KEA Recruitment 2026: ಕರ್ನಾಟಕ ಕೃಷಿ ಇಲಾಖೆಯಲ್ಲಿ 890 ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ 1.3 ಲಕ್ಷದವರೆಗೆ ಸಂಬಳ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸುವ ಹಂತಗಳ ಸಂಪೂರ್ಣ ಮಾಹಿತಿ ಇಲ್ಲಿದೆ ಇಂದೆ ಅಪ್ಲೈ ಮಾಡಿ.
ನೇಮಕಾತಿಯ ಮುಖ್ಯ ಅಂಶಗಳು
- ಒಟ್ಟು ಹುದ್ದೆಗಳು: 890(AO – 121 , AAO – 769).
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 10 ಮೇ 2026
- ಪರೀಕ್ಷಾ ದಿನಾಂಕ: 6 ಮತ್ತು 7 ಜೂನ್ 2026
- ಉದ್ಯೋಗ ಸ್ಥಳ: ಕರ್ನಾಟಕದಾದ್ಯಂತ.
ಬೆಂಗಳೂರು: ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಕೃಷಿ ಪದವೀಧರರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಬರೋಬ್ಬರಿ 890 ಕೃಷಿ ಅಧಿಕಾರಿ(AO) ಮತ್ತು ಸಹಾಯಕ ಕೃಷಿ ಅಧಿಕಾರಿ(AAO) ಹುದ್ದೆಗಳ ಬರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಹಲವು ದಿನಗಳಿಂದ ಉದ್ಯೋಗಕ್ಕಾಗಿ ಕಾಯುತ್ತಿದ್ದ ಯುವಕರಿಗೆ ಇದು ಸುವರ್ಣ ಅವಕಾಶ ಕೇವಲ ಡಿಗ್ರಿ ಮುಗಿಸಿ ಮನೆಯಲ್ಲಿ ಕುಳಿತಿದ್ದರೆ ಸಾಲದು ಅಧಿಕಾರಿ ದರ್ಜೆಯ ಈ ಕೆಲಸಕ್ಕೆ ಹಿಂದೆ ತಯಾರಿ ಆರಂಭಿಸಿ, ಈ ಹುದ್ದೆಗಳಿಗೆ ಆಯ್ಕೆಯಾದವರಿಗೆ ಸಿಗುವ ಸಂಬಳ ಕೇಳಿದರೆ ನೀವು ಅಚ್ಚರಿ ಪಡುತ್ತಿರಿ ತಿಂಗಳಿಗೆ 69000 ರಿಂದ 1.34 ಲಕ್ಷದವರೆಗೆ ವೇತನ ಸಿಗಲಿದೆ ಈ ನೇಮಕಾತಿಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಯಾರೆಲ್ಲ ಅರ್ಜಿ ಸಲ್ಲಿಸಬಹುದು? (ಅರ್ಹತೆಗಳು)
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನೀವು ಕೇವಲ ಪದವೀಧರರಾಗಿದ್ದರೆ ಸಾಲದು. ಕೃಷಿ ವಿಷಯದಲ್ಲಿ ವಿಶೇಷ ಪರಿಣಿತಿ ಹೊಂದಿರಬೇಕು.
- ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಅಗ್ರಿಕಲ್ಚರ್ (B.sc Agriculture )ಅಥವಾ ಬಿಇ /ಬಿ ಟೆಕ್ (ಕೃಷಿ ಸಂಬಂಧಿತ ವಿಷಯಗಳಲ್ಲಿ) ಪೂರ್ಣಗೊಳಿಸಿರಬೇಕು.
- ವಯೋಮಿತಿ: ಕನಿಷ್ಠ 21 ವರ್ಷ ತುಂಬಿರಬೇಕು ಸಾಮಾನ್ಯ ವರ್ಗದವರಿಗೆ 40 ವರ್ಷ ಗರಿಷ್ಠ ಮಿತಿ ಇದೆ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಪರೀಕ್ಷೆ ಮತ್ತು ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಇದು ಕೇವಲ ಸಂದರ್ಶನ ಮೂಲಕ ನಡೆಯುವ ನೇಮಕಾತಿ ಅಲ್ಲ ಇಲ್ಲಿ ನಿಮ್ಮ ಬುದ್ಧಿವಂತಿಕೆಯೇ ಮಾನದಂಡ.
- ಸ್ಪರ್ಧಾತ್ಮಕ ಪರೀಕ್ಷೆ: ಆಫ್ಲೈನ್ ಓ ಎಂ ಆರ್ ಮಾದರಿಯಲ್ಲಿ ಪೇಪರ್ 1 ಮತ್ತು ಪೇಪರ್ 2 ನಡೆಯಲಿದೆ. (ಒಟ್ಟು 300 ಅಂಕಗಳು)
- ನೆನಪಿಡಿ: ತಪ್ಪು ಉತ್ತರ ನೀಡಿದರೆ ನೆಗೆಟಿವ್ ಮಾರ್ಕ್ಸ್ ಇರುತ್ತದೆ ಹಾಗಾಗಿ ಪರೀಕ್ಷೆ ಬರೆಯುವಾಗ ಎಚ್ಚರಿಕೆ ಅಗತ್ಯ.
- ದಾಖಲೆ ಪರಿಶೀಲನೆ ಮತ್ತು ಸಂದರ್ಶನ: ಪರೀಕ್ಷೆಯಲ್ಲಿ ಪಾಸಾದವರಿಗೆ ಮುಂದಿನ ದಿನ ಹಂತದ ಪ್ರಕ್ರಿಯೆ ನಡೆಯಲಿದೆ.
ಅರ್ಜಿ ಸಲ್ಲಿಸಲು ಮೇ ಹತ್ತರವರೆಗೆ ಸಮಯವಿದೆ ಎಂದು ಕಾಯಬೇಡಿ ಕೆಇಎ ಸರ್ವರ್ ಅಂತಿಮ ದಿನಗಳಲ್ಲಿ ಬಹಳಷ್ಟು ಸ್ಲೋ ಆಗುವ ಸಾಧ್ಯತೆ ಇರುತ್ತದೆ ಇಂದೆ ಅರ್ಜಿ ಸಲ್ಲಿಸಿ ನಿಶ್ಚಿಂತರಾಗಿ. ಜೂನ್ ತಿಂಗಳಲ್ಲಿ ಪರೀಕ್ಷೆ ಇರುವುದರಿಂದ ಕೈಯಲ್ಲಿ ಕೇವಲ 50 ದಿನಗಳ ಕಾಲಾವಕಾಶವೇ ಇದೆ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು ಯಶಸ್ಸಿನ ಮೊದಲ ಮೆಟ್ಟಿಲು. ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಚಾಲ್ತಿಯಲ್ಲಿವೆ ಎಂದು ಪರಿಶೀಲಿಸಿಕೊಳ್ಳಿ
ಅರ್ಜಿ ಸಲ್ಲಿಸುವ ವಿಧಾನ (How to Apply )
- ಮೊದಲು KEA ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
- ಅಲ್ಲಿ ಕೃಷಿ ಇಲಾಖೆ ನೇಮಕಾತಿ 2026 ಲಿಂಕ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ವೈಯಕ್ತಿಕ ವಿವರ ಫೋಟೋ ಮತ್ತು ಸಹಿ ಯನ್ನು ಅಪ್ಲೋಡ್ ಮಾಡಿ.
- ಕೆಟಗರಿ ಆದರದ ಮೇಲೆ ನಿಗದಿತ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ,( general/obc 750 , sc/st 500 )
- ಅರ್ಜಿ ಸಬ್ಮಿಟ್ ಮಾಡಿದ ನಂತರ ಆ ಫಾರ್ಮ್ ಅನ್ನು ಪ್ರಿಂಟ್ ತೆಗೆದುಕೊಳ್ಳಲು ಮರೆಯಬೇಡಿ.
ಪ್ರಮುಖ ದಿನಾಂಕಗಳು ( important dates)
- ಅರ್ಜಿ ಆರಂಭ 19-4-2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10-5-2026
- ಶುಲ್ಕ ಪಾವತಿಸಲು ಕೊನೆಯ ದಿನಾಂಕ 12-5-2026
- ಪರೀಕ್ಷ ದಿನಾಂಕ ಜೂನ್ 6 ಮತ್ತು 7 2026
ಇದು ಕರ್ನಾಟಕ ಸರ್ಕಾರದ ನೇಮಕಾತಿಯಾಗಿತ್ತು ಅಭ್ಯರ್ಥಿಗಳಿಗೆ ಕನ್ನಡ ಭಾಷೆ ಓದಲು ಮತ್ತು ಬರೆಯಲು ತಿಳಿದಿರಬೇಕು ಕರ್ನಾಟಕದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಇರುತ್ತದೆ.
ಕೆ ಇ ಎ ಅಧಿಕೃತ ಅಧಿಸಚನೆ ಅಂತೆ ತಪ್ಪು ಉತ್ತರಗಳಿಗೆ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ ಆದ್ದರಿಂದ ನಿಖರತೆ ಮುಖ್ಯ.
ಕಳೆದ ಎರಡು ವರ್ಷಗಳಲ್ಲಿ ಕೃಷಿ ಇಲಾಖೆಯಲ್ಲಿ ಇಷ್ಟು ದೊಡ್ಡ ಮಟ್ಟದ ನೇಮಕಾತಿ ನಡೆದಿರಲಿಲ್ಲ ಕೃಷಿ ಅಧಿಕಾರಿ ಹುದ್ದೆಯ ಸಮಾಜದಲ್ಲಿ ಗೌರವದ ಜೊತೆಗೆ ಉತ್ತಮ ಜೀವನೋಪಾಯವನ್ನು ನೀಡುತ್ತದೆ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ 258 ಹುದ್ದೆಗಳನ್ನು ಮೀಸಲಿಟ್ಟಿರುವುದು ಆ ಭಾಗದ ಅಭ್ಯರ್ಥಿಗಳಿಗೆ ಹೆಚ್ಚಿನ ಲಾಭ ತರಲಿದೆ ಸ್ಪರ್ಧೆ ಕಠಿಣವಾಗಿರುವುದರಿಂದ ಕೇವಲ ಅಕಾಡೆಮಿಕ್ ಪುಸ್ತಕಗಳನ್ನು ಅಷ್ಟೇ ಓದದೆ ಪ್ರಚಲಿತ ವಿದ್ಯಮಾನಗಳ ಮೇಲು ಹಿಡಿತ ಸಾಧಿಸಿ ನಿಮ್ಮ ತಯಾರಿ ಹಿಂದೆ ಶುರುವಾಗಲಿ.