PAN card new rules: ಪ್ಯಾನ್ ಕಾರ್ಡ್ ಹೊಸ ನಿಯಮಗಳು ಏಪ್ರಿಲ್ ಒಂದರಿಂದ ಬಿಗಿ ಕ್ರಮ. ಏನೇನು ಬದಲಾವಣೆ ಆಗಲಿದೆ?

WhatsAppಫಾಲೋ ಮಾಡಿ

PAN card new rules

PAN card new rules: ಪ್ಯಾನ್ ಕಾರ್ಡ್ ನಿಯಮಗಳಲ್ಲಿ ದೊಡ್ಡ ಬದಲಾವಣೆಯಾಗಲಿದ್ದು ಏಪ್ರಿಲ್ 1 2026 ರಿಂದ ಹೊಸ ಡಾಕ್ಯುಮೆಂಟ್ ಕಡ್ಡಾಯ, ಹೊಸ ಫಾರ್ಮ್ ಜಾರಿಯಾಗಲಿದೆ ಸಂಪೂರ್ಣ ಮಾಹಿತಿ ಇಲ್ಲಿ ಓದಿ.

ಭಾರತದಲ್ಲಿ ಪ್ರತಿಯೊಬ್ಬ ನಾಗರೀಕರಿಗೂ ಆರ್ಥಿಕ ವ್ಯವಹಾರಗಳಲ್ಲಿ ಅತ್ಯಂತ ಮುಖ್ಯವಾದ ದಾಖಲೆ ಎಂದರೆ ಪ್ಯಾನ್ ಕಾರ್ಡ್(PAN Card) ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಆದಾಯ ತೆರಿಗೆ ಸಲ್ಲಿಕೆ(Income tax return)  ದೊಡ್ಡ ಮೊತ್ತದ ವ್ಯವಹಾರಗಳು ಹಾಗೂ ಹೂಡಿಕೆ(Investment) ಮಾಡುವವರಿಗೆ ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ.

ಈ ಮಹತ್ವದ ದಾಖಲೆ ಪಡೆಯುವ ಪ್ರಕ್ರಿಯೆಯಲ್ಲಿ ಇದೀಗ ಆದಾಯ ತೆರಿಗೆ ಇಲಾಖೆ(Income tax department) ಮಹತ್ವದ ಬದಲಾವಣೆಗಳನ್ನು ಘೋಷಿಸಿದೆ.

ಇದುವರೆಗೆ ಕೇವಲ ಆಧಾರ್ ಕಾರ್ಡ್(Aadhar card) ಬಳಸಿ ಬಹಳ ಸುಲಭವಾಗಿ ಪ್ಯಾನ್ ಕಾರ್ಡ್ ಪಡೆಯುವ ವ್ಯವಸ್ಥೆ ಇತ್ತು ಆದರೆ ಈ ಸರಳ ವಿಧಾನಕ್ಕೆ ಈಗ ಕಡಿವಾಣ ಹಾಕಲಾಗಿದ್ದು ಇದೇ ಏಪ್ರಿಲ್ 1 2026 ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ.

PAN card new rules: ಏನೇನು ಬದಲಾವಣೆ ಆಗುತ್ತಿದೆ.?

ಹೊಸ ನಿಯಮಗಳ ಪ್ರಕಾರ ಪ್ಯಾನ್ ಕಾರ್ಡ್ ಪಡೆಯುವ ಪ್ರಕ್ರಿಯೆ ಈಗ ಸ್ವಲ್ಪ ಕಠಿಣವಾಗಲಿದೆ ಮೊದಲು ಇದ್ದಂತೆ ಕೇವಲ ಆಧಾರ್ ಕಾರ್ಡ್ ನೀಡುವುದರಿಂದಲೇ ಪ್ಯಾನ್ ಕಾರ್ಡ್ ಪಡೆಯಲು ಸಾಧ್ಯವಿಲ್ಲ.

PAN card new rules 1. ಹೆಚ್ಚುವರಿ ದಾಖಲೆ ಕಡ್ಡಾಯ(additional documents mandatory).

ಇನ್ನು ಮುಂದೆ ಪಾನ್ ಅರ್ಜಿ ಸಲ್ಲಿಸುವಾಗ ಜನ್ಮ ದಿನಾಂಕದ ಪುರಾಣಕ್ಕಾಗಿ ಕೇವಲ ಆಧಾರ್ ಸಾಕಾಗುವುದಿಲ್ಲ ಅದರ ಜೊತೆಗೆ ಈ ಕೆಳಗಿನ ದಾಖಲೆಗಳಲ್ಲಿ ಯಾವುದಾದರು ಒಂದನ್ನು ನೀಡಬೇಕು.

  • ಜನನ ಪ್ರಮಾಣ ಪತ್ರ (birth certificate)
  • ಎಸ್ ಎಸ್ ಎಲ್ ಸಿ ಅಂಕಪಟ್ಟಿ .(SSLC marks card)
  • ಪಾಸ್ ಪೋರ್ಟ್(passport)
  • ಮತದಾರರ ಗುರುತಿನ ಚೀಟಿ (voter ID).

ಈ ನಿಯಮವು ನಿಖರ ಮಾಹಿತಿಯನ್ನು ಖಚಿತ ಪಡಿಸಲು ತರಲಾಗುತ್ತಿದೆ.

PAN card new rules: 2. ಹೆಸರಿನ ನಿಯಮಗಳಲ್ಲಿ ಬದಲಾವಣೆ (name matching rule).

ಹೊಸ ನಿಯಮದ ಪ್ರಕಾರ ಪ್ಯಾನ್ ಕಾರ್ಡ್ನಲ್ಲಿ ಹೆಸರು ಕಡ್ಡಾಯವಾಗಿ ಆಧಾರ್ ಕಾರ್ಡ್ ನಲ್ಲಿರುವ ಹೆಸರಿನಂತೆ ಇರಬೇಕು.

ಹಿಂದೆ ಇದ್ದ different name option (ಓಲ್ಡ್ ಆಪ್ಷನ್)  ಈಗ ತೆಗೆದು ಹಾಕಲಾಗಿದೆ ಇದರಿಂದ ತಪ್ಪು ಹೆಸರಿನಿಂದ ಪಾನ್ ಪಡೆಯುವುದು ಸಾಧ್ಯವಾಗುವುದಿಲ್ಲ ಬ್ಯಾಂಕ್ ಹಾಗೂ ಐಟಿ ದಾಖಲೆಗಳಲ್ಲಿ ಒಂದೇ ಹೆಸರು ಇರಲು ಸಹಾಯವಾಗುತ್ತದೆ.

ಇದನ್ನು ಓದಿ

Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಈ ರೀತಿ ಹೂಡಿಕೆ ಮಾಡಿದ್ರೆ ಸಿಗಲಿದೆ 30 ಲಕ್ಷ ರು ಆದಾಯ

  PAN card new rules: 3. ಹಳೆಯ ಅರ್ಜಿ ಫಾರ್ಮ್ ಗಳಿಗೆ ಅಂತ್ಯ. (Old farms not accepted).

ಮಾರ್ಚ್ 31 2026 ರ ನಂತರ ಹಳೆಯ ಫ್ಯಾನ್ ಅರ್ಜಿ ನಮೂನೆಗಳು ( old Pan application form)  ಸ್ವೀಕರಿಸುವುದಿಲ್ಲ ಹೊಸ ಮಾದರಿಯ ಫಾರ್ಮ್ ಗಳು (new updated forms)  ಚಾಲ್ತಿಗೆ ಬರಲಿವೆ. ಇದರಿಂದ ಹೊಸ ಅರ್ಜಿದಾರರು ಹೊಸ ಫಾರ್ಮಗಳನ್ನು ಬಳಸಬೇಕು.

ನೀವು ಇನ್ನೂ ಪಾನ್ ಕಾರ್ಡ್ ಒಂದಿಲ್ಲದಿದ್ದರೆ ಮಾರ್ಚ್ 31 2026ರ ಒಳಗಾಗಿ ಕೇವಲ ಆಧಾರ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು ಏಪ್ರಿಲ್ 1 ರ ನಂತರ ಹೆಚ್ಚುವರಿ ದಾಖಲೆಗಳ ಕಿರಿಕಿರಿ ಎದುರಿಸಬೇಕಾಗುತ್ತದೆ ಹೀಗಾಗಿ ಈಗಲೇ ಅರ್ಜಿ ಸಲ್ಲಿಸುವುದು ಉತ್ತಮ.

PAN card new rules:   ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ ( how to apply PAN card)

ಆನ್ಲೈನ್ ವಿಧಾನ:  ಆನ್ಲೈನ್ ವಿಧಾನದಲ್ಲಿ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಗತ್ಯ ವಿವರಗಳನ್ನು ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ವೃದ್ಧಿ ಸಲ್ಲಿಸಬಹುದು ಇದು ವೇಗವಾದ ಹಾಗೂ ಸುಲಭ ವಿಧಾನವಾಗಿದೆ.

ಆಫ್ ಲೈನ್ ವಿಧಾನ: ಆಫ್ಲೈನ್ ವಿಧಾನದಲ್ಲಿ ನೀವು ಕೆಳಗಿನ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

  • ಗ್ರಾಮ ಆನ್  (Grama one)
  • ಕರ್ನಾಟಕ ಒನ್ (Karnataka one)
  • ಕಾಮನ್ ಸರ್ವಿಸ್ ಸೆಂಟರ್ (common service centre CSC)
  • ಪ್ಯಾನ್ ಸೇವಾ ಕೇಂದ್ರಗಳು

ಅಲ್ಲಿ Form 49A ಭರ್ತಿ ಮಾಡಿ ದಾಖಲೆಗಳೊಂದಿಗೆ ಸಲ್ಲಿಸಬೇಕು

ಇದನ್ನು ಓದಿ

ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ? Important update

PAN card new rules ಪ್ಯಾನ್ ಕಾರ್ಡ್ ಪಡೆಯಲು ಅಗತ್ಯ ದಾಖಲೆಗಳು (required documents).

ಗುರುತಿನ ಪುರಾವೆ ( identity proof)

  • ಆಧಾರ್ ಕಾರ್ಡ್
  • ಮತದಾರರ ಗುರುತಿನ ಚೀಟಿ
  • ಚಾಲನ ಪರವಾನಗಿ ( driving licence)
  • ಪಾಸ್ ಪೋರ್ಟ್

ವಿಳಾಸದ ಪುರಾವೆ ( address proof)

  • ಆಧಾರ್ ಕಾರ್ಡ್
  • ವಿದ್ಯುತ್ ಬಿಲ್
  • ನೀರಿನ ಬಿಲ್
  • ಬ್ಯಾಂಕ್ ಪಾಸ್ ಬುಕ್

ಜನ್ಮ ದಿನಾಂಕದ ಪುರಾವೆ ( date of birth proof).

  • ಜನನ ಪ್ರಮಾಣ ಪತ್ರ
  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ಪಾಸ್ ಪೋರ್ಟ್

ಪಾನ್ ಕಾರ್ಡ್ ಏಕೆ ಅಷ್ಟು ಮುಖ್ಯ ? ( Why PAN card is important).

ಪಾನ್ ಕಾರ್ಡ್ ಕೇವಲ ಒಂದು ಐಡಿ ಪ್ರೂಫ್ ಅಲ್ಲ ಇದು ನಿಮ್ಮ ಹಣಕಾಸು ಜೀವನದ ಮುಖ್ಯ ಭಾಗವಾಗಿದೆ

  • ಇನ್ಕಮ್ ಟ್ಯಾಕ್ಸ್ ರಿಟರ್ನ್ ಸಲ್ಲಿಸಲು ಪ್ಯಾನ್ ಕಾರ್ಡ್ ಕಡ್ಡಾಯವಾಗಿದೆ
  • ಹೊಸ ಬ್ಯಾಂಕ್ ಖಾತೆ ತೆರೆಯಲು ಪ್ಯಾನ್ ಕಾರ್ಡ್ ಅಗತ್ಯ
  • 50,000 ಕ್ಕಿಂತ ಹೆಚ್ಚಿನ ಹಣದ ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯ
  • ಮನೆ ಜಮೀನು ಅಥವಾ ವಾಹನ ಖರೀದಿಸುವಾಗ ಪ್ಯಾನ್ ಕಾರ್ಡ್ ಬೇಕು
  • ಶೇರ್ ಮಾರ್ಕೆಟ್ ಮ್ಯೂಚುಯಲ್ ಫಂಡ್ ಫಿಕ್ಸೆಡ್ ಡೆಪಾಸಿಟ್ ನಂತಹ ಹೂಡಿಕೆಗಳಿಗೆ ಪ್ಯಾನ್ ಕಾರ್ಡ್ ಅಗತ್ಯವಾಗಿದೆ
  • ಹೆಚ್ಚಾಗಿ ಕಡಿತಗೊಂಡ ತೆರಿಗೆಯನ್ನು ಮರಳಿ ಪಡೆಯಲು ಪ್ಯಾನ್ ಕಾರ್ಡ್ ಲಿಂಕ್ ಅಗತ್ಯ.

ಒಟ್ಟಾರೆ ಪ್ಯಾನ್ ಕಾರ್ಡ್ ಪ್ರಕ್ರಿಯೆಯಲ್ಲಿ ಆಗುತ್ತಿರುವ ಈ ಬದಲಾವಣೆಗಳು ಭದ್ರತೆ ಮತ್ತು ನಿಖರತೆ ಹೆಚ್ಚಿಸಲು ಮಾಡಲಾಗುತ್ತಿದೆ. ಆದರೆ ಸಾಮಾನ್ಯ ಜನರಿಗೆ ಸ್ವಲ್ಪ ಹೆಚ್ಚುವರಿ ದಾಖಲೆಗಳ ಕಷ್ಟ ಉಂಟಾಗಬಹುದು. ಆದ್ದರಿಂದ ನೀವು ಇನ್ನೂ ಪಾನ್ ಕಾರ್ಡ್ ಪಡೆಯದಿದ್ದರೆ ಮಾರ್ಚ್ 31 2026ರ ಒಳಗಾಗಿ ಅರ್ಜಿ ಸಲ್ಲಿಸಿ ಸುಲಭ ವಿಧಾನವನ್ನು ಬಳಸಿಕೊಳ್ಳುವುದು ಉತ್ತಮ.

ಇದನ್ನು ಓದಿ

Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?

Leave a Comment