Mudra Loan: ಗ್ಯಾರಂಟಿ ಇಲ್ಲದೆ ₹20 ಲಕ್ಷ ಮುದ್ರಾ ಲೋನ್ ಪಡೆಯುವುದು ಹೇಗೆ? ಮುದ್ರಾ ಸಾಲಕ್ಕೆ ಅರ್ಹತೆ ಅಗತ್ಯ ದಾಖಲೆಗಳು ಅರ್ಜಿ ವಿಧಾನ ಮತ್ತು ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ಸ್ವಂತ ಉದ್ಯಮ ಆರಂಭಿಸುವುದು ಅನೇಕ ಯುವಕರ ಕನಸಾಗಿದೆ ಆದರೆ ಉದ್ಯಮ ಆರಂಭಿಸಲು ಬೇಕಾಗುವ ಆರಂಭಿಕ ಬಂಡವಾಳದ ಕೊರತೆ ಬಹುತೇಕ ಜನರಿಗೆ ದೊಡ್ಡ ಅಡ್ಡಿಯಾಗಿದೆ.
ಬ್ಯಾಂಕ್ಗಳಲ್ಲಿ ಸಾಲ ಪಡೆಯಲು ಹೋದಾಗ ಜಾಮೀನು ಆಸ್ತಿ ಪತ್ರ ಅಥವಾ ಗ್ಯಾರಂಟಿ ಕೇಳಲಾಗುತ್ತದೆ ಇದರಿಂದ ಸಣ್ಣ ವ್ಯಾಪಾರ ಆರಂಭಿಸಲು ಬಯಸುವವರು ಹಿಂದೆ ಸರಿಯುತ್ತಾರೆ.
ಇಂತಹ ಸಮಸ್ಯೆಯನ್ನು ಪರಿಹರಿಸಲು ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮುದ್ರಾ ಯೋಜನೆ ಅನ್ನು ಆರಂಭಿಸಿದ. ಈ ಯೋಜನೆ ಅಡಿ ಸಣ್ಣ ವ್ಯಾಪಾರಿಗಳು ಮಹಿಳಾ ಉದ್ಯಮಿಗಳು ಮತ್ತು ಯುವಕರಿಗೆ ಗ್ಯಾರಂಟಿ ಇಲ್ಲದೆ ಸಾಲ ನೀಡಲಾಗುತ್ತದೆ.
₹20 ಲಕ್ಷದವರೆಗೆ ಸಾಲ
ವಿಶೇಷವೆಂದರೆ ಈಗ ಈ ಯೋಜನೆಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಬಂದಿದೆ 10 ಲಕ್ಷದವರೆಗೆ ಮಾತ್ರ ಸಿಗುತ್ತಿದ್ದ ಸಾಲ ಇದೀಗ 20 ಲಕ್ಷದವರೆಗೆ ಹೆಚ್ಚಿಸಲಾಗಿದೆ.
ಈ ಹೊಸ ಸೌಲಭ್ಯ ತರುಣ್ ಪ್ಲಸ್ ವಿಭಾಗದಡಿ ಲಭ್ಯವಾಗಲಿದೆ ಆದರೆ ಈ ಸಾಲವನ್ನು ಪಡೆಯಲು ನಿಯಮಗಳು ಮತ್ತು ಪ್ರಕ್ರಿಯೆಗಳು ಅವುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ಏನಿದು ಮುದ್ರಾ ಯೋಜನೆ?
ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು 2015ರಲ್ಲಿ ಕೇಂದ್ರ ಸರ್ಕಾರ ಆರಂಭಿಸಿತು ಈ ಯೋಜನೆಯ ಮುಖ್ಯ ಉದ್ದೇಶ ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಬ್ಯಾಂಕ್ ಮೂಲಕ ಸುಲಭವಾಗಿ ಸಾಲ ದೊರಕುವಂತೆ ಮಾಡುವುದು.
ಮುದ್ರಾ ಎಂದರೆ ಮೈಕ್ರೋ ಯುನಿಟ್ಸ್ ಡೆವಲಪ್ಮೆಂಟ್ ಅಂಡ್ ರಿಫೈನಾನ್ಸ್ ಏಜೆನ್ಸಿ ಎಂದರ್ಥ. ಈ ಸಂಸ್ಥೆ ಸಣ್ಣ ವ್ಯಾಪಾರಿಗಳಿಗೆ ಹಣಕಾಸು ನೆರವು ನೀಡುವ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಬೆಂಬಲ ನೀಡುತ್ತದೆ.
ಈ ಯೋಜನೆಯ ಪ್ರಮುಖ ಉದ್ದೇಶಗಳು
- ಸ್ವಉದ್ಯೋಗವನ್ನು ಉತ್ತೇಜಿಸುವುದು
- ಮಹಿಳಾ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುವುದು
- ನಿರುದ್ಯೋಗಿ ಯುವಕರಿಗೆ ಉದ್ಯಮ ಅವಕಾಶ ಕಲ್ಪಿಸುವುದು
- ಸಣ್ಣ ವ್ಯಾಪಾರಗಳನ್ನು ವಿಸ್ತರಿಸಲು ನೆರವು
- ಗ್ರಾಮೀಣ ಪ್ರದೇಶದ ಉದ್ಯಮ ಅಭಿವೃದ್ಧಿ
ಈ ಯೋಜನೆಯ ಮೂಲಕ ಭಾರತದಲ್ಲಿ ಕೋಟ್ಯಂತರ ಜನರು ತಮ್ಮ ಸ್ವಂತ ಉದ್ಯಮವನ್ನು ಆರಂಭಿಸಿದ್ದಾರೆ
ಮುದ್ರಾ ಸಾಲದ ನಾಲ್ಕು ವಿಭಾಗಗಳು
ಮುದ್ರಾ ಯೋಜನೆ ಅಡಿ ವಿವಿಧ ಹಂತಗಳಲ್ಲಿ ಸಾಲ ನೀಡಲಾಗುತ್ತದೆ ವ್ಯವಹಾರದ ಸ್ಥಿತಿ ಮತ್ತು ಅಗತ್ಯದ ಆಧಾರದಲ್ಲಿ ನಾಲ್ಕು ವಿಭಾಗಗಳಿವೆ.
ಶಿಶು ಮುದ್ರಾ ಸಾಲಇದು
- ಇದು ಉದ್ಯಮವನ್ನು ಹೊಸದಾಗಿ ಆರಂಭಿಸುವವರಿಗೆ ನೀಡುವ ಸಾಲ
- ಸಾಲ ಮಿತಿ 50,000 ವರೆಗೆ
- ಟೀ ಅಂಗಡಿ ಸಣ್ಣ ಅಂಗಡಿ ಟೈಲರಿಂಗ್ ಮುಂತಾದ ಹೊಸ ವ್ಯಾಪಾರ ವ್ಯವಹಾರಗಳಿಗೆ ಸಹಾಯ
ಕಿಶೋರ್ ಮುದ್ರಾ ಸಾಲ
- ಈ ಸಾಲ ಈಗಾಗಲೇ ಸಣ್ಣ ವ್ಯಾಪಾರ ನಡೆಸುತ್ತಿರುವವರಿಗೆ ನೀಡಲಾಗುತ್ತದೆ
- ಸಾಲ ಮತಿ 50,000 ರಿಂದ 5 ಲಕ್ಷ
- ವ್ಯವಹಾರ ವಿಸ್ತರಣೆ ಮಾಡಲು ಉಪಯುಕ್ತ
- ಉದಾಹರಣೆ: ಬೇಕರಿ ವಿಸ್ತರಣೆ ,ಮೊಬೈಲ್ ರಿಪೇರಿ ಅಂಗಡಿ ,ಸಣ್ಣ ಉತ್ಪಾದನಾ ಘಟಕ.
ತರುಣ್ ಮುದ್ರಾ ಸಾಲ
- ಇದು ಸ್ಥಾಪಿತ ಉದ್ಯಮಗಳಿಗೆ ನೀಡುವ ಸಾಲ
- ಸಾಲಮಿತಿ 5 ಲಕ್ಷದಿಂದ 10 ಲಕ್ಷ
- ವ್ಯವಹಾರವನ್ನು ಮತ್ತಷ್ಟು ವಿಸ್ತರಿಸಲು ಸಹಾಯಕ
- ಉದಾಹರಣೆ :ಸಣ್ಣ ಕಾರ್ಖಾನೆ, ಟ್ರಾನ್ಸ್ಪೋರ್ಟ್ ವ್ಯವಹಾರ, ಹೋಟೆಲ್ ಅಥವಾ ರೆಸ್ಟೋರೆಂಟ್.
ತರುಣ್ ಪ್ಲಸ್ ಮುದ್ರಾ ಸಾಲ
- ಇದು ಮುದ್ರಾ ಯೋಜನೆಯಲ್ಲಿ ಹೊಸದಾಗಿ ಸೇರಿಸಲಾದ ವಿಭಾಗವಾಗಿದೆ.
- ಸಾಲ ಮಿತಿ 10 ಲಕ್ಷದಿಂದ 20 ಲಕ್ಷ
- ಹಿಂದಿನ ಮುದ್ರಸಾಲವನ್ನು ಸರಿಯಾಗಿ ಮರುಪಾವತಿ ಮಾಡಿದವರಿಗೆ ಮಾತ್ರ ಸಾಲ ಸೌಲಭ್ಯ.
ಬ್ಯಾಂಕುಗಳು ನಿಮ್ಮ ಕ್ರೆಡಿಟ್ ಇತಿಹಾಸ ಮತ್ತು ಸಿಬಿಲ್ ಸ್ಕೋರ್ ಪರಿಶೀಲಿಸಿ ನಂತರ ಸಾಲ ಮಂಜೂರು ಮಾಡುತ್ತದೆ.
ಗ್ಯಾರಂಟಿ ಇಲ್ಲದೆ ಸಾಲ
ಮುದ್ರಾ ಸಾಲದ ಅತ್ಯಂತ ದೊಡ್ಡ ವಿಶೇಷತೆ ಎಂದರೆ ಯಾವುದೇ ಜಾಮೀನು ಅಥವಾ ಆಸ್ತಿ ಪತ್ರ ಅಗತ್ಯವಿಲ್ಲ ಅಂದರೆ ಮನೆ ಅಥವಾ ಜಮೀನು ಅಡಮಾನ ಬೇಡ ಚಿನ್ನದ ಜಾಮೀನು ಬೇಡ ಗಾರೆಂಟರ್ ಅಗತ್ಯವಿಲ್ಲ ಈ ಕಾರಣದಿಂದ ಗ್ರಾಮೀಣ ಪ್ರದೇಶದ ಸಣ್ಣ ವ್ಯಾಪಾರಿಗಳಿಗೆ ಇದು ಬಹಳ ಉಪಯುಕ್ತ ಯೋಜನೆ.
ಯಾರು ಅರ್ಜಿ ಹಾಕಬಹುದು
- ಸಣ್ಣ ವ್ಯಾಪಾರಿಗಳು
- ಹೊಸ ಸ್ಟಾರ್ಟ್ ಗಳು
- ಮಹಿಳಾ ಉದ್ಯಮಿಗಳು
- ನಿರುದ್ಯೋಗಿ ಯುವಕರು
- ಸೇವಾ ವಲಯದ ಉದ್ಯಮಿಗಳು
ಯಾವ ವ್ಯವಹಾರಗಳಿಗೆ ಮುದ್ರಸಾಲ ಸಿಗುತ್ತದೆ?
ಬಹುತೇಕ ಎಲ್ಲಾ ಸಣ್ಣ ಉದ್ಯಮಗಳಿಗೆ ಈ ಸಲ ಲಭ್ಯ ಉದಾಹರಣೆ
- ಟೀ ಅಂಗಡಿ
- ಬೇಕರಿ
- ಟೈಲರಿಂಗ್ ಅಂಗಡಿ
- ಬ್ಯೂಟಿ ಪಾರ್ಲರ್
- ಮೊಬೈಲ್ ರಿಪೇರಿ
- ಹೋಟೆಲ್ ಅಥವಾ ಟಿಫಿನ್ ಸೆಂಟರ್
- ಟ್ರಾನ್ಸ್ಪೋರ್ಟ್ ಸೇವೆ
- ಕೃಷಿ ಆಧಾರಿತ ಉದ್ಯಮ
- ಸಣ್ಣ ಉತ್ಪಾದನ ಘಟಕಗಳು
ಮುದ್ರಾ ಸಾಲಕ್ಕೆ ಅಗತ್ಯ ದಾಖಲೆಗಳು.
ಮುದ್ರಾ ಸಾಲಕ್ಕೆ ಅರ್ಜಿ ಹಾಕುವಾಗ ಕೆಲವು ಮೂಲಭೂತ ದಾಖಲೆಗಳನ್ನು ಸಲ್ಲಿಸಬೇಕು ಅವುಗಳಲ್ಲಿ ಪ್ರಮುಖವಾದವು.
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವಿಳಾಸ ಪ್ರಮಾಣ ಪತ್ರ
- ಬಿಜಿನೆಸ್ ಪ್ಲಾನ್
- ಬ್ಯಾಂಕ್ ಸ್ಟೇಟ್ ಮೆಂಟ್
- ಪಾಸ್ಪೋರ್ಟ್ ಅಳತೆಯ ಫೋಟೋ.
- ವ್ಯಾಪಾರ ನೊಂದಣಿ ದಾಖಲೆಗಳು
ಮುದ್ರಸಾಲಕ್ಕೆ ಅರ್ಜಿ ಹಾಕುವುದು ಹೇಗೆನಿಮ್ಮ
- ನಿಮ್ಮ ಹತ್ತಿರದ ಸರ್ಕಾರಿ ಬ್ಯಾಂಕ್ ಅಥವಾ ಖಾಸಗಿ ಬ್ಯಾಂಕ್ ಗೆ ಭೇಟಿ ನೀಡಿ
- ಅಲ್ಲಿ ಮುದ್ರಾ ಸಾಲ ಅರ್ಜಿ ಫಾರ್ಮ್ ಪಡೆಯಿರಿ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಸೇರಿಸಿ.
- ಬ್ಯಾಂಕ್ ಅಧಿಕಾರಿಗಳು ನಿಮ್ಮ ಅರ್ಜಿ ಮತ್ತು ದಾಖಲೆಗಳನ್ನು ಪರಿಶೀಲಿಸುತ್ತಾರೆ
- ವ್ಯವಹಾರ ಯೋಜನೆ ಸರಿಯಾಗಿದ್ದರೆ ಸಾಲ ಮಂಜೂರು ಮಾಡಲಾಗುತ್ತದೆ ಸಾಮಾನ್ಯವಾಗಿ ಸಣ್ಣ ಮೊತ್ತದ ಸಾಲಗಳು ವೇಗವಾಗಿ ಮಂಜೂರು ಆಗುತ್ತದೆ.
ಮಹಿಳೆಯರು ಮತ್ತು ಯುವಕರಿಗೆ ದೊಡ್ಡ ಅವಕಾಶ
ಮುದ್ರಾ ಯೋಜನೆಯಿಂದ ಹೆಚ್ಚು ಪ್ರಯೋಜನ ಪಡೆದವರು ಮಹಿಳಾ ಉದ್ಯಮಿಗಳು ಅಂಕಿ ಅಂಶಗಳ ಪ್ರಕಾರ ಮುದ್ರಾ ಸಾಲ ಪಡೆದವರಲ್ಲಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಇದು ಮಹಿಳಾ ಸ್ವಾವಲಂಬನೆ ಹೆಚ್ಚಿಸುತ್ತದೆ, ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಗ್ರಾಮೀಣ ಉದ್ಯಮ ಬೆಳವಣಿಗೆಗೆ ಸಹಕಾರ ನೀಡುತ್ತದೆ.
20 ಲಕ್ಷ ಮುದ್ರಸಾಲ ಪಡೆಯಲು ಏನು ಮಾಡಬೇಕು?
ಗಮನಹರ ವೆಂದರೆ ನೇರವಾಗಿ 20 ಲಕ್ಷ ಸಾಲ ಪಡೆಯುವುದು ಎಲ್ಲರಿಗೂ ಸಾಧ್ಯವಿಲ್ಲ ಈ ಕ್ರಮವನ್ನು ಅನುಸರಿಸಬೇಕು
- ಮೊದಲು ಶಿಶು ಅಥವಾ ಕಿಶೋರ್ ಸಾಲ ಪಡೆಯಿರಿ
- ಸಮಯಕ್ಕೆ ಸರಿಯಾಗಿ ಪಾವತಿಸಿ
- ಉತ್ತಮ ಕ್ರೆಡಿಟ್ ಇತಿಹಾಸ ನಿರ್ಮಿಸಿ
- ನಂತರ ತರುಣ್ ಸಾಲ ಪಡೆಯಿರಿ
- ಅದರ ನಂತರ ತರುಣ್ ಪ್ಲಸ್ ಸಾಲಕ್ಕೆ ಅರ್ಜಿ ಹಾಕಿ
ಬ್ಯಾಂಕುಗಳು ನಿಮ್ಮ ವ್ಯವಹಾರದ ಬೆಳವಣಿಗೆಯನ್ನು ಗಮನಿಸಿ ಹೆಚ್ಚಿನ ಮೊತ್ತ ಮಂಜೂರು ಮಾಡುತ್ತವೆ.
ಸಿಬಿಲ್ ಸ್ಕೋರ್ ಏಕೆ ಮುಖ್ಯ?
ಸಾಲ ಪಡೆಯುವಾಗ ಸಿಬಿಲ್ ಸ್ಕೋರ್ ಬಹಳ ಮುಖ್ಯ ಸಾಮಾನ್ಯವಾಗಿ 700ಕ್ಕಿಂತ ಹೆಚ್ಚು ಸ್ಕೋರಿದ್ದರೆ ಸಾಲ ಪಡೆಯುವುದು ಸುಲಭ ಈ ಎಂ ಐ ಸರಿಯಾಗಿ ಪಾವತಿಸಿದರೆ ಸ್ಕೋರ್ ಹೆಚ್ಚುತ್ತದೆ ಉತ್ತಮ ಸಿಬಿಲ್ ಸ್ಕೋರ್ ಇದ್ದರೆ ಭವಿಷ್ಯದಲ್ಲಿ ದೊಡ್ಡ ಸಾಲ ಪಡೆಯಲು ಸಹಾಯಕ.
ಪ್ರಧಾನ ಮಂತ್ರಿ ಮುದ್ರಾ ಯೋಜನೆ ಭಾರತದ ಸಣ್ಣ ಉದ್ಯಮಿಗಳಿಗೆ ಮಹತ್ವದ ಆರ್ಥಿಕ ಬೆಂಬಲವಾಗಿದೆ. ಈಗ ತರುಣ್ ಪ್ಲಸ್ ವಿಭಾಗ ದಡಿ 20 ಲಕ್ಷದವರೆಗೆ ಸಾಲ ದೊರೆಯುತ್ತಿರುವುದು ಹೊಸ ಉದ್ಯಮಿಗಳಿಗೆ ದೊಡ್ಡ ಅವಕಾಶವಾಗಿದೆ.
1 thought on “Mudra Loan: ಮುದ್ರಾ ಲೋನ್ ಪಡೆಯಲು ಸುಲಭ ವಿಧಾನ ₹20 ಲಕ್ಷ ಸಾಲಕ್ಕೆ ಹೇಗೆ ಅರ್ಜಿ ಹಾಕಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ”