Free House Scheme : ಸ್ವಂತ ಮನೆಯ ಕನಸಿಗೆ “ನನ್ನ ಮನೆ ಯೋಜನೆ”. ಯಾರು ಈ ಯೋಜನೆಗೆ ಅರ್ಹರು? ಇಷ್ಟು ಸಹಾಯಧನ ಸಿಗುತ್ತೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಈ ಎಲ್ಲಾ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.
ಕರ್ನಾಟಕ ಸರ್ಕಾರದ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ , “ನನ್ನ ಮನೆ” ಯೋಜನೆಯು ಆರ್ಥಿಕವಾಗಿ ಹಿಂದುಳಿದ ವರ್ಗಗಳು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಸ್ವಂತ ಮನೆ ಪಡೆಯುವ ಕನಸನ್ನು ನನಸಾಗಿಸುವ ಉದ್ದೇಶ ಹೊಂದಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ವಸತಿ ರಹಿತರಿಗೆ ಸಹಾಯಧನ ನೀಡಿ ಮನೆ ನಿರ್ಮಾಣಕ್ಕೆ ಪ್ರೋತ್ಸಾಹಿಸುವುದು ಈ ಯೋಜನೆಯ ಮುಖ್ಯ ಗುರಿ.
ಇತ್ತೀಚಿನ ಬಜೆಟ್ ನಲ್ಲಿ ಸಹಾಯಧನ ಮೊತ್ತವನ್ನು ಹೆಚ್ಚಿಸಲಾಗಿದ್ದು ಅರ್ಹ ಕುಟುಂಬಗಳಿಗೆ ಇನ್ನಷ್ಟು ಲಾಭ ದೊರಕುವಂತಾಗಿದೆ.
ಇದನ್ನು ಓದಿ
Free House Scheme : ಅರ್ಹತಾ ಮಾನದಂಡಗಳು ?
ಯೋಜನೆಯ ಅಡಿ ಅರ್ಜಿ ಸಲ್ಲಿಸಲು ಕೆಲವು ಮುಖ್ಯ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
- ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರು ರಾಜ್ಯದ ಯಾವುದೇ ಭಾಗದಲ್ಲಿ ಸ್ವಂತ ಪಕ್ಕ ಮನೆ ಹೊಂದಿರಬಾರದು.
- ವಸತಿ ರಹಿತರು ಅಥವಾ ಶಿಥಿಲ ಮನೆಯಲ್ಲಿ ವಾಸಿಸುತ್ತಿರುವವರಿಗೆ ಆದ್ಯತೆ ನೀಡಲಾಗುತ್ತದೆ.
- ಈ ಹಿಂದೆ ಯಾವುದೇ ಸರ್ಕಾರಿ ವಸತಿ ಯೋಜನೆ ಲಾಭ ಪಡೆದಿರಬಾರದು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಧವೆಯರು ಅಂಗವಿಕಲರು ಮತ್ತು ಹಿರಿಯ ನಾಗರಿಕರಿಗೆ ವಿಶೇಷ ಆದ್ಯತೆ ಇದೆ.
Free House Scheme : ಮನೆ ನಿರ್ಮಾಣಕ್ಕೆ ಸಿಗುವ ಸಹಾಯಧನದ ಮೊತ್ತ ?
ಯೋಜನೆ ಅಡಿ ಸಹಾಯಧನವು ಪ್ರದೇಶ ಮತ್ತು ವರ್ಗಕ್ಕೆ ಅನುಗುಣವಾಗಿ ಬದಲಾಗುತ್ತದೆ ಇತ್ತೀಚಿನ ಬಜೆಟ್ ನಲ್ಲಿ ಮೊತ್ತವನ್ನು ಹೆಚ್ಚಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ :
ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 1.20 ಲಕ್ಷದಿಂದ 2 ಲಕ್ಷ ರೂಪಾಯಿವರೆಗೆ ಸಹಾಯಧನ ಲಭ್ಯವಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 2 ಲಕ್ಷದಿಂದ 3 ಲಕ್ಷ ರೂಪಾಯಿವರೆಗೆ ಹೆಚ್ಚಿನ ನೆರವು ನೀಡಲಾಗುತ್ತದೆ.
ಸ್ವಂತ ಜಾಗದಲ್ಲಿ ಮನೆ ನಿರ್ಮಿಸಿಕೊಳ್ಳುವ ಮಾದರಿ ಅಡಿ ಈ ಹಣ ನೀಡಲಾಗುತ್ತದೆ.
ನಗರ ಪ್ರದೇಶದಲ್ಲಿ :
ಕಡಿಮೆ ಆದಾಯದ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸುಮಾರು 2 ಲಕ್ಷದಿಂದ 3 ಲಕ್ಷ ರೂಪಾಯಿವರೆಗೆ ಆರ್ಥಿಕ ನೆರವು ಅಥವಾ ಸಾಲದ ಮೇಲಿನ ಬಡ್ಡಿ ರಿಯಾಯಿತಿ ಲಭ್ಯವಿದೆ.
ಕೆಲವು ಯೋಜನೆಗಳಡಿ ಕೈಗೆಟುಕುವ ದರದಲ್ಲಿ ಫ್ಲಾಟ್ ಗಳು ಅಥವಾ ನಿವೇಶನಗಳು ಹಂಚಿಕೆಯಾಗುತ್ತದೆ.
ಸಹಾಯಧನವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಜಮಾ ಮಾಡಲಾಗುತ್ತದೆ.
ಇದನ್ನು ಓದಿ
Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?
Free House Scheme : ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು?
ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳು ಬೇಕಾಗುತ್ತದೆ.
- ಆಧಾರ್ ಕಾರ್ಡ್ (Aadhar card)
- ರೇಷನ್ ಕಾರ್ಡ್ (ration card))
- ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ ( caste and income certificate
- ನಿವಾಸ ಪ್ರಮಾಣ ಪತ್ರ
- ಬ್ಯಾಂಕ್ ಖಾತೆ ವಿವರಗಳು (bank passbook)
- ಇತ್ತೀಚಿನ ಭಾವಚಿತ್ರ(recent photo).
ಸ್ವಂತ ಜಾಗ ಇದ್ದರೆ ಅದರ ಹಕ್ಕು ಪತ್ರ ಅಥವಾ ಖಾತ ದಾಖಲೆಗಳನ್ನು ಸಹ ಸಲ್ಲಿಸಬೇಕಾಗುತ್ತದೆ.
Free House Scheme : ಅರ್ಜಿ ಸಲ್ಲಿಸುವ ವಿಧಾನ ?
ಅರ್ಹರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ರಾಜೀವ್ ಗಾಂಧಿ ವಸತಿ ನಿಗಮದ ಅಧಿಕೃತ ಪೋರ್ಟಲ್ ನಲ್ಲಿ ನೋಂದಾಯಿಸಿ ವಿವರಗಳನ್ನು ಭರ್ತಿ ಮಾಡಬೇಕು.
ಹತ್ತಿರದ ಗ್ರಾಮ ಓನ್ ಕೇಂದ್ರಗಳಲ್ಲಿ ಸಹಾಯ ಪಡೆದು ಅರ್ಜಿ ಸಲ್ಲಿಸುವ ಅವಕಾಶವಿದೆ.
ನಗರ ಪ್ರದೇಶದವರು ನಗರಸಭೆ ಅಥವಾ ಪುರಸಭೆ ಕಚೇರಿಯಲ್ಲಿ ಗ್ರಾಮೀಣ ಪ್ರದೇಶದವರು ಗ್ರಾಮ ಪಂಚಾಯಿತಿಯಲ್ಲಿ ವಿಚಾರಿಸಬಹುದು.
ಅರ್ಜಿ ಸಲ್ಲಿಸಲು ಮತ್ತು ಈ ಆಶ್ರಯ ಯೋಜನೆಯ ಮಾಹಿತಿಯನ್ನು ಸಂಪೂರ್ಣವಾಗಿ ಪಡೆಯಲು ಈ ಕೆಳಗೆ ನೀಡಿರುವ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ಮಾಡಿ.
https://ashraya.karnataka.gov.in/
ಇದನ್ನು ಓದಿ
Free House Scheme : ಹಣ ಬಿಡುಗಡೆ ಮಾಡುವ ವಿಧಾನ ?
ಸಹಾಯಧನವನ್ನು ನಾಲ್ಕು ಹಂತಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
- ಮೊದಲ ಕಂತು ಮನೆಯ ಅಡಿಪಾಯ ಪೂರ್ಣಗೊಂಡಾಗ.
- ಎರಡನೇ ಕಂತು ಗೋಡೆಗಳ ನಿರ್ಮಾಣ ಮುಗಿದಾಗ.
- ಮೂರನೇ ಕಂತು ಚಾವಣಿ ಹಾಕಿದ ನಂತರ.
- ಅಂತಿಮ ಕಂತು ಮನೆ ಸಂಪೂರ್ಣವಾಗಿ ಪೂರ್ಣಗೊಂಡು ಫೋಟೋಗಳನ್ನು ಅಪ್ಲೋಡ್ ಮಾಡಿದ ನಂತರ ನೀಡಲಾಗುತ್ತದೆ.
- ಪ್ರತಿ ಹಂತದಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ.
Free House Scheme : ಈ ಯೋಜನೆಯ ಪ್ರಯೋಜನಗಳು?
- ಆರ್ಥಿಕವಾಗಿ ದುರ್ಬಲ ಮತ್ತು ಬಡ ಕುಟುಂಬಗಳಿಗೆ ಸ್ವಂತ ಮನೆ ನಿರ್ಮಿಸಲು ಸಹಾಯಧನ ಒದಗಿಸಲಾಗುತ್ತದೆ.
- ಮನೆ ಇಲ್ಲದ ಅರ್ಹ ಕುಟುಂಬಗಳಿಗೆ ಕಡಿಮೆ ವೆಚ್ಚದಲ್ಲಿ ಶಾಶ್ವತ ಮನೆ ದೊರೆಯುವ ಅವಕಾಶ ಸಿಗುತ್ತದೆ.
- ಗ್ರಾಮೀಣ ಮತ್ತು ನಗರ ಪ್ರದೇಶಗಳ ಅರ್ಹ ಫಲಾನುಭವಿಗಳಿಗೆ ಯೋಜನೆ ಅಡಿ ಮನೆಗಳನ್ನು ಮಂಜೂರು ಮಾಡಲಾಗುತ್ತದೆ.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಇತರೆ ಅರ್ಹ ಬಡ ಕುಟುಂಬಗಳಿಗೆ ಆದ್ಯತೆ ನೀಡಲಾಗುತ್ತದೆ.
- ಸುರಕ್ಷಿತ ಮತ್ತು ಉತ್ತಮ ಗುಣಮಟ್ಟದ ವಾಸಸ್ಥಳದಿಂದ ಕುಟುಂಬದ ಜೀವನ ಮಟ್ಟ ಸುಧಾರಿಸುತ್ತದೆ.
- ಕೆಲ ಯೋಜನೆಗಳಲ್ಲಿ ಸರ್ಕಾರದಿಂದ ನಿಗದಿತ ಪ್ರಮಾಣದ ಆರ್ಥಿಕ ಸಹಾಯಧನ ನೀಡಲಾಗುತ್ತದೆ. ಉಳಿದ ಮೊತ್ತವನ್ನು ಫಲಾನುಭವಿ ಅಥವಾ ಇತರ ಮೂಲಗಳಿಂದ ಭರಿಸಬಹುದು.
- ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ವಸತಿ ಯೋಜನೆಗಳನ್ನು ಸಮನ್ವಯಗೊಳಿಸಿ ಫಲಾನುಭವಿಗಳಿಗೆ ನೆರವು ನೀಡುವ ಜವಾಬ್ದಾರಿಯನ್ನು ಈ ನಿಗಮ ವಹಿಸುತ್ತದೆ.
- ಸ್ವಂತ ಮನೆ ದೊರಕುವುದರಿದ ಬಾಡಿಗೆ ವೆಚ್ಚ ಕಡಿಮೆಯಾಗುತ್ತದೆ ಮತ್ತು ಕುಟುಂಬದ ಆರ್ಥಿಕ ಸ್ಥಿರತೆ ಹೆಚ್ಚುತ್ತದೆ.
- ಮಹಿಳೆಯರ ಹೆಸರಿನಲ್ಲಿ ಅಥವಾ ಪತಿ-ಪತ್ನಿಯ ಜಂಟಿ ಹೆಸರಿನಲ್ಲಿ ಮನೆ ಮಂಜೂರು ಮಾಡುವುದಕ್ಕೆ ಅನೇಕ ಸಂದರ್ಭಗಳಲ್ಲಿ ಆದ್ಯತೆ ನೀಡಲಾಗುತ್ತದೆ. ಇದರಿಂದ ಮಹಿಳೆಯರ ಆಸ್ತಿ ಹಕ್ಕು ಬಲವಾಗುತ್ತದೆ.
ಈ ಯೋಜನೆಯಿಂದ ಸಾವಿರಾರು ಬಡ ಕುಟುಂಬಗಳು ಶಾಶ್ವತ ವಸತಿ ಪಡೆದು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಅವಕಾಶ ಪಡೆದಿವೆ.
ಇದನ್ನು ಓದಿ
ಇದನ್ನು ಓದಿ