Important Gruha Lakshmi Scheme Biometric Update: ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್| ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಬೇಕಾ? ತಕ್ಷಣ ಈ ಕೆಲಸ ಮಾಡಿ.

WhatsAppಫಾಲೋ ಮಾಡಿ

Gruha Lakshmi Scheme Biometric Update

Gruha Lakshmi Scheme Biometric Update: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಒನ್ ಟೈಮ್ ಬಯೋಮೆಟ್ರಿಕ್ ಅನ್ನು ಕಡ್ಡಾಯ ಮಾಡಲಾಗಿದೆ. ನವೀಕರಣ ಮಾಡದಿದ್ದರೆ ಹಣ ಬಂದ್ ಆಗಲಿದ್ದು, ನವೀಕರಣ ಹೇಗೆ ಮಾಡಬೇಕು ಎಂಬ ಸಂಪೂರ್ಣ ವಿವರ ಇಲ್ಲಿದೆ. 

ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಐದು ಗ್ಯಾರಂಟಿಗಳಲ್ಲಿ ಅತಿ ಹೆಚ್ಚು ಜನ ಮನ್ನಣೆ ಗಳಿಸಿದ್ದು ಗೃಹಲಕ್ಷ್ಮಿ ಯೋಜನೆ(Gruha Lakshmi Scheme). ಪ್ರತಿ ತಿಂಗಳು ಮನೆಯ ಯಜಮಾನಿಯಾ ಖಾತೆಗೆ ನೇರವಾಗಿ ಜಮೆಯಾಗುವ 2000 ರೂ ಹಣ, ಲಕ್ಷಾಂತರ ಮದ್ಯಮ ಹಾಗೂ ಬಡವರ್ಗದ ಕುಟುಂಬಗಳಿಗೆ ದೊಡ್ಡ ಮಟ್ಟದ ಆರ್ಥಿಕ ಆಸರೆಯಾಗಿದೆ.

ಆದರೆ ಈ ಯೋಜನೆಯ ಕುರಿತು ಇತ್ತೀಚಿಗೆ ನಡೆದ ಸಚಿವ ಸಂಪುಟ ಮಟ್ಟದ ಚರ್ಚೆಗಳಲ್ಲಿ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಳ್ಳಲಾಗಿದೆ. ಅದೇನೆಂದರೆ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಒನ್ ಟೈಮ್ ಬಯೋಮೆಟ್ರಿಕ್ (One Time Biometric)ನೀಡಬೇಕು ಎಂಬುದು.

ಯಾವುದೇ ತೊಂದರೆ ಇಲ್ಲದೆ ಪ್ರತಿ ತಿಂಗಳು ಹಣ ಬರುತ್ತಿರುವಾಗ ಏಕಾಏಕಿ ಈ ಹೊಸ ನಿಯಮ ಯಾಕೆ? ಯಾರೆಲ್ಲ ಈ ಪ್ರಕ್ರಿಯೆ ಮಾಡಬೇಕು? ಮಾಡದಿದ್ದರೆ ಏನಾಗುತ್ತದೆ? ಎಂಬ ನಿನ್ನೆಲ್ಲ ಗೊಂದಲಗಳಿಗೆ ಅತ್ಯಂತ ಸರಳವಾದ, ಸ್ಪಷ್ಟವಾದ ಉತ್ತರ ಇಲ್ಲಿದೆ.

ಇದನ್ನು ಓದಿ Senior citizen card benefits ಹಿರಿಯ ನಾಗರಿಕರ ಕಾರ್ಡ್ 60 ವರ್ಷ ಮೇಲ್ಪಟ್ಟವರಿಗೆ ಸರ್ಕಾರದ ಸೌಲಭ್ಯಗಳು.

Gruha Lakshmi Scheme Biometric Update ಈ ಹೊಸ ನಿಯಮ ತರಲು ಕಾರಣವೇನು? 

ಗೃಹಲಕ್ಷ್ಮಿ ಯೋಜನೆಯು ಸಾಮಾನ್ಯ ಯೋಜನೆ ಅಲ್ಲ. ರಾಜ್ಯದಲ್ಲಿ ಬರೋಬ್ಬರಿ 1.24 ಕೋಟಿ ಮಹಿಳೆಯರು ಇದರ ಫಲಾನುಭವಿಗಳಾಗಿದ್ದಾರೆ. ಫೆಬ್ರವರಿ ಅಂತ್ಯದವರೆಗೆ ಸರ್ಕಾರ ಈ ಯೋಜನೆಗಾಗಿ 69,783 ಕೋಟಿ ರೂಪಾಯಿಗಳನ್ನು ಡಿ ಬಿ ಟಿ (DBT)ಮೂಲಕ ಜನರ ಖಾತೆಗೆ ಹಾಕಿದೆ.

ಜೊತೆಗೆ ಗೃಹಜೋತಿ ಯೋಜನೆಗೂ(Gruha Jyothi) 26,115 ಕೋಟಿ ರೂ ಖರ್ಚು ಮಾಡಲಾಗಿದೆ. ಇಷ್ಟು ದೊಡ್ಡ ಮಟ್ಟದ ಹಣವನ್ನು ಬಿಡುಗಡೆ ಮಾಡುವಾಗ, ಸರ್ಕಾರ ವ್ಯವಸ್ಥೆಯನ್ನು ಪರಿಶೀಲಿಸಿದಾಗ ಕೆಲವು ಆಘಾತಕಾರಿ ಸತ್ಯಗಳು ಬಯಲಾಗಿದೆ.

  • Gruha Lakshmi Scheme Biometric Update ಮೃತಪಟ್ಟವರಿಗೂ ಹೋಗುತ್ತಿದೆ ಹಣ :

ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮಹಿಳೆಯರು ವಯೋಸಾಹಜವಾಗಿ ಅಥವಾ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಆದರೆ ಅವರ ಬ್ಯಾಂಕ್ ಖಾತೆಗಳು ಇನ್ನೂ ಸಕ್ರಿಯವಾಗಿರುವುದರಿಂದ ಪ್ರತಿ ತಿಂಗಳು 2000 ರೂ ಹಣ ಸರ್ಕಾರದ ಬೊಕ್ಕಸದಿಂದ ಆ ಖಾತೆಗಳಿಗೆ ಹೋಗುತ್ತಲೇ ಇದೆ.

ಬಡವರ ಹಣ ಶ್ರೀಮಂತರ ಪಾಲು 

ಈ ಯೋಜನೆ ಇರುವುದು ಆರ್ಥಿಕವಾಗಿ ಹಿಂದುಳಿದವರಿಗೆ, ಆದರೆ ಸುಮಾರು 50 ಸಾವಿರಕ್ಕೂ ಹೆಚ್ಚು ಆದಾಯ ತೆರಿಗೆ ಪಾವತಿಸುವ (Income tax payers) ಶ್ರೀಮಂತರು ಸುಳ್ಳು ಮಾಹಿತಿ ನೀಡಿ ಯೋಜನೆಯ ಲಾಭ ಪಡೆಯುತ್ತಿರುವುದು ಸರ್ಕಾರದ ಕಣ್ಣಿಗೆ ಬಿದ್ದಿದೆ.

ಬ್ಯಾಂಕ್ ಸಾಲಕ್ಕೆ ಹಣ ಕಡಿತ (Gruha Lakshmi Scheme Biometric Update)

ಸರ್ಕಾರ ಬಡ ಮಹಿಳೆಯರ ಕೈಗೆ ಹಣ ನೀಡಿದರೆ ಕೆಲವು ಬ್ಯಾಂಕುಗಳು ಆ ಮಹಿಳೆಯರು ಈ ಹಿಂದೆ ಮಾಡಿದ್ದ ಹಳೆಯ ಸಾಲಗಳಿಗೆ  (Old Bank loans) ಈ ಗೃಹಲಕ್ಷ್ಮಿ ಹಣವನ್ನು ನೇರವಾಗಿ ಕತ್ತರಿಸಿ ಕೊಳ್ಳುತ್ತಿವೆ.

ಸಂಪರ್ಕವೇ ಇಲ್ಲದ ಫಲಾನುಭವಿಗಳು 

ಬಹಳಷ್ಟು ಮಹಿಳೆಯರ ಮೊಬೈಲ್ ಸಂಖ್ಯೆಗಳು ಬದಲಾಗಿದೆ. ಇದರಿಂದ ಅವರಿಗೆ ಯೋಜನೆಯ ಕುರಿತು ಮಾಹಿತಿ ನೀಡಲು ಅಥವಾ ತಾಂತ್ರಿಕ ದೋಷಗಳಿದ್ದರೆ ತಿಳಿಸಲು ಸಾಧ್ಯವಾಗುತ್ತಿಲ್ಲ.

ಇವೆಲ್ಲವನ್ನು ಸರಿಪಡಿಸಿ, ಅರ್ಹರಿಗೆ ಮಾತ್ರ ಯೋಜನೆಯ ಲಾಭ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಈ ಮರು ನೋಂದಣಿ (Gruha Lakshmi Scheme Biometric Update)ಪ್ರಕ್ರಿಯೆಗೆ ಮುಂದಾಗಿದೆ.

ಇದನ್ನು ಓದಿ PMFME SCHEME 2026 : ಕೇಂದ್ರ ಸರ್ಕಾರದ ರೂ 10 ಲಕ್ಷ ಸಬ್ಸಿಡಿ ಯೋಜನೆ, ಯಾರು ಅರ್ಹರು?

‘ಜೀವಿತ ಪ್ರಮಾಣ ಪತ್ರ’ ಬೇಡ ‘ಬಯೋಮೆಟ್ರಿಕ್’ ಸಾಕು.Gruha Lakshmi Scheme Biometric Update 

ಮೊದಲು ಸರ್ಕಾರ ಫಲಾನುಭವಿಗಳು ತಾವು ಬದುಕಿರುವ ಬಗ್ಗೆ ‘ಜೀವಿತ ಪ್ರಮಾಣ ಪತ್ರ’ (Life Certificate) ತಂದುಕೊಡಬೇಕು ಎಂದು ನಿಯಮ ಮಾಡಲು ಹೊರಟಿತ್ತು. ಆದರೆ ವಯಸ್ಸಾದ ಅಜ್ಜಿಯರು, ಅನಾರೋಗ್ಯದಿಂದ ಇರುವ ಮಹಿಳೆಯರು ಸರ್ಕಾರಿ ಕಚೇರಿಗೆ ಅಲೆದಾಡಿ ಸರ್ಟಿಫಿಕೇಟ್ ತರುವುದು ಕಷ್ಟ.

ಇದರಿಂದಾಗಿ ಆ ನಿಯಮವನ್ನು ಕೈ ಬಿಟ್ಟಿತ್ತು. ಅದಕ್ಕೆ ಬದಲಾಗಿ, ನಿಮ್ಮ ಹತ್ತಿರದ ಕೇಂದ್ರಕ್ಕೆ ಹೋಗಿ ಕೇವಲ ಬೆರಳಚ್ಚು (Biometric )ನೀಡುವ ಅತ್ಯಂತ ಸುಲಭವಾದ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ನವೀಕರಣ ಮಾಡಿಕೊಳ್ಳುವುದು ಹೇಗೆ? (Gruha Lakshmi Scheme Biometric Update, How to Renew? )

ಗೃಹಲಕ್ಷ್ಮಿ ಹಣ ಪಡೆಯುತ್ತಿರುವ ಪ್ರತಿಯೊಬ್ಬರು ಈ ಪ್ರಕ್ರಿಯೆಯನ್ನು ಮಾಡುವುದು ಕಡ್ಡಾಯ. ಇದು ಮುಗಿಯಲು ಕೇವಲ ಐದು ನಿಮಿಷ ಸಾಕು.

ಎಲ್ಲಿಗೆ ಹೋಗಬೇಕು?: ನಿಮ್ಮ ಮನೆಯ ಹತ್ತಿರವಿರುವ ಬೆಂಗಳೂರು ಒನ್ (Bangalore one) ಅಥವಾ ಕರ್ನಾಟಕ ಒನ್ (Karnataka one) ಕೇಂದ್ರಗಳಿಗೆ ಭೇಟಿ ನೀಡಿ.

ಏನು ಒದಗಿಸಬೇಕು?: ನೀವು ಪ್ರಸ್ತುತ ಬಳಸುತ್ತಿರುವ, ನಿಮ್ಮ ಬಳಿ ಇರುವ ಆಕ್ಟಿವ್ ಮೊಬೈಲ್ ಸಂಖ್ಯೆಯನ್ನು (Active Mobile number) ಸಿಬ್ಬಂದಿಗೆ ನೀಡಿ.

 Gruha Lakshmi Scheme Biometric Update  ಬೆರಳಚ್ಚು ನೀಡಿ: ಬಳಿಕ ಅಲ್ಲಿನ ಯಂತ್ರದ ಮೇಲೆ ನಿಮ್ಮ ಬೆರಳಚ್ಚು (Fingerprint )ಇಟ್ಟರೆ, ನಿಮ್ಮ ಖಾತೆ ಯಶಸ್ವಿಯಾಗಿ ನವೀಕರಣ(Renewal) ಆಗುತ್ತದೆ.

Gruha Lakshmi Scheme Biometric Update: ಇದು ಕೇವಲ ಒಂದೇ ಬಾರಿ ಮಾಡುವ ಪ್ರಕ್ರಿಯೆ. ಪ್ರತಿ ತಿಂಗಳು ಹೋಗಿ ಬೆರಳಚ್ಚು ನೀಡುವ ಅಗತ್ಯವಿಲ್ಲ.

ಇದನ್ನು ಓದಿ ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ?

ಯಾರ ಖಾತೆಗೆ ಗೃಹಲಕ್ಷ್ಮಿ ಹಣ ಬರುವುದು ನಿಲ್ಲುತ್ತದೆ? 

ಸರ್ಕಾರ ಈ ಹೊಸ ಕ್ಲೀನ್ ಅಪ್ ಪ್ರಕ್ರಿಯೆಯಲ್ಲಿ ಈ ಕೆಳಗಿನವರ ಗೃಹಲಕ್ಷ್ಮಿ ಹಣ ಕಟ್ಟಾಗುವುದು ಖಚಿತ:

ಆದಾಯ ತೆರಿಗೆ ಕಟ್ಟುವವರು: ನಿಮ್ಮ ಬಳಿ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಇದ್ದರೂ ನಿಮ್ಮ ಕುಟುಂಬದಲ್ಲಿ ಯಾರಾದರೂ ಆದಾಯ ತೆರಿಗೆ ಕಟ್ಟುತ್ತಿದ್ದರೆ ನಿಮಗೆ ಇನ್ನು ಮುಂದೆ ಹಣ ಬರುವುದಿಲ್ಲ.

ರದ್ದಾದ ಕಾರ್ಡ್ ಹೊಂದಿರುವವರು: ಇತ್ತೀಚಿಗಷ್ಟೇ ಆಹಾರ ಇಲಾಖೆಯು ಸುಮಾರು 2 ಲಕ್ಷಕ್ಕೂ ಅಧಿಕ ಬಿಪಿಎಲ್ ಕಾರ್ಡ್ಗಳನ್ನು (ತೆರಿಗೆ ಕಟ್ಟುವ ಕಾರಣಕ್ಕಾಗಿ) ರದ್ದುಪಡಿಸಿ ಎಪಿಎಲ್ ಗೆ ವರ್ಗಾಯಿಸಿದೆ ಅಂತವರಿಗೂ ಈ ಸೌಲಭ್ಯ ರದ್ದಾಗಲಿದೆ.

ಬಯೋಮೆಟ್ರಿಕ್ ನೀಡದವರು: ಸರ್ಕಾರ ನೀಡುವ ಗಡುವಿನೊಳಗೆ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ್ ಅಪ್ಡೇಟ್ (Biometric Update) ಮಾಡಿಕೊಳ್ಳದವರ ಬ್ಯಾಂಕ್ ಖಾತೆಗಳು ತಾನಾಗಿಯೇ ಸ್ಥಗಿತಗೊಳ್ಳುತ್ತದೆ.

Gruha Lakshmi Scheme official website

https://wcd.karnataka.gov.in/26/gruhalakshmi-scheme/en

ಇದನ್ನು ಓದಿ Mudra Loan: ಮುದ್ರಾ ಲೋನ್ ಪಡೆಯಲು ಸುಲಭ ವಿಧಾನ ₹20 ಲಕ್ಷ ಸಾಲಕ್ಕೆ ಹೇಗೆ ಅರ್ಜಿ ಹಾಕಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ

Gruha Lakshmi Scheme Biometric Update ಅರ್ಹರಿಗೆ ಆತಂಕ ಬೇಡ: ಸಚಿವರ ಭರವಸೆ 

ಈ ಹೊಸ ನಿಯಮದ ಬಗ್ಗೆ ಅನೇಕರಲ್ಲಿ ನಮ್ಮ ಹೆಸರನ್ನು ಡಿಲೀಟ್ ಮಾಡಿ ಬಿಡುತ್ತಾರಾ? ಎಂಬ ಭಯ ಕಾಡುತ್ತಿದೆ. ಇದಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪಷ್ಟ ಅಭಯ ನೀಡಿದ್ದಾರೆ.

ನಾವು ಯಾವ ಫಲಾನುಭವಿಯ ಹೆಸರನ್ನು ಏಕಾಏಕಿ ಡಿಲೀಟ್ ಮಾಡುತ್ತಿಲ್ಲ. ಇದು ಕೇವಲ ಒಂದು ಬಾರಿಯ ತಪಾಸಣಾ ಪ್ರಕ್ರಿಯೆ ಅಷ್ಟೇ. ನಿಜವಾದ ಮತ್ತು ಅರ್ಹ ಮಹಿಳೆಯರು ಭಯಪಡುವ ಅಗತ್ಯವಿಲ್ಲ. ನೀವು ಕೇವಲ ಒಮ್ಮೆ ಬಯೋಮೆಟ್ರಿಕ್ ನೀಡಿದರೆ ಸಾಕು, ನಿಮ್ಮ ಹಣ ಎಂದಿನಂತೆ ಯಾವುದೇ ಅಡೆತಡೆ ಇಲ್ಲದೆ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಕೇವಲ ಮೃತಪಟ್ಟವರ ಹೆಸರಿನಲ್ಲಿ ದುರ್ಬಳಕೆಯಾಗುತ್ತಿರುವ ಹಣವನ್ನು ಉಳಿಸಲು ಈ ಹೆಜ್ಜೆ ಇಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Gruha Lakshmi Scheme Biometric Update

ಒಟ್ಟಿನಲ್ಲಿ ಜನರ ತೆರಿಗೆ ಹಣ ಪೋಲಾಗಬಾರದು ಮತ್ತು ನೈಜ ಬಡವರಿಗೆ ನ್ಯಾಯ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಸರ್ಕಾರದ ಈ ಬಯೋಮೆಟ್ರಿಕ್ ಅಪ್ಡೇಟ್ (biometric update) ಉತ್ತಮವಾದ ನಡೆಯಾಗಿದೆ. ಶೀಘ್ರದಲ್ಲೇ ಸರ್ಕಾರ ಅಧಿಕೃತವಾಗಿ ದಿನಾಂಕವನ್ನು ಪ್ರಕಟಿಸಲಿದ್ದು ಫಲಾನುಭವಿಗಳು ತಮ್ಮ ಆಧಾರ್ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಮರು ನೋಂದಣಿಗೆ ಸಿದ್ದರಿರುವುದು ಒಳಿತು.

Leave a Comment