ವಂತ ವಾಹನ ಹೊಂದಿ, ಅದರ ಮೂಲಕ ವ್ಯವಹಾರ ಮಾಡಬಹುದು.
- ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಸಹಾಯ : ವಾಹನದಿಂದ ಬರುವ ಆದಾಯವನ್ನು ಕುಟುಂಬದ ಆಹಾರ, ಶಿಕ್ಷಣ, ಮನೆ ಖರ್ಚು ಮುಂತಾದ ಅಗತ್ಯಗಳಿಗೆ ಬಳಸಿಕೊಳ್ಳಬಹುದು.
- ಯುವಕರಿಗೆ ಸ್ವಾವಲಂಬನೆ : ವಿಶೇಷವಾಗಿ ಬಡ ಮತ್ತು ನಿರುದ್ಯೋಗಿ ಯುವಕ ಯುವತಿಯರು ತಮ್ಮದೇ ಉದ್ಯೋಗ ಆರಂಭಿಸಿ ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯವಾಗುತ್ತದೆ.
- ಸಣ್ಣ ಉದ್ಯಮವಾಗಿ ಬೆಳೆಸಿಕೊಳ್ಳುವ ಅವಕಾಶ : ಒಂದು ವಾಹನದಿಂದ ಆರಂಭಿಸಿ, ಮುಂದೆ ಆದಾಯ ಹೆಚ್ಚಾದಂತೆ ವಾಹನ ಅಥವಾ ಸೇವೆಯನ್ನು ವಿಸ್ತರಿಸಿಕೊಳ್ಳುವ ಅವಕಾಶವಿದೆ.
- ಸಾರಿಗೆ ಕ್ಷೇತ್ರದಲ್ಲಿ ಉದ್ಯೋಗ : ಪ್ರಯಾಣಿಕರ ಸಾರಿಗೆ ಅಥವಾ ಸರಕು ಸಾಗಣೆ ಕ್ಷೇತ್ರದಲ್ಲಿ ನೇರವಾಗಿ ಕೆಲಸ ಮಾಡಲು ಅವಕಾಶ ದೊರೆಯುತ್ತದೆ.
ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್
https://kmdconline.karnataka.gov.in/Portal/home
ಇದನ್ನು ಓದಿ
1 thought on “Swavalambi Saarathi Yojana 2026 : ಸ್ವಾವಲಂಬಿ ಸಾರಥಿ ಯೋಜನೆ, ವಾಹನ ಖರೀದಿಗೆ 3 ಲಕ್ಷ ರೂ ಸಬ್ಸಿಡಿ ಪಡೆಯಲು ಅರ್ಜಿ ಆಹ್ವಾನ. Important update.”