ವಿದ್ಯಾಸಿರಿ Scholarship 2026 : Important ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆರಂಭ. ಯಾರಿಗೆ ಸಿಗಲಿದೆ 15000 ಸಹಾಯಧನ?

WhatsAppಫಾಲೋ ಮಾಡಿ

ವಿದ್ಯಾಸಿರಿ Scholarship 2026ವಿದ್ಯಾಸಿರಿ Scholarship 2026 ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆರಂಭ. ಯಾರಿಗೆ ಸಿಗಲಿದೆ ₹15,000 ಸಹಾಯಧನ ಇಲ್ಲಿದೆ ಸಂಪೂರ್ಣ ಮಾಹಿತಿ. 

ವಿದ್ಯಾಸಿರಿ ವಿದ್ಯಾರ್ಥಿ ವೇತನ 2026- 27 ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸುವರ್ಣ ಅವಕಾಶ ಆನ್ಲೈನ್ ಅರ್ಜಿ ಆರಂಭ, ಕೊನೆಯ ದಿನಾಂಕ 31 ಆಗಸ್ಟ್.

ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸು ನನಸಾಗಿಸುವ ಮಹತ್ವದ ಅವಕಾಶ ತೆರೆದಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2026 27ನೇ ಶೈಕ್ಷಣಿಕ ಸಾಲಿನ ವಿದ್ಯಾಸಿರಿ ವಿದ್ಯಾರ್ಥಿ ವೇತನ ಸೇರಿದಂತೆ ವಿವಿಧ ಪೋಸ್ಟ್ ಮೆಟ್ರಿಕ್ ಯೋಜನೆಗಳಿಗೆ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಪಿಯುಸಿ, ಐಟಿಐ, ಡಿಪ್ಲೋಮೋ, ಪದವಿ, ಸ್ನಾತಕೋತ್ತರ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ ಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಪಡೆದು ಆರ್ಥಿಕ ಒತ್ತಡವಿಲ್ಲದೆ ತಮ್ಮ ಶಿಕ್ಷಣವನ್ನು ಮುಂದುವರಿಸಬಹುದು.

ಈ ಯೋಜನೆಗಳು ಸಾವಿರಾರು ಕುಟುಂಬಗಳ ಭವಿಷ್ಯವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ.

ಇದನ್ನು ಓದಿ

Uchitha Holige Yanthra: Best ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ಯೋಜನೆ | ಸಂಪೂರ್ಣ ಮಾಹಿತಿ

ವಿದ್ಯಾಸಿರಿ Scholarship 2026 : ವಿದ್ಯಾಸಿರಿ ಯೋಜನೆಗಳು ಯಾವುವು? ವಿದ್ಯಾರ್ಥಿಗಳಿಗೆ ಲಭ್ಯವಿರುವ ಸೌಲಭ್ಯಗಳು.

ಹಿಂದುಳಿದ ವರ್ಗಗಳ ಪ್ರವರ್ಗ-1, 2A ,2B ,3A ,3B ಮತ್ತು ಪ್ರವರ್ಗ -1 ರ ಅಲೆಮಾರಿ ಅರೆ ಅಲೆಮಾರಿ ಜನಾಂಗದ ವಿದ್ಯಾರ್ಥಿಗಳು ಈ ಯೋಜನೆಗಳ ಲಾಭ ಪಡೆಯಬಹುದು.

ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಯೋಜನೆ ಅಡಿ ನಿರ್ವಹಣಾ ಭತ್ಯೆ ಮತ್ತು ಶುಲ್ಕ ಸಹಾಯ ದೊರೆಯುತ್ತದೆ. ಇದು ವಿದ್ಯಾರ್ಥಿಗಳ ದೈನಂದಿನ ಶೈಕ್ಷಣಿಕ ವೆಚ್ಚಗಳನ್ನು ಭಾಗಶಹ ಪೂರೈಸುತ್ತದೆ.

ಕಾಲೇಜು ಶುಲ್ಕ ಮರುಪಾವತಿ ಯೋಜನೆಯಲ್ಲಿ ವಿದ್ಯಾರ್ಥಿಗಳು ಪಾವತಿಸಿದ ಶುಲ್ಕವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಮರುಪಡೆಯಬಹುದು ಇದು ಖಾಸಗಿ ಸಂಸ್ಥೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ದೊಡ್ಡ ನೆರವಾಗುತ್ತದೆ.

ಅಲೆಮಾರಿ ಮತ್ತು ಅರೆ ಅಲೆಮಾರಿ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳು ಲಭ್ಯವಿದ್ದು ಇದು ಸಮಾಜದ ಹಿಂದುಳಿದ ವರ್ಗಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡುತ್ತದೆ.

ವಿದ್ಯಾಸಿರಿ ಊಟ ಮತ್ತು ವಸತಿ ಸಹಾಯ ಯೋಜನೆಯಡಿ ಸರ್ಕಾರಿ ಅಥವಾ ಅನುದಾನಿತ ಹಾಸ್ಟೆಲ್ ಗಳಲ್ಲಿ ಸ್ಥಳ ದೊರೆಯದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ₹1,500 ದರದಲ್ಲಿ 10 ತಿಂಗಳ ಕಾಲ ಒಟ್ಟು ₹15,000 ಸಹಾಯಧನ ನೀಡಲಾಗುತ್ತದೆ.

ಈ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಇದು ಊಟ ವಸತಿ ವೆಚ್ಚವನ್ನು ಕಡಿಮೆ ಮಾಡಿ ವಿದ್ಯಾರ್ಥಿಗಳು ಓದಿನಲ್ಲಿ ಪೂರ್ಣ ಗಮನಹರಿಸಲು ಸಹಾಯವಾಗುತ್ತದೆ.

ವಿದ್ಯಾಸಿರಿ Scholarship 2026 : ಅರ್ಹತಾ ಮಾನದಂಡಗಳು ಮತ್ತು ಆದಾಯ ಮಿತಿ ಎಷ್ಟು? 

ಕರ್ನಾಟಕದ ಖಾಯಂ ನಿವಾಸಿಯಾಗಿರುವುದು ಮತ್ತು ಭಾರತೀಯ ಪ್ರಜೆಯಾಗಿರುವುದು ಮುಖ್ಯ. ವಿದ್ಯಾರ್ಥಿಯು ಹಿಂದುಳಿದ ವರ್ಗಗಳ ಪ್ರವರ್ಗ-1 2A,2B,3A,3B ಗೆ ಸೇರಿರಬೇಕು.

ಪ್ರವರ್ಗ-1 ಅಲೆಮಾರಿ ಅರೆ ಅಲೆಮಾರಿ ಜನಾಂಗದವರಿಗೂ ವಿಶೇಷ ಸೌಲಭ್ಯ ಲಭ್ಯವಿದೆ. ಕುಟುಂಬದ ವಾರ್ಷಿಕ ಆದಾಯ ಮಿತಿ ಪ್ರವರ್ಗ-1 ಗೆ 2.5 ಲಕ್ಷ ರೂಪಾಯಿ ಮತ್ತು ಇತರ ಪ್ರವರ್ಗಗಳಿಗೆ ಒಂದು ಲಕ್ಷ ರೂಪಾಯಿವರೆಗೆ ನಿಗದಿಪಡಿಸಲಾಗಿದೆ.

ಅಂಗೀಕೃತ ಸಂಸ್ಥೆಗಳಲ್ಲಿ ಪೂರ್ಣಾವಧಿ ಕೋರ್ಸ್ ನಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಹಾಸ್ಟೆಲ್ ಸೌಲಭ್ಯ ದೊರೆಯದಿದ್ದರೆ ಊಟ ವಸತಿ ಸಹಾಯಕ್ಕೆ ಅರ್ಜಿ ಸಲ್ಲಿಸಬಹುದು.

ಈ ಮಾನದಂಡಗಳನ್ನು ಪೂರೈಸುವ ವಿದ್ಯಾರ್ಥಿಗಳು ಯುಜನೆಯ ಲಾಭ ಪಡೆಯುವ ಅವಕಾಶ ಹೊಂದಿದ್ದಾರೆ. ಇದು ಆರ್ಥಿಕವಾಗಿ ದುರ್ಬಲ ಕುಟುಂಬಗಳ ವಿದ್ಯಾರ್ಥಿಗಳಿಗೆ ಸಮಾನ ಶಿಕ್ಷಣದ ಅವಕಾಶ ಕಲ್ಪಿಸುತ್ತದೆ.

ಇದನ್ನು ಓದಿ

Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?

ವಿದ್ಯಾಸಿರಿ Scholarship 2026 : ಅರ್ಜಿ ಸಲ್ಲಿಸುವುದು ಹೇಗೆ? ಅಗತ್ಯ ದಾಖಲೆಗಳು ಯಾವುವು? 

ಅರ್ಜಿ ಸಲ್ಲಿಕೆ ಸಂಪೂರ್ಣ ಆನ್ಲೈನ್ ವಿಧಾನದಲ್ಲಿದೆ. ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ ಪೋರ್ಟಲ್ ಗೆ ಭೇಟಿ ನೀಡಿ ಆಧಾರ್ ಲಿಂಕ್ ಮೊಬೈಲ್ ಸಂಖ್ಯೆ ಬಳಸಿ ನೋಂದಣಿ ಮಾಡಿಕೊಳ್ಳಬೇಕು.

OTP ದೃಢೀಕರಣದ ನಂತರ ಲಾಗಿನ್ ಮಾಡಿ ವೈಯಕ್ತಿಕ, ಶೈಕ್ಷಣಿಕ ಮತ್ತು ಬ್ಯಾಂಕ್ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ. ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದು ಮುಖ್ಯ.

ಅಗತ್ಯ ದಾಖಲೆಗಳು: 

  • ವಿದ್ಯಾರ್ಥಿ ಮತ್ತು ಪೋಷಕರ ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಆರ್ ಡಿ ನಂಬರ್ ಸಹಿತ ಇರಬೇಕು
  • ವಿದ್ಯಾರ್ಥಿಯ ಹೆಸರಿನಲ್ಲಿ ಬ್ಯಾಂಕ್ ಖಾತೆ ವಿವರ . ಆಧಾರ್ ಲಿಂಕ್ ಮತ್ತು ಡಿ ಬಿ ಟಿ ಸಕ್ರಿಯವಾಗಿರಬೇಕು.
  • ಎಸ್ ಎಸ್ ಎಲ್ ಸಿ ಮತ್ತು ಹಿಂದಿನ ವರ್ಷದ ಅಂಕಪಟ್ಟಿ.
  • ಶುಲ್ಕ ರಶೀದಿ
  • ಕಾಲೇಜು ಇ- ದೃಡೀಕರಣ
  • ಕಾಲೇಜು ಕೋಡ್ ಅಥವಾ U-DISE

ಎಲ್ಲಾ ವಿವರಗಳನ್ನು ಪರಿಶೀಲಿಸಿ ಸಲ್ಲಿಸಿ. ರೆಫರೆನ್ಸ್ ನಂಬರ್ ಉಳಿಸಿಕೊಳ್ಳಿ ಮತ್ತು ಅರ್ಜಿ ಸ್ಥಿತಿಯನ್ನು ನಿಯಮಿತವಾಗಿ ಚೆಕ್ ಮಾಡಿ.

ವಿದ್ಯಾಸಿರಿ Scholarship 2026: ಪ್ರಮುಖ ದಿನಾಂಕಗಳು ಮತ್ತು ಸಹಾಯ ಸಂಪರ್ಕಗಳು? 

ಅರ್ಜಿ ಸಲ್ಲಿಕೆ ಆರಂಭವಾಗಿದ್ದು ಕೊನೆಯ ದಿನಾಂಕ 31 ಆಗಸ್ಟ್ 2026. ಕೊನೆಯ ಕ್ಷಣದವರೆಗೆ ಕಾಯದೆ ಬೇಗ ಅರ್ಜಿ ಸಲ್ಲಿಸುವುದು ಉತ್ತಮ.

ಸಹಾಯಕ್ಕಾಗಿ SSP ಸಹಾಯವಾಣಿ 1902, ಇಲಾಖೆ ಸಹಾಯವಾಣಿ 8050770004, ಅಥವಾ ಕೆಳಗೆ ನೀಡಿರುವ ವೆಬ್ಸೈಟ್ ಗೆ ಭೇಟಿ ನೀಡಿ ಮಾಹಿತಿಗಳನ್ನು ತಿಳಿದುಕೊಳ್ಳಿ.

https://bcwd.karnataka.gov.in/110/PostMatric%20Scholarship%20Application/en

ವಿದ್ಯಾಸಿರಿ Scholarship 2026 : ವಿದ್ಯಾರ್ಥಿಗಳಿಗೆ ಮುಖ್ಯ ಸಲಹೆಗಳು ಮತ್ತು ದೀರ್ಘಾವಧಿ ಪ್ರಯೋಜನ? 

ಅರ್ಜಿ ಸಲ್ಲಿಸುವ ಮುನ್ನ ದಾಖಲೆಗಳ ಸ್ಪಷ್ಟತೆ ಮತ್ತು ಸಂಪೂರ್ಣತೆ ಖಚಿತಪಡಿಸಿ. ಬ್ಯಾಂಕ್ ಖಾತೆ ಆಧಾರ್ ಲಿಂಕ್ ಆಗಿರುವುದು ಕಡ್ಡಾಯ. ಕಾಲೇಜು ದೃಢೀಕರಣ ಸಮಯಕ್ಕೆ ಪಡೆಯಿರಿ.

ಈ ಯೋಜನೆಗಳು ಹಳ್ಳಿ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಬಾಗಿಲು ತೆರೆಯುತ್ತವೆ. ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನತೆಯನ್ನು ಸಾಧಿಸುವುದು ಇದರ ಮುಖ್ಯ ಗುರಿ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ತಮ್ಮ ಕನಸುಗಳನ್ನು ಸಕಾರ ಗೊಳಿಸಲಿ.

ಶಿಕ್ಷಣವು ಭವಿಷ್ಯದ ಕೀಲಿ ಕೈ ಎಂಬದನ್ನು ನೆನಪಿಡಿ. ಹೆಚ್ಚಿನ ಮಾಹಿತಿಗೆ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ ಅಥವಾ ಸಹಾಯವಾಣಿಗೆ ಕರೆ ಮಾಡಿ.

ಈಗಲೇ ಅರ್ಜಿ ಸಲ್ಲಿಸಿ ನಿಮ್ಮ ಶೈಕ್ಷಣಿಕ ಭವಿಷ್ಯವನ್ನು ಭದ್ರಪಡಿಸಿಕೊಳ್ಳಿ. ಅರ್ಹ ವಿದ್ಯಾರ್ಥಿಗಳು ತಡ ಮಾಡದೆ ಆನ್ಲೈನ್ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ ಮತ್ತು ಸರ್ಕಾರದ ಈ ಸಹಾಯವನ್ನು ಸ್ವೀಕರಿಸಿ.

ಶಿಕ್ಷಣದ ಮೂಲಕ ಸಮೃದ್ಧ ಕರ್ನಾಟಕವನ್ನು ನಿರ್ಮಿಸುವಲ್ಲಿ ನಿಮ್ಮ ಪಾತ್ರ ಮಹತ್ವದ್ದು. ಈ ಅವಕಾಶವನ್ನು ಕೈ ಬಿಡಬೇಡಿ ಇಂದೇ ಅರ್ಜಿ ಸಲ್ಲಿಸಿ.

ವಿದ್ಯಾಸಿರಿ ವಿದ್ಯಾರ್ಥಿ ವೇತನ ಕರ್ನಾಟಕ ಸರ್ಕಾರದ ವಿದ್ಯಾರ್ಥಿ ವೇತನ ಯೋಜನೆಯಾಗಿದ್ದು ಆರ್ಥಿಕವಾಗಿ ಹಿಂದುಳಿದ ಹಾಗೂ ಅರ್ಹ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಮುಂದುವರಿಸಲು ನೆರವು ನೀಡುತ್ತದೆ ಈ ಯೋಜನೆ ಮುಖ್ಯವಾಗಿ ಎಸ್ ಎಸ್ ಪಿ ಮೂಲಕ ನೀಡಲಾಗುತ್ತಿದೆ.

ಇದರ ಬಗ್ಗೆ ಸ್ವಲ್ಪ ಜ್ಞಾನ ಹೊಂದಿರುವ ವಿದ್ಯಾರ್ಥಿಗಳಿಗೆ ಇದರ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಸಿಕೊಡಿ ಅವರಿಗೂ ಸಹ ಶಿಕ್ಷಣವನ್ನು ಮುಂದುವರಿಸಲು ಒಂದು ಒಳ್ಳೆಯ ಸಹಾಯವಾಗಬಹುದು.

ವಿದ್ಯಾರ್ಥಿಗಳು ಆರ್ಥಿಕ ತೊಂದರೆಯಿಂದ ಶಿಕ್ಷಣವನ್ನು ಅರ್ಧದಲ್ಲೇ ನಿಲ್ಲಿಸದಂತೆ ಉತ್ತೇಜನವನ್ನು ನೀಡಲು ಈ ವಿದ್ಯಾರ್ಥಿ ವೇತನ ತುಂಬಾ ಅನುಕೂಲಕರವಾಗಿದೆ. ಈ ಮಾಹಿತಿಯನ್ನು ಆದಷ್ಟು ಜನರಿಗೆ ಶೇರ್ ಮಾಡಿ ಉಪಯೋಗವಾಗುವಂತೆ ಮಾಡಿ.

ಇದು ಒಂದು ಉತ್ತಮ ಯೋಜನೆ ಯಾಗಿದ್ದು ದಯವಿಟ್ಟು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ.

ಇದನ್ನು ಓದಿ

KMF ನೇಮಕಾತಿ 2026: Important 194 ಹುದ್ದೆಗಳಿಗೆ ಅರ್ಜಿ ಆಹ್ವಾನ.SSLC , ITI , Degree Holders ಗೆ ಭರ್ಜರಿ ಅವಕಾಶ.

Leave a Comment