Honey Bee Farm Subsidy 2026: ಜೇನು ಸಾಕಾಣಿಕೆ ಆಸಕ್ತಿ ಇದ್ದರೆ, ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಪಡೆಯಿರಿ. ಕರ್ನಾಟಕದಲ್ಲಿ ಜೇನು ತೋಟಗಾರಿಕೆಯಲ್ಲಿ, ತೊಡಗಿಸಿಕೊಳ್ಳುವ ಆಸಕ್ತಿ ಇರುವವರಿಗೆ ಎಲ್ಲಿದೆ ಸುವರ್ಣ ಅವಕಾಶ. ಇದರ ಸಂಪೂರ್ಣ ಮಾಹಿತಿ ತಿಳಿಯಲು ಈ ಕೆಳಗಿನ ಲೇಖನವನ್ನು ಓದಿರಿ.
Honey Bee Farm Subsidy 2026: ಯೋಜನೆಯ ಮುಖ್ಯಾಂಶಗಳು
ರಾಜ್ಯದ ತೋಟಗಾರಿಕೆ ಇಲಾಖೆಯೂ 2026-27ನೆ ಸಾಲಿನಲ್ಲಿ ಜೇನು ಸಾಕಾಣಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಸಹಾಯಧನ ಪಡೆಯುವುದಕ್ಕೆ ಅರ್ಜಿಯನ್ನು ಆಹ್ವಾನಿಸಿದೆ.
ರೈತರು, ಗ್ರಾಮೀಣ ಯುವಕರು ಹಾಗೂ ಮಹಿಳೆಯರು ಈ ಅವಕಾಶವನ್ನು ಬಳಸಿಕೊಂಡು ಹೆಚ್ಚುವರಿ ಆದಾಯ ಗಳಿಸಬಹುದು.
ಜೇನು ಸಾಕಾಣಿಕೆ ಕೇವಲ ಜೇನುತುಪ್ಪ ಉತ್ಪಾದನೆಗೆ ಸೀಮಿತವಾಗಿರದೆ, ಬೆಳೆಗಳ ಪರಾಗಸ್ಪರ್ಶಕ್ಕೆ ಸಹಾಯಕವಾಗಿ ಇಳುವರಿ ಹೆಚ್ಚಿಸುವುದರ ಜೊತೆಗೆ ಪರಿಸರ ಸಂರಕ್ಷಣೆಗೂ ಕೊಡುಗೆ ನೀಡುತ್ತದೆ.
ತೋಟಗಾರಿಕೆ ಇಲಾಖೆಯೂ ಜಿಲ್ಲಾ ವಲಯದ ಜೇನು ಸಾಕಾಣಿಕೆ ಕಾರ್ಯಕ್ರಮ ದಡಿ ಜೇನುಪೆಟ್ಟಿಗೆ, ಕುಟುಂಬ ಮತ್ತು ಸ್ಟ್ಯಾಂಡ್ ಗಳಿಗೆ ಸಹಾಯಧನ ನೀಡಲು ಯೋಜಿಸಿದೆ.
ಇದನ್ನು ಓದಿ
Honey Bee Farm Subsidy 2026: ಸಹಾಯಧನದ ವಿವರ
ಸಾಮಾನ್ಯವಾಗಿ ವರ್ಗದ ರೈತರಿಗೆ ಶೇಕಡ 50 ರಿಂದ 75ರಂತೆ ಸಹಾಯಧನ ಲಭ್ಯವಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಜೇನುಪೆಟ್ಟಿಗೆ ಹಾಗೂ ಕುಟುಂಬಗಳ ಖರೀದಿಗೆ ಶೇಕಡ 90ರಷ್ಟು ಸಹಾಯಧನ ನೀಡಲಾಗುತ್ತದೆ.
ಪ್ರತಿ ರೈತರಿಗೆ ಗರಿಷ್ಠ 10 ಜೇನು ಪೆಟ್ಟಿಗೆ, ಕುಟುಂಬ ಮತ್ತು ಸ್ಟ್ಯಾಂಡ್ ಖರೀದಿಗೆ ಸಹಾಯಧನ ಪಡೆಯಲು ಅವಕಾಶವಿದೆ.
ಮಧುವನಗಳ ಸ್ಥಾಪನೆಗೆ ರೈತರಿಗೆ ಶೇಕಡ 75ರಷ್ಟು ಸಹಾಯಧನ ಮತ್ತು ಸರಕಾರಿ ವಲಯಕ್ಕೆ ಶೇಕಡ 100 ರಷ್ಟು ಸಹಾಯಧನ ಸಿಗಲಿದೆ. ಜೇನು ಸಂಸ್ಕರಣೆ ಘಟಕಗಳ ಸ್ಥಾಪನೆಗೆ ಶೇಕಡ 50ರ ಸಹಾಯಧನವು ಲಭ್ಯವಾಗಲಿದೆ.
ಈ ಸೌಲಭ್ಯಗಳು ರಾಜ್ಯದ ಎಲ್ಲಾ ತಾಲೂಕುಗಳಲ್ಲಿನ ಆಸಕ್ತ ರೈತರಿಗೆ ಮುಕ್ತವಾಗಿವೆ. ಜಮೀನು ಹೊಂದಿರುವವರು ಹೆಚ್ಚು ಪೆಟ್ಟಿಗೆಗಳನ್ನು ಪಡೆಯಬಹುದು, ಆದರೆ ಭೂಮಿ ಇಲ್ಲದವರಿಗೂ ಸೀಮಿತ ಸಂಖ್ಯೆಯಲ್ಲಿ ಅವಕಾಶ ಇರುತ್ತದೆ.
ಇದನ್ನು ಓದಿ
Honey Bee Farm Subsidy 2026: ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ರೈತರು ಆಯಾ ತಾಲೂಕುಗಳಲ್ಲಿನ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು, ಜಿಲ್ಲಾ ಮಟ್ಟದ ಉಪನಿರ್ದೇಶಕರು ಅಥವಾ ಜಂಟಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 17 ರೊಳಗೆ ಅರ್ಜಿ ಸಲ್ಲಿಸಬೇಕು.
Honey Bee Farm Subsidy 2026: ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್ (Aadhar card)
- ಗುರುತಿನ ಚೀಟಿ (identity card)
- ಬ್ಯಾಂಕ್ ಪಾಸ್ ಬುಕ್ ಪ್ರತಿ (bank passbook)
- ಜಮೀನು ದಾಖಲೆಗಳು (property document)
- ಹಾಗೂ ಇತರೆ ಅಗತ್ಯ ಪತ್ರಗಳನ್ನು ಸಲ್ಲಿಸಬೇಕಾಗುತ್ತದೆ. (Required documents)
ಅರ್ಜಿ ಪರಿಶೀಲನೆಯ ನಂತರ ಅನುಮೋದಿತರಿಗೆ ಸಹಾಯಧನ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಜೇನು ಕೃಷಿ ಕುರಿತ ಮಾಹಿತಿ, ತರಬೇತಿ ಮತ್ತು ಸಹಾಯಧನಕ್ಕಾಗಿ ಬೆಂಗಳೂರು ಲಾಲ್ಬಾಗ್ ಕೇಂದ್ರಕ್ಕೆ 08026571921 ಅಥವಾ 08026561730 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಸ್ಥಳೀಯ ಕಚೇರಿಗಳಲ್ಲಿ ಅಧಿಕಾರಿಗಳು ಅರ್ಜಿ ನಮೂನೆ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಇದನ್ನ ಓದಿ
Honey Bee Farm Subsidy 2026: ಯಾರು ಅರ್ಜಿ ಸಲ್ಲಿಸಬಹುದು?
ರಾಜ್ಯದ ಯಾವುದೇ ತಾಲೂಕಿನ ಎಲ್ಲಾ ವರ್ಗದ ರೈತರು ಅರ್ಜಿ ಸಲ್ಲಿಸಬಹುದು. ಜೇನು ಸಾಕಾಣಿಕೆಯಲ್ಲಿ ಆಸಕ್ತಿ ಇರುವುದು ಮುಖ್ಯ.
ಈಗಾಗಲೇ ಇದೇ ಯೋಜನೆ ಅಡಿ ಸಹಾಯಧನ ಪಡೆದವರು ಮರು ಅರ್ಜಿ ಸಲ್ಲಿಸುವ ಮುನ್ನ ನಿಯಮಗಳನ್ನು ಪರಿಶೀಲಿಸಬೇಕು.
ಗುಣಮಟ್ಟದ ಜೇನು ಪೆಟ್ಟಿಗೆ ಮತ್ತು ಕುಟುಂಬಗಳನ್ನು ಮಾತ್ರ ಖರೀದಿಸಿ, ಅನುಮೋದಿತ ಪೂರೈಕೆ ದಾರದಿಂದ ಪಡೆಯುವುದು ಉತ್ತಮ. ಸಹಾಯಧನ ಬಂದ ನಂತರ ಸರಿಯಾದ ನಿರ್ವಹಣೆ ಮಾಡಿ ಉತ್ಪಾದನೆ ಹೆಚ್ಚಿಸುವುದು ಮುಖ್ಯ.
ಆಸಕ್ತ ರೈತರು ತಡ ಮಾಡದೆ ತಮ್ಮ ಹತ್ತಿರದ ತೋಟಗಾರಿಕೆ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ. ಈ ಸಹಾಯಧನವು ಕೇವಲ ಹಣಕಾಸು ನೆರವಲ್ಲ, ರೈತರ ಜೀವನ ಮಟ್ಟ ಸುಧಾರಿಸುವ ಮತ್ತು ಕೃಷಿ ವೈವಿಧ್ಯೀಕರಣಕ್ಕೆ ಒಂದು ಉತ್ತಮ ಹೆಜ್ಜೆ.
ಸರಿಯಾದ ಯೋಜನೆ ಮತ್ತು ನಿರ್ವಹಣೆಯೊಂದಿಗೆ ಜೇನು ಸಾಕಾಣಿಕೆ ರೈತ ಕುಟುಂಬಗಳಿಗೆ ಹತ್ತಿರ ಆದಾಯದ ಮೂಲವಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿ ಅಥವಾ ನೀಡಲಾದ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ವಿವರ ಪಡೆಯಿರಿ.
ಇದನ್ನು ಓದಿ
Honey Bee Farm Subsidy 2026: ಜೇನು ಸಾಕಾಣಿಕೆಯಿಂದ ಆಗುವ ಲಾಭಗಳೇನು?
ಜೇನು ಸಾಕಾಣಿಕೆ ಒಂದು ಲಾಭದಾಯಕ ಮತ್ತು ಪರಿಸರಸ್ನೇಹಿ ಕೃಷಿ ಉಪ ವೃತ್ತಿಯಾಗಿದೆ. ಕಡಿಮೆ ಬಂಡವಾಳದಲ್ಲಿ ಆರಂಭಿಸಬಹುದಾದ ಈ ಉದ್ಯಮದಿಂದ ರೈತರು ಉತ್ತಮ ಆದಾಯ ಗಳಿಸಬಹುದು. ಜೇನು ನೊಣಗಳು ಹೂಗಳಿಂದ ಮಕರಂದವನ್ನು ಸಂಗ್ರಹಿಸಿ ಜೇನು ಉತ್ಪಾದಿಸುತ್ತದೆ. ಜೇನು ಆಹಾರವಾಗಿಯೂ, ಔಷಧಿಯ ಗುಣಗಳಿರುವ ನೈಸರ್ಗಿಕ ಉತ್ಪನ್ನವಾಗಿಯೂ, ಬಹಳ ಬೇಡಿಕೆ ಹೊದಿದೆ.
ಜೇನಿನ ಜೊತೆಗೆ ಮೇಣ, ರಾಯಲ್ ಜೆಲ್ಲಿ, ಬಿ ಪೊಲೆನ್ ಮತ್ತು ಪ್ರೋಪೋಲಿಸ್ ಮುಂತಾದ ಮೌಲ್ಯಯುತ ಉತ್ಪನ್ನಗಳನ್ನು ಪಡೆಯಬಹುದು. ಜೇನು ಸಾಕಾಣಿಕೆಯಿಂದ ಬೆಳೆಗಳ ಪರಾಗಸರ್ಶ ಹೆಚ್ಚಾಗುತ್ತದೆ. ಇದರಿಂದ ಹಣ್ಣು, ತರಕಾರಿ, ಎಣ್ಣೆ ಬೀಜ ಹಾಗೂ ಇತರ ಬೆಳೆಗಳ ಇಳುವರಿ ಮತ್ತು ಗುಣಮಟ್ಟ ಸುಧಾರಿಸುತ್ತದೆ.
ಕೃಷಿಯ ಜೊತೆಗೆ ಜೇನು ಸಾಕಾಣಿಕೆಯನ್ನು ನಡೆಸುವುದರಿಂದ ಹೆಚ್ಚುವರಿ ಆದಾಯ ದೊರೆಯುತ್ತದೆ. ಗ್ರಾಮೀಣ ಯುವಕರು, ಮಹಿಳೆಯರು ಮತ್ತು ಸ್ವಸಹಾಯ ಸಂಘಗಳಿಗೆ ಇದು ಉತ್ತಮ ಸ್ವಯಂ ಉದ್ಯೋಗದ ಅವಕಾಶಗಳನ್ನು ಒದಗಿಸುತ್ತದೆ. ಕಡಿಮೆ ಜಾಗ ಮತ್ತು ಕಡಿಮೆ ನಿರ್ವಹಣೆಯಲ್ಲಿಯೇ ಈ ಉದ್ಯಮವನ್ನು ಯಶಸ್ವಿಯಾಗಿ ನಡೆಸಬಹುದು.
ಜೇನು ಸಾಕಾಣಿಕೆ ಪರಿಸರ ಸಮತೋಲನ ಕಾಪಾಡಲು ಸಹಕಾರಿಯಾಗಿದೆ. ಜೇನುನೊಣಗಳು ಸಸ್ಯಗಳ ಸಂತಾನೋತ್ಪತ್ತಿ ಗೆ ನೆರವಾಗಿ ಜೀವವಿದ್ಯವನ್ನು ಉಳಿಸಲು ಸಹಾಯ ಮಾಡುತ್ತದೆ. ಸರ್ಕಾರ ಮತ್ತು ವಿವಿಧ ಕೃಷಿ ಸಂಸ್ಥೆಗಳು ತರಬೇತಿ, ತಾಂತ್ರಿಕ ಸಲಹೆ ಹಾಗೂ ಕೆಲವು ಯೋಜನೆಗಳ ಮೂಲಕ ನೆರವು ನೀಡುತ್ತದೆ, ಹೀಗಾಗಿ ಜೇನು ಸಾಕಾಣಿಕೆ ರೈತರ ಆದಾಯವನ್ನು ಹೆಚ್ಚಿಸುವ, ಉದ್ಯೋಗ ಸೃಷ್ಟಿಸುವ ಮತ್ತು ಕೃಷಿ ಅಭಿವೃದ್ಧಿಗೆ ಪೂರಕವಾಗಿರುವ ಉತ್ತಮ ಉಪಕಸುಬು ಆಗಿದೆ.
ತೋಟಗಾರಿಕೆ ಇಲಾಖೆಯ ಆಫೀಷಿಯಲ್ ವೆಬ್ಸೈಟ್