ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ?

WhatsAppಫಾಲೋ ಮಾಡಿ

 

ATM card : ಎಟಿಎಂ ಕಾರ್ಡ್ ಹೊಂದಿರುವವರಿಗೆ 2 ಲಕ್ಷ ವಿಮೆ ಸಿಗುತ್ತದೆಯೇ ಯಾವ ಸಂದರ್ಭಗಳಲ್ಲಿ ಹಣ ಸಿಗುತ್ತದೆ ನಿಯಮಗಳೇನು ? ಕ್ಲೈಮ್ ಹೇಗೆ ಮಾಡಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ.

ಎಟಿಎಂ (ATM) ಕಾರ್ಡ್ ಹೊಂದಿರುವವರಿಗೆ ಸಂಬಂಧಿಸಿದ ವಿಮಾ (insurance)  ಸೌಲಭ್ಯಗಳ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲ ಮತ್ತು ಅಪೂರ್ಣ ಮಾಹಿತಿ ಇದೆ.

ವಿಶೇಷವಾಗಿ ಎಟಿಎಂ ಕಾರ್ಡ್ ಇದ್ದರೆ ಸಾವಿನ ನಂತರ ಕುಟುಂಬಕ್ಕೆ 2 ಲಕ್ಷ ರೂ ಸಿಗುತ್ತದೆ ಎಂಬ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಇದನ್ನು ಜನರು ಸ್ಪಷ್ಟವಾಗಿ ಸರಿಯಾದ ರೀತಿಯಲ್ಲಿ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ.

ಈ ಲೇಖನದಲ್ಲಿ ಎಟಿಎಂ ಕಾರ್ಡಿಗೆ ಸಂಬಂಧಿಸಿದ ವಿಮೆ ಅದರ ಪ್ರಯೋಜನಗಳು, ಅರ್ಹತೆ ,ನಿಯಮಗಳು ಹಾಗೂ ಕ್ಲೈಮ್ ಪ್ರಕ್ರಿಯೆ ಬಗ್ಗೆ ವಿವರವಾಗಿ ತಿಳಿಸಿಕೊಡಲಾಗಿದೆ.

ಎಟಿಎಂ ಕಾರ್ಡ್ ವಿಮೆ (ATM card insurance)

ಸಾಮಾನ್ಯವಾಗಿ ಬಹುತೇಕ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ನೀಡುವ ರೂಪೇ (Rupay) ಡೆಬಿಟ್ ಕಾರ್ಡ್ಗಳಿಗೆ ಅಪಘಾತ ವಿಮೆ (Accidental insurance cover)  ಸೌಲಭ್ಯವನ್ನು ಒದಗಿಸುತ್ತವೆ.

ಈ ವಿಮೆ ಕಾಡುದಾರರಿಗೆ ಪ್ರತ್ಯೇಕವಾಗಿ ಯಾವುದೇ ಪ್ರೀಮಿಯಂ (premium)  ಪಾವತಿಸಬೇಕಾಗಿಲ್ಲ. ಬ್ಯಾಂಕ್ ಮತ್ತು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ(NPCI)  ಮೂಲಕ ಈ ಸೌಲಭ್ಯ ನೀಡಲಾಗುತ್ತದೆ.

ಆದರೆ ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯ ಏನೆಂದರೆ, ಈ ವಿಮೆ ಎಲ್ಲ ರೀತಿಯ ಸಾವಿಗೂ ಅನ್ವಯಿಸುವುದಿಲ್ಲ ಮುಖ್ಯವಾಗಿ ಇದು ಆಕಸ್ಮಿಕ ಮರಣ (Accidental death)  ಅಥವಾ ಶಾಶ್ವತ ಅಂಗವಿಕಲ್ಯಾ (permanent disability) , ಸಂದರ್ಭಗಳಿಗೆ ಮಾತ್ರ ಅನ್ವಯಿಸುತ್ತದೆ.

2 ಲಕ್ಷ ರೂ ಪರಿಹಾರ (Compensation)

ಕೆಲವು ಕಾರ್ಡ್ಗಳ ಮೇಲೆ ಎರಡು ಲಕ್ಷ ರೂ ವರೆಗೂ ವಿಮಾ ಕವರ್ (insurance cover)  ಇರುತ್ತದೆ. ಆದರೆ ಇದು ಕಾರ್ಡಿನ ಪ್ರಕಾರ ಬ್ಯಾಂಕ್ ನ ನಿಯಮಗಳ ಮೇಲೆ ಅವಲಂಬಿತವಾಗಿರುತ್ತದೆ. ಎಲ್ಲಾ ಎಟಿಎಂ ಕಾರ್ಡ್ ಗಳಿಗೆ ಈ ಪ್ರಮಾಣದ ವಿಮೆ ಇರುವುದಿಲ್ಲ.

ಉದಾಹರಣೆಗೆ :ಸಾಮಾನ್ಯ Rupay card- 1 ಲಕ್ಷ ಅಥವಾ ಕಡಿಮೆ.                                    ಪ್ರೀಮಿಯಂ (premium) card 2 ಲಕ್ಷ ಅಥವಾ ಹೆಚ್ಚು

ಹೀಗಾಗಿ ಯಾವುದೇ ಬ್ಯಾಂಕ್ ಕಾರ್ಡ್ ಇದ್ದರೂ 2 ಲಕ್ಷ ಸಿಗುತ್ತದೆ                  ಎಂಬುದು ಸಂಪೂರ್ಣ ಸತ್ಯವಲ್ಲ.

ವಿಮೆ ಸಿಗಲು ಅಗತ್ಯವಾದ ಪ್ರಮುಖ ಷರತ್ತುಗಳು (Eligibility Conditions).

ಈ ವಿಮೆಯನ್ನು ಪಡೆಯಲು ಕೆಲವು ಪ್ರಮುಖ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

1. ಕಾರ್ಡ್ ಸಕ್ರಿಯವಾಗಿರಬೇಕು. ಕಾರ್ಡನ್ನು ಕನಿಷ್ಠ 90 ದಿನಗಳಲ್ಲಿ ಒಂದು ಬಾರಿಯಾದರೂ ಬಳಸಿರಬೇಕು .ಉದಾಹರಣೆಗೆ ATM withdrawal ಅಥವಾ Pos transaction.

2. ಆಕಸ್ಮಿಕ ಸಾವು. ಸಹಜ ಸಾವಿಗೆ ಈ ವಿಮೆ ಅನ್ವಯಿಸುವುದಿಲ್ಲ ಅಪಘಾತದಿಂದ ಮೃತಪಟ್ಟಿದ್ದರೆ ಮಾತ್ರ ಪರಿಹಾರ ಸಿಗುತ್ತದೆ.

3. ಕಾರ್ಡ್ ಪ್ರಕಾರ .ಯಾವ ರೀತಿಯ Rupay ಕಾರ್ಡ್ ಇದೆ ಎಂಬುದರ ಮೇಲೆ ವಿಮಾ ಮತ್ತು ಅವಲಂಬಿತವಾಗಿರುತ್ತದೆ.

4. ನಾಮಿನಿ (Nominee) ವಿವರಗಳು. ಬ್ಯಾಂಕ್ ಖಾತೆಯಲ್ಲಿ ನಾಮಿನಿ ವಿವರಗಳು ಸರಿಯಾಗಿ ನಮೂದಿಸಿರಬೇಕು.

ಎಟಿಎಂ ಕಾರ್ಡ್ ವಿಮೆಯ ಪ್ರಮುಖ ಪ್ರಯೋಜನಗಳು (Benefits).

1. ಕಾರ್ಡುದಾರರು ಅಪಘಾತದಲ್ಲಿ ಮೃತಪಟ್ಟರೆ ನಾಮಿನಿಗೆ ವಿಮಾ ಮೊತ್ತ ನೀಡಲಾಗುತ್ತದೆ.

2. ಅಪಘಾತದಿಂದ ಶಾಶ್ವತ ಅಂಗವೈಕಲ್ಯ ಉಂಟಾದರೆ, ಹಣಕಾಸಿನ ನೆರವು ಸಿಗುತ್ತದೆ.

3. ಕೆಲವು ಕಾರ್ಡುಗಳಲ್ಲಿ ಕಳ್ಳತನ ಅಥವಾ ಅನಧಿಕೃತ ವ್ಯವಹಾರಗಳ ವಿರುದ್ಧ ರಕ್ಷಣೆ (Protection) ಸೌಲಭ್ಯ ಇರುತ್ತದೆ.

ವಿಮೆ ಕ್ಲೇಮ್ ಮಾಡುವ ವಿಧಾನ(How to claim insurance).

ಸಾವಿನ ನಂತರ ಕುಟುಂಬದವರು ವಿಮೆ ಪಡೆಯಲು ಕೆಳಗಿನ ಕ್ರಮಗಳನ್ನು ಅನುಸರಿಸಬೇಕು ಸಂಬಂಧಿಸಿದ ಬ್ಯಾಂಕ್ಗೆ ತಕ್ಷಣ ಮಾಹಿತಿ ನೀಡಬೇಕು ಕ್ಲೈಮ್ ಫಾರಂ ಪಡೆದು ಭರ್ತಿ ಮಾಡಬೇಕು .                                                  ಈ ಕೆಳಗಿನ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

1.ಮರಣ ಪ್ರಮಾಣ ಪತ್ರ (Death certificate)

2. ಆಸ್ಪತ್ರೆಯ ದಾಖಲೆಗಳು (hospital records/ discharge summary).

3. ಪೋಸ್ಟ್ ಮಾರ್ಟಂ ವರದಿ (postmortem report)- ಅಪಘಾತದ ಪ್ರಕರಣದಲ್ಲಿ.

4. ಎಫ್ ಐ ಆರ್(FIR) – ಅಗತ್ಯವಿದ್ದರೆ

5. ಬ್ಯಾಂಕ್ ಖಾತೆ ವಿವರಗಳು(Bank Statement).

6. ನಾಮಿನಿ ಗುರುತಿನ ಪುರಾವೆ (ID proof).

7. ಸಂಬಂಧದ ಪುರಾವೆ(Relationship proof).

8. ಕ್ಲೈಮ್ ಅರ್ಜಿ (claim application form).

ಗಮನಿಸಬೇಕಾದ ಪ್ರಮುಖ ಅಂಶಗಳು (important points).

1. ಎಲ್ಲಾ ಎಟಿಎಂ ಕಾರ್ಡ್ ಗಳಿಗೆ ವಿಮೆ ಇರುವುದಿಲ್ಲ.

2. ಇದು ಜೀವ ವಿಮೆ ಅಲ್ಲ, ಅಪಘಾತ ವಿಮೆ ಮಾತ್ರ.

3. ಕಾರ್ಡ್ ಬಳಕೆ ನಿಯಮ ಪಾಲಿಸದಿದ್ದರೆ ಕ್ಲೈಮ್ ನಿರಾಕರಣೆ ಆಗಬಹುದು.

4. ಬ್ಯಾಂಕ್ ಪ್ರಕಾರ ನಿಯಮಗಳು ಬದಲಾಗಬಹುದು.

ಎಟಿಎಂ ಕಾರ್ಡ್ ಹೊಂದಿರುವವರಿಗೆ ಸಿಗುವ ವಿಮಾ ಸೌಲಭ್ಯ ಒಂದು ಉತ್ತಮ ಸಾಮಾಜಿಕ ಭದ್ರತೆಯಾಗಿದೆ. ಆದರೆ ಇದರ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಸರಿಪಡಿಸಿಕೊಳ್ಳುವುದು ಬಹಳ ಮುಖ್ಯ.

ಯಾವುದೇ ಸಾವು ಆಗಿದ್ದರು 2 ಲಕ್ಷ ಸಿಗುತ್ತದೆ ಎಂಬುದು ತಪ್ಪು ಮಾಹಿತಿ ಸರಿಯಾದ ಮಾಹಿತಿ ತಿಳಿದುಕೊಂಡು ಕಾರ್ಡನ್ನು ಸಕ್ರಿಯವಾಗಿ ಬಳಸುವುದು ಮತ್ತು ನಾಮಿನಿ ವಿವರಗಳನ್ನು ನವೀಕರಿಸುವುದು ಬಹಳ ಅಗತ್ಯ.

ನಿಮ್ಮ ಬಳಿ ಇರುವ ATM/Rupay ಕಾರ್ಡಿಗೆ ಯಾವ ವಿಮೆ ಅನ್ವಯಿಸುತ್ತದೆ ಎಂಬುದನ್ನು ನಿಮ್ಮ ಬ್ಯಾಂಕ್ ನಲ್ಲಿ ಪರಿಶೀಲಿಸಿ ನಿಮ್ಮ ಕುಟುಂಬದ ಭವಿಷ್ಯವನ್ನು ಸುರಕ್ಷಿತಗೊಳಿಸುವುದು ಉತ್ತಮ.

Leave a Comment