PM Awas Yojana 2026: Important ಪಿಎಂ ಆವಾಸ್ ಯೋಜನೆಯಡಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ| ಯಾರಿಗೆ ಸಿಗಲಿದೆ ಈ ಸೌಲಭ್ಯ? ಇಲ್ಲಿದೆ ಸಂಪೂರ್ಣ ಮಾಹಿತಿ.

WhatsAppಫಾಲೋ ಮಾಡಿ

PM Awas Yojana 2026 PM Awas Yojana 2026: ಪಿಎಂ ಆವಾಸ್ ಯೋಜನೆ ಅಡಿ ಮನೆ ನಿರ್ಮಾಣಕ್ಕೆ ಅರ್ಜಿ ಆಹ್ವಾನ, ಯಾರಿಗೆ ಸಿಗಲಿದೆ ಈ ಸೌಲಭ್ಯ? ಅರ್ಹತೆ ದಾಖಲೆಗಳು ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕದ ಸಂಪೂರ್ಣ ಮಾಹಿತಿ ಇಲ್ಲಿದೆ. 

ಸ್ವಂತ ಮನೆ ಹೊಂದುವ ಕನಸು ಕಾಣುತ್ತಿರುವ ವಸತಿ ರಹಿತ ಕುಟುಂಬಗಳಿಗೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ ಪ್ರಧಾನ ಮಂತ್ರಿ ಆವಾಜ್ ಯೋಜನೆ (PM Awas Yojana) ಅಡಿಯಲ್ಲಿ ಮತ್ತೊಂದು ಅವಕಾಶ ದೊರೆತಿದೆ. ನಗರ ಪ್ರದೇಶಗಳಲ್ಲಿ ಮನೆ ನಿರ್ಮಿಸಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 (PMAY-U 2.0) ಅಡಿಯಲ್ಲಿ ರಾಯಚೂರು ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಸತಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಇದನ್ನು ಓದಿ

ವಿದ್ಯಾಸಿರಿ Scholarship 2026 : Important ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆರಂಭ. ಯಾರಿಗೆ ಸಿಗಲಿದೆ 15000 ಸಹಾಯಧನ?

PM Awas Yojana 2026 : ಯಾರು ಅರ್ಜಿ ಸಲ್ಲಿಸಬಹುದು? 

ಈ ಯೋಜನೆಯಡಿ ವಸತಿ ರಹಿತ ಮತ್ತು ನಿವೇಶನ ರಹಿತ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತದೆ. ವಿಶೇಷವಾಗಿ ಕೆಳಗಿನ ವರ್ಗದವರು ಅರ್ಜಿ ಸಲ್ಲಿಸಬಹುದು.

  • ಒಂಟಿ ಮಹಿಳೆಯರು ಮತ್ತು ಮಹಿಳಾ ಕುಟುಂಬಗಳು
  • ವಿಕಲಚೇತನರು (Divyang)
  • ಹಿರಿಯ ನಾಗರಿಕರು
  • ತೃತೀಯಲಿಂಗಿಗಳು (Transgender)
  • ಪರಿಶಿಷ್ಟ ಜಾತಿ (SC) ಪರಿಶಿಷ್ಟ ಪಂಗಡ (ST) ಮತ್ತು ಹಿಂದುಳಿದ ವರ್ಗದವರು
  • ಅಲ್ಪಸಂಖ್ಯಾತ ಸಮುದಾಯದವರು
  • ಸ್ವಚ್ಛತಾ ಕಾರ್ಮಿಕರು
  • ಪಿಎಂ ಸ್ವನಿಧಿ ಯೋಜನೆ ( PM Swanidhi) ಅಡಿಯಲ್ಲಿ ಗುರುತಿಸಲ್ಪಟ್ಟ ಬೀದಿ ಬದಿ ವ್ಯಾಪಾರಿಗಳು
  • ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana) ಅಡಿಯಲ್ಲಿ ಗುರುತಿಸಲ್ಪಟ್ಟ ಕುಶಲಕರ್ಮಿಗಳು
  • ಅಂಗನವಾಡಿ ಕಾರ್ಯಕರ್ತರು
  • ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು
  • ಕೈಗಾರಿಕರು ಹಾಗೂ ವಲಸೆ ಬಂದ ಕುಟುಂಬಗಳು
PM Awas Yojana 2026 : ಅರ್ಜಿ ಸಲ್ಲಿಸುವ ವಿಧಾನ (Application Process)

ಅರ್ಹ ಅಭ್ಯರ್ಥಿಗಳು ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್ ಪೋರ್ಟಲ್ ( Official portal)ಮೂಲಕ ಅಥವಾ ಹತ್ತಿರದ ಸಿ ಎಸ್ ಸಿ ಕೇಂದ್ರಗಳಲ್ಲಿ (CSC Centre )ಸ್ವತಹ ಅರ್ಜಿ ಸಲ್ಲಿಸಬಹುದು.

ಅರ್ಜಿಯನ್ನು ಸಲ್ಲಿಸುವಾಗ ಅಗತ್ಯ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕು. ನಿಗದಿತ ಅವಧಿಯ ನಂತರ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PM Awas Yojana 2026 : ಬೇಕಾಗುವ ದಾಖಲೆಗಳು ( Documents Required)

ಅರ್ಜಿ ಸಲ್ಲಿಸುವವರು ಸಾಮಾನ್ಯವಾಗಿ ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು.

  1. ಆಧಾರ್ ಕಾರ್ಡ್ (Adhar card)
  2. ಪಡಿತರ ಚೀಟಿ (Ration card)
  3. ಜಾತಿ ಪ್ರಮಾಣ ಪತ್ರ (Caste certificate)
  4. ಆದಾಯ ಪ್ರಮಾಣ ಪತ್ರ (Income certificate)
  5. ಬ್ಯಾಂಕ್ ಪಾಸ್ ಬುಕ್ ಪ್ರತಿ (Bank Passbook Copy)
  6. ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು (ಹಕ್ಕು ಪತ್ರ, ಕ್ರಯಾ ಪತ್ರ ,ದಾನ ಪತ್ರ, ಉಡುಗೊರೆ ಪತ್ರ ,ಖಾತೆ ದಾಖಲೆಗಳು)

ನಿವೇಶನ ಹೊಂದಿರುವವರು ತಮ್ಮ ಜಾಗದ ದಾಖಲೆಗಳನ್ನು ಸಲ್ಲಿಸಬೇಕು. ನಿವೇಶನ ಇಲ್ಲದವರು ಇತರೆ ಅಗತ್ಯ ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು.

ಇದನ್ನು ಓದಿ

ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ?

PM Awas Yojana 2026 : ಚಾಮರಾಜನಗರ ಹಾಗೂ ರಾಯಚೂರಿನಲ್ಲಿ ಅರ್ಜಿ ಅವಕಾಶ. 

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿಯೂ ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ಅಡಿಯಲ್ಲಿ ವಸತಿ ರೈತರಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಅದೇ ರೀತಿ ರಾಯಚೂರು ಜಿಲ್ಲೆಯ ಮಾನ್ವಿ ಪುರಸಭೆ ವ್ಯಾಪ್ತಿಯಲ್ಲೂ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಎರಡು ಜಿಲ್ಲೆಗಳ ಹೊರತಾಗಿಯೂ ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ನಗರ ಪ್ರದೇಶದ ಅರ್ಹರಿಗೆ ಅರ್ಜಿ ಸಲ್ಲಿಕೆ ಅವಕಾಶವಿದೆ.

ಸ್ವಂತ ಮನೆ ನಿರ್ಮಾಣಕ್ಕೆ ಸರ್ಕಾರದಿಂದ ದೊರೆಯುವ ಈ ಸೌಲಭ್ಯವನ್ನು ಅರ್ಹ ಕುಟುಂಬಗಳು ಬಳಸಿಕೊಳ್ಳುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ನಗರಸಭೆ ಪುರಸಭೆ ಅಥವಾ ಮಹಾನಗರ ಪಾಲಿಕೆ ಕಚೇರಿಯನ್ನು ಸಂಪರ್ಕಿಸಬಹುದು.

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : ಜೂನ್ 30 2026

ಅರ್ಜಿ ಸಲ್ಲಿಸುವ ಲಿಂಕ್ 

https://pmayg.dord.gov.in/netiayHome/Home.aspx

ಪ್ರಧಾನಮಂತ್ರಿ ಆವಾಸ್ ಯೋಜನೆ ಭಾರತ ಸರ್ಕಾರವು 2015ರಲ್ಲಿ ಆರಂಭಿಸಿದ ಮಹತ್ವಕಾಂಕ್ಷೆಯ ವಸತಿ ಯೋಜನೆಯಾಗಿದೆ. ಈ ಯೋಜನೆಯ ಮುಖ್ಯ ಉದ್ದೇಶವು ಆರ್ಥಿಕವಾಗಿ ದುರ್ಬಲ ವರ್ಗದವರು ಕಡಿಮೆ ಆದಾಯದ ಕುಟುಂಬಗಳು ಹಾಗೂ ಮಧ್ಯಮ ಆದಾಯದ ಜನರಿಗೆ ಕೈಗೆಟುಕುವ ದರದಲ್ಲಿ ಸ್ವಂತ ಮನೆ ಒದಗಿಸುವುದಾಗಿದೆ. ಎಲ್ಲರಿಗೂ ಮನೆ ಎಂಬ ಗುರಿಯನ್ನು ಸಾಧಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಯೋಜನೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು ಗ್ರಾಮೀಣ ಪ್ರದೇಶಗಳಿಗಾಗಿ ಮತ್ತು ಎರಡನೆಯದು ನಗರ ಪ್ರದೇಶಗಳಿಗಾಗಿ ಗ್ರಾಮೀಣ ಯೋಜನೆಯಡಿ ಮನೆ ಇಲ್ಲದ ಅಥವಾ ಕಚ್ಚಾ ಮನೆಯಲ್ಲಿ ವಾಚಿಸುವ ಕುಟುಂಬಗಳಿಗೆ ಪಕ್ಕ ಮನೆ ನಿರ್ಮಿಸಲು ಆರ್ಥಿಕ ನೆರವು ನೀಡಲಾಗುತ್ತದೆ. ನಗರ ಯೋಜನೆ ಅಡಿ ಮನೆ ಖರೀದಿಸಲು ನಿರ್ಮಿಸಲು ಅಥವಾ ವಿಸ್ತರಿಸಲು ಬಡ್ಡಿದರದಲ್ಲಿ ಸಬ್ಸಿಡಿ ನೀಡಲಾಗುತ್ತದೆ.

ಈ ಯೋಜನೆಯ ಫಲಾನುಭವಿಗಳ ಆಯ್ಕೆ ಸಾಮಾಜಿಕ ಆರ್ಥಿಕ ಜನಗಣತಿ ಮಾಹಿತಿ ಆಧಾರದ ಮೇಲೆ ನಡೆಯುತ್ತದೆ. ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ ಮನೆಯ ಮಾಲೀಕತ್ವವನ್ನು ಮಹಿಳೆಯ ಹೆಸರಿನಲ್ಲಿ ಅಥವಾ ಪತಿ-ಪತ್ನಿಯ ಜಂಟಿ ಹೆಸರಿನಲ್ಲಿ ನೋಂದಾಯಿಸಲು ಪ್ರೋತ್ಸಾಹಿಸಲಾಗುತ್ತದೆ. ಇದರಿಂದ ಮಹಿಳೆಯರ ಸಬಲೀಕರಣಕ್ಕೂ ಉತ್ತೇಜನ ಸಿಗುತ್ತದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆಯಿಂದ ಲಕ್ಷಾಂತರ ಕುಟುಂಬಗಳು ಸುರಕ್ಷಿತ ಸ್ವಚ್ಛ ಮತ್ತು ಶಾಶ್ವತ ಮನೆಗಳನ್ನು ಪಡೆದಿದೆ. ಈ ಯೋಜನೆಯ ಬಡವರ ಜೀವನ ಮಟ್ಟವನ್ನು ಸುಧಾರಿಸುವುದರ ಜೊತೆಗೆ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ಭದ್ರತೆಯ ಮೇಲು ಉತ್ತಮ ಪರಿಣಾಮ ಬೀರಿದೆ. ಮನೆ ನಿರ್ಮಾಣ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಿದೆ.

ಒಟ್ಟಾರೆಯಾಗಿ ಪ್ರಧಾನಮಂತ್ರಿ ಆವಾಸ್ ಯೋಜನೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಸ್ವಂತ ಮನೆಯ ಕನಸನ್ನು ನನಸಾಗಿಸುವ ಮಹತ್ವದ ಯೋಜನೆಯಾಗಿದೆ. ಇದು ದೇಶದ ಸಮಗ್ರ ಅಭಿವೃದ್ಧಿಗೆ ಮತ್ತು ಜನರ ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸುತ್ತದೆ.

ಈ ಯೋಜನೆ ಸಮಾಜದಲ್ಲಿ ಸಮಾನತೆ ಮತ್ತು ಗೌರವಯುತ ಜೀವನವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಸ್ವಂತ ಮನೆ ಎಂಬುದು ಪ್ರತಿಯೊಬ್ಬ ಕುಟುಂಬದ ಕನಸಾಗಿದ್ದು ಆ ಕನಸನ್ನು ನನಸಾಗಿಸಲು ಪ್ರಧಾನಮಂತ್ರಿ ಆವಾಜ್ ಯೋಜನೆ, ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದ್ದರಿಂದ ಇದು ಭಾರತದ ಅತ್ಯಂತ ಯಶಸ್ವಿ ಮತ್ತು ಜನಪರ ವಸತಿ ಯೋಜನೆಗಳಲ್ಲಿ ಒಂದಾಗಿದೆ.

ಮುಖ್ಯ ಸಂದೇಶ

ಈ ಯೋಜನೆಯನ್ನು ಯಾವ ಯಾವ ಜಿಲ್ಲೆಗಳಲ್ಲಿ ಅಥವಾ ನಗರಗಳಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ ಅದರ ಸಂಪೂರ್ಣ ಮಾಹಿತಿಯ ಜೊತೆಗೆ ಅರ್ಜಿಗಳನ್ನು ಸಲ್ಲಿಸಿ.

ಇದನ್ನು ಓದಿ

Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?

Leave a Comment