VAO ನೇಮಕಾತಿ 2026 : Big Update ಕಂದಾಯ ಇಲಾಖೆಯಲ್ಲಿ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಅಧಿ ಸೂಚನೆ ಪ್ರಕಟ

WhatsAppಫಾಲೋ ಮಾಡಿ

VAO ನೇಮಕಾತಿ 2026 VAO ನೇಮಕಾತಿ 2026 : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA )ವತಿಯಿಂದ ಕಂದಾಯ ಇಲಾಖೆಯಡಿ ಖಾಲಿ ಇರುವ 572 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇರ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ (PUC) ಉತ್ತೀರ್ಣ ಅಭ್ಯರ್ಥಿಗಳು ಜುಲೈ 30, 2026ರ ಒಳಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ ಇಲ್ಲಿದೆ. 

  • ಕಂದಾಯ ಇಲಾಖೆಯಲ್ಲಿ 572 VAO ಹುದ್ದೆಗಳ ಭರ್ಜರಿ ನೇಮಕಾತಿ.
  • ಪಿಯುಸಿ (PUC )ಅಥವಾ ಡಿಪ್ಲೋಮಾ ಪಾಸಾದವರಿಗೆ ಸುವರ್ಣ ಅವಕಾಶ.
  • ಜುಲೈ 30, 2026 ಆನ್ಲೈನ್ ಅರ್ಜಿ ಸಲ್ಲಿಸಲು ಪಡೆಯ ದಿನಾಂಕ.

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ದ್ವಿತೀಯ ಪಿಯುಸಿ (PUC ) ಉತ್ತೀರ್ಣ ಯುವ ಜನತೆಗೆ ಕರ್ನಾಟಕ ಸರ್ಕಾರವು ಭರ್ಜರಿ ಉದ್ಯೋಗಾವಕಾಶ ನೀಡಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಂದಾಯ ಇಲಾಖೆಯ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಗ್ರೂಪ್ ಸಿ ಗ್ರಾಮ ಆಡಳಿತ ಅಧಿಕಾರಿ (Village Administrative Officer) ಹುದ್ದೆಗಳ ನೇರ ನೇಮಕಾತಿಗಾಗಿ ಎರಡು ಪ್ರತ್ಯೇಕ (RPC and KK) ಅಧಿಕೃತ ಅಧಿಸೂಚನೆಗಳನ್ನು ಪ್ರಕಟಿಸಿದೆ.

ಈ ನೇಮಕಾತಿಯಡಿ ಉಳಿಕೆ ಮೂಲ ವೃಂದ (RPC) ವ್ಯಾಪ್ತಿಯಲ್ಲಿ 505 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ (KK)  ಸ್ಥಳೀಯ ವೃಂದದಲ್ಲಿ 67 ಹುದ್ದೆಗಳು ಸೇರಿದಂತೆ ಒಟ್ಟು 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ನೇಮಕಾತಿಗೆ ಸಂಬಂಧಿಸಿದ ವಿದ್ಯಾರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಪರೀಕ್ಷಾ ಮಾದರಿ, ಪಠ್ಯಕ್ರಮ, ಪ್ರಮುಖ ದಿನಾಂಕಗಳು ಹಾಗೂ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

VAO ನೇಮಕಾತಿ 2026 : ಸಂಕ್ಷಿಪ್ತ ವಿವರಣೆ 

  • ನೇಮಕಾತಿ ಸಂಸ್ಥೆ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
  • ಬಳಕೆದಾರ ಇಲಾಖೆ: ಕಂದಾಯ ಇಲಾಖೆ (Revenue Department)
  • ಹುದ್ದೆಯ ಹೆಸರು: ಗ್ರಾಮ ಆಡಳಿತ ಅಧಿಕಾರಿ  (VAO) ಗ್ರೂಪ್ ಸಿ
  • ಒಟ್ಟು ಹುದ್ದೆಗಳು: 572 ಹುದ್ದೆಗಳು (505 RPC+67 KK)
  • ಮಾಸಿಕ ವೇತನ ಶ್ರೇಣಿ: ₹34,100 ರಿಂದ ₹67,600
  • ಅರ್ಜಿ ಸಲ್ಲಿಸುವ ವಿಧಾನ: ಆನ್ಲೈನ್ (Online) ಮಾತ್ರ
  • ಅಧಿಕೃತ ಜಾಲತಾಣ: https://cetonline.karnataka.gov.in/kea/

ಗಮನಿಸಿ: ಆಯ್ಕೆಯಾದ ಅಭ್ಯರ್ಥಿಗಳು ಎರಡು ವರ್ಷಗಳ ಕಾಲ ಖಾಯಂ ಪೂರ್ವ (Probationary) ಅವಧಿಯಲ್ಲಿ ಇರುತ್ತಾರೆ ಹಾಗೂ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಸೌಲಭ್ಯಕ್ಕೆ ಒಳಪಡುತ್ತಾರೆ.

VAO ನೇಮಕಾತಿ 2026 : ಜಿಲ್ಲಾ ವಾರು ಖಾಲಿ ಹುದ್ದೆಗಳ ವಿವರ (Vacancy details)

ಉಳಿಕೆ ಮೂಲ ವೃಂದ (RPC/ Non KK )-ಒಟ್ಟು 505 ಹುದ್ದೆಗಳು

  1. ತುಮಕೂರು: 50 ಹುದ್ದೆಗಳು
  2. ಮಂಡ್ಯ :50 ಹುದ್ದೆಗಳು
  3. ಬೆಳಗಾವಿ: 48 ಹುದ್ದೆಗಳು
  4. ಮೈಸೂರು: 45 ಹುದ್ದೆಗಳು
  5. ಹಾಸನ: 35 ಹುದ್ದೆಗಳು
  6. ಚಾಮರಾಜನಗರ: 31 ಹುದ್ದೆಗಳು
  7. ಬೆಂಗಳೂರು ದಕ್ಷಿಣ: 30 ಹುದ್ದೆಗಳು
  8. ಬೆಂಗಳೂರು ಗ್ರಾಮಾಂತರ :29 ಹುದ್ದೆಗಳು
  9. ಕೋಲಾರ: 22 ಹುದ್ದೆಗಳು
  10. ಚಿಕ್ಕಬಳ್ಳಾಪುರ :21 ಹುದ್ದೆಗಳು
  11. ಬೆಂಗಳೂರು ನಗರ: 20 ಹುದ್ದೆಗಳು
  12. ದಕ್ಷಿಣ ಕನ್ನಡ: 20 ಹುದ್ದೆಗಳು
  13. ಶಿವಮೊಗ್ಗ: 18 ಹುದ್ದೆಗಳು
  14. ಬಾಗಲಕೋಟೆ: 16 ಹುದ್ದೆಗಳು
  15. ಚಿತ್ರದುರ್ಗ: 15 ಹುದ್ದೆಗಳು
  16. ಹಾವೇರಿ: 15 ಹುದ್ದೆಗಳು
  17. ಗದಗ :14 ಹುದ್ದೆಗಳು
  18. ಉಡುಪಿ: 10 ಹುದ್ದೆಗಳು
  19. ಚಿಕ್ಕಮಗಳೂರು :10 ಹುದ್ದೆಗಳು
  20. ಬೀದರ್: 04 ಹುದ್ದೆಗಳು
  21. ರಾಯಚೂರು: 02 ಹುದ್ದೆಗಳು

ಒಟ್ಟು 505 ಹುದ್ದೆಗಳು

ಕಲ್ಯಾಣ ಕರ್ನಾಟಕ ವೃಂದ (KK) –  ಒಟ್ಟು 67 ಹುದ್ದೆಗಳು

  1. ಕಲಬುರ್ಗಿ :40 ಹುದ್ದೆಗಳು
  2. ಬೀದರ್ :17 ಹುದ್ದೆಗಳು
  3. ರಾಯಚೂರು: 10 ಹುದ್ದೆಗಳು

ಒಟ್ಟು 67 ಹುದ್ದೆಗಳು

VAO ನೇಮಕಾತಿ 2026: ಶೈಕ್ಷಣಿಕ ವಿದ್ಯಾರ್ಹತೆ (Educational Qualification)

ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಅಭ್ಯರ್ಥಿಗಳು ಈ ಕೆಳಗಿನ ಯಾವುದಾದರೂ ಒಂದು ಶೈಕ್ಷಣಿಕ ಅರ್ಹತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.

  • ಕರ್ನಾಟಕ ಪದವಿಪೂರ್ವ ಶಿಕ್ಷಣ ಮಂಡಳಿಯು ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  • ಅಥವಾ ತತ್ಸಮಾನ ವಿದ್ಯಾರ್ಥಿಗಳು: ಸಿಬಿಎಸ್ಇ (CBSE )ಅಥವಾ ಐಸಿಎಸ್ಇ (ICSE) ಮಂಡಳಿಯ 12ನೇ ತರಗತಿ, ಎನ್ ಐ ಓ ಎಸ್ (NIOS )ನ ಉನ್ನತ ಪ್ರೌಢ ಶಿಕ್ಷಣ, ಮೂರು ವರ್ಷಗಳ ಡಿಪ್ಲೋಮಾ (Diploma), (JOC) ಜೆ ಓ ಸಿ, ಅಥವಾ ಭಾಷಾ ವಿಷಯದ ಶರತ್ತುಗಳೊಂದಿಗೆ ಎರಡು ವರ್ಷಗಳ ಐಟಿಐ (ITI )ಕೋರ್ಸ್.

ಇದನ್ನು ಓದಿ

ಅಬಕಾರಿ ಇಲಾಖೆ ನೇಮಕಾತಿ 2026: Important Karnataka Excise Department Recruitment, 1,207 ಹುದ್ದೆಗಳ ನೇಮಕಾತಿ , ಪಿಯುಸಿ ಪದವೀಧರರಿಗೆ ಭರ್ಜರಿ ಅವಕಾಶ.

VAO ನೇಮಕಾತಿ 2026 : ವಯೋಮಿತಿ ಮತ್ತು ಸಡಿಲಿಕೆ (Age Limit)

ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು (30/07/2026) ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ತುಂಬಿರಬೇಕು. ಸರ್ಕಾರದ ಆದೇಶದನ್ವಯ ಒಂದು ಬಾರಿಯ ಕ್ರಮವಾಗಿ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ಸಡಿಲಿಕೆಯನ್ನು ನೀಡಲಾಗಿದ್ದು, ಅದರಂತೆ ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ.

  • ಸಾಮಾನ್ಯ ಅರ್ಹತೆಯ (GM) ಅಭ್ಯರ್ಥಿಗಳಿಗೆ:  ಗರಿಷ್ಠ 40 ವರ್ಷಗಳು.
  • ಪ್ರವರ್ಗ 2A,2B,3A,3B ಅಭ್ಯರ್ಥಿಗಳಿಗೆ:  ಗರಿಷ್ಠ 43 ವರ್ಷಗಳು
  • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳಿಗೆ :  ಗರಿಷ್ಠ 45 ವರ್ಷಗಳು.

ಗಮನಿಸಿ : ವಿಕಲಚೇತನರಿಗೆ 10 ವರ್ಷ, ವಿಧವೆಯರಿಗೆ 10 ವರ್ಷ ಹಾಗೂ ಮಾಜಿ ಸೈನಿಕರಿಗೆ ನಿಯಮಾನುಸಾರ ಹೆಚ್ಚುವರಿ ವಯೋಮಿತಿ ಸಡಿಲಿಕೆ ಇರಲಿದೆ.

VAO ನೇಮಕಾತಿ 2026 : ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಶುಲ್ಕ 
  • ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 11 ಜುಲೈ 2026
  • ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30 ಜುಲೈ 2026
  • ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ: 31 ಜುಲೈ 2026.

ಅರ್ಜಿ ಶುಲ್ಕದ ವಿವರ (ಆನ್ಲೈನ್ ಮೂಲಕ ಪಾವತಿಸಬೇಕು)

  • ಸಾಮಾನ್ಯ ಅರ್ಹತೆ (GM) ಮತ್ತು ಹಿಂದುಳಿದ ವರ್ಗಗಳು (2A,2B,3A,3B) : ₹750 (ಅರ್ಜಿ ಶುಲ್ಕ 500 + ಪ್ರಕ್ರಿಯೆ ಶುಲ್ಕ 250)
  • SC, ST, ಪ್ರವರ್ಗ-1, ಮಾಜಿ ಸೈನಿಕ ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳು: ₹500 (ಅರ್ಜಿ ಶುಲ್ಕ 250+ ಪ್ರಕ್ರಿಯೆ ಶುಲ್ಕ 250)
  • ವಿಕಲಚೇತನ( PWD) ಅಭ್ಯರ್ಥಿಗಳಿಗೆ:  ₹250 (ಕೇವಲ ಪ್ರಕ್ರಿಯೆ ಶುಲ್ಕ)

ಇದನ್ನು ಓದಿ

ನವೋದಯ ವಿದ್ಯಾಲಯ ಪ್ರವೇಶ 2027 : Important 6ನೇ ತರಗತಿ ಉಚಿತ ಪ್ರವೇಶಕ್ಕೆ ಆನ್ಲೈನ್ ಅರ್ಜಿ ಆರಂಭ

VAO ನೇಮಕಾತಿ 2026 : ಸ್ಪರ್ಧಾತ್ಮಕ ಪರೀಕ್ಷಾ ವಿಧಾನ ಮತ್ತು ದಿನಾಂಕ (Exam Pattern and Dates) 

ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ 200 ಅಂಕಗಳ ಆಫ್ ಲೈನ್ ಓಎಂಆರ್ (offline OMR) ಮಾದರಿಯ ಸ್ಪರ್ಧಾತ್ಮಕ ಪರೀಕ್ಷೆಯ ಮೆರಿಟ್ ಆಧಾರದ ಮೇಲೆ ನಡೆಯಲಿದೆ.

ಪರೀಕ್ಷಾ ಪಠ್ಯಕ್ರಮ (syllabus):

1. ಪತ್ರಿಕೆ-1 (ಸಾಮಾನ್ಯ ಜ್ಞಾನ) : ಪ್ರಚಲಿತ ಘಟನೆಗಳು, ಇತಿಹಾಸ, ಸಂವಿಧಾನ, ಕರ್ನಾಟಕದ ಭೂಗೋಳ, ಪಂಚಾಯತ್ ರಾಜ್, ಗ್ರಾಮೀಣಾಭಿವೃದ್ಧಿ, ಮತ್ತು ಪರಿಸರ ಸಮಸ್ಯೆಗಳು (100 ಪ್ರಶ್ನೆಗಳು , 100 ಅಂಕಗಳು 2 ಗಂಟೆ ಅವಧಿ)

2. ಪತ್ರಿಕೆ-2 : ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್, ಕಂಪ್ಯೂಟರ್ ಜ್ಞಾನ (100 ಪ್ರಶ್ನೆಗಳು, 100 ಅಂಕಗಳು, 2:00 ಗಂಟೆ ಅವಧಿ)

ಋಣಾತ್ಮಕ ಮೌಲ್ಯಮಾಪನ (negative marking): ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಳೆಯಲಾಗುವುದು. ಯಾವುದೇ ವೃತವನ್ನು ಶೇಡ್ ಮಾಡದಿದ್ದರೂ 0.25 ಅಂಕ ಕಡಿತಗೊಳಿಸಲಾಗುತ್ತದೆ (ಇದಕ್ಕಾಗಿ ಐದನೇ ಆಯ್ಕೆಯನ್ನು ನೀಡಲಾಗಿರುತ್ತದೆ). ಅರ್ಹತೆಗಾಗಿ ಕನಿಷ್ಠ 35% ಅಂಕ ಗಳಿಸುವುದು ಕಡ್ಡಾಯ.

ಪರೀಕ್ಷಾ ದಿನಾಂಕಗಳ ವಿವರ (EXAM dates)

ಉಳಿಕೆ ಮೂಲ ವೃಂದ 

ಪತ್ರಿಕೆ-1 : 04 ಅಕ್ಟೋಬರ್ 2026 (ಬೆಳಗ್ಗೆ 10:30 ಗಂಟೆ)

ಪತ್ರಿಕೆ-2 : 04 ಅಕ್ಟೋಬರ್ 2026 (ಮಧ್ಯಾಹ್ನ 2:30 ಗಂಟೆ)

ಕಲ್ಯಾಣ ಕರ್ನಾಟಕ ವೃಂದ 

ಪತ್ರಿಕೆ-1: 25 ಅಕ್ಟೋಬರ್ 2026 (ಬೆಳಗ್ಗೆ 10:30 ಗಂಟೆ)

ಪತ್ರಿಕೆ-2 : 25 ಅಕ್ಟೋಬರ್ 2026 (ಮಧ್ಯಾಹ್ನ 2:30 ಗಂಟೆ)

ಸೂಚನೆ: ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯ ದಿನಾಂಕವನ್ನು ಪ್ರಾಧಿಕಾರವು ನಂತರ ಪ್ರಕಟಿಸಲಿದೆ.

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ (HOW to Apply)

Step 1. ಮೊದಲು ಕೆಇಎ (KEA) ಅಧಿಕೃತ ವೆಬ್ ಟ್ ಗೆ ಭೇಟಿ ನೀಡಿ .https://cetonline.karnataka.gov.in/kea/

Step 2. ಮುಖಪುಟದಲ್ಲಿರುವ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಲಿಂಕ್ ಮೇಲೆ ಕ್ಲಿಕ್ ಮಾಡಿ.

Step 3. ಕೇವಲ ಒಂದು ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ವಯಕ್ತಿಕ ವಿವರಗಳು ಮತ್ತು ಮೀಸಲಾತಿ ಮಾಹಿತಿಯನ್ನು ಭರ್ತಿ ಮಾಡಿ.

Step 4. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿಯನ್ನು ಜೆಪಿಜಿ ಫಾರ್ಮ್ಯಾಟ್ ನಲ್ಲಿ ಅಪ್ಲೋಡ್ ಮಾಡಿ.

Step 5. ಆನ್ಲೈನ್ ಮೂಲಕ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ.

Step 6. ಅಂತಿಮವಾಗಿ ಅರ್ಜಿಯನ್ನು ಸಬ್ಮಿಟ್ ಮಾಡಿ ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ಮತ್ತು ಶುಲ್ಕ ಪಾವತಿ ಚಲನ್ ಅನ್ನು ಕಾಯ್ದಿರಿಸಿಕೊಳ್ಳಿ.

ಯಾವ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು? 

1.ಸಾಮಾನ್ಯ ಜ್ಞಾನ

  • ಭಾರತದ ಇತಿಹಾಸ
  • ಕರ್ನಾಟಕದ ಇತಿಹಾಸ
  • ಭಾರತೀಯ ಸ್ವಾತಂತ್ರ್ಯ ಹೋರಾಟ
  • ಭಾರತೀಯ ಸಂವಿಧಾನ
  • ಭೂಗೋಳ
  • ಭಾರತೀಯ ಆರ್ಥಿಕತೆ
  • ವಿಜ್ಞಾನ ಮತ್ತು ತಂತ್ರಜ್ಞಾನ
  • ಪರಿಸರ ಅಧ್ಯಯನ
  • ಪ್ರಚಲಿತ ವಿದ್ಯಮಾನಗಳು
  • ಪ್ರಮುಖ ದಿನಗಳು, ಪ್ರಶಸ್ತಿಗಳು, ಪುಸ್ತಕಗಳು ಮತ್ತು ಲೇಖಕರು

2. ಕರ್ನಾಟಕಕ್ಕೆ ಸಂಬಂಧಿಸಿದ ವಿಷಯಗಳು

  • ಕರ್ನಾಟಕದ ಜಿಲ್ಲೆಗಳು, ನದಿಗಳು, ಅಣೆಕಟ್ಟುಗಳು
  • ಕರ್ನಾಟಕದ ಸಂಸ್ಕೃತಿ, ಕಲೆ, ಸಾಹಿತ್ಯ
  • ಪ್ರಮುಖ ಯೋಜನೆಗಳು
  • ಪಂಚಾಯತ್ ರಾಜ್ ವ್ಯವಸ್ಥೆ
  • ಗ್ರಾಮ ಆಡಳಿತ ವ್ಯವಸ್ಥೆ

3. ಕನ್ನಡ ಭಾಷೆ

  • ವ್ಯಾಕರಣ
  • ಸಂಧಿ, ಸಮಾಸ
  • ವಿರುದ್ಧಾರ್ಥಕ ಮತ್ತು ಸಮಾನಾರ್ಥಕ ಪದಗಳು
  • ಗಾದೆಗಳು, ನುಡಿಗಟ್ಟುಗಳು
  • ಪತ್ರ ಬರವಣಿಗೆ
  • ಓದುಗ್ರಹಿಕೆ

4. ಇಂಗ್ಲಿಷ್ ( ಅಧಿ ಸೂಚನೆಯಲ್ಲಿದ್ದರೆ)

  • Grammar
  • Vocabulary
  • Synonyms and antonyms
  • Comprehension
  • Error spotting

5. ಗಣಿತ (quantitative aptitude)

  • ಶೇಕಡವಾರು
  • ಲಾಭ ಮತ್ತು ನಷ್ಟ
  • ಸರಳ ಮತ್ತು ಚಕ್ರಬಡ್ಡಿ
  • ಅನುಪಾತ ಮತ್ತು ಸಮಾನುಪಾತ
  • ಸಮಯ ಮತ್ತು ಕೆಲಸ
  • ಸಮಯ ಮತ್ತು ದೂರ
  • ಸರಾಸರಿ
  • ವಯಸ್ಸಿನ ಸಮಸ್ಯೆಗಳು
  • ಡೇಟಾ ಇಂಟರ್ಪ್ರೆಟೇಶನ್

6. ಮಾನಸಿಕ ಸಾಮರ್ಥ್ಯ (reasoning)

  • Analogous
  • Coding and decoding
  • Blood relations
  • Direction sense
  • Number series
  • Alphabet series
  • Seating arrangement
  • Logical reasoning

7. ಕಂಪ್ಯೂಟರ್ ಜ್ಞಾನ

  • MS word, Excel
  • Internet
  • Email
  • Computer basics
  • Cyber security ಮೂಲಭೂತ ಮಾಹಿತಿ

ಪ್ರತಿ ದಿನ ಓದುವ ಯೋಜನೆ

  • 1 ಗಂಟೆ -ಪ್ರಚಲಿತ ವಿದ್ಯಮಾನಗಳು
  • 2 ಗಂಟೆ -ಸಾಮಾನ್ಯ ಜ್ಞಾನ
  • 1 ಗಂಟೆ -ಕನ್ನಡ
  • 1 ಗಂಟೆ- ಗಣಿತ
  • 1 ಗಂಟೆ- ರೀಸನಿಂಗ್
  • 30 ನಿಮಿಷ- ಹಿಂದಿನ ಪ್ರಶ್ನೆ ಪತ್ರಿಕೆ ಮತ್ತು ಮಾಕ್ ಟೆಸ್ಟ್

ಹೆಚ್ಚು ಗಮನ ಕೊಡಬೇಕಾದ ವಿಷಯಗಳು 

  • ಭಾರತೀಯ ಸಂವಿಧಾನ
  • ಕರ್ನಾಟಕ ಇತಿಹಾಸ
  • ಪಂಚಾಯತ್ ರಾಜ್
  • ಭೂ ಕಂದಾಯ (Land Revenue) ಮತ್ತು ಗ್ರಾಮ ಆಡಳಿತದ ಮೂಲಭೂತ ಮಾಹಿತಿ
  • ಪ್ರಚಲಿತ ವಿದ್ಯಮಾನಗಳು (ಕಳೆದ 6- 12 ತಿಂಗಳು)
  • ಕನ್ನಡ ವ್ಯಾಕರಣ
  • ಗಣಿತ ಮತ್ತು ರೀಸನಿಂಗ್

ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿದರೆ ಪ್ರಶ್ನೆಗಳ ಸ್ವರೂಪ ಮತ್ತು ಕಠಿಣತೆಯ ಬಗ್ಗೆ ಉತ್ತಮ ಅರಿವು ಬರುತ್ತದೆ.  ಪರೀಕ್ಷಾ ಮಾದರಿಯನ್ನು ಅಂತಿಮವಾಗಿ ಅನುಸರಿಸಿ ಸಿದ್ಧತೆ ನಡೆಸಿ.

ಇದನ್ನು ಓದಿ

KSRP Recruitment 2026: Important 2,314 ಸ್ಪೆಷಲ್ ರಿಸರ್ವ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ಭರ್ಜರಿ ನೇಮಕಾತಿ

ಗಮನಿಸಿ 

ಪ್ರಿಯ ಅಭ್ಯರ್ಥಿಗಳೇ ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಕೇವಲ ಒಂದು ಸರ್ಕಾರಿ ಉದ್ಯೋಗವಲ್ಲ ಅದು ಗ್ರಾಮೀಣ ಜನರ ಸೇವೆ ಮಾಡುವ ಜವಾಬ್ದಾರಿಯುತ ಸ್ಥಾನವಾಗಿದೆ. ನಿಮ್ಮ ಪರಿಶ್ರಮ ಶಿಸ್ತು ಮತ್ತು ಆತ್ಮವಿಶ್ವಾಸವೇ ನಿಮ್ಮ ಯಶಸ್ಸಿನ ನಿಜವಾದ ಬಂಡವಾಳ.

ಪರೀಕ್ಷೆಯ ದಿನ ಯಾವುದೇ ಆತಂಕಕ್ಕೆ ಒಳಗಾಗಬೇಡಿ. ನೀವು ಓದಿರುವ ವಿಷಯಗಳ ಮೇಲೆ ನಂಬಿಕೆ ಇಡಿ. ಸಮಯವನ್ನು ಸರಿಯಾಗಿ ನಿರ್ವಹಿಸಿ, ಪ್ರತಿಯೊಂದು ಪ್ರಶ್ನೆಯನ್ನು ಗಮನವಿಟ್ಟು ಓದಿ ಉತ್ತರಿಸಿ. ಯಶಸ್ಸು ಒಂದೇ ದಿನದಲ್ಲಿ ಸಿಗುವುದಿಲ್ಲ.

ಪ್ರತಿದಿನದ ಸಣ್ಣ ಪ್ರಯತ್ನಗಳೇ ದೊಡ್ಡ ಗೆಲುವಿಗೆ ಕಾರಣವಾಗುತ್ತದೆ. ಆದ್ದರಿಂದ ಕೊನೆಯ ಕ್ಷಣದವರೆಗೂ ಆತ್ಮವಿಶ್ವಾಸ ಕಳೆದುಕೊಳ್ಳದೆ ಸತತ ಅಭ್ಯಾಸ ಮಾಡಿ.

ಸೋಲಿನ ಭಯ ಬೇಡ, ಪ್ರಯತ್ನ ನಿಲ್ಲಿಸದಿರುವುದೇ ನಿಜವಾದ ಗೆಲುವು. ಪ್ರತಿಯೊಂದು ಮಾಕ್ ಟೆಸ್ಟ್ ಪ್ರತಿಯೊಂದು ಪುನರಾವರ್ತನೆಯು ನಿಮ್ಮನ್ನು ಯಶಸ್ಸಿನತ್ತ ಒಂದು ಹೆಜ್ಜೆ ಹತ್ತಿರಕ್ಕೆ ಕೊಂಡಯುತ್ತದೆ.

ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕಿಂತ ಮುಂಚಿತವಾಗಿ ತಲುಪಿ. ಅಗತ್ಯ ದಾಖಲೆಗಳನ್ನು ಜೊತೆಯಲ್ಲಿಟ್ಟುಕೊಳ್ಳಿ. ಮನಸ್ಸನ್ನು ಶಾಂತವಾಗಿರಿಸಿ ಧೈರ್ಯದಿಂದ ಪರೀಕ್ಷೆ ಬರೆಯಿರಿ.

ಇಂದು ನೀವು ಮಾಡುವ ಪರಿಶ್ರಮವೇ ನಾಳೆ ನಿಮ್ಮ ಗೌರವ ನಿಮ್ಮ ಕುಟುಂಬದ ಹೆಮ್ಮೆ ಮತ್ತು ಸಮಾಜದ ಸೇವೆಗೆ ದಾರಿ.

ನಿಮ್ಮ  ಕನಸು ನನಸಾಗಲಿ ನಿಮ್ಮ ಶ್ರಮಕ್ಕೆ ಉತ್ತಮ ಫಲ ಸಿಗಲಿ. ಗ್ರಾಮ ಆಡಳಿತ ಅಧಿಕಾರಿಯಾಗಿ ಸಮಾಜಕ್ಕೆ ಸೇವೆ ಸಲ್ಲಿಸುವ ಅವಕಾಶ ನಿಮ್ಮದಾಗಲಿ ಎಂಬ ಹಾರೈಕೆಗಳು.

Leave a Comment