Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?

WhatsAppಫಾಲೋ ಮಾಡಿ

SBI ಮುದ್ರಾ ಲೋನ್ SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ? 

ಭಾರತದಲ್ಲಿ ಸಣ್ಣ ಉದ್ಯಮಗಳು, ಸ್ಟಾರ್ಟ್ ಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಆರ್ಥಿಕ ಬೆಂಬಲ ನೀಡಲು ಕೇಂದ್ರ ಸರ್ಕಾರ ಆರಂಭಿಸಿದ ಅತ್ಯಂತ ಜನಪ್ರಿಯ ಯೋಜನೆಗಳಲ್ಲಿ ಒಂದು ಎಂದರೆ ಪ್ರಧಾನಮಂತ್ರಿ ಮುದ್ರಾ ಯೋಜನೆ(PMMY). ಈ ಯೋಜನೆ ಅಡಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಸೇರಿದಂತೆ ಹಲವು ಬ್ಯಾಂಕ್ಗಳು ಯಾವುದೇ ಕೊಲೆಟರಲ್ ಇಲ್ಲದೆ ಹತ್ತು ಲಕ್ಷ ವರೆಗೆ ಸಾಲ ನೀಡುತ್ತಿದೆ. ವಿಶೇಷವಾಗಿ ಹೊಸ ಉದ್ಯಮ ಆರಂಭಿಸಲು ಬಯಸುವವರಿಗೆ ಅಥವಾ ಈಗಾಗಲೇ ಸಣ್ಣ ವ್ಯಾಪಾರ ನಡೆಸುತ್ತಿರುವವರಿಗೆ ಇದು ದೊಡ್ಡ ಸಹಾಯವಾಗಿದೆ.

ಈ ಲೇಖನದಲ್ಲಿ SBI Mudra Loan ಎಂದರೇನು, ಯಾರು ಪಡೆಯಬಹುದು, ₹10 ಲಕ್ಷದವರೆಗೆ ಸಾಲ ಪಡೆಯುವ ವಿಧಾನ, ಬೇಕಾಗುವ ದಾಖಲೆಗಳು, ಬಡ್ಡಿದರ, ಅರ್ಜಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

SBI ಮುದ್ರಾ ಲೋನ್ ಎಂದರೇನು? 

SBI ಮುದ್ರಾ ಲೋನ್ ಎನ್ನುವುದು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿ ನೀಡಲಾಗುವ ವ್ಯವಹಾರ ಸಾಲವಾಗಿದೆ. ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಿಗಳು ಯಾವುದೇ ಭದ್ರತಾ ಆಸ್ತಿ (Collateral)ನೀಡದೆ ಸಾಲ ಪಡೆಯಬಹುದು.

ಈ ಯೋಜನೆಯ ಮುಖ್ಯ ಉದ್ದೇಶ:

  • ಹೊಸ ಉದ್ಯಮಗಳಿಗೆ ಪ್ರೋತ್ಸಾಹ
  • ಮಹಿಳಾ ಉದ್ಯಮಿಗಳಿಗೆ ಬೆಂಬಲ
  • ಗ್ರಾಮೀಣ ಮತ್ತು ಸಣ್ಣ ವ್ಯಾಪಾರಗಳ ಅಭಿವೃದ್ಧಿ
  • ಉದ್ಯೋಗಾವಕಾಶಗಳ ಸೃಷ್ಟಿ

ಮುದ್ರಾ ಸಾಲದ ಮೂರು ಪ್ರಮುಖ ವಿಭಾಗಗಳು 

ಮುದ್ರಾ ಸಾಲವನ್ನು ವ್ಯವಹಾರದ ಅಗತ್ಯಕ್ಕೆ ಅನುಗುಣವಾಗಿ ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ

SBI ಮುದ್ರಾ ಲೋನ್ 

1.ಶಿಶು (Shishu Loan)

  • ಸಾಲಮಿತಿ: ₹50000 ವರೆಗೆ
  • ಹೊಸ ಸಣ್ಣ ವ್ಯವಹಾರಗಳಿಗೆ

2. ಕಿಶೋರ್ (Kishore Loan)

  • ಸಾಲಮಿತಿ: ₹50000 ರಿಂದ 5 ಲಕ್ಷ
  • ವ್ಯವಹಾರವನ್ನು ವಿಸ್ತರಿಸಲು

3. ತರುಣ್(Tharun Loan)

  • ಸಾಲಮಿತಿ: ₹5 ಲಕ್ಷದಿಂದ ₹10 ಲಕ್ಷ
  • ಸ್ಥಿರವಾಗಿ ನಡೆಯುತ್ತಿರುವ ಉದ್ಯಮಗಳಿಗೆ

₹10 ಲಕ್ಷವರೆಗೆ ಕೊಲೆಟರಲ್ ಇಲ್ಲದೆ ಪಡೆಯಲು ತರುಣ್ ವಿಭಾಗಕ್ಕೆ ಅರ್ಜಿ ಹಾಕಬೇಕು.

PMFME SCHEME 2026 : ಕೇಂದ್ರ ಸರ್ಕಾರದ ರೂ 10 ಲಕ್ಷ ಸಬ್ಸಿಡಿ ಯೋಜನೆ, ಯಾರು ಅರ್ಹರು?

 

ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷ ಸಾಲ ಸಿಗುತ್ತದೆಯೇ? 

ಹೌದು.SBI ಮುದ್ರಾ ಲೋನ್ ಯೋಜನೆಯ ವಿಶೇಷತೆಯೇ ಇದು .₹10 ಲಕ್ಷದವರೆಗೆ:

  • ಯಾವುದೇ ಮನೆ ದಾಖಲೆ ಅಗತ್ಯವಿಲ್ಲ
  • ಜಮೀನು ಅಥವಾ ಚಿನ್ನ ಆಡಮಾನ ಬೇಡ
  • ಗ್ಯಾರಂಟಿ ಇಲ್ಲದೆ ಸಾಲ ಸಿಗಬಹುದು

ಆದರೆ ಬ್ಯಾಂಕ್ ನಿಮ್ಮ:

  • ವ್ಯವಹಾರ ಸಾಮರ್ಥ್ಯ
  • ಬ್ಯಾಂಕ್ ವ್ಯವಹಾರ
  • ಕ್ರೆಡಿಟ್ ಸ್ಕೋರ್
  • ಆದಾಯ
  • ವ್ಯವಹಾರ ಯೋಜನೆ

ಇವುಗಳನ್ನು ಪರಿಶೀಲಿಸುತ್ತದೆ.

SBI ಮುದ್ರಾ ಲೋನ್ ಗೆ ಯಾರು ಅರ್ಹರು? 

ಈ ಕೆಳಗಿನವರು ಅರ್ಜಿ ಹಾಕಬಹುದು:

  • ಸಣ್ಣ ವ್ಯಾಪಾರಿಗಳು
  • ಮಹಿಳಾ ಉದ್ಯಮಿಗಳು
  • ಸ್ಟಾರ್ಟ್ ಅಪ್ ಮಾಲೀಕರು
  • ಅಂಗಡಿ ಮಾಲೀಕರು
  • ಕೃಷಿ ಸಂಬಂಧಿತ ಸಣ್ಣ ಉದ್ಯಮಗಳು
  • ಟ್ರಾವೆಲ್, ಟ್ರಾನ್ಸ್ಪೋರ್ಟ್ ವ್ಯವಹಾರ
  • ಮೊಬೈಲ್ ಶಾಪ್ ಬೇಕರಿ ಬ್ಯೂಟಿ ಪಾರ್ಲರ್ ಸಲೂನ್
  • ಫ್ರೀಲ್ಯಾನ್ಸರ್ ಗಳು
  • ಸಣ್ಣ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ ಗಳು

Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಈ ರೀತಿ ಹೂಡಿಕೆ ಮಾಡಿದ್ರೆ ಸಿಗಲಿದೆ 30 ಲಕ್ಷ ರು ಆದಾಯ

 

₹10 ಲಕ್ಷ ಮುದ್ರಾ ಸಾಲ ಪಡೆಯಲು ಬೇಕಾಗುವ ಪ್ರಮುಖ ಅರ್ಹತೆಗಳು

ವಯಸ್ಸು 

  • 18 ರಿಂದ 65 ವರ್ಷದೊಳಗೆ ಇರಬೇಕು

ಭಾರತೀಯ ನಾಗರಿಕರಾಗಿ ಬೇಕು

ವ್ಯವಹಾರ ಯೋಜನೆ ಇರಬೇಕು 

  • ನೀವು ಏನು ವ್ಯವಹಾರ ಮಾಡುತ್ತೀರಿ?
  • ಎಷ್ಟು ಲಾಭ ಬರುತ್ತದೆ?
  • ಸಾಲವನ್ನು ಹೇಗೆ ಬಳಕೆ ಮಾಡುತ್ತೀರಿ?

ಇವು ಸ್ಪಷ್ಟವಾಗಿರಬೇಕು.

ಉತ್ತಮ ಬ್ಯಾಂಕ್ ವ್ಯವಹಾರ

  • ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಮುಖ್ಯ

ಬೇಕಾಗುವ ದಾಖಲೆಗಳು 

SBI ಮುದ್ರಾ ಲೋನ್ ಗೆ ಸಾಮಾನ್ಯವಾಗಿ ಕೆಳಗಿನ ದಾಖಲೆಗಳು ಬೇಕಾಗುತ್ತದೆ.

ಗುರುತಿನ ದಾಖಲೆ 

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ವೋಟರ್ ID

ವಿಳಾಸದ ದಾಖಲೆ

  • ವಿದ್ಯುತ್ ಬಿಲ್
  • ರೇಷನ್ ಕಾರ್ಡ್
  • ಬಾಡಿಗೆ ಒಪ್ಪಂದ

ವ್ಯವಹಾರ ದಾಖಲೆಗಳು 

  • GST registration
  • Shop licence
  • Udyam registration
  • Business proof

ಬ್ಯಾಂಕ್ ದಾಖಲೆಗಳು 

  • ಕಳೆದ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್

ಫೋಟೋ 

  • ಪಾಸ್ ಪೋರ್ಟ್ ಸೈಜ್ ಫೋಟೋ

SBI ಮುದ್ರಾ ಲೋನ್ ಗೆ ಆನ್ಲೈನ್ ನಲ್ಲಿ ಅರ್ಜಿ ಹಾಕುವುದು ಹೇಗೆ? 

ಇಂದಿನ ದಿನಗಳಲ್ಲಿ SBI ಮುದ್ರಾ ಲೋನ್ ಗೆ ಆನ್ಲೈನ್ ನಲ್ಲಿಯೇ ಅರ್ಜಿ ಹಾಕಬಹುದು.

ಅಧಿಕೃತ ವೆಬ್ಸೈಟ್

https://sbi.bank.in/

ಅರ್ಜಿ ಹಾಕುವ ಹಂತಗಳು 

step 1: SBI ವೆಬ್ಸೈಟ್ ತೆರೆಯಿರಿ 

SBI ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ

step 2: Mudra loan ಆಯ್ಕೆ ಮಾಡಿ 

ಬಿಜಿನೆಸ್ Loan ವಿಭಾಗದಲ್ಲಿ ಮುದ್ರಾ Loan ಆಯ್ಕೆ ಮಾಡಿ.

Step 3: ಅರ್ಜಿ ಫಾರ್ಮ್ ಭರ್ತಿ ಮಾಡಿ 

  • ಹೆಸರು
  • ಮೊಬೈಲ್ ಸಂಖ್ಯೆ
  • ವ್ಯವಹಾರ ಮಾಹಿತಿ
  • ಆದಾಯ ವಿವರ

ನಿಖರವಾಗಿ ನಮೂದಿಸಿ

step 4: ದಾಖಲೆ ಅಪ್ಲೋಡ್ ಮಾಡಿ 

ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ.

step 5: verification 

ಬ್ಯಾಂಕ್ ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತದೆ

Step 6: Loan Approval

ಎಲ್ಲಾ ಮಾಹಿತಿ ಸರಿಯಾಗಿದ್ದರೆ ಸಾಲ ಮಂಜೂರು ಆಗುತ್ತದೆ.

SBI ಮುದ್ರಾ ಲೋನ್ ಬಡ್ಡಿದರ ಎಷ್ಟು? 

ಬಡ್ಡಿದರ ವ್ಯವಹಾರದ ಪ್ರಕಾರ ಮತ್ತು ಅರ್ಜಿದಾರರ ಕ್ರೆಡಿಟ್ ಪ್ರೊಫೈಲ್ ಆಧಾರಿತವಾಗಿರುತ್ತದೆ.

ಸಾಮಾನ್ಯವಾಗಿ

  • ಸುಮಾರು 8% ರಿಂದ 12% ನಡುವೆ ಇರಬಹುದು

ಇದು ಸಮಯಾನುಸಾರ ಬದಲಾಗಬಹುದು.

ಸಾಲ ಮಂಜೂರಿಗೆ ಎಷ್ಟು ಸಮಯ ಬೇಕು? 

ಸಾಮಾನ್ಯವಾಗಿ

  • 7 ರಿಂದ 15 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಬಹುದು

ದಾಖಲೆಗಳು ಸರಿಯಾಗಿದ್ದರೆ ಬೇಗ ಸಾಲ ಸಿಗುತ್ತದೆ.

SBI ಮುದ್ರಾ ಲೋನ್ ನ ಪ್ರಮುಖ ಪ್ರಯೋಜನಗಳು

1. ಕೊಲೆಟರಲ್ ಅಗತ್ಯವಿಲ್ಲ 

ಇದು ದೊಡ್ಡ ಲಾಭ.

2. ಕಡಿಮೆ ಬಡ್ಡಿ ದರ 

ಇತರೆ ಖಾಸಗಿ ಸಾಲಗಳಿಗೆ ಹೋಲಿಸಿದರೆ ಕಡಿಮೆ.

3. ಮಹಿಳೆಯರಿಗೆ ವಿಶೇಷ ಸೌಲಭ್ಯ. 

ಕೆಲವೊಮ್ಮೆ ಹೆಚ್ಚುವರಿ ಪ್ರಯೋಜನಗಳು ಸಿಗಬಹುದು.

4. ಹೊಸ ಉದ್ಯಮ ಆರಂಭಿಸಲು ಉತ್ತಮ 

Startup ಗಳಿಗೆ ಸೂಕ್ತ.

5. Flexible Repayment

ಸುಲಭ EMI ಆಯ್ಕೆಗಳು.

ಸಾಲ ಮಂಜೂರು ಆಗುವ ಸಾಧ್ಯತೆ ಹೆಚ್ಚಿಸಲು Tips 

ಉತ್ತಮ ಸಿಬಿಲ್ ಸ್ಕೋರ್ ಇರಲಿ 

750ಕ್ಕಿಂತ ಹೆಚ್ಚು ಇದ್ದರೆ ಉತ್ತಮ

ಬ್ಯಾಂಕ್ ವ್ಯವಹಾರ ಸರಿಯಾಗಿರಲಿ 

ಖಾತೆಯಲ್ಲಿ ನಿಯಮಿತ ವ್ಯವಹಾರ ಇರಬೇಕು.

ಸ್ಪಷ್ಟ Business Plan ಕೊಡಿ

ಲಾಭದ ಸಾಧ್ಯತೆ ವಿವರಿಸಿ.

Existing Loan ಕಡಿಮೆ ಇರಲಿ 

ಹೆಚ್ಚು ಸಾಲ ಇದ್ದರೆ ಸಮಸ್ಯೆ ಆಗಬಹುದು.

ಯಾವ ವ್ಯವಹಾರಗಳಿಗೆ ಈ ಸಲ ಉಪಯುಕ್ತ

ಕೆಳಗಿನ ವ್ಯವಹಾರಗಳಿಗೆ ಹೆಚ್ಚು ಉಪಯೋಗವಾಗುತ್ತದೆ:

  • ಮೊಬೈಲ್ ಅಂಗಡಿ
  • ಬೇಕರಿ
  • ಹೋಟೆಲ್
  • ಟ್ರಾವೆಲ್ ಏಜೆನ್ಸಿ
  • ಟೈಲರಿಂಗ್
  • ಬ್ಯೂಟಿ ಪಾರ್ಲರ್
  • ಕೃಷಿ ಉಪಕರಣ ವ್ಯವಹಾರ
  • ಫರ್ನಿಚರ್ ಯೂನಿಟ್
  • ಆನ್ಲೈನ್ ಬಿಸಿನೆಸ್

ಮಹಿಳೆಯರಿಗೆ SBI ಮುದ್ರಾ ಲೋನ್ 

ಮಹಿಳಾ ಉದ್ಯಮಿಗಳಿಗೆ ಮುದ್ರಾ ಸಾಲ ದೊಡ್ಡ ಅವಕಾಶವಾಗಿದೆ.

ಹೆಚ್ಚಾಗಿ:

  • ಸಣ್ಣ ಮನೆ ಆಧಾರಿತ ಉದ್ಯಮ
  • ಫುಡ್ ಬಿಸಿನೆಸ್
  • ಬ್ಯೂಟಿ ಪಾರ್ಲರ್
  • ಬುಟಿಕ್
  • ಹಸ್ತ ಕಲಾ ಉದ್ಯಮ

ಇವುಗಳಿಗೆ ಸುಲಭವಾಗಿ ಸಾಲ ಸಿಗುವ ಸಾಧ್ಯತೆ ಇದೆ.

SBI e-ಮುದ್ರಾ ಲೋನ್ ಎಂದರೇನು? 

SBI e-ಮುದ್ರಾ ಲೋನ್ ಮೂಲಕ ಕೆಲವು ಸಂದರ್ಭಗಳಲ್ಲಿ ₹50000 ವರೆಗೆ ಸಂಪೂರ್ಣ ಆನ್ಲೈನ್ ನಲ್ಲಿ ಸಾಲ ಪಡೆಯಬಹುದು.

SBI ಮುದ್ರಾ ಲೋನ್ ರಿಜೆಕ್ಟ್ ಆಗುವ ಸಾಮಾನ್ಯ ಕಾರಣಗಳು

ಕೆಲವೊಮ್ಮೆ ಸಾಲ ನಿರಾಕರಣೆ ಯಾಗಬಹುದು.

ಪ್ರಮುಖ ಕಾರಣಗಳು

  • ಕಡಿಮೆ CIBIL score
  • ತಪ್ಪು ದಾಖಲೆಗಳು
  • ಬ್ಯಾಂಕ್ ವ್ಯವಹಾರ ಕಡಿಮೆ
  • ಸ್ಪಷ್ಟ ವ್ಯವಹಾರ ಯೋಜನೆ ಇಲ್ಲದಿರುವುದು
  • Existing Loan ಹೆಚ್ಚು ಇರುವುದು

ATM card insurance: ಎಟಿಎಂ ಕಾರ್ಡ್ ಇರುವವರು ಮರಣ ಹೊಂದಿದರೆ ಕುಟುಂಬಕ್ಕೆ 2,00,000 ಹಣ ಈ ಹಣ ಪಡೆಯುವುದು ಹೇಗೆ?

SBI ಮುದ್ರಾ ಲೋನ್ ಬಗ್ಗೆ ಸಾಮಾನ್ಯ ಪ್ರಶ್ನೆಗಳು 

1.SBI ಮುದ್ರಾ ಲೋನ್ ಗೆ ಗ್ಯಾರಂಟಿ ಬೇಕೆ? 

ಇಲ್ಲ: ಸಾಮಾನ್ಯವಾಗಿ ಕೊಲೆಟರಲ್ ಅಥವಾ ಗ್ಯಾರಂಟಿ ಬೇಡ.

2. ವಿದ್ಯಾರ್ಥಿಗಳು ಅರ್ಜಿ ಹಾಕಬಹುದೇ? 

ವ್ಯವಹಾರ ಯೋಜನೆ ಇದ್ದರೆ ಸಾಧ್ಯ.

3. EMI ಎಷ್ಟು ಬರುತ್ತದೆ? 

ಸಾಲ ಮೊತ್ತ ಮತ್ತು ಅವಧಿ ಗೆ ಅನುಗುಣವಾಗಿ ಬದಲಾಗುತ್ತದೆ.

4. Online ನಲ್ಲಿ ಸಂಪೂರ್ಣ ಅರ್ಜಿ ಹಾಕಬಹುದೇ? 

ಹೌದು: ಕೆಲವು ಸಂದರ್ಭಗಳಲ್ಲಿ ಬ್ಯಾಂಕ್ ಭೇಟಿ ಅಗತ್ಯವಾಗಬಹುದು.

5. CIBIL score ಇಲ್ಲದಿದ್ದರೆ ಸಾಲ ಸಿಗುತ್ತದೆಯೇ? 

ಸಿಗುವ ಸಾಧ್ಯತೆ ಇದೆ ಆದರೆ Approval ಕಷ್ಟವಾಗಬಹುದು.

ಇಂದಿನ ಕಾಲದಲ್ಲಿ ಸ್ವಂತ ಉದ್ಯಮ ಆರಂಭಿಸುವುದು ಅನೇಕ ಯುವಕರ ಕನಸಾಗಿದೆ. ಆದರೆ ಹಣಕಾಸಿನ ಸಮಸ್ಯೆಯಿಂದ ಹಲವರು ಹಿಂದೆ ಸರಿಯುತ್ತಾರೆ. ಅಂತವರಿಗೆ State Bank of India ನೀಡುವ SBI ಮುದ್ರಾ ಲೋನ್ ಯೋಜನೆ ದೊಡ್ಡ ಅವಕಾಶವಾಗಿದೆ.

ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷವರೆಗೆ ಸಾಲ ಪಡೆಯುವ ಅವಕಾಶ ಇರುವುದರಿಂದ ಸಣ್ಣ ವ್ಯಾಪಾರಿಗಳು ಮತ್ತು ಹೊಸ ಉದ್ಯಮಿಗಳಿಗೆ ಇದು ಅತ್ಯಂತ ಉಪಯುಕ್ತ ಯೋಜನೆ. ಸರಿಯಾದ ದಾಖಲೆಗಳು, ಉತ್ತಮ ಬ್ಯಾಂಕ್ ವ್ಯವಹಾರ ಮತ್ತು ಸ್ಪಷ್ಟ ವ್ಯವಹಾರ ಯೋಜನೆ ಇದ್ದರೆ ಸಾಲ ಮಂಜೂರು ಆಗುವ ಸಾಧ್ಯತೆ ಹೆಚ್ಚು.

ನೀವು ಹೊಸ ವ್ಯವಹಾರ ಆರಂಭಿಸಲು ಯೋಚಿಸುತ್ತಿದ್ದರೆ, SBI ಮುದ್ರಾ ಲೋನ್ ನಿಮ್ಮ ಕನಸನ್ನು ಸಾಕಾರಗೊಳಿಸಲು ಉತ್ತಮ ಆಯ್ಕೆಯಾಗಬಹುದು.

 

 

 

 

 

Leave a Comment