IDFC FIRST Bank Scholarship 2026 : ಐಡಿಎಫ್ಸಿ ಫಸ್ಟ್ ಬ್ಯಾಂಕ್ (IDFC FIRST Bank) ಪ್ರಥಮ ವರ್ಷದ B.E/B.Tech ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಾರ್ಷಿಕ ₹1 ಲಕ್ಷದವರೆಗೆ ಸ್ಕಾಲರ್ಶಿಪ್ ನೀಡುತ್ತಿದೆ. ಅರ್ಹತೆ, ಅಗತ್ಯ ದಾಖಲೆಗಳು ಹಾಗೂ ಆನ್ಲೈನ್ ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
- ವಿದ್ಯಾರ್ಥಿ ವೇತನದ ಮೊತ್ತ : ಆಯ್ಕೆಯಾದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಾರ್ಷಿಕ ₹1 ಲಕ್ಷದವರೆಗೆ (ಗರಿಷ್ಠ ನಾಲ್ಕು ವರ್ಷಗಳವರೆಗೆ).
- ಅರ್ಹತೆ : ಪ್ರಥಮ ವರ್ಷದ B.E /B.Tech ವಿದ್ಯಾರ್ಥಿಗಳು.
- ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 20 ಸೆಪ್ಟೆಂಬರ್ 2026
ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಇಂಜಿನಿಯರಿಂಗ್ (engineering) ಪದವಿಯು ಒಂದು ಪ್ರಮುಖ ಮೆಟ್ಟಿಲಾಗಿದೆ. ಆದರೆ, ಉನ್ನತ ಶಿಕ್ಷಣದ ದುಬಾರಿ ವೆಚ್ಚವು ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಬಹುದು. ಇಂತಹ ಪ್ರತಿಭಾವಂತ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಐಡಿಎಫ್ಸಿ ಫಸ್ಟ್ ಬ್ಯಾಂಕ್ (IDFC FIRST Bank) ತನ್ನ ಸಿಎಸ್ಆರ್ (CSIR) ಯೋಜನೆ ಅಡಿ ಐಡಿಎಫ್ಸಿ ಫಸ್ಟ್ ಬ್ಯಾಂಕ್ ಎಂಜಿನಿಯರಿಂಗ್ ಸ್ಕಾಲರ್ಶಿಪ್ ಪ್ರೋಗ್ರಾಮ್ 2026-30 ಅನ್ನು ಪ್ರಕಟಿಸಿದೆ.
ಈ ಯೋಜನೆ ಅಡಿ, ಪ್ರಥಮ ವರ್ಷದ B.E/B.Tech ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಗರಿಷ್ಠ 1 ಲಕ್ಷದವರೆಗೆ ಆರ್ಥಿಕ ನೆರವು ನೀಡಲಾಗುವುದು. ಈ ಮೂಲಕ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಗುರಿಗಳತ್ತ ಹೆಚ್ಚಿನ ಗಮನಹರಿಸಲು ಆರ್ಥಿಕ ಬೆಂಬಲ ದೊರೆಯಲಿದೆ.
ಆಸಕ್ತ ವಿದ್ಯಾರ್ಥಿಗಳು ಸೆಪ್ಟೆಂಬರ್ 20 2026 ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಸ್ಕಾಲರ್ ಶಿಪ್ ನ ಅರ್ಹತೆ, ಅಗತ್ಯ ದಾಖಲೆಗಳು, ಪ್ರಯೋಜನಗಳು ಹಾಗೂ ಅರ್ಜಿ ಸಲ್ಲಿಸುವ ವಿಧಾನದ ಸಂಪೂರ್ಣ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಇದನ್ನು ಓದಿ
IDFC FIRST Bank Scholarship 2026 : ಅರ್ಹತ ಮಾನದಂಡಗಳು
ಈ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
- ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು.
- ಪ್ರಸ್ತುತ 2026 27ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ವರ್ಷದ B.E /B.Tech ಪದವಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.
- ಅಭ್ಯರ್ಥಿಯು “FIRST Impact “ಪ್ಯಾನೆಲ್ ನಲ್ಲಿರುವ (empanelled colleges) ನಿಗದಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮಾತ್ರ ಪ್ರವೇಶ ಪಡೆದಿರಬೇಕು.
- ಕುಟುಂಬದ ಒಟ್ಟು ವಾರ್ಷಿಕ ಆದಾಯವು ₹6 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
- ಅಭ್ಯರ್ಥಿಯ ಬಳಿ ಆಧಾರ್ ಗೆ ಲಿಂಕ್ ಆಗಿರುವ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಇರಬೇಕು.
- ಗಮನಿಸಿ : ಡಿಪ್ಲೋಮಾ ಕೋರ್ಸ್, ಅರೆಕಾಲಿಕ (part time), ದೂರ ಶಿಕ್ಷಣ (distance learning) ಅಥವಾ ಡುಯಲ್ ಡಿಗ್ರಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಲ್ಲ. ಐಡಿಎಫ್‍ಸಿ ಬ್ಯಾಂಕ್ ಉದ್ಯೋಗಿಗಳು ಹಾಗೂ ಅವರ ಕುಟುಂಬದವರು ಅರ್ಜಿ ಸಲ್ಲಿಸುವಂತಿಲ್ಲ.
ಇದನ್ನು ಓದಿ
IDFC FIRST Bank Scholarship 2026 : ಸ್ಕಾಲರ್ಶಿಪ್ ಧನ ಸಹಾಯ ಮತ್ತು ಪ್ರಯೋಜನಗಳು
ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅವರ 4 ವರ್ಷಗಳ ಇಂಜಿನಿಯರಿಂಗ್ ಪದವಿ ಮುಗಿಯುವವರೆಗೆ ಪ್ರತಿ ವರ್ಷ ₹1 ಲಕ್ಷದವರೆಗೆ ಸ್ಕಾಲರ್ಶಿಪ್ ನೀಡಲಾಗುವುದು.
(ಸೂಚನೆ : ಸ್ಕಾಲರ್ಶಿಪ್ ಮತ್ತು ವಾರ್ಷಿಕ ₹1 ಲಕ್ಷ ಅಥವಾ ವಿದ್ಯಾರ್ಥಿಯ ನೈಜವಾಸಿಕ ಕಾಲೇಜು ಶುಲ್ಕ, ಇವೆರಡರಲ್ಲಿ ಯಾವುದು ಕಡಿಮೆ ಇದೆಯೋ ಆ ಮೊತ್ತವನ್ನು ಮಾತ್ರ ನೀಡಲಾಗುತ್ತದೆ. ಮುಂದಿನ ವರ್ಷಗಳಲ್ಲಿ ಸ್ಕಾಲರ್ಶಿಪ್ ಮುಂದುವರೆಯಲು, ವಿದ್ಯಾರ್ಥಿಯು ನಿಗದಿತ ಶೈಕ್ಷಣಿಕ ಅಂಕಗಳನ್ನು ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
IDFC FIRST Bank Scholarship 2026 : ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು
ಆನ್ಲೈನ್ ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು.
- ಕಾಲೇಜಿನ ಹೆಸರು, ದಾಖಲಾತಿ ವರ್ಷ ಮತ್ತು ಬ್ಯಾಚ್ ಅನ್ನು ದೃಢೀಕರಿಸುವ ಅಡ್ಮಿಶನ್ ಲೆಟರ್.
- ಕಾಲೇಜಿಗೆ ಪಾವತಿಸಿದ ಶುಲ್ಕದ ರಸೀದಿ.
- ಜನ್ಮ ಪ್ರಮಾಣ ಪತ್ರ, ಹತ್ತನೇ ತರಗತಿಯ ಅಂಕಪಟ್ಟಿ ಅಥವಾ ಪಾಸ್ಪೋರ್ಟ್.
- ದುಡಿಯುವ ಸದಸ್ಯರ ಆದಾಯ ಪ್ರಮಾಣ ಪತ್ರ ಅಥವಾ ಐಟಿ ರಿಟರ್ನ್ಸ್ 143 ದಾಖಲೆ. (ದುಡಿಯುವ ಸದಸ್ಯರಿಲ್ಲದಿದ್ದರೆ, ಸಕ್ಷಮ ಸರ್ಕಾರಿ ಪ್ರಾಧಿಕಾರದಿಂದ ನೀಡಿದ “ಆದಾಯವಿಲ್ಲ”ಎಂಬ ಪ್ರಮಾಣ ಪತ್ರ ಕಡ್ಡಾಯ.)
- ಪ್ರಸ್ತುತ ವಿಳಾಸವು ಆಧಾರ್ ಕಾರ್ಡ್ ಗಿಂತ ಭಿನ್ನವಾಗಿದ್ದರೆ ವಿಳಾಸದ ಪುರಾವೆ ಒದಗಿಸಬೇಕು. (ಪಿನ್ ಕೋಡ್ ಕಡ್ಡಾಯ)
ಇದನ್ನು ಓದಿ
IDFC FIRST Bank Scholarship 2026 : ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ ?
- ಆನ್ಲೈನ್ ನಲ್ಲಿ ಈ ಕೆಳಗೆ ನೀಡಿರುವ ಸ್ಕಾಲರ್ಶಿಪ್ ಪೋರ್ಟಲ್ ಗೆ ಭೇಟಿ ನೀಡಿ.
- https://www.buddy4study.com/page/idfc-first-bank-engineering-scholarship
- “IDFC FIRST BANK ENGINEERING SCHOLARSHIP PROGRAMME 2026-30 “ವಿಭಾಗವನ್ನು ಆಯ್ಕೆ ಮಾಡಿ Apply Now ಬಟನ್ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಇಮೇಲ್ ಐಡಿ, ಮೊಬೈಲ್ ಸಂಖ್ಯೆ ಅಥವಾ ಗೂಗಲ್ ಖಾತೆ ಬಳಸಿ ಲಾಗಿನ್/ರಿಜಿಸ್ಟರ್ ಆಗಿ.
- ಬಳಿಕ ನೀವು ಐಡಿಎಫ್ಸಿ ಫಸ್ಟ್ ಬ್ಯಾಂಕ್ ನ ಅಧಿಕೃತ ಸ್ಕಾಲರ್ಶಿಪ್ ಪುಟಕ್ಕೆ ಮರು ನಿರ್ದೇಶಿಸಲ್ಪಡುತ್ತೀರಿ (redirected)
- Apply now ಬಟನ್ ಕ್ಲಿಕ್ ಮಾಡಿ, ನಿಮ್ಮ ಅರ್ಹತೆಯನ್ನು ಪರಿಶೀಲಿಸಿ, ಹಾಗೂ ನಿಮ್ಮ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆಯನ್ನು ಓಟಿಪಿ ಮೂಲಕ ವೆರಿಫೈ ಮಾಡಿ.
- ಪರಿಶೀಲನೆಯ ನಂತರ, ನಿಮಗೆ ಲಾಗಿನ್ URL , User ID ಮತ್ತು Password ಇರುವ ಇಮೇಲ್ ಬರುತ್ತದೆ.
- ಅಪ್ಲಿಕೇಶನ್ ಪೋರ್ಟಲ್ ಗೆ ಲಾಗಿನ್ ಆಗಿ, ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಅಂತಿಮವಾಗಿ ಅರ್ಜಿಯನ್ನು ಸಬ್ಮಿಟ್ (submit) ಮಾಡಿ. (ಸೂಚನೆ : ಯಾವುದೇ ತಾಂತ್ರಿಕ ಅಡಚಣೆ ಇಲ್ಲದೆ ಅರ್ಜಿ ಸಲ್ಲಿಸಲು ಗೂಗಲ್ ಕ್ರೋಮ್ (Google Chrome) ಬ್ರೌಸರ್ ಬಳಸಿ.)
IDFC FIRST Bank Scholarship 2026 : ಪ್ರಮುಖ ದಿನಾಂಕಗಳು
- ಆನ್ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ : 20 ಸೆಪ್ಟೆಂಬರ್ 2026
IDFC FIRST Bank Scholarship 2026 : ಈ ಸ್ಕಾಲರ್ಶಿಪ್ ನಿಂದ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನಗಳು
- ವರ್ಷಕ್ಕೆ ಗರಿಷ್ಠ ₹1 ಲಕ್ಷದವರೆಗೆ ಅಥವಾ ಆ ವರ್ಷದ ಶುಲ್ಕ ಎಷ್ಟು ಕಡಿಮೆಯ ಅಷ್ಟು ಸ್ಕಾಲರ್ಶಿಪ್ ದೊರೆಯುತ್ತದೆ.
- ಈ ಹಣವನ್ನು ಶಿಕ್ಷಣ/ಟ್ಯೂಷನ್ ಶುಲ್ಕದಂತಹ academic expenses ಗೆ ಬಳಸಲಾಗುತ್ತದೆ ಮತ್ತು ವಿದ್ಯಾರ್ಥಿಯ ಕಾಲೇಜಿನ ಖಾತೆಗೆ ವರ್ಗಾಯಿಸಲಾಗುತ್ತದೆ.
- ವಿದ್ಯಾರ್ಥಿ ಪ್ರತಿ ವರ್ಷ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮುಂದಿನ ವರ್ಷವೂ ಸ್ಕಾಲರ್ಶಿಪ್ ಮುಂದುವರೆಯುತ್ತದೆ.
- ಕುಟುಂಬದ ವಾರ್ಷಿಕ ಆದಾಯ ಆರು ಲಕ್ಷದ ಒಳಗೆ ಇರುವಂತ ಅರ್ಹ ವಿದ್ಯಾರ್ಥಿಗಳಿಗೆ ಇದು ವಿಶೇಷವಾಗಿ ಸಹಾಯಕವಾಗಿದೆ.
ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಸ್ಕಾಲರ್ಶಿಪ್‌ಗೆ ಅಪ್ಲಿಕೇಶನ್ ಹಾಕಿ , ಕೊನೆಯಲ್ಲಿ ಆಗುವಂತಹ ಸರ್ವರ್ ಸಮಸ್ಯೆಗಳಿಗೆ ಒಳಗಾಗಬೇಡಿ. ಆದಷ್ಟು ಈ ವಿಷಯವನ್ನು ಅರ್ಹ ವಿದ್ಯಾರ್ಥಿಗಳಿಗೆ ಶೇರ್ ಮಾಡಿ.
ಇದನ್ನು ಓದಿ