KMF ನೇಮಕಾತಿ 2026: ಕೆಎಂಎಫ್ ಶಿಮುಲ್ 194 ವಿವಿಧ ಹುದ್ದೆಗಳಿಗೆ ಭರ್ಜರಿ ನೇಮಕಾತಿ ನಡೆಯುತ್ತಿದ್ದು ,ಎಸ್ ಎಸ್ ಎಲ್ ಸಿ, ಐಟಿಐ, ಪದವೀಧರರಿಗೆ ಬಾರಿ ಅವಕಾಶವಿದೆ ಅರ್ಜಿ ಸಲ್ಲಿಕೆ ಸಂಪೂರ್ಣ ವಿವರ ಇಲ್ಲಿದೆ.
ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (SHIMUL )ತನ್ನಲ್ಲಿ ಖಾಲಿ ಇರುವ ಬರೋಬ್ಬರಿ 194 ವಿವಿಧ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ( Official notification)ಹೊರಡಿಸಿದೆ.
ಸರ್ಕಾರಿ ವಲಯದ ಸೌಲಭ್ಯಗಳಿರುವ ಉತ್ತಮ ಭವಿಷ್ಯ ರೂಪಿಸಬಲ್ಲ ಈ ಕೆಲಸಗಳಿಗೆ ನೀವು ಅರ್ಜಿ ಹಾಕಲು ಯೋಚಿಸುತ್ತಿದ್ದರೆ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ ಯಾವೆಲ್ಲ ಹುದ್ದೆಗಳಿಗೆ ಯಾರು ಅರ್ಜಿ (Online application) ಸಲ್ಲಿಸಬಹುದು ಅನ್ನೋದನ್ನ ವಿವರವಾಗಿ ನೋಡೋಣ.
KMF ನೇಮಕಾತಿ 2026: ಯಾವೆಲ್ಲ ಹುದ್ದೆಗಳು ಖಾಲಿ ಇದೆ. (Post Details)
ಒಟ್ಟು 194 ಹುದ್ದೆಗಳನ್ನು ವಿವಿಧ ವಿಭಾಗಗಳಲ್ಲಿ ಭರ್ತಿ ಮಾಡಲಾಗುತ್ತಿದೆ. ಇಲ್ಲಿ ಎಸ್ ಎಸ್ ಎಲ್ ಸಿ ಪಾಸಾದವರಿಂದ ಹಿಡಿದು ಪೋಸ್ಟ್ ಗ್ರಾಜುಯೇಟ್ ಪದವೀಧರರಿಗೂ ಅವಕಾಶಗಳಿವೆ. ನಿಮ್ಮ ಓದಿಗೆ ತಕ್ಕಂತೆ ಯಾವ ಹುದ್ದೆ ಸೂಕ್ತ ಎಂದು ಇಲ್ಲಿ ಚೆಕ್ ಮಾಡಿಕೊಳ್ಳಿ.
ನೀವು ಪಶುವೈದ್ಯಕೀಯ ವಿಜ್ಞಾನದಲ್ಲಿ ಬಿವಿಎಸ್‌ಸಿ(BVSC) , ಮಾನವ ಸಂಪನ್ಮೂಲ ವಿಭಾಗದಲ್ಲಿ ಎಂಬಿಎ (MBA HR) ಅಥವಾ ಬಿ ಎಸ್ ಸಿ ಅಗ್ರಿ (BSC Agriculture )ಮಾಡಿದ್ದರೆ ಸಹಾಯಕ ವ್ಯವಸ್ಥೆಪಕರಾಗಿ ಸೇರಬಹುದು. ಈ ಹುದ್ದೆಗಳಿಗೆ 83,700 ರೂಪಾಯಿ ನಿಂದ ಹಿಡಿದು ರೂ.1,55,200 ವರೆಗೆ ಆತ್ಯಾಕರ್ಷಕ ವೇತನ ಸಿಗಲಿದೆ.
KMF ನೇಮಕಾತಿ 2026: ತಾಂತ್ರಿಕ ಹಾಗೂ ಮಾರುಕಟ್ಟೆ ವಿಭಾಗ.
ಬಿಇ (BE Mechanical /Electrical), ಬಿ ಟೆಕ್ ಡೈರಿ ಟೆಕ್ನಾಲಜಿ (Btech Dairy Technology)ಎಂ ಎಸ್ ಸಿ ಅಥವಾ ಬಿಕಾಂ ಬಿಬಿಎಂ ಮಾಡಿದವರಿಗೆ ತಾಂತ್ರಿಕ ಅಧಿಕಾರಿ ಎಂಐಎಸ್ ಅಧಿಕಾರಿ ಹಾಗೂ ಮಾರುಕಟ್ಟೆ ಅಧಿಕಾರಿ (Marketing Officer) ಹುದ್ದೆಗಳಿವೆ ಇವರಿಗೆ 69,250 ರೂ ನಿಂದ ಹಿಡಿದು ರೂ. 1,34,200 ವರೆಗೆ ಸಂಬಳ ಇರುತ್ತದೆ.
ಇದನ್ನು ಓದಿ
Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?
KMF ನೇಮಕಾತಿ 2026: ಸಹಾಯಕ ಹಾಗೂ ಕೆಮಿಸ್ಟ್ ದರ್ಜೆ ಹುದ್ದೆಗಳು
ಯಾವುದೇ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನವಿದ್ದರೆ ಸಾಕು. ನೀವು ಆಡಳಿತ ಸಹಾಯಕ, ವಿಸ್ತರಣಾಧಿಕಾರಿ ಹುದ್ದೆಗಳಿಗೆ ಪ್ರಯತ್ನಿಸಬಹುದು.
ಹಾಗೆಯೇ ಬಿಎಸ್ಸಿ ಕೆಮಿಸ್ಟ್ರಿ ಅಥವಾ (ಮೈಕ್ರೋ ಬಯೋಲಜಿ) ಓದಿದವರಿಗೆ ಕೆಮಿಸ್ಟ್ ಹುದ್ದೆಗಳಿವೆ. ಲೆಕ್ಕ ಸಹಾಯಕ (Accounts Assistant)ಹುದ್ದೆಗೆ ಬಿಕಾಂ ಹಾಗೂ ಟ್ಯಾಲಿ ಸರ್ಟಿಫಿಕೇಟ್ ಕಡ್ಡಾಯ. ಈ ಹುದ್ದೆಗಳ ವೇತನ ಶ್ರೇಣಿ 44,425 ರೂ ನಿಂದ ಹಿಡಿದು 99,400 ವರೆಗೆ ಇದೆ.
ಕಿರಿಯ ತಾಂತ್ರಿಕರು ( Junior Technicians)
ಅತಿ ಹೆಚ್ಚು ಅಂದರೆ 50 ಹುದ್ದೆಗಳು ಈ ವಿಭಾಗದಲ್ಲಿವೆ. ಕೇವಲ ಎಸ್ ಎಸ್ ಎಲ್ ಸಿ (SSLC) ಜೊತೆಗೆ ಎಲೆಕ್ಟ್ರಿಕಲ್ ಫಿಟ್ಟರ್ ವೆಲ್ದರ್ ನಂತ ಸಂಬಂಧ ಪಟ್ಟ ಟ್ರೇಡ್ನಲ್ಲಿ ಐಟಿಐ (ITI /NTC NAC) ಮುಗಿಸಿದವರು ಇದಕ್ಕೆ ಅರ್ಜಿ ಸಲ್ಲಿಸಬಹುದು. ಇದರ ಆರಂಭಿಕ ವೇತನವೇ 34,100 ರೂ ಇರುತ್ತದೆ.
ಇದನ್ನು ಓದಿ
KMF ನೇಮಕಾತಿ 2026: ವಯೋಮಿತಿ ಎಷ್ಟಿರಬೇಕು? (Age limit)
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಲೇಬೇಕು. ಖುಷಿಯ ವಿಚಾರವೆಂದರೆ ಸರ್ಕಾರದ ವಿಶೇಷ ಆದೇಶದಂತೆ ಈ ಬಾರಿ ಗರಿಷ್ಠ ವಯೋಮಿತಿಯಲ್ಲಿ ಎಲ್ಲಾ ವರ್ಗದವರಿಗೂ ಕನಿಷ್ಠ ಐದು ವರ್ಷ ಸಡಿಲಿಕೆ (Age Relaxation)ನೀಡಲಾಗಿದೆ ಇದರ ಅನ್ವಯ ಗರಿಷ್ಠ ವಯೋಮಿತಿ ಹೀಗಿದೆ.
- ಸಾಮಾನ್ಯ ವರ್ಗದವರಿಗೆ General /UR): 40 ವರ್ಷ
- ಹಿಂದುಳಿದ ವರ್ಗದವರಿಗೆ (2A,2B,3A,3B ): 43 ವರ್ಷ
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ -1ಕ್ಕೆ (SC/ST/Cat-1): 45 ವರ್ಷ
ವಿಕಲ ಚೇತನರು ಹಾಗೂ ವಿಧವೆಯರಿಗೆ ನಿಯಮಾನುಸಾರ 10 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ ವೆಷ್ಟು? (Application Fee)
ಅರ್ಜಿಯನ್ನು ಮತ್ತು ಶುಲ್ಕವನ್ನು ಕೇವಲ ಆನ್ಲೈನ್ (online payment)ಮೂಲಕ ಸಲ್ಲಿಸಬೇಕು.
- ಸಾಮಾನ್ಯ ಹಾಗೂ ಇತರೆ ಎಲ್ಲಾ ಹಿಂದುಳಿದ ವರ್ಗಗಳಿಗೆ : 1000ರೂ.
- SC,ST,Cat -1 ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ: ಕೇವಲ 500 ರೂ
KMF ನೇಮಕಾತಿ 2026: ಪ್ರಮುಖ ದಿನಾಂಕಗಳು (Important Dates)
- ಆನ್ಲೈನ್ ಅರ್ಜಿ ಸಲ್ಲಿಕೆ ಶುರುವಾಗುವ ದಿನ: 14 ಜೂನ್ 2026
- ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಕಟ್ಟಲು ಕೊನೆಯ ದಿನ : 14 ಜುಲೈ 2026
ಇದನ್ನು ಓದಿ
ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ?
ಅರ್ಜಿ ಹಾಕುವುದು ಹೇಗೆ ? (How to apply)
ನೀವು ಈ ಹುದ್ದೆಗಳಿಗೆ ಅರ್ಹರಾಗಿದ್ದರೆ ತಕ್ಷಣವೇ ಶಿಮುಲ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ನೀಡಿರುವ ಅಧಿಕೃತ ಅಧಿಸಚನೆಯನ್ನು (Official notification)ಸಂಪೂರ್ಣವಾಗಿ ಓದಿಕೊಳ್ಳಿ.
ಅರ್ಜಿ ಸಲ್ಲಿಸಲು ಶಿಮುಲ್ ಅಫಿಶಿಯಲ್ ವೆಬ್ಸೈಟ್
ನೀವು ಅರ್ಹರಿದ್ದರೆ ಕೂಡಲೇ ಕೆಳಗೆ ನೀಡಿರುವ ಶಿಮುಲ್ ನ ಅಧಿಕೃತ ಅರ್ಜಿ ಲಿಂಕ್ ಬಳಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಕೊನೆ ಕ್ಷಣದ ಸರ್ವರ್ ಗಳ ಸಮಸ್ಯೆಗಳನ್ನು ತಪ್ಪಿಸಲು ಆದಷ್ಟು ಬೇಗ ಅಪ್ಲೈ ಮಾಡಿ ಉದ್ಯೋಗದ ಅವಕಾಶಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳಿ.
ಅಧಿಕೃತ ಅಧಿಸೂಚನೆ
https://drive.google.com/file/d/1wKc_xTsw97Md3EbhvEPFKTBiKsAocUGN/view?usp=drivesdk