ಅಬಕಾರಿ ಇಲಾಖೆ ನೇಮಕಾತಿ 2026: Important Karnataka Excise Department Recruitment, 1,207 ಹುದ್ದೆಗಳ ನೇಮಕಾತಿ , ಪಿಯುಸಿ ಪದವೀಧರರಿಗೆ ಭರ್ಜರಿ ಅವಕಾಶ.

WhatsAppಫಾಲೋ ಮಾಡಿ

ಅಬಕಾರಿ ಇಲಾಖೆ ನೇಮಕಾತಿ 2026 ಅಬಕಾರಿ ಇಲಾಖೆ ನೇಮಕಾತಿ 2026 : Karnataka Excise Department Recruitment, ಕರ್ನಾಟಕ ಅಬಕಾರಿ ಇಲಾಖೆಯಲ್ಲಿ 1,207 ಪೇದೆ ಮತ್ತು ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಪಿಯುಸಿ ಡಿಗ್ರಿ ಪಾಸಾದವರು ಭರ್ಜರಿ ಅವಕಾಶ ಪಡೆಯಬಹುದು. ಸಂಪೂರ್ಣ ಮಾಹಿತಿ ಇಲ್ಲಿದೆ.

ಸರ್ಕಾರಿ ಕೆಲಸ ಹಿಡಿಯಬೇಕು ಅದರಲ್ಲೂ ಪೊಲೀಸ್ ಅಥವಾ ಅಬಕಾರಿ ಇಲಾಖೆಯ ಕಾಕಿ ಯುನಿಫಾರ್ಮ್ (Uniform), ತೊಡಬೇಕು ಎಂದು ಹಗಲಿರುಳು ಓದುತ್ತಿರುವ ಯುವ ಜನತೆಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ.

ಬಹು ದಿನಗಳಿಂದ ಕಾಯುತ್ತಿದ್ದ ಕರ್ನಾಟಕ ಅಬಕಾರಿ ಇಲಾಖೆಯ ಬರೋಬ್ಬರಿ 1,207 ಖಾಲಿ ಹುದ್ದೆಗಳ ಭರ್ತಿಗೆ ಕಾಲ ಕೂಡಿಬಂದಿದೆ.

ಅಬಕಾರಿ ಇಲಾಖೆ ನೇಮಕಾತಿ 2026: ಆರ್ಥಿಕ ಇಲಾಖೆಯ ಗ್ರೀನ್ ಸಿಗ್ನಲ್. 

ಈ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲು ಆರ್ಥಿಕ ಇಲಾಖೆಯು (Finance Department) ಅಧಿಕೃತವಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಆದೇಶವನ್ನು ಹೊರಡಿಸಿದೆ. ಈ ಬಾರಿಯ ನೇಮಕಾತಿಯಲ್ಲಿ ಸಾಕಷ್ಟು ಮಹತ್ವದ ಬದಲಾವಣೆಗಳಾಗಿದ್ದು ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ನಿಯಮಗಳನ್ನು ಸರಳಗೊಳಿಸಲಾಗಿದೆ.

ಹಾಗಾದರೆ ಈ ಹುದ್ದೆಗಳ ವಿವರಗಳೇನು? ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಪರೀಕ್ಷೆ ಹೇಗಿರುತ್ತದೆ? ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯೋಣ.

ಅಬಕಾರಿ ಇಲಾಖೆ ನೇಮಕಾತಿ 2026: ಯಾವ ಹುದ್ದೆಗಳಿಗೆ ನೇಮಕಾತಿ? (Vacancy details)

ಈ ಬಾರಿ ಒಟ್ಟು 1,207 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು ಇದರಲ್ಲಿ ಕಲ್ಯಾಣ ಕರ್ನಾಟಕ (Kalyana Karnataka)ಭಾಗದ ಹುದ್ದೆಗಳು ಸಹ ಸೇರಿವೆ. ಹುದ್ದೆಗಳ ಹಂಚಿಕೆ ಹೀಗಿದೆ.

  • ಅಬಕಾರಿ ಪೇದೆ (Excise Constable): 942 ಹುದ್ದೆಗಳು
  • ಅಬಕಾರಿ ಉಪನಿರೀಕ್ಷಕ/ಸಬ್ ಇನ್ಸ್ಪೆಕ್ಟರ್ (Excise Sub inspector) : 265 ಹುದ್ದೆಗಳು

ಇದನ್ನು ಓದಿ

Important Gruha Lakshmi Scheme Biometric Update: ಗೃಹಲಕ್ಷ್ಮಿ ಯೋಜನೆಗೆ ಹೊಸ ರೂಲ್ಸ್| ನಿಮ್ಮ ಬ್ಯಾಂಕ್ ಖಾತೆಗೆ ಹಣ ಬರಬೇಕಾ? ತಕ್ಷಣ ಈ ಕೆಲಸ ಮಾಡಿ.

ಅಬಕಾರಿ ಇಲಾಖೆ ನೇಮಕಾತಿ 2026: ಯಾರು ಅರ್ಜಿ ಸಲ್ಲಿಸಬಹುದು? (Educational Qualification)

ಅಬಕಾರಿ ಪೇದೆ ಹುದ್ದೆಗೆ: ಅಬಕಾರಿ ಪೇದೆ ಆಗಬೇಕೆಂಬ ಕನಸು ಹೊತ್ತವರು ಕಡ್ಡಾಯವಾಗಿ ದ್ವಿತೀಯ ಪಿಯುಸಿ ಮುಗಿಸಿರಬೇಕು.

ಸಬ್ ಇನ್ಸ್ಪೆಕ್ಟರ್ ಹುದ್ದೆಗೆ: ಈ ಹುದ್ದೆಗೆ ಅರ್ಜಿ ಹಾಕುವವರು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ (Bachelors Degree) ಪಡೆದಿರಬೇಕು.

ಅಬಕಾರಿ ಇಲಾಖೆ ನೇಮಕಾತಿ 2026: ನೇಮಕಾತಿ ನಿಯಮಗಳಲ್ಲಿ ಮೂರು ಅಪ್ಡೇಟ್ಸ್. 

ಈ ಹಿಂದಿನ ನೇಮಕಾತಿ ಪ್ರಕ್ರಿಯೆಗಳಲ್ಲಿ ಸಾಕಷ್ಟು ಗೊಂದಲ ಮತ್ತು ವಿಳಂಬವಾಗುತ್ತಿತ್ತು. ಇದನ್ನು ತಪ್ಪಿಸಲು ಸರ್ಕಾರ ವೃಂದ ಮತ್ತು ನೇಮಕಾತಿ ನಿಯಮಗಳಿಗೆ (C and R Rules)ಮೇಜರ್ ಸರ್ಜರಿ ಮಾಡಿದೆ.

ಈ ಹಿಂದೆ ಜಿಲ್ಲಾಧಿಕಾರಿಗಳು ನೇಮಕಾತಿ ಪ್ರಾಧಿಕಾರಿಯಾಗಿದ್ದರು. ಮತ್ತು ಜಿಲ್ಲಾ ವಾರು ಆಯ್ಕೆ ಪಟ್ಟಿ ಇರುತ್ತಿತ್ತು. ಆದರೆ ಇನ್ನು ಮುಂದೆ ಇಡೀ ರಾಜ್ಯಕ್ಕೆ ಒಂದೇ ಅಂತಿಮ ರ್ಯಾಂಕಿಂಗ್ ಪಟ್ಟಿ (State level merit list) ಸಿದ್ಧಪಡಿಸಲಾಗುತ್ತದೆ. ಹಾಗಾಗಿ ಅಬಕಾರಿ ಆಯುಕ್ತರೆ ( Excise Comission) ನೇಮಕಾತಿ ಪ್ರಾಧಿಕಾರಿಯಾಗಿರುತ್ತಾರೆ.

ಮೊದಲೆಲ್ಲ ಅಬಕಾರಿ ಪೇದೆ ಹುದ್ದೆಗಳನ್ನು ಕೆಪಿಎಸ್ಸಿ (KPSC )ಮೂಲಕ ತುಂಬಲಾಗುತ್ತಿತ್ತು. ಈಗ ಈ ನೇಮಕಾತಿ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (KEA) ವಹಿಸಲಾಗಿದೆ. ಇದರಿಂದ ಪ್ರಕ್ರಿಯೆ ಮತ್ತಷ್ಟು ವೇಗವಾಗಿ ನಡೆಯುವ ನಿರೀಕ್ಷೆ ಇದೆ.

ಮಹಿಳೆ ಮತ್ತು ಪುರುಷ ಎಂದು ಪ್ರತ್ಯೇಕವಾಗಿದ್ದ ಪೇದೆ ಹುದ್ದೆಗಳನ್ನು ಇದೀಗ ಒಂದೇ ವೃಂದ ವಾಗಿ (Merge of carders) ಸೇರ್ಪಡೆ ಮಾಡಲಾಗಿದೆ.

ಅಬಕಾರಿ ಇಲಾಖೆ ನೇಮಕಾತಿ 2026: ಪರೀಕ್ಷೆ ಮಾದರಿ ಹೇಗಿರುತ್ತೆ?

ಸ್ಪರ್ಧಾತ್ಮಕ ಪರೀಕ್ಷೆಗೆ (Competitive Exam) ಓದುತ್ತಿರುವವರಿಗೆ ಇದು ನಿಜಕ್ಕೂ ರಿಲೀಫ್ ನೀಡುವ ವಿಚಾರ. ಯಾಕೆಂದರೆ ಹಳೆಯ ಪದ್ಧತಿಯಲ್ಲಿದ್ದ ಪ್ರಬಂಧ ಬರೆಯುವುದು ಮತ್ತು ಭಾಷಾಂತರ (Translation )ಮಾಡುವ ಪತ್ರಿಕೆಗಳನ್ನು ಈಗ ಕೈ ಬಿಡಲಾಗಿದೆ.

ಈಗ ಕೇವಲ ಒಂದೇ ಒಂದು ಸಾಮಾನ್ಯ    ಅಧ್ಯಯನ -1 ಪತ್ರಿಕೆ ಇರಲಿದೆ.

ಪರೀಕ್ಷೆಯು ನೂರು ಅಂಕಗಳಿಗೆ ನಡೆಯಲಿದ್ದು ಎಲ್ಲವೂ ಬಹು ಆಯ್ಕೆ ಪ್ರಶ್ನೆಗಳೇ ಆಗಿರುತ್ತವೆ. ಸಮಯ 2 ಗಂಟೆಗಳ ಕಾಲಾವಕಾಶ ಇರುತ್ತದೆ.

ಇತಿಹಾಸ, ವಿಜ್ಞಾನ, ಭೂಗೋಳ, ಭಾರತದ ಸಂವಿಧಾನ, ರಾಷ್ಟ್ರೀಯ ಸ್ವಾತಂತ್ರ್ಯ ಚಳುವಳಿ, ಮಾನಸಿಕ ಸಾಮರ್ಥ್ಯ, ಮತ್ತು ನೈತಿಕ ಶಿಕ್ಷಣದ ಮೇಲೆ ಪ್ರಶ್ನೆಗಳಿರುತ್ತವೆ. ಸಬ್  ಇನ್ಹಾಸ್ಪೆಕ್ಟರ್ ಗೆ ಡಿಗ್ರಿ ಮಟ್ಟದ ಹಾಗೂ ಪೇದೆಗೆ ಪಿಯುಸಿ ಮಟ್ಟದ ಪ್ರಶ್ನೆಗಳು ಬರುತ್ತವೆ.

ಇದನ್ನು ಓದಿ

ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ?

ಅಬಕಾರಿ ಇಲಾಖೆ ನೇಮಕಾತಿ 2026: ದೈಹಿಕ ಸಾಮರ್ಥ್ಯ ಪರೀಕ್ಷೆ (physical Test).

KEA ಕೆ ಇ ಎ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಪಾಸ್ ಆದ ಅಭ್ಯರ್ಥಿಗಳಿಗೆ ಮುಂದಿನ ಹಂತದ ದೈಹಿಕ ಸಾಮರ್ಥ್ಯ ಪರೀಕ್ಷೆ Physical Test ಇರುತ್ತದೆ.

ಇದನ್ನು ಹಿಂದಿನಂತೆ ಆಯಾ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿಯೇ ನಡೆಸಲಾಗುತ್ತದೆ. ಅಲ್ಲಿ ಅಂತಿಮವಾಗಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ರೆಡಿ ಮಾಡಲಾಗುತ್ತದೆ..

ಗಮನಿಸಿ: ಸರ್ಕಾರದ ಕಡೆಯಿಂದ ಗ್ರೀನ್ ಸಿಗ್ನಲ್ ಬಂದಿರುವುದರಿಂದ ಮುಂದಿನ ಕೆಲವೇ ದಿನಗಳಲ್ಲಿ ಕೆಇಎ ಅಥವಾ ಅಬಕಾರಿ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಅಧಿಕೃತ ಅಧಿಸೂಚನೆ ಬಿಡುಗಡೆಯಾಗಲಿದೆ.

ಲಕ್ಷಾಂತರ ಜನ ಸ್ಪರ್ಧೆಯಲ್ಲಿ ಇರುವುದರಿಂದ ಅಪ್ಲಿಕೇಶನ್ ಬಿಡುಗಡೆ ಯಾಗುವವರೆಗೂ ಕಾಯದೆ ಇಂದೇ ಪರೀಕ್ಷೆ ಹಾಗೂ ದೈಹಿಕ ಸಿದ್ಧತೆಗಳನ್ನು ಶುರು ಮಾಡುವುದು ಜಾಮೆಯ ನಿರ್ಧಾರ.

ಅಬಕಾರಿ ಇಲಾಖೆ ನೇಮಕಾತಿ 2026 :  ನಮ್ಮ ಸಲಹೆ 

ಲಿಖಿತ ಪರೀಕ್ಷೆಗೆ ಸಿದ್ಧತೆ :

  • ಸಾಮಾನ್ಯ ಜ್ಞಾನ
  • ಪ್ರಚಲಿತ ವಿದ್ಯಮಾನಗಳು
  • ಭಾರತದ ಇತಿಹಾಸ ಮತ್ತು ಕರ್ನಾಟಕದ ಇತಿಹಾಸ
  • ಭಾರತೀಯ ಸಂವಿಧಾನ
  • ಭೂಗೋಳ ಶಾಸ್ತ್ರ
  • ವಿಜ್ಞಾನ
  • ಗಣಿತ
  • ಮಾನಸಿಕ ಸಾಮರ್ಥ್ಯ
  • ಕನ್ನಡ ಭಾಷೆ

ಸಾಮಾನ್ಯವಾಗಿ ಈ ವಿಷಯಗಳನ್ನು ಓದಬೇಕು.

ದೈಹಿಕ ಸಿದ್ಧತೆ:

  • ಪ್ರತಿದಿನ ಓಟ ಅಭ್ಯಾಸ ಮಾಡಿ
  • ದೈಹಿಕ ಸಾಮರ್ಥ್ಯ ಹೆಚ್ಚಿಸಲು ವ್ಯಾಯಾಮ ಮಾಡಿ.
  • ಎತ್ತರ ಎದೆ ಅಳತೆ ಇತರ ಮಾನದಂಡಗಳನ್ನು ಮುಂಚಿತವಾಗಿ ತಿಳಿದುಕೊಳ್ಳಿ

ಓದುವ ಯೋಜನೆ:

  • ಪ್ರತಿದಿನ ನಾಲ್ಕರಿಂದ ಆರು ಗಂಟೆಗಳ ನಿಯಮಿತ ಅಧ್ಯಯನ
  • ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ
  • ವಾರಕ್ಕೊಮ್ಮೆ ಮಾಕ್ ಟೆಸ್ಟ್ ಬರೆಯಿರಿ
  • ದಿನನಿತ್ಯ ಸುದ್ದಿಗಳನ್ನು ಓದಿ

ಉಪಯುಕ್ತ ಪುಸ್ತಕಗಳು:

  • ಕರ್ನಾಟಕ ಸಾಮಾನ್ಯ ಜ್ಞಾನ ಪುಸ್ತಕಗಳು
  • ಭಾರತೀಯ ಸಂವಿಧಾನ
  • ಸಾಮಾನ್ಯ ವಿಜ್ಞಾನ
  • ಗಣಿತ ಪುಸ್ತಕಗಳು
  • ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಸಂಕಲನ.

ಇದನ್ನು ಓದಿ

Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?

ಅಬಕಾರಿ ಇಲಾಖೆ ಉದ್ಯೋಗ ಬಹಳ ಪ್ರಮುಖವಾದ ಸರಕಾರಿ ಉದ್ಯೋಗಗಳಲ್ಲಿ ಒಂದಾಗಿದೆ ಇದರ ಮಹತ್ವವಾದ ಕೆಲವು ಅಂಶಗಳು ಈ ಕೆಳಗಿನಂತಿದೆ.

  • ಸ್ಥಿರ ಉದ್ಯೋಗ ನಿಯಮಿತ ವೇತನ ಮತ್ತು ಸರ್ಕಾರಿ ಸೌಲಭ್ಯಗಳು
  • ಅಕ್ರಮ ಮಧ್ಯ ತಯಾರಿಕೆ ಸಾಗಣೆ ಮತ್ತು ಮಾರಾಟವನ್ನು ತಡೆಗಟ್ಟುವ ಜವಾಬ್ದಾರಿ
  • ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಾಯ ಮಾಡುತ್ತದೆ
  • ಅನುಭವ ಮತ್ತು ಇಲಾಖೆಯ ನಿಯಮಗಳ ಪ್ರಕಾರ ಉನ್ನತ ಹುದ್ದೆಗಳಿಗೆ ಬಡ್ತಿ ಪಡೆಯಬಹುದು
  • ಮೂಲವೇತನದ ಜೊತೆಗೆ ವಿವಿಧ ಭತ್ಯೆ ಮತ್ತು ನಿವೃತ್ತಿ ಸಂಬಂಧಿತ ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ.

ಈ ಕೆಲಸದಲ್ಲಿ ಕೆಲವೊಮ್ಮೆ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಕ್ರಮ ಚಟುವಟಿಕೆಗಳ ವಿರುದ್ಧ ಕಾರ್ಯಾಚರಣೆ ಮತ್ತು ಜಾರಿ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸಿದ್ಧವಾಗಿರುವುದು ಮುಖ್ಯ.

 

2 thoughts on “ಅಬಕಾರಿ ಇಲಾಖೆ ನೇಮಕಾತಿ 2026: Important Karnataka Excise Department Recruitment, 1,207 ಹುದ್ದೆಗಳ ನೇಮಕಾತಿ , ಪಿಯುಸಿ ಪದವೀಧರರಿಗೆ ಭರ್ಜರಿ ಅವಕಾಶ.”

Leave a Comment