LPG ಸಿಲಿಂಡರ್ ಬುಕ್ ಮಾಡುವ ಮುನ್ನ ಈ ಏಳು ಮುಖ್ಯ ಬದಲಾವಣೆಗಳನ್ನು ಗಮನಿಸಿ. Important notice.

WhatsAppಫಾಲೋ ಮಾಡಿ

LPG ಸಿಲಿಂಡರ್  LPG ಸಿಲಿಂಡರ್ ಹೊಸ ನಿಯಮಗಳು: ಬುಕ್ ಮಾಡುವ ಮುನ್ನ ಈ ಏಳು ಮುಖ್ಯ ಬದಲಾವಣೆಗಳನ್ನು ಗಮನಿಸಿ

ಮನೆಯ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇಲ್ಲದಿದ್ದರೆ ದಿನವೇ ಕಳೆಯದು ಎಂಬಂತೆ ಭಾರತೀಯ ಕುಟುಂಬಗಳಿಗೆಲ್ಪಿಜಿ ಅನಿವಾರ್ಯವಾಗಿದೆ.

ಆದರೆ ಮಧ್ಯ ಪ್ರಾಚ್ಯದ ಉದ್ವಿಗ್ನತೆ ಜಾಗತಿಕ ತೈಲ ಬೆಲೆ ಏರಿಕೆಯಿದಾಗಿ ಪೂರೈಕೆ ಸರಪಳಿಯಲ್ಲಿ ಒತ್ತಡ ಹೆಚ್ಚಾಗಿದ್ದು ಸರ್ಕಾರ ಮೇ ಒಂದು 2026 ರಿಂದ ಹಲವು ಪ್ರಮುಖ ಬದಲಾವಣೆಗಳನ್ನು ಜಾರಿಗೆ ತಂದಿದೆ ಸಾಮಾನ್ಯ ಗ್ರಾಹಕರಿಗೆ ಇದು ಸವಾಲು ಮತ್ತು ಸುರಕ್ಷತೆಯ ಮಿಶ್ರಣವಾಗಿದೆ.

LPG ಸಿಲಿಂಡರ್  ಬುಕಿಂಗ್ ಅವಧಿ ಹೆಚ್ಚಳ 

ನಗರ ಪ್ರದೇಶಗಳಲ್ಲಿ ಒಂದು ಸಿಲಿಂಡರ್ ಬುಕ್ ಮಾಡಿದ ನಂತರ ಮುಂದಿನ ಬುಕ್ಕಿಂಗ್ ಗೆ ಕನಿಷ್ಠ 25 ದಿನಗಳ ಅವಧಿ ಕಾಯಬೇಕು ಗ್ರಾಮೀಣ ಪ್ರದೇಶಗಳಲ್ಲಿ ಈ ಅವಧಿ 45 ದಿನಗಳವರೆಗೆ ವಿಸ್ತರಿಸಲಾಗಿದೆ.

ಹಿಂದಿನ 21 ದಿನಗಳ ನಿಯಮಕ್ಕೆ ಬದಲಾಗಿ ಈ ಹೊಸ ನಿಯಮ ಜಾರಿಯಾಗಿದ್ದು ಸಮಯಕ್ಕಿಂತ ಮುಂಚೆ ಬುಕ್ ಮಾಡಲು ಪ್ರಯತ್ನಿಸಿದರೆ ವ್ಯವಸ್ಥೆಯೇ ಸ್ವಯಂ ಚಾಲಿತವಾಗಿ ನಿರಾಕರಿಸುತ್ತದೆ.

ಇದು ಹೂಡಿಕೆ ಮತ್ತು ಕಪ್ಪು ಮಾರುಕಟ್ಟೆ ತಡೆಯುವ ಉದ್ದೇಶ ಹೊಂದಿದೆ ಅನೇಕ ಕುಟುಂಬಗಳು ಈ ಬದಲಾವಣೆಯಿಂದ ತೊಂದರೆ ಅನುಭವಿಸಬಹುದು ಆದ್ದರಿಂದ ಮುಂಚಿತವಾಗಿ ಬುಕ್ಕಿಂಗ್ ಯೋಜನೆ ಮಾಡುವುದು ಸೂಕ್ತ MyLpg ಅಪ್ಲಿಕೇಶನ್ ಅಥವಾ ವೆಬ್ಸೈಟ್ ಮೂಲಕ ಸುಲಭವಾಗಿ ಸ್ಟೇಟಸ್ ಪರಿಶೀಲಿಸಬಹುದು.

ಇದನ್ನು ಓದಿ

Easy SBI ಮುದ್ರಾ ಲೋನ್: ಯಾವುದೇ ಕೊಲೆಟರಲ್ ಇಲ್ಲದೆ ₹10 ಲಕ್ಷದವರೆಗೆ ಸಾಲ ಪಡೆಯುವುದು ಹೇಗೆ?

LPG ಸಿಲಿಂಡರ್ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ ,ಹೋಟೆಲ್ ಗಳಿಗೆ ದೊಡ್ಡ ಏಟು.

ಮೇ ತಿಂಗಳಿನಿಂದ 19 ಕೆಜಿ ವಾಣಿಜ್ಯ lpg ಸಿಲಿಂಡರ್ ಬೆಲೆಯಲ್ಲಿ ಸುಮಾರು ₹993 ರಷ್ಟು ಏರಿಕೆಯಾಗಿದೆ ದೆಹಲಿಯಲ್ಲಿ ಈಗ ಬೆಲೆ ₹3071.50 ಕ್ಕೆ ತಲುಪಿದೆ.

ಜಾಗತಿಕ ಸಂಘರ್ಷದಿಂದಾಗಿ ಈ ಹೆಚ್ಚಳ ಸರ್ಕಾರಿ ತೈಲ ಕಂಪನಿಗಳು ಜಾರಿಗೆ ತಂದಿದೆ. ಆದರೆ ಗೃಹಬಳಕೆಯ 14.2 ಕೆಜಿ ಸಿಲಿಂಡರ್ ಬೆಲೆಯಲ್ಲಿ ಗಣನೆಯ ಬದಲಾವಣೆ ಇಲ್ಲವಾದರೂ ಮುಂದಿನ ತಿಂಗಳುಗಳಲ್ಲಿ ಪರಿಸ್ಥಿತಿ ಬದಲಾಗಬಹುದು.

ಸಣ್ಣ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಇದರಿಂದ ತುಂಬಾ ಪ್ರಭಾವಿತರಾಗಿದ್ದಾರೆ ಅವರು ಬೆಲೆ ಹೆಚ್ಚಳವನ್ನು ಗ್ರಾಹಕರ ಮೇಲೆ ಹೇರದಂತೆ ಇತರ ಆಯ್ಕೆಗಳನ್ನು ಹುಡುಕುತ್ತಿದ್ದಾರೆ.

LPG ಸಿಲಿಂಡರ್  ಓಟಿಪಿ ಆಧರಿತ ವಿತರಣೆ ಸುರಕ್ಷಿತ ಮತ್ತು ಪಾರದರ್ಶಕ. 

ಮೇ ಒಂದರಿಂದ ಸಿಲಿಂಡರ್ ವಿತರಣೆಗೆ ಓಟಿಪಿ ಕಡ್ಡಾಯವಾಗಿದೆ ಬುಕಿಂಗ್ ಮಾಡಿದ ನಂತರ ನೋಂದಾಯಿತ ಮೊಬೈಲ್ಗೆ ಬರುವ ಓಟಿಪಿಯನ್ನು ಡೆಲಿವರಿ ಏಜೆಂಟ್ ಗೆ ನೀಡಬೇಕು.

ಹಳೆಯ ರಶೀದಿ ಅಥವಾ ಬುಕ್ ತೋರಿಸಿದರೆ ಸಾಲದು ಈ ವ್ಯವಸ್ಥೆ ಈಗಾಗಲೇ 94% ಗಿಂತ ಹೆಚ್ಚು ವಿತರಣೆಗಳಲ್ಲಿ ಯಶಸ್ವಿಯಾಗಿದೆ ಮತ್ತು ಸಬ್ಸಿಡಿ ಸಿಲಿಂಡರ್ ಗಳು ಸರಿಯಾದ ವರೆಗೆ ತಲುಪವುದನ್ನು ಖಚಿತಪಡಿಸುತ್ತದೆ.

LPG ಸಿಲಿಂಡರ್   ಈ ಕೆ ವೈ ಸಿ ಮತ್ತು ಮೊಬೈಲ್ ಲಿಂಕಿಂಗ್ ಕಡ್ಡಾಯ. 

ಇನ್ನು ಈಕೆ ವೈ ಸಿ ಪೂರ್ಣಗೊಳಿಸಿದ ಗ್ರಾಹಕರಿಗೆ ಸಿಲಿಂಡರ್ ವಿತರಣೆ ಸಾಧ್ಯವಿಲ್ಲ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿ ಬರುವವರು ವರ್ಷಕ್ಕೊಮ್ಮೆ ಬಯೋಮೆಟ್ರಿಕ್ ಆಧಾರ್ ದೃಡೀಕರಣ ಮಾಡಬೇಕು.

ಎಲ್ಲ ಗ್ರಾಹಕರು ತಮ್ಮ ಖಾತೆಯನ್ನು ನೋಂದಾಯಿತ ಮೊಬೈಲ್ ಸಂಖ್ಯೆಗೆ ಲಿಂಕ್  ಮಾಡಿರುವುದು ಅತ್ಯಗತ್ಯ ಇದು ಸಬ್ಸಿಡಿ ನೇರ ಬ್ಯಾಂಕ್ ಖಾತೆಗೆ ತಲುಪುವುದನ್ನು ಸುಗಮಗೊಳಿಸುತ್ತದೆ.

ಇದನ್ನು ಓದಿ

Sukanya Samriddhi Yojana: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಈ ರೀತಿ ಹೂಡಿಕೆ ಮಾಡಿದ್ರೆ ಸಿಗಲಿದೆ 30 ಲಕ್ಷ ರು ಆದಾಯ

LPG ಸಿಲಿಂಡರ್   QR ಕೋಡ್ ಮತ್ತು ಸುರಕ್ಷತಾ ತಪಾಸಣೆ.

ಪ್ರತಿ ಸಿಲಿಂಡರ್ ನಲ್ಲಿ ಹೊಸ ಕ್ಯೂಆರ್ ಕೋಡ್ ಇದ್ದು ಸ್ಕ್ಯಾನ್ ಮಾಡಿದರೆ ಉತ್ಪಾದನಾ ದಿನಾಂಕ ಕೊನೆಯ  ಲೀಕೇಜ್ ತಪಾಸಣೆ ಮತ್ತು ಇತರ ವಿವರಗಳು ತಿಳಿಯುತ್ತವೆ.

ಗ್ರಾಹಕರು ಸೀಲ್ ಮತ್ತು ಮುಕ್ತಾಯ ದಿನಾಂಕ ಪರಿಶೀಲಿಸುವುದು ಕಡ್ಡಾಯ. ಇದು ಸುರಕ್ಷತೆ ಹೆಚ್ಚಿಸುವ ಮಹತ್ವದ ಕ್ರಮ.

LPG ಸಿಲಿಂಡರ್  ಡಿಜಿಟಲ್ ಬುಕಿಂಗ್ ಮತ್ತು ಡಿ ಬಿ ಟಿ ಸುಧಾರಣೆ 

ಅಪ್ಲಿಕೇಶನ್ ಯುಪಿಐ ಧ್ವನಿ ಸಹಾಯಕ ಸೇವೆಗಳ ಮೂಲಕ ಬುಕಿಂಗ್ ಸುಲಭವಾಗಿದೆ ನೇರ ಪ್ರಯೋಜನ ವರ್ಗಾವಣೆ ಮೂಲಕ ಸಬ್ಸಿಡಿ ನೇರವಾಗಿ ಬ್ಯಾಂಕ್ ಖಾತೆಗೆ ಬರುತ್ತದೆ.

ಉಜ್ವಲ ಯೋಜನೆ ಅಡಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ₹300ರ ಸಬ್ಸಿಡಿ ಮುಂದುವರೆದಿದೆ. ಹೆಚ್ಚು ಆದಾಯದ ಕುಟುಂಬಗಳಿಗೆ ಸಹಾಯ ಕಡಿಮೆಯಾಗಬಹುದು.

ಗ್ರಾಹಕರಿಗೆ ಸಲಹೆಗಳು 

  • ಮೊಬೈಲ್ ನಂಬರ್ ಮತ್ತು ಆಧಾರ್ ಲಿಂಕ್ ಖಚಿತಪಡಿಸಿ
  • ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಿಲಿಂಡರ್ ಪರಿಶೀಲಿಸಿ
  • ಮುಂಚಿತವಾಗಿ ಬುಕ್ ಮಾಡಿ
  • ತುರ್ತು ಸಮಯದಲ್ಲಿ PNG ಅಥವಾ ಇತರೆ ಆಯ್ಕೆಗಳನ್ನು ಪರಿಗಣಿಸಿ.

ಈ ಬದಲಾವಣೆಗಳು ಸಬ್ಸಿಡಿ ಲಿಕೇಜ್ ತಡೆಯುವುದರ ಜೊತೆಗೆ ಪೂರೈಕೆಯನ್ನು ಸ್ಥಿರಗೊಳಿಸುವ ಗುರಿ ಹೊಂದಿದೆ

ಆದರೆ ಸಾಮಾನ್ಯ ಮನೆಯವರಿಗೆ ಇದು ಹೊಸ ಅಭ್ಯಾಸಕ್ಕೆ ಕಾರಣವಾಗಿದೆ ಸರ್ಕಾರ ಸರಿಯಾದ ಮಾಹಿತಿ ನೀಡುತ್ತಿದ್ದರೆ ಗ್ರಾಹಕರು ಸಹಕರಿಸುವುದು ಮುಖ್ಯ.

ಇದನ್ನು ಓದಿ

Karmikara Makkalige Scholarship 2026 : ಕಾರ್ಮಿಕರ ಮಕ್ಕಳಿಗೆ ₹25,000 ವರೆಗೆ ವಿದ್ಯಾರ್ಥಿ ವೇತನ. ಆನ್ಲೈನ್ ಅರ್ಜಿ ಆಹ್ವಾನ, Important update.

Leave a Comment