Tumkur District Court Recruitment 2026: ತುಮಕೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ 24 ಶೀಘ್ರ ಲಿಪಿಗಾರ (stenographer) ಹಾಗೂ ಬೆರಳಚ್ಚುಗಾರ (typist) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ವಿದ್ಯಾರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ ಹಾಗೂ ಆನ್ಲೈನ್ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿ ಇಲ್ಲಿದೆ.
- ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ಒಟ್ಟು 24 ಹುದ್ದೆಗಳ ನೇಮಕಾತಿ
- ಮಾಸಿಕ ವೇತನ ₹34,100 ರಿಂದ ₹83,700 ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು
- ಅರ್ಜಿ ಸಲ್ಲಿಕೆ ಜುಲೈ 25 ರಿಂದ ಆರಂಭ: ಆಗಸ್ಟ್ 24 ,2026 ಕೊನೆಯ ದಿನಾಂಕ.
ತುಮಕೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 2026 ನೇ ಸಾಲಿನ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಿಸಿದೆ. ಖಾಲಿ ಇರುವ ಒಟ್ಟು 24 ಶೀಘ್ರಲಿಪಿಗಾರ ಗ್ರೇಡ್-||| (stenographer) ಹಾಗೂ ಬೆರಳಚ್ಚುಗಾರ (typist) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ತುಮಕೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ಮೂಲಕ 2020ರ ಆಗಸ್ಟ್ 24ರ ಒಳಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ವಿದ್ಯಾರ್ಹತೆ, ವಯೋಮಿತಿ, ವೇತನ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
Tumkur District Court Recruitment 2026: ಹುದ್ದೆಗಳ ವರ್ಗೀಕರಣ
- ಶೀಘ್ರ ಲಿಪಿ ಗಾರ ಗ್ರೇಡ್-||| : 10 ಹುದ್ದೆಗಳು
- ಬೆರಳಚ್ಚುಗಾರ : 14 ಹುದ್ದೆಗಳು
ವೇತನ ಶ್ರೇಣಿ
- ಶೀಘ್ರಲಿಪಿಗಾರ : ₹44,425 ರಿಂದ ₹83,700
- ಬೆರಳಚ್ಚುಗಾರ : ₹34,100 ರಿಂದ ₹67,600
Tumkur District Court Recruitment 2026 : ಶೈಕ್ಷಣಿಕ ವಿದ್ಯಾರ್ಹತೆ
1. ಶೀಘ್ರ ಲಿಪಿ ಗಾರ ಗ್ರೇಡ್-||| (stenographer)
- ಸಾಮಾನ್ಯ ವಿದ್ಯಾರ್ಹತೆ : ದ್ವಿತೀಯ ಪಿಯುಸಿ (12th/2nd PUC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮೂರು ವರ್ಷಗಳ ಡಿಪ್ಲೋಮೋ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ತಾಂತ್ರಿಕ ವಿದ್ಯಾರ್ಹತೆ : ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಹಾಗೂ ಆಂಗ್ಲ (English) ಭಾಷೆಯ ಹಿರಿಯ ಶ್ರೇಣಿ ಬೆರಳಚ್ಚು ಮತ್ತು ಹಿರಿಯ ಶ್ರೇಣಿ ಶೀಘ್ರ ಲಿಪಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
2. ಬೆರಳಚ್ಚುಗಾರ (typist)
- ಸಾಮಾನ್ಯ ವಿದ್ಯಾರ್ಹತೆ : ದ್ವಿತೀಯ ಪಿಯುಸಿ (12th/2nd PUC) ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮೂರು ವರ್ಷಗಳ ಡಿಪ್ಲೋಮೋ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
- ತಾಂತ್ರಿಕ ವಿದ್ಯಾರ್ಹತೆ : ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸುವ ಕನ್ನಡ ಹಾಗೂ ಆಂಗ್ಲ ಭಾಷೆಯ ಹಿರಿಯ ಶ್ರೇಣಿ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
- ಗಮನಿಸಿ : 12ನೇ ತರಗತಿಯ ಅಂಕಗಳು (grade ) ಗ್ರೇಡ್ ನಲ್ಲಿದ್ದರೆ, ಅದನ್ನು ಅಂಕಗಳಾಗಿ ಪರಿವರ್ತಿಸಿ ಪಡೆದ ಅಂಕಪಟ್ಟಿಗಳನ್ನು ಪಡೆದಿಟ್ಟುಕೊಳ್ಳಬೇಕು.
Tumkur District Court Recruitment 2026: ವಯೋಮಿತಿ ವಿವರ
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.
5 ವರ್ಷಗಳ ಸಡಿಲಿಕೆ ಸೇರಿ ಗರಿಷ್ಠ ವಯೋಮಿತಿ
- ಸಾಮಾನ್ಯ ವರ್ಗ(general merit) : 40 ವರ್ಷಗಳು
- ಪ್ರವರ್ಗ 2A,2B,3A,3B : 43 ವರ್ಷಗಳು
- ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಪ್ರವರ್ಗ- 1 : 45 ವರ್ಷಗಳು
ಇದನ್ನು ಓದಿ
ಅರ್ಜಿ ಶುಲ್ಕ ಮತ್ತು ಪಾವತಿ ವಿಧಾನ (application fees)
- ಸಾಮಾನ್ಯ ವರ್ಗ 2A,2B,3A,3B ಅಭ್ಯರ್ಥಿಗಳಿಗೆ : ₹200
- SC, ST/ಪ್ರವರ್ಗ-1/ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಕ ನೀಡಲಾಗಿದೆ (ಉಚಿತ)
- ಪಾವತಿ ವಿಧಾನ : ಶುಲ್ಕವನ್ನು ನ್ಯಾಯಾಲಯದ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ State Bank collect ಲಿಂಕ್ ಮೂಲಕ net banking/credit card/debit card/upi/QR code ಮೂಲಕ ಮಾತ್ರ ಪಾವತಿಸಬೇಕು.(Demand draft, postal order or challan ಪರಿಗಣಿಸಲಾಗುವುದಿಲ್ಲ)
Tumkur District Court Recruitment 2026 : ಆಯ್ಕೆ ಪ್ರಕ್ರಿಯೆ
ನೇರ ನೇಮಕಾತಿಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದ್ದು, ಪ್ರಕ್ರಿಯೆಯು ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ.
1. ಕೌಶಲ್ಯ ಪರೀಕ್ಷೆ (skill test)
- ಶೀಘ್ರಲಿಪಿಗಾರ : 1 ನಿಮಿಷಕ್ಕೆ 120 ಪದಗಳ ದರದಲ್ಲಿ 5 ನಿಮಿಷಗಳ ಕನ್ನಡ ಮತ್ತು ಇಂಗ್ಲಿಷ್ ಉಕ್ತ ಲೇಖನ (dictation) ನೀಡಲಾಗುವುದು. ಅದನ್ನು 45 ನಿಮಿಷಗಳಲ್ಲಿ ವಿಶೇಷ ಗಣಕಯಂತ್ರ ತಂತ್ರಾಂಶದಲ್ಲಿ ಬೆರಳಚ್ಚು ಮಾಡಬೇಕು.
- ಬೆರಳಚ್ಚುಗಾರ : 15 ನಿಮಿಷಗಳ ಕನ್ನಡ ಮತ್ತು 15 ನಿಮಿಷಗಳ ಇಂಗ್ಲಿಷ್ ಉಕ್ತಲೇಖನವನ್ನು ಗಣಕಯಂತ್ರದಲ್ಲಿ ಬೆರಳಚ್ಚು ಮಾಡಬೇಕು.
- ಕನ್ನಡ ಮತ್ತು ಇಂಗ್ಲಿಷ್ ಭಾಷಾ ಕೌಶಲ ಪರೀಕ್ಷೆಗಳಿಗೆ ತಲಾ 100 ಅಂಕಗಳನ್ನು ನಿಗದಿಪಡಿಸಲಾಗಿದ್ದು, ಉತ್ತೀರ್ಣರಾಗಲು ಕನಿಷ್ಠ 50 ಅಂಕಗಳನ್ನು ಪಡೆಯುವುದು ಕಡ್ಡಾಯ.
2. ಸಂದರ್ಶನ (interview)
- ಕೌಶಲ ಪರೀಕ್ಷೆ ಹಾಗೂ ನಿಗದಿತ ವಿದ್ಯಾರ್ಹತೆಯ ಅಂಕಗಳ ಆಧಾರದ ಮೇಲೆ ಮೀಸಲಾತಿಗ ಅನುಗುಣವಾಗಿ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು.
- ಸಂದರ್ಶನವು 5 ಅಂಕಗಳನ್ನು ಒಳಗೊಂಡಿರುತ್ತದೆ.
ಇದನ್ನು ಓದಿ
Tumkur District Court Recruitment 2026 : : ಅಗತ್ಯವಿರುವ ಪ್ರಮುಖ ದಾಖಲೆಗಳು (required documents)
ಅರ್ಜಿ ಸಲ್ಲಿಕೆ ಮತ್ತು ದಾಖಲೆ ಪರಿಶೀಲನೆಯ ಸಮಯದಲ್ಲಿ ಕೆಳಗಿನ ಮೂಲ ದಾಖಲೆಗಳನ್ನು ಹೊಂದಿರಬೇಕು.
- ಆನ್ಲೈನ್ ಅರ್ಜಿ ಪ್ರತಿಯ ಮುದ್ರಿತ ಪ್ರತಿ (print out)
- ಶುಲ್ಕ ಪಾವತಿಸಿದ ರಶೀದಿ ಪ್ರತಿ
- SSLC/ತತ್ಸಮಾನ ಅಂಕಪಟ್ಟಿ
- ದ್ವಿತೀಯ ಪಿಯುಸಿ/ಮೂರು ವರ್ಷದ ಡಿಪ್ಲೋಮಾ ಅಂಕಪಟ್ಟಿ
- ಹಿರಿಯ ಶ್ರೇಣಿ ಬೆರಳಚ್ಚು/ಶೀಘ್ರ ಲಿಪಿ ಅಂಕಪಟ್ಟಿಗಳು
- ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ (ನಮೂನೆ- ಡಿ /ಇ /ಎಫ್.)
- ಗ್ರಾಮೀಣ/ಮಾಜಿ ಸೈನಿಕ/ಅಂಗವಿಕಲ ಮೀಸಲಾತಿ ಪ್ರಮಾಣ ಪತ್ರಗಳು (ಅನ್ವಯಿಸಿದಲ್ಲಿ)
- ಶಾಲಾ ನಡತೆ ಪ್ರಮಾಣ ಪತ್ರ ಮತ್ತು ಇಬ್ಬರು ಗಣ್ಯ ವ್ಯಕ್ತಿಗಳಿಂದ ಪಡೆದ ನಡತೆ ಪ್ರಮಾಣ ಪತ್ರಗಳು
- ಮೂಲ ಗುರುತಿನ ಚೀಟಿ (Aadhar/voter ID/Pan Card/driving licence)
Tumkur District Court Recruitment 2026 : ಅರ್ಜಿ ಸಲ್ಲಿಸುವುದು ಹೇಗೆ?
Step 1. ಮೊದಲು ತುಮಕೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
https://tumakuru.dcourts.gov.in/
Step 2. ಮುಖಪುಟದಲ್ಲಿ ಲಭ್ಯವಿರುವ Recruitment ವಿಭಾಗಕ್ಕೆ ಹೋಗಿ, ಅಧಿಸೂಚನೆಯನ್ನು ವಿವರವಾಗಿ ಓದಿಕೊಳ್ಳಿ.
Step 3. ನೇಮಕಾತಿಯ Apply Online ಲಿಂಕ್ ಮೇಲೆ ಕ್ಲಿಕ್ ಮಾಡಿ.
Step 4. ನಿಮ್ಮ ಹೆಸರು, ಜನ್ಮ ದಿನಾಂಕ, ಶೈಕ್ಷಣಿಕ ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಸೇರಿದಂತೆ ಅಗತ್ಯ ವಿವರಗಳನ್ನು ಸರಿಯಾಗಿ ಬರ್ತಿ ಮಾಡಿ.
Step 5. ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಕಪ್ಪು ಬಾಲ್ ಪಾಯಿಂಟ್ ಪೆನ್ನಲ್ಲಿ ಮಾಡಿದ ಸಹಿ ಅನ್ನು ಅಪ್ಲೋಡ್ ಮಾಡಿ.
Step 6. ನಿಗದಿತ ಅರ್ಜಿ ಶುಲ್ಕವನ್ನು SB collect ಮೂಲಕ ಪಾವತಿಸಿ e -verify ಮಾಡಿ.
Step 7. ಅರ್ಜಿ ವಿವರಗಳನ್ನು ಪರಿಶೀಲಿಸಿ submit ಬಟನ್ ಕ್ಲಿಕ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿಯ ಪ್ರಿಂಟ್ ಔಟ್ ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.
ಇದನ್ನು ಓದಿ
Tumkur District Court Recruitment 2026 : ನ್ಯಾಯಾಲಯದಲ್ಲಿ ಕೆಲಸಕ್ಕೆ ಸೇರುವ ಅಭ್ಯರ್ಥಿಗಳಿಗೆ ಸಲಹೆ
- ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕೆಲಸ ಮಾಡಿ-ನ್ಯಾಯಾಂಗದಲ್ಲಿ ಪ್ರಾಮಾಣಿಕತೆ ಅತ್ಯಂತ ಮುಖ್ಯ.
- ಕಾನೂನುಗಳ ಬಗ್ಗೆ ನಿರಂತರವಾಗಿ ಕಲಿಯಿರಿ-ಹೊಸ ಕಾನೂನುಗಳು ಮತ್ತು ನ್ಯಾಯಾಲಯದ ತೀರ್ಪುಗಳ ಬಗ್ಗೆ ಸದಾ ಮಾಹಿತಿ ಹೊಂದಿರಿ.
- ಸಮಯ ಪಾಲನೆ ಮಾಡಿ-ನ್ಯಾಯಾಲಯದ ಕಾರ್ಯಗಳಲ್ಲಿ ಸಮಯಕ್ಕೆ ಹೆಚ್ಚಿನ ಮಹತ್ವವಿದೆ
- ಗೌಪ್ಯತೆಯನ್ನು ಕಾಪಾಡಿ-ಪ್ರಕರಣಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅನಗತ್ಯವಾಗಿ ಯಾರೊಂದಿಗೂ ಹಂಚಿಕೊಳ್ಳಬೇಡಿ.
- ಗೌರವಯುತ ವರ್ತನೆ ಬೆಳೆಸಿಕೊಳ್ಳಿ-ನ್ಯಾಯಾಧೀಶರು, ವಕೀಲರು, ಸಿಬ್ಬಂದಿ ಮತ್ತು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ.
- ದಾಖಲೆಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ-ನ್ಯಾಯಾಲಯದ ದಾಖಲೆಗಳು ಅತ್ಯಂತ ಪ್ರಮುಖವಾಗಿರುವುದರಿಂದ ಅವುಗಳನ್ನು ಜಾಗರೂಕತೆಯಿಂದ ನೋಡಿಕೊಳ್ಳಿ.
- ತಂತ್ರಜ್ಞಾನವನ್ನು ಬಳಸಲು ಕಲಿಯಿರಿ- ಇ-ಕೋರ್ಟ್ ವ್ಯವಸ್ಥೆ ಹಾಗೂ ಕಂಪ್ಯೂಟರ್ ಬಳಕೆಯಲ್ಲಿ ಪರಿಣತಿ ಹೊಂದಿರಿ.
- ಸಾರ್ವಜನಿಕ ಸೇವೆಯ ಮನೋಭಾವ ಇರಲಿ- ನ್ಯಾಯಾಲಯದ ಕೆಲಸವು ಕೇವಲ ಉದ್ಯೋಗವಲ್ಲ ಸಮಾಜಕ್ಕೆ ಸೇವೆ ಮಾಡುವ ಜವಾಬ್ದಾರಿಯು ಆಗಿದೆ.
ಸಂಕ್ಷಿಪ್ತ ಸಲಹೆ: ಪ್ರಾಮಾಣಿಕತೆ, ಸಮಯ ಪಾಲನೆ, ಕಾನೂನಿನ ಜ್ಞಾನ, ಗೌಪ್ಯತೆ ಮತ್ತು ಸಾರ್ವಜನಿಕ ಸೇವೆಯ ಮನೋಭಾವದೊಂದಿಗೆ ಕೆಲಸ ಮಾಡಿದರೆ ಜಿಲ್ಲಾ ನ್ಯಾಯಾಲಯದಲ್ಲಿ ಉತ್ತಮ ಉದ್ಯೋಗಿಯಾಗಿ ಬೆಳೆಯಬಹುದು.
ಇದನ್ನು ಓದಿ
ISRO Recruitment 2026 : 92 ವಿಜ್ಞಾನಿ ಹಾಗೂ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, Important update.