Lokayukta Recruitment 2026 : Big Update ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

WhatsAppಫಾಲೋ ಮಾಡಿ

Lokayukta Recruitment 2026 Lokayukta Recruitment 2026 : ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಖಾಲಿ ಇರುವ ಒಟ್ಟು 26 ಗ್ರೂಪ್ ಸಿ ಕ್ಲರ್ಕ್ ಕಂ ಟೈಪಿಸ್ಟ್ ಹುದ್ದೆಗಳ ನೇರ ನೇಮಕಾತಿಗೆ ಅಧಿ ಸೂಚನೆ ಪ್ರಕಟಿಸಲಾಗಿದೆ. ಪಿಯುಸಿ ಹಾಗೂ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಆಗಸ್ಟ್ 17ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಹತೆ ವಯೋಮಿತಿ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ. 

Lokayukta Recruitment 2026 : ಸಂಕ್ಷಿಪ್ತ ವಿವರಣೆ 

  • ಕರ್ನಾಟಕ ಲೋಕಾಯುಕ್ತ ಸಂಸ್ಥೆಯಲ್ಲಿ ಗ್ರೂಪ್ ಸಿ ವೃಂದದ ಹುದ್ದೆಗಳ ಭರ್ತಿ.
  • ಉಳಿಕೆ ಮೂಲ ವೃಂದಕ್ಕೆ 25 ಹಾಗೂ ಕಲ್ಯಾಣ ಕರ್ನಾಟಕ ವೃಂದಕ್ಕೆ 1 ಹುದ್ದೆ ಲಭ್ಯ.
  • ಯಾವುದೇ ಲಿಖಿತ ಪರೀಕ್ಷೆ ಇರುವುದಿಲ್ಲ, ಗಣಕಯಂತ್ರ ಬೆರಳಚ್ಚು ಪರೀಕ್ಷೆಯ ಮೆರಿಟ್ ಆಧಾರಿತ ಆಯ್ಕೆ.
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17 ಆಗಸ್ಟ್ 2026.

ಕರ್ನಾಟಕ ಸರ್ಕಾರದಲ್ಲಿ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಉತ್ತಮ ಅವಕಾಶ. ಕರ್ನಾಟಕ ಲೋಕಾಯುಕ್ತ (Karnataka Lokayukta ) ಸಂಸ್ಥೆ ತನ್ನ ಕೇಂದ್ರ ಹಾಗೂ ಶಾಖ ಕಚೇರಿಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ಕ್ಲರ್ಕ್ ಕಂ ಟೈಪಿಸ್ಟ್ (clerk cum typist ) ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.

ಈ ನೇಮಕಾತಿಯಡಿ ಒಟ್ಟು 26 ಹುದ್ದೆಗಳು ಲಭ್ಯವಿದ್ದು, ಅವುಗಳಲ್ಲಿ ಉಳಿಕೆ ಮೂಲ ವೃಂದದ 25 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ 1 ಹುದ್ದೆ ಸೇರಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಆಯ್ಕೆ ಪ್ರಕ್ರಿಯೆ, ವಿದ್ಯಾರ್ಹತೆ, ವಯೋಮಿತಿ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ.

  • ಸಂಸ್ಥೆಯ ಹೆಸರು:  ಕರ್ನಾಟಕ ಲೋಕಾಯುಕ್ತ, ಬೆಂಗಳೂರು
  • ಹುದ್ದೆಯ ಹೆಸರು:  ಕ್ಲರ್ಕ್ ಕಂ ಟೈಪಿಸ್ಟ್ (ಗ್ರೂಪ್ ಸಿ ವೃಂದ )
  • ಒಟ್ಟು ಖಾಲಿ ಹುದ್ದೆಗಳು:  26 ಹುದ್ದೆಗಳು (25 RPC+ 1 KK)
  • ಉದ್ಯೋಗ ಸ್ಥಳ:  ಬೆಂಗಳೂರು( ಅಥವಾ ಸಂಸ್ಥೆಯ ಯಾವುದೇ ಶಾಖ ಕಚೇರಿಗಳು )
  • ಮಾಸಿಕ ವೇತನ ಶ್ರೇಣಿ: 34,100/ ರಿಂದ 67,600 /
  • ಅರ್ಜಿ ಸಲ್ಲಿಸುವ ವಿಧಾನ : (Online) ಆನ್ಲೈನ್ ಮಾತ್ರ
  • ಅಧಿಕೃತ ಜಾಲತಾಣ: https://lokayukta.karnataka.gov.in/gallery_main_kan.php

ಇದನ್ನು ಓದಿ

KSRP Recruitment 2026: Important 2,314 ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ಜರಿ ನೇಮಕಾತಿ

Lokayukta Recruitment 2026 : ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಶುಲ್ಕ 

ಪ್ರಮುಖ ದಿನಾಂಕಗಳು

  • ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 17 ಜುಲೈ 2026
  • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:  17 ಆಗಸ್ಟ್ 2026 (ಮಧ್ಯರಾತ್ರಿ 11:59 ಗಂಟೆಯವರೆಗೆ )
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 18 ಆಗಸ್ಟ್ 2026 (ಮಧ್ಯರಾತ್ರಿ 11: 59 ಗಂಟೆವರೆಗೆ)

ಅರ್ಜಿ ಶುಲ್ಕದ ವಿವರ (Application Fee)

  • ಸಾಮಾನ್ಯ ಅರ್ಹತೆ (GM) 2A,2B,3A,3B  ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ:  ₹250 /
  • SC, ST, ಪ್ರವರ್ಗ-1 ಹಾಗೂ ವಿಕಲಚೇತನ (PWBD) ಅಭ್ಯರ್ಥಿಗಳಿಗೆ :  ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ (  ಯಾವುದೇ ಶುಲ್ಕವಿರುವುದಿಲ್ಲ)
  • ಪಾವತಿ ವಿಧಾನ: ಶುಲ್ಕವನ್ನು ಲೋಕಾಯುಕ್ತ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ CANARA Collect ಲಿಂಕ್ ಬಳಸಿ ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ UPI ಮೂಲಕ ಮಾತ್ರ ಪಾವತಿಸಬೇಕು.

Lokayukta Recruitment 2026: ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿ ಎಷ್ಟಿರಬೇಕು? 

ಶೈಕ್ಷಣಿಕ ಮತ್ತು ತಾಂತ್ರಿಕ ವಿದ್ಯಾರ್ಹತೆ :

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

  1. ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಪದವಿ ಪೂರ್ವ ಶಿಕ್ಷಣ (PUC / 12th class) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
  2. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ (English ) ಕಿರಿಯ ದರ್ಜೆ ಬೆರಳಚ್ಚು (Typing junior Grade) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಕಮರ್ಷಿಯಲ್ ಪ್ರಾಕ್ಟೀಸ್ ನಲ್ಲಿ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ (AGE limit)

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ತುಂಬಿರಬೇಕು. ಸರ್ಕಾರದ ಆದೇಶದನ್ವಯ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ವಿಶೇಷ ಸಡಿಲಿಕೆ ನೀಡಲಾಗಿದ್ದು ಪರಿಷ್ಕೃತ ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ.

  • ಸಾಮಾನ್ಯ ಅರ್ಹತೆ (General Merit) ಅಭ್ಯರ್ಥಿಗಳಿಗೆ :  ಗರಿಷ್ಠ 40 ವರ್ಷಗಳು
  • ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ:  ಗರಿಷ್ಠ 43 ವರ್ಷಗಳು
  • SC, ST ಪ್ರವರ್ಗ-1 ರ ಅಭ್ಯರ್ಥಿಗಳಿಗೆ: ಗರಿಷ್ಠ 45 ವರ್ಷಗಳು. (ವಿಕಲಚೇತನ, ಮಾಜಿ ಸೈನಿಕ ಮತ್ತು ವಿಧವಾ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.)

Lokayukta Recruitment 2026 : ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವಿಧಾನ 

1. ಅರ್ಹತಾ ಪಟ್ಟಿ (Shortlisting) : ಅಭ್ಯರ್ಥಿಗಳು ನಿಗದಿಪಡಿಸಿದ ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು ಮತ್ತು ಮೀಸಲಾತಿ ನಿಯಮಗಳ ಆಧಾರದ ಮೇಲೆ 1:10 ರ ಅನುಪಾತದಲ್ಲಿ ಅರ್ಹ ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆಗೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ.

2. ಗಣಕಯಂತ್ರ ಬೆರಳಚ್ಚು ಪರೀಕ್ಷೆ(Skill Test): ಶಾರ್ಟ್ ಲಿಸ್ಟ್ ಆದ ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಾಯುಕ್ತ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಗಣಕಯಂತ್ರದ (Computer )ಮೂಲಕ ಅರ್ಹತಾ ಪರೀಕ್ಷೆಯನ್ನು ನಡೆಸಲಾಗುವುದು. ಈ ಪರೀಕ್ಷೆಗೆ ಒಟ್ಟು ಗರಿಷ್ಠ 20 ಅಂಕಗಳನ್ನು ನಿಗದಿಪಡಿಸಲಾಗಿದ್ದು, ಅಭ್ಯರ್ಥಿಯು ಆಯ್ಕೆಗೆ ಪರಿಗಣಿತವಾಗಲು ಕನಿಷ್ಠ ಶೇಕಡ 50ರಷ್ಟು (10) ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ.

3. ದಾಖಲಾತಿ ಪರಿಶೀಲನೆ: ಅರ್ಹತಾ ಪರೀಕ್ಷೆಯ ಮೆರಿಟ್ ಹಾಗೂ ಮೀಸಲಾತಿ ಅನ್ವಯ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಿ, ಮೂಲ ದಾಖಲೆಗಳ ಪರಿಶೀಲನೆ ನಡೆಸಲಾಗುವುದು.

ಇದನ್ನು ಓದಿ

Crop Insurance Release 2026: Important,ರೈತರಿಗೆ ಬೆಳೆ ವಿಮೆ ಪರಿಹಾರ ಬಿಡುಗಡೆ: ₹585.72 ಕೋಟಿ ಮಂಜೂರು ಮೊಬೈಲ್ನಲ್ಲಿ ಸ್ಟೇಟಸ್ ಪರಿಶೀಲಿಸುವುದು ಹೇಗೆ?

Lokayukta Recruitment 2026 : ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ?

Lokayukta Recruitment ಹುದ್ದೆಗೆ ಅರ್ಹ ಅಭ್ಯರ್ಥಿಗಳು ಜುಲೈ 17, 2026 ರಿಂದ ಆಗಸ್ಟ್ 17, 2026ರ ಒಳಗೆ ಈ ಕೆಳಗಿನ ಹಂತಗಳನ್ನು ಅನುಸರಿಸಿ ಅರ್ಜಿ ಸಲ್ಲಿಸಬಹುದು.

Step 1: ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.

Step 2: ಮುಖಪುಟದಲ್ಲಿರುವ ಆನ್ಲೈನ್ ಅರ್ಜಿ ಲಿಂಕ್ (RPC or KK) ಅನ್ನು ಕ್ಲಿಕ್ ಮಾಡಿ.

Step 3: ನಿಮ್ಮ ಇತ್ತೀಚಿನ ವಿವರಗಳು, ಶೈಕ್ಷಣಿಕ ಮಾಹಿತಿ ಮತ್ತು ಬೆರಳಚ್ಚು ಪರೀಕ್ಷೆಯ ಅಂಕಗಳನ್ನು ನಿಖರವಾಗಿ ಭರ್ತಿ ಮಾಡಿ.

Step 4: ಭಾವಚಿತ್ರ ಮತ್ತು ಸಹಿ ಅಪ್ಲೋಡ್ ಮಾಡಿ.

ಇತ್ತೀಚಿನ ಇಮೇಜ್ ಅನ್ನು ಅಲ್ಲಿ ಕೇಳಿರುವ ಗಾತ್ರಕ್ಕೆ ಅನುಗುಣವಾಗಿ ಜೆಪಿಜಿ ಮಾದರಿಯಲ್ಲಿ ಅಪ್ಲೋಡ್ ಮಾಡಿ.

ಬಿಳಿ ಕಾಗದದ ಮೇಲೆ ಕಪ್ಪು ಬಾಲ್ ಪಾಯಿಂಟ್ ಪೆನ್ನಿನಲ್ಲಿ ಸಹಿ ಮಾಡಿ ಅಲ್ಲಿ ಕೇಳಿರುವ ಗಾತ್ರಕ್ಕೆ ಅನುಗುಣವಾಗಿ ಜೆಪಿಜಿ ಮಾದರಿಯಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.

Step 5: ಪ್ರಸ್ತುತ ಹುದ್ದೆಗೆ ನಿಗದಿಪಡಿಸಿರುವ ಪಿಯುಸಿ ಹಾಗೂ ಕನ್ನಡ ಮತ್ತು ಇಂಗ್ಲಿಷ್ ಕಿರಿಯ ದರ್ಜೆ ಬೆರಳಚ್ಚು ಪರೀಕ್ಷೆಯ ಮೂಲ ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಿ ಅರ್ಜಿಗೆ ಅಟ್ಯಾಚ್ ಮಾಡಿ.

Step 6: ನಿಮ್ಮ ಪ್ರವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್ಲೈನ್ ಪೇಮೆಂಟ್ ಗೇಟ್ವೇ ಮೂಲಕ ಪಾವತಿಸಿ. (ವಿನಾಯಿತಿ ಇರುವವರು ನೇರವಾಗಿ ಮುಂದುವರೆಯಿರಿ)

Step 7: ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ submit ಬಟನ್ ಕ್ಲಿಕ್ ಮಾಡಿ ಹಾಗೂ ಮುಂದಿನ ಉಲ್ಲೇಖಕ್ಕಾಗಿ ಅಪ್ಲಿಕೇಶನ್ ನಂಬರ್ ಇರುವ ಪ್ರಿಂಟ್ ಔಟ್ ಅನ್ನು ಡೌನ್ಲೋಡ್ ಮಾಡಿ ಕಾಯ್ದಿಟ್ಟುಕೊಳ್ಳಿ.

ಇದನ್ನು ಓದಿ

ಅಬಕಾರಿ ಇಲಾಖೆ ನೇಮಕಾತಿ 2026: Important Karnataka Excise Department Recruitment, 1,207 ಹುದ್ದೆಗಳ ನೇಮಕಾತಿ , ಪಿಯುಸಿ ಪದವೀಧರರಿಗೆ ಭರ್ಜರಿ ಅವಕಾಶ.

Lokayukta Recruitment 2026 : ಸಹಾಯವಾಣಿ 

ಅರ್ಜಿ ಸಲ್ಲಿಸುವಾಗ ಯಾವುದೇ ತಾಂತ್ರಿಕ ತೊಂದರೆಗಳು ಎದುರಾದಲ್ಲಿ ಕಚೇರಿ ವೇಳೆಯಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು.

  • ತಾಂತ್ರಿಕ ತೊಂದರೆಗಳಿಗೆ: 08022011297
  • ಮೀಸಲಾತಿ ಮತ್ತು ವಿದ್ಯಾರ್ಹತೆ ಮಾಹಿತಿಗೆ: 08022011210/08022011279

Lokayukta Recruitment 2026: ಲೋಕಾಯುಕ್ತದಲ್ಲಿ ಉದ್ಯೋಗವು ಕೇವಲ ಸರ್ಕಾರಿ ಕೆಲಸವಲ್ಲ ಅದು ಸಮಾಜದ ವಿಶ್ವಾಸವನ್ನು ಕಾಪಾಡುವ ಜವಾಬ್ದಾರಿ. ಪ್ರಾಮಾಣಿಕತೆ, ನಿಷ್ಪಕ್ಷಪಾತತೆ, ಮತ್ತು ಕಾನೂನಿನ ಮೇಲಿನ ಗೌರವವನ್ನು ನಿಮ್ಮ ವೃತ್ತಿ ಜೀವನದ ಅಡಿಪಾಯವಾಗಿಸಿಕೊಳ್ಳಿ. ಯಾವುದೇ ಒತ್ತಡ ಅಥವಾ ಪ್ರಲೋಭನೆಗೆ ಮಣಿಯದೆ, ಜನಸೇವೆಯೇ ನಿಮ್ಮ ಮೊದಲ ಕರ್ತವ್ಯ ಎಂಬ ಮನೋಭಾವದಿಂದ ಕಾರ್ಯನಿರ್ವಹಿಸಿ. ನಿಮ್ಮ ನಿಷ್ಠೆ ಮತ್ತು ಪಾರದರ್ಶಕತೆ, ಸಮಾಜದಲ್ಲಿ ನ್ಯಾಯ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಬಲಪಡಿಸುತ್ತದೆ.

 

 

 

Leave a Comment