KSRP Recruitment 2026 : ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP )ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 2314 ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ (SRPC) ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಸೂಚನೆ ಪ್ರಕಟಿಸಿದೆ. ಪಿಯುಸಿ (PUC) ಪಾಸಾದ ಅರ್ಹ ಅಭ್ಯರ್ಥಿಗಳು ಆಗಸ್ಟ್ 10 ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- KSRP, KSISF, IRB ವಿಭಾಗಗಳಲ್ಲಿ ಒಟ್ಟು 2314 ಹುದ್ದೆಗಳ ಭರ್ತಿ.
- ಕನಿಷ್ಠ ಪಿಯುಸಿ (PUC )ಪಾಸಾದ ಯುವಜನರಿಗೆ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವಕಾಶ.
- ಆಗಸ್ಟ್ 10, 2026 ಆನ್ಲೈನ್ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ.
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಬಯಸುತ್ತಿರುವ ಯುವ ಜನತೆಗೆ ಇಲ್ಲಿದೆ ಭರ್ಜರಿ ಉದ್ಯೋಗಾವಕಾಶ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (KSRP) ಇಲಾಖೆಯಡಿ ಕಾಲಿರುವ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (SRPC) ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.
ಈ ನೇಮಕಾತಿಯಲ್ಲಿ ಒಟ್ಟು 2314 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅವುಗಳಲ್ಲಿ ಉಳಿಕೆ ಮೂಲ ವೃಂದ (RPC) ಹಾಗೂ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ (KK) ಎರಡು ಸೇರಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಲಿಖಿತ ಪರೀಕ್ಷೆ ಸೇರಿದಂತೆ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿದೆ.
ಇದನ್ನು ಓದಿ
KSRP Recruitment 2026 : ಸಂಕ್ಷಿಪ್ತ ವಿವರಣೆ
- ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
- ಬಳಕೆದಾರ ಇಲಾಖೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ
- ಹುದ್ದೆಯ ಹೆಸರು: ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (SRPC)
- ಒಟ್ಟು ಹುದ್ದೆಗಳು: 2314 ಹುದ್ದೆಗಳು
- ಮಾಸಿಕ ವೇತನ ಶ್ರೇಣಿ: ₹37,500- ₹76,100 ವರೆಗೆ
- ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ (online) ಮಾತ್ರ
- ಅಧಿಕೃತ ಜಾಲತಾಣ:https://cetonline.karnataka.gov.in/kea/
KSRP Recruitment 2026 : ವೃಂದ ವಾರು ಮತ್ತು ವಿಭಾಗವಾರು ಖಾಲಿ ಹುದ್ದೆಗಳ ವಿವರ
ಅಧಿಸೂಚನೆಯ ಪ್ರಕಾರ, ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಮತ್ತು ಮೂಲ ವೃಂದಗಳಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಹಂಚಿಕೆ ಮಾಡಲಾಗಿದೆ.
1.ಮಿಕ್ಕುಳಿದ ವೃಂದ (RPC/Non KK )- ಒಟ್ಟು 1455 ಹುದ್ದೆಗಳು
- ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (KSRP): 334 ಹುದ್ದೆಗಳು,( ಪುರುಷ: 284 ಮಹಿಳಾ: 50 )
- ಪೊಲೀಸ್ ಕಾನ್ಸ್ಟೇಬಲ್ (KSISF): 364 ಹುದ್ದೆಗಳು (ಪುರುಷ: 274 ಮಹಿಳಾ: 90 )
- ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ (ಭಾರತೀಯ ಮೀಸಲು ಪಡೆ- IRB): 161 ಹುದ್ದೆಗಳು (ಪುರುಷ: 161 ಮಹಿಳಾ: 0)
ಇದನ್ನು ಓದಿ
Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?
KSRP Recruitment 2026 : ಶೈಕ್ಷಣಿಕ ವಿದ್ಯಾರ್ಹತೆ (Educational qualification)
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಈ ಕೆಳಗಿನ ಶೈಕ್ಷಣಿಕ ಅರ್ಹತೆಗಳಲ್ಲಿ ಒಂದನ್ನು ಹೊಂದಿರಬೇಕು.
- ಕರ್ನಾಟಕ ಪದವಿ ಪೂರ್ವ ಶಿಕ್ಷಣ ಮಂಡಳಿಯು ನಡೆಸುವ ದ್ವಿತೀಯ ಪಿಯುಸಿ (PUC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಅಥವಾ ತತ್ಸಮಾನ ವಿದ್ಯಾರ್ಥಿಗಳು: ಸಿಬಿಎಸ್ಇ (CBSE) ಅಥವಾ ಐ ಎಸ್ ಸಿ (ISC) 12ನೇ ತರಗತಿ, ಎನ್ ಐ ಓ ಎಸ್ (NIOS) ನ ಉನ್ನತ ಪ್ರೌಢ ಶಿಕ್ಷಣ ಕೋರ್ಸ್.
- ಒಂದು ಭಾಷ ವಿಷಯದೊಂದಿಗೆ ಎರಡು ವರ್ಷಗಳ ಐಟಿಐ (ITI )ಕೋರ್ಸ್.
- ಕರ್ನಾಟಕ ರಾಜ್ಯ ವೃತ್ತಿ ಶಿಕ್ಷಣ ಕೋರ್ಸ್ ಗಳು (JOC).
- ತಾಂತ್ರಿಕ ಶಿಕ್ಷಣ ಇಲಾಖೆಯ 3 ವರ್ಷಗಳ ಡಿಪ್ಲೋಮೋ (Diploma).
KSRP Recruitment 2026 : ವಯೋಮಿತಿ ಮತ್ತು ಸಡಿಲಿಕೆ (Age Limit)
ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ತುಂಬಿರಬೇಕು. ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ. (ಐದು ವರ್ಷಗಳ ಸಡಿಲಿಕೆಯನ್ನು ಒಳಗೊಂಡಂತೆ)
- ಸಾಮಾನ್ಯ ಅರ್ಹತೆಯ (GM) ಅಭ್ಯರ್ಥಿಗಳಿಗೆ: ಗರಿಷ್ಠ 33 ವರ್ಷಗಳು.
- SC ST, ಪ್ರವರ್ಗ-1,2A,2B,3A,3B ಅಭ್ಯರ್ಥಿಗಳಿಗೆ : ಗರಿಷ್ಠ 35 ವರ್ಷ
- ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷಗಳು (ಮಾಜಿ ಸೈನಿಕರಿಗೆ ನಿಯಮಾನುಸಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇರಲಿದೆ).
KSRP Recruitment 2026 : ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಶುಲ್ಕ
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 13 ಜುಲೈ 2026
- ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಆಗಸ್ಟ್ 2026
- ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ : 11 ಆಗಸ್ಟ್ 2026.
ಅರ್ಜಿ ಶುಲ್ಕ( ಆನ್ಲೈನ್ ಮೂಲಕ ಮಾತ್ರ) :
- ಸಾಮಾನ್ಯ ಅರ್ಹತೆ (GM) ಮತ್ತು ಇತರೆ ಹಿಂದುಳಿದ ವರ್ಗಗಳು (2A,2B,3A,3B): ₹750.
- SC,ST ಪ್ರವರ್ಗ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ: ₹500 (ಸೂಚನೆ: ಒಂದೇ ಪಠ್ಯಕ್ರಮದ ಹೆಚ್ಚುವರಿ ವೃಂದ/ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ ಅತಿ ಹೆಚ್ಚುವರಿ ಹುದ್ದೆಗೆ ₹100 ಹೆಚ್ಚುವರಿ ಶುಲ್ಕ ಪಾವತಿಸಬೇಕು)
ಇದನ್ನು ಓದಿ
KSRP Recruitment 2026 : ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ (Selection Process And Exam Pattern)
ನೇಮಕಾತಿ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಹಾಗೂ ದೇಹದಾಢ್ಯ ತೆ ಪರೀಕ್ಷೆಗಳನ್ನು ಒಳಗೊಂಡಿರುತ್ತದೆ:
1. ಲಿಖಿತ ಪರೀಕ್ಷೆ (written test) :
- ಪರೀಕ್ಷೆಯು ಆಫ್ಲೈನ್ ಓ ಎಂ ಆರ್ ( offline OMR ) ಮಾದರಿಯಲ್ಲಿ ನಡೆಯಲಿದೆ.
- ಸಾಮಾನ್ಯ ಅಧ್ಯಯನ ಮಾನಸಿಕ ಸಾಮರ್ಥ್ಯ ವಿಷಯಗಳ ಮೇಲೆ 100 ಪ್ರಶ್ನೆಗಳಿದ್ದು, ಒಟ್ಟು 100 ಅಂಕಗಳನ್ನು ಹೊಂದಿರುತ್ತದೆ.
- ಪರೀಕ್ಷಾ ಅವಧಿಯು 1.5 (90 ನಿಮಿಷಗಳು) ಗಂಟೆ ಆಗಿರುತ್ತದೆ
- ನೆಗೆಟಿವ್ ಮಾರ್ಕಿಂಗ್: ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುವುದು. (ಶೇಡ್ ಮಾಡದಿದ್ದರೂ ಕಡಿತವಿರುತ್ತದೆ).
- ಪರೀಕ್ಷೆ ದಿನಾಂಕ: 20 ಸೆಪ್ಟೆಂಬರ್ 2026 (ಮಧ್ಯಾಹ್ನ 2:30 ರಿಂದ 4:00 ವರೆಗೆ)
2. ದೇಹದಾರ್ಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ (PST and PET):
- ಲಿಖಿತ ಪರೀಕ್ಷೆಯ ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ ಕರೆಯಲಾಗುವುದು.
- ಪುರುಷರಿಗೆ ಕನಿಷ್ಠ ಎತ್ತರ 168 ಸೆಂಟಿಮೀಟರ್ ಹಾಗೂ ಮಹಿಳೆಯರಿಗೆ 158 ಸೆಂಟಿಮೀಟರ್ ನಿಗದಿಪಡಿಸಲಾಗಿದೆ.
- ದೈಹಿಕ ಸಹಿಷ್ಣತೆ ಪರೀಕ್ಷೆಯಲ್ಲಿ ಪುರುಷರಿಗೆ 1600 ಮೀಟರ್ ಓಟ ಹಾಗೂ ಮಹಿಳೆಯರಿಗೆ 400 ಮೀಟರ್ ಓಟ ಸೇರಿದಂತೆ ಉದ್ದ ಜಿಗಿತ ಎತ್ತರ ಜಿಗಿತ ಮತ್ತು ಗುಂಡು ಎಸೆತ ಇರಲಿದೆ.
3. ವೈದ್ಯಕೀಯ ಪರೀಕ್ಷೆ (Medical Exam):
ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:2 ಅನುಪಾತದಲ್ಲಿ ಕಿರು ಪಟ್ಟಿ ಮಾಡಿ ಅಂತಿಮವಾಗಿ ವೈದ್ಯಕೀಯ ಪರೀಕ್ಷೆಗೆ ಕರೆಯಲಾಗುವುದು.
KSRP Recruitment 2026 : ಅರ್ಜಿ ಸಲ್ಲಿಸುವುದು ಹೇಗೆ? (HOW TO APPLY)
ಅರ್ಹ ಅಭ್ಯರ್ಥಿಗಳು ಆಗಸ್ಟ್ 10, 2026 ರ ವರೆಗೆ ಕೆಳಗಿನ ಹಂತಗಳನ್ನು ಅನುಸರಿಸಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು:
Step 1. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದ ಅಧಿಕೃತ ಜಾಲತಾಣ https://cetonline.karnataka.gov.in/kea/ ಭೇಟಿ ನೀಡಿ.
Step 2. ಮುಖಪುಟದಲ್ಲಿರುವ ಸಂಬಂಧಪಟ್ಟ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
Step 3. ಅಭ್ಯರ್ಥಿಗಳು ಹುದ್ದೆಗಳ ವರ್ಗೀಕರಣದಲ್ಲಿ ಪ್ರಕಟಿಸಿದ ಯಾವುದಾದರೂ ಒಂದು ಪಡೆಗೆ (ಒಂದು ಬ್ಯಾಟಲ್ಲಿಯನ್ ಗೆ) ಮಾತ್ರ ಅರ್ಜಿ ಸಲ್ಲಿಸತಕ್ಕದ್ದು.
Step 4. ವೈಯಕ್ತಿಕ ವಿವರಗಳು, ಶೈಕ್ಷಣಿಕ ಮಾಹಿತಿ ಮತ್ತು ಮೀಸಲಾತಿ ವಿವರಗಳನ್ನು ಅರ್ಜಿಯಲ್ಲಿ ನಿಖರವಾಗಿ ಭರ್ತಿ ಮಾಡಿ.
Step 5. ನಿಮ್ಮ ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಕಪ್ಪು ಬಣ್ಣದ ಸ್ಕೆಚ್/ ಮಾರ್ಕರ್ ಪೆನ್ನಲ್ಲಿ ಮಾಡಿದ ಸಹಿಯನ್ನು JPEG ಮಾದರಿಯಲ್ಲಿ ಅಪ್ಲೋಡ್ ಮಾಡಿ.
Step 6. ಆನ್ಲೈನ್ ಮೂಲಕ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ.
Step 7. ಅರ್ಜಿಯನ್ನು ಅಂತಿಮವಾಗಿ ಸಬ್ಮಿಟ್ ಮಾಡಿ, ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ಹಾಗೂ ಶುಲ್ಕ ಪಾವತಿಯ ಚಲನ್ ಅನ್ನು ಕಾಯದಿಟ್ಟುಕೊಳ್ಳಿ.
ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಈ ಕೆಳಗಿನ ವಿಷಯಗಳಿಗೆ ಹೆಚ್ಚಿನ ಒತ್ತು ನೀಡಿ.
1. ಸಾಮಾನ್ಯ ಜ್ಞಾನ (General knowledge)
- ಭಾರತದ ಇತಿಹಾಸ
- ಕರ್ನಾಟಕದ ಇತಿಹಾಸ
- ಭಾರತೀಯ ಸಂವಿಧಾನ
- ಭೂಗೋಳಶಾಸ್ತ್ರ
- ಭಾರತೀಯ ಆರ್ಥಿಕತೆ
- ವಿಜ್ಞಾನ ಮತ್ತು ತಂತ್ರಜ್ಞಾನ
- ಪರಿಸರ ಮತ್ತು ಜೀವ ವೈವಿಧ್ಯ
- ಪ್ರಮುಖ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಸ್ಥೆಗಳು
2. ಪ್ರಚಲಿತ ವಿದ್ಯಮಾನಗಳು (Current Affairs)
- ಕಳೆದ 6 ರಿಂದ 12 ತಿಂಗಳ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು.
- ಕರ್ನಾಟಕ ಸರ್ಕಾರದ ಯೋಜನೆಗಳು
- ಕ್ರೀಡೆ, ಪ್ರಶಸ್ತಿಗಳು, ವಿಜ್ಞಾನ, ಆರ್ಥಿಕತೆ.
- ಪ್ರಮುಖ ನೇಮಕಾತಿಗಳು ಮತ್ತು ಸರ್ಕಾರಿ ಕಾರ್ಯಕ್ರಮಗಳು.
3. ಕನ್ನಡ ಭಾಷೆ
- ವ್ಯಾಕರಣ
- ಸಂಧಿ, ಸಮಾಸ
- ವಿರುದ್ಧಾರ್ಥಕ ಮತ್ತು ಸಮನಾರ್ಥಕ ಪದಗಳು
- ಗಾದೆಗಳು ಮತ್ತು ನುಡಿಗಟ್ಟುಗಳು
- ವಾಕ್ಯ ತಿದ್ದುಪಡಿ
- ಓದು ಗ್ರಹಿಕೆ
4. ಇಂಗ್ಲಿಷ್
- Grammar
- Vocabulary
- Synonyms and antonyms
- Articles
- Tenses
- Active and passive voice
- Comprehension
5. ಸಂಖ್ಯಾತ್ಮಕ ಸಾಮರ್ಥ್ಯ (Numerical Ability)
- ಶೇಕಡವಾರು
- ಲಾಭ ನಷ್ಟ
- ಸರಳ ಮತ್ತು ಚಕ್ರಬಡ್ಡಿ
- ಅನುಪಾತ ಮತ್ತು ಸಮಾನುಪಾತ
- ಸಮಯ ಮತ್ತು ಕೆಲಸ
- ಸಮಯ ಮತ್ತು ದೂರ
- ಸರಾಸರಿ
- ಗಣಿತ
6. ತಾರ್ಕಿಕ ಸಾಮರ್ಥ್ಯ (Reasoning)
- ಸಂಖ್ಯಾ ಸರಣಿ
- ಅಕ್ಷರ ಸರಣಿ
- Coding and decoding
- Blood relation
- Direction sense
- Analogy
- Classification
- Puzzle and logical reasoning
ಓದುವ ವಿಧಾನ:
- ಪ್ರತಿದಿನ 6-8 ಗಂಟೆಗಳ ನಿಯಮಿತ ಅಧ್ಯಯನ ಮಾಡಿ
- ಪ್ರತಿದಿನ ಕನಿಷ್ಠ ಒಂದು ಗಂಟೆ ಕರೆಂಟ್ ಅಫೇರ್ಸ್ (Current Affairs)ಓದಿ.
- ವರಕೊಮ್ಮೆ ಮಾಕ್ ಟೆಸ್ಟ್ (Mock Test) ಬರೆಯಿರಿ
- ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ.
- ತಪ್ಪಾದ ಪ್ರಶ್ನೆಗಳನ್ನು ಮರುಪರಿಶೀಲಿಸಿ
ಅಧ್ಯಯನಕ್ಕೆ ಉಪಯುಕ್ತ ಪುಸ್ತಕಗಳು
- ಸ್ಪರ್ಧಾ ಸ್ಪೂರ್ತಿ ಸಾಮಾನ್ಯ ಜ್ಞಾನ
- ಕರ್ನಾಟಕ ದರ್ಪಣ
- Lucent general knowledge
- Quantitative aptitude (R.S Aggarwal)
- Reasoning (R.S Aggarwal)
- ಕನ್ನಡ ವ್ಯಾಕರಣ
ದೈಹಿಕ ಪರೀಕ್ಷೆಯ ತಯಾರಿ: ಲಿಖಿತ ಪರೀಕ್ಷೆಯ ಜೊತೆಗೆ ದೈಹಿಕ ಸಾಮರ್ಥ್ಯ ಮುಖ್ಯವಾಗಿದೆ. ಆದ್ದರಿಂದ ಪ್ರತಿದಿನ
- 3-5 ಕಿಲೋಮೀಟರ್ ಓಟ
- ಪುಶ್ ಅಪ್ಸ್
- ಸಿಟ್ ಅಪ್ಸ್
- ಸ್ಟ್ರೆಚಿಂಗ್
- ಸಹಿಷ್ಣುತೆ ಹೆಚ್ಚಿಸುವ ವ್ಯಾಯಾಮಗಳನ್ನು ಮಾಡಿ.
ಪರೀಕ್ಷೆಗಾಗಿ ಮುಖ್ಯ ಸಲಹೆಗಳು:
- ಅಧಿಕೃತ ಸಿಲಬಸ್ ಆಧರಿಸಿ ಓದಿ
- ಪ್ರತಿದಿನ ಮರು ಅಭ್ಯಾಸ ಮಾಡಿ
- ಸಮಯ ನಿರ್ವಹಣೆ ಕಲಿಯಿರಿ
- ವಾರಕ್ಕೆ ಕನಿಷ್ಠ ಎರಡು ಪೂರ್ಣ ಮಾದರಿ ಪರೀಕ್ಷೆಗಳನ್ನು ಬರೆಯಿರಿ.
- ಆರೋಗ್ಯಕರ ಆಹಾರ ಮತ್ತು ಸಾಕಷ್ಟು ನಿದ್ರೆ ಪಡೆಯಿರಿ.