Mysuru District Court Recruitment 2026: SSLC PUC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯ ಹುದ್ದೆಗಳಿಗೆ ಅರ್ಜಿ ಆಹ್ವಾನ ವಾನ ಸರ್ಕಾರಿ ಉದ್ಯೋಗದ ದೊಡ್ಡ ಅವಕಾಶ

WhatsAppಫಾಲೋ ಮಾಡಿ

 

Mysuru District Court Recruitment 2026: SSLC PUC ಪಾಸಾದವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಸರ್ಕಾರಿ ಉದ್ಯೋಗದ ಅವಕಾಶ ಅರ್ಹತೆ, ವೇತನ ,ವಯೋಮಿತಿ ಅರ್ಜಿ ಸಲ್ಲಿಕೆ ಹಾಗೂ ಸಂಪೂರ್ಣ ವಿವರ ಇಲ್ಲಿದೆ. 

ಸರ್ಕಾರಿ ಉದ್ಯೋಗ ಪಡೆಯಲು ಕಾಯುತ್ತಿರುವ ಯುವ ಜನತೆಗೆ ಇದೀಗ ಉತ್ತಮ ಅವಕಾಶ ಬಂದಿದೆ ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತನ್ನ ಅಧೀನದಲ್ಲಿರುವ ವಿವಿಧ ನ್ಯಾಯಾಂಗ ಘಟಕಗಳಲ್ಲಿ ಖಾಲಿ ಇರುವ ಹುದ್ದೆಗಳ ಬರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ.

ಒಟ್ಟು 93 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ, ಈ ನೇಮಕಾತಿ ವಿಶೇಷವಾಗಿ ಹತ್ತನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವನ್ನು ಒದಗಿಸುತ್ತದೆ.

ಈ ನೇಮಕಾತಿಯಲ್ಲಿ ಜವನ ಆದೇಶ ಜಾರಿಕಾರ ಬೆರಳಚ್ಚು ನಕಲುಗಾರ ಮತ್ತು ಶೀಘ್ರ ಲಿಪಿಕಾರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸರಿಯಾದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಯ ಸಲ್ಲಿಸಬಹುದಾಗಿದೆ.

ಹುದ್ದೆಗಳ ಸಂಪೂರ್ಣ ವಿವರ (Post Details)ಈ 

ಈ ನೇಮಕಾತಿಯಲ್ಲಿ ಒಟ್ಟು 93 ಹುದ್ದೆಗಳಿದ್ದು ಅವುಗಳಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜವಾನ ಹುದ್ದೆಗಳಿವೆ.

  • ಜವಾನರು(peon )75 ಹುದ್ದೆಗಳು
  • ಆದೇಶ ಜಾರಿಕಾರರು(process server)11 ಹುದ್ದೆಗಳು
  • ಶೀಘ್ರ ಲಿಪಿಕಾರರು ಗ್ರೇಡ್(stenographer)-||| 4 ಹುದ್ದೆಗಳು
  • ಬೆರಳಚ್ಚು ನಕಲುಗಾರರು (Typist) 3 ಹುದ್ದೆಗಳು.

ಇದರಿಂದ ಸ್ಪಷ್ಟವಾಗುವಂತೆ ಎಸ್ ಎಸ್ ಎಲ್ ಸಿ ಪಾಸಾದವರಿಗೆ ಹೆಚ್ಚಿನ ಅವಕಾಶ ಜವಾನ್ ಹಾಗೂ ಆದೇಶ ಜಾರಿಕಾರ ಹುದ್ದೆಗಳಲ್ಲಿ ಲಭ್ಯವಿದೆ.

ವಿದ್ಯಾರ್ಹತೆ (Educational qualification)

ಪ್ರತಿ ಹುದ್ದೆಗೆ ವಿಭಿನ್ನ ಅರ್ಹತೆ ನಿಗದಿಪಡಿಸಲಾಗಿದೆ.

  • ಜವಾನರು : ಹತ್ತನೇ ತರಗತಿ ಅಥವಾ ಸಮಾನ ವಿದ್ಯಾರ್ಥಿ ಇರಬೇಕು.
  • ಆದೇಶ ಜಾರಿಕಾರರು: ಹತ್ತನೇ ತರಗತಿ ಉತ್ತೀರ್ಣರಾಗಿರಬೇಕು.
  • ಬೆರಳಚ್ಚು ನಕಲುಗಾರರು: ಪಿಯುಸಿ ಅಥವಾ ಸಮಾನ ವಿದ್ಯಾರ್ಥಿ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಕೌಶಲ್ಯ ಕಡ್ಡಾಯ ಕಂಪ್ಯೂಟರ್ ಜ್ಞಾನ ಇರಬೇಕು.
  • ಶೀಘ್ರ ಲಿಪಿಕಾರರು: ದ್ವಿತೀಯ ಪಿಯುಸಿ ಅಥವಾ ಮೂರುವರ್ಷದ ಡಿಪ್ಲೋಮೋ ಜೊತೆಗೆ ಕನ್ನಡ ಮತ್ತು ಇಂಗ್ಲಿಷ್ ಶೀಘ್ರ ಲಿಪಿ ಮತ್ತು ಟೈಪಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವೇತನ ಶ್ರೇಣಿ (Salary Details)

ಈ ಹುದ್ದೆಗಳು ಉತ್ತಮ ಸರ್ಕಾರಿ ವೇತನ ಮತ್ತು ವಿಶೇಷ ಬಟ್ಟೆ ಸೌಲಭ್ಯಗಳನ್ನು ಹೊಂದಿದ್ದು ಮಾಸಿಕ ವೇತನ ಶ್ರೇಣಿ ಈ ಕೆಳಗಿನಂತಿದೆ.

  • ಜವಾನರು: ₹27000- ₹46675
  • ಆದೇಶ ಜಾರಿಕಾರರು: ₹-31775- ₹61300
  • ಬೆರಳಚ್ಚು ನಕಲುಗಾರರು: ₹34100- ₹67600
  • ಶೀಘ್ರ ಲಿಪಿ ಗಾರರು: ₹44425- ₹83700

ವಯೋಮಿತಿ Age limit 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ ವಯಸ್ಸು 18 ವರ್ಷ ಹೊಂದಿರಬೇಕು ಗರಿಷ್ಠ ವಯಸ್ಸು ಸಾಮಾನ್ಯ ವರ್ಗ 40 ವರ್ಷ 2a 2b 3a 3b ಅಭ್ಯರ್ಥಿಗಳು 43 ವರ್ಷ ಹಾಗೂ ಎಸ್ ಸಿ ಎಸ್ ಟಿ  ಪ್ರವರ್ಗ 1 45 ವರ್ಷ ನಿಗದಿಪಡಿಸಲಾಗಿದೆ.

ಅರ್ಜಿ ಶುಲ್ಕ (Application Fee)

ಜವಾನ ಹುದ್ದೆ 

  • ಸಾಮಾನ್ಯ : ₹200
  • OBC: 100
  • Sc st catagory /disable: ಶುಲ್ಕವಿಲ್ಲ

ಆದೇಶ ಜಾರಿಕಾರರು ಮತ್ತು ಶೀಘ್ರ ಲಿಪಿಕಾರರು 

  • ಸಾಮಾನ್ಯ₹300
  • OBC: 150
  • SC ST CATEGORIES: ಶುಲ್ಕವಿಲ್ಲ

ಟೈಪಿಸ್ಟ್ Typist

  • ಸಾಮಾನ್ಯ: ₹300
  • categories: ಶುಲ್ಕವಿಲ್ಲ

ಪ್ರಮುಖ ದಿನಾಂಕಗಳು Important Dates

  • ಅರ್ಜಿ ಆರಂಭ ದಿನಾಂಕ 28 ಏಪ್ರಿಲ್ 2026
  • ಅರ್ಜಿ ಕೊನೆಯ ದಿನಾಂಕ 31 ಮೇ 2026
  • ಶುಲ್ಕ ಪಾವತಿ ಕೊನೆಯ ದಿನಾಂಕ 2 ಜೂನ್ 2026

ಅರ್ಜಿ ಸಲ್ಲಿಸುವ ವಿಧಾನ how to apply online 

ಅಭ್ಯರ್ಥಿಗಳು ಮೈಸೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಮೊದಲಿಗೆ ಅಧಿಕೃತ ವೆಬ್ಸೈಟ್ ತೆರೆಯಿರಿ Recruitment /careers ವಿಭಾಗಕ್ಕೆ ಹೋಗಿ. ಅಲ್ಲಿರುವ ಸಂಬಂಧಿತ ಹುದ್ದೆಯ ಅಧಿಸೂಚನೆ ಓದಿ Online application ಮೇಲೆ ಕ್ಲಿಕ್ ಮಾಡಿ ವಿವರಗಳನ್ನು ಸರಿಯಾಗಿ ಬರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಶುಲ್ಕ ಪಾವತಿಸುವ ಮೂಲಕ ಅರ್ಜಿಯನ್ನು ಸಲ್ಲಿಸಿ.

 

SSLC PUC ಅಭ್ಯರ್ಥಿಗಳಿಗೆ ಉತ್ತಮ ಅವಕಾಶ

ಮೈಸೂರು ಜಿಲ್ಲಾ ನ್ಯಾಯಾಲಯ ನೇಮಕಾತಿ 2026 ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪಾಸಾದ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ ಕಡಿಮೆ ವಿದ್ಯಾರ್ಹತೆಯಲ್ಲಿಯೇ ಸರ್ಕಾರಿ ಉದ್ಯೋಗ ಪಡೆಯಲು ಬಯಸುವವರು ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು.

ಉತ್ತಮ ವೇತನ ಸ್ಥಿರ ಉದ್ಯೋಗ ಮತ್ತು ಸರ್ಕಾರಿ ಸೌಲಭ್ಯಗಳು ಈ ಹುದ್ದೆಗಳ ಪ್ರಮುಖ ಆಕರ್ಷಣೆ ಅರ್ಹ ಅಭ್ಯರ್ಥಿಗಳು ಸಮಯ ಮೀರದಂತೆ ಅರ್ಜಿ ಸಲ್ಲಿಸಿ ತಮ್ಮ ಭವಿಷ್ಯವನ್ನು ಭದ್ರಗೊಳಿಸಿ.

ಗೂಗಲ್ ನಲ್ಲಿ ಅರ್ಜಿ ಸಲ್ಲಿಸಲು ನಿಮಗೆ ಕಷ್ಟವಾದರೆ ನಿಮ್ಮ ಹತ್ತಿರದ ಗ್ರಾಮವನ್ ಸೆಂಟರ್ ಗಳಿಗೆ ಭೇಟಿ ನೀಡಿ ಪೂರ್ಣವಾಗಿ ಅಚ್ಚುಕಟ್ಟಾಗಿ ಅಲ್ಲಿಯೇ ಅರ್ಜಿ ಸಲ್ಲಿಸಿ.

ಇದೇ ರೀತಿಯ ಹೆಚ್ಚಿನ ಮಾಹಿತಿಗಳಿಗೆ ಈ ಚಾನೆಲ್ ನನ್ನು ವಾಟ್ಸಾಪ್ನಲ್ಲಿ ಫಾಲೋ ಮಾಡಿ.

Leave a Comment