PM Kissan New Application: ಪಿಎಂ ಕಿಸಾನ್ ಯೋಜನೆಗೆ ರೈತರಿಂದ ಹೊಸ ಅರ್ಜಿ ಆಹ್ವಾನ ನೀವು ಅರ್ಹರ? ಚಕ್ ಮಾಡಿ

WhatsAppಫಾಲೋ ಮಾಡಿ

PM Kissan New Application: ಇತ್ತೀಚೆಗೆ ಜಮೀನು ವರ್ಗಾವಣೆ ಮಾಡಿಕೊಂಡ ರೈತರಿಗೆ ಪಿಎಂ ಕಿಸಾನ್ ಯೋಜನೆ ಅಡಿ ಹೊಸ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಅರ್ಜಿ ವಿಧಾನ ಮತ್ತು ಸ್ಟೇಟಸ್ ಚೆಕ್ ಸಂಪೂರ್ಣ ಮಾಹಿತಿ ಇಲ್ಲಿದೆ. 

ದೇಶದ ರೈತರ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kissan Scheme) ಇಂದು ಲಕ್ಷಾಂತರ ರೈತರಿಗೆ ನೆರವಾಗುತ್ತಿರುವ ಮಹತ್ವದ ಯೋಜನೆಯಾಗಿದೆ ಈ ಯೋಜನೆ ಅಡಿ ಅರ್ಹ ರೈತರಿಗೆ ಪ್ರತಿ ವರ್ಷ ರೂ 6000  3 ಸಮಾನ ಕಂತುಗಳಲ್ಲಿ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.

ಇತ್ತೀಚೆಗೆ ರಾಜ್ಯ ಕೃಷಿ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು ಹೊಸದಾಗಿ ತಮ್ಮ ಹೆಸರಿಗೆ ಜಮೀನು ವರ್ಗಾವಣೆ ಮಾಡಿಕೊಂಡಿರುವ ರೈತರಿಗೆ ಮತ್ತೊಮ್ಮೆ ಹೊಸ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಈ ಸುದ್ದಿ ಅನೇಕರಿಗೆ ಸಂತಸದ ವಿಷಯವಾಗಿದೆ.

ಯಾರು ಅರ್ಜಿ ಸಲ್ಲಿಸಬಹುದು? Eligibility criteria 

ಹೊಸದಾಗಿ ಅರ್ಜಿ ಸಲ್ಲಿಸಲು ಕೆಲವು ಪ್ರಮುಖ ಅರ್ಹತೆಗಳು ಇರಬೇಕು.

ಅರ್ಹ ರೈತರು

  • ಅರ್ಜಿದಾರರ ಹೆಸರಿನಲ್ಲಿ ಕೃಷಿ ಜಮೀನು ಇರಬೇಕು.
  • ಪಿತ್ರಾರ್ಜಿತ ಆಸ್ತಿ ಅಥವಾ ಪೌತಿ ಮೂಲಕ ಜಮೀನು ತಮ್ಮ ಹೆಸರಿಗೆ ವರ್ಗಾವಣೆ ಆಗಿರಬೇಕು.
  • ಸಣ್ಣ ಪ್ರತಿ ಸಣ್ಣ ಹಾಗೂ ದೊಡ್ಡ ರೈತರು ಅರ್ಜಿ ಸಲ್ಲಿಸಬಹುದು.

ಅರ್ಹರಲ್ಲದ ರೈತರು

  • 2019ರ ನಂತರ ಜಮೀನನ್ನು ನೇರವಾಗಿ ಖರೀದಿಸಿದವರು.
  • ಆದಾಯ ತೆರಿಗೆ ಪಾವತಿದಾರರು.
  • ಸರ್ಕಾರಿ ನೌಕರರು.
  • ಜಿ ಎಸ್ ಟಿ ನೋಂದಾಯಿತ ವ್ಯಾಪಾರಿಗಳು.

ಅರ್ಜಿ ಸಲ್ಲಿಸುವ ವಿಧಾನ (How to apply)

ಅರ್ಹ ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳೊಂದಿಗೆ ಆನ್ಲೈನ್ ಅರ್ಜಿ ಸಲ್ಲಿಸಬೇಕು.

ಇಲ್ಲಿ ಅಧಿಕಾರಿಗಳು ನಿಮ್ಮ ವಿವರಗಳನ್ನು ಪರಿಶೀಲಿಸಿ, ಸರಿಯಾದ ಮಾಹಿತಿ ಆಧರಿಸಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸುತ್ತಾರೆ.

ಅಗತ್ಯ ದಾಖಲೆಗಳು ( Required documents).

  1. ಆಧಾರ್ ಕಾರ್ಡ್
  2. ಬ್ಯಾಂಕ್ ಪಾಸ್ ಬುಕ್
  3. ಜಮೀನಿನ ಪಹಣಿ
  4. ಸಕ್ರಿಯ ಮೊಬೈಲ್ ಸಂಖ್ಯೆ.

ಅರ್ಜಿ ಸ್ಥಿತಿ ಪರಿಶೀಲನೆ (Application Status Check)

ಅರ್ಜಿ ಸಲ್ಲಿಸಿದ ನಂತರ ಅದರ ಸ್ಥಿತಿಯನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ ಇದನ್ನು ನೀವು ಮನೆಯಲ್ಲಿ ಸುಲಭವಾಗಿ ಪರಿಶೀಲಿಸಬಹುದು.

ಅಧಿಕೃತ ವೆಬ್ಸೈಟ್ pmkisan.gov.in ಗೆ ಭೇಟಿ ನೀಡಿ ಮುಖಪುಟದಲ್ಲಿರುವ  know your status ಆಯ್ಕೆ ಮಾಡಿ

ನಂತರ PM Kissan ID ಅಥವಾ Adhar number ನಮೂದಿಸಿ get data ಕ್ಲಿಕ್ ಮಾಡಿ ಇದರಿಂದ ನಿಮ್ಮ ಅರ್ಜಿ ಯಾವ ಹಂತದಲ್ಲಿದೆ ಎಂಬ ಮಾಹಿತಿ ಸಿಗುತ್ತದೆ.

ಮುಖ್ಯ ಸೂಚನೆಗಳು (important guidelines) 

  • ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿರಬೇಕು.
  • ಈ ಕೆ ವೈ ಸಿ ಪ್ರಕ್ರಿಯೆ ಪೂರ್ಣಗೊಳಿಸಿರಬೇಕು
  • ತಪ್ಪು ಮಾಹಿತಿ ನೀಡಿದರೆ ಲಾಭ ರದ್ದು
  • ಅರ್ಜಿ ಸಲ್ಲಿಸುವಾಗ ಎಲ್ಲಾ ವಿವರಗಳನ್ನು ಚೆನ್ನಾಗಿ ಪರಿಶೀಲಿಸಿ.

ಪಿಎಂ ಕಿಸಾನ್ ಯೋಜನೆ, ರೈತರ ಜೀವನದಲ್ಲಿ ಆರ್ಥಿಕ ಭದ್ರತೆ ನೀಡುವ ಪ್ರಮುಖ ಯೋಜನೆಯಾಗಿದೆ ವಿಶೇಷವಾಗಿ ಇತ್ತೀಚೆಗೆ ಜಮೀನು ತಮ್ಮ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರುವ ರೈತರಿಗೆ ಇದು ಉತ್ತಮ ಅವಕಾಶವಾಗಿದೆ.

ಈ ಅವಕಾಶವನ್ನು ಕಳೆದುಕೊಳ್ಳದೆ ಹಿಂದೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಮತ್ತು ಸರ್ಕಾರದಿಂದ ನೀಡಲಾಗುವ ₹6000 ಆರ್ಥಿಕ ನೆರವನ್ನು ಪಡೆಯಿರಿ.

 

 

Leave a Comment