NICL Recruitment 2026: ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯಲ್ಲಿ 500 ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ. Important update.

WhatsAppಫಾಲೋ ಮಾಡಿ

NICL Recruitment 2026 NICL Recruitment 2026: ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (NICL) ವತಿಯಿಂದ 500 ಅಸಿಸ್ಟೆಂಟ್ ಹುದ್ದೆಗಳ ಬರ್ತಿಗೆ ಆನ್ಲೈನ್ ಅರ್ಜಿ ಆಹ್ವಾನ ಕರೆಯಲಾಗಿದೆ. ಪದವೀಧರ ಅಭ್ಯರ್ಥಿಗಳು ಆಗಸ್ಟ್ 7 ರೊಳಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ, ವಯೋಮಿತಿ, ವೇತನ, ಪರೀಕ್ಷಾ ವಿಧಾನ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ. 

NICL Recruitment 2026: 500 ಅಸಿಸ್ಟೆಂಟ್ ಹುದ್ದೆಗಳ ಭರ್ಜರಿ ಅಧಿಸೂಚನೆ ಪ್ರಕಟ 

ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (NICL) 2026 ನೇ ಸಾಲಿನ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು, ಒಟ್ಟು 500 ಅಸಿಸ್ಟೆಂಟ್, ಹುದ್ದೆಗಳ ಬರ್ತಿಗೆ ಆನ್ಲೈನ್ ಅರ್ಜಿ ಆಹ್ವಾನ ಮಾಡಲಾಗಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ, ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಸಂಸ್ಥೆ ಹೆಸರು: ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್.(NICL )
  • ವಿದ್ಯಾರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ. (GRADUATION)
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 7 ಆಗಸ್ಟ್ 2026

ಇದನ್ನು ಓದಿ

SBI Sthree Shakti Package Loan: ಎಸ್ ಬಿ ಐ ಸ್ತ್ರೀ ಶಕ್ತಿ ಪ್ಯಾಕೇಜ್ ಲೋನ್, ಮಹಿಳೆಯರಿಗೆ ₹10 ಲಕ್ಷದವರೆಗೆ ಮೇಲಾಧಾರ ರಹಿತ ಸಾಲ, Important Update.

NICL Recruitment 2026: ಉದ್ಯೋಗ ವಿವರ ಮತ್ತು ಶೈಕ್ಷಣಿಕ ಅರ್ಹತೆ 

ಈ ನೇಮಕಾತಿಯ ಕುರಿತಾದ ಸಂಪೂರ್ಣ ವಿವರಗಳು ಮತ್ತು  ಅರ್ಹತಾ ಮಾನದಂಡಗಳು ಈ ಕೆಳಗಿನಂತಿದೆ.

  • ವಿದ್ಯಾರ್ಹತೆ : ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅಭ್ಯರ್ಥಿಗಳು 1.07.2026 ಕೆ ಅನ್ವಯಿಸುವಂತೆ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ (Graduation) ಅಥವಾ ಸಮಾನವಾದ ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.
  • ಭಾಷಾಜ್ಞಾನ: ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ (State /UT) ಪ್ರಾದೇಶಿಕ ಭಾಷೆಯನ್ನು ಓದಲು ಬರೆಯಲು ಮತ್ತು ಮಾತನಾಡಲು ಕಡ್ಡಾಯವಾಗಿ ತಿಳಿದಿರಬೇಕು.

ವಯೋಮಿತಿ (Age limit)

  • ಅಭ್ಯರ್ಥಿಗಳಿಗೆ 01.07.2026 ಗೆ ಅನ್ವಯಿಸುವಂತೆ ಕನಿಷ್ಠ 21 ವರ್ಷ ತುಂಬಿರಬೇಕು ಮತ್ತು ಗರಿಷ್ಠ 30 ವರ್ಷ ಮೀರಿರಬಾರದು.
  • ಸರ್ಕಾರದ ನಿಯಮಾವಳಿಗಳ ಪ್ರಕಾರ ವಯೋಮಿತಿಯಲ್ಲಿ ಸಡಿಲಿಕೆ (relaxation as applicable) ಅನ್ವಯಿಸುತ್ತದೆ.

NICL Recruitment 2026: ವೇತನ ಶ್ರೇಣಿ 

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಆರಂಭಿಕ ಮೂಲವೇತನ 36,290 ರೂಪಾಯಿ ಇರಲಿದ್ದು ಕಾಲ ಕಾಲಕ್ಕೆ ಅನ್ವಯವಾಗುವ ಇತರೆ ಬತ್ಯಗಳು (Allowance) ದೊರೆಯಲಿದೆ. ಮೆಟ್ರೋಪಾಲಿಟನ್ (metropolitan centres) ನಗರಗಳಲ್ಲಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಮಾಸಿಕ ಒಟ್ಟು ವೇತನ ಸರಿಸುಮಾರು ₹63,000 ರೂಪಾಯಿಗಳವರೆಗೆ ಸಿಗಲಿದೆ.

ಇದನ್ನು ಓದಿ

Lokayukta Recruitment 2026 : Big Update ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

NICL Recruitment 2026:  ಪ್ರಮುಖ ದಿನಾಂಕಗಳು 

ಆನ್ಲೈನ್ ಪರೀಕ್ಷೆಗಳನ್ನು ಎರಡು ಹಂತಗಳಲ್ಲಿ (phase -1 , phase -2 ) ನಡೆಸಲು ತೀರ್ಮಾನಿಸಲಾಗಿದೆ. ಅಭ್ಯರ್ಥಿಗಳು ಈ ಕೆಳಗಿನ ಪ್ರಮುಖ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.

  • ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭದ ದಿನಾಂಕ:  18 ಜುಲೈ 2026
  • ಆನ್ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: 7 ಆಗಸ್ಟ್ 2026
  • Phase -1 ಆನ್ಲೈನ್ ಪರೀಕ್ಷೆ ದಿನಾಂಕ:  27 ಆಗಸ್ಟ್ 2026
  • Phase -2 ಆನ್ಲೈನ್ ಪರೀಕ್ಷೆ ದಿನಾಂಕ: 30 ಅಕ್ಟೋಬರ್ 2026
NICL Recruitment 2026: ಅರ್ಜಿ ಸಲ್ಲಿಸುವ ವಿಧಾನ 

ಅಭ್ಯರ್ಥಿಗಳು ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕವೇ ಅರ್ಜಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಬೇಕು.

Step 1. ಮೊದಲಿಗೆ ಅಧಿಕೃತ ವೆಬ್ಸೈಟ್ಗೆ  https://nationalinsurance.nic.co.in/ಭೇಟಿ ನೀಡಿ ಆನ್ಲೈನ್ ರಿಜಿಸ್ಟ್ರೇಷನ್ ಮಾಡಿಕೊಳ್ಳಿ.

Step 2. ನಂತರ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಬಳಸಿ ನಿಮ್ಮ ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.

Step 3. ಅಗತ್ಯವಿರುವ, ಭಾವಚಿತ್ರ ಸಹಿ ಮತ್ತು ದಾಖಲೆಗಳನ್ನು ನಿಗದಿದ್ದ ಗಾತ್ರದಲ್ಲಿ ಅಪ್ಲೋಡ್ ಮಾಡಿ.

Step 4. ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ.

Step 5. ಕೊನೆಯದಾಗಿ ಅರ್ಜಿಯನ್ನು ಸಬ್ಮಿಟ್ ಮಾಡಿ ಮುಂದಿನ ಉಲ್ಲೇಖಕ್ಕಾಗಿ ಭರ್ತಿ ಮಾಡಿದ ಅರ್ಜಿಯ ಪ್ರಿಂಟ್ ಔಟ್ ತೆಗೆದುಕೊಳ್ಳಿ.

ಇದನ್ನು ಓದಿ

NFR Recruitment 2026: ಈಶಾನ್ಯ ಗಡಿ ರೈಲ್ವೆ ಯಲ್ಲಿ 6,777 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ, Important Update.

NICL Recruitment 2026: ಉದ್ಯೋಗ ಪಡೆಯಲು ಮಾರ್ಗದರ್ಶನ ಮತ್ತು ಪರೀಕ್ಷಾ ವಿಧಾನ. 

ಪರೀಕ್ಷಾ ವಿಧಾನ :

ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆಯಲ್ಲಿ ಅಸಿಸ್ಟೆಂಟ್, ಉದ್ಯೋಗ ಪಡೆಯಲು ಮುಖ್ಯವಾಗಿ ಮೂರು ಹಂತಗಳ ಪರೀಕ್ಷಾ ಪ್ರಕ್ರಿಯೆ ಇರುತ್ತದೆ. ಅವುಗಳ ವಿವರ ಮತ್ತು ತಯಾರಿ ನಡೆಸುವ ಮಾರ್ಗದರ್ಶನ ಇಲ್ಲಿದೆ.

1. ಪೂರ್ವಭಾವಿ ಪರೀಕ್ಷೆ (phase 1)

  • ಒಟ್ಟು ನೂರು ಅಂಕಗಳಿಗೆ ವಸ್ತುನಿಷ್ಠ ಪ್ರಶ್ನೆಗಳಿರುತ್ತವೆ.
  • ವಿಷಯಗಳು: ಇಂಗ್ಲೀಷ್ ಭಾಷೆ (30 ಅಂಕಗಳು), ರೀಸನಿಂಗ್ ಎಬಿಲಿಟಿ (35 ಅಂಕಗಳು), ಮತ್ತು ನ್ಯೂಮರಿಕಲ್ ಆಪ್ಟಿಟ್ಯೂಡ್ (35 ಅಂಕಗಳು).
  • ಸಮಯ ಅವಕಾಶ 60 ನಿಮಿಷಗಳು ಮತ್ತು ಪ್ರತಿ ತಪ್ಪು ಉತ್ತರಕ್ಕೆ 0.25 ನೆಗೆಟಿವ್ ಅಂಕ ಇರುತ್ತದೆ.

2.ಮುಖ್ಯ ಪರೀಕ್ಷೆ (phase 2)

  • ಪ್ರಿಲಿಮ್ಸ್ ನಲ್ಲಿ ಉತ್ತೀರ್ಣರಾದವರು ಈ ಪರೀಕ್ಷೆ ಬರೆಯಬಹುದು.
  • ಇದು 200 ಅಂಕಗಳ ವಸ್ತುನಿಷ್ಠ ಪರಿಚಯ ಆಗಿದ್ದು, ಇದರಲ್ಲಿ ರೀಸನಿಂಗ್, ಇಂಗ್ಲಿಷ್, ಕ್ವಾಂಟಿಟೇಟಿವ್, ಆಪ್ಟಿಟ್ಯೂಡ್, ಜನರಲ್ ಅವೇರ್ನೆಸ್ (ಬ್ಯಾಂಕಿಂಗ್ ಮತ್ತು ಇನ್ಸೂರೆನ್ಸ್ ಜ್ಞಾನ) ಮತ್ತು ಕಂಪ್ಯೂಟರ್ ಜ್ಞಾನದ ಪ್ರಶ್ನೆಗಳಿರುತ್ತವೆ.

3. ಪ್ರಾದೇಶಿಕ ಭಾಷಾ ಪರೀಕ್ಷೆ (regional language test)

  • ಕರ್ನಾಟಕದ ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಓದಲು, ಬರೆಯಲು ಮತ್ತು ಮಾತನಾಡಲು ತಿಳಿಯುವುದು ಕಡ್ಡಾಯ.

ಉದ್ಯೋಗ ಪಡೆಯಲು ಮಾರ್ಗದರ್ಶನ (guidance) 

  • ಬೇಸಿಕ್ಸ್ ಬಲಪಡಿಸಿ: ಗಣಿತದ ಸೂತ್ರಗಳು, ಶಾರ್ಟ್ ಕಟ್ ಗಳು ಮತ್ತು ರೀಸನಿಂಗ್ ಲಾಜಿಕ್ ಗಳನ್ನು ದಿನನಿತ್ಯ ಅಭ್ಯಾಸ ಮಾಡಿ.
  • ಪ್ರಚಲಿತ ವಿದ್ಯಮಾನಗಳು: ಕಳೆದ ಆರು ತಿಂಗಳ ಪ್ರಚಲಿತ ವಿದ್ಯಮಾನಗಳು (current affairs) ಮತ್ತು ವಿಶೇಷವಾಗಿ ವಿಮಾ ಕ್ಷೇತ್ರಕ್ಕೆ (Insurance sector) ಸಂಬಂಧಿಸಿದ ಸುದ್ದಿಗಳ ಮೇಲೆ ಗಮನ ಹರಿಸಿ.
  • ಅಣಕು ಪರೀಕ್ಷೆಗಳು (mock test): ಸಮಯ ನಿರ್ವಹಣೆ (time management) ಮಾಡಲು ಕನಿಷ್ಠ 20 ರಿಂದ 30 ಆನ್ಲೈನ್ ಅಣಕು ಪರೀಕ್ಷೆಗಳನ್ನು ಬರೆಯಿರಿ.
  • ವೇಗ ಮತ್ತು ನಿಖರತೆ: ನೆಗೆಟಿವ್ ಅಂಕಗಳಿರುವುದರಿಂದ ತಪ್ಪು ಉತ್ತರಗಳನ್ನು ತಪ್ಪಿಸಿ ನಿಖರತೆಗೆ ಆದ್ಯತೆ ನೀಡಿ.

ಈ ವಿಷಯಗಳ ಬಗ್ಗೆ ಅತಿ ಹೆಚ್ಚು ಗಮನಹರಿಸಿ. 

1. ರೀಸನಿಂಗ್ ಎಬಿಲಿಟಿ (reasoning ability)

  • ಫಜಲ್ಸ್ ಅಂಡ್ ಸಿಟ್ಟಿಂಗ್ ಅರೇಂಜ್ಮೆಂಟ್: ವೃತ್ತಾಕಾರ, ಸಾಲು ಅಥವಾ ಬಾಕ್ಸ್ ಮಾದರಿಯ ಆಸನ ವ್ಯವಸ್ಥೆ.
  • ಡೈರೆಕ್ಷನ್ ಮತ್ತು ಬ್ಲಡ್ ರಿಲೇಶನ್ಸ್; ದಿಕ್ಕುಗಳ ಮತ್ತು ರಕ್ತ ಸಂಬಂಧಗಳ ಆಧಾರಿತ ಪ್ರಶ್ನೆಗಳು.
  • ಕೋಡಿಂಗ್ ಮತ್ತು ಡಿಕೋಡಿಂಗ್: ಅಕ್ಷರ ಮತ್ತು ಸಂಖ್ಯೆಗಳ ಸಂಕೇತಗಳನ್ನು ಬಿಡಿಸುವುದು.
  • ಸಿಲೋಗಿಸಂ ಮತ್ತು ಇನ್ ಇಕ್ವಾಲಿಟಿ: ಹೇಳಿಕೆಗಳು ಮತ್ತು ತೀರ್ಮಾನಗಳ ತಾರ್ಕಿಕತೆ.

ಇದನ್ನು ಓದಿ

ಸರ್ಕಾರಿ ನೌಕರರ HRA Hike: ಸರ್ಕಾರಿ ನೌಕರರಿಗೆ ಶುಭ ಸುದ್ದಿ. ಸಂಬಳದ ಜೊತೆಗೆ ಮನೆ ಬಾಡಿಗೆ ಭತ್ಯೆ ಬಾರಿ ಏರಿಕೆ, Important Update.

 

Leave a Comment