Grama panchayathi yojanegalu : ಗ್ರಾಮ ಪಂಚಾಯಿತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ. Important.

WhatsAppಫಾಲೋ ಮಾಡಿ

Grama panchayathi yojanegaluGRama panchayathi Yojanegalu :ಗ್ರಾಮ ಪಂಚಾಯಿತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು ಸಂಪೂರ್ಣ ಮಾಹಿತಿ .

ಗ್ರಾಮ ಪಂಚಾಯಿತಿಗಳು ಗ್ರಾಮೀಣ ಭಾರತದ ಅಭಿವೃದ್ಧಿಯ ಹೃದಯವಿದ್ದಂತೆ ಸರ್ಕಾರದ ಅನೇಕ ಜನ ಕಲ್ಯಾಣ ಯೋಜನೆಗಳು ನೇರವಾಗಿ ಜನರಿಗೆ ತಲುಪಲು ಗ್ರಾಮ ಪಂಚಾಯಿತಿಗಳು ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ.

ರಸ್ತೆ, ಕುಡಿಯುವ ನೀರು ,ವಸತಿ ,ಉದ್ಯೋಗ ,ಪಿಂಚಣಿ, ಕೃಷಿ, ಮಹಿಳಾ ಸಬಲೀಕರಣ, ಆರೋಗ್ಯ, ನೈರ್ಮಲ್ಯದಿಂದ ಹಿಡಿದು ಡಿಜಿಟಲ್ ಸೇವೆಗಳ ವರೆಗೆ ಗ್ರಾಮಸ್ಥರ ದೈನಂದಿನ ಬದುಕಿನ ಪ್ರತಿಯೊಂದು ಹಂತದಲ್ಲೂ ಗ್ರಾಮ ಪಂಚಾಯಿತಿಗಳು ಪಾತ್ರ ಅತ್ಯಂತ ಮಹತ್ವದ ಆಗಿದೆ.

ಈ ಲೇಖನದಲ್ಲಿ ಗ್ರಾಮ ಪಂಚಾಯಿತಿ ಮೂಲಕ ಲಭ್ಯವಿರುವ ಪ್ರಮುಖ ಯೋಜನೆಗಳು ಸೌಲಭ್ಯಗಳು ಹಾಗೂ ಅವುಗಳ ಪಡೆಯುವ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ತಿಳಿಯೋಣ.

Grama panchayathi yojanegalu:  ಗ್ರಾಮ ಪಂಚಾಯಿತಿಗಳ ಜವಾಬ್ದಾರಿ

ಗ್ರಾಮ ಪಂಚಾಯತ್ ವ್ಯವಸ್ಥೆ ಕೇವಲ ಆಡಳಿತಾತ್ಮಕ ಘಟಕವಲ್ಲ ಇದು ಗ್ರಾಮೀಣ ಪ್ರದೇಶದ ಅಭಿವೃದ್ಧಿಯ ಶಕ್ತಿ ಕೇಂದ್ರ ಸ್ಥಳೀಯ ಮಟ್ಟದಲ್ಲಿ ಪ್ರಜಾಪ್ರಭುತ್ವವನ್ನು ಬರಪಡಿಸುವಲ್ಲಿ ಪಂಚಾಯತ್ ಳು ಪ್ರಮುಖ ಪಾತ್ರ ವಹಿಸುತ್ತವೆ ಗ್ರಾಮ ಪಂಚಾಯಿತಿಗಳ ಪ್ರಮುಖ ಜವಾಬ್ದಾರಿಗಳು ಹೀಗಿವೆ.

  • ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಪೂರೈಕೆ
  • ಗ್ರಾಮೀಣ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ
  • ಬೀದಿ ದೀಪಗಳ ವ್ಯವಸ್ಥೆ ಮತ್ತು ನಿರ್ವಹಣೆ
  • ಸ್ವಚ್ಛ ಭಾರತ್ ಅಭಿಯಾನದಡಿ ಗ್ರಾಮ ನೈರ್ಮಲ್ಯ ಕಾಪಾಡುವುದು
  • ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಪ್ರೋತ್ಸಾಹ
  • ಘನ ತ್ಯಾಜ್ಯ ವಿಲೇವಾರಿ ವ್ಯವಸ್ಥೆ
  • ಜನನ ಮರಣ ನೋಂದಣಿ ಆಸ್ತಿ ತೆರಿಗೆ ಸಂಗ್ರಹ
  • ಪ್ರಾಥಮಿಕ ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳ ಮೇಲ್ವಿಚಾರಣೆ

ಇವೆಲ್ಲದರ ಮೂಲಕ ಗ್ರಾಮ ಪಂಚಾಯತ್ ಒಂದು ಸ್ವಾವಲಂಬಿ ಮತ್ತು ಅಭಿವೃದ್ಧಿ ಶೀಲಾ ಗ್ರಾಮದ ನಿರ್ಮಾಣಕ್ಕೆ ದಿಕ್ಕು ನೀಡುತ್ತದೆ.

Grama panchayathi yojanegalu:  ಉದ್ಯೋಗ ಖಾತರಿ ಯೋಜನೆ(MGNREGA)

ಗ್ರಾಮೀಣ ಜನರಿಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅತ್ಯಂತ ಪ್ರಮುಖವಾಗಿದೆ ಇದು ಗ್ರಾಮ ಪಂಚಾಯಿತಿ ಮೂಲಕ ಪಡೆಯಬಹುದಾದ ಪ್ರಮುಖ ಯೋಜನೆಯಾಗಿದೆ

ಈ ಯೋಚನೆಯ ಮೂಲಕ ಪ್ರತಿ ಗ್ರಾಮೀಣ ಕುಟುಂಬಕ್ಕೆ ವರ್ಷಕ್ಕೆ ಕನಿಷ್ಠ 125 ದಿನಗಳ ಉದ್ಯೋಗ ಖಾತರಿ ನೀಡುವುದಾಗಿದೆ. ಸಾರ್ವತ್ರಿಕ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಒದಗಿಸುವ ಮೂಲಕ ಉದ್ಯೋಗ ಒದಗಿಸಲಾಗುತ್ತದೆ.

ಈ ಯೋಜನೆಯ ವಿಶೇಷತೆ ಎಂದರೆ ಕೂಲಿಯನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಅಥವಾ ಅಂಚೆ ಖಾತೆಗೆ ಜಮಾ ಮಾಡಲಾಗುತ್ತದೆ. ಮಧ್ಯವರ್ತಿಗಳಲ್ಲದೆ ಹಣ ಜಮಯಾಗುವುದರಿಂದ ಪಾರದರ್ಶಕತೆ ಕಾಯ್ದುಕೊಳ್ಳಲಾಗುತ್ತದೆ.

ಇದನ್ನು ಓದಿ

ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ? Important update

Grama panchayathi yojanegalu:   ಗ್ರಾಮ ಪಂಚಾಯತ್ ಮೂಲಕ ಲಭ್ಯವಿರುವ ವಸತಿ ಯೋಜನೆಗಳು 

ಗ್ರಾಮೀಣ ಪ್ರದೇಶದ ವಸತಿರಹಿತ ಕುಟುಂಬಗಳಿಗೆ ಸ್ವಂತ ಮನೆ ಕಟ್ಟಿಕೊಡುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಈ ಹಿನ್ನೆಲೆಯಲ್ಲಿ ಈ ಕೆಳಗಿನ ವಸತಿ ಯೋಜನೆಗಳು ಜಾರಿಯಲ್ಲಿವೆ.

  • ಬಸವ ವಸತಿ ಯೋಜನೆ. ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದ ವಸತಿ ರೈತ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಸಹಾಯಧನ.
  • ಡಾಕ್ಟರ್ ಬಿ ಆರ್ ಅಂಬೇಡ್ಕರ್ ನಿವಾಸ ಯೋಜನೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ವಿಶೇಷ ಆದ್ಯತೆ ಹಾಗೂ ಹೆಚ್ಚುವರಿ ಧನ ಸಹಾಯ.
  • ಪ್ರಧಾನ ಮಂತ್ರಿ ಆವಾಸ್ ಯೋಜನೆ. (ಗ್ರಾಮೀಣ) ಕೇಂದ್ರ ಸರ್ಕಾರದ ಯೋಜನೆ ಅಡಿ ಬಡವರಿಗೆ ಪಕ್ಕ ಮನೆ ನಿರ್ಮಿಸಲು ಸಹಾಯಧನ ಮತ್ತು ಸಬ್ಸಿಡಿ.

ಈ ವಸತಿ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಗ್ರಾಮ ಸಭೆಯ ಮೂಲಕ ಪಾರದರ್ಶಕವಾಗಿ ನಡೆಯುತ್ತದೆ .ಮನೆ ನಿರ್ಮಾಣ ಪ್ರಗತಿಯಂತೆ ಸಹಾಯಧನವನ್ನು ಹಂತ ಹಂತವಾಗಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

  Grama panchayathi yojanegalu:   ಸಾಮಾಜಿಕ ಭದ್ರತಾ ಮತ್ತು ಪಿಂಚಣಿ ಯೋಜನೆಗಳು 

ಬಡ ಮತ್ತು ಅಸಹಾಯಕರಿಗೆ ಆರ್ಥಿಕ ಆಸರೆಯಾಗಲು ಗ್ರಾಮ ಪಂಚಾಯತ್ ಮೂಲಕ ಹಲವು ಪಿಂಚಣಿ ಯೋಜನೆಗಳು ಲಭ್ಯವಿವೆ.

ವೃದ್ಧಾಪ್ಯ ಪಿಂಚಣಿ ,ವಿಧವಾ ಪಿಂಚಣಿ, ಅಂಗವಿಕಲ ಪಿಂಚಣಿ ,ಮನಸ್ವಿನಿ ಯೋಜನೆ ,ಮೈತ್ರಿ ಯೋಜನೆ, ಹಾಗೂ ಉದ್ಯೋಗಿನಿ ಯೋಜನೆಯ ಪಿಂಚಣಿ ಹಣವು ಪ್ರತಿ ತಿಂಗಳು ನೇರ ನಗದು ವರ್ಗಾವಣೆ ಮೂಲಕ ಫಲಾನುಭವಿಗಳಿಗೆ ಖಾತೆಗೆ ಜಮಯಾಗುತ್ತದೆ.

Grama panchayathi yojanegalu:  ಕೃಷಿ ಮತ್ತು ಮಹಿಳಾ ಸಬಲೀಕರಣ ಯೋಜನೆಗಗ್ರಾಮ 

ಗ್ರಾಮ ಪಂಚಾಯತ್ ರೈತರು ಮತ್ತು ಮಹಿಳೆಯರ ಅಭಿವೃದ್ಧಿಗೆ ಮಹತ್ವದ ಪಾತ್ರ ವಹಿಸುತ್ತದೆ .

ಕೃಷಿಗೆ ಸಂಬಂಧಿಸಿದ ನೆರವು. ಗುಣಮಟ್ಟದ ಬೀಜ ಮತ್ತು ರಸಗೊಬ್ಬರ ಮಾಹಿತಿ ಹನಿ ನೀರಾವರಿ ವ್ಯವಸ್ಥೆಗೆ ಸಹಾಯಧನ ಹಾಗೂ ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ ಅಂತಹ ಕೃಷಿಗೆ ಸಂಬಂಧಿಸಿದ ನೆರವು ನೀಡಲಾಗುತ್ತದೆ.

ಮಹಿಳಾ ಸಬಲೀಕರಣ. ಸ್ವಸಹಾಯ ಗುಂಪುಗಳ ರಚನೆ ಕಡಿಮೆ ಬಡ್ಡಿ ದರದಲ್ಲಿ ಬ್ಯಾಂಕ್ ಸಾಲ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತ ತರಬೇತಿ ನೀಡುವ ಮೂಲಕ ಮಹಿಳಾ ಸಬಲೀಕರಣ ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ.

ಅಂಗನವಾಡಿ ಸೇವೆಗಳು. ಇನ್ನು ಗ್ರಾಮದ ಅಂಗನವಾಡಿಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಗರ್ಭಿಣಿ ಮತ್ತು ಬಾಣಂತಿಯರಿಗೆ ಆರೋಗ್ಯ ತಪಾಸಣೆ ಹಾಗೂ ಪೋಷಣ ಮತ್ತು ಲಸಿಕೆ ಸೇವೆಗಳನ್ನು ಒದಗಿಸಲಾಗುತ್ತದೆ.

Grama panchayathi yojanegalu:  ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ)

ಗ್ರಾಮಗಳನ್ನು ಬಯಲು ಶೌಚಾ ಮುಕ್ತ ಮಾಡಲು ಸ್ವಚ್ಛ ಭಾರತ್ ಮಿಷನ್ ಪ್ರಮುಖ ಪಾತ್ರ ವಹಿಸಿದೆ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ಮನೆ ಮನೆ ಕಸ ಸಂಗ್ರಹ ತ್ಯಾಜ್ಯ ವಿಲೇವಾರಿ ಕೂಡ ಗ್ರಾಮ ಪಂಚಾಯಿತಿಗಳ ಕಾರ್ಯವಾಗಿದೆ.

ಇದನ್ನು ಓದಿ

Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಈ ರೀತಿ ಹೂಡಿಕೆ ಮಾಡಿದ್ರೆ ಸಿಗಲಿದೆ 30 ಲಕ್ಷ ರು ಆದಾಯ

ಡಿಜಿಟಲ್ ಪಂಚಾಯತ್ ವ್ಯವಸ್ಥೆ 

ಡಿಜಿಟಲ್ಲಿ ಕಾರಣದಿಂದಾಗಿ ಈಗ ಗ್ರಾಮ ಪಂಚಾಯಿತಿ ಸೇವೆಗಳು ಆನ್ಲೈನ್ ಮೂಲಕವೂ ಈ ಕೆಳಗಿನ ಸೇವೆಗಳು ಸಿಗುತ್ತವೆ

  • ಪಂಚತಂತ್ರ 2.0 ಪೋರ್ಟಲ್ ಮೂಲಕ ಆಸ್ತಿ ತೆರಿಗೆ ಪಾವತಿ
  • ಇ ಕಾತ ಸೇವೆಗಳು
  • ಕಟ್ಟಡ ಮತ್ತು ವ್ಯಾಪಾರ ಪರವನಾಗಿ ಅರ್ಜಿ
  • ಜನನ ಮರಣ ಪ್ರಮಾಣ ಪತ್ರ ಡೌನ್ಲೋಡ್
  • ವಾಸ ಸ್ಥಳ ಪ್ರಮಾಣ ಪತ್ರ ಪಹಣಿ
  • ಬಾಪೂಜಿ ಸೇವಾ ಕೇಂದ್ರ ಮೂಲಕ ಡಿಜಿಟಲ್ ನೆರವು

ಗ್ರಾಮ ಪಂಚಾಯತ್ ಯೋಜನೆಗಳ ಲಾಭ ಪಡೆಯುವುದು ಹೇಗೆ

ಗ್ರಾಮ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಿ ಆಯಾ ಯೋಜನೆಗಳಿಗೆ ಸಂಬಂಧಿಸಿದ ಅಗತ್ಯ ದಾಖಲೆಗಳಾದ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಬುಕ್ ಪ್ರತಿ ,ಪಾಸ್ ಪೋರ್ಟ್ ಅಳತೆಯ ಫೋಟೋ ಮೂಲಕ ಅರ್ಜಿ ಸಲ್ಲಿಸಬಹುದು.

ಬಾಪೂಜಿ ಸೇವಾ ಕೇಂದ್ರ ಅಥವಾ ಪಂಚಾಯತ್ ಕಚೇರಿಯ ಮೂಲಕ ಆನ್ಲೈನ್ ಅಥವಾ ಆಫ್ಲೈನ್ ಅರ್ಜಿ ಸಲ್ಲಿಕೆಗು ಅವಕಾಶವಿದೆ.

ಒಟ್ಟಾರೆ ಗ್ರಾಮ ಪಂಚಾಯತ್ಗಳು ಸರ್ಕಾರ ಮತ್ತು ಜನರ ನಡುವೆ ಇರುವ ಅತ್ಯಂತ ಬಲವಾದ ಸಂಪರ್ಕ ಸೇತುವೆಯಾಗಿ ನಿಮ್ಮ ಹಕ್ಕಿನ ಯೋಜನೆಗಳನ್ನು ತಿಳಿದುಕೊಂಡು ಗ್ರಾಮ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ಸರ್ಕಾರದ ಸೌಲಭ್ಯಗಳು ಸುಲಭವಾಗಿ ಪಡೆಯಬಹುದು.

ಇದನ್ನು ಓದಿ

Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?

 

ಗ್ರಾಮ ಪಂಚಾಯಿತಿ ಅಧಿಕೃತ ವೆಬ್ಸೈಟ್

https://rdpr.karnataka.gov.in/


 

Leave a Comment